ನಾಲ್ವರು ಅಕ್ಕತಂಗಿಯರಿದ್ದ ಸಂಪ್ರದಾಯಸ್ಥ ಕುಟುಂಬದಲ್ಲಿ ವೇದಾ ಅತೀ ಚಂಚಲ ಸ್ವಭಾವದವಳು. ಎರಡನೇ ಅಕ್ಕಾ ಶೀಲಾಳ ಬಾಣಂತನಕ್ಕೆಂದು ಅನಿವಾರ್ಯವಾಗಿ ಅವಳು ಬೆಂಗಳೂರಿನಿಂದ ಮುಂಬೈಗೆ ಹೊರಟಳು. ಮುಂದೆ ನಡೆದದ್ದೇನು.....?

``ಸುದೇ ಸುತವ್‌ದೇವ್‌ಕಂಸ ಚಾಣುರ ಮರ್ಧನಂ ದೇಕಿ ಪರಮಾನಂದವ್‌ಕೃಷ್ಣಂ ಂದೇ ಜಗದ್ಗುರುವ್‌''

ಜಗನ್ನಾಥ ರಾಯರ ಕಂಠದಿಂದ ಶ್ಲೋಕ ಉಚ್ಚಾರಣೆ ನಡೆದೇ ಇತ್ತು. ತಿಂಡಿ ಮಾಡಿ ಪೂರೈಸಿದ ವಿಮಲಮ್ಮ ದೇವರ ಕೋಣೆಯ ಮುಂದೆ ಬಂದು ನಿಂತರು. ಲೀಲಾ, ಶೀಲಾ, ವೇದಾ, ಮೇಧಾ ನಾಲ್ಕೂ ಮಂದಿ ಬಂದು ನಿಂತರು. ಅವರ ಪೂಜೆ ಮುಗಿಯುವ ಹೊತ್ತಿಗೆ ಎಲ್ಲರೂ ಹಾಜರ್‌ ಆಗಿಬಿಡಬೇಕು. ಇಲ್ಲದಿದ್ದರೆ ಜಗನ್ನಾಥ ರಾಯರು ಬೆಟ್ಟದಂತಹ ಕೋಪ ತಾಳಿ ದೂರ್ವಾಸರೇ ದಂಗಾಗಿ ಬಿಡುವಂತೆ ರೌದ್ರಾವತಾರ ತಾಳುತ್ತಿದ್ದರು.

ಹಾಗಾಗಿ ಅವರು ಮನೆಯಲ್ಲಿ ಇರುವವರೆಗೂ ಯಾರೂ ಉಸಿರೆತ್ತುತ್ತಿರಲಿಲ್ಲ. ಜಗನ್ನಾಥರಾಯರ ಕುಟುಂಬ ಹೇಳಿಕೊಳ್ಳುವಂತಹ ಅನುಕೂಲಸ್ಥರಲ್ಲದಿದ್ದರೂ ಉಣ್ಣುವುದಕ್ಕೆ, ಉಡುವುದಕ್ಕೆ ಕೊರತೆ ಇರಲಿಲ್ಲ. ಡಿ.ಸಿ ಆಫೀಸ್‌ ನಲ್ಲಿ ಗುಮಾಸ್ತರಾಗಿ ಕೆಲಸ ಮಾಡುವ ಅವರಿಗೆ ಸಂಬಳದೊಂದಿಗೆ ಗಿಂಬಳ ಸಿಗುತ್ತಿತ್ತಾದ್ದರಿಂದ ಜೀವನ ಸುಲಭವಾಗಿ ನಡೆದುಕೊಂಡು ಹೋಗುತ್ತಿತ್ತು.

ಜಗನ್ನಾಥ ರಾಯರು ಕೋಪಿಷ್ಟರಾದರೂ ಸ್ವಭಾತಃ ಒಳ್ಳೆಯವರೇ, ಕೆಟ್ಟದ್ದನ್ನು ತಿರಸ್ಕರಿಸುತ್ತಿದ್ದರು. ಆದರೆ ಆಫೀಸಿನಲ್ಲಿ ಅವರದ್ದೇನು ನಡೆಯುತ್ತಿರಲಿಲ್ಲ. ಕೆಳಗಿನಿಂದ ಮೇಲಿನವರೆಗೂ ಬರೀಗೈಲಿ ಯಾರೂ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ಮೊದ ಮೊದಲು ಲಂಚಕ್ಕೆ ಕೈ ಒಡ್ಡುವುದು ಅವರಿಂದಾಗದೆ ಎಲ್ಲರ ಕೋಪಕ್ಕೆ ತುತ್ತಾಗಿದ್ದರು. ನಂತರ ಅವರ ಖಾಸಾ ಗೆಳೆಯ ಮಹಾಬಲಭಟ್ಟರು, ``ನೋಡಯ್ಯ ಜಗನ್ನಾಥಾ.... ನಮ್ಮಿಂದಾಗಿ ಬೇರೆಯವರಿಗೆ ತೊಂದರೆ ಆಗೋದು ಬೇಡ. ಯಾರೂ ಮಾಡದೇ ಇರುವಂತಹ ಪಾಪದ ಕೆಲಸ ನಾವೇನೂ ಮಾಡುತ್ತಿಲ್ಲ. ಇಲ್ಲಿ ನೀನೊಬ್ಬನೇ ಅಲ್ಲ ಎಲ್ಲರೂ ತಗೋಳೋರೆ, ಹಾಗಿದ್ದ ಮೇಲೆ ಜನ ನಿನ್ನನ್ನೇನು ಸತ್ಯವಾದಿ ಶಾಮಣ್ಣ ಅಂತಾರೇನು....? ಏನೂ ಇಲ್ಲ. ನಾವು ನಿಷ್ಠೆಯಿಂದ ನಮ್ಮ ಕೆಲಸ ಮಾಡ್ಕೊಂಡು ಹೋಗೋಣ ಆಯ್ತಲ್ಲ. ನಿತ್ಯ ಪೂಜೆ ಮಾಡಿ ಕೃಷ್ಣಾರ್ಪಣ ಅಂದುಬಿಡು.....!'' ಎಂದು ಉಪದೇಶ ಮಾಡಿದ ಮೇಲೇ ಬೇರೆ ದಾರಿ ಕಾಣದೆ ಲಂಚಕ್ಕೆ ಕೈ ಒಡ್ಡ ತೊಡಗಿದರು. ಕ್ರಮೇಣ ತೀರಾ ಮುಳುಗಿದವನಿಗೆ ಚಳಿಯೇನು, ಮಳೆಯೇನು ಎಂಬಂತಾಗಿತ್ತು.

ಜೊತೆಗೆ ನಾಲ್ಕು ಹೆಣ್ಣು ಮಕ್ಕಳ ತಂದೆಯಾದ ಅವರ ಭುಜದ ಮೇಲೆ ಆ ಹೆಣ್ಣುಮಕ್ಕಳನ್ನು ದಡ ಸೇರಿಸುವ ಭಾರ ಇತ್ತಲ್ಲ. ಹಾಗಾಗಿ ತಾನು ಮಾಡುವ ಕೆಲಸ ಪಾಪದ್ದಲ್ಲ, ಜೀವನ ನಿರ್ವಹಣೆಗಾಗಿ ಮಾಡುತ್ತಿರುವುದು ಎಂದು ಮನದಲ್ಲಿಯೇ ನಿರ್ಧಾರ ಮಾಡಿಕೊಂಡಿದ್ದರು. ಹಾಗಾಗಿ ಮೊದಲು ಪೂಜೆ ಎಂದರೆ ಅದೊಂದು ದೊಡ್ಡ ತಲೆನೋವು ಎಂದುಕೊಂಡಿದ್ದವರು ಕ್ರಮೇಣ ಪಕ್ಕಾ ಆಸ್ತಿಕರಾಗಿದ್ದರು. ಎರಡು ಹೊತ್ತು ಸಂಧ್ಯಾವಂದನೆ, ನಿತ್ಯ ಪೂಜೆ ಮಾಡದೇ ಹೊರಗೇ ಹೊರಡುತ್ತಲೇ ಇರಲಿಲ್ಲ. ಅವರು ಪೂಜೆ ಮುಗಿಸಿ ಮಂಗಳಾರತಿಯ ಸಮಯಕ್ಕೆ ಎಲ್ಲರೂ ಹಾಜರಿರಲೇಬೇಕು ಎನ್ನುವುದು ಅವರ ಕಟ್ಟಪ್ಪಣೆಯಾಗಿತ್ತು. ಹುಡುಗಿಯರ ಮೂರು ದಿನಗಳು ಬಿಟ್ಟು ಮಿಕ್ಕೆಲ್ಲಾ ದಿನಗಳಲ್ಲಿ ಅವರು ತಮ್ಮ ಎಲ್ಲಾ ಕೆಲಸ ಮುಗಿಸಿ ದೇವರ ಕೋಣೆಯ ಮುಂದೆ ನಿಲ್ಲಲೇಬೇಕಿತ್ತು. ಹಾಗಾಗಿ ಹುಡುಗಿಯರಿಗೆ ತಂದೆಯ ಈ ಕಟ್ಟಾಜ್ಞೆಯ ಬಗ್ಗೆ ಅತೀಯಾದ ವಿರೋಧವಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ