ಸಂಜೆ ಯಶವಂತಪುರದ ರೈಲ್ವೆ ಸ್ಟೇಷನ್ನಿನಲ್ಲಿ ತುಮಕೂರಿಗೆ ಹೊರಡುವುದಕ್ಕಾಗಿ ಪ್ಲಾಟ್‌ ಫಾರಂ ಬೆಂಚಿನ ಮೇಲೆ ಕಾದು ಕುಳಿತಿದ್ದ ಕಾವ್ಯಾ ರೈಲು ತಡವಾಯಿತಲ್ಲ ಎಂಬ ಚಿಂತೆಯಲ್ಲಿ ಮುಳುಗಿದ್ದಳು. ಆಗ ಹೆಗಲಿಗೆ ಲ್ಯಾಪ್‌ ಟಾಪ್‌ ಬ್ಯಾಗ್‌ ನೇತುಹಾಕಿಕೊಂಡು ಬಂದ ಸಮವಯಸ್ಕ ತರುಣನೊಬ್ಬ ಆ ಬೆಂಚಿನ ಮೇಲೆ ಕುಳಿತ ತಕ್ಷಣ ಹೇಳಿದ, ``ಎಕ್ಸ್ ಕ್ಯೂಸ್‌ ಮಿ..... ಬಹುಶಃ ಇವತ್ತೂ ರೈಲು ತಡ ಅನ್ಸುತ್ತೆ ಅಲ್ವಾ?'' ಅವಳಿಗೆ ಉತ್ತರ ಕೊಡಲು ಮನಸ್ಸಿಲ್ಲದಿದ್ದರೂ ಶಿಷ್ಟಾಚಾರಕ್ಕಾಗಿ ಕಾವ್ಯಾ ಹೌದು ಎಂಬಂತೆ ತಲೆ ಆಡಿಸಿದಳು. 2 ನಿಮಿಷ ಬಿಟ್ಟು ಬೇಡವೆನಿಸುತ್ತಿದ್ದರೂ ತಲೆಯೆತ್ತಿ ಅವನತ್ತ ನೋಡಿದಳು. ಆ ತರುಣ ಸುಂದರನಾಗಿದ್ದ. ಅವನ ನೋಟ ತನ್ನತ್ತಲೇ ಇರುವುದನ್ನು ಗಮನಿಸಿ ತಕ್ಷಣ ಅವಳು ಎದುರಿಗೆ ಕಾಣಿಸುತ್ತಿದ್ದ ಬೇರೊಂದು ರೈಲಿನತ್ತ ತನ್ನ ನೋಟ ಹರಿಸಿದಳು.

ಇಬ್ಬರ ನಡುವೆ ಮತ್ತೆ ನೀರವ ಮೌನ ಆವರಿಸಿತು. ಈ ಮಧ್ಯೆ ಬೇರೆ ಬೇರೆ ರೈಲುಗಳು ಬಂದು ಹೋದವು. ಇವರಿಗೆ ಬೇಕಿದ್ದ ರೈಲಿನ ಘೋಷಣೆ ಆಗುತ್ತಿದ್ದಂತೆಯೇ ಕಾವ್ಯಾ ಎದ್ದು ನಿಂತಳು. ಅವಳು ಅವಸರದಲ್ಲಿ ರೈಲಿನ ಮೆಟ್ಟಿಲೇರಿ ಒಳ ಪ್ರವೇಶಿಸಲು ನೋಡಿದಳು. ಈ ಮಧ್ಯೆ ಗಡಿಬಿಡಿಯಲ್ಲಿ ಅವಳ ಚಪ್ಪಲಿ ಕಿತ್ತುಹೋಗಿ ಅವಳ ಕಾಲು ಪ್ಲಾಟ್‌ ಫಾರ್ಮ್ ಅಡಿ ಹೋಯಿತು. ಗಾಬರಿಯಲ್ಲಿ ಅವಳಿಗೆ ಕಣ್ಣು ಕಣ್ಣು ಬಿಡುವಂತಾಯಿತು.

ಕ್ಷಣ ಮಾತ್ರದಲ್ಲಿ ಅವಳ ಹಿಂದೆ ನಿಂತಿದ್ದ ಆ ತರುಣ, ಬಾಗಿ ಅವಳ ಕಾಲನ್ನು ಜೋಪಾನವಾಗಿ ಮೇಲೆತ್ತಿದ. ಅವಳಿಗೆ ಆ ಶಾಕ್‌ ನಲ್ಲಿ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಆಗ ಅವನು, ``ನಿಮಗೆ ಅಭ್ಯಂತರ ಇಲ್ಲದಿದ್ದರೆ ದಯವಿಟ್ಟು ನನ್ನ ಹೆಗಲ ಮೇಲೆ ಕೈ ಇರಿಸಿ ನಿಧಾನ ನಡೆಯಿರಿ..... ಇಲ್ಲದಿದ್ದರೆ ರೈಲು ಮಿಸ್‌ ಆದೀತು!''

ಕಾವ್ಯಾ ಆಗಲಿ ಎಂಬಂತೆ ಅವನ ಹೆಗಲಿನ ಆಸರೆ ಪಡೆದು ನಿಧಾನ ಮೆಟ್ಟಿಲೇರಿ ರೈಲಿನ ಒಳಗೆ ಪ್ರವೇಶಿಸಿದಳು. ಅಂತೂ ಒಂದು ಕಡೆ ಇಬ್ಬರಿಗೂ ಸೀಟು ದೊರಕಿತು. ಅವನು ಅವಳ ಎದುರಿಗೆ ಕುಳಿತು ತನ್ನ ವಾಟರ್‌ ಬಾಟಲ್ ನೀಡಿದ. ಆಯಾಸಗೊಂಡಿದ್ದ ಅವಳು ಬೇಡ ಎನ್ನದೆ ನೀರು ಕುಡಿದಳು.

``ಥ್ಯಾಂಕ್ಸ್....''

``ಇರಲಿ, ನನ್ನ ಹೆಸರು ಪ್ರವೀಣ್‌. ನಿಮ್ಮ ಹೆಸರು?''

``ಕಾವ್ಯಾ.''

``ನೀವು ಎಲ್ಲಿಗೆ ಹೊರಟಿದ್ದೀರಿ?''

``ತುಮಕೂರು.''

``ಇಲ್ಲಿ ಬೆಂಗಳೂರಿನಲ್ಲಿ.....''

``ನಾನು ಮ್ಯಾನೇಜ್‌ ಮೆಂಟ್‌ನಲ್ಲಿ ಡಿಪ್ಲೊಮಾ ಮಾಡುತ್ತಿದ್ದೀನಿ. ಬೆಂಗಳೂರಿಗೆ ದಿನಾ ಬಂದು ಹೋಗುತ್ತೀನಿ. ಮತ್ತೆ ನೀವು.....''

``ನಾನೂ ತುಮಕೂರಿಗೇ ಹೊರಟಿದ್ದೇನೆ.''

``ಅಲ್ಲೇನು ಮಾಡ್ತಿದ್ದೀರಿ?''

``ಅಣ್ಣನನ್ನು ಮೀಟ್‌ ಮಾಡಲು ಹೋಗುತ್ತಿರುವೆ.''

ಅಷ್ಟರಲ್ಲಿ ಯಾರೋ ಐವರು ಅದೇ ಅಪಾರ್ಟ್‌ ಮೆಂಟ್‌ ಗೆ ಏರಿ ಬಂದು ಬೇಕೆಂದೇ ಕಾವ್ಯಾಳ ಪಕ್ಕದಲ್ಲಿ ಮೂವರು ಕುಳಿತರು. ಅವರ ಬಾಯಿಂದ ಮದ್ಯದ ದುರ್ನಾತ ಬಡಿಯುತ್ತಿತ್ತು. ಕಾವ್ಯಾಳಿಗಂತೂ ಆ ಕೆಟ್ಟ ಪರಿಸರದಲ್ಲಿ ಉಸಿರಾಡಲಿಕ್ಕೂ ಕಷ್ಟವಾಯ್ತು. ಅವಳ ಎದುರಿಗೆ ಪ್ರವೀಣನ ಪಕ್ಕ ಕುಳಿತಿದ್ದ ಉಳಿದಿಬ್ಬರು ಬೇಕೆಂದೇ ಅಶ್ಲೀಲವಾಗಿ ಮಾತನಾಡಿ, ಎದುರಿಗಿದ್ದರ ಜೊತೆ ಬಿದ್ದೂ ಬಿದ್ದೂ ನಗತೊಡಗಿದರು.

ಕೈ ಮೀರಿದ ಈ ಪರಿಸ್ಥಿತಿ ಗಮನಿಸಿ ಪ್ರವೀಣ್‌ ಹೇಳಿದ, ``ಡಾರ್ಲಿಂಗ್‌, ನಿನ್ನ ಕಾಲಿಗೆ ಪೆಟ್ಟಾಗಿದೆ. ನೀನು ಈ ಕಡೆ ಕಿಟಕಿ ಬದಿಗೆ ಬಾ..... ಮೇಲಿನ ಬರ್ತ್‌ ಹೇಗೂ ಖಾಲಿ ಇದೆ, ಇಲ್ಲಿಂದ ಹತ್ತಿ ಮೇಲೆ ಹೋಗಿ ಮಲಗು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ