ಕಥೆ ಶ್ಯಾಮಲಾ ದಾಮ್ಲೆ

ನನ್ನ ಸೌಂದರ್ಯವೇ ನನ್ನ ಪತಿಯನ್ನು ನನ್ನಿಂದ ದೂರ ಮಾಡುತ್ತಿದೆ. ಕಡೆಗೆ ಒಂದು ದಿನ ನಾನು ಈ ಸಮಸ್ಯೆಯ ಪರಿಹಾರಕ್ಕೆ ಹೊಸತೊಂದು ದಾರಿಯನ್ನು ಕಂಡುಹಿಡಿದೆ. ನನ್ನ ಸುಂದರ ರೂಪ ಎಲ್ಲರ ಕಣ್ಣು ಕುಕ್ಕುವಂತಿತ್ತು.  ತಮ್ಮ ರೂಪವತಿಯಾದ ಮಗಳನ್ನು ಸಮಾಜದಲ್ಲಿರುವ ತೋಳಗಳಿಂದ ರಕ್ಷಿಸಲು ನನ್ನ ತಾಯಿ ತಂದೆಯರು ಸದಾ ಕಣ್ಗಾವಲಾಗಿದ್ದರು. ಅವರ ಕಠಿಣ ವಿಚರಣಾ ಕ್ರಮದಿಂದಾಗಿ ತೋಳಗಳೇಕೆ ಕುರಿಮರಿಗಳೂ ಸಹ ನನ್ನ ಸಮೀಪದಲ್ಲಿ ಸುಳಿಯಲು ಸಾಧ್ಯವಾಗುತ್ತಿರಲಿಲ್ಲ.

``ಇಡೀ ದಿನ ಕನ್ನಡಿ ಮುಂದೆ ನಿಂತಿರಬೇಡ... ಕಾಲೇಜಿಗೆ ಹೋಗುವುದಕ್ಕೆ ಇಷ್ಟು ಅಲಂಕಾರ ಏಕೆ....? ಓದುವುದರ ಕಡೆ ಗಮನ ಕೊಡು.... ಗಂಡು ಹುಡುಗರ ಜೊತೆ ಮಾತಿಗೆ ನಿಂತರೆ ಕೆಟ್ಟ ಹೆಸರು ತರುತ್ತೀಯಾ...'' ನಾನು ಕಾಲೇಜಿಗೆ ಹೊರಡುವಾಗ ಇದು ನನ್ನ ತಾಯಿತಂದೆಯರ ನಿತ್ಯ ಭಾಷಣವಾಗಿರುತ್ತಿತ್ತು.

ನನ್ನ ಅಕ್ಕ ನೋಡಲು ಚೆನ್ನಾಗಿದ್ದಾಳೆ. ಆದರೆ ನನ್ನಷ್ಟು ಸುಂದರಿಯಲ್ಲ. ಒಂದೆರಡು ಸಲ ಏನಾಯಿತೆಂದರೆ ಅವಳನ್ನು ನೋಡಲು ಬಂದಿದ್ದ ಹುಡುಗರು ನನ್ನನ್ನು ಇಷ್ಟಪಟ್ಟರು. ಅದಾದ ಮೇಲೆ ಅವಳ ದೃಷ್ಟಿಯಲ್ಲಿ ನಾನು ಖಳನಾಯಕಿಯಾದೆ. ಅವಳಿಗೆ ತಂಗಿಯ ಮೇಲಿನ ವಿಶ್ವಾಸ ಯಾವ ಪರಿಯಾಗಿ ಮಾಸಿಹೋಯಿತೆಂದರೆ ರಾಜೇಶ್‌ ಭಾವನೊಂದಿಗೆ ನಾನು ಎಂದಾದರೂ ಮಾತನಾಡುತ್ತಿದ್ದೆ ಎಂದರೆ, ಅವಳು ತನ್ನ ಕೆಲಸವನ್ನೆಲ್ಲ ಬಿಟ್ಟು ನಮ್ಮ ನಡುವೆ ಬಂದು ಕುಳಿತುಬಿಡುತ್ತಿದ್ದಳು. ನಾನು ಖಂಡಿತ ತಪ್ಪು ನಡವಳಿಕೆಯವಳಲ್ಲ. ಆದರೆ ಪಾಪ! ಅವಳ ನಂಬಿಕೆಯ ಬುಡ ಅಲುಗಾಡಿಬಿಟ್ಟಿದೆ.

ನನ್ನನ್ನು ಉದ್ದೇಶಪೂರ್ವಕವಾಗಿ ಹುಡುಗಿಯರ ಕಾಲೇಜಿಗೇ ಸೇರಿಸಲಾಗಿತ್ತು. ಆದರೆ ಅಲ್ಲಿಯೂ ನನಗೆ ತೊಂದರೆ ತಪ್ಪಲಿಲ್ಲ. ಅಲ್ಲಿ ನನ್ನ ಗೆಳತಿಯರ ಅಸೂಯೆಯನ್ನು ಎದುರಿಸಬೇಕಾಯಿತು. ಪ್ರಾರಂಭದಲ್ಲಿ ನನ್ನ ಗೆಳತಿಯರ ಅನುಚಿತ ವ್ಯವಹಾರದಿಂದ ಕೋಪಗೊಳ್ಳುತ್ತಿದ್ದೆ. ಆದರೆ ಆಮೇಲೆ ಅವರ ಬಗ್ಗೆ ಸಹಾನುಭೂತಿಯಾಗತೊಡಗಿತು. ಪಾಪ, ಅವರು ಬಹಳ ಬೆಲೆಬಾಳುವ ಡ್ರೆಸ್ ಧರಿಸಿದ್ದರೂ ನಾನು ಸಾಧಾರಣ ಉಡುಪಿನಲ್ಲಿ ಕಾಣುವಷ್ಟು ಸುಂದರ ಮತ್ತು ಆಕರ್ಷಕವಾಗಿ ಕಾಣುತ್ತಿರಲಿಲ್ಲ. ನಾನು ಅವರ ಜೊತೆಯಲ್ಲಿದ್ದರೆ, ಅವರ ಬಾಯ್‌ ಫ್ರೆಂಡ್ಸ್ ಅವರತ್ತ ಕಡಿಮೆ ಗಮನ ನೀಡುತ್ತಿದ್ದರು. ನನ್ನನ್ನು ನೋಡಿ ಜೊಲ್ಲು ಸುರಿಸುತ್ತಿದ್ದರು.

ನನಗೆ ಯಾರೂ ಬಾಯ್‌ ಫ್ರೆಂಡ್‌ ಆಗಲು ಸಾಧ್ಯವಿರಲಿಲ್ಲ. ನನ್ನ  ತಾಯಿ ತಂದೆಯರು ನನ್ನ 2-3 ಗೆಳತಿಯರನ್ನು ಪತ್ತೇದಾರಿ ಕೆಲಸಕ್ಕೆ ಇರಿಸಿದ್ದರು. ಯಾವುದೇ ಹುಡುಗ ನನ್ನನ್ನು ಮಾತನಾಡಿಸಿದರೆ ಕೂಡಲೇ ಅವರಿಗೆ ಸುದ್ದಿ ಮುಟ್ಟುತ್ತಿತ್ತು. ಹೀಗಾಗಿ ನಾನು ನನ್ನೆಲ್ಲ ಬೆಡಗು, ಬಿನ್ನಾಣ, ರೊಮ್ಯಾಂಟಿಕ್‌ ಚೆಲ್ಲಾಟಗಳನ್ನೆಲ್ಲ ನನ್ನ ಭಾವೀ ಜೀವನ ಸಂಗಾತಿಗಾಗಿ ಕಾದಿರಿಸಿದ್ದೆ.

ಸುಂದರ  ಮತ್ತು ವಿದ್ಯಾಂತನಾದ ಸತೀಶನಿಗೆ ಅವನ ತಾಯಿ ಒಳ್ಳೆಯ ವರದಕ್ಷಿಣೆ ತರುವ ಹುಡುಗಿಗಿಂತ ಬೆಳದಿಂಗಳ ಬಾಲೆಯಂತಹ ಸೊಸೆಯನ್ನು ತರಬೇಕೆಂದು ಮನಸ್ಸು ಮಾಡಿದ್ದರು. ನನ್ನನ್ನು ನೋಡಿದ ಕೂಡಲೇ ಮರುಮಾತಿಲ್ಲದೆ ಮದುವೆಯ ಸಿದ್ಧತೆ ನಡೆಸಿದರು.

ಊಟಿಯಲ್ಲಿ ನಾವು ಕಳೆದ 1 ವಾರದ ಹನಿಮೂನ್‌ ಟ್ರಿಪ್‌ನನ್ನ ಜೀವನದ ಅತ್ಯಂತ ಸಂತೋಷದ ಸಮಯವೆಂದು ಭಾವಿಸಿದೆ. ನನ್ನ ಸೌಂದರ್ಯ ಸತೀಶನ ಮೈ ಮನಸ್ಸುಗಳನ್ನು ಮುಗ್ಧಗೊಳಿಸಿಬಿಟ್ಟಿತ್ತು. ನನ್ನನ್ನು ತಮ್ಮ ಬಲಿಷ್ಠ ಬಾಹುಗಳಲ್ಲಿ ಬಳಸಿ ಹಿಡಿದು ನನ್ನ ರೂಪವನ್ನು ವರ್ಣಿಸತೊಡಗಿದಾಗ ಒಬ್ಬ ಕವಿಯೇ ಆಗಿಬಿಡುತ್ತಿದ್ದರು.......

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ