ವಾಸು ಸ್ನಾನಕ್ಕೆ ಹೊರಡುತ್ತಿದ್ದಂತೆ, ಹೆಂಡತಿ ಶೈಲಜಾ  ರ್ರೀ  ಬಟ್ಟೆಗಳನ್ನು ಒಗೆಯಲು (ಶುಭ್ರ ಗೊಳಿಸಿ ಹಿಂಡಲು) ಹಾಕಬೇಡಿ.ಎರಡು ದಿನ ಕೆಲಸದವಳು ಬರುವುದಿಲ್ಲ.

ಯಾಕಂತೆ? ಎಂದು ವಾಸು ಕೇಳಿದನು

-ಮಗಳು ಮತ್ತು ಮೊಮ್ಮಕ್ಕಳನ್ನು ನೋಡಲು ಅವರ ಹಳ್ಳಿಗೆ ಹೋಗುತ್ತಾಳಂತೆ, ಅಲ್ಲಿ ಏನೋ ಊರ ಹಬ್ಬವಿದೆಯಂತೆ.

ಹಾಗೆ ಮುಂದುವರಿದು ಶೈಲಜಾ ರ್ರೀ

ಅವಳಿಗೆ ₹ 500 ಕೊಡುತ್ತೇನೆ. ಹಬ್ಬಕ್ಕೆ ಕೊಟ್ಟ ಹಾಗಿರುತ್ತದೆ, ಅವಳು ಮಗಳ ಬಳಿಗೆ ಹೋಗುತ್ತಿದ್ದಾಳೆ, ಪಾಪ  ಏನಾದರೂ ತೆಗೆದುಕೊಂಡು ಹೋಗುತ್ತಾಳೆ

-ಈಗೇನು ಬೇಡ, ದೀಪಾವಳಿ ಹಬ್ಬಕ್ಕೆ ಬೇಕಾದರೆ ಕೊಡುವಿಯಂತೆ, ನಾಳೆ ಮಕ್ಕಳ ಜೊತೆ ನಾವು ಪಿಜ್ಜಾ ತರಿಸಿ ತಿನ್ನುವ ಎಂದನು ವಾಸು.

-ಈ ವಾರ ಪಿಜ್ಜಾ ಬಿಡೋಣ ರ್ರೀ, ಆ 8 ತುಂಡು ಬ್ರೆಡ್ ಏಕೆ! ಅದೇ ದುಡ್ಡನ್ನು ಅವಳಿಗೆ ಕೊಟ್ಟರೆ ಅವಳು ಎಷ್ಟು ಸಂತೋಷಪಡುವಳು...?

-ಹಾಗಾದರೆ ನಮ್ಮ ಪಿಜ್ಜಾವನ್ನು ಅವಳಿಗೆ ಕೊಡುತ್ತೀಯೆನ್ನು, ಸರಿ, ನಿನ್ನಿಷ್ಟ" ಎಂದು ವಾಸು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ.

ನಾಲ್ಕು ದಿನಗಳ ನಂತರ ಕೆಲಸದವಳು ಯಥಾರೀತಿಯಂತೆ ಕೆಲಸಕ್ಕೆ ಬಂದಳು

“ಹಬ್ಬ ಚೆನ್ನಾಗಿಯೇ ಆಯ್ತಾ?” ಎಂದು ಕೇಳಿದ

ವಾಸು.

images

ಅವಳು ಸಂತೋಷದಿಂದ ಹೇಳಿದಳು,,

ಹೂ ಅಯ್ಯಾ

ಅಮ್ಮಾವ್ರು ನನಗೆ ₹500 ಕೊಟ್ಟಿದ್ರು. ಎರಡು ದಿನ 500 ಖರ್ಚು ಮಾಡಿ ಆನಂದಪಟ್ಟೆವು. 150 ರಲ್ಲಿ ಮೊಮ್ಮಗಳಿಗೆ ಡ್ರೆಸ್ ಖರೀದಿಸಿದೆ, 40 ರೂಪಾಯಿಗೆ ಆಟಿಕೆ ಖರೀದಿಸಿದೆ,

50 ರೂಪಾಯಿಗೆ ಸಿಹಿತಿಂಡಿ ಖರೀದಿಸಿದೆ, ದೇವಸ್ಥಾನದಲ್ಲಿ 50 ರೂಪಾಯಿ ಕೊಟ್ಟು ಅರ್ಚನೆ ಮಾಡಿಸಿದೆ,.

ಬಸ್ ಟಿಕೆಟ್‌ಗೆ  ರೂ,60,

ಅಳಿಯನಿಗೆ 50 ರೂಪಾಯಿ ಕೊಟ್ಟು ಬೆಲ್ಟ್ ಖರೀದಿಸಿದೆ,

25 ರೂಪಾಯಿಗೆ ಮಗಳಿಗೆ ಬಳೆಗಳ ಖರೀದಿಸಿದೆ.

75 ರೂಪಾಯಿ ಉಳಿಯಿತು,ನನ್ನ ಮೊಮ್ಮಗಳಿಗೆ  ಕಾಪಿ ಪುಸ್ತಕಗಳು ಮತ್ತು ಪೆನ್ಸಿಲ್ಗಳನ್ನು ಕೊಳ್ಳುವಂತೆ ಹೇಳಿ ನನ್ನ ಮಗಳ ಕೈಯಲ್ಲಿ ಕೊಟ್ಟು ಬಂದೆ.

ವಾಸು ಆಶ್ಚರ್ಯಚಕಿತನಾದ!!!.

500 ರೂಪಾಯಿಗೆ ಇಷ್ಟೆಲ್ಲವೇ ?

ಅವನು ತನ್ನ 8- piece ಪಿಜ್ಜಾದ ಬಗ್ಗೆ ಯೋಚಿಸಿದನು,,,,,

ಮೊದಲ ತುಂಡು

-150 ರೂಪಾಯಿ dress gaagi,, ಎರಡನೆ  ತುಂಡು

- 40 ರೂಪಾಯಿ ಆಟಿಕೆ,,

ಮೂರನೇ ತುಂಡು

- 50 ರೂಪಾಯಿ ಸಿಹಿತಿಂಡಿಗೆ,,

ನಾಲ್ಕನೇ ತುಂಡು

- 50 ರೂಪಾಯಿ ದೇವಸ್ಥಾನಕ್ಕೆ,,

ಐದನೇ ತುಂಡು

- 60 ರೂಪಾಯಿ ಬಸ್ ಟಿಕೆಟ್‌ಗೆ

ಆರನೇ ತುಂಡು

-50 ರೂಪಾಯಿ ಅಳಿಯನ ಬೆಲ್ಟ್ಗಾಗಿ

ಏಳನೇ ತುಂಡು

-25 ರೂಪಾಯಿ ಬಳೆಗಳು,, ಎಂಟನೇ ತುಂಡು

- 75 ರೂಪಾಯಿ ಪುಸ್ತಕಗಳು ಮತ್ತು ಪೆನ್ಸಿಲ್‌ಗಳಿಗಾಗಿ.

ಎಂಟು ತುಂಡುಗಳು ಕಣ್ಣುಗಳ ಮುಂದೆ ತೇಲುತ್ತಿರುವಂತೆ ಕಂಡವು.......

ಇಷ್ಟು ದಿವಸ ಅವನು ಪಿಜ್ಜಾದ ಒಂದು ಮುಖ ಮಾತ್ರ ನೋಡಿದ್ದ,,. ಪಿಜ್ಜಾದ ಎರಡನೆ ಮುಖ ಹೇಗಿದೆ ಎಂದು ಮನೆ ಕೆಲಸದವಳ ಖರ್ಚುಗಳನ್ನು ನೋಡಿ ತಿಳಿಯಿತು.

ಖರ್ಚು ಮಾಡುವುದಕ್ಕಾಗಿಯೆ ಜೀವಿಸುತ್ತಿರುವುದು ನಾವು!!

ಜೀವನಕ್ಕಾಗಿಯೆ ಖರ್ಚು

ಮಾಡುತ್ತಿರುವವಳು ಅವಳು.!!

ಐಷಾರಾಮಿ(ವಿಲಾಸ) ....

ಅವಶ್ಯಕತೆ ....

ಅನಿವಾರ್ಯ ....

ವ್ಯತ್ಯಾಸವನ್ನು ತಿಳಿದವರು ಧನ್ಯರು ....!!!

ಹಣವನ್ನು ವ್ಯರ್ಥ ಮಾಡಬೇಡಿ,,

ಅದು ನಿಮ್ಮ ತಂದೆಯ ಬೆವರು ಮತ್ತು ತಾಯಿಯ ತ್ಯಾಗದಿಂದ ಬಂದಿದೆ

ಎಂಬುದನ್ನು ಮರೆಯದಿರಿ::::::

~ಸಂಪಿಗೆ ವಾಸು, ಬಳ್ಳಾರಿ

೯೯೪೫೪೪೪೬೭೧

ಸಂಪಿಗೆ ವಾಸು

*ಸಂಪಿಗೆ ನಿಲಯ* ಸೆಕೆಂಡ್ ಸ್ಟೇಜ್, ಫಸ್ಟ್ ಕ್ರಾಸ್, ಅಗಡಿ ಮಾರಪ್ಪ ಕಾಂಪೌಂಡ್ ರಾಘವೇಂದ್ರ ಟಾಕಿಸ್ ಹತ್ತಿರ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ