ಕಥೆ - ಕೆ. ಚಂದ್ರಿಕಾ ಕುಲಕರ್ಣಿ 

ಸೀಮಾ, ಹ್ಯಾವನೋರ್‌ ಬಿಸ್‌ನೆಸ್‌ ಸ್ಕೂಲ್‌‌ನಲ್ಲಿ ಉತ್ತಮ ಗ್ರೇಡ್‌ನೊಂದಿಗೆ ಎಂಬಿಎ ಮುಗಿಸಿದಾಗ, ಗೂಗಲ್ ಅವಳಿಗೆ ಒಳ್ಳೆಯ ಪ್ಯಾಕೇಜ್‌ನೊಂದಿಗೆ ನೌಕರಿ ನೀಡಿತು ಮತ್ತು ಅವಳ ವೀಸಾವನ್ನು ಎಕ್ಸ್ ಚೇಂಜ್‌ ಮಾಡಿಕೊಟ್ಟಿತು. ಇಷ್ಟೆಲ್ಲ ಸಾಧಿಸಿದ್ದರೂ ಸೀಮಾಳ ಮುಖದಲ್ಲಿ ಸಂತೋಷವಿರಲಿಲ್ಲ. ಬದಲಿಗೆ ಅಲ್ಲಿ ದುಗುಡದ ಕಾರ್ಮೋಡ ಮುಸುಕಿತ್ತು. ಕಣ್ಣೀರಿನ ಮಳೆಯೂ ಸುರಿಯಲು ತವಕಿಸುತ್ತಿತ್ತು. ಇದೇನು ಆಕಸ್ಮಿಕವೋ ಎಂಬಂತೆ ಸರಿಯಾಗಿ 2 ವರ್ಷಗಳ ಹಿಂದೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧುಬಾಂಧವರಿಂದ ದೂರವಾಗುವೆನೆಂಬ ದುಃಖದಲ್ಲಿ ಸೀಮಾ ಹೆಜ್ಜೆಯನ್ನು ಮುಂದಿಡಲಾರದೆ ಇದ್ದಂತೆ, ಇಂದೂ ಸಹ ಬಾಸ್ಟನ್‌ ವಿಮಾನ ನಿಲ್ದಾಣದೆಡೆಗೆ ಹೆಜ್ಜೆ ಇಡಲಾಗದೆ ಪರಿತಪಿಸುತ್ತಿದ್ದಾಳೆ.

ಸ್ಯಾಮ್ ನ ಬಾಹುಬಂಧನದಲ್ಲಿ ಒರಗಿ ಕುಳಿತ ಸೀಮಾ, ಅತಿಯಾದ ದುಃಖದಿಂದ ನೊಂದಿದ್ದಾಳೆ. ಅವಳ ಮನಸ್ಸಿನ ವಿರಹ ವೇದನೆಯನ್ನು ಶಾಂತಗೊಳಿಸಲು ಸ್ಯಾಮ್ ಹಾರ್ವರ್ಡ್ ಯೂನಿವರ್ಸಿಟಿಯಿಂದ ಸ್ಟಾನ್‌ಫೋರ್ಡ್‌ನ ಬೀದಿ ಬೀದಿಗಳಲ್ಲಿ ಅವಳನ್ನು ಸುತ್ತಿಸುತ್ತಿದ್ದಾನೆ.

ಸೀಮಾಳ ಕುಂದಿದ ಮುಖವನ್ನು ತನ್ನ ಕೈಲಿ ಹಿಡಿದು ಗದ್ಗದ ಕಂಠದಲ್ಲಿ ಸ್ಯಾಮ್, ``ನನ್ನನ್ನು ಬಿಟ್ಟು ಹೋಗಬೇಡ ಸೀಮಾ, ನೀನಿಲ್ಲದೆ ನನ್ನ ಹೃದಯ ಕನ್ನಡಿಯ ಗಾಜಿನಂತೆ ಛಿದ್ರವಾಗುತ್ತದೆ. ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ನನ್ನನ್ನು ಬಿಟ್ಟು ಯಾರೋ ಪರಿಚಯವಿಲ್ಲದವನೊಡನೆ ಒಂದಾಗಲು ಹೊರಟಿದ್ದೀಯಾ?'' ಹೇಳಿದ.

ಸ್ಯಾಮ್ ಹೀಗೆ ಹೇಳುತ್ತಿದ್ದಂತೆ ಸೀಮಾ ಬಳ್ಳಿಯಂತೆ ಅವನನ್ನು ಬಳಸಿದಳು. ಅವಳನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಸ್ಯಾಮ್ ಕಾರಿನ ಹಿಂದಿನ ಸೀಟ್‌ನಲ್ಲಿ ಕುಳ್ಳಿರಿಸಿದ. ಅವಳನ್ನು ಬಲವಾಗಿ ಆಲಿಂಗಿಸಿ, ಅವಳ ಅಶ್ರು ತುಂಬಿದ ಮುಖದ ಮೇಲೆಲ್ಲ ಚುಂಬನದ ಮಳೆಗರೆದ. ಸೀಮಾ ಈ ಆನಂದದ ಹೊಳೆಯಲ್ಲಿ ಮೀಯುತ್ತಾ ಪುಳಕಿತಳಾದಳು.

ಅಗಲಿಕೆಯ ಸಮಯ ಸಮೀಪಿಸುತ್ತಿರುವ ಭಯದಲ್ಲಿ ಇಬ್ಬರೂ ಪ್ರೇಮ ಕಾಮದ ಸೀವೋಲ್ಲಂಘನ ಮಾಡಿಬಿಟ್ಟರು. ಆದರೆ ಅದಕ್ಕಾಗಿ ಅವರಿಗೇನೂ ಪಶ್ಚಾತ್ತಾಪವಾಗಲಿಲ್ಲ. ಬದಲಿಗೆ ಪೂರ್ಣತೆಯ ಅನುಭವದಿಂದ ತೃಪ್ತರಾದರು.

ಪರಸ್ಪರ ಸಮರ್ಪಣೆಯ ನಂತರ ಅವರ ಮನಸ್ಸು ನಿಶ್ಚಲ ಕೊಳದಂತೆ ಶಾಂತವಾಯಿತು. ಪರಮ ಸಂತೃಪ್ತಿಯನ್ನು ಅನುಭವಿಸಿದ ಅವರು ಅಂದೇ ವಿವಾಹವಾದ ನೂತನ ಜೋಡಿಯಂತೆ ಸುತ್ತತೊಡಗಿದರು. ರೆಕ್ಕೆ ಕಟ್ಟಿಕೊಂಡು ಬಾನೆತ್ತರಕ್ಕೆ ಹಾರಲು ಬಯಸಿದರು.

ಇಬ್ಬರೂ ಪರಸ್ಪರ ಅದೆಷ್ಟು ತಲ್ಲೀನರಾಗಿದ್ದರೆಂದರೆ, ಅವರ ಕಾರು ನಾಲ್ಕೂ ಕಡೆ ಸುತ್ತಿ ಹೈವೇಗೆ ಬಂದು ನಿಲ್ಲುತ್ತಿತ್ತು. ಇದು ಬಾಸ್ಟನ್‌ ನಗರದ ಒಂದು ವೈಶಿಷ್ಟ್ಯ.

ಸ್ಯಾಮ್ ನ ಕುತ್ತಿಗೆಗೆ ತನ್ನ ತೋಳಿನ ಹಾರ ಹಾಕುತ್ತಾ, ``ಸ್ಯಾಮ್, ನಾವು ಜೀವನವಿಡೀ ಇದೇ ರೀತಿ ಸುತ್ತು ಸುತ್ತು ಹಾಕುತ್ತಾ ಇರಲಾಗುವುದಿಲ್ಲವೇ?'' ಎಂದು ಕೇಳಿದಳು ಸೀಮಾ.

ಇದಕ್ಕೆ ಉತ್ತರವಾಗಿ ಸ್ಯಾಮ್ ಅವಳನ್ನು ತಬ್ಬಿ ಮುದ್ದಿಸಿದ.

ಒಂದಷ್ಟು ಸಮಯದ ನಂತರ ಇಬ್ಬರೂ ಪ್ರಯತ್ನಪಟ್ಟು ಮನಸ್ಸನ್ನು ಹತೋಟಿಗೆ ತಂದುಕೊಂಡರು. ಭಾರವಾದ ಮನಸ್ಸಿನಿಂದ ಸ್ಯಾಮ್ ಗಾಡಿಯನ್ನು ವಿಮಾನ ನಿಲ್ದಾಣದತ್ತ ನಡೆಸಿದ.

3 ಗಂಟೆಗಳ ರಿಪೋರ್ಟಿಂಗ್‌ಗೆ ಟೈಮ್ ಕಳೆದುಹೋಗಿತ್ತು. ಪ್ಲೇನ್‌ ಹೊರಡುವ ಸಮಯ ಸಮೀಪಿಸಿತು. ಸೀಮಾ ಬೇಗನೆ ಚೆಕ್‌ ಇನ್‌ ಆಗಿ, ಸ್ಯಾಮ್ ನನ್ನು ಆಲಿಂಗಿಸಿ ಲಗೇಜ್‌ ಟ್ರಾಲಿಯೊಂದಿಗೆ ಸರಸರನೆ ಹೊರಟಳು. ಆದರೆ ಪುನಃ ಅದೇ ವೇಗದಿಂದ ಹಿಂದಿರುಗಿ ಬಂದು ಸ್ಯಾಮ್ ನ ಕೊರಳಿಗೆ ಜೋತುಬಿದ್ದಳು. ಕಂಬನಿ ತುಂಬಿಕೊಂಡು ಸ್ಯಾಮ್ ಗೆ ಬೈ ಹೇಳುತ್ತಾ ಬೀಳ್ಕೊಂಡಳು. ಅವಳು ಕಣ್ಣಿಗೆ ಕಾಣುವವರೆಗೂ ಸ್ಯಾಮ್ ಕೈ ಆಡಿಸುತ್ತಾ ಅವಳನ್ನು ನೋಡುತ್ತಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ