ಕಥೆ- ಪೂರ್ಣಿಮಾ ಆನಂದ್‌ 

ಮೀರಾ ತನ್ನ ಗಂಡ ಪ್ರವೀಣನ ಜೊತೆ ಡೈನಿಂಗ್‌ ಟೇಬಲ್ ಬಳಿ ಬೆಳಗಿನ ಉಪಾಹಾರಕ್ಕಾಗಿ ಕುಳಿತಿದ್ದಳು. ಅಷ್ಟರಲ್ಲಿ ಮೀರಾಳ ಪೋನ್‌ ರಿಂಗಾಯ್ತು. ಮನೆಗೆಲಸದ ಲತಾ ಕಾಲ್‌ ಮಾಡಿದ್ದಳು. ``ಮೇಡಂ, ಇವತ್ತು ಬರಕ್ಕಾಗಲ್ಲ. ಅರ್ಜೆಂಟ್‌ ಕೆಲಸ ಬಂದಿದೆ. ನಾಳೆ ಬರ್ತೀನಿ,''

ಮೀರಾ ವಿಧಿಯಿಲ್ಲದೆ, ``ಸರಿ,'' ಎಂದು ಹೇಳಿ ತಲೆ ಆಡಿಸುತ್ತಾ ಫೋನಿಟ್ಟಳು.

ಪ್ರವೀಣನಿಗೆ ಹೆಂಡತಿಯ ಮೂಡ್‌ ಹಾಳಾಯಿತೆಂದು ತಿಳಿಯಿತು.

``ಏನಾಯ್ತು....? ಇವತ್ತೂ ಲತಾ ರಜೆ ಅಂತೇನು?''

ಮೀರಾ ನೀರಸವಾಗಿ, ``ಹ್ಞೂಂ,'' ಅಂದಳು.

``ಇರಲಿ ಬಿಡು ಮೀರಾ. ಟೇಕ್‌ ಈಟ್‌ ಈಝಿ.''

ಮೀರಾ ಹತಾಶಳಾಗಿ ನುಡಿದಳು, ``ನನಗಂತೂ ಇವಳಿಂದ ತೊಂದರೆ ತಪ್ಪಿದ್ದಲ್ಲ. ಪ್ರತಿ ವಾರ 1-2 ದಿನ ರಜೆ ತಪ್ಪಿದ್ದಲ್ಲ. 8 ವರ್ಷದ ಹಳೆ ಕೆಲಸದವಳು, ಏಕ್‌ದಂ ನಾಳೆಯಿಂದ ಬರಬೇಡ ಅಂತ ಮುಖದ ಮೇಲೆ ಹೊಡೆದಂತೆ ಹೇಗೆ ಹೇಳಲಿ?''

``ಅದೂ ನಿಜ, ಇರಲಿ ಬಿಡು. ಈ ಸಣ್ಣಪುಟ್ಟ ವಿಷಯಗಳನ್ನು ಇಷ್ಟು ಸೀರಿಯಸ್‌ ಆಗಿ ತೆಗೆದುಕೊಳ್ಳಬಾರದು. ನೀನೇನೂ ಮಾಡಬೇಡ. ಎಲ್ಲಾ ಕೆಲಸ ಪೆಂಡಿಂಗ್‌ ಇಡು, ಅವಳೇ ನಾಳೆ ಬಂದು ಮಾಡಿಕೊಳ್ಳಲಿ.''

``ಅದು ಹೇಗೆ ಸಾಧ್ಯ? ಮನೆ ಗುಡಿಸಿ ಒರೆಸದೆ, ಪಾತ್ರೆ ತೊಳೆಯದೆ ಕೆಲಸಗಳಾಗುತ್ತವೆಯೇ? ಒಗೆಯುವ ಬಟ್ಟೆ ಮುಂದಕ್ಕೆ ಹಾಕಬಹುದಷ್ಟೆ.''

``ಹೇಗೋ ಆಗುತ್ತೆ ಬಿಡು. ಎಲ್ಲವನ್ನೂ ಮೈ ಮೇಲೆಳೆದುಕೊಂಡು ದೆವ್ವದ ಹಾಗೆ ಕೆಲಸ ಮಾಡ್ತೀಯ, ಆಮೇಲೆ ವಿಪರೀತ ಬೆನ್ನು ನೋವು ಅಂತ ಮಲಗಿಬಿಡ್ತೀಯ.... ಗುಡಿಸಿ ಸಾರಿಸದಿದ್ದರೆ 1 ದಿನಕ್ಕೆ ಏನೂ ಆಗದು. ಉಳಿದ ಕೆಲವು ಪಾತ್ರೆಗಳಲ್ಲೇ ಮ್ಯಾನೇಜ್‌ ಮಾಡು. ಲತಾ ನಾಳೆ ಬಂದ ಮೇಲೆ ಒಟ್ಟಿಗೆ ಎಲ್ಲಾ ಮಾಡಿಕೊಳ್ಳಲಿ.''

``ಏನು ಹೇಳ್ತೀರಿ ನೀವು? ಇಡೀ ದಿನ ಮನೆಯನ್ನು ಕಸಮಯ ಮಾಡಿಟ್ಟುಕೊಳ್ಳುವುದೇ? ಇದೆಲ್ಲ ನಡೆಯುವ ಕೆಲಸವೇ?''

``ಬಿಡು, ಅಂಥ ತಲೆ ಕೆಡಿಸಿಕೊಳ್ಳೋ ಕೆಲಸ ಏನಲ್ಲ. ಈಗ ಹೇಗೂ ತಿಂಡಿ ಆಯ್ತು, ಅಡುಗೆಗೆ ಕುಕ್ಕರ್‌, 1-2 ಪಾತ್ರೆ ಇದೆ. ಉಳಿದದ್ದೆಲ್ಲ ನಾಳೆಗಿರಲಿ. ಶೈಲಿ ಕೂಡ ಕಾಲೇಜಿಗೆ ಹೋಗಿದ್ದಾಯ್ತು. ಇದೋ, ನಾನೂ ಆಫೀಸಿಗೆ ಹೊರಟೆ. ಇನ್ನು ನಾವಿಬ್ಬರೂ ಬರುವುದೇ ಸಂಜೆಗೆ. ಮನೆ ತಕ್ಕಮಟ್ಟಿಗೆ ನೀಟಾಗೇ ಇದೆ. ಮನೆ ಗಲೀಜು ಮಾಡುವಂಥ ಮಕ್ಕಳು ಯಾರೂ ಇಲ್ಲ. ಉಳಿದ ಸಣ್ಣಪುಟ್ಟ ಕೆಲಸ ನಾಳೆಗಿರಲಿ. ಇರುವವಳು ಈಗ ನೀನೊಬ್ಬಳು, ಆರಾಮವಾಗಿ ನೆಮ್ಮದಿಯಾಗಿರು. ಇದೆಲ್ಲ ತೀರಾ ಸಣ್ಣ ಸಣ್ಣ ವಿಷಯ. ಇದಕ್ಕಾಗಿ ದಿನವಿಡೀ ಮೂಡ್‌ ಕೆಡಿಸಿಕೊಳ್ಳುವ ಅಗತ್ಯವಿಲ್ಲ.''

ಪ್ರವೀಣನ ಮಾತಿಗೆ ಮೀರಾ ಏನೂ ಹೇಳಲಾಗಲಿಲ್ಲ. ಅವನ ಶಾಂತ, ಸೌಮ್ಯ ಮುಖ ನೋಡುತ್ತಾ ಹಾಗೇ ಇದ್ದುಬಿಟ್ಟಳು. ಮದುವೆಯಾಗಿ 25 ವರ್ಷಗಳು ಅದೆಷ್ಟು ಬೇಗ ಕಳೆದುಹೋದವು ಅನಿಸುತ್ತದೆ. ಇವತ್ತಿಗೂ ಪತಿಪತ್ನಿಯರ ಪರಸ್ಪರ ಒಲವು ಮೊದಲ ದಿನದ ಹಾಗೇ ಉಳಿದುಕೊಂಡಿದೆ.

ಪ್ರವೀಣನನ್ನು ಹಾಗೆ ಗಮನಿಸುತ್ತಿದ್ದ ಮೀರಾಳನ್ನು ಉದ್ದೇಶಿಸಿ ಅವನು ಹೇಳಿದ, ``ಏನೋ ಆಳವಾಗಿ ಯೋಚಿಸುತ್ತಿರುವಂತೆ ಕಾಣಿಸ್ತಿದೆ ಮೀರಾ....''

ತನಗೆ ಅರಿವಿಲ್ಲದೆಯೇ ಮೀರಾ ಈ ಮಾತನ್ನು ನುಡಿದಿದ್ದಳು, ``ಅದೇನೋ ಗೊತ್ತಿಲ್ಲ, ನನಗೆ ನಿಮ್ಮನ್ನು ಕಂಡರೆ ಒಂದು ತರಹ ಅಸೂಯೆ....''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ