ಕಥೆ - ಕಾತ್ಯಾಯನಿ 

ಸೌಮ್ಯಾಳ ಅನಿಮೇಶನ್‌ ಫಿಲಂನ ಯಶಸ್ಸಿಗಾಗಿ ಅವಳನ್ನು ಅಭಿನಂದಿಸಲು ಸಹಪಾಠಿ ಅನಂತ್‌ ಅವಳ ಮನೆಗೆ ಬಂದ. ಜೊತೆಯಲ್ಲಿ ಅವನ ಸ್ನೇಹಿತ ಮಧುಕರ್‌ ಕೂಡ ಇದ್ದ.

ಗೆಳೆಯನನ್ನು ಪರಿಚಯಿಸುತ್ತಾ ಅನಂತ್‌ ಹೇಳಿದ, ``ಇವನು ನನ್ನ ಸ್ನೇಹಿತ ಮಧುಕರ್‌, ಚೆನ್ನೈನಿಂದ ಬಂದಿದ್ದಾನೆ. ನನ್ನ ರೂಮಿನಲ್ಲಿ ಉಳಿದುಕೊಂಡಿದ್ದಾನೆ. ಅವನೊಬ್ಬನನ್ನೇ ಬಿಟ್ಟು ಬರಬೇಕಲ್ಲ ಅಂತ ನಿನಗೆ ವಿಶ್‌ ಮಾಡಲು ಬರುವಾಗ ಅವನನ್ನೂ ಕರೆದುಕೊಂಡು ಬಂದೆ.''

``ಒಳ್ಳೆಯದಾಯಿತು ಅನಂತ್‌. ನನಗೂ ಇವರ ಭೇಟಿ ಆದಂತಾಯಿತು,'' ಎನ್ನುತ್ತಾ ಸೌಮ್ಯಾ ಅತ್ತ ತಿರುಗಿ ಮಧುಕರನನ್ನು ಕೇಳಿದಳು, ``ಅಂದಹಾಗೆ ನೀವು ಬೆಂಗಳೂರಿಗೆ ಬಂದಿರುವ ಕಾರಣ?''

``ಕೆಲಸ ಹುಡುಕಲು ಬಂದಿದ್ದೇನೆ.''

``ಉತ್ತಮ ಕೆಲಸ ಅಂತ ಹೇಳು,'' ಅನಂತ್‌ ಮಧ್ಯೆ ಮಾತನಾಡಿದ.

``ಇವನು ಜನಪ್ರಿಯ ಟಿವಿ ಚಾನೆಲ್‌ನಲ್ಲಿ ಪ್ರೋಗ್ರಾಂ ಪ್ಲಾನರ್‌ ಆಗಿದ್ದಾನೆ. ಅದರಲ್ಲಿ ಸೀರಿಯಲ್‌ಗಳು ವರ್ಷಗಟ್ಟಲೆ ಮುಂದುವರಿಯುತ್ತಿರುತ್ತವೆ. ಅದರಿಂದ ಇವನಿಗೆ ಹೊಸದೇನಾದರೂ ಮಾಡಲು ಅವಕಾಶವೇ ಇರುವುದಿಲ್ಲ. ಹೀಗಾಗಿ ಚ್ಯಾನೆಲ್‌ ಬದಲಾಯಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾನೆ.''

``ಹಾಗಾದರೆ ನೀವು ನಮ್ಮ ಲೈನ್‌ನಲ್ಲಿ ಇದ್ದೀರಿ ಅಂತ ಆಯಿತು.''

``ಹೌದು. ಅದರಿಂದಲೇ ಅನಂತನ ಜೊತೆ ಸ್ನೇಹ ಇರುವುದು.''

``ಸೌಮ್ಯಾ, ನಿನ್ನ ಸಕ್ಸೆಸ್‌ಗಾಗಿ ಒಂದು ಪಾರ್ಟಿ ಏರ್ಪಡಿಸಿ ಇವನನ್ನೂ ಇನ್‌ವೈಟ್‌ ಮಾಡಿದರೆ, ನಿನ್ನ ಸ್ನೇಹವನ್ನೂ ಇಟ್ಟುಕೊಳ್ಳುತ್ತಾನೆ. ಏನಂತೀಯಾ?'' ಅನಂತ್‌ ನಗೆಚಟಾಕಿ ಹಾರಿಸಿದ.

``ಆಗಲಿ ಮೊದಲು ನಮ್ಮ ಮನೆಯಲ್ಲೇ ಅಮ್ಮ ಮಾಡಿರುವ ಕೇಸರಿಭಾತ್‌ ತಿನ್ನಿ. ಆಮೇಲೆ ಹೊರಗಡೆ ಊಟಕ್ಕೆ ಹೋಗೋಣ.''

ಮೂವರೂ ಡೈನಿಂಗ್‌ ಟೇಬಲ್‌ನತ್ತ ನಡೆದರು. ಸುಶೀಲಾ ಅವರಿಗೆಲ್ಲ ತಿಂಡಿ ಕಾಫಿ ಕೊಟ್ಟು ಉಪಚರಿಸಿದರು.

``ತಿಂಡಿ ಬಹಳ ಚೆನ್ನಾಗಿತ್ತು,'' ಮಧುಕರ್‌ ಕೈ ತೊಳೆದುಕೊಳ್ಳುತ್ತಾ ಹೇಳಿದ.

``ಹೊರಗೆ ಊಟ ಮಾಡುವ ಬದಲು ಮನೆಯಲ್ಲೇ ಮಾಡಿದರೆ ಹೇಗೆ? ನಾನಂತೂ ಹೋಟೆಲ್‌‌ಗೆ ಊಟ ತಿಂಡಿ ತಿಂದು ರೋಸಿಹೋಗಿದ್ದೇನೆ.''

``ಸೌಮ್ಯಾ.... ನಿನಗೆ ತೊಂದರೆ ಬರುವುದಿಲ್ಲ ಅನ್ನುವುದಾದರೆ ನನಗೂ ಮನೆಯಲ್ಲೇ ಬಿಸಿಬೇಳೆ ಭಾತ್‌ ತಿನ್ನುವುದಕ್ಕೆ ಇಷ್ಟ.''

ಕೂಡಲೇ ಸುಶೀಲಾ ಹೇಳಿದರು, ``ಅವಳಿಗೇನು ತೊಂದರೆ ಆಗುತ್ತದೆ? ನಾನಿದ್ದೇನಲ್ಲ ಮಾಡಿಕೊಡುವುದಕ್ಕೆ... ಬಿಸಿಬೇಳೆ ಬಾತ್‌ ಜೊತೆಗೆ ಏನು ಮಾಡಲಿ?''

``ಒಂದಿಷ್ಟು ಹಪ್ಪಳ, ಸಂಡಿಗೆ ಕರಿದು, ಜಾಮೂನು ಮಾಡಿಬಿಡಿ ಆಂಟಿ ಅಷ್ಟು ಸಾಕು. ಆಮೇಲೆ ಸೌಮ್ಯಾಳ ಮದುವೆ ಫಿಕ್ಸ್ ಆದಾಗ ಇನ್ನೂ ದೊಡ್ಡ ಪಾರ್ಟಿ ಕೇಳೋಣ,'' ಅನಂತ್‌ ಚುಡಾಯಿಸಿದ.

``ಓಹೋ! ನನ್ನ ಮದುವೆಯ ಪ್ರಶ್ನೆಯೇ ಇಲ್ಲ. ಮೊದಲು ಅಣ್ಣನ ಮದುವೆ ಆಗಬೇಕು. ಆಮೇಲೆ ನನ್ನ ವಿಷಯ...... ನಾನು ಒಪ್ಪಿದ ಹುಡುಗಿಯನ್ನೇ ಮದುವೆಯಾಗುವುದಾಗಿ ಅಣ್ಣ ಹೇಳಿಬಿಟ್ಟಿದ್ದಾನೆ. ಆದರೆ ನಾನು ನನ್ನ ಕೆರಿಯರ್‌ ರೂಪಿಸಿಕೊಳ್ಳುವುದರಲ್ಲಿ ಎಷ್ಟು ಮಗ್ನಳಾಗಿದ್ದೇನೆಂದರೆ ಅಣ್ಣನಿಗೆ ಹುಡುಗಿಯನ್ನು ನೋಡುವುದಕ್ಕೆ ನನಗೆ ಬಿಡುವೇ ಇಲ್ಲದಂತಾಗಿದೆ.''

``ಅಣ್ಣನ ಎಣಿಕೆ ಏನು ಅಂದರೆ, ಅವನು ಮದುವೆಯಾಗುವ ಹುಡುಗಿಯನ್ನು ನಾನೇ ಆರಿಸಿ ಹೊಂದಾಣಿಕೆಯಿಂದ ಇದ್ದರೆ ಮುಂದೆ ನಮ್ಮ ನಮ್ಮ ಸಂಬಂಧ ಬಲವಾಗಿರುತ್ತದೆ ಅಂತ. ಅವಳು ಮನೆಯವರ ಜೊತೆಗೂ ಹೊಂದಿಕೊಳ್ಳಬೇಕು ಮತ್ತು ಬಿಸಿನೆಸ್‌ನ ಜವಾಬ್ದಾರಿಯಲ್ಲಿ ಭಾಗಿಯಾಗಬೇಕು ಅನ್ನುವುದು ಅವನ ಆಸೆ. ನಾನು ಅಂತಹ ಸುಂದರ ಸ್ಮಾರ್ಟ್‌ ಹುಡುಗಿಯನ್ನು ಆರಿಸಬೇಕಾಗಿದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ