ಕಥೆ - ಶಾರದಾ ಶ್ರೀನಾಥ್‌

``ಅಮ್ಮಾ, ನಾನು ಈವತ್ತೇ ನನ್ನ ಹೊಸ ವಾಟರ್‌ ಬಾಟಲ್ ತೆಗೆದುಕೊಂಡು ಹೋಗುತ್ತೇನೆ,'' ಪುಟ್ಟ ಖುಷಿ ಕುಣಿಯುತ್ತಾ ಬಂದು ಹೇಳಿದಳು.

``ಓ.ಕೆ.,'' ಎನ್ನುತ್ತಾ ನಾನು ಅವಳನ್ನು ಸ್ಕೂಲ್‌ ವ್ಯಾನ್‌ಗೆ ಸಿದ್ಧಪಡಿಸಿದೆ.

``ಮೀನಾ, ನಿನ್ನ ಪಾರ್ಲರ್‌ನ ಸಾಮಾನು ಲಿಸ್ಟ್ ಸತೀಶನಿಗೆ ಕೊಟ್ಟಿದ್ದೇನೆ. 11-12 ಗಂಟೆ ಹೊತ್ತಿಗೆ ಸಾಮಾನು ತಂದುಕೊಡುತ್ತಾನೆ. ಚೆಕ್‌ ಮಾಡಿಕೋ,'' ರಾಘವ್ ತಿಂಡಿ ತಿನ್ನುತ್ತಾ ಹೇಳಿದರು.

ರಾಘವ್ ಆಫೀಸಿಗೆ ಹೋಗುವಾಗ ಮಗಳನ್ನು ಶಾಲೆಗೆ ಬಿಟ್ಟುಹೋಗುತ್ತಿದ್ದರು. ಇಲ್ಲವಾದರೆ ನಾನು ಅವಳನ್ನು ಶಾಲೆಗೆ ಕರೆದೊಯ್ಯಬೇಕಾಗುತ್ತಿತ್ತು. ನನ್ನ ಕೆಲಸವನ್ನೆಲ್ಲ ಮುಗಿಸಿ ಮಧ್ಯಾಹ್ನ 1 ಗಂಟೆಗೆ ಅವಳನ್ನು ಕರೆತರುತ್ತಿದ್ದೆ. ಅವರಿಬ್ಬರೂ ಹೋದ ಮೇಲೆ ನಾನು ಆರಾಮ ಕುರ್ಚಿಯಲ್ಲಿ ಕುಳಿತು ದಿನಪತ್ರಿಕೆಯನ್ನು ಕೈಗೆತ್ತಿಕೊಂಡೆ.

ಇದ್ದಕ್ಕಿದ್ದಂತೆ ಯಾರೋ ಜೋರಾಗಿ ಬಾಗಿಲು ಬಡಿದರು. ಬಾಗಿಲು ತೆರೆದರೆ ಎದುರುಮನೆಯ ಮಮತಾ ಏದುಸಿರು ಬಿಡುತ್ತಾ ನಿಂತಿದ್ದಳು.

``ಏನಾಯಿತು? ಎಲ್ಲಿಂದ ಓಡಿ ಬರುತ್ತಿದ್ದೀಯಾ?'' ಎಂದು ಕೇಳಿದೆ. ಅವಳು ಕಡ್ಡಿಯನ್ನು ಗುಡ್ಡ ಮಾಡುವ ಸ್ವಭಾವದವಳು ಎಂದು ನನಗೆ ಗೊತ್ತಿತ್ತು.

``ಮೀನಾ... ಒಂದು ಕೆಟ್ಟ ಸುದ್ದಿ. ಮೋಹನನ ಹೆಂಡತಿ ಆತ್ಯಹತ್ಯೆ ಮಾಡಿಕೊಂಡಿದ್ದಾಳೆ.''

``ಏನು.... ಏನು ಹೇಳುತ್ತಿದ್ದೀಯಾ?''

``ಹೌದು,'' ಎಂದು ಅವಳು ಆ ಕಥೆ ಹೇಳತೊಡಗಿದಳು.

ಮಮತಾಳನ್ನು ಕಳುಹಿಸಿ ಬಂದು ಕುಳಿತ ಮೇಲೆ ನನ್ನ ಬುದ್ಧಿ ಮಂಕಾಗಿಬಿಟ್ಟಿತು. ಪ್ರಮೀಳಾ ಇದೇನು ಮಾಡಿಕೊಂಡಳು? 2 ವರ್ಷದ ಪುಟ್ಟ ಮಗುವನ್ನು ಬಿಟ್ಟು, ಜೊತೆಗೆ ಅವಳು ಗರ್ಭಿಣಿ ಕೂಡ ಆಗಿದ್ದಳು. ಅಂದರೆ, ಎಳೆಯ ಜೀವವನ್ನೂ ತನ್ನೊಂದಿಗೆ ದಹಿಸಿಬಿಟ್ಟಳು. ಅವಳು ಹಾಗೇಕೆ ಮಾಡಿದಳು? ಅದೇಕೆಂದು ನನಗೆ ಗೊತ್ತಿತ್ತು..... ಆದರೂ ನಾನು ದಂಗು ಬಡಿದು ಕುಳಿತಿದ್ದೆ. ತಲೆಯಲ್ಲಿ ಅನೇಕ ಪ್ರಶ್ನೆಗಳು ಸುತ್ತುತ್ತಿದ್ದವು.

ಮೋಹನನನ್ನು ನಾನು ಚೆನ್ನಾಗಿ ಬಲ್ಲವಳಾಗಿದ್ದೆ. ಅವನ ಮದುವೆಗೆ ನಾನು ಹೋಗಿರಲಿಲ್ಲ. ಆದರೆ ಅವನ ಪತ್ನಿ ಸುಂದರಿ ಮತ್ತು ಸುಶೀಲೆಯೆಂದು ಇತರರು ಹೇಳುವುದನ್ನು ಕೇಳಿದ್ದೆ. ನಂತರದ ದಿನಗಳಲ್ಲಿ ತಿಳಿದು ಬಂದ ವಿಷಯವೆಂದರೆ, ಮೋಹನ್‌ ಮಾತುಮಾತಿಗೆ ಪತ್ನಿಯನ್ನು ಶಾರೀರಿಕ ಮತ್ತು ಮಾನಸಿಕವಾಗಿ ಹಿಂಸಿಸುತ್ತಾನೆ. ಅವಳನ್ನು ತವರಿಗೆ ಹೋಗಗೊಡುವುದಿಲ್ಲ. ಅವಳ ತಂದೆ ತಾಯಿಯರನ್ನೂ ನಿಂದಿಸುತ್ತಾನೆ.

ಒಮ್ಮೆ ಸಮಾರಂಭವೊಂದರಲ್ಲಿ ಅವನ ಪತ್ನಿಯ ಭೇಟಿಯಾಗಿತ್ತು. ಆಗ ಅವಳು ಕಣ್ಣುಗಳಲ್ಲಿ ನೀರು ತುಂಬಿಕೊಂಡು 2 ಮಾತು ಹೇಳಿದ್ದಳು, ``ನಿಮ್ಮ ಹಾಗೆ ನೆಮ್ಮದಿಯಾಗಿರುವುದನ್ನು ನಾವು ಕೇಳಿಕೊಂಡು ಬಂದಿಲ್ಲ.''

ಹೌದು, ಮೋಹನನ ಮುಷ್ಟಿಯಿಂದ ಬಿಡಿಸಿಕೊಂಡು ನಾನು ನೆಮ್ಮದಿಯಾಗಿರುವುದು ನಿಜ. ರಾಘವ್ ನನಗೆ ಒತ್ತಾಸೆಯಾಗಿ ನಿಂತು ಸಂರಕ್ಷಿಸಿಲ್ಲದಿದ್ದರೆ ನನ್ನ ಬಾಳು ಛಿದ್ರಛಿದ್ರವಾಗಿ ಬಿಟ್ಟಿರುತ್ತಿತ್ತು. ಯೋಚಿಸುತ್ತಾ ಕುಳಿತಿದ್ದಂತೆ ನನ್ನ ಮನಸ್ಸು ಅತೀತದ ಆಳಕ್ಕಿಳಿಯಿತು......

``ಮ್ಯಾಮ್, ಈ ಬಣ್ಣ ನಿಮಗೆ ಚೆನ್ನಾಗಿ ಒಪ್ಪುತ್ತದೆ,'' ಗುಲಾಬಿ ಬಣ್ಣದ ಸೀರೆಯುಟ್ಟು ಅಂಗಡಿಯಿಂದ ಬಂದು ನಾನು ಮನೆಯ ಗೇಟ್‌ ತೆರೆಯುವಾಗ ಹಿಂದಿನಿಂದ ಧ್ವನಿ ಕೇಳಿಸಿತು.

ನಾವು ಹೊಸದಾಗಿ ಅಲ್ಲಿ ಮನೆ ಮಾಡಿಕೊಂಡು ಬಂದಿದ್ದೆವು. ಮೋಹನ ನಮ್ಮ ಬೀದಿಯದೇ ಹುಡುಗ. 23-24 ವಯಸ್ಸಿನ ಅವನ ದಷ್ಟಪುಷ್ಟ ಶರೀರ ಆಕರ್ಷಕವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ