ಕಥೆ - ಸಿ.ಕೆ. ಸುಲಕ್ಷಣಾ 

ನಳಿನಾ ಮತ್ತು ರಾಜು ಯಾವುದೋ ಗಂಭೀರವಾದ ವಿಷಯದ ಬಗ್ಗೆ ಆಲೋಚಿಸುತ್ತಾ, ಮಾತನಾಡುತ್ತಾ ಕುಳಿತಿದ್ದರು. ಅವರು ಅದರಲ್ಲಿ ಅದೆಷ್ಟು ಮಗ್ನರಾಗಿದ್ದರೆಂದರೆ, ಅವಳ ದೊಡ್ಡಪ್ಪನ ಮಗ ದೇವರಾಜ್‌ ಅಲ್ಲಿಗೆ ಬಂದದ್ದು ಅವರ ಗಮನಕ್ಕೆ ಬರಲಿಲ್ಲ.

``ಏನು, ಇಬ್ಬರೂ ಬಹಳ ಸೀರಿಯಸ್‌ ಆಗಿ ಕುಳಿತುಬಿಟ್ಟಿದ್ದೀರಿ?''

ಅವರಿಬ್ಬರೂ ಕತ್ತೆತ್ತಿ ನೋಡಿದರು. ಅವರ ಕಣ್ಣುಗಳು ಭಾವರಹಿತವಾಗಿದ್ದವು.

``ಎಲ್ಲರೂ ಕ್ಷೇಮ ತಾನೇ?'' ಯಾರೂ ಮಾತನಾಡದಿರಲು ದೇವರಾಜ್‌ ಮತ್ತೆ ಕೇಳಿದರು.

``ಹೌದು ಸರ್‌, ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ,'' ರಾಜು ಹೇಳಿದ.

``ಹಾಗಾದರೆ ತೊಂದರೆ ಆಗಿರುವುದು ಎಲ್ಲಿ?''

``ಸೌಮ್ಯಾಳ ಜೀವನದಲ್ಲಿ ಅಣ್ಣ,'' ನಳಿನಾ ಹೇಳಿದಳು, ``ಅವಳಿಗೆ ಹೇಗೆ ಸಹಾಯ ಮಾಡುವುದು ಅನ್ನುವುದೇ ತಿಳಿಯುತ್ತಿಲ್ಲ.''

ಸೌಮ್ಯಾ ಮತ್ತು ನಳಿನಾ ಆಪ್ತ ಗೆಳತಿಯರು. ಸೌಮ್ಯಾಳ ಅಣ್ಣ ರಾಜುವಿಗೆ ನಳಿನಾಳ ಬಗ್ಗೆ ಆಕರ್ಷಣೆ ಇರುವುದನ್ನು ದೇವರಾಜ್‌ ಈಗಾಗಲೇ ಗಮನಿಸಿದ್ದರು.

``ವಿಷಯ ಬಿಡಿಸಿ ಹೇಳು,'' ದೇವರಾಜ್‌ ಸೋಫಾದಲ್ಲಿ ಒರಗಿ ಕುಳಿತುಕೊಳ್ಳುತ್ತಾ ಹೇಳಿದರು, ``ನಾನೇನಾದರೂ ಸಹಾಯ ಮಾಡಬಹುದಾ ನೋಡೋಣ.''

ರಾಜು ಕೂಡಲೇ, ``ನಳಿನಾ, ಮೊದಲು ಎಲ್ಲ ಸರಿಯಾಗಿತ್ತು ತಾನೇ, ಅಶೋಕನ ತಾತನ ಹತ್ಯೆ ಆದ ಮೇಲೆಯೇ ಕಾವ್ಯಾ ಬೇಡ ಅನ್ನುವುದಕ್ಕೆ ಪ್ರಾರಂಭ ಮಾಡಿದ್ದು... ದೇವರಾಜ್‌ ಸರ್‌ ತಜ್ಞ ಪತ್ತೇದಾರರು. ಅವರು ಈ ಸಮಸ್ಯೆಯನ್ನು ಖಂಡಿತ ಬಿಡಿಸುತ್ತಾರೆ.''

``ಪಾಪ, ಸೌಮ್ಯಾಳಿಗೂ ಕೊಲೆಗೂ ಏನು ಸಂಬಂಧ? ಆದರೆ ಅಣ್ಣಾ, ನೀವು ಸೌಮ್ಯಾಳಿಗೆ ಏನಾದರೂ ಸಲಹೆ ಕೊಡಬಹುದು,'' ನಳಿನಾ ಹೇಳಿದಳು.

``ಅವಳು ಐಐಎಂನ ಪ್ರವೇಶ ಪರೀಕ್ಷೆ ಬರೆದಿದ್ದಾಳೆ. ಒಳ್ಳೆ ಅಂಕಗಳು ಬರುತ್ತವೆ ಅನ್ನುವ ಭರವಸೆ ಅವಳಿಗಿದೆ. ಆದರೆ ಮನೆಯವರು, `ಮೊದಲು ಮದುವೆ ಮಾಡಿಕೋ. ಆಮೇಲೆ ಅತ್ತೆ ಮನೆಯವರು ಒಪ್ಪಿದರೆ ಓದು,' ಎನ್ನುತ್ತಾರೆ.

``ಮದುವೆಯಾದ ಮೇಲೂ ತಾವೇ ಹಣ ಕೊಟ್ಟು ಓದಿಸುವುದಕ್ಕೆ ಅವರು ಸಿದ್ಧರಿದ್ದಾರೆ.''

``ಮದುವೆ ಯಾರ ಜೊತೆ?''

``ಅವಳಿಗೆ ಯಾರ ಮೇಲಾದರೂ ಮನಸ್ಸಿದ್ದರೆ ಸರಿ. ಇಲ್ಲವಾದರೆ ಗಂಡು ಹುಡುಕಿ ಮಾಡುತ್ತಾರೆ.''

``ಅಂದರೆ, ಹೇಗಾದರೂ ಸರಿ. ಅವಳ ಮದುವೆ ಮಾಡಬೇಕು ಅನ್ನುತ್ತಾರೆ,'' ದೇವರಾಜ್‌ ಕೇಳಿದರು, ``ಆದರೆ ಹಾಗೇಕೆ?''

ನಳಿನಾ ಒಂದು ಕ್ಷಣ ಮೌನವಾಗಿದ್ದಳು.

``ಅದು ಏಕೆಂದರೆ ಅವಳ ಅಕ್ಕ ಕಾವ್ಯಾಳ ವಿಚಿತ್ರ ನಡವಳಿಕೆಯಿಂದ. ಕಾವ್ಯಾಳಿಗೆ ಅವರ ಪಕ್ಕದ ಮನೆಯ ಅಶೋಕನೊಡನೆ ಬಾಲ್ಯದಿಂದಲೂ ಸ್ನೇಹವಿತ್ತು. ಅವರಿಬ್ಬರ ಮದುವೆಯ ಮಾತುಕತೆಯೂ ನಡೆದಿತ್ತು. ಆದರೆ ಅವಳು ಇದ್ದಕ್ಕಿದ್ದಂತೆ ಮದುವೆಯನ್ನು ಮುಂದೂಡುತ್ತಾ ಬಂದಳು. ಈಗ 2 ವರ್ಷಗಳೇ ಕಳೆದಿದ್ದರೂ ಮದುವೆಗೆ ಒಪ್ಪುತ್ತಿಲ್ಲ. ಮನೆಯವರಿಗೆ ಚಿಂತೆಯಾಗಿದೆ. ಕಾವ್ಯಾಳಿಗೆ ಉದ್ಯೋಗಕ್ಕೆ ಅವಕಾಶ ಕೊಟ್ಟಿದ್ದೇ ಇದಕ್ಕೆ ಕಾರಣ ಎಂದು ಅವರ ಭಾವನೆ.  ಆದ್ದರಿಂದ ಸೌಮ್ಯಾಳ ವಿಷಯದಲ್ಲಿ ಅದೇ ತಪ್ಪನ್ನು ಮಾಡಲು ಒಪ್ಪುತ್ತಿಲ್ಲ.''

``ಕಾವ್ಯಾ ಹಾಗೆ ಮಾಡಲು ಏನು ಕಾರಣ?'' ದೇವರಾಜ್‌ ಕೇಳಿದರು.

``ಅದೇ ತಿಳಿಯುತ್ತಿಲ್ಲ. ಕಾರಣ ಗೊತ್ತಿದ್ದರೆ, ವಿದ್ಯಾಭ್ಯಾಸ ಮುಗಿದ ಕೂಡಲೇ ಮದುವೆಯಾಗುತ್ತೇನೆ ಎಂದು ಹೇಳಿ, ಮನೆಯವರನ್ನು ಒಪ್ಪಿಸಬಹುದಿತ್ತು. ಮದುವೆಯಾದ ಮೇಲೆ ಐಐಎಂನಲ್ಲಿ ವಿದ್ಯಾಭ್ಯಾಸ ಮಾಡುವುದು ಸಾಧ್ಯ ಅಲ್ಲ, ಸೂಕ್ತ ಅಲ್ಲ.''

``ಅದೇನೋ ಸರಿ..... ರಾಜು ನೀನು ಹತ್ಯೆ ಬಗ್ಗೆ ಹೇಳಿದೆಯಲ್ಲ, ಏನದು?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ