``ರೂಪಾ, ನೀನು ಬಂದಿದ್ದು ಒಳ್ಳೇದಾಯ್ತು. ಸರಿಯಾದ ಸಮಯಕ್ಕೇ ಬಂದೆ,'' ರೂಪಾಳನ್ನು ನೋಡಿದ ಕೂಡಲೇ ಸುರೇಶನ ಮುಖ ಅರಳಿತು.

``ನಾನಂತೂ ಯಾವಾಗಲೂ ಸರಿಯಾದ ಸಮಯಕ್ಕೇ ಬರೋದು ಭಾವಾ. ಅಂದಹಾಗೆ ಏನು ವಿಷಯ?''

``ನಾಳೆ ಶ್ರೇಯಾಳ ಸ್ಕೂಲ್‌ನಲ್ಲಿ ಪೇರೆಂಟ್ಸ್ ನ್ನು ಕರೆದಿದ್ದಾರೆ. ನಾನು ಹೋಗೋಕಾಗಲ್ಲ. ನಾಳೆ ನಮ್ಮ ಹೆಡ್‌ ಆಫೀಸಿನಿಂದ ಇನ್‌ಸ್ಪೆಕ್ಷನ್‌ಗೆ ಬರ್ತಿದ್ದಾರೆ. ಇನ್ನು ಸುಮನಾಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು. 4-5 ಜನರನ್ನು ನೋಡಿಬಿಟ್ರೆ ಸಾಕು, ಬಾಯಿಂದ ಮಾತೇ ಹೊರಡಲ್ಲ. ನಾಳೆ ನೀನು ಶ್ರೇಯಾಳ ಸ್ಕೂಲಿಗೆ ಹೋಗಿಬಂದ್ರೆ ಬಹಳ ಉಪಕಾರ ಆಗುತ್ತೆ,'' ಸುರೇಶ್‌ ಹೇಳಿದ.

``ನೀವು ಹೇಳಿದ್ರೆ ನನಗೆ ಆರ್ಡರ್‌ ಮಾಡಿದ ಹಾಗೆ. ಖಂಡಿತಾ ಮಾಡ್ತೀನಿ. ಆದರೆ ನೀವು ನನಗೊಂದು ಫೇವರ್‌ಮಾಡಲೇಬೇಕು.''

``ಅದೇನು ಹೇಳು.''

``ನಾಳೆ ಲಿಬರ್ಟಿಲಿ ಹೊಸ ಇಂಗ್ಲಿಷ್‌ ಫಿಲ್ಮ್ ಬರಲಿದೆ. ನನ್ನನ್ನು ಅದಕ್ಕೆ ಕರೆದುಕೊಂಡು ಹೋಗಬೇಕು,'' ರೂಪಾ ಹೇಳಿದಳು.

``ಅದೇನು ದೊಡ್ಡ ವಿಷಯ? ನಾನೂ ಆ ಫಿಲ್ಮ್ ನೋಡಬೇಕೂಂತಿದ್ದೆ. ಇಷ್ಟು ಒಳ್ಳೆ ಕಂಪನಿ ಸಿಕ್ಕಿದ್ರೆ ಇನ್ನೇನು?'' ಸುರೇಶ್‌ಮುಗುಳ್ನಕ್ಕ.

``ಹ್ಞೂಂ ಅಂತೂ ಶ್ರೇಯಾಳ ಪ್ರಾಬ್ಲಂ ಬಗೆಹರೀತು. ಇನ್ನೇನು ಶ್ರೇಯಾ, ಖುಷಿ ತಾನೆ?'' ಸುರೇಶ್‌ ಕೇಳಿದ.

``ಇಲ್ಲ. ನನಗೆ ಖುಷಿ ಇಲ್ಲ. ಬಹಳ ದುಃಖವಾಗಿದೆ. ನಮ್ಮ ಸ್ಕೂಲಿನಲ್ಲಿ ನನ್ನ ಫ್ರೆಂಡ್ಸ್ ಎಲ್ಲ ಅಪ್ಪ, ಅಮ್ಮನ ಜೊತೆ ಬರುವಾಗ ನಾನು ಮಾತ್ರ ರೂಪಾ ಆಂಟಿಯ ಜೊತೆ ಹೋಗೋದಾ?'' ಶ್ರೇಯಾಗೆ ಅಳುವೇ ಬಂತು.

``ಚಿಂತಿಸಬೇಡ. ನಾನು ನಿಮ್ಮ ಸ್ಕೂಲಿಗೆ ಬಂದು ನಿನ್ನ ಮಿಸ್‌ ಜೊತೆ ಮಾತಾಡ್ತೀನಿ,'' ರೂಪಾ ಶ್ರೇಯಾಳನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಳು.

``ನೀವು ನಮ್ಮ ಸ್ಕೂಲಿಗೆ ಬರೋದು ಬೇಡ. ನನ್ನ ಅಪ್ಪ, ಅಮ್ಮ  ನನ್ನ ಜೊತೆಗೆ ಬರೋದಿಲ್ಲಾಂದ್ರೆ ನಾಳೆ ನಾನು ಸ್ಕೂಲಿಗೇ ಹೋಗಲ್ಲ.''  ಶ್ರೇಯಾ ಕಾಲಿನಿಂದ ನೆಲ ಒದ್ದು ಅಲ್ಲಿಂದ ಹೊರಟುಹೋದಳು.

``ನೀನು ಅವಳನ್ನು ತಲೆ ಮೇಲೆ ಕೂಡಿಸಿಕೊಂಡಿದ್ದೀಯ. ಮನೆಗೆ ಬಂದ ಅತಿಥಿಗಳ ಜೊತೆ ಹೇಗೆ ವ್ಯವಹರಿಸಬೇಕೂಂತ ಅವಳಿಗೆ ಹೇಳಿಕೊಟ್ಟಿಲ್ಲ,'' ಸುರೇಶ್‌ ಸುಮನಾಳನ್ನು ಬೈದ.

``ಅವಳನ್ನು ಯಾಕೋ ಬೈತೀಯ? ನೀನೂ ಶ್ರೇಯಾಗೆ ತಂದೆ ತಾನೆ. ನೀನ್ಯಾಕೆ ಅವಳಿಗೆ ಹೇಳಿಕೊಟ್ಟಿಲ್ಲ?'' ಸುರೇಶನ ತಾಯಿ ಮಂಗಳಾ ಅದುವರೆಗೆ ಅವರ ಮಾತುಗಳನ್ನು ಕೇಳುತ್ತಿದ್ದವರು ಹೇಳಿದರು.

``ನಾನು ಅವಳಿಗೆ ಸರಿಯಾದ ಪಾಠ ಕಲಿಸ್ತೀನಿ. ಜೀವನಪೂರ್ತಿ ನೆನಸ್ಕೋಬೇಕು,'' ಸುರೇಶ್‌ ವೇಗವಾಗಿ ಒಳಗೆ ನುಗ್ಗಿದಾಗ ಸುಮನಾ ಬೆಚ್ಚಿದಳು. ಅವಳು ಒಳಗೆ ಓಡಿ ಶ್ರೇಯಾಳನ್ನು ಎತ್ತಿಕೊಂಡಳು.

``ಇವತ್ತಿಂದ ಇವಳಿಗೆ ಊಟ ತಿಂಡಿ ಕೊಡಬೇಡ. 2 ದಿನ ಹಸಿದುಕೊಂಡು ಇದ್ರೆ ಬುದ್ಧಿ ಬರುತ್ತೆ,'' ಸುರೇಶ್‌ ಸೋಫಾದಲ್ಲಿ ಕೂಡುತ್ತಾ ಹೇಳಿದ.

``ಯಾಕೆ ಇಷ್ಟು ಕೋಪಿಸ್ಕೊತೀರಾ ಭಾವಾ? ಶ್ರೇಯಾ ಇನ್ನೂ 5 ವರ್ಷದ ಮಗು. ಅವಳಿಗೆ ಏನು ಗೊತ್ತಾಗುತ್ತೆ? ಏನೋ ಮನಸ್ಸಿಗೆ ಬಂದಿದ್ದು ಮಾತಾಡಿಬಿಟ್ಳು. ಆಯ್ತು ಇನ್ನು ನಗಿ ಭಾವ. ಕೋಪಿಸ್ಕೊಂಡ್ರೆ ನೀವು ಸ್ವಲ್ಪನೂ ಚೆನ್ನಾಗಿ ಕಾಣಿಸಲ್ಲ,'' ರೂಪಾ ಬಹಳ ಪ್ರೀತಿಯಿಂದ ಹೇಳಿದಾಗ ಸುಮನಾಗೆ ಸಿಟ್ಟು ಬಂತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ