ಅಲಕಾ ಬೆಳಬೆಳಗ್ಗೆ ತಿಂಡಿ ಸಿದ್ಧಪಡಿಸಿ ಬೇಗ ಬೇಗ ತಯಾರಾಗತೊಡಗಿದಾಗ, ಪತಿ ಸುಮಿತ್‌ ಅವಳನ್ನು, ``ಏನ್‌ ವಿಷಯ? ಇವತ್ತು ಎಲ್ಲಿಯಾದರೂ ಹೊರಟಿರುವೆಯಾ?'' ಎಂದು ಕೇಳಿದ.

``ಹೌದು. ಇವತ್ತು ಸ್ವಾಮೀಜಿಯ ಬಳಿ ಹೋಗಬೇಕಿದೆ. ನೀವು ಆ ವಿಷಯ ಮರೆತುಬಿಟ್ರಾ? ಇವತ್ತು ಅವರು ಬರಲು ಹೇಳಿದ್ರಲ್ಲ, ಸಂತಾನ ಪ್ರಾಪ್ತಿಗಾಗಿ ಯಾವುದೊ ಅನುಷ್ಠಾನ ಆರಂಭ ಮಾಡಲಿದ್ದಾರಂತೆ.''

``ಹೌದು. ನೆನಪಿಗೆ ಬಂತು. ಕಳೆದ ತಿಂಗಳು ನಾವು ಅಲ್ಲಿಗೆ ಹೋದಾಗ ಫೆಬ್ರವರಿ ತಿಂಗಳ ಚತುರ್ದಶಿಯ ದಿನದಂದು ಅನುಷ್ಠಾನ ಆರಂಭಿಸುವುದಾಗಿ ಹೇಳಿದ್ದರು. ಸರಿ... ಸರಿ... ನೀನು ಹೋಗಿ ಅವರನ್ನು ಭೇಟಿಯಾಗು. ಸಂಜೆ ಆಫೀಸ್‌ ನಿಂದ ಬೇಗ ಹೊರಟು ನಾನೂ ಕೂಡ ಅಲ್ಲಿಗೆ ಬರ್ತೀನಿ,'' ಸುಮಿತ್‌ ಹೇಳಿದ.

``ಸರಿ ಹಾಗಾದ್ರೆ. ನಾನು ಹೋಗಿರ್ತಿನಿ. ನೀವು ನನ್ನನ್ನು ಕರೆದುಕೊಂಡು ಹೋಗಲು ಅವಶ್ಯವಾಗಿ ಬರಬೇಕು. ನಾನು ಚಪಾತಿ ಹಿಟ್ಟು ಕಲಸಿ ಇಟ್ಟಿದ್ದೇನೆ. ಪಲ್ಯ ಕೂಡ ರೆಡಿಯಾಗಿದೆ. ಅತ್ತೆ ಚಪಾತಿ ಮಾಡಿಕೊಳ್ತಾರೆ. ಮಕ್ಕಳಿಬ್ಬರೂ ಇನ್ನೂ ಮಲಗಿದ್ದಾರೆ,'' ಎಂದು ಅಲಕಾ ಅತ್ತೆಯ ಕಡೆ ನೋಡುತ್ತಾ ಹೇಳಿದಳು.

``ನೀನು ಅದರ ಬಗ್ಗೆ ಚಿಂತೆ ಮಾಡಬೇಡ, ಹೋಗಿ ಬಾ. ನಾನು ಇಬ್ಬರನ್ನು ನೋಡಿಕೊಳ್ತೀನಿ. ಆ ಸ್ವಾಮೀಜಿ ನಿನ್ನ ಮನದಿಚ್ಛೆಯನ್ನು ಈಡೇರಿಸಲಿ. ಅದರ ಹೊರತು ನಮಗೆ ಇನ್ನೇನೂ ಬೇಡ,'' ಎಂದು ಅತ್ತೆ ಅವಳಿಗೆ ಭರವಸೆ ನೀಡಿದರು.

swami-ji-ka-ashirwad-story2

ಅಲಕಾ ಇವತ್ತು ನೀಲಿ ಬಣ್ಣದ ಸೀರೆ ಉಟ್ಟಿದ್ದಳು. ಸ್ವಾಮೀಜಿ ಅವಳಿಗೆ ಮಂಗಳ, ಶುಕ್ರ ಹಾಗೂ ಶನಿವಾರದಂದು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಲು ಹೇಳಿದ್ದರು. ಅಲಕಾ ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಚಿಕ್ಕವಳು ಎದ್ದು ಅಳಲು ಶುರು ಮಾಡಿದಳು. ಅಲಕಾ ಅವಳನ್ನು ಹೇಗೋ ಸುಮ್ಮನಾಗಿಸಿ, ಬಾಯಲ್ಲಿ ಹಾಲಿನ ಬಾಟಲ್‌ ಕೊಟ್ಟು ಅತ್ತೆಯ ಬಳಿ ಕೂರಿಸಿದಳು. ಚಿಕ್ಕವಳಿಗೆ ಈಗ 3 ವರ್ಷವಾಗಿತ್ತು. ಆದರೆ ಎದ್ದಕೂಡಲೇ ಅವಳಿಗೆ ಹಾಲಿನ ಬಾಟಲ್ ಕೊಡಬೇಕಾಗುತ್ತಿತ್ತು. ದೊಡ್ಡವಳಿಗೆ 7 ವರ್ಷ. 2ನೇ ತರಗತಿಗೆ ಪ್ರವೇಶಿಸಿದ್ದಳು.

ಅಂದಹಾಗೆ ಅಲಕಾಗೆ ಯಾವುದೇ ಕೊರತೆ ಇರಲಿಲ್ಲ. ಗಂಡ ಸುಮಿತ್‌ ಚೆನ್ನಾಗಿ ಗಳಿಸುತ್ತಿದ್ದ. ಮನೆಯಲ್ಲಿ ಎಲ್ಲ ಸುಖ ಸೌಲಭ್ಯಗಳಿದ್ದವು. ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಅತ್ತೆ ಮಾವ ಅವಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಇಷ್ಟೆಲ್ಲ ಇದ್ದರೂ ಅಲಕಾಗಿದ್ದ ಒಂದು ಕೊರತೆಯೆಂದರೆ, ಅದು ಗಂಡು ಮಗುವಿನದ್ದು. ಅತ್ತೆಗೂ ಕೂಡ ಅದೇ ಆಸೆ ಇತ್ತು. ಅವರ ಒಬ್ಬ ಪರಿಚಿತರು ಸ್ವಾಮೀಜಿ ಬಗ್ಗೆ  ತಿಳಿಸಿದ್ದರು. ಅವರ ಆಶೀರ್ವಾದ ದೊರೆತರೆ ಎಲ್ಲ ಸಾಧ್ಯ ಎಂದು ಹೇಳಿದ್ದರು.

ಸ್ವಾಮೀಜಿಯ ವಯಸ್ಸು 50ರ ಆಸುಪಾಸು ಇರಬಹುದು. ಮುಖದಲ್ಲಿ ಗಡ್ಡ ಮೀಸೆ ಧಾರಾಳವಾಗಿ ಬೆಳೆದಿತ್ತು. ಮೈಮೇಲೆ ಕಾವಿ ಬಟ್ಟೆ. ನಗರದಿಂದ 15 ಕಿ.ಮೀ. ದೂರದ ಒಂದು ನಿರ್ಜನ ಪ್ರದೇಶದಲ್ಲಿ ಸ್ವಾಮೀಜಿಯ ದೊಡ್ಡ ಆಶ್ರಮವಿತ್ತು. ಅಲ್ಲಿ ಸುಖ ಸೌಲಭ್ಯಗಳು ಹೇರಳವಾಗಿದ್ದವು. ಆಶ್ರಮದಲ್ಲಿ ಹಲವು ಕೋಣೆಗಳಿದ್ದವು. ಒಂದು ದೊಡ್ಡ ಹಾಲ್ ನಲ್ಲಿ ಅವರು ಭಕ್ತಾದಿಗಳಿಗೆ ಉಪದೇಶ ಕೊಡುತ್ತಿದ್ದರು. ಬೇರೊಂದು ಕೋಣೆಯಲ್ಲಿ ಧ್ಯಾನ ಮಾಡುವ ವ್ಯವಸ್ಥೆ ಇತ್ತು. ಮೂರನೇ ಕೋಣೆ ಸ್ವಲ್ಪ ಒಳಭಾಗದಲ್ಲಿತ್ತು. ಅಲ್ಲಿ ಸ್ವಾಮೀಜಿ ತನ್ನ ವಿಶೇಷ ಭಕ್ತರಿಗಾಗಿ ಮಾತ್ರ ಬುಲಾವ್ ‌ಕೊಡುತ್ತಿದ್ದರು. ಹಾಗಾಗಿ ಅವರೊಂದಿಗೆ ಏಕಾಂಗಿಯಾಗಿ ಸಮಯ ಕಳೆಯುತ್ತಿದ್ದರು. ಒಂದು ಕೋಣೆಯಲ್ಲಿ ಸ್ವಾಮೀಜಿಯವರ ಎಲ್ಲ ಗ್ಯಾಜೆಟ್ಸ್ ಇಡಲಾಗಿತ್ತು. ಅಲ್ಲಿ ಯಾರೊಬ್ಬರಿಗೂ ಪ್ರವೇಶ ನೀಡಲಾಗುತ್ತಿರಲಿಲ್ಲ. ಅಲಕಾ ಸ್ವಾಮೀಜಿಯ ವಿಶೇಷ ಭಕ್ತರಲ್ಲಿ ಒಬ್ಬಳೆನಿಸಿಕೊಂಡಿದ್ದಳು. ಆದರೆ ಈವರೆಗೂ ಅವಳನ್ನು ಒಳಗೆ ಕರೆದಿರಲಿಲ್ಲ. ಅವಳು ಹಾಲ್ ‌ನಲ್ಲಿ ಕುಳಿತು ಸ್ವಾಮೀಜಿಯ ಪ್ರವಚನ ಕೇಳಿಸಿಕೊಳ್ಳುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ