ವ್ಯಂಗ್ಯ - ಪೂರ್ಣಿಮಾ ಆನಂದ್

ಇದೆಂಥ ವಿಡಂಬನೆ! ನಿಜಕ್ಕೂ ಮನೆ ಮನೆ ಕಥೆ ಅಂದ್ರೂ ಅಡ್ಡಿಯಿಲ್ಲ..... ನಾವು ಹೊರಗಿನವರ ಮೇಲೆ ಇಂಪ್ರೆಶನ್‌ಮೂಡಿಸಬಹುದೇ ಹೊರತು ಮನೆಯವರ ಮೇಲಲ್ಲ ಎಂಬುದು ನುಂಗಲಾರದ ಬಿಸಿ ತುಪ್ಪ..........ಈ ದಿನ ಮನೆಗೆಲಸಗಳನ್ನೆಲ್ಲ ಬೇಗ ಬೇಗ ಮುಗಿಸಿ ಪೂರೈಸಿದೆ, ಅಬ್ಬಾ....... ಈಗಲಾದರೂ ಜೀವಕ್ಕೆ ತುಸು ರಿಲ್ಯಾಕ್ಸೇಷನ್‌ ಕೊಡೋಣ ಅನ್ನಿಸಿತು. ಸ್ವಲ್ಪ ಹೊತ್ತು ಸೋಫಾ ಮೇಲೆ ಹಾಗೇ ಅಡ್ಡವಾಗಿ, ಐಪ್ಯಾಡ್‌ ನಲ್ಲಿ ನನ್ನ ಫೇರಿಟ್‌ ಶೋ `ಮ್ಯಾರೀಡ್‌ ವುಮನ್‌' ನೋಡೋಣ ಅಂದುಕೊಂಡೆ. ಹಾಗೆ ಅಂದುಕೊಳ್ಳುತ್ತಲೇ ಕಿವಿಗೆ ಇಯರ್‌ ಫೋನ್‌ ಸಿಗಿಸಿಕೊಂಡು, ಶ್ರೀರಂಗನಾಥನ ಪೋಸ್‌ ನೀಡಲು ತಯಾರಾಗತೊಡಗಿದೆ. ಬಂದೇಬಿಟ್ಲು ಈ ಮನೆಯ ಮಹಾತಾಯಿ..... ಅಂದ್ರೆ ನಮ್ಮ ಮನೆ ರೇಡಿಯೋ ರಂಗಿ ಅರ್ಥಾತ್‌ ನನ್ನ ಮಗಳು ಮೋನಿಕಾ. ಅಮ್ಮಂದಿರಿಗೆ ಲೇಶಮಾತ್ರದ ಬಿಡುವು ಸಿಕ್ಕಿದೆ ಎಂದು ಈ ಹೆಮ್ಮಾರಿಯರಿಗೆ ಅದು ಹೇಗೆ ತಿಳಿದುಹೋಗುತ್ತದೋ ಏನೋ....? ಅಂತೂ ಬಂದು ಪಕ್ಕದಲ್ಲೇ ವಕ್ರಿಸಿಕೊಂಡಳು.

``ಸರ್ಕೋ ಮಮ್ಮಿ....... ನಾನೂ ಸ್ವಲ್ಪ ಇಲ್ಲೇ ಹಾಗೇ ಮಲಗುತ್ತೇನೆ,'' ಎಂದು ಒತ್ತರಿಸಿಕೊಂಡಳು.

``ಅದು ಸರಿ..... ಏನು ನೋಡ್ಬೇಕೂಂತ ನಿನ್ನ ಐಡಿಯಾ?'' ಮಗಳ ಆದೇಶ.

``ಮ್ಯಾರೀಡ್‌ ವುಮನ್‌!''

ಮೋನಿಗೆ ಕರೆಂಟ್‌ ಹೊಡೆದಂತಾಯ್ತು. ``ಏನಂದೆ? ನಾನು ನಿನಗೆ ಹೇಳಿದ ಶೋ `ಮೆಯ್ಡ್' ನೋಡೋದಿಲ್ವೇ? ಅದನ್ನು ಬಿಟ್ಟು ಹೋಗಿ ಹೋಗಿ ಈ.....''

``ಅಯ್ಯೋ ಹೋಗೇ...... ಅದನ್ನು ಆಮೇಲೆ ನೋಡಿದ್ರಾಯ್ತು.''

``ನನಗೆ ಗೊತ್ತಿತ್ತು ಬಿಡು ಮಮ್ಮಿ..... ಆ ದಡಿಯಾ ಆದಿತ್ಯ ಹೇಳಿದ್ದನ್ನೇ ನೀನು ಮೊದಲು ನೋಡ್ತೀಯಾ ಅಂತ....'' ಮಗಳು ಅನಗತ್ಯವಾಗಿ ಮುಖ ಊದಿಸಿಕೊಂಡಿದ್ದಳು.

``ಅವರೇ..... ಬೇಗ ಎಲ್ಲಿ ನೋಡ್ಲಿಕ್ಕೆ ಬಿಡ್ತೀರೇ ನೀವು ಮಿನಿ ರಾಕ್ಷಸರು..... ಹೋಗ್ಲಿ ಅಂದ್ರೆ ನನಗೆ ನೋಡಲಿಕ್ಕೆ ಪುರಸತ್ತಾದರೂ ಎಲ್ಲಿ?''

``ಮಮ್ಮಿ, ಅದೆಲ್ಲ ನಂಗೆ ಗೊತ್ತಿಲ್ಲ..... ಮೊದಲು ನಾನು ಹೇಳಿದಂತೆ ನೀನು `ಮೆಯ್ಡ್' ನೋಡಬೇಕು. ಆಮೇಲೆ ಬೇರೇನಾದ್ರೂ ನೋಡ್ಕೋ ಬಿಟ್ಕೋ....ಇಂಥ ಒಳ್ಳೊಳ್ಳೆ ಶೋಗಳ ಬಗ್ಗೆ ನನ್ನ ತರಹ ಯಾವ ಮಗಳಾದಳು ತನ್ನ ತಾಯಿಗೆ ತಿಳಿ ಹೇಳುತ್ತಾಳಾ..... ಹೇಳು ಸ್ವಲ್ಪ ನೋಡೋಣ..... ನಿನಗಂತೂ ಅವೆಲ್ಲದಕ್ಕೂ ವ್ಯಾಲ್ಯೂನೇ ಇಲ್ಲ...... ನಾನು ಎಷ್ಟು ಕಷ್ಟಪಟ್ಟು ನನ್ನ ಗೆಳತಿಯರು, ಅವರ ಅಮ್ಮಂದಿರ ಬಳಿ ಮಾತಾಡಿ, ವಿಚಾರಿಸಿ, ಡೀಟೈಲ್ಸ್ ಕಲೆಕ್ಟ್ ಮಾಡಿ, ಡಿಸ್ಕಸ್‌ ಮಾಡಿಕೊಂಡು ಬಂದು ಹೇಳಿದ್ರೆ..... ಹೀಗಾ ನೀನು ಮಾಡೋದು? ನನ್ನ ತರಹ ಈ ಒಳ್ಳೊಳ್ಳೆ ಧಾರಾವಾಹಿಗಳ ಬಗ್ಗೆ ನಿನಗೆ ಬೇರೆ ಯಾರು ತಾನೇ ಇನ್ ಪರ್ಮೇಶನ್‌ ಕೊಡ್ತಾರೆ ಹೇಳು.....? ನಿನ್ನಂಥವರಿಗೆ ಹೇಳಕ್ಕೆ ಹೋಗ್ತೀನಲ್ಲ ಮುಖ್ಯ ನನಗೆ ಬುದ್ದಿ ಇಲ್ಲ!'' ಎಂದು ದೊಡ್ಡ ಮುದುಕಿಯಂತೆ ತಲೆಯ ಮೇಲೆ ಕೈ ಹೊತ್ತು ಕುಳಿತಳು.

``ಅಯ್ಯೋ..... ಮೋನಿ ಡಿಯರ್‌, ನನ್ನ ಎಲ್ಲಾ ಫ್ರೆಂಡ್ಸ್ `ಮ್ಯಾರೀಡ್‌ ವುಮನ್‌' ನೋಡಿಬಿಟ್ಟಿದ್ದಾರೆ ಬೇಬಿ. ಅವರ ಮುಂದೆ ನಾನು ಇನ್ನೂ ಅದನ್ನು ನೋಡಿಲ್ಲ ಅಂತ ಹೇಳಿಕೊಂಡ್ರೆ, ನನ್ನ ಮಗಳಾದ ನಿನಗೆ ತಾನೇ ಶೇಮ್ ಶೇಮ್.....? ಸ್ವಲ್ಪ ಇದನ್ನು ನೋಡಕ್ಕೆ ಬಿಡಮ್ಮ ಪುಟ್ಟಾ.....''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ