ಕಥೆ - ಪಿ.ಜಿ. ವಿನುತಾ 

 ಒಂದು : ಬೆಳಗ್ಗೆ 6 ಗಂಟೆಗೆ ಅಲಾರಂ ಹೊಡೆದಾಗ ಸರಳಾ ಎದ್ದು ಮಗ ರಜತ್‌ನನ್ನು ಸ್ಕೂಲ್‌ಗೆ ಕಳಿಸುವ ತಯಾರಿಯಲ್ಲಿ ವ್ಯಸ್ತಳಾದಳು. ನಾನೂ ಜೊತೆಯಲ್ಲೇ ಎದ್ದೆ. ಫ್ರೆಶ್‌ ಆಗಿ ಎಂದಿನಂತೆ 5ನೇ ಅಂತಸ್ತಿನಲ್ಲಿರುವ ನಮ್ಮ ಫ್ಲ್ಯಾಟ್‌ನಲ್ಲಿ ರಜತ್‌ನ ಬೆಡ್‌ರೂಮಿನ ಕಿಟಕಿಯ ಬಳಿ ಬಂದು ನಿಂತುಕೊಂಡೆ. ಸ್ವಲ್ಪ ದೂರದ ಬಿಲ್ಡಿಂಗ್‌ನ 3ನೇ ಮಹಡಿಯ ಫ್ಲ್ಯಾಟ್‌ನ ಅವಳ ಬೆಡ್‌ರೂಮಿನಲ್ಲೂ ಲೈಟ್‌ ಉರಿಯುತ್ತಿತ್ತು.

ಅಂದರೆ ಅವಳೂ ಇಂದು ಬೇಗನೆ ಎದ್ದಿದ್ದಾಳೆ. ನಿನ್ನೆ ಅವಳ ಬೆಡ್‌ರೂಮಿನ ಪರದೆ 7 ಗಂಟೆಯ ಮೇಲೆಯೇ ಸರಿದಿತ್ತು. ಅದರ ಲೈಟ್‌ ಕೂಡ ಉರಿಯುತ್ತಿತ್ತು. ಅದನ್ನು ಕಂಡು ನನ್ನ ಎದೆ ಧಡಕ್ಕೆಂದಿತು. ಅವಳು ಯಾವುದೇ ಕ್ಷ್ರಣದಲ್ಲೂ ಕಾಣಿಸಿಕೊಳ್ಳುತ್ತಾಳೆ ಅನ್ನಿಸಿತು. ನನ್ನ ಫ್ಲ್ಯಾಟ್‌ನ ಕಿಟಕಿಯಿಂದ ಅವಳ ಬೆಡ್‌ರೂಮ್ ಕಿಟಕಿ, ಅವಳ ಕಿಚನ್‌ನ ಸ್ವಲ್ಬ ಭಾಗ ಮತ್ತು ಅವಳ ಫ್ಲ್ಯಾಟ್‌ನ ವಾಶಿಂಗ್‌ ಏರಿಯಾ ಕಾಣಿಸುತ್ತದೆ.

ಆಗಲೇ ಅವಳು ಕಿಟಕಿಯ ಬಳಿ ಬಂದು ನಿಂತುಕೊಂಡಳು. ಈಗ ಅವಳು ತನ್ನ ಕೂದಲನ್ನು ಮೇಲೆ ಕಟ್ಟುತ್ತಾಳೆ. ಕೆಲವು ಕ್ಷಣ ಮಾತ್ರ ನಿಂತಿರುತ್ತಾಳೆ. ನಂತರ ಕಂಬಿಯಿಂದ ಒಣಗಿದ ಬಟ್ಟೆಗಳನ್ನು ತೆಗೆಯುತ್ತಾಳೆ. ನಂತರ ಅಡುಗೆಮನೆಯ ಲೈಟ್‌ನಿಂದ ಅವಳು ಅಡುಗೆಮನೆಯಲ್ಲಿ ಇದ್ದಾಳೆಂದು ತಿಳಿಯಿತು. 10 ವರ್ಷಗಳಿಂದ ನಾನು ಅವಳನ್ನು ಹೀಗೆ ನೋಡುತ್ತಿದ್ದೇನೆ. ಈ ಅಪಾರ್ಟ್‌ಮೆಂಟ್‌ಗೆ ಅವಳಿಗಿಂತ ಮುಂಚೆ ನಾನೇ ಬಂದಿದ್ದು. ಅವಳು ಸಂಜೆ ಗಾರ್ಡನ್‌ಗೆ ನಿಯಮಿತವಾಗಿ ಹೋಗುತ್ತಾಳೆ. ಅಲ್ಲೇ ನನಗೂ ಅವಳೊಂದಿಗೆ ಹಾಯ್‌ ಹಲೋ ಹೇಳುವುದು ಶುರುವಾಯಿತು. ಈಗ ಎಲ್ಲಾದರೂ ಸಿಕ್ಕಾಗ ಮುಗುಳ್ನಗು, ಹಾಯ್‌ ಹಲೋ ಹೇಳುವುದು ಇದ್ದೇ ಇದೆ. ನಾನೇನು 20-25 ವರ್ಷದ ನವಯುವಕನಂತೂ ಅಲ್ಲ, ಅವಳೊಂದಿಗೆ ಪ್ರೀತಿಯಲ್ಲಿ ಬೀಳಲಿಕ್ಕೆ. ಅವಳನ್ನು ಕಂಡು ನನ್ನ ಎದೆಬಡಿತ ಶುರುವಾಗುತ್ತದೆ. ನನಗೆ ಅವಳನ್ನು ಕಂಡರೆ ಇಷ್ಟ. ಅವಳಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಯುವಕರು. ಅವಳ ವಯಸ್ಸು ನನಗಿಂತ ಹೆಚ್ಚಿರಬಹುದು. ನಾನು ಅವಳ ಗಂಡನನ್ನೂ ಮಕ್ಕಳನ್ನೂ ಚೆನ್ನಾಗಿ ಗುರುತಿಸುತ್ತೇನೆ. ನನಗೆ ಅವಳ ಹೆಸರು ಗೊತ್ತಿಲ್ಲ. ಅವಳಿಗೂ ನನ್ನ ಹೆಸರು ಗೊತ್ತಿರುವುದಿಲ್ಲ. ಹಲವು ವರ್ಷಗಳಿಂದ  ಇದೇ ಪದ್ಧತಿ ಮುಂದುವರಿಯುತ್ತಿದೆ. ಈಗ ಆಫೀಸ್‌ಗೆ ಹೊರಟರೆ ಅವಳು ಕಿಟಕಿಯ ಬಳಿ ಬಂದು ನಿಲ್ಲುತ್ತಾಳೆ. ನಮ್ಮಿಬ್ಬರ ದೃಷ್ಟಿ ಸೇರುತ್ತದೆ. ನಂತರ ಇಬ್ಬರೂ ಮುಗುಳ್ನಗುತ್ತೇವೆ.

ಆಫೀಸ್‌ನಿಂದ ಬಂದ ನಂತರ ರಾತ್ರಿ ಮಲಗುವವರೆಗೆ ಕಿಟಕಿಯಿಂದ ನೋಡುತ್ತಿರುತ್ತೇನೆ. ಅವಳು ಕಂಡುಬಂದಾಗ ಬಹಳ ಚೆನ್ನಾಗಿರುತ್ತದೆ. ಅವಳು ಎಲ್ಲಾದರೂ ಹೊರಟಾಗ ಆ ಫ್ಲ್ಯಾಟ್‌ನಲ್ಲಿ ಎಲ್ಲ ಸ್ತಬ್ಧವಾಗಿದ್ದಂತೆ ಕಾಣುತ್ತದೆ. ಯಾರೋ ಒಬ್ಬರ ಹೆಂಡತಿ, ಯಾರೋ ಒಬ್ಬರ ತಾಯಿಯನ್ನು ಕದ್ದು ಮುಚ್ಚಿ ನೋಡುವುದು, ಅವಳ ಎಲ್ಲ ಚಟುವಟಿಕೆಗಳನ್ನು ಗಮನಿಸುವುದು ತಪ್ಪು ಎಂದು ಹಲವು ಬಾರಿ ಯೋಚಿಸುತ್ತೇನೆ. ಆದರೆ ಏನು ಮಾಡಲಿ? ಅವಳನ್ನು ನೋಡುವುದು ಹಿತ ಎನಿಸುತ್ತದೆ.

ಸರಳಾ ನನಗಿಂತ ಮುಂಚೆ ಆಫೀಸಿಗೆ ಹೊರಡುತ್ತಾಳೆ. ನಾನು ಬಂದ ಮೇಲೆ ಮನೆಗೆ ಬರುತ್ತಾಳೆ. ರಜತ್‌ ಶಾಲೆಯಿಂದ ನೇರವಾಗಿ ಸೊಸೈಟಿಯ ಡೇ ಕೇರ್‌ ಸೆಂಟರ್‌ಗೆ ಹೋಗುತ್ತಾನೆ. ನಾನು ಸಂಜೆ ಅವನನ್ನು ಮನೆಗೆ ಕರೆದುಕೊಂಡು ಬರುತ್ತೇನೆ. ಅವಳು ನನಗೆ ಸೊಸೈಟಿಯ ಮಾರ್ಕೆಟ್‌ ಅಥವಾ ಕೆಳಗೆ ಏನಾದರೂ ಕೆಲಸಕ್ಕೆ ಬಂದಾಗ ಕಾಣುತ್ತಾಳೆ. ಆಗ ಪರಸ್ಪರ ಮುಗುಳ್ನಕ್ಕು ವಿಶ್‌ ಮಾಡುತ್ತೇವೆ. ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಬಿಜಿಯಾಗಿದ್ದೂ ಸಹ ಅವಳ ಮನಸ್ಸಿನಲ್ಲಿ ನನಗೊಂದು ಸ್ಥಾನ ಇದ್ದೇ ಇದೆ. ಏಕೆಂದರೆ ನಾನು ದಿನ ಆಫೀಸ್‌ಗೆ ಹೊರಡುವಾಗ ಅವಳು ಕಿಟಕಿಯ ಬಳಿ ಬಂದು ನಿಂತು ನನ್ನನ್ನು ನೋಡುತ್ತಿರುವುದು ಆಕಸ್ಮಿಕವೇನಲ್ಲ. ನನ್ನನ್ನು ನಾನು ನಿಯಂತ್ರಿಸಿಕೊಳ್ಳಬೇಕೆಂದು ಹಲವಾರು ಬಾರಿ ಯೋಚಿಸಿದ್ದೇನೆ. ದಿನ ಬೆಳಗ್ಗೆ ಅವಳನ್ನು ನೋಡಲು ಇಲ್ಲೇಕೆ ನಿಲ್ಲುತ್ತೇನೆ? ನಂತರ ನಾನೇನೋ ತಪ್ಪು ಮಾಡುತ್ತಿಲ್ಲ. ಅವಳನ್ನು ನೋಡಿದಾಗ ಕೆಲವು ಕ್ಷಣಗಳು ನೆಮ್ಮದಿ ಸಿಗುತ್ತದೆ. ಅದರಲ್ಲಿ ತಪ್ಪೇನು.... ಯಾರಿಗೇನು ನಷ್ಟವಾಗುತ್ತದೆ? ಅಂದುಕೊಳ್ಳುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ