ದೇಶ ಬಿಟ್ಟರೂ ಸೊಗಡು ಬಿಡಲಿಲ್ಲ : ಸಿರಿಯಾದಲ್ಲಿ ಲಕ್ಷಾಂತರ ಜನ ತಮ್ಮ ದೇಶ ಬಿಟ್ಟು ಯೂರೋಪ್‌, ಕೆನಡಾಗಳಿಗೆ ಬಂದು ಶರಣಾದರು. ಕೆನಡಾ ಇವರುಗಳನ್ನು ಸಂಭ್ರಮದಿಂದ ಬರ ಮಾಡಿಕೊಂಡಿತು. ಏಕೆಂದರೆ ಆ ಥಂಡಿ ದೇಶಕ್ಕೆ ದಿನಗೂಲಿಗಳ ಅಗತ್ಯ ಬಹಳ ಜಾಸ್ತಿ  ಇತ್ತು. ಹೀಗೆ ರೆಫ್ಯೂಜಿಗಳು ವಲಸೆ ಬಂದರೆ ಅವರ ತವರೂರಿನ ಕಲೆ, ಸಂಸ್ಕೃತಿ, ಆಹಾರ ಇತ್ಯಾದಿ ಸಹ ಬಂದು ಸೇರುತ್ತದೆ. ಇಲ್ಲಿನ ಒಬ್ಬ ಸಿರಿಯನ್‌ ರೆಫ್ಯೂಜಿ ಮಹಿಳೆ ವಿಶಿಷ್ಟ ಡಿಶ್‌ ಪ್ರಸ್ತುತಪಡಿಸುತ್ತಿದ್ದಾರೆ, ಈಗ ಇಂಥ ಕಡೆ ಇಸ್ಲಾಂ ದುರ್ಗಂಧ ಹರಡುತ್ತಿದೆ ಎಂದು ಮೂಗು ಮುರಿದರೆ ಏನು ಹೇಳುವುದು?

ಯಾವುದೇ ಅಡೆತಡೆ ಇಲ್ಲ :  ಹಲವಾರು ದೊಡ್ಡ ಸ್ಟಾರ್‌ ಹೋಟೆಲ್‌ಗಳಲ್ಲಿ ವೈವಿಧ್ಯಮಯ ರೆಸ್ಟೋರೆಂಟ್‌ಗಳಿರುತ್ತವೆ. ಅಲ್ಲಿನ ಡೈನಿಂಗ್‌ ರೂಮುಗಳಲ್ಲಿ ಸಿಗುವ ಮಜಾ ಬೇರೆಲ್ಲೂ ನಿಮಗೆ ಸಿಗದು. ಮನಸ್ಸಿಗೆ ಬಂದಂತೆ ಉಡುಗೆ ಧರಿಸಿ, ಇಷ್ಟ ಬಂದಂತೆ ತೋಳುತೆಕ್ಕೆ ಬಳಸಿ, ಮನಸ್ಸಿಗೆ ಹಿಡಿಸಿದ್ದು ಸವಿಯಬಹುದು. ಇಲ್ಲಿ ಯಾವ ಶಿಷ್ಟಾಚಾರವನ್ನೂ ಎದುರು ನೋಡದಿರಿ. ಯಾರು ಏನೇ ಮಾಡಿದರೂ ನಡೆಯುತ್ತೆ, ಕಸ್ಟಮರ್‌ ಈಸ್‌ ಕಿಂಗ್‌!

ಯಾವುದೇ ಕಟ್ಟುಪಾಡುಗಳಿಲ್ಲ…. :  ಸಂಸತ್ತಿಗೆ ಆಯ್ಕೆಯಾದವರು ಏನನ್ನು ಧರಿಸಬಹುದು…. ಇದಕ್ಕೂ ಬಹುಮತದ ಆಯ್ಕೆ ಬೇಕೇ? 1980ರಿಂದ ಅಮೆರಿಕಾದ ಬ್ರಿಟಿಷ್‌ ಕೊಲಂಬಿಯಾ ರಾಜ್ಯದ ವಿಧಾನಸಭೆಯಲ್ಲಿನ ನಿಯಮವೆಂದರೆ, ಮಹಿಳಾ ಸಾಂಸದರು `ಕಂಟೆಂಪರರಿ ಕನ್ಸರ್ವೇಟಿವ್‌ ಡ್ರೆಸ್‌’ ಮಾತ್ರ ಧರಿಸಬೇಕು. ಅಂದ್ರೆ ಕೇವಲ ಕಪ್ಪು ಜ್ಯಾಕೆಟ್‌ ಸ್ಕರ್ಟ್‌. ಇದಕ್ಕೆ ವಿದ್ರೋಹವೆಂಬಂತೆ  ಅಲ್ಲಿನ 7 ಮಹಿಳಾ ಸಾಂಸದರು ಬಣ್ಣಬಣ್ಣದ ಉಡುಗೆ ಧರಿಸಿ ಸಂಸತ್ತಿಗೆ ಧಾವಿಸುವುದೇ? ನಮ್ಮ ದೇಶದಲ್ಲಂತೂ ಬಣ್ಣಬಣ್ಣದ ಸೀರೆಗಳಿಗೇನೂ ಕಡಿಮೆ ಇಲ್ಲ. ಆದರೆ ಯಾರಾದರೂ ಸ್ಲೀವ್ ಲೆ‌ಸ್‌ ಬ್ಲೌಸ್‌, ಹಾಟ್‌ ಪ್ಯಾಂಟ್‌ ಧರಿಸಿ ಬಂದರೆ, ನಮ್ಮ ಸುಮಿತ್ರಾ ಮಹಾಜನ್‌ (ಹಾಲಿ ಲೋಕಸಭಾ ಅಧ್ಯಕ್ಷೆ) ಏನು ಮಾಡಿಯಾರು?

ನಮ್ಮ ವಿನಂತಿ ಆಲಿಸಿ : ಹಾಗೆ ನೋಡಿದರೆ ಪುಟ್ಟ ದೇಶ ಹಂಗೇರಿ ರಷ್ಯಾದ ಕಪಿಮುಷ್ಟಿಯಿಂದ ಹೊರಬಂದು ದಶಕಗಳೇ ಕಳೆದಿವೆ, ಆದರೆ ಇಂದಿಗೂ ಅಲ್ಲಿನ ಸಮಾಜ ಪುರುಷ ಪ್ರಧಾನವಾಗಿಯೇ ಮೆರೆಯುತ್ತಿದೆ. ಇಷ್ಟೇ ಅಲ್ಲ, ಸರ್ಕಾರ ಮೀಡಿಯಾವನ್ನು  ತನ್ನ ಸರ್ವಾಧಿಕಾರದ ಕಂಟ್ರೋಲ್‌ನಲ್ಲಿ ಬಂಧಿಸಿದೆ. ಹೀಗಾಗಿ ಅಲ್ಲಿ ಮಹಿಳಾ ಆಂದೋಳನದ ಕೂಗು ವ್ಯರ್ಥಾಲಾಪವೇ ಸರಿ. ಅನ್ನಾಡೋನಥ್‌ ಎಂಬ ಈಕೆ ಅಲ್ಲಿನ ಹೆಂಗಸರ, ಟ್ರೇಡ್‌ ಯೂನಿಯನ್‌, ವಿದ್ಯಾರ್ಥಿಗಳ ಕೂಗನ್ನು ಮಟ್ಟಹಾಕಬಾರದೆಂದು ಒಂದು ಕ್ರಾಂತಿಕಾರಿ ಚಳುವಳಿಯನ್ನೇ ನಡೆಸಿದ್ದಾಳೆ. ಹಂಗೇರಿ ಎಷ್ಟೋ ವರ್ಷ ರಷ್ಯಾ ಜೊತೆ ಶೀತಲ ಸಮರ (ಕೋಲ್ಡ್ ವಾರ್‌) ನಡೆಸಬೇಕಾಯ್ತು, ಅಲ್ಲಿನ ಜನ ಕೂಡ ಭಾರತೀಯರಂತೆಯೇ ಸೊಲ್ಲೆತ್ತದವರು.

ಮೋಜುಮಸ್ತಿಯೇ ಜೀವನ : ಪ್ಯಾಂಟಿಕಾಟನ್‌ ಕೌಂಟಿ ತನ್ನ ನಗರವಾಸಿಗಳು ಪರಸ್ಪರ ಕಲೆತು ಮೋಜು ಮಜಾ ಉಡಾಯಿಸಲಿ ಎಂದು ಸ್ಯಾಂಟಾಕ್ಲಾಸ್‌ ಪೆರೇಡ್‌ ಫುಡ್‌ ಕೋರ್ಟ್‌ಗಳನ್ನು ಆಯೋಜಿಸುತ್ತದೆ. ಸಾವಿರಾರು ಜನ ಬಂದು ತಂತಮ್ಮ ಸ್ಟಾಲ್ ಸ್ಥಾಪಿಸುತ್ತಾರೆ. ಲಕ್ಷಾಂತರ ಮಂದಿ ಇದರಲ್ಲಿ ಪಾಲ್ಗೊಂಡು ಮೋಜು ಮಸ್ತಿಯಿಂದ ಸಂತೋಷಪಡುತ್ತಾರೆ. ಇಂಥ ಫೇರ್‌ ಹೆಚ್ಚಿದಷ್ಟೂ ಜನ ಖುಷಿಪಡುತ್ತಾರೆ. `ಕ್ವೀನ್‌’ ಚಿತ್ರದಲ್ಲಿ ನಾಯಕಿ ಇಂಥ ಕಡೆ ಪಾನಿಪೂರಿ ಮಾರುವ ದೃಶ್ಯವಿದೆ.

ಇದಲ್ಲವೇ ಉತ್ಸವ! : ಗ್ಲೋಬಲ್ ಮಟ್ಟದ ಮಹಾನಗರಗಳಲ್ಲಿನ ಡ್ಯಾನ್ಸ್ ಪ್ರೋಗ್ರಾಂ ಈಗ ಎಲ್ಲೆಲ್ಲೂ ಜನಪ್ರಿಯ! ಇತ್ತೀಚೆಗೆ ನ್ಯೂಯಾರ್ಕಿನಲ್ಲಿ ನಡೆದ ಇಂಥ ಕಾರ್ಯಕ್ರಮದಲ್ಲಿ ಸಾವಿರಾರು ಜನ ಇಡೀ ರಾತ್ರಿ ಇಡೀ ಹಗಲು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕುಣಿಯುತ್ತಾ ಸಾರ್ವನಿಕ ಮನರಂಜನೆ ಒದಗಿಸಿದರು. ಅಲ್ಲಿನ ಮಹಾನಗರಪಾಲಿಕೆ ಈ ಉತ್ಸವ ಆಯೋಜಿಸುತ್ತದೆ. ಆ ದಿನ ಪಬ್ಲಿಕ್‌ಗಾಗಿ ಊಟೋಪಚಾರದ ಸೇಲ್ಸ್ ಭಾರಿ ಇರುತ್ತದೆ. ನಮ್ಮಲ್ಲಿ ಈ ರೀತಿ ಉತ್ಸವ ನಡೆದಾಗ ಮಧ್ಯೆ ಮಧ್ಯೆ ದೊಂಬಿ, ಗಲಾಟೆ ಮಾಮೂಲಿ. ಆ ನಿಟ್ಟಿನಲ್ಲಿ ನಮ್ಮವರು ಕಲಿಯುವುದು ಬೇಕಾದಷ್ಟಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ