ತಗ್ಗಿದ ಚಮಕ್‌ :  ಫ್ಯಾಷನ್‌ ವೀಕ್‌ ಕಾರ್ಯಕ್ರಮದ ಚಮಕ್‌ ಇತ್ತೀಚೆಗೆ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಹಿಂದೆಲ್ಲ ಇದರ ವೈಭವ ಗಗನಕ್ಕೇರಿತ್ತು. ಒಂದೇ ತರಹದ ಡ್ರೆಸೆಸ್‌, ಸೊರಗಿದ ಮುಖಗಳು, ಹೆಚ್ಚುತ್ತಿರುವ ಖರ್ಚು, ದಿನೇದಿನೇ ಕಡಿಮೆ ಆಗುತ್ತಿರುವ ವೀಕ್ಷಕರ ಸಂಖ್ಯೆ ಇದರ ಆಯೋಜಕರ ಉತ್ಸಾಹ ತಗ್ಗಿಸಿದೆ. ಈಗ ತೋರಿಕೆಗಷ್ಟೇ ಅಲ್ಲಿ ಇಲ್ಲಿ ನಡೆಯುತ್ತಿವೆ. ಶಾಂಘೈನಲ್ಲಿ ಇತ್ತೀಚೆಗೆ ಜರುಗಿದ ಇಂಥ ಕಾರ್ಯಕ್ರಮದ ಈ ಫೋಟೋ ನೋಡಿ. ಮಾಡೆಲ್‌ಗಳ ಮುಖದಲ್ಲಿ ಏನಾದರೂ ಕಾಂತಿ ಇದೆಯೇ? ಆ ಡ್ರೆಸೆಸ್‌ ಗಮನಸೆಳೆಯುತ್ತಿವೆಯೇ? ಹೊಸತು ಎಂಬ ಹೆಸರಲ್ಲಿ ಏನೋ ಇದೆ, ಹೀಗೆ ನಡೆಯುತ್ತಿರುತ್ತದೆ.

ಹುಡುಗಿಯರೂ ಈಗ ಎದುರಿಸಬೇಕು `ಮೀ ಟೂ’ :  ಕೊರಿಯಾದ ಈ ನಟಿಯ ಮೇಲೆ ಅಲ್ಲಿನ ತರುಣನೊಬ್ಬ `ಮೀ ಟೂ’ ಆರೋಪ ಹೊರಿಸಿದ್ದಾನೆ. ಅವನು 13ರ ಹುಡುಗನಾಗಿದ್ದಾಗ ಈ ನಟಿ ಅವನನ್ನು ಸದಾ ಚುಡಾಯಿಸುತ್ತಿದ್ದುದಲ್ಲದೆ, ಲೈಂಗಿಕ ಶೋಷಣೆಗೂ ಮುಂದಾಗಿದ್ದಳಂತೆ! ಕಿಂ ಹುವಾನ್‌ ಜುಂಗ್‌ರ ವಕೀಲರು ಇದನ್ನು ನಿರಾಕರಿಸಿದ್ದಾರೆ. ಆದರೆ ಆರೋಪ ಅಂತ ಬಂದ ಮೇಲೆ ಎದುರಿಸಬೇಕಷ್ಟೆ.

 

ದೂರದಿಂದಷ್ಟೇ ನೋಡಿ ಸಂಭ್ರಮಿಸಿ :  ಕಾರ್ನಿವಾಲ್‌ ಈಗ ಕೇವಲ ಬ್ರೆಝಿಲ್‌ನ ಆಸ್ತಿಯಾಗಿ ಉಳಿದಿಲ್ಲ. ಎಲ್ಲೆಲ್ಲಿ ಈ ರೀತಿ ಅತಿ ಉತ್ಸಾಹಿ ಜನರಿರುತ್ತಾರೋ, ಅಲ್ಲಿ ಅದರ ಪ್ರಾಯೋಜಕರೂ ಇದ್ದೇ ಇರುತ್ತಾರೆ. ಭಾಗವಹಿಸುವವರಿಗೂ ಕೊರತೆ ಇಲ್ಲ. ಇತ್ತೀಚೆಗೆ ಮೇನಲ್ಲಿ ಅಮೆರಿಕಾದ ಐರ್ಲ್ಯಾಂಡ್‌ನ ಕಾರ್ನಿವಾಲ್‌ನಲ್ಲಿ ಈ ತರಹ ರೂಪಸಿಯರು ಒಬ್ಬರಲ್ಲ ಅಂತ 20 ಮಂದಿ ಕುಣಿದರು. ಹೆಂಡತಿಯರು ತಮ್ಮ ಗಂಡಂದಿರನ್ನು ಇಲ್ಲಿಗೆ ಕರೆದುಕೊಂಡು ಹೋದರೆ, ಅವರನ್ನು ಮರೆಯದೆ ಸೆರಗಲ್ಲಿ ಗಂಟು ಹಾಕಿಕೊಳ್ಳಬೇಕು.

ಕೋಮಲ ಕರಗಳಲ್ಲಿ ಬಂದೂಕು ಏಕೆ? : ಇದು ಪೊಲೀಸ್‌ ರೇಡ್‌ನ ಒಂದು ಕೃತಕ ಚಿತ್ರವಲ್ಲ, ಅಸಲಿ ಫೋಟೋ. ಮಧ್ಯ ಅಮೆರಿಕಾದ ಹಾಂಡುರಾಸ್‌ ದೇಶದ ಮಾಫಿಯಾ ಬಳಿ ಒಂದಕ್ಕಿಂತ ಒಂದು ಅಪಾಯಕಾರಿ ಮಾರಕಾಸ್ತ್ರಗಳ ಸಂಗ್ರಹವಿದೆ. ಅದನ್ನು ಬಳಸುವವರು ಸ್ಮಾರ್ಟ್‌ ಹುಡುಗಿಯರು! ಲಿಪ್‌ಸ್ಟಿಕ್‌, ಚಾಕಪೀಸ್‌ ಹಿಡಿಯಬೇಕಾದ ಕರಗಳಿಗೆ ಇಂಥ ಮಾರಕಾಸ್ತ್ರಗಳ ಪ್ರಯೋಗವೇಕೆ? ವಿಶ್ವದ ಬಹುತೇಕ ದೇಶಗಳಲ್ಲಿ ಖುಲ್ಲಂಖುಲ್ಲ ಇದು ದೊರೆಯುತ್ತಿದೆ.

ವಿದೇಶದಲ್ಲಿ ಸ್ವದೇಶ ಹುಡುಕುತ್ತಾ : ಐರ್ಲ್ಯಾಂಡ್‌ ಇದೀಗ ಭಾರತೀಯರ ಪಾಲಿನ ಮೆಚ್ಚಿನ ಪ್ರವಾಸೀ ತಾಣವಾಗಿದೆ. ಇತ್ತೀಚೆಗೆ ಭಾರತೀಯರು ಲಂಡನ್‌, ಪ್ಯಾರಿಸ್‌, ನ್ಯೂಯಾರ್ಕ್‌, ಡಿಸ್ನಿಲ್ಯಾಂಡ್‌ಗಳನ್ನಷ್ಟೇ ನೋಡಿ ಹಿಂದಿರುಗುತ್ತಿಲ್ಲ. ಹೊಸ ಪ್ರಯೋಗಾರ್ಥ ಇಂಥ ಕಡೆ ಹೋಗುತ್ತಿದ್ದಾರೆ. ಇತ್ತೀಚೆಗೆ ಥಾಮಸ್‌ ಕುಕ್‌ ಟ್ರಾವೆಲ್‌ ಸಂಸ್ಥೆ ಸುಮಾರು 650ಕ್ಕೂ ಹೆಚ್ಚು ಮಂದಿ ಪ್ರವಾಸಿಗರನ್ನು ಇಲ್ಲಿಗೆ ಕರೆದೊಯ್ದು ರೆಕಾರ್ಡ್‌ ಮಾಡಿದೆ. ಅಲ್ಲಿನ ಡಬ್ಲಿನ್‌ನಲ್ಲಿ ಈಗ ಎಲ್ಲೆಲ್ಲೂ ಭಾರತೀಯ ರೆಸ್ಟೋರೆಂಟ್‌ಗಳು ತಲೆ ಎತ್ತುತ್ತಿವೆಯಂತೆ, ನಮ್ಮವರಿಗೆ ವಿದೇಶದಲ್ಲೂ ಸ್ವದೇಶದ ರುಚಿ ಬಿಡಲಾಗದು!

ಎಂದೂ ಮರೆಯಲಾಗದು : ಇಲ್ಲಿ ಹೊಳೆ ಹೊಳೆಯುತ್ತಿರುವ ಸಂತಸ ಚೆಲ್ಲತ್ತಿರುವ ಈ ಮುಖಗಳು, ವೈವಿಧ್ಯಮಯ ಡ್ರೆಸೆಸ್‌ ಧರಿಸಿ ಜಮ್ಮುಕಾಶ್ಮೀರ ರಾಜ್ಯದ ಕಾಲೇಜೊಂದರ ವ್ಯಾಲಿಡಿಟಿ ಫಂಕ್ಷನ್‌ನಲ್ಲಿ ಪರಸ್ಪರ ವಿದಾಯ ಕೋರುತ್ತಿರುವ ಈ ತರುಣಿಯರು ಅಗಲಿಕೆಯ ನೋವಲ್ಲಿದ್ದಾರೆ. ಕಾಲೇಜಿನ ಶಿಕ್ಷಣ ಮುಗಿಸಿ ಸಮಾಜವನ್ನು ಎದುರಿಸಲು ಹೊರಟಿರುವ ಈ ತರುಣಿಯರು, ಮತ್ತೆ ಈ ಹಳೆಯ ಗೆಳತಿಯರ ಭೇಟಿ ಎಂದಾಗುವುದೋ ಎಂದು ಪರಿತಪಿಸುತ್ತಿದ್ದಾರೆ.

ಅಪಾಯಕ್ಕೆ ಸಿಲುಕಿರುವ ಚಿತ್ರಮಂದಿರಗಳು : ಈಗ ಜನರ ಆಸಕ್ತಿ ಸಿನಿಮಾಗಿಂತ ಹೆಚ್ಚಾಗಿ ಟಿವಿ ಧಾರಾವಾಹಿಗಳ ಕಡೆ ತಿರುಗಿದೆ. ಏಕೆಂದರೆ ಅಮೆಝಾನ್‌, ನೆಟ್‌ಫ್ಲಿಕ್ಸ್, ಡಿಸ್ನಿ ಮುಂತಾದವು ಮನೆಮನೆಗೂ ಈಗ ಟಿವಿ ಧಾರಾವಾಹಿ, ಸಿನಿಮಾಗಳನ್ನು ಬೇಕೆಂದಾಗ ನೋಡಿಕೊಳ್ಳಿ ಎಂಬ ಸೌಲಭ್ಯ ಒದಗಿಸುತ್ತಿವೆ. ಟೀನ್ಸ್ ಗಾಗಿ `ಟೀನ್‌ ಬೀಚ್‌’ ಸಿನಿಮಾ ಬಂದಿದೆ, ಇದು ಥಿಯೇಟರ್‌ಗಳ ಬದಲಾಗಿ ಕೇವಲ ಡಿಸ್ನಿ ಚ್ಯಾನೆಲ್‌ನಲ್ಲಿ ಮಾತ್ರ ಸಿಗುತ್ತದೆ. ಹೀಗಾಗಿ ಚಿತ್ರಮಂದಿರಗಳು ಬಿಕೋ ಎಂದು ಖಾಲಿ ಹೊಡೆಯುತ್ತಾ, ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಡೇಟಾ, ಚ್ಯಾನೆಲ್, ಟಿವಿ ಖರ್ಚುಗಳನ್ನು ಒಟ್ಟುಗೂಡಿಸಿದಾಗ, ಈ ಸಿನಿಮಾ ಸೀರಿಯಲ್ ವೀಕ್ಷಣೆ ಅಗ್ಗವಲ್ಲ ಎಂದು ತಿಳಿಯುತ್ತದೆ. ಆದರೆ ಧಾರಾವಾಹಿಯ ನಶೆ ತಲೆಗೇರಿದರೆ ಜನ ಅದನ್ನು ಬಿಡುವುದೇ ಇಲ್ಲ. ಈ ಚ್ಯಾನೆಲ್‌‌ಗಳಲ್ಲಿ ಜಾಹೀರಾತಿನ ಕಾಟ ಖಂಡಿತಾ ಇರೋಲ್ಲ.

ಕಲೆ ಎಂದಿದ್ದರೂ ಮಾನ್ಯವೇ! : ಸಂಗೀತದ ಉಪಾಸನೆಗೆ ತೊಡಗಿದವರಿಗೆ ಕಲೆ ಎಂದೂ ಕೈಬಿಡದು. ವಾಶಿಂಗ್‌ಟನ್‌ನ ಆ್ಯಂಬ್ರಿ ಗರ್ಲ್ ಗ್ರಾಫ್‌ ತನ್ನ 11ನೇ ವಯಸ್ಸಿನಿಂದಲೇ ಹಾರ್ಪ್‌ ವಾದ್ಯ ನುಡಿಸುವಲ್ಲಿ ಸೈ ಎನಿಸಿದಳು. ನಂತರ ಆಕೆ ಅನೇಕ ವಿವಾಹ, ಶುಭ ಸಮಾರಂಭ, ಕಾರ್ಪರೇಟ್‌ ಫಂಕ್ಷನ್‌ಗಳಲ್ಲಿ ಇದನ್ನು ನುಡಿಸುವಲ್ಲಿ ವಿಖ್ಯಾತಿ ಪಡೆದಳು. ಈಕೆ ಪಿಯಾನೋ ಸಹ ನುಡಿಸಿ ಈಗ ಅದರಲ್ಲಿ ಕ್ಲಾಸ್‌ ನಡೆಸುತ್ತಿದ್ದಾಳೆ. ಈ ಗುಣ ಅವಳನ್ನು ಕೊನೆಯವರೆಗೂ ಕಾಯುತ್ತದೆ. ತಡವೇಕೆ? ನೀವು ಇಂದಿನಿಂದಲೇ ಕಲೋಪಾಸನೆಗೆ ತೊಡಗಿಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ