ವ್ಯಕ್ತಿತ್ವಕ್ಕೆ ಹೆಚ್ಚಿನ ಗೆಟಪ್‌ ತಂದುಕೊಡುವಲ್ಲಿ ಫ್ಯಾಷನ್ನಿನ ಪಾತ್ರ ಮಹತ್ವದ್ದು. ಹಳೆಯ ಫ್ಯಾಷನ್ನಿನ ಜೊತೆ ಹೊಸದರ ಫ್ಯೂಷನ್‌ ಇತ್ತೀಚಿನ ಹೊಸ ಟ್ರೆಂಡ್‌, ಇದನ್ನೇ ಇಂಡೋವೆಸ್ಟರ್ನ್‌ ಔಟ್‌ಫಿಟ್‌ ಎಂದು ಕರೆಯುತ್ತೇವೆ. ಈ ಡ್ರೆಸೆಸ್‌ ಎಲ್ಲಾ ಅಧುನಿಕ ಸಮಾರಂಭಗಳಿಗೂ ಚೆನ್ನಾಗಿ ಹೊಂದುತ್ತದೆ. ಫ್ಯಾಷನ್‌ ಕುರಿತಾಗಿ ಈ ಹೊಸ ದೃಷ್ಟಿಕೋನ ನಿಮ್ಮದಾಗಿಸಿಕೊಳ್ಳಿ ಹಾಗೂ ಕೇಂದ್ರಬಿಂದು ಆಗಿರಿ.

ಗೌನ್‌ ಸೀರೆ : ಸೀರೆಯನ್ನು ಗೌನ್‌ ಫಾರ್ಮ್ಯಾಟ್‌ ನಲ್ಲಿ ಸೆರಗಿನ ಜೊತೆ ಉಡಬಹುದು.

ಸ್ಲಿಟ್‌ ಸಿಲೋಟಿ : ಇದು ಗೌನ್‌ ಆಗಿದ್ದರೂ, ಧೋತಿ ಸಲ್ವಾರ್‌ ಅಥವಾ ಚೂಡೀದಾರ್‌ ಮೇಲೆ ಅರ್ಧ ಭಾಗ ಕಟ್‌ ಆಗಿರುವಂತೆ ಬರುತ್ತದೆ. ಮೇಲಿನ ಭಾಗದಲ್ಲಿ ಟಾಪ್‌ ಕಡೆ ಸ್ಲಿಟ್‌ ಬರುವಂತೆಯೂ ಧರಿಸಬಹುದು.

ಕೋರ್ಸೆಟ್‌ ಟಾಪ್‌ ಜೊತೆ ಲಹಂಗಾ : ಸ್ಕರ್ಟ್‌ನಂಥ ಲಹಂಗಾದ ಲುಕ್ಸ್ ಕೋರ್ಸೆಟ್‌ ಟಾಪ್‌ ಯಾ ಬ್ಲೌಸ್‌ ಜೊತೆ ಬಹಳ ಫ್ಯಾಷನೆಬಲ್ ಎನಿಸುತ್ತದೆ.

ಪಂತಲ್ ಸೀರೆ : ಈ ಸೀರೆಯನ್ನು ವಿಶೇಷ ಶೈಲಿಯಲ್ಲಿ ಉಡಬೇಕು. ನಿಮಗೆ ಬೊಹೆಮಿಯನ್‌ ಲುಕ್ಸ್ ಇಷ್ಟವಾದರೆ, ನೀವು ಪಾರ್ಟಿಗಳಿಗೆ ಉಡಬಹುದು.

ಕ್ರಾಪ್‌ಟಾಪ್‌ ಲಹಂಗಾ : ಪ್ರಿಂಟೆಡ್‌ ಟಾಪ್‌ ಜೊತೆ ಪ್ಲೇನ್‌ ಕಲರ್‌ಫುಲ್ ಲಹಂಗಾ ಧರಿಸಿರಿ. ಲಹಂಗಾಗೆ ಧಾರಾಳ ಫ್ಲೇರ್ಸ್‌ ಬರುವಂತೆ ಮಾಡಿ, ಎ ಲೈನ್‌ ಬಂದರೂ ಸರಿ. ಇದರ ಮೆಟೀರಿಯಲ್ ಸಿಕ್ಸ್ ಬೇಸ್ಡ್ ಆಗಿರಬೇಕು.

ಡ್ರೆಸ್‌ಗೆ ಹೊಂದುವ ಜ್ಯೂವೆಲರಿ

ಡ್ರೆಸ್‌ ಎಷ್ಟೇ ಆಕರ್ಷಕವಾಗಿರಲಿ, ಆದರೆ ಒಡವೆಗಳು ಅದಕ್ಕೆ ಹೊಂದದಿದ್ದರೆ ಲುಕ್‌ನಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಯಾವ ಡ್ರೆಸ್‌ಗೆ ಎಂಥ ಒಡವೆ ಧರಿಸಿದರೆ ನೀವು ಗ್ಲಾಮರಸ್‌ ಆಗಿ ಕಾಣಿಸುವಿರಿ ಎಂದು ತಿಳಿಯೋಣವೇ? :

– ನೀವು ಇಂಡೋವೆಸ್ಟರ್ನ್‌ ಡ್ರೆಸ್‌ ಜೊತೆ ವೆಸ್ಟರ್ನ್‌ ಲುಕ್ಸ್ ವುಳ್ಳ ಇಂಡಿಯನ್‌ ಕುಂದಣ ಜ್ಯೂವೆಲರಿ ಸೆಟ್‌ ಮ್ಯಾಚ್‌ ಮಾಡಬಹುದು. ಇದು ಈವ್ನಿಂಗ್‌ ಪಾರ್ಟಿಗಳಿಗೆ ಚೆನ್ನಾಗಿ ಹೊಂದುತ್ತದೆ.

– ಡಾರ್ಕ್‌ ಕಲರ್‌ ಡ್ರೆಸೆಸ್‌ ಜೊತೆ ಡಾರ್ಕ್‌ ಶೇಡ್‌ನ ಹೆವಿ ಆ್ಯಕ್ಸೆಸರೀಸ್‌ ಧರಿಸಬೇಕು.

– ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವ ಲೈಟ್‌ ಕಲರ್‌ನ ಇಂಡೋವೆಸ್ಟರ್ನ್‌ ಡ್ರೆಸ್‌ ಜೊತೆ ಬ್ಲ್ಯಾಕ್‌ ಮೆಟಲ್ ಯಾ ಸಿಲ್ವರ್‌ ಕಲರ್‌ನಲ್ಲಿಯೂ ಸಹ ಆ್ಯಕ್ಸೆಸರೀಸ್‌ನ್ನು ಧರಿಸಬಹುದು.

– ನೀವು ಟ್ಯೂನಿಕ್‌ ಯಾ ಕುರ್ತಿ ಚೂಡೀದಾರ್‌ ಧರಿಸಿದ್ದು, ಆಮೇಲೆ ಅದನ್ನು ಇಂಡೋವೆಸ್ಟರ್ನ್‌ ಸ್ಟೈಲ್‌ಗೆ ಬದಲಿಸಲು ಬಯಸಿದರೆ, ಕುರ್ತಿ ಚೂಡೀದಾರ್‌ ಜೊತೆ ಕುತ್ತಿಗೆಗೆ ಸ್ಕಾರ್ಫ್‌ ಕಟ್ಟಿಕೊಳ್ಳಿ ಅಥವಾ ಡೆನಿಮ್ ಟ್ಯೂನಿಕ್‌ ಜೊತೆ ಸಣ್ಣ ಪ್ಲೇರ್‌ ಸ್ಕಾರ್ಫ್‌ ಧರಿಸಿರಿ, ಇದು ನಿಮಗೆ ಬಹಳ ಸ್ಟೈಲಿಶ್‌ ಲುಕ್‌ ಕೊಡುತ್ತದೆ.

– ನೀವು ಪ್ಲಾಜೋ ಯಾ ಕ್ರಾಪ್‌ ಪ್ಯಾಂಟ್‌ ಧರಿಸಿದ್ದರೆ, ಐಕಟ್‌ ಟ್ಯೂನಿಕ್‌ ಹೈ ಕಾಲರ್‌ನ್ನು ಫುಲ್ ಸ್ಲೀವ್ ಜೊತೆ ಬಳಸಿಕೊಳ್ಳಿ. ಜೊತೆಗೆ ಪ್ಯಾಸ್ಲೆ ಮೋಟಿಫ್‌ನ ಇಯರ್‌ರಿಂಗ್ಸ್ ಚೆನ್ನಾಗಿ ಸೂಟ್‌ ಆಗುತ್ತದೆ.

– ಪೆನ್ಸಿಲ್‌ ಸ್ಕರ್ಟ್‌ ಕಾಟನ್‌ ಟಾಪ್‌ ಜೊತೆ ತ್ರಿಕೋನ ಯಾ ಬಾಣದಾಕಾರದ ಗೋಲ್ಡ್ ಪ್ಲೇಟೆಡ್‌ ಬ್ರಾಸ್‌ ಇಯರ್‌ರಿಂಗ್ಸ್ ಪರ್ಫೆಕ್ಟ್ ಎನಿಸುತ್ತದೆ.

ಡ್ರೆಸ್‌ಗೆ ಹೊಂದುವಂಥ ಬ್ಯಾಗ್ಸ್

ಡ್ರೆಸ್‌ ಜ್ಯೂವೆಲರಿ ಜೊತೆ ಬ್ಯಾಗಿಗಿರುವ ಮಹತ್ವ ಮರೆಯದಿರಿ. ನೀವು ವಿಭಿನ್ನ ಸಂದರ್ಭಗಳಿಗಾಗಿ ಅಗತ್ಯಕ್ಕೆ ತಕ್ಕಂತೆ, ಡ್ರೆಸ್‌ಗೆ ಮ್ಯಾಚ್‌ ಆಗುವಂಥ ಬ್ಯಾಗ್‌ ಆರಿಸಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಕಳೆ ನೀಡಬಲ್ಲದು.

ಸಿರೋಸ್‌ ಬ್ಯಾಗ್‌ : ಇದು ಡಬಲ್ ಹ್ಯಾಂಡಲ್‌ವುಳ್ಳ ಬ್ಯಾಗ್‌. ಇದರಲ್ಲಿ ಸಾಕಷ್ಟು ಸ್ಪೇಸ್‌ ಇರುತ್ತದೆ. ಲಂಚ್‌ಬಾಕ್ಸ್, ಮೇಕಪ್‌ ಸಾಮಗ್ರಿ, ಹಣದ ಪರ್ಸ್‌, ಮೊಬೈಲ್‌ ಇತ್ಯಾದಿ ಎಲ್ಲವನ್ನೂ ಇದಕ್ಕೆ ತುಂಬಿಸಬಹುದು. ಇದು ಸೀರಿಯಸ್‌ ಟೈಪ್‌ ಫಾರ್ಮಲ್ ಡ್ರೆಸ್‌ ಜೊತೆ ಹೊಂದುತ್ತದೆ. ಇದನ್ನು ಫ್ಲೇರ್‌ ಲೆಂಥ್‌ ಸ್ಟ್ರೇಟ್‌ ಕಟ್‌ ಕುರ್ತಿ ಜೊತೆ ಸಹ ಧರಿಸಬಹುದು.

ಟೋಟೆ ಬ್ಯಾಗ್‌ : ಇದನ್ನು ಬೀಚ್‌ ಬ್ಯಾಗ್‌ ಎಂದೂ ಹೇಳುತ್ತಾರೆ. ಇದೂ ಸಾಕಷ್ಟು ದೊಡ್ಡದಾಗಿರುತ್ತದೆ. ಅಂದ್ರೆ ಇದರಲ್ಲಿ ಸಾಕಷ್ಟು ವಸ್ತು ತುಂಬುತ್ತದೆ. ಸಾಗರದ ತೀರದಲ್ಲಿ ಓಡಾಡಲು ಇದು ಅನುಕೂಲಕರ. ಇದನ್ನು ನೀವು ಪ್ಲಾಜೋ ಸ್ಟೈಲ್ ಕುರ್ತಿ ಜ್ಯಾಕೆಟ್‌ ಜೊತೆ ಕ್ಯಾರಿ ಮಾಡಿ.

ಬ್ಯಾಸ್ಕೆಟ್‌ ಬ್ಯಾಗ್‌ :  ಹೆಸರೇ ಹೇಳುವಂತೆ ಇದೂ ಸಾಕಷ್ಟು ದೊಡ್ಡದಿರುತ್ತದೆ. ಸ್ಟೈಲಾಗಿ ಇದನ್ನು ಕ್ಯಾರಿ ಮಾಡಬಹುದು.

ಹೋಬೋ ಬ್ಯಾಗ್‌ : ಕ್ಯಾಶ್ಯುಯೆಲ್ ಔಟಿಂಗ್‌ಗೆ ಇದು ಹೆಚ್ಚು ಸೂಕ್ತ. ಬೀಚ್‌ ಸೈಡ್‌ ಪಾರ್ಟಿಗಳಲ್ಲಿ ಕಾಫ್ತಾನ್‌ ಸ್ಟೈಲ್‌ ಕುರ್ತಿ ಶಾರ್ಟ್ಸ್ ಜೊತೆ ಕ್ಯಾರಿ ಮಾಡಲು ಇದು ಸೂಕ್ತ.

ಸ್ಲಿಂಗ್ ಬ್ಯಾಗ್‌ : ಇದು ಆಧುನಿಕ ತರುಣಿಯರಿಗೆ ಹೆಚ್ಚು ಸೂಕ್ತ, ಆಕರ್ಷಕ ಕೂಡ. ಇದು ಇಡೀ ದೇಹ ಅಪ್ಪಿಹಿಡಿದು ಮಂಡಿಯವರೆಗೂ ಬರುತ್ತದೆ. ಈ ಬ್ಯಾಗ್‌ ಫ್ಲೇಯರ್ಡ್‌ ಟ್ರೆಡಿಷನಲ್ ಸ್ಕರ್ಟ್‌ ಫ್ಲೇರ್‌ ಟಾಪ್‌ ಜೊತೆ ಹೊಂದುತ್ತದೆ.

ಈವ್ನಿಂಗ್‌ ಬ್ಯಾಗ್‌ : ಇದು ಪಾರ್ಟಿ ಈವೆಂಟ್ಸ್ ಗಳಿಗೆ ಹೆಚ್ಚು ಸೂಕ್ತ.

ಫಾರ್ಮಲ್ ಹ್ಯಾಂಡ್‌ ಬ್ಯಾಗ್‌ ಮತ್ತು ಕ್ಲಚ್‌ ಬ್ಯಾಗ್‌ : ನೀವು ಅನಾರ್ಕಲಿ ಕುರ್ತಿ ಮತ್ತು ರಿಯಲ್ ಲುಕ್ಸ್ ಬಯಸಿದರೆ, ಈ ಬ್ಯಾಗ್‌ ನಿಮಗೆ ಎಲಿಗೆಂಟ್‌ ಲುಕ್ಸ್ ನೀಡುತ್ತದೆ.

– ಆರ್‌. ದೀಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ