ಮಹಿಳೆಯರ ಬಗ್ಗೆ ಇರಬೇಕಿತ್ತು ಕಾಳಜಿ
ಈ ಸಲ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದರು. ಆದರೆ ಸೀರೆ ಉಟ್ಟಿದುದರ ಲಾಭ ಸೀರೆ ಉಟ್ಟವರಿಗೆ ಮಾತ್ರ ಆಗಲಿಲ್ಲ. ಮಹಿಳಾ ವಿತ್ತ ಸಚಿವೆಯ ಬಜೆಟ್ ಮಹಿಳೆಯರಿಗೆ ಉಡುಗೊರೆಯ ರೂಪದಲ್ಲಿ ಏನನ್ನೂ ಕೊಡಲಿಲ್ಲ. ಸರ್ಕಾರಿ ಬಜೆಟ್ಗೂ ಮಹಿಳೆಯರಿಗೂ ಸಂಬಂಧ ಇರುವುದಿಲ್ಲ ಎಂದೇನಿಲ್ಲ. ವಾಸ್ತವದಲ್ಲಿ ಇಡೀ ಮನೆಯೇ ಮಹಿಳೆಯರ ವಶದಲ್ಲಿರುತ್ತದೆ. ಹಣ ಯಾವಾಗ ಕೈಗೆ ಬರುತ್ತದೆ, ಹೇಗೆ ಹೋಗುತ್ತದೆ ಎಂಬುದು ಮಹಿಳೆಯರಿಗಷ್ಟೇ ಗೊತ್ತು.
ಮಹಿಳೆಯರಿಗೆ ನಿರಾಳತೆ ಕೊಡಬಹುದಾದ ಸಾಕಷ್ಟು ಅವಕಾಶಗಳು ನಿರ್ಮಲಾರ ಬಳಿ ಇದ್ದವು. ಉನ್ನತ ಶಿಕ್ಷಣವನ್ನು ಹುಡುಗಿಯರಿಗಾದರೂ ಅಗ್ಗ ಮಾಡಬಹುದಿತ್ತು. ಅದನ್ನು ಬಿಟ್ಟು ಯುಜಿಸಿಯ ರೂಪುರೇಷೆ ಬದಲಿಸುವ ಪ್ರಸ್ತಾಪ ಮುಂದಿಟ್ಟರು. ಅದರಿಂದ ಉನ್ನತ ಶಿಕ್ಷಣ ಇನ್ನಷ್ಟು ದುಬಾರಿ ಆಗಬಹುದು. ಅವರು ಮಹಿಳೆಯರಿಗೆ ಹಾಗೂ ಹುಡುಗಿಯರಿಗೆ ಹಾಸ್ಟೆಲ್ಗಳ ನಿರ್ಮಾಣಕ್ಕೆ ಪ್ರೋತ್ಸಾಹ ಕೊಡಬಹುದಿತ್ತು. ಅದರಿಂದ ಹುಡುಗಿಯರು ಹೊರಗೆ ಹೋಗುವ ಧೈರ್ಯವನ್ನು ಒಗ್ಗೂಡಿಸುತ್ತಿದ್ದರು. ಏಕಾಂಗಿ ಮಹಿಳೆಯರು ತಲೆಯ ಮೇಲೆ ನಿಶ್ಚಿಂತತೆಯ ಸೂರು ಕಾಣುತ್ತಿದ್ದರು. ನಿರ್ಮಲಾ ರೈಲು, ವಿಮಾನ ಹಾಗೂ ಬಸ್ ಸೇವೆಗಳಲ್ಲಿ ಮಹಿಳೆಯರಿಗೆ ಒಂದಿಷ್ಟು ರಿಯಾಯಿತಿ ಘೋಷಿಸಬಹುದಿತ್ತು. ಅರವಿಂದ್ ಕೇಜ್ರಿವಾಲ್ ದೆಹಲಿ ಮೆಟ್ರೊದಲ್ಲಿ ರಿಯಾಯಿತಿ ಕೊಡಲು ಪ್ರಯತ್ನ ನಡೆಸಿದ್ದಾರೆ. ಇದರಿಂದ ಮಹಿಳೆಯರು ಮನೆಯೆಂಬ ಜೈಲಿನಿಂದ ಹೊರಗೆ ಬರಬಹುದು.
ದೇವಾಲಯ ಮತ್ತು ಆಶ್ರಮಗಳ ಮೇಲೆ ತೆರಿಗೆ ಹಾಕಬಹುದಿತ್ತು. ಪುರುಷರ ಸೇವೆ ಮಾಡಿ ಎಂದು ಅ ಮಹಿಳೆಯರಿಗೆ ಬ್ರೇನ್ವಾಶ್ ಮಾಡುತ್ತಿರುತ್ತವೆ. ಮಹಿಳೆಯರಿಗೆ ಏಕಾಂಗಿಯಾಗಿ ಪ್ರವಾಸ ಹೋಗಲು ಪ್ರೋತ್ಸಾಹ ನೀಡಬಹುದಿತ್ತು. ಇದರಿಂದ ತೀರ್ಥಕ್ಷೇತ್ರಗಳಿಗೆ ಹೋಗಿ ಪಾದ ಸವೆಸುವುದನ್ನು ಮೂಗು ಉಜ್ಜುವುದನ್ನು ತಪ್ಪಿಸಬಹುದಿತ್ತು. ಮಹಿಳೆಯರ ವಿಚ್ಛೇದನ ಪ್ರಕರಣಗಳಲ್ಲಿ ತಕ್ಷಣ ನ್ಯಾಯ ಸಿಗಬೇಕು. ಹೀಗಾಗಿ ಕೌಟುಂಬಿಕ ವಿವಾದಗಳನ್ನು 3-4 ತಿಂಗಳಲ್ಲಿಯೇ ಇತ್ಯರ್ಥಗೊಳಿಸಲು ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಬಹುದಿತ್ತು. ಮಹಿಳೆಯರಿಗಾಗಿ ವಿಶೇಷ ಪೊಲೀಸ್ ಪಡೆ ರಚಿಸಿ, ದೂರು ಸಲ್ಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಬಹುದಿತ್ತು.
ನಿರ್ಮಲಾರ ಇಡೀ ಬಜೆಟ್ ದೊಡ್ಡ ಉದ್ಯಮಗಳನ್ನು ಕೇಂದ್ರೀಕರಿಸಿದೆ. ಮಹಿಳೆಯೊಬ್ಬರು ಮಹಿಳೆಯರಿಗೆ ಆಶಾಕಿರಣವಾಗಿದ್ದಾರೆಂದು ಇದರಿಂದ ಅನ್ನಿಸುವುದೇ ಇಲ್ಲ. ಅವರು ಹಿಂದೆ ರಕ್ಷಣಾ ಸಚಿವೆಯಾಗಿದ್ದಾಗ ಬಿಜೆಪಿಯ ರಕ್ಷಣೆ ಮಾಡುವುದನ್ನು ಬಿಟ್ಟರೆ, ಮಹಿಳೆಯರ ಸುರಕ್ಷತೆ ಹಾಗೂ ಸೈನಿಕರ ಮಹಿಳೆಯರಿಗೆ ಸಂಬಂಧಪಟ್ಟಂತೆ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲಿಲ್ಲ. ಉಜ್ವಲಾ ಯೋಜನೆಯನ್ನು ಉಳ್ಳವರಿಗೆ ಅಥವಾ ವ್ಯಾಪಾರ ನಡೆಸುವವರಿಗೆ ಕೊಟ್ಟು 1 ಲಕ್ಷ ರೂ. ಸಾಲ ಕೊಡುವುದಾಗಿ ಕಾಗದದಲ್ಲಿ ಭರವಸೆ ಕೊಡಲಾಗಿದೆ. ಅದರಿಂದ ಮೇಜು ಕುಟ್ಟಿದ ಶಬ್ದ ಕೇಳಿಬಂತು. ಆದರೆ ವರ್ಷದ ಕೊನೆಯತನಕ ಏನೂ ಆಗಲಾರದು.
ಬಿಜೆಪಿ ಮುಖಂಡರ ಅಚ್ಚುಮೆಚ್ಚಿನ ಸ್ಮೃತಿ ಇರಾನಿಯ ಇಲಾಖೆಗೆ ಹೆಚ್ಚುವರಿ ಹಣ ನೀಡಲಾಗಿದೆ. ಅದು ಮಂತ್ರಿ ಮತ್ತು ಅಧಿಕಾರಿಗಳ ಜೇಬಿಗೆ ಸಾಕಾಗುತ್ತದೆ ಅಷ್ಟೇ.
ನಿರ್ಮಲಾ ಸೀತಾರಾಮನ್ ಸೀರೆ ಉಟ್ಟಿರುವುದರ ಹೊರತಾಗಿ ಪುರುಷವಾದಿ ಸಮಾಜದ ಅದೇ ಧೋರಣೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ತಮ್ಮದೇ ಜನರ ಕಾಳಜಿಯಿದೆ ಹೊರತು ಸಾಮಾನ್ಯ ಮಹಿಳೆಯರ ಬಗ್ಗೆ ಕಿಂಚಿತ್ತೂ ಇಲ್ಲ.
ಭಾಷೆಗಳ ಜೊತೆಗೆ ಭಾವನೆಗಳನ್ನೂ ಅರಿಯಬೇಕು
ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಮರಾಠಿ ಭಾಷೆಯನ್ನು ಕಡ್ಡಾಯಗೊಳಿಸಲು ಹೊರಟಿದೆ. ಈವರೆಗೆ 8ನೇ ತರಗತಿತನಕ ಮಾತ್ರ ಸೆಂಟ್ರಲ್ ಬೋರ್ಡ್ ಹಾಗೂ ಮಹಾರಾಷ್ಟ್ರ ಬೋರ್ಡ್ ಮಟ್ಟಿಗೆ ಮಾತ್ರ ಮರಾಠಿಯನ್ನು ಒಂದು ವಿಷಯವಾಗಿ ಕಲಿಸಲಾಗುತ್ತಿತ್ತು. ಈಗ ಅದು ಐಸಿಎಸ್ಇ ಶಾಲೆಗಳಲ್ಲೂ ಅನ್ವಯವಾಗಲಿದೆ.
ಸರ್ಕಾರದ ಈ ನಿರ್ಧಾರ ಸರಿ. ಮುಂಬೈನಂತಹ ಮಹಾನಗರದಲ್ಲಿ ಜನರಿಗೆ ಮರಾಠಿ ರಹಿತವಾಗಿಯೂ ಯಾವುದೇ ಕೆಲಸಗಳು ಸಾಗುತ್ತವೆ. ಆದರೆ ಇದು ತಪ್ಪು. ಮಹಾರಾಷ್ಟ್ರದಲ್ಲಿ ಬಹಳಷ್ಟು ಕೆಲಸಗಳು ಮರಾಠಿಯಲ್ಲಿಯೇ ನಡೆಯುತ್ತವೆ. ಅಲ್ಲಿ ಮರಾಠಿಯಿಂದ ಹಿಂದಿ, ಆಂಗ್ಲ ಹಾಗೂ ಇತರೆ ಭಾಷೆಗಳಿಗೆ ಅನುವಾದ ಮಾಡಿಕೊಡುವವರ ಸಂಖ್ಯೆ ಕಡಿಮೆ ಇದೆ. ಆ ಭಾಷಿಕರಿಗೆ ಮರಾಠಿ ಓದಲು ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲ, ಅಕ್ಕಪಕ್ಕದಲ್ಲಿ ಆ ಭಾಷೆ ಮಾತನಾಡುವವರು ಸಿಗುತ್ತಾರೆ. ಆಗ ಆ ಭಾಷೆಯ ಸರಿಯಾದ ಭಾವನೆಯನ್ನು ತಿಳಿಯಲು ಸಾಧ್ಯವಾಗುತ್ತದೆ.
ವಾಸ್ತವದಲ್ಲಿ ಸಂಸ್ಕೃತದ ವಕೀಲರಾದ ಬ್ರಾಹ್ಮಣರಿಂದ ಭಾರತೀಯ ಭಾಷೆಗಳ ಬಗ್ಗೆ ಕೀಳು ದೃಷ್ಟಿಕೋನ ಹರಿದಿತ್ತು. ಮರಾಠಿ ಅಥವಾ ಬೇರೆ ಭಾಷೆಗಳು ಅನಕ್ಷರಸ್ಥರ ಭಾಷೆಯೆಂದು ಪರಿಗಣಿಸಲಾಗಿತ್ತು. ಬಹಳಷ್ಟು ಭಾಷೆಗಳಿಗೆ ಲಿಪಿ ಕೂಡ ಇರಲಿಲ್ಲ. ಆಗ ಇಡೀ ದೇಶದಲ್ಲಿ ದೇವನಾಗರಿ ಲಭ್ಯವಿತ್ತು. ಏಕೆಂದರೆ ಆ ಭಾಷೆಯಲ್ಲಿಯೇ ಯೋಚಿಸಲಾಗುತ್ತಿತ್ತು ಅಥವಾ ಮಾತನಾಡಲಾಗುತಿತ್ತು. ಒಂದುವೇಳೆ ಅದನ್ನು ಬರೆಯಲು ನಿರ್ಬಂಧವಿರದಿದ್ದರೆ ಅದನ್ನು ಅನಾವಶ್ಯಕ ಎಂದು ಭಾವಿಸಲಾಗುತ್ತಿತ್ತು.
ಈಗಲೂ ದೇಶದ ಹೆಚ್ಚಿನ ಜನರು ಹಾಗೂ ಸಾಕ್ಷರರೆಂದುಕೊಳ್ಳುವವರು ಯಾವುದೇ ಒಂದು ಭಾಷೆಯಲ್ಲಿ ಬರೆಯಲು ಅಸಮರ್ಥರಾಗಿದ್ದಾರೆ. ಆದರೆ ಇಂಗ್ಲಿಷ್ನಲ್ಲಿ ತಮ್ಮ ಭಾವನೆ ಹೊರಹೊಮ್ಮಿಸುತ್ತಾರೆ. ಮಹಿಳೆಯರಲ್ಲಿ ಈ ಕೊರತೆ ಬಹುವೇಗವಾಗಿ ಪಸರಿಸುತ್ತಿದೆ.
ಕೈಯಲ್ಲಿ ಮೊಬೈಲ್ ಬಂದಾಗಿನಿಂದ ಪತ್ರ ಬರೆಯುವುದನ್ನು ನಿಲ್ಲಿಸಲಾಗಿದೆ. ಅವರು ವಾಯ್ಸ್ ಕಾಲ್ ಅಥವಾ ವೀಡಿಯೋ ಕಾಲ್ ಮಾಡುತ್ತಾರೆ. ಬರೆಯುವ ಕಿರಿಕಿರಿಯೇ ಇಲ್ಲ. ಮರಾಠಿ ಭಾಷಿಕರು ಕೂಡ ಮರಾಠಿ ಬರೆಯಲು ಹಿಂದೇಟು ಹಾಕುತ್ತಾರೆ. ಬೇರೆ ಭಾಷಿಕರ ಸಮಸ್ಯೆ ಕೂಡ ಅದೇ ಆಗಿದೆ.
ಮಹಾರಾಷ್ಟ್ರ ಸರ್ಕಾರದ ನಿರ್ಧಾರದಲ್ಲಿರುವ ಒಂದು ಲೋಪವೆಂದರೆ, ಮರಾಠಿಯನ್ನು ಒಂದು ವಿಷಯವಾಗಿ ಮಾತ್ರ ಕಲಿಯಲು ಹೇಳುತ್ತಿರುವುದು. ಮಕ್ಕಳು ಅದರ ವ್ಯಾಕರಣ ಶಬ್ದಗಳಲ್ಲೇ ಉಳಿಸಿಬಿಡುತ್ತಾರೆ. ವಾಸ್ತವದಲ್ಲಿ ಎಲ್ಲ ವಿಷಯಗಳನ್ನು ಮರಾಠಿಯಲ್ಲಿ ಬೋಧಿಸಬೇಕು. ಮರಾಠಿಯಲ್ಲಿ ಬೇರೆ ಭಾಷೆಯ ಶಬ್ದಗಳನ್ನು ಎರವಲು ಪಡೆಯುವ ಮುಕ್ತ ಅವಕಾಶ ಇರಬೇಕು. ಮರಾಠಿಗೆ ಸಂಸತದಿಂದ ಮುಕ್ತಿ ಸಿಗಬೇಕು ಹಾಗೂ ವಿದ್ಯಾರ್ಥಿಗಳಿಗೆ ವ್ಯಾಕರಣದ ಕಠಿಣ ಸವಾಲಿನಿಂದಲೂ ಮುಕ್ತಿ ದೊರಕಬೇಕು.
ಹೆಚ್ಚು ಹಣ ಹೆಚ್ಚು ಒತ್ತಡ
ಅಮೆರಿಕದ ಅರ್ಥಶಾಸ್ತ್ರಜ್ಞ ಡೇನಿಯೆಲ್ ಹ್ಯಾಮರ್ಮ್ಯಾಶ್ ಹೇಳುತ್ತಾರೆ, ಯಾರು ಹೆಚ್ಚು ಶ್ರೀಮಂತರಾಗಿರುತ್ತಾರೋ ಅವರು ಹೆಚ್ಚು ಒತ್ತಡದಲ್ಲಿರುತ್ತಾರೆ. ಅವರ ಬಳಿ ಹಣವೇನೋ ಇರುತ್ತದೆ. ಆದರೆ ಹಣ ಖರ್ಚು ಮಾಡಲು ಸಮಯ ಮಾತ್ರ ಇರುವುದಿಲ್ಲ. ಜೊತೆಗೆ ಹೆಂಡತಿ ಮಗುವಿಗೆ ಕೊಡಲು ಸಮಯ ಕೂಡ ಇರುವುದಿಲ್ಲ.
“ಅಮೆರಿಕದಲ್ಲಿ ಕಳೆದ 50 ವರ್ಷಗಳಲ್ಲಿ ಸಾಕಷ್ಟು ಹಣ ಹರಿದುಬಂದಿದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಆದರೆ ಅವರು ಖುಷಿಯಿಂದಿದ್ದಾರೆ ಎಂದೇನಲ್ಲ. ಶ್ರೀಮಂತರು ಬಟ್ಟೆಗಳ ಮೇಲೆ ಹೆಚ್ಚು ಖರ್ಚು ಮಾಡುವುದಿಲ್ಲ. ದುಬಾರಿ ಜಿಮ್ ಗಳು, ಹೋಟೆಲ್ಗಳು ರೆಸ್ಟೋರೆಂಟ್ಗಳಿಗೆ ಖರ್ಚು ಮಾಡುತ್ತಾರೆ. ಅವರು ಎಷ್ಟೊತ್ತು ಅಲ್ಲಿ ಇರುತ್ತಾರೊ, ಅವರ ಇಮೇಲ್ಗಳು, ಫೋನ್ಗಳು ಅವರನ್ನು ಪರಿಪೂರ್ಣವಾಗಿ ಈ ಸೇವೆಗಳ ಲಾಭ ಪಡೆಯಲು ಅವಕಾಶ ಕೊಡುವುದಿಲ್ಲ.
ಅವರ ಪತ್ನಿಯರು ದುಬಾರಿ ಬಟ್ಟೆಗಳನ್ನು ಖರೀದಿಸುತ್ತಾರೆ. ಜ್ಯೂವೆಲರಿ ಕೊಳ್ಳುತ್ತಾರೆ. ಆದರೆ ಸದಾ ಭೀತಿಯಿಂದ ಇರುತ್ತಾರೆ. ಏಕೆಂದರೆ ಗಂಡನ ಸುತ್ತ ಗಿರಕಿ ಹೊಡೆಯುವ ಸ್ಮಾರ್ಟ್ ಹುಡುಗಿಯರಿಂದ ಗಂಡನನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದೇ ಅವರ ಚಿಂತೆಯಾಗಿರುತ್ತದೆ. ಗಂಡ ಯಾವಾಗ, ಎಲ್ಲಿರುತ್ತಾರೆ ಎಂದು ಅವರಿಗೆ ಕೇಳಲು ಆಗುವುದಿಲ್ಲ. ಯಾರ ಜೊತೆ ಇದ್ದ ಎಂದು ಪ್ರಶ್ನಿಸಲು ಆಗುವುದಿಲ್ಲ.
ಸಾಮಾನ್ಯವಾಗಿ ಅವರು ಗಂಡನ ವಿಶಾಲ ಆಫೀಸಿಗೂ ಹೋಗಲು ಆಗುವುದಿಲ್ಲ. ಗಂಡನಿಂದ ದೊರೆಯುವ ಹಣದ ಆಸೆಯಿಂದ ಅವನಿಗೆ ರಿಯಾಯಿತಿಯನ್ನೇನೊ ಕೊಡುತ್ತಾರೆ. ಆದರೆ ಅದರ ಒತ್ತಡದಲ್ಲಿ ಮಾತ್ರ ಸದಾ ಕುಗ್ಗಿ ಹೋಗುತ್ತಿರುತ್ತಾರೆ.
ಶ್ರೀಮಂತ ಜನರ ಮತ್ತೊಂದು ಚಿಂತೆಯೆಂದರೆ, ಯಾವುದೇ ಕಾರಣಕ್ಕೂ ತಮ್ಮ ಆದಾಯ ಕಡಿಮೆಯಾಗಬಾರದು. ಈ ಸಲದ ಬಜೆಟ್ನಲ್ಲಿ ಶ್ರೀಮಂತರ ಮೇಲಿನ ತೆರಿಗೆ ಪ್ರಮಾಣ, 78% ಹೆಚ್ಚಾಗಿದೆ. ಇಂತಹ ಸರ್ಕಾರಿ ನಿರ್ಧಾರಗಳು ಗಂಡಂದಿರನ್ನು ಸದಾ ಚಿಂತೆಯಲ್ಲಿರುವಂತೆ ಮಾಡುತ್ತವೆ.
ಕಡಿಮೆ ಆದಾಯವುಳ್ಳವರ ಪತ್ನಿಯರು ಕಡಿಮೆ ಮೊತ್ತದಲ್ಲೇ ನಿರ್ವಹಣೆ ಮಾಡುತ್ತಾರೆ. ಆದರೆ ಗಂಡನ ಮೇಲೆ ನಂಬಿಕೆಯಂತೂ ಇದ್ದೇ ಇರುತ್ತದೆ. ಆತ ಎಲ್ಲಿದ್ದಾನೆ, ಮನೆಯಲ್ಲಿ ಟಿ.ವಿಯಲ್ಲಿ ಏನು ನೋಡುತ್ತಿದ್ದಾನೆ ಎಂಬುದು ಗೊತ್ತಾಗುತ್ತದೆ. ಕಡಿಮೆ ಆದಾಯದ ಪುರುಷರ ಮೇಲೆ ಹುಡುಗಿಯರು ಕಣ್ಣು ಹಾಕುವುದಿಲ್ಲ ಅವರು ಆಫೀಸಿನ ಕೆಲಸವನ್ನು ಮನೆಗೂ ತರುವುದಿಲ್ಲ. ಅವರು ಪರಿಪೂರ್ಣವಾಗಿ ಹೆಂಡತಿಯ ಕಡೆಯೇ ಇರುತ್ತಾರೆ.
ಶ್ರೀಮಂತನ ಹೆಂಡತಿಯಾಗುವುದು ಹೆಮ್ಮೆಯ ವಿಷಯ. ಆದರೆ 24 ಗಂಟೆ ಒತ್ತಡ ನೀಡುವ ಪತಿಯನ್ನು ಏನು ಮಾಡಬೇಕು ಎಂಬುವ ಚಿಂತೆ ಅವರನ್ನು ಕಾಡುತ್ತಿರುತ್ತದೆ.