ಹಬ್ಬ ಹರಿದಿನಗಳಿರಲಿ ಅಥವಾ ಶುಭ ಸಮಾರಂಭ, ಭಾರತೀಯ ಪರಿಸರಕ್ಕೆ ಅದು ಬಲು ವಿಶಿಷ್ಟ ಎನಿಸುತ್ತದೆ. ಪ್ರತಿಯೊಬ್ಬ ಹೆಣ್ಣೂ ತಾನು ಇಂಥ ಹಬ್ಬಗಳಲ್ಲಿ ಇತರರಿಗಿಂತ ವಿಶಿಷ್ಟವಾಗಿ ಕಾಣಿಸಬೇಕೆಂದು ಬಯಸುತ್ತಾಳೆ. ಎಲ್ಲರ ಪ್ರಶಂಸೆಯ ನೋಟ ತನ್ನತ್ತಲೇ ಇರಲಿ ಎಂದು ಆಶಿಸುತ್ತಾಳೆ. ಆದರೆ ಎಗ್ಸೈಟ್‌ಮೆಂಟ್‌ನಲ್ಲಿ ಹಬ್ಬದ ನೆಪದಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬುದಷ್ಟೇ ಮುಖ್ಯವಲ್ಲ, ಕೊಳ್ಳುವ ಉಡುಗೆ ಕಂಫರ್ಟೆಬಲ್ ಆಗಿಯೂ ಇರಬೇಕೆಂಬುದು. ನಿಮ್ಮ ಹೊಸ ಡ್ರೆಸ್ ಹೇಗಿರಬೇಕು ಎಂದರೆ, ನೀವು ಸುಲಭವಾಗಿ ಎಲ್ಲಾ ಗಡಿಬಿಡಿಯ ಓಡಾಟ ಮಾಡುವಂತೆ, ಸಂಪ್ರದಾಯ ಫಾಲೋ ಮಾಡುವಂತೆ, ಗಾರ್ಜಿಯಸ್ ಲುಕ್ಸ್ ಜೊತೆ ಪರ್ಫೆಕ್ಟ್ ಫೆಸ್ಟಿವ್ ದೀವಾ ಸಹ ಆಗಿರಬೇಕು.
ಹೀಗಿರುವಾಗ ಇಂಡಿಯನ್ ಎಥ್ನಿಕ್ ಡ್ರೆಸ್ ಧರಿಸುವುದರಿಂದ ಸಿಗುವ ಆನಂದ ಬೇರಾವುದರಿಂದಲೂ ಸಿಗುವುದಿಲ್ಲ. ಹಾಗಾದರೆ ಈ ಸಲದ ಹಬ್ಬಗಳಲ್ಲಿ ನಾವೇಕೆ ಈ ಸಂಪ್ರದಾಯವನ್ನು ಎಥ್ನಿಕ್ ಫ್ಯಾಷನ್ ಜೊತೆ ಸೆಲೆಬ್ರೇಟ್ ಮಾಡಬಾರದು? ಈ ಕುರಿತಾಗಿ ಫ್ಯಾಷನ್ ತಜ್ಞರು ಹೀಗೆ ಸಲಹೆ ಕೊಡುತ್ತಾರೆ, ಇತ್ತೀಚೆಗಂತೂ ಬಹಳಷ್ಟು ಎಥ್ನಿಕ್ ಫ್ಯಾಷನ್ ಲಭ್ಯವಿದೆ. ಎಥ್ನಿಕ್‌ವೇರ್‌ನ ಎಷ್ಟೋ ವಿಭಿನ್ನ ಶೈಲಿಗಳುಂಟು. ಉದಾ : ಸೌತ್ ಟ್ರೆಡಿಷನಲ್, ಗುಜರಾತಿ ಎಥ್ನಿಕ್ ವೇರ್, ರಾಜಸ್ಥಾನಿ, ಪಂಜಾಬಿ, ಮರಾಠಿ, ಇಸ್ಲಾಮಿಕ್ ಇತ್ಯಾದಿ. ಅವರ ಈ ಸಲಹೆ ಅನುಸರಿಸಿ ನಿಮ್ಮ ಹಬ್ಬದ ಸಡಗರ ಸಂಭ್ರಮ ಹೆಚ್ಚಿಸಿಕೊಳ್ಳಿ.
ಮಿನಿಮಂ ಲುಕ್ : ಹಬ್ಬಗಳ ಗಡಿಬಿಡಿಯಲ್ಲಿ ನಾವು ಮನೆಗೆ ಬಂದಿರುವ ಅತಿಥಿಗಳ ಆದರೋಪಚಾರದಲ್ಲಿ ಬಿಝಿ ಆಗಿಬಿಡುತ್ತೇವೆ. ಹೀಗಿರುವಾಗ ಹೆವಿ ಕಸೂತಿಯ ರೇಷ್ಮೆ ಡ್ರೆಸೆಸ್ ಸಲೀಸಾಗಿ ಕೆಲಸ ಮಾಡಲು ಅವಕಾಶ ನೀಡದು. ಹೀಗಾಗಿ ಪ್ರಿಂಟೆಡ್ ಸೀರೆ ಸ್ಟೇಟ್‌ಮೆಂಟ್, ಪ್ರಿಂಟೆಡ್ ಶ್ರಗ್ ಜೊತೆ ಉತ್ತಮ ಆಯ್ಕೆಯಾಗಿದೆ. ಈ ಡ್ರೆಸ್ ನಿಮಗೆ ಎಥ್ನಿಕ್ ಮಾಡರ್ನ್ ಎರಡೂ ಆಗಿದೆ.
ಶೈನಿಂಗ್ ಸಿಲ್ಕ್ : ಸಿಂಪಲ್ ಲೈಟ್ ಸಿಲ್ಕ್ ನಲ್ಲಿ ನೀವು ಯಾವುದೇ ಎಥ್ನಿಕ್ ಡ್ರೆಸ್ ಧರಿಸಿದರೂ ಬ್ಯೂಟಿಫುಲ್ ಎನಿಸುವಿರಿ. ಇತ್ತೀಚೆಗಂತೂ ಬಹಳಷ್ಟು ಫ್ಯಾಷನ್ ಡಿಸೈನರ್ಸ್ ಈ ಬಗ್ಗೆ ಕೆಲಸ ಮಾಡಿದ್ದಾರೆ. ಅಪ್ಪಟ ದ.ಭಾರತ ಶೈಲಿ ಅಥವಾ ಬನಾರಸಿ, ಇಂದಿನ ಫ್ಯಾಷನ್‌ನಲ್ಲಿ ಟಾಪ್ ಎನಿಸಿದೆ. ನೀವು ರೇಷ್ಮೆ ಬ್ಲೌಸ್, ಘಾಘ್ರಾ ಯಾ ಸೀರೆಯಲ್ಲಿ ಮಿಂಚಬಹುದು.
ಅನಾರ್ಕಲಿ ಚೂಡೀದಾರ್‌ನ ಕ್ಲಾಸಿಕ್ ಕಾಂಬೋ : ಡ್ರಾಮಾ & ಗ್ಲಾಮರ್ ಅನಾರ್ಕಲಿ ಸೂಟ್‌ನ ಒಂದೇ ನಾಣ್ಯದ 2 ಮುಖಗಳಾಗಿವೆ. ಇದನ್ನು ಚೂಡೀದಾರ್ ಜೊತೆ ಧರಿಸಬಹುದು. ಇದರಲ್ಲಿ ಕಸೂತಿ ಅಥವಾ ಸಿಲ್ಕ್ ವರ್ಕ್ ಇರಲಿ, ಬೇರೆ ಇತರ ಪ್ಯಾಟರ್ನ್‌ನಲ್ಲಿ ಭಾರತೀಯ ಎಥ್ನಿಕ್ ವೇರ್‌ನ ಈ ಶೈಲಿ ಆಯ್ಕೆಯ ರೂಪದಲ್ಲಿ ನಂ.1 ಎನಿಸಿದೆ.
ಟ್ರೆಡಿಷನ್ ವಿತ್ ಮಾಡರ್ನ್ ಲುಕ್ : ಬಾಲಿವುಡ್ ಸ್ಟಾರ್ಸ್ ತಮ್ಮ ಈ ಪರಿಯ ಲುಕ್‌ನ ಪೋಷಾಕಿಗೆ ಖ್ಯಾತರು. ಸೀರೆ, ಲಹಂಗಾ, ಸೂಟ್ ಇತ್ಯಾದಿ ಎಲ್ಲದರಲ್ಲೂ ತುಸು ಮಾಡರ್ನ್ ಲುಕ್ ಬಳಸಿಕೊಂಡು ನೀವು ಎಥ್ನಿಕ್‌ನಲ್ಲೂ ಎಲ್ಲರಿಗಿಂತ ವಿಭಿನ್ನ ಎನಿಸುವಿರಿ. ತಜ್ಞರು ಈ ಕುರಿತು ವಿವರಿಸುತ್ತಾ, ನಮ್ಮ ದೇಶ ಬಹು ಸಂಸ್ಕೃತಿಗೆ ಖ್ಯಾತವಾಗಿದೆ. ವರ್ಷವಿಡೀ ದೇಶದ ಯಾವುದಾದರೊಂದು ಭಾಗದಲ್ಲಿ ಏನೋ ಒಂದು ಹಬ್ಬ ನಡೆಯುತ್ತಿರುತ್ತದೆ. ಆದರೆ ವಿಶೇಷ ಹಬ್ಬಗಳು ಆಂಗ್ಲ ವರ್ಷದ ಮಧ್ಯಭಾಗದಿಂದ ಶುರುವಾಗಿ ಹಾಗೇ ಮುಂದುವರಿಯುತ್ತವೆ. ಹೀಗಾಗಿ ಹೆಂಗಸರು ಈ ಸಂದರ್ಭದಲ್ಲಿ ಧಾರಾಳ ಶಾಪಿಂಗ್ ಮಾಡಿ ವಸ್ತ್ರಒಡವೆ ಖರೀದಿಸುತ್ತಾರೆ, ಹೆಚ್ಚು ಸುಂದರವಾಗಲು ಪ್ರಯತ್ನಿಸುತ್ತಾರೆ.
ಕೆಲವು ಸಲಹೆಗಳು
ಇಂಡೋವೆಸ್ಟರ್ನ್ ಫ್ಯೂಷನ್ ಇರಲಿ : ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ರಂಗು ತುಂಬಲು ಇದನ್ನು ಅಗತ್ಯ ಫಾಲೋ ಮಾಡಿ. ಈ ಸಂದರ್ಭದಲ್ಲಿ ಭಾರತೀಯ ಲುಕ್ಸ್ ಗೆ ಅಧಿಕ ಹಾಗೂ ಪಾಶ್ಚಾತ್ಯ ಲುಕ್ಸ್ ಗೆ ತುಸು ಕಡಿಮೆ ಪ್ರಾಧಾನ್ಯತೆ ನೀಡಲಾಗುತ್ತದೆ. ಅಂದ್ರೆ ನೀವು ಲೈಟ್ ವೆಸ್ಟರ್ನ್ ಟಚ್ ಕೊಟ್ಟರಾಯ್ತು. ಅನಾರ್ಕಲಿ ಸೂಟ್‌ಗೆ ಹ್ಯಾರಮ್ ಪ್ಯಾಂಟ್ ಜೊತೆ ಧರಿಸಿ ಅಥವಾ ಡೆನಿಂ ವೇಸ್ಟ್ ಜ್ಯಾಕೆಟ್ ಟ್ರೈ ಮಾಡಿ.
ಬ್ರೈಟ್ ಕಲರ್ಸ್ ಜೊತೆ ಆಕರ್ಷಕ ಲುಕ್ಸ್ : ಹಬ್ಬಗಳ ಸಂದರ್ಭದಲ್ಲಿ ಡಲ್ ಕಲರ್ಸ್ ಬೇಡ. ಬ್ರೈಟ್ ಕಲರ್ಸ್ ಅಂದ್ರೆ ಯೆಲ್ಲೋ, ರೆಡ್, ಪಿಂಕ್, ಗ್ರೀನ್ ಇತ್ಯಾದಿ ಮ್ಯಾಚಿಂಗ್ ಡ್ರೆಸ್ ಧರಿಸಿರಿ. ಇಲ್ಲಿ ಮಲ್ಟಿ ಕಲರ್ಸ್ ಬಳಸಿದಷ್ಟೂ ನೀವು ಬೆಸ್ಟ್ ಎನಿಸುವಿರಿ.
ಸ್ಟೈಲಿಶ್ ಸ್ಲಿಟ್‌ನ ಕುರ್ತಾ : ಇಂಥ ಕುರ್ತಾ ಬಲು ಆಕರ್ಷಕ. ಇನ್ನಷ್ಟು ಆಕರ್ಷಕಗೊಳಿಸಲು ನೀವು ಸೈಡ್ ಸ್ಲಿಟ್, ಫ್ರಂಟ್ ಸ್ಲಿಟ್, ಮಲ್ಟಿಪಲ್ ಸ್ಲಿಟ್‌ವುಳ್ಳ ಕುರ್ತಾ ಧರಿಸಿರಿ. ನಿಮ್ಮ ಲುಕ್ಸ್ ಎಗ್ಸೈಟಿಂಗ್ ಆಗಿರಲು ಇದನ್ನು ನೀವು ಸ್ಕರ್ಟ್, ಬೆಲ್‌ಬಾಟಂ, ಪ್ಲಾಜೋ, ಲೂಸ್ ಪ್ಯಾಂಟ್ ಆಗಿಯೂ ಬಳಸಬಹುದು.
ಹ್ಯಾವ್ ಲೈನ್‌ನ ಆನಂದ ಪಡೆಯಿರಿ : ಅನ್‌ಈವೆನ್, ಅನ್‌ಮ್ಯಾಚ್ಡ್, ಲೇಯರ್ಡ್ ಹ್ಯಾವ್ ಲೈನ್ಸ್ ಈ ಹಬ್ಬಗಳಿಗೆ ಹೆಚ್ಚು ಜನಪ್ರಿಯ. ಇವು ಹೆಚ್ಚು ಕಂಫರ್ಟೆಬಲ್ ಆಕರ್ಷಕ ಆಗಿರುವುದೇ ಕಾರಣ. ನೀವು ಸ್ಟೈಲಿಶ್ ಆದ ರಫ್ಸ್ ಮಲ್ಟಿಪಲ್ ಲೇಸ್‌ವುಳ್ಳ ಕುರ್ತಾಗಳನ್ನು ಬಳಸಿಕೊಳ್ಳಿ. ಇದನ್ನು ನೀವು ಸ್ಲಿಂ ಪ್ಯಾಂಟ್, ಲೂಸ್ ಪ್ಯಾಂಟ್ ಯಾ ಸ್ಕರ್ಟ್ ಜೊತೆ ಧರಿಸಬಹುದು.
ಆಕರ್ಷಕ ಪ್ರಿಂಟ್ಸ್ : ರೆಟ್ರೋ ಯುಗದ ಪ್ರಿಂಟ್ ಡಿಸೈನ್ಸ್ ಬಲು ಆಕರ್ಷಕ, ಸ್ಟೈಲಿಶ್, ಕ್ರಿಯೇಟಿವ್ ಎನಿಸುತ್ತವೆ. ಫ್ಲೋರ್ ಮೋಟಿಫ್, ಬ್ಲಾಕ್ ಪ್ರಿಂಟ್ಸ್ ಬಲು ಟ್ರೆಂಡಿ ಎನಿಸುತ್ತವೆ. ಹೊರಗಿನ ಓಡಾಟಕ್ಕೆ ಬಲು ಸೂಕ್ತ.
ಸರಿಯಾದ ಫ್ಯಾಬ್ರಿಕ್ ಎಲ್ಲಕ್ಕೂ ಮುಖ್ಯ : ಡ್ರೆಸ್ ಮೆಟೀರಿಯಲ್ಸ್ ಆರಿಸುವಾಗ ಎಲ್ಲಕ್ಕೂ ಮೊದಲು ನೀವು ಫ್ಯಾಬ್ರಿಕ್ ಕಡೆ ಗಮನ ಕೊಡಬೇಕು. ಅದರಲ್ಲೂ ಎಥ್ನಿಕ್ ವೇರ್‌ಗಳಲ್ಲಿ ಫ್ಯಾಬ್ರಿಕ್ ಒಂದು ಎನ್‌ಹ್ಯಾನ್ಸರ್ ಆಗಿ ನಿಮ್ಮ ಲುಕ್ಸ್ ಸುಧಾರಿಸುವ ಕೆಲಸ ಮಾಡುತ್ತದೆ. ಒಂದು ಜಗಮಗಿಸುವ ರೇಷ್ಮೆ ಸೀರೆಯುಟ್ಟು, ಮ್ಯಾಚಿಂಗ್ ಆಗಿ ಬ್ರೋಕೆಡ್ ಬ್ಲೌಸ್ ತೊಟ್ಟರೆ ಎಷ್ಟು ಚೆನ್ನ! ಎಥ್ನಿಕ್ ವೇರ್ ಎಂದಾಕ್ಷಣ ಸಿಲ್ಕ್ ಬೆಸ್ಟ್ ಎನಿಸುತ್ತದೆ. ಕ್ಲಾಸಿಕ್ ಫ್ಯಾಬ್ರಿಕ್ ಅಂದಾಕ್ಷಣ ಸಿಲ್ಕ್, ಲಿನೆನ್, ಕಾಟನ್, ಶಿಫಾನ್, ಲೇಸ್ ಇತ್ಯಾದಿ ಸದಾ ಚಾಲ್ತಿಯಲ್ಲಿರುತ್ತದೆ.
ಫಿಟಿಂಗ್ಸ್ ಕೂಡ ಅಷ್ಟೇ ಮುಖ್ಯ : ಫ್ಯಾಬ್ರಿಕ್ ಜೊತೆ ಫಿಟಿಂಗ್ಸ್ ಕೂಡ ಬಲು ಮುಖ್ಯ. ತೀರಾ ಸಡಿಲವಾದ ಬಟ್ಟೆಗಳು ನೋಡಲು ಎಷ್ಟೇ ಚೆನ್ನಾಗಿದ್ದರೂ ಎಂದೂ ಸ್ಪೆಷಲ್ ಎನಿಸುವುದಿಲ್ಲ. ಬಲು ಟೈಟ್ ಆದ ಉಡುಪೂ ಸರಿಹೋಗದು. ಆದ್ದರಿಂದ ಸಮರ್ಪಕ ಫಿಟಿಂಗ್ಸ್ ಇರುವ ಡ್ರೆಸ್‌ನ್ನು ಧರಿಸಿ. ಲೂಸ್ ಡ್ರೆಸ್‌ಗಳನ್ನು ನಿಪಲ್ ಟಕ್ ಮಾಡಿ ಸುಲಭವಾಗಿ ಉಡುಗೆಗಳ ಫಿಟಿಂಗ್ ಸರಿ ಮಾಡಿಕೊಳ್ಳಬಹುದು, ಕಷ್ಟವೆನಿಸಿದರೆ ಟೇಲರ್ ಬಳಿ ಪರ್ಫೆಕ್ಟ್ ಫಿಟಿಂಗ್ ಮಾಡಿಸಿ.
ಲೇಯರಿಂಗ್‌ನ ಮೋಡಿ : ಕೇವಲ ಪಾಶ್ಚಾತ್ಯ ಉಡುಗೆಗಳಿಗೆ ಮಾತ್ರ ಲೇಯರಿಂಗ್ ಮ್ಯಾಚ್ ಆಗುತ್ತದೆ ಎಂದುಕೊಳ್ಳಬೇಡಿ. ಎಥ್ನಿಕ್ ಡ್ರೆಸ್‌ಗಳಿಗೂ ಎಲಿಗೆನ್ಸ್ ಹೆಚ್ಚಿಸಲು ಅದು ಅಷ್ಟೇ ಮುಖ್ಯ. ಒಂದು ಸಾಧಾರಣ ಕುರ್ತಿಗೆ ನೀವು ಮ್ಯಾಚ್ ಮಾಡಲು ಮಲ್ಟಿ ಹ್ಯೂಡ್ ಜ್ಯಾಕೆಟ್ ಧರಿಸಿದರೆ ಅದು ಸ್ಪೆಷಲ್ ಎನಿಸುತ್ತದೆ. ಸೀರೆ ಮೇಲೆ ವೆಲ್ವೆಟ್ ಕೇಪ್ಸ್ ಧರಿಸಿ ಅಪ್ ಟು ಡೇಟ್ ಫ್ಯಾಷನೆಬಲ್ ಎನಿಸಬಹುದು. ಒಂದು ಸಾಧಾರಣ ದುಪಟ್ಟಾ ಕೂಡ ಲೇಯರಿಂಗ್‌ನಿಂದ ನಿಮ್ಮ ಉಡುಗೆಗೆ ಜೀವಕಳೆ ತುಂಬಬಲ್ಲದು.
ಮಿಕ್ಸ್ & ಮ್ಯಾಚ್ : ಯಾವುದೇ ಎಥ್ನಿಕ್ ಈವೆಂಟ್ ಇರಲಿ, ಅದಕ್ಕೆ ಹೊಂದುವ ಉಡುಗೆ ನಮ್ಮ ಬಳಿ ಇಲ್ಲ ಎನಿಸುತ್ತದೆ. ಆದರೆ ನಮ್ಮ ವಾರ್ಡ್‌ರೋಬ್‌ನ್ನು ಸರಿಯಾಗಿ ಜಾಲಾಡಿಸಿದರೆ, ಅದರಲ್ಲಿ ಹಲವು ಉಡುಗೆಗಳನ್ನು ಮಿಕ್ಸ್ & ಮ್ಯಾಚ್ ಮಾಡಿ ಈ ಸಂದರ್ಭಕ್ಕಾಗಿ ಬಳಸಿಕೊಳ್ಳಬಹುದು. ಚೂಡೀದಾರ್ ಬದಲಿಗೆ ಪ್ಲಾಜೋ, ಲಾಂಗ್ ಕುರ್ತಿ ಜೊತೆ ಶಿಮರಿ ಘಾಘ್ರಾ ಇತ್ಯಾದಿ ಟ್ರೈ ಮಾಡಿ ನೋಡಿ.
ಸ್ಮರಣೀಯ ಸ್ಟೇಟ್‌ಮೆಂಟ್ ಆಗಿಸಿ : ಎಥ್ನಿಕ್ ಎಂದಾಕ್ಷಣ ಒಂದು ಹೊರೆ ಒಡವೆ ಧರಿಸಬೇಕು ಎಂದೇನಿಲ್ಲ. ಮದುವೆಗೆ ಹೋಗುವ ಸಂದರ್ಭದಲ್ಲಾದರೆ, ಒಡವೆಗಳನ್ನು ಆದಷ್ಟೂ ಸೂಕ್ಷ್ಮವಾಗಿ ಆರಿಸಿ. ಹೆಚ್ಚಿನ ಒಡವೆ ಬದಲು ಒಂದು ಸ್ಟೇಟ್‌ಮೆಂಟ್ ಪೀಸ್ ಆರಿಸಿ, ಸೋಬರ್ ಅಟ್ರಾಕ್ಟಿವ್ ಲುಕ್ಸ್ ಪಡೆಯಿರಿ. ಈ ನಿಟ್ಟಿನಲ್ಲಿ ನೋಡಿದರೆ ಪೇಸ್ಟಲ್ ಶೇಡ್ಸ್ ಮತ್ತೆ ಟ್ರೆಂಡಿ ಆಗಿದೆ. ಆಧುನಿಕ ತರುಣಿಯರಿಗಂತೂ ಹಬ್ಬಗಳ ಸಂದರ್ಭಕ್ಕೆ ಇದರ ಕ್ರೇಜ್ ಹೆಚ್ಚುತ್ತದೆ. ಮೆಜೆಂತಾ ಯಾ ಡಾರ್ಕ್ ಪಿಂಕ್ ಫ್ಯೂಷನ್ ವೇರ್ ಲುಕ್ಸ್ ಗೆ ಟ್ರೆಂಡಿ ಎನಿಸಿದೆ. ಫೆಸ್ಟಿವ್ ಲುಕ್ಸ್ಗೆ ಇದು ಜನಪ್ರಿಯ ಶೇಡ್ಸ್ ಆಗಿವೆ.
ಇಂಡೋವೆಸ್ಟರ್ನ್ ಸೀರೆ ಧರಿಸಿಯೂ ಹಬ್ಬಗಳಲ್ಲಿ ನೀವು ಚೆನ್ನಾಗಿ ಮಿಂಚಬಹುದು. ಇಂಡೋವೆಸ್ಟರ್ನ್ ಯಾ ಫ್ಯೂಷನ್ ವೇರ್ ಈಗ ಬಲು ಟ್ರೆಂಡಿ. ಲಹಂಗಾ ಸೀರೆಗಳೂ ಈ ನಿಟ್ಟಿನಲ್ಲಿ ಉತ್ತಮ ಆಯ್ಕೆ. ಇಂಡೋವೆಸ್ಟರ್ನ್ ಕುರ್ತಿ ಲುಕ್ಸ್ ಸಹ ಫೆಸ್ಟಿವ್ ಚಾಯ್ಸ್ ರೂಪದಲ್ಲಿ ಬಲು ಜನಪ್ರಿಯ. ಅನಾರ್ಕಲಿ ಟ್ರೆಂಡ್ ಸಹ ಬೆಸ್ಟ್ ಫೆಸ್ಟಿವ್ ಆಯ್ಕೆ. ಪ್ಲೀಟೆಡ್ ಸ್ಕರ್ಟ್ಸ್ ಜೊತೆ ಇಂಡೋವೆಸ್ಟರ್ನ್ ಟಾಪ್ ಸಹ ಸ್ಮಾರ್ಟ್ ಚಾಯ್ಸ್. ಇತ್ತೀಚೆಗೆ ತರುಣಿಯರು ಜೋಧ್‌ಪುರಿ ಪ್ಯಾಂಟ್ ಜೊತೆ ಶಾರ್ಟ್ ಕುರ್ತಿ ಧರಿಸಲು ಆರಂಭಿಸಿದ್ದಾರೆ. ಕಸೂತಿಯುಳ್ಳ ಪ್ಲೇನ್ ಚಿಕನ್ ಕುರ್ತಿಗಳು ಸಹ ಫೇವರಿಟ್ ಫೆಸ್ಟಿವ್ ಫ್ಯಾಷನ್ ಟ್ರೆಂಡ್ ಆಗಿದೆ.
ಫೆಸ್ಟಿವ್ ಸೀಸನ್ನಿನ ಜ್ಯೂವೆಲರಿ ಟ್ರೆಂಡ್ಸ್ : ಫ್ಲೋರ್ ಜ್ಯೂವೆಲರಿ ಈ ಸೀಸನ್ನಿನ ಅತಿ ಹೆಚ್ಚು ಜನಪ್ರಿಯ ಟ್ರೆಂಡಿ ಜ್ಯೂವೆಲರಿ ಆಗಿದೆ. ಪುಷ್ಪಾಲಂಕೃತ ನೆಕ್‌ಪೀಸ್ ಹಾಗೂ ಬೈತಲೆ ಬೊಟ್ಟು ಈ ಸೀಸನ್ನಿನ ಫೇವರಿಟ್ ಆಯ್ಕೆ. ಸ್ಟೇಟ್‌ಮೆಂಟ್ ನೆಕ್ ಪೀಸಸ್ ಹಾಗೂ ಇಯರ್‌ರಿಂಗ್ಸ್, ಸಹ ಫೆಸ್ಟಿವ್ ಲುಕ್ಸ್ ನಲ್ಲಿ ಹೆಚ್ಚುತ್ತಿವೆ. ಡೈಮಂಡ್ ಕ್ರಿಸ್ಟಲ್ ಒಡವೆಗಳು ಮ್ಯಾಚಿಂಗ್ ಓಲೆಗಳ ಜೊತೆ ಹಬ್ಬದ ಕಳೆ ಹೆಚ್ಚಿಸುತ್ತವೆ. ಲೈಟ್ ಗೋಲ್ಡ್ ಜ್ಯೂವೆಲರಿ ಸಹ ಟ್ರೆಂಡಿನಲ್ಲಿದೆ.
ಮಲ್ಟಿಪಲ್ ಕಲರ್ಡ್ ಪೀಸಸ್ ಬದಲಿಗೆ ಹಬ್ಬಗಳಲ್ಲಿ ಸಿಂಗಲ್ ಕಲರ್ಡ್ ಜ್ಯೂವೆಲರಿ ಹೆಚ್ಚು ಜನಪ್ರಿಯ. ಹಬ್ಬಗಳ ಸಂದರ್ಭವಾದ್ದರಿಂದ ಹೆವಿ ಪೀಸ್‌ಗೆ ಬದಲಾಗಿ ಲೈಟ್ ವೆಯ್ಟ್ ನೆಕ್‌ಪೀಸ್ ಹೆಚ್ಚು ಪ್ರಚಲಿತ. ಫೆಸ್ಟಿವಲ್ ಜ್ಯೂವೆಲರಿಗಾಗಿ ಬ್ಯೂಟಿಫುಲ್ ಪರ್ಲ್ಸ್ ಟ್ರೆಂಡಿ ಎನಿಸಿದೆ. ಸಹಜ ಹಾಗೂ ಕೃತಕ, ಎರಡೂ ಬಗೆಯ ಮುತ್ತುಗಳನ್ನು ಇಷ್ಟಪಡುತ್ತಾರೆ. ಹ್ಯಾಂಡ್ ಕ್ರಾಫ್ಟೆಡ್, ಕ್ರಿಯೇಟಿವ್ ಜ್ಯೂವೆಲರಿ ಹಬ್ಬಗಳಲ್ಲಿ ಮೊದಲ ಆಯ್ಕೆ. ಇಂಡೋ ವೆಸ್ಟರ್ನ್ ಲುಕ್ಸ್ ಜೊತೆ ಮೆಟಾಲಿಕ್, ಬ್ರಾಂಝ್ ಜ್ಯೂವೆಲರಿ ಕಂಪ್ಲೀಟ್ ಫೆಸ್ಟಿವ್ ಲುಕ್ ನೀಡುತ್ತದೆ. ಸೀ ಶೆಲ್ಸ್ ನಿಂದಾದ ಜ್ಯೂವೆಲರಿ ಸಹ ಎಥ್ನಿಕ್ ಫೆಸ್ಟಿವ್ ಡ್ರೆಸೆಸ್ ಜೊತೆ ಪರ್ಫೆಕ್ಟ್ ಲುಕ್ಸ್ ನೀಡುತ್ತವೆ.
ಸಾಂಪ್ರದಾಯಿಕ ಉಡುಗೆಗಳಿಗೆ ಹೊಸ ಟ್ವಿಸ್ಟ್ ಕೊಡಿ : ಈ ಸೀಸನ್ನಿನಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಒಡವೆಗಳ ಫ್ಯೂಷನ್ ಟ್ರೆಂಡ್‌ನಲ್ಲಿದೆ. ನೀವು ಉದ್ದನೆ ಮ್ಯಾಕ್ಸಿ ಜೊತೆ ಗಾಢ ಬಣ್ಣದ ಧೋತಿ ಪ್ಯಾಂಟ್ ಧರಿಸಬಹುದು ಅಥವಾ ಕುರ್ತಾ ಜೊತೆ ಧೋತಿ ಯಾ ಪ್ಯಾಂಟ್. ನೀವು ಬಯಸಿದರೆ ಸ್ಟೈಲಿಶ್ ಕುರ್ತಾವನ್ನು ಫ್ಲೇಯರ್ಡ್ ಪ್ಲಾಜೋ ಪ್ಯಾಂಟ್ ಜೊತೆ ಧರಿಸಬಹುದು.
ನೀವು ಸ್ಟೈಲಿಶ್ ಕುರ್ತಿ ಮತ್ತು ಪ್ಯಾಂಟ್ ಜೊತೆ ಸಾಂಪ್ರದಾಯಿಕ ಜ್ಯಾಕೆಟ್ ಸಹ ಧರಿಸಿರಿ. ಗಾಢ, ಪೇಸ್ಟಲ್ ಮತ್ತು ಮಿಶ್ರ ಬಣ್ಣಗಳಲ್ಲಿ ನಿಮಗೆ ಬೇಕಾದ್ದು ಆರಿಸಿ. ಪೇಸ್ಟಲ್ ಗ್ರೀನ್, ಮಿಂಟ್ ಗ್ರೀನ್, ಕ್ರೀಂ, ಡಲ್ ಪಿಂಕ್, ಪೌಡರ್ ಬ್ಲೂನಂಥ ಬಣ್ಣಗಳು ಹಬ್ಬಗಳಿಗೆ ಸೂಕ್ತ ಎನಿಸುತ್ತವೆ.
ಎಥ್ನಿಕ್ ಫ್ಯಾಷನ್ : ಎಥ್ನಿಕ್ ಡ್ರೆಸೆಸ್ ಭಾರತೀಯ ಸಂಸ್ಕೃತಿಯ ಭಾಗವಾಗಿವೆ. ಈ ಹಬ್ಬಗಳಲ್ಲಿ ನೀವು ಹಲವು ಬಣ್ಣ, ಪ್ಯಾಟರ್ನ್ ಮತ್ತು ಡಿಸೈನ್‌ಗಳಲ್ಲಿ ಎಥ್ನಿಕ್ ಔಟ್‌ಫಿಟ್ಸ್ ಅಂದ್ರೆ ಸಲ್ವಾರ್ ಸೂಟ್, ಕುರ್ತಿ ಪ್ಲಾಜೋ, ಹೆವಿ ದುಪಟ್ಟಾ, ಕುರ್ತಿ ಸ್ಲಿಂ ಪ್ಯಾಂಟ್, ಕುರ್ತಿ ಸ್ಕರ್ಟ್ ಮುಂತಾದ ಫ್ಯೂಷನ್ ಫಾಲೋ ಮಾಡಿ. ವಿಭಿನ್ನ ಬಣ್ಣಗಳ ಮುಖಾಂತರ ಹೊಸ ಪ್ರಯೋಗ ಮಾಡುತ್ತಿರಿ.
ಕುರ್ತಾ ಡ್ರೆಸ್ : ಇತ್ತೀಚೆಗೆ ಎಲ್ಲಾ ವರ್ಗದ ಹೆಂಗಸರಲ್ಲೂ ಇದು ಜನಪ್ರಿಯ ಆಗುತ್ತಿದೆ. ಟೈ & ಡೈ ಪ್ರಿಂಟ್‌ನ ಶಾರ್ಟ್ ಕುರ್ತಾ ಯಾ ಮ್ಯಾಕ್ಸಿ ಕುರ್ತಾದಂಥ ಉಡುಗೆಗಳು ಹಬ್ಬಗಳಲ್ಲಿ ನಿಮಗೆ ಹೊಸ ಲುಕ್ಸ್ ನೀಡಲಿವೆ.
ಡಬಲ್ ಲೇಯರಿಂಗ್ : ಲೇಯರಿಂಗ್ 2021ರ ಹೊಸ ಫ್ಯಾಷನ್ ಎಂದೇ ಹೇಳಬಹುದು. ಇದು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಎರಡೂ ಬಗೆಯಲ್ಲಿ ಚಾಲ್ತಿಯಲ್ಲಿವೆ. ಹಬ್ಬಗಳಲ್ಲಿ ಆರಾಮದಾಯಕ ಅನುಭವ ಹೊಂದಲು ನೀವು ನಿಮ್ಮ ಟೀಶರ್ಟ್ ಜೊತೆ ನೆಟ್ ಯಾ ಕಾಟನ್ನಿನ ಸ್ಟೈಲಿಶ್ ಶ್ರಗ್ ಧರಿಸಿರಿ. ಲೇಯರ್ಸ್ ಒಂದೆಡೆ ಹಾಯಾದ ಬ್ಯೂಟಿಫುಲ್ ಅನುಭವ ನೀಡಿದರೆ, ಮತ್ತೊಂದೆಡೆ ಸ್ಟೈಲಿಶ್ ಲುಕ್ಸ್ ನೀಡುತ್ತವೆ.
ಯಾವುದೇ ಡ್ರೆಸ್ ಆರಿಸುವಾಗ ಕಂಫರ್ಟ್ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಗಮನಿಸಿ. ನೀವು ವೆಸ್ಟರ್ನ್ ವೇರ್ ಅಥವಾ ಎಥ್ನಿಕ್ ವೇರ್ ಧರಿಸಿ, ಕಂಫರ್ಟೆಬಲ್ ಮುಖ್ಯ ಎಂಬುದನ್ನು ಮರೆಯದಿರಿ. ಹಬ್ಬಗಳಲ್ಲಿ ಬಂದವರ ಆದರೋಪಚಾರ ಗಮನಿಸುವುದೂ ಮುಖ್ಯವಾದ್ದರಿಂದ ಓಡಾಟಕ್ಕೆ ಆದ್ಯತೆ ನೀಡಿ. ಹೀಗಾಗಿ ನಿಮ್ಮ ಡ್ರೆಸ್ ಕೂಲ್ ಕಂಫರ್ಟೆಬಲ್ ಆಗಿದ್ದರೆ ಮಾತ್ರ ಎಲ್ಲರ ಜೊತೆ ಬೆರೆತು ಡ್ಯಾನ್ಸ್, ಹಾಡು, ಸಡಗರ, ಸಂಭ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಬಹಳ ಹೊತ್ತಿನವರೆಗೂ ಸಹಜವಾಗಿ ಆರಾಮಾಗಿರುವಂತೆ ಡ್ರೆಸ್‌ನ ಫಿಟಿಂಗ್ಸ್ ಗೆಟಪ್ ಇರಬೇಕೆಂದು ಗಮನಿಸಿ. ಇಂಥ ಸಂದರ್ಭಗಳಿಗೆಂದೇ ಕ್ಲಾಸಿಕ್, ಆದರೆ ಲೈಟ್‌ವೆಯ್ಟ್ ಡ್ರೆಸೆಸ್ ಮಾತ್ರ ಆರಿಸಿಕೊಳ್ಳಿ.
– ಪಿ. ಅಂಬಿಕಾ