ಇಂಟೀರಿಯರ್ ಡೆಕೋದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇದರ ಬೇಡಿಕೆಯಿಂದಾಗಿ ಇದು ಒಂದು ಸ್ಟ್ರಾಂಗ್ ಇಂಟೀರಿಯರ್ ಡಿಸೈನರ್ ಟೂಲ್ ಆಗುತ್ತಿದೆ.
ಕನ್ನಡಿಯನ್ನು ಸಮರ್ಪಕವಾಗಿ ಬಳಸಿದಾಗ ಮಾತ್ರ ಸಣ್ಣ ಜಾಗ ದೊಡ್ಡದಾಗಿ ಕಾಣಬಲ್ಲದು. ಬೋರಿಂಗ್ ಜಾಗದಲ್ಲಿ ಜೀವಕಳೆ ಮೂಡುತ್ತದೆ ಹಾಗೂ ಕತ್ತಲೆ ತುಂಬಿದ ಕೋಣೆಗೆ ತಂತಾನೇ ಬೆಳಕು ಬರುತ್ತದೆ. ಅಂದ್ರೆ ಮನೆಯ ಅಲಂಕಾರದಲ್ಲಿ ಕನ್ನಡಿಗಳ ಬಳಕೆ ಇಡೀ ಜಾಗದ ಲುಕ್ ಬದಲಾಯಿಸಿ ಬಿಡುತ್ತದೆ.
ಮಿರರ್ ಥೀಮ್
ಹಿಂದಿನ ಕಾಲದಿಂದಲೂ ಮನೆಗಳು, ಭಾರಿ ಬಂಗಲೆಗಳಲ್ಲಿ ಕನ್ನಡಿಯನ್ನು ಅಲಂಕಾರಿಕ ಸಾಮಗ್ರಿಯಾಗಿ ಬಳಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಮತ್ತೊಮ್ಮೆ ಮಿರರ್ ಥೀಮ್ ಚಾಲನೆಗೆ ಬಂದಿದೆ. ಕನ್ನಡಿ ಈಗ ಕೇವಲ ಡ್ರೆಸ್ಸಿಂಗ್ ಟೇಬಲ್‌ನ ಭಾಗವಾಗಿ ಉಳಿದಿಲ್ಲ, ಬದಲಿಗೆ ಹೋಮ್ ಡೆಕೋದ ಮುಖ್ಯ ಭಾಗವಾಗುತ್ತಿದೆ. ಆಫೀಸ್ ಮತ್ತು ಮನೆಗಳ ಇಂಟೀರಿಯರ್ ಡಿಸೈನಿಂಗ್‌ನಲ್ಲಿ ಇದನ್ನು ಆರ್ಟ್ ಪೀಸ್ ರೂಪದಲ್ಲಿ ಬಳಸಲಾಗುತ್ತಿದೆ.
ಕನ್ನಡಿಯ ಬಳಕೆ ಕೇವಲ ಮನೆಯ ಒಳಗಷ್ಟೇ ಅಲ್ಲದೆ, ಮನೆಯ ಹೊರಭಾಗದಲ್ಲಿ ಅಂದ್ರೆ ಗಾರ್ಡನ್, ವೆರಾಂಡಾ, ಕಾಂಪೌಂಡ್, ಟೆರೇಸ್‌ನಲ್ಲೂ ಬಳಸಲಾಗುತ್ತದೆ. ಯಾವ ಜಾಗವನ್ನು ಸಿಂಗರಿಸಬೇಕು ಎಂಬುದರ ಮೇಲೆ ವಿಭಿನ್ನ ಸೈಜ್ ಫ್ರೇಮ್ ವುಳ್ಳ ಕನ್ನಡಿ ಆರಿಸಿ.
ಗೋಡೆಗಳ ಮೇಲೆ : ನೀವು ಕನ್ನಡಿಯನ್ನು ಗೋಡೆಗೆ ಅಳವಡಿಸಿದರೆ, ಆಗ ನಿಮ್ಮ ಕೋಣೆ ದೊಡ್ಡದಾಗಿ ಕಾಣಿಸುವುದಲ್ಲದೆ, ಅದರ ಆಕರ್ಷಣೆಯೂ ಹೆಚ್ಚುತ್ತದೆ. ಕೋಣೆಗಳಿಗೆ ಸದಾ ದೊಡ್ಡ ಕನ್ನಡಿಗಳನ್ನೇ ಬಳಸಬೇಕು, ಅದರ ಎತ್ತರ ಗೋಡೆಯಷ್ಟೇ ಇರಬೇಕು. ಕನ್ನಡಿ ಯಾವಾಗಲೂ ಬಾಗಿಲಿನ ಎದುರಿನ ಗೋಡೆ ಮೇಲೇ ಇರಬೇಕು. ಆಗ ಹೊರಗಿನ ಪೂರ್ತಿ ಪ್ರತಿಬಿಂಬ ಒಳಬರಲು ಸಾಧ್ಯ.
ಸೋಫಾ ಬಳಿ : ಸೋಫಾದ ಹಿಂಬದಿಯ ಗೋಡೆಯಲ್ಲಿ ಇರುವ ಖಾಲಿ ಜಾಗದಲ್ಲಿ, ಫ್ರೇಮ್ಡ್ ಮಿರರ್ ಹಾಕಬೇಕು. ನೀವು ಬಯಸಿದರೆ ಇದನ್ನು ಬೇರೆ ಗೋಡೆಗಳಿಗೂ ಹಾಕಬಹುದು. ಈ ಫ್ರೇಮುಗಳ ಸೈಜ್ ಸ್ಟೈಲ್ ಗೋಡೆಯ ಗಾತ್ರ, ಫರ್ನೀಚರ್ ಮತ್ತು ಪರದೆಗೆ ಹೊಂದುವಂತಿರಬೇಕು.
ಕಿಚನ್ : ಅಡುಗೆಮನೆಯಲ್ಲೂ ಕನ್ನಡಿಗೆ ಕೆಲಸ ಬಂದಿದೆ! ಇದನ್ನು ನೀವು ಕಬೋರ್ಡ್ ಬಳಿ ಬಳಸಿಕೊಳ್ಳಬಹುದು ಅಥವಾ ಫ್ರಿಜ್ ಬಳಿ ಡೆಕೋಪೀಸ್ ಆಗಿಯೂ ಸಹ.
ಸಾಮಾನ್ಯವಾಗಿ ಕಿಚನ್‌ನಲ್ಲಿ ಕಿಟಕಿಯ ಕೆಳಗೆ ಸಿಂಕ್ ಅಳವಡಿಸುತ್ತಾರೆ. ಅಕಸ್ಮಾತ್ ಹೀಗಾಗಲು ಸಾಧ್ಯವಾಗದಿದ್ದರೆ, ಆಗ ಸಿಂಕ್‌ನ ಮೇಲ್ಭಾಗದಲ್ಲಿ ಕನ್ನಡಿ ಹಾಕಿಸಬಹುದು. ಆಗ ಅದು ಕಿಟಕಿ ಇಲ್ಲದ ಕೊರತೆ ನೀಗಿಸುತ್ತದೆ. ಕನ್ನಡಿಯ ನೆರವಿನಿಂದ ಕಿಚನ್‌ನಲ್ಲಿ ಹೆಚ್ಚು ಬೆಳಕು, ಆಳ ಹಾಗೂ ಗಾಢತೆಯ ಅರಿವಾಗುತ್ತದೆ. ಮಿರರ್ ಟೈಲ್ಸ್ ಸಹ ಅಡುಗೆಮನೆಯ ಅಂದ ಹೆಚ್ಚಿಸಬಲ್ಲದು.
ಲಿವಿಂಗ್ ರೂಮ್ : ಬ್ಯೂಟಿಫುಲ್ ಫ್ರೇಮಿನಲ್ಲಿ ಹುದುಗಿಸಲ್ಪಟ್ಟ ಕನ್ನಡಿ ಲಿವಿಂಗ್ ರೂಮಿನ ಕಳೆ ಹೆಚ್ಚಿಸುತ್ತದೆ. ಕನ್ನಡಿ ಮುಂದೆ ಯಾವುದೇ ಆರ್ಟ್‌ವರ್ಕ್, ಸೀನರಿ ಇತ್ಯಾದಿಗಳಿದ್ದರೆ ಅದು ಎದುರುಗೋಡೆಯ ಮೇಲೆ ಅಂದವಾಗಿ ಪ್ರತಿಫಲಿಸುತ್ತದೆ. ಇದರಿಂದಾಗಿ ಆ ಕೋಣೆ ಇನ್ನಷ್ಟು ವಿಶಾಲವಾಗಿ ಕಾಣಿಸುತ್ತದೆ. ಕಿಟಕಿಯ ಎದುರಿನಲ್ಲಿನ ಕನ್ನಡಿ ಬೆಳಕನ್ನು ಪ್ರತಿಫಲಿಸುತ್ತಾ, ಆ ಕೋಣೆಗೆ ಹೆಚ್ಚಿನ ಜೀವಂತಿಕೆ ತಂದುಕೊಡುತ್ತದೆ.
ಕಿಟಕಿಯ ಬಳಿ : ನೀವು ಕಿಟಕಿ ಬಳಿ ಕನ್ನಡಿ ಹಾಕಿಸಿದರೆ, ಆ ಕೋಣೆಯಲ್ಲಿ ನೈಸರ್ಗಿಕ ಬೆಳಕು ತಂತಾನೇ ಹೆಚ್ಚುತ್ತದೆ. ಕಿಟಕಿ ಬಳಿ ಎಷ್ಟು ಜಾಗ ಲಭ್ಯವಿದೆ ಎಂಬುದನ್ನು ಆಧರಿಸಿ ಅದಕ್ಕೆ ತಕ್ಕಂತೆ ಕನ್ನಡಿ ಆರಿಸಿ. ಕನ್ನಡಿ ಎಷ್ಟು ದೊಡ್ಡದಿರುತ್ತದೋ, ಬ್ರೈಟ್‌ನೆಸ್ ಅಷ್ಟೇ ಹೆಚ್ಚಾಗುತ್ತದೆ.
ಗಾರ್ಡನ್‌ನಲ್ಲಿ : ಎಷ್ಟೋ ಮನೆಗಳಲ್ಲಿ ಪರ್ಸನಲ್ ಗಾರ್ಡನ್ ಯಾ ಟೆರೇಸ್ ಗಾರ್ಡನ್ ಇರುತ್ತವೆ. ಗಾರ್ಡನ್‌ನಲ್ಲಿ ಕನ್ನಡಿಯ ಬಳಕೆ ನಿಮ್ಮ ಮನೆಯ ಒಳಾಲಂಕಾರಕ್ಕೆ ಒಂದು ವಿಭಿನ್ನ ಆಯಾಮ ನೀಡುತ್ತದೆ. ಇದರಲ್ಲಿ ನಿಮ್ಮ ಗಾರ್ಡನ್ನಿನ ಹಸಿರು ಹಾಗೂ ಬಣ್ಣ ಬಣ್ಣದ ಹೂಗಳ ಪ್ರತಿಬಿಂಬ ಕಂಡುಬರುತ್ತದೆ. ಚಿಟ್ಟೆ ಆಕಾರದ ಕನ್ನಡಿ ಅಳವಡಿಸಿದರೆ, ರಾತ್ರಿ ಹೊತ್ತು ನೀಲಿ ಆಕಾಶದ ಜೊತೆ ಅದರ ಕಾಂಬಿನೇಶನ್ ಬಹಳ ಆಕರ್ಷಕ ಎನಿಸುತ್ತದೆ. ಗಾರ್ಡನ್‌ನಲ್ಲಿ ಕನ್ನಡಿ ಜೊತೆ ವಿಭಿನ್ನ ಬಣ್ಣಗಳ ಟೈಲ್ಸ್ ಕಾಂಬಿನೇಶನ್ ಇದ್ದರೆ, ಲುಕ್ಸ್ ಇನ್ನೂ ಹೆಚ್ಚುತ್ತದೆ.
ಮೆಟ್ಟಿಲ ಬಳಿ : ಮೆಟ್ಟಿಲ ಬಳಿ ಕನ್ನಡಿಯ ಬಳಕೆ ಪೇಂಟಿಂಗ್ ಯಾ ಶೋ ಪೀಸ್ ಬಳಿಯೂ ಮಾಡಬಹುದು. ಬಗೆಬಗೆಯ ಆಕಾರದ ಕನ್ನಡಿಗಳನ್ನು ಸಹ ಮಾಡಿಸಬಹುದು. ಬೋರಿಂಗ್ ಡಾರ್ಕ್ ಸ್ಟೇರ್‌ಕೇಸ್‌ನ್ನು ಕನ್ನಡಿ ಚಿಕ್ ಬ್ರೈಟ್ ಮಾಡಬಲ್ಲದು. ಮೆಟ್ಟಿಲುಗಳನ್ನು ಏರುತ್ತಾ ಇಲ್ಲಿ ನೀವು ನಿಮ್ಮ ಅಂದವನ್ನು ಈ ಕನ್ನಡಿಯಲ್ಲಿ ಗಮನಿಸಿಕೊಳ್ಳಬಹುದು.
ಕಾರಿಡಾರ್‌ನಲ್ಲಿ : ನಿಮ್ಮ ಕಾರಿಡಾರ್ ತುಸು ಕಿಷ್ಕಿಂಧೆ ಎನಿಸಿದರೆ ಅಲ್ಲೂ ಕನ್ನಡಿ ಅಳವಡಿಸಿ. ಇದರಿಂದ ಅದು ದೊಡ್ಡದಾಗಿ ಕಾಣುತ್ತಾ ಫಳಫಳ ಹೊಳೆಯುತ್ತದೆ.
ಬೆಡ್ ಸೈಡ್ ಟೇಬಲ್ : ಇದರ ಹಿಂದೆ ಒಂದು ಚಿಕ್ಕ ವ್ಯಾನಿಟಿ ಮಿರರ್ ಇರಲಿ. ಇದರ ಮುಂದೆ ಲ್ಯಾಂಪ್ ಶೇಡ್ ಯಾ ವಾಸ್ ಇರಲಿ. ಇದರ ರಿಫ್ಲೆಕ್ಷನ್ ಇಡೀ ಬೆಡ್‌ರೂಮಿನ ಆಕರ್ಷಣೆ ಹೆಚ್ಚಿಸುತ್ತದೆ.
ವಾರ್ಡ್‌ರೋಬ್ ಬಳಿ : ಇದನ್ನು ನೀವು ಮಿರರ್ ಬಳಿ ಆಗಿ ಬದಲಾಯಿಸಿಕೊಳ್ಳಿ. ಇದರಿಂದ ನಿಮ್ಮ ಕೋಣೆ ದೊಡ್ಡದಾಗಿ, ಬ್ರೈಟ್ ಆಗಿ ಕಾಣುತ್ತದೆ. ಇದರ ಹೊರತಾಗಿ ನಿಮ್ಮ ವಾರ್ಡ್‌ರೋಬ್‌ಗೆ ಹೋಲಿಸಿದಾಗ ಎಷ್ಟೋ ಹಗುರ ಎನಿಸುತ್ತದೆ. ಇದು ನಿಮಗೆ ಡ್ರೆಸ್ಸಿಂಗ್ ಏರಿಯಾ ಆಗಿಯೂ ಕೆಲಸ ಮಾಡಬಲ್ಲದು.
ಆಯ್ಕೆ ಹೇಗೆ?
ಕೋಣೆಯ ಪೇಂಟ್ ಮತ್ತು ಫರ್ನೀಚರ್‌ಗೆ ತಕ್ಕಂತೆ ಕನ್ನಡಿಯ ಫ್ರೇಮ್ ಆರಿಸಿ. ಇಂಟೀರಿಯರ್ ಡಿಸೈನ್‌ನಲ್ಲಿ ಮೆಟಾಲಿಕ್ ಡನ್ ಫ್ರೇಮ್ ಬಳಕೆ ಅಧಿಕ ಇರುತ್ತದೆ. ನೀವು ನಿಮ್ಮ ಮನೆಗೆ ಕ್ಲಾಸಿಕ್ ಲುಕ್ ನೀಡಬಯಸಿದರೆ ಗೋಲ್ಡ್ ಪ್ಲೇಟೆಡ್ ಫ್ರೇಮ್ ಆರಿಸಿ. ಮಾಡರ್ನ್ ಲುಕ್ಸ್ ಗಾಗಿ ಮೆಟಾಲಿಕ್ ಫ್ರೇಮ್ ಆರಿಸಿ. ಕನ್ನಡಿಯ ಮೇಲಿನ ಪೇಂಟಿಂಗ್‌ನ್ನು ಸಹ ವಾಲ್ ಆರ್ಟ್ ರೂಪದಲ್ಲಿ ಬಳಸಿಕೊಳ್ಳಿ.
ಬಾತ್‌ರೂಮಿನಲ್ಲಿ ಸದಾ ದೊಡ್ಡ ಕನ್ನಡಿ ಅಳವಡಿಸಿ. ಅದರ ಗಾತ್ರ ಸಹ ಅಧಿಕ ದಪ್ಪ ಇರಬೇಕು, ಕನ್ನಡಿ ಎಷ್ಟು ದಪ್ಪ ಇರುತ್ತದೋ ಅದರ ಲುಕ್ಸ್ ಅಷ್ಟೇ ಚೆನ್ನಾಗಿರುತ್ತದೆ. ಕನ್ನಡಿಯ ಗಾಜಿನ ಹಿಂಬದಿಯಲ್ಲಿ ಗಾಢ ಬಣ್ಣದ ಪೇಂಟ್ ಇದ್ದರೆ ಚೆನ್ನಾಗಿರುತ್ತದೆ. ಇದರಿಂದ ಲುಕ್ ಹೆಚ್ಚು ಸ್ಪಷ್ಟವಾಗಿ, ಉತ್ತಮವಾಗಿರುತ್ತದೆ. ಮನೆಯನ್ನು ಸದಾ ಒಂದು ಸಿಮಿಟ್ರಿ ತರಹ ಅಲಂಕರಿಸಿರಬೇಕು. ಇದರಿಂದ ನಿಮ್ಮ ಮನೆ ಸುಂದರ ಆಗುವುದಲ್ಲದೆ, ಜೊತೆಗೆ ನಿಮ್ಮ ಕನ್ನಡಿಯ ಆಕರ್ಷಣೆಯೂ ಹೆಚ್ಚುತ್ತದೆ.
ಯಾವ ಕನ್ನಡಿ ಹೆಚ್ಚು ಜನಪ್ರಿಯ
ಇತ್ತೀಚೆಗೆ ಹಲವಾರು ಬಗೆಯ ಕನ್ನಡಿಗಳು ಚಾಲ್ತಿಯಲ್ಲಿವೆ. ಉದಾ: ಟ್ರಾನ್ಸ್ ಪರೆಂಟ್ ಗ್ಲಾಸ್, ಇದರಲ್ಲಿ ಸುತ್ತಮುತ್ತಲಿನದೆಲ್ಲ ಸ್ಪಷ್ಟ ಕಾಣಿಸುತ್ತದೆ. ರಾಪರ್ಡ್ ಗ್ಲಾಸಸ್ ಇದು ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ. ಟಿಂಟೆಡ್ ಮಿರರ್ಸ್ ಇದರಲ್ಲಿ ವಿಭಿನ್ನ ಬಗೆಯ ಟಿಂಟ್ ಯಾ ಸ್ಪಾಟ್ ಇರುತ್ತದೆ. ಲುಕಿಂಗ್ ಮಿರರ್ ಇದು ಸಾಧಾರಣ ಕನ್ನಡಿ, ಮುಖ ನೋಡಿಕೊಳ್ಳಲೆಂದೇ ಇರುತ್ತದೆ. ಇವೆಲ್ಲ ವಿಭಿನ್ನ ಆಕಾರಗಳಲ್ಲಿ ಲಭ್ಯ. ಗೋಲ, ಚೌಕ, ಉದ್ದ, ಅಗಲ, ಸಣ್ಣ, ದೊಡ್ಡ….. ಇತ್ಯಾದಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಇವನ್ನು ಆರಿಸಿ.
– ಜಿ. ಪಂಕಜಾ ಭಟ್