ವಯಸ್ಸು ಒಂದಿಷ್ಟು ಹೆಚ್ಚುತ್ತಿದ್ದಂತೆ ಗೃಹಿಣಿಯರು ಆಲೋಚಿಸುವುದು ಏನೆಂದರೆ, `ತಾವು ಇನ್ನೇತಕ್ಕೆ ಸುಂದರವಾಗಿ ಕಾಣಬೇಕಾಗಿದೆ, ತಮ್ಮನ್ನು ನೋಡುವವರು ಯಾರಿದ್ದಾರೆ?' ಇದೀಗ ತಮ್ಮದು ಮಕ್ಕಳನ್ನು ಪೋಷಿಸುವ ವಯಸ್ಸು, ಅಲಂಕಾರವೇನಿದ್ದರೂ ಮನೆಯಿಂದ ಹೊರಗೆ ಹೋಗುವ ಉದ್ಯೋಗಸ್ಥ ಮಹಿಳೆಯರಿಗೆ.' ಆದರೆ ಅವರ ಈ ಆಲೋಚನೆ ಸರಿಯಲ್ಲ. ಏಕೆಂದರೆ ಉಡುಗೆ ತೊಡುಗೆ ಅಲಂಕಾರಗಳಿಗೆ ವಯಸ್ಸಿನ ನಿರ್ಬಂಧವಿಲ್ಲ. ಮಹಿಳೆಯು ತನ್ನ ಎಲ್ಲ ವಯಸ್ಸಿನಲ್ಲಿಯೂ ಅಪ್‌ ಟು ಡೇಟ್‌ ಆಗಿದ್ದುಕೊಂಡು ಸೆಲೆಬ್ರಿಟೀಸ್‌ನಂತೆ ಬೆಡಗಿನಿಂದಿರುವುದು ಅವಳ ಇಚ್ಛೆಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ವಯಸ್ಸು ಹೆಚ್ಚುತ್ತಿದ್ದರೂ ಪರ್ಸನಾಲಿಟಿಯು ಮಂಕಾಗಬಾರದು.

ಹೇಮಾಮಾಲಿನಿ

ಮಾದರಿಯಾಗಿರುವ ಸೆಲೆಬ್ರಿಟೀಸ್‌ ಹೇಮಾಮಾಲಿನಿ ಇಂದು ಸುಮಾರು 69 ವರ್ಷದರಾಗಿದ್ದಾರೆ ಮತ್ತು ಅವರು ಇಂದೂ ಸಹ ಗ್ಲಾಮರಸ್‌ ನಟಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಯುವ ಆರ್ಟಿಸ್ಟ್ ಗಳಿಗೆ ಅವರು ಮಾದರಿಯಾಗಿದ್ದಾರೆ. ಇಂದೂ ಸಹ ಹಲವರು ಅವರನ್ನು ಡ್ರೀಮ್ ಗರ್ಲ್ ಎಂದೇ ಭಾವಿಸುತ್ತಾರೆ. ಅವರು ಯಾವುದಾದರೂ ಫ್ಯಾಷನ್‌ ಶೋಗೆ ಹೋದಾಗ, ಅವರ ರಾಂಪ್‌ ಮೇಲಿನ ನಡಿಗೆಯನ್ನು ಅನೇಕರು ಕಣ್ಣರಳಿಸಿ ನೋಡುತ್ತಾರೆ. ಅವರ ಸಿನಿಮಾಗಳನ್ನು ಮೆಚ್ಚುವ ಅಸಂಖ್ಯಾತ ಫ್ಯಾನ್‌ಗಳು ಇಂದೂ ಇದ್ದಾರೆ.

ಹೇಮಾಮಾಲಿನಿ ಕ್ಲಾಸಿಕ್‌ ಡ್ಯಾನ್ಸ್ ನಲ್ಲಿ ಪರಿಣಿತರಾಗಿದ್ದಾರೆ. ಈ ಕಲೆಯಿಂದ ಅವರು ತಮ್ಮ ಮೈಮಾಟವನ್ನು ಮೇಂಟೇನ್‌ ಮಾಡಿಕೊಳ್ಳಲು ಸಹಾಯವಾಗಿದೆ. ಅವರ ಏಜ್‌ಲೆಸ್‌ ಬ್ಯೂಟಿಯ ಮತ್ತೊಂದು ಗುಟ್ಟೆಂದರೆ, ಅವರು ಆದಷ್ಟು ಕಡಿಮೆ ಮೇಕಪ್‌ ಮಾಡಿಕೊಳ್ಳುತ್ತಾರೆ. ಜೊತೆಗೆ ಟ್ರೆಡಿಶನಲ್ ಬ್ಯೂಟಿ ಟಿಪ್ಸ್ ಬಳಕೆಯಲ್ಲಿ ವಿಶ್ವಾಸವಿರಿಸಿದ್ದಾರೆ. ಗ್ಲೋಯಿಂಗ್‌ ಸ್ಕಿನ್‌ಗಾಗಿ ಅವರು ತಮ್ಮ ಡಯೆಟ್‌ನಲ್ಲಿ ಹಣ್ಣು ತರಕಾರಿಗಳ ಸೇರ್ಪಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಇವೆಲ್ಲ ಅಂಶಗಳು ಅವರನ್ನು ಎಲ್ಲ ವಯಸ್ಸಿನಲ್ಲಿಯೂ ಸುಂದರ ಮತ್ತು ಆರೋಗ್ಯಕರವಾಗಿ ಇರಿಸಿದೆ.

ಮಾಧುರಿ ದೀಕ್ಷಿತ್

50 ವರ್ಷದವರಾದರೂ ಮಾಧುರಿ ದೀಕ್ಷಿತ್‌ರ ಮುಖದಲ್ಲಿ ಫ್ರೆಶ್‌ ಲುಕ್‌ ಇದೆ. ಇದಕ್ಕೆ ಕಾರಣವೆಂದರೆ, ಅವರು ತಾರೆಯಾಗಿದ್ದರೂ, ಬೆಲೆಬಾಳುವ ಕಾಸ್ಮೆಟಿಕ್‌ ಪ್ರಾಡೆಕ್ಟ್ ಗೆ ಬದಲಾಗಿ ಮನೆ ಮದ್ದಿನಲ್ಲಿ ಹೆಚ್ಚು ವಿಶ್ವಾಸವಿರಿಸಿದ್ದಾರೆ. ಎಲ್ಲ ವಯಸ್ಸಿನವರಿಗೂ  ಮಾಧುರಿಯ ಸಂದೇಶವೇನೆಂದರೆ, ನಿಮ್ಮ ವಯಸ್ಸು ಹೆಚ್ಚುತ್ತಿದ್ದರೂ ನಿಮ್ಮನ್ನು ನೀವು ಮೇಂಟೇನ್‌ ಮಾಡಿಕೊಳ್ಳಿ. ಇದರಿಂದ ಇತರರು ನಿಮ್ಮನ್ನು ನೋಡುತ್ತಲೇ ಇದ್ದುಬಿಡುತ್ತಾರೆ. ಮಾಧುರಿಗೆ ಡ್ಯಾನ್ಸ್ ನಲ್ಲಿ ಆಸಕ್ತಿ ಇದೆ. ಇದನ್ನು ಅವರು ಎಕ್ಸರ್‌ಸೈಜ್‌ನಂತೆ ಪ್ರಯೋಗಿಸಿ ತಮ್ಮನ್ನು ಫಿಟ್‌ ಆಗಿ ಇರಿಸಿಕೊಂಡಿದ್ದಾರೆ. ತಮಗಾಗಿಯೇ ಬಾಡಿ ಮೇಂಟೇನ್‌ ಮಾಡುತ್ತಾರೆ.

ಜೂಹಿ ಚಾವ್ಲಾ

ಮನಮೋಹಕ ಮುಗುಳ್ನಗೆಗೆ ಹೆಸರಾಗಿರುವ ಜೂಹಿ ಚಾವ್ಲಾ 50 ವರ್ಷ ವಯಸ್ಸಿನಲ್ಲಿಯೂ ತಮ್ಮನ್ನು ತಾವು‌ ಮೇಂಟೇನ್‌ ಮಾಡಿಕೊಂಡಿದ್ದಾರೆ. ಅವರು ಹೇಳುವುದೇನೆಂದರೆ, ನಾವು ಮನೆಯಲ್ಲಿದ್ದರೂ ಸಹ  ಮೇಂಟೇನ್‌ ಆಗಿರಬೇಕು. ಇದರಿಂದ ನಮ್ಮ ಕಾನ್ಛಿಡೆನ್ಸ್ ಹೆಚ್ಚುತ್ತದೆ. ಅವರು ತಮ್ಮ ಚರ್ಮವನ್ನು ಫ್ರೆಶ್‌ ಆಗಿರಿಸಿಕೊಳ್ಳಲು ಆದಷ್ಟು ಹೆಚ್ಚು ನೀರು ಕುಡಿಯುತ್ತಾರೆ ಮತ್ತು ರಾತ್ರಿ ಮೇಕಪ್‌ ತೆಗೆದ ನಂತರವೇ ಮಲಗುತ್ತಾರೆ. ನೀವು ಕಾಯಿಲೆಗಳನ್ನು ದೂರವಿರಿಸಬೇಕಾದರೆ ಬೆಳಗಿನ ನಿದ್ರೆಯನ್ನು ಬಿಟ್ಟು ತಂಗಾಳಿಯಲ್ಲಿ ತಿರುಗಾಡಿ, ಆಗ ನೀವು ಸದಾ ಯೌವನದಿಂದ ಕಂಗೊಳಿಸುವಿರಿ ಎಂದು ಜೂಹಿ ಸಲಹೆ ನೀಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ