ನಾವು ಫಿಟ್ನೆಸ್ ಕಾಪಾಡಿಕೊಳ್ಳಲು ಬ್ರೇಕ್ಫಾಸ್ಟ್ ಅತಿ ಮುಖ್ಯ. ಅದರ ಹೆಲ್ಡಿ ಡಯೆಟ್ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಇದು ಜಿಮ್ ವರ್ಕ್ಔಟ್, ಜಾಗಿಂಗ್ಮಾಡುವವರಿಗೆ ಹೆಚ್ಚಿನ ಶಕ್ತಿ ಒದಗಿಸುತ್ತದೆ. ನೀವು ರೆಗ್ಯುಲರ್ ಮಾರ್ನಿಂಗ್ ಜಾಗಿಂಗ್ಗೆ ಹೋಗತ್ತೀರಾ? ಹಾಗಿದ್ದರೆ ನಿಮ್ಮ ಪೋಸ್ಟ್ ರನ್ ಬ್ರೇಕ್ಫಾಸ್ಟ್ ಮಾರನೇ ದಿನದ ಓಟವನ್ನು ರಿಕವರ್ ಮಾಡುವಂತಿರಬೇಕು. ಕೆಲವರು ಮಧ್ಯಾಹ್ನ ಪಾರ್ಕ್ನಲ್ಲಿ ಜಾಗ್ ಮಾಡುತ್ತಾರೆ. ಆಗಲೂ ಸಹ ಈ ಬ್ರೇಕ್ಫಾಸ್ಟ್ ಆ ಓಟಕ್ಕೆ ಶಕ್ತಿ ತುಂಬುವಂತಿರಬೇಕು.
ನೀವು ಸಂಜೆ ಓಡುವವರಾದರೆ, ಈ ಬ್ರೇಕ್ಫಾಸ್ಟ್ ಇಡೀ ದಿನದ ಬ್ಲಡ್ ಶುಗರ್ ಲೆವೆಲ್ ನಿಯಂತ್ರಿಸಲು ಪೂರಕವಾಗಿರಬೇಕು. ಒಳ್ಳೆಯ ಬ್ರೇಕ್ಫಾಸ್ಟ್ ನಿಮ್ಮನ್ನು ಅನಗತ್ಯವಾಗಿ ಹೆವಿ ಲಂಚ್ಗೆ ಪ್ರೇರೇಪಿಸುವುದಿಲ್ಲ. ಆಗ ಸಂಜೆ ಜಾಗಿಂಗ್
ಹೋಗುವವರಿಗೆ ದೇಹ ಭಾರಿ ಆಗಿರುವಂತೆ ಅನಿಸುವುದಿಲ್ಲ.
ರನ್ನರ್ಸ್ ಬ್ರೇಕ್ಫಾಸ್ಟ್
ಬ್ರೇಕ್ಫಾಸ್ಟ್ ಇಡೀ ದಿನದ ಅತಿ ಮಹತ್ವಪೂರ್ಣ ಆಹಾರ ಎನಿಸುತ್ತದೆ. 7-8 ಗಂಟೆಗಳ ನಿದ್ದೆಯ ನಂತರ ನೀವು ಎದ್ದಾಗ, ನಿಮ್ಮ ಬೆಳಗಿನ ಕೆಲಸಗಳ ಚಟುವಟಿಕೆಗಾಗಿ ಹೆಚ್ಚಿನ ಶಕ್ತಿ ಬೇಕೆನಿಸುತ್ತದೆ. ನೀವು ಜಾಗಿಂಗ್ನಲ್ಲಿ ಎಷ್ಟು ಕ್ಯಾಲೋರಿ ಬರ್ನ್ ಮಾಡುತ್ತೀರಿ, ಅದು ನಿಮ್ಮ ಓಟದ ವೇಗ ಮತ್ತು ನಿಮ್ಮ ತೂಕವನ್ನು ಅವಲಂಬಿಸಿದೆ. ನೀವು ಎಷ್ಟು ವೇಗವಾಗಿ ಓಡುವಿರೋ ನಿಮ್ಮ ಮೆಟಬಾಲಿಕ್ರೇಟ್ ಅಷ್ಟೇ ಹೆಚ್ಚುತ್ತದೆ. ಆಗ ಮಾತ್ರ ಹೆಚ್ಚಿನ ಕ್ಯಾಲೋರಿ ಬರ್ನ್ ಆಗಲು ಸಾಧ್ಯ. ಉದಾ: 1 ಮೈಲಿ ವೇಗದ ನಡಿಗೆಗಿಂತ, ಓಟದಲ್ಲಿ 2 ಪಟ್ಟು ಕ್ಯಾಲೋರಿ ಹೆಚ್ಚು ಬರ್ನ್ ಆಗುತ್ತದೆ. 1 ಮೈಲಿ ಓಡಲು ಸಾಧಾರಣ ತೂಕದ ವ್ಯಕ್ತಿ 100 ಕ್ಯಾಲೋರಿ ಬರ್ನ್ಮಾಡಬಲ್ಲ. ನೀವು ಮಾರ್ನಿಂಗ್ ರನ್ನರ್ ಆಗಿದ್ದರೆ ನಿಮ್ಮ ಬ್ರೇಕ್ಫಾಸ್ಟ್ ನ್ನು 2 ಭಾಗವಾಗಿ ವಿಂಗಡಿಸಬೇಕು.
ಪ್ರೀ ರನ್ನಿಂಗ್ ಮೋಸ್ಟ್ ರನ್ನಿಂಗ್ ಬ್ರೇಕ್ಫಾಸ್ಟ್
ಪ್ರೀ ರನ್ನಿಂಗ್ ಬ್ರೇಕ್ಫಾಸ್ಟ್ ಓಟದ ನಂತರದ ಪೌಷ್ಟಿಕ, ಸಮತೋಲಿತ ಆಹಾರ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಓಟಕ್ಕೆ ಮೊದಲಿನ ಶಕ್ತಿ ಪೂರೈಕೆ. ನೀವು ಓಟಕ್ಕೆ ಮುನ್ನ ಏನು ಸೇವಿಸುವಿರೋ, ಅದರ ಮೇಲೆ ನಿಮ್ಮ ಓಟದ ಪರ್ಫಾರ್ಮೆನ್ಸ್ ನಿಂತಿದೆ. ನೀವು ಯಾವಾಗ, ಎಷ್ಟು ಓಡಬೇಕೆಂದು ನಿರ್ಧರಿಸಿದ್ದೀರಿ ಎಂಬುದನ್ನೂ ಇದು ಅವಲಂಬಿಸಿದೆ.
ಮಹತ್ವಪೂರ್ಣ ಟೈಮಿಂಗ್
ನೀವು ಬೆಳಗ್ಗೆ 6 ಗಂಟೆಗೆ 3 ಮೈಲಿ ಓಟ ಓಡಲು ನಿರ್ಧರಿಸಿದರೆ, ಅದಕ್ಕೆ 20 ನಿಮಿಷ ಮೊದಲು 1 ಆರೆಂಜ್ ಸೇವಿಸಿದರೆ ಸಾಕು. ಯಾರು ರವಿವಾರದ ಮ್ಯಾರಥಾನ್ಗೆ ಓಡಲು ಬಯಸುತ್ತಾರೋ ಅವರು ಶನಿವಾರ ರಾತ್ರಿ ಧಾರಾಳ ಆಹಾರ ಸೇವಿಸಿರಬೇಕು. ಕ್ರೀಡಾಪಟು ಹಾಗೂ ಅಥ್ಲೀಟ್ಸ್ ತಮ್ಮ ಪ್ರದರ್ಶನದ 3 ದಿನಗಳ ಮುಂಚಿನಿಂದಲೇ, ತಮ್ಮ ದೈನಂದಿನ ಆಹಾರದಲ್ಲಿ ಕಾರ್ಬೊಹೈಡ್ರೇಟ್ನ ಪ್ರಮಾಣ ಹೆಚ್ಚಿಸಿಕೊಳ್ಳಬೇಕು.
ಜೀರ್ಣಿಸಲು ಸುಲಭ ಆಗುವಂತಿರಲಿ
ಓಟಕ್ಕೆ ಮುಂಚಿನ ಆಹಾರದಲ್ಲಿ ಕೊಬ್ಬು ಮತ್ತು ಕಾರ್ಬೊಹೈಡ್ರೇಟ್ ಪ್ರಮಾಣ ಕಡಿಮೆ ಇರಬೇಕು. ಆಗ ಅದು ಸುಲಭವಾಗಿ ಜೀರ್ಣವಾಗುತ್ತದೆ.
ಶಕ್ತಿ ತುಂಬಿರಲಿ
ಪ್ರೀ ರನ್ನಿಂಗ್ ಬ್ರೇಕ್ಫಾಸ್ಟ್ ಶಕ್ತಿಯಿಂದ ತುಂಬಿರಬೇಕು. ಆಗ ಓಡುವ ಸಮಯದಲ್ಲಿ ನಿಮ್ಮ ಮಸ್ತಿಷ್ಕ, ಮಾಂಸಖಂಡಗಳಿಗೆ ಸತತ ಶಕ್ತಿ ಹರಿದು ಬರುತ್ತಿರಬೇಕು.
ಎಷ್ಟು ಸೇವಿಸಬೇಕು?
ಓಟಕ್ಕೆ ಮುನ್ನ ಎಂದೂ ಹೊಟ್ಟೆ ಭರ್ತಿ ತಿನ್ನಬೇಡಿ. ನೀವು ಹಾಗೊಮ್ಮೆ ಹೆಚ್ಚಿಗೆ ತಿಂದುಬಿಟ್ಟರೆ, ಬಲುಬೇಗ ಸುಸ್ತಾಗುತ್ತದೆ. ಆದರೆ ಓಟಕ್ಕೆ ಮೊದಲು ಏನೂ ತಿನ್ನಲೇ ಇಲ್ಲ ಎಂದೂ ಆಗಬಾರದು. ಏಕೆಂದರೆ ಆಗ ಮಾಂಸಖಂಡಗಳು ಬಲು ಬೇಗ ಸುಸ್ತಾಗುತ್ತವೆ.
ನೀರಿನ ಮಟ್ಟ ಕಾಯ್ದುಕೊಳ್ಳಿ
ಎಲ್ಲಕ್ಕೂ ಮೊದಲು ಅತ್ಯಗತ್ಯ ವಿಷಯ ಎಂದರೆ, ದೇಹದಲ್ಲಿ ನೀರಿನ ಮಟ್ಟ ಬ್ಯಾಲೆನ್ಸ್ಡ್ ಆಗಿರಬೇಕು. ನೀವೇನೋ ದಿನವಿಡೀ ನೀರು ಕುಡಿಯುತ್ತಿರಬಹುದು, ಆದರೆ ಓಟಕ್ಕೆ ಮೊದಲು ತುಸು ಜಾಸ್ತಿ ನೀರು ಕುಡಿಯಿರಿ. ಪ್ರೋಟೀನ್ ಕೂಡ ಅತ್ಯಗತ್ಯ. ಓಟಕ್ಕೆ ಮೊದಲು ಏನನ್ನಾದರೂ ಸೇವಿಸಿ, ಅದರಲ್ಲಿ ಪ್ರೋಟೀನ್ ಅಂಶ ಇರಬೇಕಾದುದು ಅತ್ಯಗತ್ಯ. ಮಾಂಸಖಂಡಗಳು ಸದೃಢವಾಗಿರುವಂತೆ ಪ್ರೋಟೀನ್ ರಕ್ಷಿಸುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಸತತ ಲಭಿಸುತ್ತಾ ಇರುತ್ತದೆ.
ಪೋಸ್ಟ್ ರನ್ನಿಂಗ್ ಬ್ರೇಕ್ಫಾಸ್ಟ್
ಓಟ ಮುಗಿಸಿದ 1 ಗಂಟೆ ನಂತರ ತಕ್ಷಣ ಏನಾದರೂ ಸೇವಿಸಿ. ಜೊತೆಗೆ ಧಾರಾಳ ನೀರು ಕುಡಿಯಿರಿ. ಏಕೆಂದರೆ ಓಟದಿಂದಾಗಿ ದೇಹದಲ್ಲಿ ಎಲೆಕ್ಟ್ರೊಲೈಟ್ಸ್ ಪ್ರಮಾಣ ಕಡಿಮೆ ಆಗುತ್ತದೆ. ಸ್ವಯಂ ನಿಮಗೆ ಪೋಷಣೆ ಒದಗಿಸಲು ನಿಂಬೆ ಜೂಸ್, ಎಳನೀರು, ಬಾರ್ಲಿ ನೀರು, ಸಾದಾ ನೀರು ಕುಡಿಯುತ್ತಿರಿ.
ಓಟದ ನಂತರದ ಆಹಾರದಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇರಬೇಕು. ಮೊಟ್ಟೆ, ಹಾಲು, ಹಣ್ಣು, ಹೈನು ಪದಾರ್ಥ, ಬ್ರೆಡ್, ಬಟರ್, ಮೊಳಕೆ ಬಂದ ಕಾಳು… ಇತ್ಯಾದಿ ಸೇವಿಸಿ. ನಿಮ್ಮ ಆಹಾರದಲ್ಲಿ ಸ್ವಲ್ಪ ಉಪ್ಪು ಸಹ ಇರಬೇಕು. ಏಕೆಂದರೆ ಧಾರಾಳ ಬೆವರುವಿಕೆಯಿಂದ ದೇಹದಲ್ಲಿ ಉಪ್ಪಿನಂಶ ನಷ್ಟವಾಗಿರುತ್ತದೆ. ಸೋಡಿಯಂ ಶಾರ್ಟೇಜ್ನಿಂದಾಗಿ ತೊಂದರೆ ಆಗಬಹುದು. ರಕ್ತದಲ್ಲಿ ಸಕ್ಕರೆ ಪ್ರಮಾಣ ತುಂಬಾ ಕಡಿಮೆ ಆಗಬಾರದು, ಹೀಗಾಗಿ ತುಸು ಸಕ್ಕರೆ ಸಹ ಸೇವಿಸಿ.
ಓಟ/ವ್ಯಾಯಾಮ ಮಾಡುವವರ ಆಹಾರ
ಕಾರ್ಬೊಹೈಡ್ರೇಟ್ : ಇದು ಮಾಂಸಖಂಡಗಳಿಗೆ ಸುಲಭವಾಗಿ ಶಕ್ತಿ ಒದಗಿಸುವ ಸ್ರೋತ. ಬ್ರೇಕ್ಫಾಸ್ಟ್ ನ ಒಟ್ಟು ಕ್ಯಾಲೋರಿಯ 55-70% ಕಾರ್ಬೊಹೈಡ್ರೇಟ್ಸ್ ಆಗಿರಲಿ.
ಪ್ರೋಟೀನ್: ಉಪಾಹಾರದ ಒಟ್ಟು ಕ್ಯಾಲೋರಿಯ 15% ಪ್ರೋಟೀನ್ ಆಗಿರಬೇಕು. ಇದು ಮಾಂಸಖಂಡಗಳಿಗೆ ಹೆಚ್ಚಿನ ಶಕ್ತಿ ಒದಗಿಸಲು ಅತಿ ಮುಖ್ಯ.
ಕೊಬ್ಬು : ಯಾರು ನಿಯಮಿತವಾಗಿ ಜಾಗಿಂಗ್ ಮಾಡುತ್ತಾರೋ, ಅಂಥವರು ಕೊಬ್ಬಿನಾಂಶವನ್ನು ಆದಷ್ಟೂ ಕಡಿಮೆ ಸೇವಿಸಬೇಕು. ಏಕೆಂದರೆ ಇದು ದೇಹದ ಸರ್ವಾಧಿಕ ಸಾಂದ್ರಿತ ಶಕ್ತಿಯ ಮೂಲವಾಗಿದೆ.
ದ್ರವ ಪದಾರ್ಥ : ರೆಗ್ಯುಲರ್ ರನ್ನರ್ಸ್ ಧಾರಾಳ ನೀರು ಕುಡಿಯಬೇಕು. ಅದರ ಜೊತೆ ಇತರ ದ್ರವ ಪದಾರ್ಥಗಳನ್ನೂ ಹೆಚ್ಚಾಗಿ ಸೇವಿಸುತ್ತಿರಬೇಕು. ಇದು ದೇಹದ ಉಷ್ಣತೆಯನ್ನು ಬ್ಯಾಲೆನ್ಸ್ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ಜಲಮಟ್ಟ ತಂತಾನೇ ನಿಯಂತ್ರಣಕ್ಕೆ ಬರುತ್ತದೆ, ಸಹಜ ಚೈತನ್ಯ ತುಂಬಿಕೊಳ್ಳುತ್ತದೆ.
ಇದನ್ನು ಸೇವಿಸಬೇಡಿ
ಜಾಗರ್ಸ್ಗೆ ಬ್ರೇಕ್ಫಾಸ್ಟ್ ಎಷ್ಟು ಪೌಷ್ಟಿಕವಾಗಿರುತ್ತದೋ, ಅವರ ಓಟದ ಪ್ರದರ್ಶನ ಅಷ್ಟೇ ಚೆನ್ನಾಗಿರುತ್ತದೆ. ಆದ್ದರಿಂದ ಬ್ರೇಕ್ಫಾಸ್ಟ್ ನಲ್ಲಿ ಎಂಥ ಆಹಾರ ಸೇವಿಸಬಾರದು ಎಂಬುದು ಕೂಡ ಮುಖ್ಯ. ಹಾಗಾಗಿ ಕ್ಯಾಲೋರಿ ಹೆಚ್ಚಿದ್ದು, ಪೌಷ್ಟಿಕತೆ ಕಡಿಮೆ ಇರುವ ಆಹಾರ ಸೇವಿಸಲೇಬಾರದು. ಉದಾ: ವೈಟ್ಬ್ರೆಡ್, ಪೇಸ್ಟ್ರಿ, ಡೋನಟ್, ಹಲ್ವಾ, ಸಿಹಿ ತಿನಿಸುಗಳು, ಕೇಕ್, ಫುಲ್ ಕ್ರೀಂ ಹಾಲು, ಅಂಥ ಪದಾರ್ಥ, ಸೋಡಾ, ಕೋಲ್ಡ್ ಡ್ರಿಂಕ್ಸ್, ಪೂರಿ, ಪರೋಟ, ಸಬ್ಬಕ್ಕಿ, ಕಚೋಡಿ, ಸಮೋಸಾ, ಯಾವುದೇ ಕರಿದ ಪದಾರ್ಥ ಇತ್ಯಾದಿ.
ಬ್ರೇಕ್ಫಾಸ್ಟ್ ಏಕೆ ಬೇಕು?
ಬ್ರೇಕ್ಫಾಸಸ್ಟ್ ಸೇವಿಸದಿದ್ದರೆ ದೇಹದಲ್ಲಿ ಕೊಬ್ಬಿನ ಮೆಟಬಾಲಿಸಂಗಾಗಿ ಅಗತ್ಯದ ಎನ್ಜೈಮ್ಸ್ ಉತ್ಪನ್ನ ಆಗುವುದಿಲ್ಲ. ನೀವು ಒಂದು ಪಕ್ಷ ಬೆಳಗ್ಗೆ ಬ್ರೇಕ್ಫಾಸ್ಟ್ ಸೇವಿಸದಿದ್ದರೆ, ರಕ್ತದಲ್ಲಿ ಶುಗರ್, ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ಅದು ನಿಮ್ಮನ್ನು ಹಲವು ರೋಗಗಳಿಗೆ ಗುರಿಯಾಗಿಸುತ್ತದೆ. ಜೊತೆಗೆ ನೀವು ಸಲೀಸಾಗಿ ಜಾಗಿಂಗ್ ಮಾಡಲು ಇದು ಅಡ್ಡಿಪಡಿಸುತ್ತದೆ.
ಶಕ್ತಿಯ ಮಟ್ಟ ಕಾಯ್ದುಕೊಳ್ಳಲು
ಬ್ರೇಕ್ಫಾಸ್ಟ್ ನಮ್ಮ ದೇಹಕ್ಕೆ ಇಂಧನ ಪೂರೈಸುವ ಮೂಲವಾಗಿದೆ. ನೀವು ಓಟ ಮುಗಿಸಿ ಬಂದ ಮೇಲೂ ಬ್ರೇಕ್ಫಾಸ್ಟ್ ಸೇವಿಸದಿದ್ದರೆ ದೇಹದಲ್ಲಿ ಕ್ರಮೇಣ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಶಕ್ತಿ ಪೂರೈಕೆಯ ಜೊತೆ ಉಪಾಹಾರ, ಮಹತ್ವಪೂರ್ಣ ಪೋಷಕಾಂಶಗಳ ಭಂಡಾರ ಹೌದು. ಉಪಾಹಾರದಲ್ಲಿ ನಾವು ಸೇವಿಸುವ ಧಾನ್ಯ, ಡ್ರೈ ಫ್ರೂಟ್ಸ್, ಹಣ್ಣು, ತರಕಾರಿ ಇತ್ಯಾದಿಗಳಲ್ಲಿ ಪ್ರೋಟೀನ್, ವಿಟಮಿನ್ಸ್, ಮಿನರಲ್ಸ್ ತುಂಬಿರುತ್ತವೆ. ದೇಹಕ್ಕೆ ಈ ಅಗತ್ಯ ಪೋಷಕಾಂಶಗಳು ಬೇಕೇಬೇಕು. ನಮ್ಮ ಉಪಾಹಾರದಲ್ಲಿ ಇವುಗಳ ಸೇವನೆ ಸಾಕಷ್ಟು ಪ್ರಮಾಣದಲ್ಲಿ ಆಗದಿದ್ದರೆ ಇಡೀ ದಿನ ಇವುಗಳ ಪೂರೈಕೆಯ ಅಭಾವದಿಂದಾಗಿ ಕಷ್ಟ ತಪ್ಪಿದ್ದಲ್ಲ.
ನೀವು ಪ್ರತಿದಿನ ಹೀಗೆ ಜಾಗಿಂಗ್ ನಂತರ ಉಪಾಹಾರ ಸೇವನೆ ಮಾಡದಿದ್ದರೆ, ನಿಮ್ಮ ಮೂಳೆ, ಮಾಂಸಖಂಡಗಳು ದರ್ಬಲಗೊಳ್ಳುತ್ತವೆ. ಹೀಗಾಗಿ ಓಟದ 1 ಗಂಟೆ ನಂತರ ಪೌಷ್ಟಿಕ ಉಪಾಹಾರವನ್ನು ಅಗತ್ಯ ಸೇವಿಸಿ.
ಬ್ರೇನ್ ಪವರ್ಗೂ ಆವಶ್ಯಕ
ನಿಮ್ಮ ಉಪಾಹಾರದಲ್ಲಿ ಉತ್ತಮ ಗುಣಮಟ್ದದ ಪ್ರೋಟೀನ್ ಸೇವನೆಯಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಅನಿಸುತ್ತದೆ. ಇಷ್ಟು ಮಾತ್ರವಲ್ಲದೆ, ಈ ಪ್ರೋಟೀನ್ ಅಮೀನೋ ಆ್ಯಸಿಡ್ ಟೈರೋಸಿನ್ ಕಿಣ್ವಗಳನ್ನು ಮಸ್ತಿಷ್ಕಕ್ಕೆ ತಲುಪಿಸುವಲ್ಲಿ ಸಹಾಯ ಮಾಡುತ್ತದೆ. ಇದರ ನೆರವಿನಿಂದ ಎಂಥ ಪರಿಸ್ಥಿತಿಯನ್ನೂ ಎದುರಿಸಬಲ್ಲಂಥ ರಸಾಯನ ಡೋಪಾಮೈನ್ ಮತ್ತು ಐಪಿನೇಫ್ರಿನ್ಉತ್ಪನ್ನಗೊಳ್ಳುತ್ತವೆ. ನೀವು ಸಮಯಕ್ಕೆ ಸರಿಯಾಗಿ ಉಪಾಹಾರ ಸೇವಿಸದಿದ್ದರೆ, ರಕ್ತದಲ್ಲಿ ಸಕ್ಕರೆ ಅಂಶ ಅತಿ ಕಡಿಮೆಯಾಗುತ್ತಾ, ಮಸ್ಕಿಷ್ಕವನ್ನು ನಕಾರಾತ್ಮಕವಾಗಿ ಪ್ರೇರೇಪಿಸುತ್ತದೆ. ಕೆಲವರು ತಲೆಸುತ್ತು ಬಂದು ಕೆಳಗೆ ಬಿದ್ದರೂ ಆಶ್ಚರ್ಯವಿಲ್ಲ. ಹೀಗಾಗಿ ಅಥ್ಲೀಟ್ಸ್, ಕ್ರೀಡಾಪಟುಗಳು ಮಾರನೇ ದಿನದ ಪ್ರದರ್ಶನಕ್ಕೆ ಮಾನಸಿಕವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಇದು ವೈಫಲ್ಯಕ್ಕೆ ದಾರಿಯೂ ಆಗಬಹುದು.
ಜಿಮ್ ಗೆ ಹೋಗುವುದರ ಲಾಭಗಳು
ಕೇವಲ ಆಹಾರದ ನಿಯಂತ್ರಣ ಮಾತ್ರವಲ್ಲ, ಫಿಟ್ ಬಾಡಿ ಹಾಗೂ ಬೆಟರ್ ಸೆಕ್ಸ್ ಲೈಫ್ಗಾಗಿ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದರಿಂದಾಗುವ ಲಾಭಗಳ ಬಗ್ಗೆಯೂ ತಿಳಿದಿರಬೇಕು. ಆಗ ಮಾತ್ರ ನಿಮ್ಮ ಪರ್ಸನಾಲ್ಟಿ ಫಿಟ್ಫೈನ್ ಆಗುತ್ತದೆ.
ನಮ್ಮನ್ನು ನಾವು ಫಿಟ್ಫೈನ್ ಆಗಿ ಇರಿಸಿಕೊಳ್ಳಲು ಅನೇಕ ಬಗೆಯ ವ್ಯಾಯಾಮ, ಡ್ಯಾನ್ಸ್ ಕ್ಲಾಸಸ್ ತರಹದ ವಿವಿಧ ಅವಕಾಶಗಳಿವೆ. ಆದರೆ ಜಿಮ್ ಗೆ ಹೋಗಿ ಕಸರತ್ತು ಮಾಡುವುದು ಒಂದು ಉತ್ತಮ ಮಾರ್ಗವಾಗಿದೆ. ಜಿಮ್ ವರ್ಕ್ಔಟ್ಸ್ ನಿಂದ ಕೊಬ್ಬು ಮಾತ್ರ ಕರಗುವುದಲ್ಲದೆ, ಹಲವು ರೋಗಗಳಿಂದ ನಮ್ಮನ್ನು ಸುರಕ್ಷಿತವಾಗಿಡುತ್ತದೆ.
ಅತ್ಯಾಕರ್ಷಕ ವ್ಯಕ್ತಿತ್ವಕ್ಕಾಗಿ
ಸ್ಲಿಮ್ ಟ್ರಿಮ್ ಬಾಡಿಯ ಆಕರ್ಷಣೆ ಯಾರಿಗೆ ತಾನೇ ಇಲ್ಲ? ಜಿಮ್ ನಿಂದ ಆ್ಯಬ್ಸ್ ಡೆವಲಪ್ ಆಗುತ್ತದೆ. ಕೈಕಾಲುಗಳ ಅಂಗಾಂಗ ಸದೃಢಗೊಳ್ಳುತ್ತವೆ. ಸಹಜವಾಗಿ ಹೆಂಗಸರ ಸೊಂಟ ಕರಗುತ್ತದೆ, ಬಾಡಿಯಲ್ಲಿ ಕರ್ವ್ಸ್ ಕಾಣಿಸುತ್ತದೆ. ಪ್ರಣಯದ ಪರಾಕಾಷ್ಠೆಗೆ ಅತ್ಯಾಕರ್ಷಕ ವ್ಯಕ್ತಿತ್ವ ಸಂಗಾತಿಯನ್ನು ಹಿಡಿದಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಸ್ಟ್ರೆಸ್ ಬಸ್ಟರ್
ಸಾಮಾನ್ಯವಾಗಿ ಸ್ಟ್ರೆಸ್ ಕಾರಣ ದಂಪತಿಗಳು ಅಂತರಂಗದ ಕ್ಷಣಗಳನ್ನು ಪೂರ್ತಿಯಾಗಿ ಎಂಜಾಯ್ ಮಾಡಲಾಗದು. ಚಿಂತೆಯ ಕಾಟದಿಂದಾಗಿ ಅವರಿಗೆ ಸಮಾಗಮದಲ್ಲಿ ಆಸಕ್ತಿಯೇ ಇರುವುದಿಲ್ಲ. ಸ್ಟ್ರೆಸ್ನಿಂದ ಶಕ್ತಿ ಕುಂದುತ್ತದೆ. ಜಿಮ್ ನಲ್ಲಿ ಮಾಡುವ ನಿಯಮಿತ ವ್ಯಾಯಾಮ ಸ್ಟ್ರೆಸ್ ಬಸ್ಟರ್ನ ಕೆಲಸ ಮಾಡುತ್ತದೆ. ವ್ಯಾಯಾಮದ ನಂತರ ನೀವು ರಿಲ್ಯಾಕ್ಸ್ ಆಗುವಿರಿ.
ಬ್ಯಾಲೆನ್ಸ್ ಡಯೆಟ್ನ ಅಭ್ಯಾಸ
ಜಿಮ್ ನಲ್ಲಿ ವ್ಯಾಯಾಮದ ಜೊತೆ ಟ್ರೇನರ್ ಡಯೆಟ್ ಚಾರ್ಟ್ ಸಹ ನೀಡುತ್ತಾರೆ. ಅವರು ವ್ಯಾಯಾಮ ಹಾಗೂ ನಿಮ್ಮ ದೇಹಾರೋಗ್ಯಕ್ಕೆ ಹೊಂದುವೆತೆ ಡಯೆಟ್ ಚಾರ್ಟ್ ನೀಡುತ್ತಾರೆ. ವರ್ಕ್ಔಟ್ ನಂತರ ದೇಹಕ್ಕೆ ಪೋಷಕಾಂಶಗಳ ಅಗತ್ಯ ಹೆಚ್ಚಾಗುತ್ತದೆ. ಮಸಲ್ಸ್ ಬಾಡಿ ಬಿಲ್ಡಿಂಗ್ಗಾಗಿ ಹೈ ಪ್ರೋಟೀನ್ ಝಿಂಕ್ಯುಕ್ತ ಆಹಾರ ಸೇವಿಸಬೇಕು. ಹೆಲ್ದಿ ಸೆಕ್ಸ್ ಸೈಫ್ಗಾಗಿ ಬ್ಯಾಲೆನ್ಸ್ಡ್ ಡಯೆಟ್ ಬಲು ಮುಖ್ಯ.
ಟೆಸ್ಟೊಸ್ಟೆರಾನ್ ಲೆವೆಲ್ ಹೆಚ್ಚಿಸಿ
ಅಂತರಂಗದ ಕ್ಷಣಗಳಲ್ಲಿ ಟೆಸ್ಟೊಸ್ಟೆರಾನ್ ಹಾರ್ಮೋನ್ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಈ ಹಾರ್ಮೋನ್ ಸೆಕ್ಸ್ ಬಯಕೆ ಮತ್ತು ಕ್ರಿಯಾಶೀಲತೆಯ ಮೂಲವಾಗಿದೆ. ರಿಸರ್ಚ್ ಪ್ರಕಾರ ನಿಯಮಿತ ವ್ಯಾಯಾಮ, ಅದರಲ್ಲೂ ವಿಶೇಷವಾಗಿ ಜಿಮ್ ನಲ್ಲಿ ಮಾಡುವ ಸ್ಕ್ವಾಟ್ಸ್ ನಿಂದಾಗಿ ಈ ಹಾರ್ಮೋನ್ ಲೆವೆಲ್ ಸಹಜವಾಗಿ ಹೆಚ್ಚುತ್ತದೆ.
ಆತ್ಮವಿಶ್ವಾಸ ಜಾಗೃತಗೊಳಿಸಿ
ಸ್ಥೂಲತೆ ಆ್ಯಕ್ಟಿವ್ ಸೆಕ್ಸ್ ಗೆ ಶಾಪವೆಂದೇ ಹೇಳಬೇಕು. ಇದರಿಂದಾಗಿ ಬೇಗ ಏದುಸಿರು ಬಂದು ವ್ಯಕ್ತಿ ಸುಸ್ತಾಗುತ್ತಾರೆ. ಸ್ಥೂಲ ವ್ಯಕ್ತಿ ಸಂಗಾತಿಗೆ ಹೆಚ್ಚಿನ ಸುಖ ನೀಡಲಾರರು. ಇದರಿಂದಾಗಿ ಅಂಥವರ ಆತ್ಮವಿಶ್ವಾಸ ಕುಗ್ಗುತ್ತದೆ, ಹಾಗಾಗಿ ಅವರು ಸೆಕ್ಸ್ ನಿಂದ ದೂರ ಓಡುತ್ತಾರೆ. ಜಿಮ್ ನಲ್ಲಿ ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಸ್ಥೂಲತೆ ಸಹಜವಾಗಿ ತಗ್ಗುತ್ತದೆ, ಇದರಿಂದಾಗಿ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚುತ್ತದೆ.
ಎನರ್ಜಿ ಲೆವೆಲ್ ಬೂಸ್ಟ್ ಮಾಡಿ
ನಿಯಮಿತ ವ್ಯಾಯಾಮದಿಂದ ದೇಹದ ಎನರ್ಜಿ ಲೆವೆಲ್ ಬೂಸ್ಟ್ ಆಗುತ್ತದೆ. ಜಿಮ್ ಗೆ ಹೋಗುವುದರಿಂದ, ಬಹಳ ಹೊತ್ತಿನವರೆಗೂ ಕೆಲಸ ಮಾಡಿದರೂ ದೇಹಕ್ಕೆ ದಣಿವಾಗದು. ಸೋಮಾರಿತನ ದೂರ ಓಡುತ್ತದೆ. ಹೀಗಾಗಿ ದೇಹದ ಎನರ್ಜಿ ಲೆವೆಲ್ ಮೇಂಟೇನ್ ಮಾಡಲು ಅಗತ್ಯವಾಗಿ ಜಿಮ್ಗೆ ಹೋಗಿ.
ಪರಾಕಾಷ್ಠೆ ಉತ್ಕಟವಾಗಿರಲಿ
ಸಂಶೋಧನೆಗಳಿಂದ ತಿಳಿದುಬರುವ ಮತ್ತೊಂದು ಸಂಗತಿ, ಯಾವ ಹೆಂಗಸರು ಜಿಮ್ ನಲ್ಲಿ ನಿಯಮಿತ ವ್ಯಾಯಾಮ ಮಾಡುತ್ತಾರೋ, ಅವರು ಸಮಾಗಮದಲ್ಲಿ ಬೇಗ ಉತ್ತೇಜಿತರಾಗುತ್ತಾರೆ, ಸಹಜವಾಗಿ ಅವರ ಪ್ರಣಯ ಪರಾಕಾಷ್ಠೆ ಉನ್ನತವಾಗಿರುತ್ತದೆ. ಅಸಲಿಗೆ, ನಿಯಮಿತ ಜಿಮ್ ನಿಂದಾಗಿ, ಸೆಕ್ಸ್ ಹಾರ್ಮೋನ್ಸ್ ಲೆವಲ್ ಹಿಗ್ಗುತ್ತದೆ. ಇದರಿಂದಾಗಿ ಅವರು ಪ್ರಣಯ ಸುಖದಲ್ಲಿ ಹೆಚ್ಚು ನಲಿಯುತ್ತಾರೆ.
ಬ್ರೀದಿಂಗ್ ಕಂಟ್ರೋಲ್
ಈ ರೀತಿಯ ವ್ಯಾಯಾಮ ಉಸಿರಾಟದ ಮೇಲೆ ಹತೋಟಿ ಕಲಿಸುತ್ತದೆ. ಸರಿಯಾದ ಬ್ರೀದಿಂಗ್ ಟೆಕ್ನಿಕ್ಸ್ ನಿಂದಾಗಿ ಸೆಕ್ಸ್ ನ ಡ್ಯುರೇಶನ್ಪ್ಲೆಶರ್ ಸಹಜವಾಗಿ ಹೆಚ್ಚುತ್ತವೆ.
ಇಷ್ಟೆಲ್ಲ ಲಾಭಗಳ ಬಗ್ಗೆ ತಿಳಿದುಕೊಂಡ ಮೇಲೆ ಜಿಮ್ ವ್ಯಾಯಾಮ ತಪ್ಪಿಸಬೇಡಿ, ಜಾಗಿಂಗ್ನ ಪ್ರಯೋಜನ ಬಿಡಬೇಡಿ. ಇದಕ್ಕಾಗಿ ಬೇಕಾದ ಕ್ರಮ ಅನುಸರಿಸಿ, ನಿಮ್ಮ ವ್ಯಾಲೆಂಟೈನ್ ಡೇ ಪಾರ್ಟಿಯನ್ನು ಸಂಭ್ರಮಿಸಿ!
– ಮೋನಿಕಾ