ಮೊಬೈಲ್, ಕಂಪ್ಯೂಟರ್, ಟಿವಿಗಳಿಂದ ನಿಮ್ಮ ದೃಷ್ಟಿಯನ್ನು ತುಸು ಸರಿಸಿರಿ. ಗಾಜಿನ ಗೋಡೆಗಳ ಆಫೀಸ್ ಅಥವಾ ಮನೆಯ ಸಿಮೆಂಟ್ ಗೋಡೆಗಳ ಆವರಣದಿಂದ ತುಸು ಹೊರಬನ್ನಿ. ಏಕೆಂದರೆ ಇದುವೇ ನಿಮಗೆ ಎಲ್ಲವನ್ನೂ ಮರೆತು ಮೋಜು, ಮಸ್ತಿ ಉಡಾಯಿಸಲು ಸೂಕ್ತ ಸಮಯ. ಮಕ್ಕಳ ಜೊತೆ ಸೇರಿಕೊಂಡು ಆನೆಗಳಿಗೆ ಸ್ನಾನ ಮಾಡಿಸಲು, ಕಟ್ಟಿಗೆಯ ಸೇತುವೆ ದಾಟಲು, ಬಾತುಕೋಳಿಗಳ ಗುಂಪಿನೊಂದಿಗೆ ಆಟವಾಡಿ, ಕುಣಿದಾಡಲು ಇದೀಗ ಸೂಕ್ತ ಸಮಯ. ಬನ್ನಿ, ಖುಷಿ ಮತ್ತು ಪ್ರೀತಿಯಲ್ಲಿ ಮಿಂದೇಳಿ. ಇಟ್ಸ್ ಟೈಂ ಟು ಕಮ್ ಔಟ್‌ಪ್ಲೇ!
ಹೌದು, ಪ್ರತಿನಿತ್ಯದ ಯಾಂತ್ರಿಕ, ನೀರಸ ದಿನಚರಿಗೆ ಬೈ ಬೈ ಹೇಳಿ ಮಕ್ಕಳು, ಕುಟುಂಬದ ಜೊತೆ ಕೇರಳದ ಪ್ರವಾಸಕ್ಕೆ ಹೊರಟುಬಿಡಿ, ಅಲ್ಲಿನ ರೋಮಾಂಚನವನ್ನು ಮನದಣಿಯೆ ಸವಿಯಿರಿ.
ಸಾಗರದ ಸರ್‌ಪ್ರೈಸಸ್ ನೀಲಾಕಾಶವನ್ನಂತೂ ನೀವು ದಿನ ನೋಡುತ್ತಲೇ ಇರುತ್ತೀರಿ, ಆದರೆ ಉಕ್ಕಿ ಬರುವ ಅಲೆಗಳ ಮೇಲೆ ಇಡೀ ದಿನದ ವಿವಿಧ ಕಾಲಘಟ್ಟಗಳಲ್ಲಿ ಬಣ್ಣ ಬದಲಾಯಿಸುವ ಅವಕಾಶವನ್ನು ನೋಡುವುದು ಬಲು ರೋಮಾಂಚಕಾರಿ. ನೀವು ಸಾಗರತೀರಗಳನ್ನು ಹೆಚ್ಚಾಗಿ ಬಯಸುವವರಾದರೆ, ಅಗತ್ಯವಾಗಿ ಕೇರಳ ಪ್ರವಾಸಕ್ಕೆ ಸಜ್ಜಾಗಿ. ಇಲ್ಲಿ ನೀಲಿ ಸಾಗರ ತೀರದಲ್ಲಿ ತೂಗಾಡುವ ರಾಶಿ ರಾಶಿ ತೆಂಗಿನ ಮರಗಳ ನೆರಳಲ್ಲಿ ಸರ್ಫಿಂಗ್ ನಡೆಸುವ ಮಜವೇ ಬೇರೆ! ಸಾಗರದ ಉಬ್ಬರವಿಳಿತಗಳ ಅಲೆಗಳ ಮಧ್ಯೆ ನಿಮ್ಮ ರೇಂಜರ್ ಸೀಳಿಕೊಂಡು ಮುನ್ನುಗ್ಗುವ ರೋಮಾಂಚಕಾರಿ ಸಾಹಸ ವರ್ಣನಾತೀತ. ಸರ್ಫಿಂಗ್ ನಂತರ ಇಲ್ಲಿ ಲಭ್ಯವಿರುವ ವೈವಿಧ್ಯಮಯ ಸೀಫುಡ್ಸ್ ನಿಂದ ನಿಮ್ಮ ಹಸಿವನ್ನು ತಣಿಸಿ, ಬಾಯಿ ಚಪ್ಪರಿಸಿ.
ಸಾಗರ ತೀರದಲ್ಲಿ ನಿಮಗೆ ಬೇಕಾದಷ್ಟು ಸರ್ಪ್ರೈಸಸ್ ಕಾದಿವೆ. ನಿಮಗೆ ಇವನ್ನೆಲ್ಲ ನೋಡಿ ನಲಿಯುವ, ಆನಂದಿಸುವ ಆಕಾಂಕ್ಷೆ ಇರಬೇಕಷ್ಟೆ. ಇಲ್ಲಿನ ಬೆಸ್ತರ ಜೊತೆ ದೋಸ್ತಿ ಮಾಡಿ. ಅವರು ಹೇಗೆ ಮೀನು ಹಿಡಿಯುತ್ತಾರೆಂದು ಗಮನಿಸಿ. ಸಾಗರ ತಟದಲ್ಲಿ ನಿಂತು ಸೂರ್ಯೋದಯ, ಸೂರ್ಯಾಸ್ತಗಳನ್ನು ನೋಡಿ ಸಂಭ್ರಮಿಸಿ. ಆಗ ಉಕ್ಕಿ ಬರುವ ಹೆದ್ದೆರೆಗಳೊಂದಿಗೆ ಚಿನ್ನಾಟವಾಡಿ. ಇಲ್ಲಿನ ಕವಡೆ, ಕಪ್ಪೆಚಿಪ್ಪು ಆರಿಸಿ ಮಾಲೆ ಕಟ್ಟಿ ಧರಿಸಿ ಆನಂದಿಸಿ. ಕೇರಳದ ಸಾಗರತೀರ ವಿಶ್ವದ ಎಲ್ಲಾ ಪ್ರವಾಸಿಗರನ್ನೂ ತನ್ನತ್ತ ಕೈ ಬೀಸಿ ಕರೆಯುತ್ತದೆ, ಆಕರ್ಷಿಸುತ್ತದೆ. ಇಲ್ಲಿನ ಪ್ರಮುಖ ಸಮುದ್ರ ತಟಗಳೆಂದರೆ ಚೇರೈ, ಬೇಕ್, ಕಪ್ಪಡ್, ಕೋಲಂ, ಧರ್ಮದಂ, ಮರಾರಿ ಕೊಚ್ಚಿನ್, ಇತ್ಯಾದಿ.
ಫನ್ ಆ್ಯಕ್ಟಿವಿಟೀಸ್
ಫ್ರೆಂಡ್ಸ್ ಫ್ಯಾಮಿಲಿ ಜೊತೆ ಕ್ವಾಲಿಟಿ ಟೈಂ ಕಳೆಯುವುದಕ್ಕಾಗಿ ಬೀಚ್‌ಲಸ್ಯಾಂಡ್, ರೇನ್ ಫಾರೆಸ್ಟ್ ಯಾ ಹೌಸ್‌ಬೋಟ್‌ಗಳ ಜೊತೆಗಿಂತ ಮತ್ತಾವುದು ಬೆಟರ್? ಇಂಥದರಲ್ಲಿ ಕೆಲವು ಫನ್ ಆ್ಯಕ್ಟಿವಿಟೀಸ್ ಕೂಡ ಇದ್ದುಬಿಟ್ಟರೆ ಇನ್ನು ಹೇಳಲಿಕ್ಕೇನು? ಬೀಚ್‌ಸ್ಯಾಂಡ್ ಮೇಲೆ ಫ್ಯಾಮಿಲಿ ಕ್ರಿಕೆಟ್ ಟೂರ್ನಮೆಂಟ್, ಸ್ಲೋ ಸೈಕ್ಲಿಂಗ್, ಫುಟ್‌ಬಾಲ್ ಇತ್ಯಾದಿಗಳ ಮಜಾ ಪಡೆಯಿರಿ. ನಿಮ್ಮ ಪ್ರತಿಯೊಂದು ಕ್ಷಣಗಳನ್ನೂ ಕ್ರಮಬದ್ಧ ವಿಧಾನದಲ್ಲಿ ಫೋಟೋ ಮೂಲಕ ಸಂಗ್ರಹಿಸುತ್ತಿರಿ, ಸಾಧ್ಯವಾದರೆ ವಿಡಿಯೋ ಶೂಟ್ ಕೂಡ ಮಾಡಿ. ನಿಮ್ಮವರೊಂದಿಗೆ ಕಳೆದ ಈ ಅಮೂಲ್ಯ ಕ್ಷಣಗಳು ಎಂದೆಂದಿಗೂ ಅನನ್ಯ.
ಬ್ಯಾಕ್‌ವಾಟರ್ಸ್
ಈ ಹಿನ್ನೀರಿನ ಜಲರಾಶಿ ಮಧ್ಯೆ ನಿಮಗೆ ಅತಿ ದುರ್ಲಭ ಹಾಗೂ ಸೊಬಗಿನಿಂದ ಕೂಡಿದ ವೈವಿಧ್ಯಮಯ ಜಲಚರಗಳ ಒಡನಾಟ, ಹತ್ತಿರದಿಂದ ಗಮನಿಸಲು ಸಾಧ್ಯ. ಉದಾ : ಕಪ್ಪೆ, ಏಡಿ, ಸೀಗಡಿ, ಮಡ್‌ಸ್ಕಿಪರ್, ಕಿಂಗ್‌ಫಿಶರ್, ಆಮೆ, ಡಾರ್ಟರ್, ಕೋರ್ಟಕ್….. ಇತ್ಯಾದಿ. ಈ ಹಿನ್ನೀರಿನ ಹಿಂಬದಿಯಲ್ಲಿ ಕಂಡುಬರುವ ಸಸ್ಯಶ್ಯಾಮಲ ಸಮೃದ್ಧ ಹಸಿರು, ಖರ್ಜೂರದ ರಾಶಿ ಮರಗಳು ಎಲ್ಲೆಲ್ಲೂ ವನದೇವಿಯ ದರ್ಶನ ಮಾಡಿಸುತ್ತದೆ. ಕೇರಳದ ಈ ನೈಸರ್ಗಿಕ ಹಿನ್ನೀರ ಸೊಬಗು ನಿಮಗೆ ಬೇರೆಲ್ಲೂ ಕಾಣಸಿಗದು. ಮುಖ್ಯವಾಗಿ ಕೊಲ್ಲಮ್, ಅಲೆಪ್ಪಿ, ಕೋಳಿಕ್ಕೋಡ್, ಕೊಚ್ಚಿನ್ ಬ್ಯಾಕ್ ವಾಟರ್ಸ್ ರಮ್ಯವಾದ ಹೌಸ್‌ಬೋಟ್ ಪಯಣ ಕೇರಳದ ಅಸಂಖ್ಯಾತ ಜಲಸ್ರೋತಗಳ ಜೊತೆ ಹರಿಯುತ್ತಾ, ಇಲ್ಲಿನ ಜೀವನವನ್ನು ನಿಕಟತೆಯಿಂದ ನೋಡುವುದೇ ರೋಮಾಂಚಕಾರಿ ಎನಿಸುತ್ತದೆ. ಹೌಸ್‌ಬೋಟ್‌ನಲ್ಲಿ ಕುಳಿತು ಜಲರಾಶಿಯಲ್ಲಿ ತೇಲುತ್ತಾ, ಹೊಸತಾದ ಅನುಭೂತಿ ಹೊಂದಿರಿ. ಇದರ ಡೆಕ್ ಬಲು ಸುಂದರ. ಅದರಲ್ಲಿ ಕುಳಿತು ಬ್ಯಾಕ್‌ವಾಟರ್‌ನ ಸೌಂದರ್ಯ ಸವಿಯುವುದೆಂದರೆ ಒಂದು ವಿಭಿನ್ನ ಅನುಭವ ನೀಡುತ್ತದೆ.
ಮಸಾಲೆ ತೋಟಗಳ ಮಧ್ಯೆ
ಕೇರಳದಲ್ಲಿ ಮಸಾಲೆ ಪದಾರ್ಥಗಳ ವೈವಿಧ್ಯಮಯ ತೋಟಗಳಿವೆ. ಇಲ್ಲಿನ ಸ್ಥಳೀಯರು ಪ್ರವಾಸಿಗರನ್ನು ಅಂಥ ಕಡೆ ಕರೆದೊಯ್ದು, ಅವನ್ನು ಬೆಳೆಸುವ ವಿಧಾನ, ಗಿಡಮೂಲಿಕೆಗಳ ಪ್ರಯೋಜನಗಳ ಕುರಿತು ವಿಸ್ತಾರವಾಗಿ ತಿಳಿಸುತ್ತಾರೆ. ಇವನ್ನೆಲ್ಲ ತಿಳಿಯುವುದೇ ಒಂದು ಬೊಂಬಾಟ್ ಅನುಭವ. ಕಾಳುಮೆಣಸಿನ ಬಳ್ಳಿ, ತನಗೆ ಆಸರೆ ನೀಡುವ ಯಾವುದೇ ಮರವನ್ನು ಹಬ್ಬಿಕೊಂಡು ಹೇಗೆ ಬೆಳೆಯುತ್ತದೆ ಎಂಬುದನ್ನು ನೋಡಿ ತಣಿಯಬೇಕು. ಇಲ್ಲಿ ಹಸಿರಾದ ಕಾಳುಮೆಣಸು ಗೊಂಚಲು ಗೊಂಚಲಾಗಿ ತೂಗಾಡುತ್ತವೆ. ಅದೇ ತರಹ ದೊಡ್ಡ ದೊಡ್ಡ ಗಾತ್ರದ ಏಲಕ್ಕಿ ಎಲೆಗಳು ನೋಡಲು ಮನೋಹರ! ಈ ಬೆಳೆ ಕೇವಲ 4-5 ದಿನಗಳಲ್ಲಿ ಸಮೃದ್ಧವಾಗಿ ಫಸಲು ನೀಡುತ್ತದೆ ಎಂದರೆ ಎಂಥ ಆಶ್ಚರ್ಯಕರ! ಇಂಗಿನ ಮರದ ಕೊಂಬೆಗಳನ್ನು ಸೀಳಿ, ಅದರಿಂದ ಹಾಲಿನಂಥ ದ್ರವ ಪದಾರ್ಥ ಸೆಳೆದು, ಹಿಂಗಿಸಿ ಇಂಗನ್ನು ತಯಾರಿಸುತ್ತಾರಂತೆ.ಇದೇ ತರಹ ಚಕ್ಕೆ, ಲಂಗ, ಪಲಾವ್‌ಎಲೆ, ಶುಂಠಿ, ಅರಿಶಿನ…… ಇನ್ನೂ ಎಷ್ಟೆಷ್ಟೋ ಮಸಾಲೆ ಗಿಡಗಳನ್ನು ಕಂಡು ಕಣ್ತುಂಬಿಸಿಕೊಳ್ಳಿ. ಇಲ್ಲಿನ ಸ್ಥಳೀಯ ವರ್ತಕರಿಂದ ಅಗ್ಗದ (ಚೌಕಾಸಿ ಮಾಡುತ್ತಾ) ಬೆಲೆಗೆ ಇವನ್ನು ಕೊಂಡು, ಕೇರಳದ ವಿಶೇಷ ರೆಸಿಪೀಸ್‌ಸವಿಯಲು ಮರೆಯದಿರಿ.
ರೋಮಾಂಚನ ಹಾಗೂ ಸಾಹಸ
ಜೀವನದಲ್ಲಿ ರೋಮಾಂಚನ ಮತ್ತು ಸಾಹಸ ಕಾಣಬೇಕೆಂದರೆ, ಕೇರಳ ನಿಮಗೆ ಅಚ್ಚುಕಟ್ಟಾದ ಜಾಗ. ಇಲ್ಲಿ ನೀವು ಮನಸ್ಸು ತೆರೆದು ಟ್ರೆಕಿಂಗ್, ಪ್ಯಾರಾಗ್ಲೈಡಿಂಗ್, ವಿಂಡ್ ಸರ್ಫಿಂಗ್, ರಾಫ್ಟಿಂಗ್, ಪ್ಯಾರಾಸೈಕ್ಲಿಂಗ್ ಇತ್ಯಾದಿಗಳ ಮೋಜು ಉಡಾಯಿಸಿ.
ಕೇರಳದ ಬ್ಯಾಕ್ ವಾಟರ್ಸ್‌ನಲ್ಲಿ ಟ್ರೆಕಿಂಗ್‌ನ ಅನುಭವ ಬೇರಾವುದೇ ಸ್ಥಳದ ಟ್ರೆಕಿಂಗ್‌ಗಿಂತಲೂ ಎಷ್ಟು ಉತ್ಕೃಷ್ಟ ಎಂಬುದನ್ನು ಅನುಭವಿಸಿ ಸವಿಯಿರಿ. ಟ್ರೆಕಿಂಗ್‌ಗಾಗಿ ಕೇರಳದಲ್ಲಿ ಪೆರಿಯಾರ್ ನದಿತೀರ ಎಲ್ಲಕ್ಕೂ ಉತ್ತಮವಾದುದು. ಸಫಾರಿ, ಬಂಬೂ ರಾಫ್ಟಿಂಗ್, ಕ್ಯಾಂಪ್ಸ್, ಪ್ಲಾಂಟೇಶನ್ಸ್ ಇತ್ಯಾದಿಗಳ ಮಜಾ ಪಡೆಯಲು ಕನಿಷ್ಠ 1 ವಾರವಾದರೂ ಇಲ್ಲಿ ಉಳಿಯಬೇಕು.
ಕೇರಳದ ಟ್ರೆಕಿಂಗ್‌ಅನುಭವಕ್ಕಾಗಿ ತುಂಬಾ ಹೊತ್ತೇನೂ ಬೇಕಾಗದು. ಒಟ್ಟಾರೆ 3-4 ದಿನಗಳಲ್ಲಿ ನೀವು ಇಲ್ಲಿ ರೇನ್ ಫಾರೆಸ್ಟ್ ಟ್ರೆಕಿಂಗ್‌ನ್ನು ಧಾರಾಳವಾಗಿ ಎಂಜಾಯ್ ಮಾಡಬಹುದು. ದಾರಿ ಮಧ್ಯೆ ಅಂತೂ ನಿಮಗೆ ನೋಡಲು ಬೇಕಾದಷ್ಟು ಸಿಗುತ್ತದೆ. ದಟ್ಟ ಕಾಡುಗಳ ಮೋಹಕ ಹಸಿರು, ತರತರಹದ ವನ್ಯಮೃಗ, ಪಕ್ಷಿಗಳು, ಬೆಟ್ಟಗುಡ್ಡಗಳ ಕಣಿವೆಗಳು ನದಿನಾಲೆಗಳು, ದುರ್ಲಭ ಹೂರಾಶಿಯ ಸುಗಂಧ, ಸೂರ್ಯೋದಯ, ಅಸ್ತಮಾನ, ದಟ್ಟವಾಗಿ ಕವಿಯುವ ಮೋಡಗಳ ಚಿತ್ರವಿಚಿತ್ರ ಆಕಾರ ನಿಮ್ಮನ್ನು ಪರವಶಗೊಳಿಸುತ್ತವೆ.
ನೀವು ರಾತ್ರಿ ಹೊತ್ತು ಕಾಡಿನಲ್ಲಿ ಕ್ಯಾಂಪ್ ಹೂಡಿ, ಅಲ್ಲಿ ಕ್ಯಾಂಫ್‌ಫೈರ್ ನಡೆಸಿದರೆ ಅದಕ್ಕಿಂತ ಏನು ಬೇಕು? ಇಲ್ಲಿನ ನದಿಗಳಲ್ಲಿ ರಾಫ್ಟಿಂಗ್ ನಡೆಸುವುದಂತೂ ನಿಜಕ್ಕೂ ಮರೆಯಲಾಗದ ಅನುಭವ!