ಬಾಲಿವುಡ್‌ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಬಹುತೇಕ ನಟಿಯರು ತಮ್ಮ ತೆಳುಕಾಯ ಇನ್ನಷ್ಟು ಚಂದ ಕಾಣಬೇಕೆಂದು, ಮುಖದ ಕಳೆ ಹೆಚ್ಚಿಸಲೆಂದು ಈ ರೀತಿಯ ಮೇಕಪ್‌ಗೆ ಮೊರೆಹೋಗುತ್ತಾರೆ. ಆದರೆ ಅವರ ತೆಳುಕಾಯಕ್ಕೆ ಹೊಂದದೆ ಅವರ ಮುಖ ಬೇರೆ ತರಹ ಇರುತ್ತದೆ, ಭಾರಿ ಎನಿಸುತ್ತದೆ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ಇಲ್ಲ ಅಲ್ಲವೇ…? ಏಕೆಂದರೆ ಅಲ್ಲೇನೂ ಲೋಪದೋಷ ಕಾಣಿಸದಂತೆ ಈ ತರಹದ ಮೇಕಪ್‌ನಿಂದ ಮುಖವನ್ನು ಅಷ್ಟು ಬ್ಯೂಟಿಫುಲ್ ಮಾಡಿಕೊಳ್ಳುತ್ತಾರೆ. ಇದಕ್ಕೆಲ್ಲ ಕೆಲವು ಸ್ಲಿಮಿಂಗ್‌ ಮೇಕಪ್‌ ಟೆಕ್ನಿಕ್ಸ್ ಮೂಲಾಧಾರ. ಇದರಿಂದ ದುಬಾರಿ ಸರ್ಜರಿಯ ನೆರವಿಲ್ಲದೆ ನಿಮ್ಮ ಮುಖವನ್ನು ತೆಳು ಹಾಗೂ ಸುಂದರವಾಗಿ ತೋರಿಸಬಹುದು.

ಪರ್ಫೆಕ್ಟ್ ಐಸ್

ಸ್ಲಿಮಿಂಗ್‌ ಮೇಕಪ್‌ ಟೆಕ್ನಿಕ್‌ನಲ್ಲಿ ಮುಖ್ಯವಾಗಿ ಕಣ್ಣುಮೂಗು ಹುಬ್ಬುಗಳು ಇತ್ಯಾದಿ ಎಲ್ಲ ನೀಟಾಗಿ ಕಾಣುವಂತೆ ಮಾಡಲಾಗುತ್ತದೆ. ಉದಾ : ನಿಮ್ಮ ಕೆನ್ನೆ ತುಂಬಿಕೊಂಡಿದೆ ಎನಿಸಿದರೆ, ಅವನ್ನು ತುಸು ಕಡಿಮೆ ಮಾಡಿ ತೋರಿಸಲು, ಕಂಗಳ ಮೇಕಪ್‌ ಹೇಗಿರಬೇಕೆಂದರೆ ಸಣ್ಣ ಕಂಗಳು ಸಹ ದೊಡ್ಡದಾಗಿ ಕಾಣುವಂತಿರಬೇಕು. ಅದಕ್ಕಾಗಿ ಈ ಸಲಹೆ ಅನುಸರಿಸಿ :

ಕೃತಕ ರೆಪ್ಪೆ ಬಳಸಿರಿ. ನೈಜ ರೆಪ್ಪೆಯ ಜೊತೆ ಬೆರೆಸಿ, ಮಸ್ಕರಾದ ಡಬಲ್ ಕೋಟಿಂಗ್‌ ಮಾಡಿ.

ಔಟರ್‌ ಕಾರ್ನರ್‌ ಬಳಿ ಲೈನರ್‌ನ್ನು ಸ್ಮಜ್‌ ಮಾಡಿ ಹಚ್ಚಿರಿ.

ಬ್ಲ್ಯಾಕ್‌ ಕಾಜಲ್ ಬದಲು ಲೈಟ್‌ ಪೆನ್ಸಿಲ್ ‌ಬಳಸಿರಿ.

ಲೈನರ್‌ ಹಚ್ಚುವಾಗ ಮೇಲಿನ ರೆಪ್ಪೆಗೆ ಲೈನರ್‌ನ ದಪ್ಪ ಲೈನ್‌ ಹಾಗೂ ಕೆಳ ರೆಪ್ಪೆಗೆ ತೆಳು ಲೈನ್‌ ಎಳೆಯಿರಿ.

ಕ್ಯಾಟ್‌ ಐಸ್‌ ಲುಕ್‌ ಕ್ರಿಯೇಟ್‌ ಮಾಡಿ. ಆದರೆ ಬ್ಲ್ಯಾಕ್‌ ಕಲರ್‌ ಬಳಸಬೇಡಿ, ಬದಲಿಗೆ ಬ್ಲ್ಯಾಕ್‌ನ್ನು ಶೇಡಿಂಗ್‌ ಸಮಯದಲ್ಲಿ ಮಾತ್ರ ಬಳಸಿರಿ.

ಕಂಗಳನ್ನು ದೊಡ್ಡದಾಗಿ ತೋರಿಸಲು ಕಲರ್‌ ಬ್ಲಾಸ್ಟ್ ಯಾ ಕಾಂಟ್ರಾಕ್ಟ್ ಲೈನರ್‌ ಬಳಸಿರಿ.

ಕೆಳ ಭಾಗದ ರೆಪ್ಪೆಗೆ ಪಾರದರ್ಶಕ ಮಸ್ಕರಾ ಹಚ್ಚಿರಿ.

ಕಂಗಳನ್ನು ಬೋಲ್ಡ್ ಆಗಿಸಲು ಕಲರ್‌ ಕಾಂಟ್ಯಾಕ್ಟ್ ಲೆನ್ಸ್ ಬಳಸಿರಿ.

ಕಂಗಳ ರೆಪ್ಪೆ ಮೇಲೆ ಶಿಮರ್‌ ಬೇಜ್‌ ಐ ಶೇಡ್‌ನ್ನು ಬಳಸಿ.

ಐ ಶೇಡ್‌ನ 2-3 ಕಲರ್‌ ಮ್ಯಾಚ್‌ ಮಾಡಿ ಐ ಮೇಕಪ್‌ ಮಾಡುವುದರಿಂದ ಕಂಗಳು ಮತ್ತಷ್ಟು ಎದ್ದು ಕಾಣುತ್ತವೆ.

ಜೂಸಿ ಲಿಪ್ಸ್

ಸ್ಲಿಮಿಂಗ್‌ ಮೇಕಪ್‌ ಟೆಕ್ನಿಕ್‌ನಲ್ಲಿ ಚಬ್ಬಿ ಚೀಕ್ಸ್ ನ್ನು ತಗ್ಗಿಸಿ ತೋರಿಸಲು ತುಟಿಗಳನ್ನು ಕೂಡ ಎತ್ತಿ ತೋರಿಸಬೇಕು. ಮೇಕಪ್

ಆರ್ಟಿಸ್ಟ್ ಸ್ಲಿಮಿಂಗ್‌ ಮೇಕಪ್‌ ಟೆಕ್ನಿಕ್‌ನ್ನು ಬಳಸಿ ಸ್ಕಿನ್‌ ಟೋನ್‌ಗೆ ತಕ್ಕಂತೆ, ತುಟಿಗಳ ಬ್ಯೂಟಿ ಮತ್ತಷ್ಟು ಢಾಳಾಗಿ ಎದ್ದು ಕಾಣುವಂತೆ, ಸೆನ್ಶುಯೆಲ್ ‌ಲಿಪ್‌ ಸ್ಟಿಕ್‌ ಶೇಡ್‌ ಬಳಸುತ್ತಾರೆ.

ಲಿಪ್‌ಸ್ಟಿಕ್‌ನ್ನು ಸದಾ ತುಟಿಗಳ ಮೂಲೆಯಿಂದ ಮಧ್ಯ ಭಾಗದಲ್ಲಿ ತುಂಬಿಸಬೇಕು.

ಲಿಪ್‌ಸ್ಟಿಕ್‌ ಹಚ್ಚಿದ ನಂತರ ಅದರ ಮೇಲೆ ಲಘುವಾಗಿ ಲಿಪ್‌ ಗ್ಲಾಸ್‌ ಯಾ ಹೈಗ್ಲಾಸ್‌ ತೀಡಿರಿ.

ಲಿಪ್‌ಸ್ಟಿಕ್‌ ಹಚ್ಚಿದ ಮೇಲೆ ಮ್ಯಾಟ್‌ ಎಫೆಕ್ಟ್ ಗಾಗಿ ಟಿಶ್ಶು ಪೇಪರ್‌ ಇರಿಸಿ, ಪೌಡರ್‌ ಹಚ್ಚಿರಿ.

ಗ್ಲಾಮರಸ್‌ ಲುಕ್ಸ್ ಗಾಗಿ, ರೆಗ್ಯುಲರ್‌ ಲಿಪ್‌ಸ್ಟಿಕ್‌ಗೆ ಗೋಲ್ಡ್ ಪಿಗ್ಮೆಂಟ್‌ ಮಿಕ್ಸ್ ಮಾಡಿ.

ಮ್ಯಾಕ್‌ ಕ್ರೆವ್‌ ಸ್ಟಿಕ್‌ ಲಿಪ್‌ ಲೈನರ್‌ನಿಂದ ತುಟಿಗಳಿಗೆ ಸೆನ್ಶುಯೆಸ್‌ ಲುಕ್ಸ್  ನೀಡಿ.

ಡೆಡ್‌ ಸ್ಕಿನ್‌ ತೊಲಗಿಸಲು, ತುಟಿಗಳಿಗೆ ಲಿಪ್‌ ಬಾಮ್ ತೀಡಿ ಟೂತ್‌ಬ್ರಶ್‌ನಿಂದ ಜೆಂಟ್ಲಿ ರಬಿಂಗ್‌ ಮಾಡಿ.

ಫನ್‌ ಲವಿಂಗ್‌ ಲುಕ್ಸ್ ಗಾಗಿ ರೂಬಿ ರೆಡ್‌, ಪ್ಲಮ್, ಪಿಂಕ್‌, ಸ್ಪ್ಯಾನಿಶ್‌ ಪಿಂಕ್‌, ಪೀಚ್‌ ಇತ್ಯಾದಿ ಆರಿಸಿಕೊಳ್ಳಿ.

ನೈಟ್‌ ಪಾರ್ಟಿಗಳಿಗೆ ಡಾರ್ಕ್‌ ಕಲರ್‌ ಲಿಪ್‌ಸ್ಟಿಕ್‌ ಬಳಸಿರಿ.

ಲಿಪ್‌ ಲೈನರ್‌ ಲಿಪ್‌ಸ್ಟಿಕ್‌ನ್ನು ಪರ್ಫೆಕ್ಟ್  ಬ್ಲೆಂಡ್‌ ಮಾಡಿ. ಇವೆರಡರ ಬಣ್ಣ ಒಂದೇ ಆಗಿರಲಿ.

ಲಿಪ್‌ಸ್ಟಿಕ್‌ ಪಾಲಿಶ್ಡ್, ಮ್ಯಾಟಿ, ಪೇಮಿ, ನಿಯಾನ್‌ ಇತ್ಯಾದಿ ಏನೇ ಆಗಿರಲಿ, ಸ್ಕಿನ್‌ ಟೋನ್‌ಗೆ ತಕ್ಕಂತಿರಲಿ.

ಫೇಸ್‌ ಬೇಸ್‌ ಮೇಕಪ್‌

ಈ ಟೆಕ್ನಿಕ್‌ನಲ್ಲಿ ಫೇಸ್‌ ಕಂಟೂರಿಂಗ್‌ನ ಜ್ಞಾನ ಅಗತ್ಯ ಇರಬೇಕು. ಕಂಟೂರಿಂಗ್‌ ಮೂಲಕ ನಿಮ್ಮ ಚೀಕ್‌ ಬೋನ್ಸ್  ಜಾ ಲೈನ್‌ನ್ನು ಎದ್ದು ಕಾಣುವಂತೆ ಮಾಡಬಹುದು. ಜೊತೆಗೆ ಚಬ್ಬಿ ಚೀಕ್ಸ್, ಡಬಲ್ ಚಿನ್‌, ದಪ್ಪ ಮೂಗು, ಪಫಿ ಐಸ್‌ ಇತ್ಯಾದಿ ಪ್ರಾಬ್ಲಮ್ಸ್ ಕೂಡ ಸರಿಪಡಿಸಬಹುದು. ಇದಕ್ಕಾಗಿ ನೀವು ಸ್ಕಿನ್‌ ಶೇಡ್‌ನಿಂದ 2-3 ಬಗೆ ಡಾರ್ಕ್‌ ಶೇಡ್‌ ಫೌಂಡೇಶನ್‌ನ್ನು ಬಳಸಿ ಕಂಟೂರಿಂಗ್

ಮಾಡಲು ಬಳಸಬಹುದು ಹಾಗೂ ಫೌಂಡೇಶನ್‌ನಿಂದ ಸ್ಕಿನ್‌ನಲ್ಲಿ 2-3 ಲೈಟ್‌ ಶೇಡ್ಸನ್ನು ಆರಿಸಿ ಹೈಲೈಟಿಂಗ್‌ ಮಾಡಿ.

ಹೈಲೈಟಿಂಗ್‌ ಏರಿಯಾ

ಬೇಸಿಕಲಿ ಟೀ ಝೋನ್‌ (ಹಣೆಯ ನಡುವೆ, ಮೂಗಿನ  ಬ್ರೀಜ್‌ ಲೈನ್‌ ಮತ್ತು ಚಿನ್‌ ಸೆಂಟರ್‌ನಲ್ಲಿ) ಮತ್ತು ಅಂಡರ್‌ ಐ ಏರಿಯಾ ಹೈ ಲೈಟಿಂಗ್‌ ಪಾಯಿಂಟ್‌ ಎನಿಸುತ್ತದೆ. ಡಾರ್ಕ್‌ ಶೇಡಿಂಗ್‌ ಏರಿಯಾ ಔಟರ್‌ ಪೋರ್ಶನ್‌ ಫೇಸ್‌ ಚೀಕ್‌ ಬೋನ್‌ನಿಂದ ಒಳಭಾಗದ ಕಡೆ ಕೆಳಗೆ, ನೆಕ್‌ ಲೈನ್‌ ಶೇಡಿಂಗ್‌ ಪಾಯಿಂಟ್‌ ಇದ್ದು, ಡಾರ್ಕ್‌ ಫೌಂಡೇಶನ್‌ ಶೇಡ್‌ ಬಳಸಬೇಕು. ನ್ಯಾಚುರಲ್ ಲುಕ್ಸ್ ಗಾಗಿ ಅಗತ್ಯ ಬ್ಲೆಂಡಿಂಗ್‌ ಮಾಡಿ.

ಬ್ಲಶರ್‌ ಟೆಕ್ನಿಕ್ಸ್

ಒಂದೇ ಬ್ಲಶರ್‌ ಪಿಲ್ಯಾಟ್‌ನಿಂದ 3 ಬಣ್ಣದ ಬ್ಲಶ್‌ ಟೋನ್‌ ತೆಗೆದುಕೊಳ್ಳಿ. ಡಾರ್ಕ್‌ ಶೇಡ್‌ನ ಬ್ಲಶರ್‌ ಚೀಕ್‌ ಬೋನ್ಸ್ ಗಿಂತ ಕೆಳಗೆ ಬರಲಿ. ನಂತರ ಬ್ಲೆಂಡ್‌ ಮಾಡಿ. ಮೀಡಿಯಂ ಶೇಡ್‌ ಚೀಕ್‌ ಬೋನ್ಸ್ ನಲ್ಲಿ ಮತ್ತು ಡಾರ್ಕ್‌ ಶೇಡ್‌ ನಡುವಿನ ಭಾಗದಲ್ಲಿ ಹಚ್ಚಿ ಬ್ಲೆಂಡ್‌ ಮಾಡಬೇಕು. ಪರ್ಫೆಕ್ಟ್ ಐ ಬ್ರೋಸ್‌ನಿಂದಲೂ ಮುಖವನ್ನು ತೆಳ್ಳಗೆ ಮಾಡಿ ತೋರಿಸಬಹುದು. ಇದಕ್ಕಾಗಿ ಐ ಬ್ರೋಸ್‌ನ್ನು ಆರ್ಚ್‌ ಶೇಪ್‌ನಲ್ಲಿ ಮಾಡಿಸಿ. ಇದರಿಂದ ಕಂಗಳು ಹೆಚ್ಚು ದೊಡ್ಡದಾಗಿಯೂ ಎದ್ದು ಕಾಣುತ್ತದೆ, ಮುಖ ಸ್ಲಿಮ್ ಆಗಿ ಕಾಣುತ್ತವೆ. ಐ ಬ್ರೋಸ್‌ ಡಿಫೈನ್‌ ಮಾಡಲು ಹೈಲೈಟರ್‌ ಹಚ್ಚಿ ಬೆರಳುಗಳಿಂದ ಬ್ಲೆಂಡ್‌ ಮಾಡಿ. ಐ ಬ್ರೋಸ್‌ ಶೇಪ್‌ನ್ನು ಥಿಕ್‌ ಲಾಂಗ್‌ ಲೆಂಥ್‌ ಮಾಡಿಸಿ.

ಬೆಸ್ಟ್ ಹೇರ್‌ ಕಟ್‌ ಹೇರ್‌ಸ್ಟೈಲ್

‌ಮೀಡಿಯಂ ಲೆಂಥ್‌ ಹೇರ್‌ ವಿತ್‌ ಸೈಡ್‌ ಬ್ಯಾಂಗ್‌ಕಟ್‌ ಆರಿಸಿ ಅಥವಾ ಮಿಕ್ಸ್ ಲಾಂಗ್‌ ಲೆಂಥ್‌ ಲೇಯರ್‌ ಯಾ ಪೇರ್ ಕಟಿಂಗ್‌ ಆರಿಸಿ. ಇದು ಮುಖಕ್ಕೆ ಸ್ಲಿಮ್ ಲುಕ್ಸ್ ಒದಗಿಸುತ್ತದೆ. ಆದರೆ ಕೂದಲು ಗಿಡ್ಡಾಗಿದ್ದರೆ, ಆಗ ಶಾರ್ಪ್‌ ಬಾಲ್ ‌ವಿತ್‌ ಸ್ಟ್ರೇಟ್‌ಪಾಯಿಂಟ್‌ನಿಂದ ನ್ಯೂ ಕಟ್‌ ನೀಡಬಹುದು. ಇದರಿಂದ ಸಹಜ ಸೌಂದರ್ಯ ಎದ್ದು ಕಾಣುತ್ತದೆ. ಇದರ ಹೊರತಾಗಿ ಬೋಲ್ಡ್

ಬ್ಯಾಂಗ್‌, ಸ್ಕಿಲ್ ‌ವಿತ್‌ ಸ್ಟ್ರೇಟ್‌ ಕಟ್‌. ಮಲ್ಟಿ ಲೇಯರ್ಸ್‌, ಏ ಲೈನ್‌ ಸ್ಟ್ರೇಟ್‌ ಕಟ್‌, ಹೈ ಬನ್‌ ವಿತ್‌ ಬ್ಯಾಂಗ್‌, ವಾಟರ್‌ ಫಾಲ್ ಟ್ವಿಸ್ಟ್ ವಿತ್‌ ಕರ್ಲ್ಸ್, ಹಾಫ್‌ ಅಪ್‌ ಡೂ ಫಂಕಿ ಬನ್‌, ಓಪನ್‌ ಹೇರ್‌ ಸ್ಟೈಲ್ ವಿತ್‌ ಕಲ್ಸ್, ಟೈಟ್‌ ಕರ್ಲ್ ವಿತ್‌ ಫ್ರಿಂಜ್ಸ್, ಸೈಡ್‌ ಟ್ವಿಸ್ಟ್ ಕರ್ಲ್, ಒನ್‌ ಸೈಡ್‌ ಬ್ಯಾಂಗ್‌, ಹೈ ಪಫ್‌ ವಿತ್‌ ಲೂಸ್‌ ಪೋನಿಟೇಲ್‌, ಲೂಸ್‌ ಫಂಕಿ ಬ್ರೋಕನ್‌ ಕರ್ಲ್, ಲೇಯರ್‌ ಕರ್ಲ್ ವಿತ್‌ ಟೆಕ್ಸ್ ಚರ್‌ ಇತ್ಯಾದಿ ಹೇರ್‌ ಕಟ್‌ ಹೇರ್‌ ಸ್ಟೈಲ್ ಫೇಸ್‌ನ್ನು ಸ್ಲಿಮ್ ಮತ್ತು ನಿಮ್ಮನ್ನು ಹಾಟ್‌, ಗಾರ್ಜಿಯಸ್‌ಫ್ಯಾಬ್ಯುಲಸ್‌ ಆಗಿಸುತ್ತದೆ.

– ಪ್ರೀತಿ ಜೈನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ