ಹಬ್ಬಗಳನ್ನು ಸ್ವಾಗತಿಸಲು ನಾವೆಷ್ಟು ಮನೆ ಹೊಳೆಯುಂತೆ, ಅಲಂಕರಿಸುವುದಕ್ಕೆ ಮಾಡುತ್ತೇವೋ ಅಷ್ಟೇ ಗಮನವನ್ನು ಮನೆ ಮತ್ತು ವಿಶೇಷವಾಗಿ ಅಡುಗೆಮನೆಯನ್ನು ಹೈಜಿನಿಕ್‌ ಆಗಿಟ್ಟುಕೊಳ್ಳಲು ನೀಡಬೇಕಾದುದು ಅಗತ್ಯ. ಮನೆಯ ಕೇಂದ್ರ ಭಾಗ ಎನಿಸುವ ಕಿಚನ್‌, ಅನೇಕ ಬಗೆಯ ಕೀಟಾಣುಗಳು ಅಭಿವೃದ್ಧಿಗೊಳ್ಳಲು ಅವಕಾಶ ನೀಡುತ್ತದೆ. ಇದನ್ನು ಸಮಯಕ್ಕೆ ಸರಿಯಾಗಿ ಕ್ಲೀನ್‌ ಮಾಡದಿದ್ದರೆ, ಯಾವಾಗ ಅದು ನಿಮ್ಮ ಆಹಾರದಲ್ಲಿ ಬೆರೆತು ಹಿಂಸೆ ನೀಡುತ್ತದೋ ಹೇಳಲಾಗದು.

ಸಾಮಾನ್ಯವಾಗಿ ನಾವು ಆಗಾಗ ಕಿಚನ್‌ ಶುಚಿ ಮಾಡುತ್ತಿರುತ್ತೇವೆ. ಆದರೆ ಅದು ಕೇವಲ ನಮ್ಮ ದೃಷ್ಟಿ ತಾಕುವುದಕ್ಕೆ ಸೀಮಿತವಾಗುತ್ತದೆ.

ಆದರೆ ನಿಮಗೆ ಗೊತ್ತೇ? ಕಿಚನ್ನಿನ ಮೂಲೆಗಳು ಸಿಂಕ್‌ನ ಕೆಳಭಾಗ, ವಾರ್ಡ್‌ರೋಬ್‌ ಸರ್ಫೇಸ್‌ ಇತ್ಯಾದಿಗಳ ಮೇಲೆ ಜಮೆಗೊಂಡ ಕೊಳೆ, ಧೂಳು ಮಣ್ಣುಗಳಿಂದ ಈ ಜಾಗಗಳ ಮೇಲೆ ಫಂಗಸ್‌, ಕೀಟ, ಜಿರಲೆಗಳು ಅಡಗಿದ್ದು, ಮನಬಂದಾಗ ಅಲ್ಲಿಂದ ಹೊರಬಂದು ಆಹಾರ ಪದಾರ್ಥಗಳತ್ತ ದಾಳಿ ಇಡುತ್ತವೆ. ಆಗ ಆಹಾರ ಹಾಳಾಗದೆ ಉಳಿದೀತೇ?

ಮತ್ತೊಂದು ವಿಷಯ, ನಾವು ಮನೆಯ ಕ್ಲೀನಿಂಗ್‌ ಅಂತೂ ಮಾಡುತ್ತಲೇ ಇರುತ್ತೇವೆ. ಆದರೆ ಎಲ್ಲಕ್ಕೂ ಹೆಚ್ಚಾಗಿ ಕಿಚನ್ನಿನ ಶುಚಿತ್ವಕ್ಕೆ ಮಹತ್ವ ಕೊಡಬೇಕು. ಏಕೆಂದರೆ ಕಿಚನ್‌ ಶುಚಿಯಾಗಿದ್ದರೆ, ಹೈಜೆನಿಕ್‌ ಆಗಿದ್ದರೆ ಮಾತ್ರ ಪರಿವಾರದ ಮಂದಿ ಅದರಲ್ಲೂ ಸಣ್ಣಮಕ್ಕಳ ಆರೋಗ್ಯ ಬಿಗಡಾಯಿಸುವುದಿಲ್ಲ.

ಲೈಜಾಲ್‌ ಕಿಚನ್‌ ಪವರ್‌ ಕ್ಲೀನರ್‌, ಕಿಚನ್‌ನಲ್ಲಿ ಅಡಗಿರುವ ಕೀಟಾಣುಗಳನ್ನು ಶುಚಿಗೊಳಿಸಲು ನಿಮಗೆ ಹೆಚ್ಚಿನ ನೆರವು ನೀಡುತ್ತದೆ. ಆದರೆ ಇದಕ್ಕೆ ಮೊದಲು ಕಿಚನ್‌ನಲ್ಲಿ ಕೀಟಾಣು ಹರಡುವುದು ಹೇಗೆ ಅಂತ ತಿಳಿಯೋಣ. ಎಲ್ಲಿಂದ ಹೇಗೆ ಇವು ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತವೆ ಹಾಗೂ ಯಾವ ಯಾವ ರೋಗಗಳನ್ನು ಹರಡಬಲ್ಲವು ಎಂದೂ ಅರಿಯೋಣ.

ಕಿಚನ್‌ ಸಿಂಕ್‌

ಸಿಂಕ್‌ ಮತ್ತು ಅದರ ಸುತ್ತಮುತ್ತಲೂ ಹೆಚ್ಚಾಗುವ ಕೀಟಾಣುಗಳು, ನಿಮ್ಮ ಕೈ ಅಥವಾ ಆಹಾರದ ಮೂಲಕ ನಿಮ್ಮ ಹೊಟ್ಟೆ ಸೇರುವ ಸಾಧ್ಯತೆಗಳಿವೆ. ಇದರಿಂದಾಗಿ ಡಯೇರಿಯಾ (ಅತಿ ಭೇದಿ)ದಂಥ ರೋಗ ಆಕ್ರಮಿಸಬಹುದು. ಈ ಕೀಟಾಣುಗಳು `ಈಕೋಲಿ’ಯಂಥ ಬ್ಯಾಕ್ಟೀರಿಯಾ ಆಗಿದ್ದು, ಸಿಂಕ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಕ್ಲೀನಿಂಗ್‌ ಟಿಪ್ಸ್ : ಸಿಂಕ್‌ ಕೊಳೆಯಲ್ಲಿ ಆಹಾರ ಕಣಗಳು ಜಾರಿಹೋಗದಂತೆ ಎಚ್ಚರವಹಿಸಿ. ಸಿಂಕ್‌ ಬಳಸಿದ ನಂತರ ಅಲ್ಲಿನ ಸುತ್ತಮುತ್ತಲ ಏರಿಯಾವನ್ನು ಶುಚಿಗೊಳಿಸಲು, ಲೈಜಾಲ್ ‌ಕಿಚನ್‌ ಪವರ್‌ ಕ್ಲೀನರ್‌ ಸ್ಪ್ರೇ ಬಳಸಿರಿ. ನಂತರ ಕಿಚನ್‌ ಪೈಪ್‌ ಬಳಸಿ ಶುಭ್ರಗೊಳಿಸಿ, ಹಾಗೆ ಮಾಡಿದಾಗ ಮಾತ್ರ ಕೀಟಾಣು ಹರಡುವುದಿಲ್ಲ.

ಕುಕ್‌ ಟಾಪ್‌

ಸಾಮಾನ್ಯವಾಗಿ ನಾವು ಗ್ಯಾಸ್‌ ಒಲೆ ಯಾವ ಕುಕ್‌ ಟಾಪ್‌ನ್ನು ನೀರು ಚಿಮುಕಿಸಿ ಕ್ಲೀನ್‌ ಮಾಡುತ್ತೇವೆ. ಆದರೆ ಅಡುಗೆಯ ಪಾತ್ರೆಗಳೆಲ್ಲ ಸದಾ ಇದರ ಮೇಲೆಯೇ ಇರುತ್ತವೆ. ಇದರಿಂದ ಹುಟ್ಟಿಕೊಳ್ಳುವ ಕೀಟಾಣು, ಆಹಾರದ ಮೂಲಕ ನಿಮ್ಮ ದೇಹ ಪ್ರವೇಶಿಸುತ್ತದೆ. ಇದರಿಂದಾಗಿ ಹೊಟ್ಟೆನೋವು ಮತ್ತಿತರ ಬಾಧೆಗಳು ತಪ್ಪವು.

ಕ್ಲೀನಿಂಗ್‌ ಟಿಪ್ಸ್ : ಕುಕ್‌ ಟಾಪ್‌ ಬಳಸಿದ ನಂತರ ಅದರ ಮೇಲೆ ಬಿದ್ದಿರುವ ಗಲೀಜನ್ನು ನಿವಾರಿಸಿ. ನಂತರ ಲೈಜಾಲ್ ‌ಕಿಚನ್‌ ಪವರ್‌ ಕ್ಲೀನರ್‌ನ ಸಹಾಯದಿಂದ ಇದನ್ನು ನೀಟಾಗಿ ಒರೆಸಿ ಕ್ಲೀನ್‌ ಮಾಡಿ. ಮುಖ್ಯವಾಗಿ ನಾಬ್‌, ಕುಕ್‌ ಟಾಪ್‌ ಅಡಿ ಭಾಗದಲ್ಲಿ ಅಡಗಿರುವ ಕೀಟಾಣುಗಳನ್ನು ತೊಲಗಿಸಿ.

ಸ್ಲ್ಯಾಬ್

ನಾವು ಕಿಚನ್‌ ಸ್ಲ್ಯಾಬ್‌ನ್ನು ಆಹಾರ ತಯಾರಿಸುವಾಗ ಮತ್ತು ಅಡುಗೆ ಪಾತ್ರೆ ಇರಿಸಲು ಬಳಸುತ್ತಿರುತ್ತೇವೆ. ಹೀಗಾಗಿ ಆಹಾರ ಪದಾರ್ಥಗಳು ಒಂದಲ್ಲ ಒಂದು ಹೊತ್ತಿನಲ್ಲಿ ಇದರ ಮೇಲೆ ಬೀಳುತ್ತಿರುತ್ತದೆ. ಹೀಗಾಗಿ ಆಗಾಗ ಈ ಸ್ಲ್ಯಾಬ್‌ನ್ನು ಕ್ಲೀನ್‌ಮಾಡುತ್ತಿರಬೇಕಾಗುತ್ತದೆ. ಇಲ್ಲಿಂದ ಜರ್ಮ್ಸ್ ಆಹಾರ, ಕೈಗಳು ಎರಡರ ಸಂಪರ್ಕದಿಂದಾಗಿ ಸುಲಭವಾಗಿ ನಮ್ಮ ದೇಹ ಸೇರುತ್ತವೆ. ಹೀಗಾಗಿ ಇದರಿಂದ ಫುಡ್‌ ಪಾಯಿಸನಿಂಗ್‌ ಸಮಸ್ಯೆ ಕಾಡುತ್ತದೆ.

ಕ್ಲೀನಿಂಗ್‌ ಟಿಪ್ಸ್ : ಅಡುಗೆ ತಯಾರಿಸುವ ಮೊದಲು ಹಾಗೂ ನಂತರ ಸ್ಲ್ಯಾಬ್‌ ಮೇಲೆ ಬಿದ್ದಿರುವ ಕೊಳೆಯನ್ನು ಮೊದಲು ನಿವಾರಿಸಿ ಹಾಗೂ ಲೈಜಾಲ್ ‌ಕಿಚನ್‌ ಪವರ್‌ ಕ್ಲೀನರ್‌ನ್ನು ಚೆನ್ನಾಗಿ ಸ್ಪ್ರೇ ಮಾಡಿ, ಒಣ ಬಟ್ಟೆಯಿಂದ ಒರೆಸಿರಿ. ದಿನಕ್ಕೆ ಹಲವು ಸಲ  ಹೀಗೆ ಮಾಡಬೇಕು. ಏಕೆಂದರೆ, ಜರ್ಮ್ಸ್ ಶುಚಿಗೊಂಡ ನಂತರ, ಅದರಲ್ಲಿನ ಸೂಕ್ಷ್ಮ ಮೈಕ್ರೋಬ್ಸ್ ಸ್ಲ್ಯಾಬ್‌ ಕಾರ್ನರ್‌ಗಳಲ್ಲಿ ಅಡಗಿರುತ್ತವೆ.

ಕಿಚನ್‌ ನೆಲ

ಕಿಚನ್‌ನಲ್ಲಿ ಅಡುಗೆ ತಯಾರಿಸುವ ಮೊದಲು ಕಿಚನ್‌ ನೆಲ ಶುಚಿಗೊಂಡು ಶುಭ್ರವಾಗಿದೆ ತಾನೇ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ನೆಲದ ಮೇಲೆ ಕೊಳಕು ಹರಡಿದ್ದರೆ, ಅದರ ಸಣ್ಣ ಸಣ್ಣ ಕಣಗಳು ಗಾಳಿಯಲ್ಲಿ ಹಾರಿಬಂದು ಆಹಾರಕ್ಕೆ ಬಿದ್ದು ಅದನ್ನು ಹಾಳು ಮಾಡುತ್ತದೆ.
ಕ್ಲೀನಿಂಗ್‌ ಟಿಪ್ಸ್ : ಕಿಚನ್‌ ನೆಲದ ಮೇಲೆ ಸಹ ಲೈಜಾಲ್ ಕಿಚನ್‌ ಪವರ್‌ ಕ್ಲೀನರ್‌ನ ಉಪಯೋಗದಿಂದ ಕೀಟಾಣುಗಳ ದಿ ಎಂಡ್ ಮಾಡಬಹುದು. ಇದಕ್ಕಾಗಿ ಮೊದಲು ಒಳ್ಳೆಯ ಒರೆಸುವ ಬಟ್ಟೆಯನ್ನು ನೀರಲ್ಲಿ ಅದ್ದಿ ಹಿಂಡಿಕೊಂಡು, ನೆಲ ಪೂರ್ತಿ ನೀಟಾಗಿ ಒರೆಸಿಬಿಡಿ. ಈಗ ನೆಲದ ಮೇಲೆ ಲೈಜಾಲ್ ಕಿಚನ್‌ ಪವರ್‌ ಕ್ಲೀನರ್‌ನ 2-3 ಹನಿ ಚಿಮುಕಿಸಿ, ಅದೇ ಬಟ್ಟೆಯಿಂದ ಮತ್ತೆ ಒರೆಸಿರಿ. ಇದರಿಂದಾಗಿ ನೆಲದ ಮೇಲಿದ್ದ ಕೊಳೆ ಜೊತೆ, ಕೀಟಾಣು ಸಹ ತೊಲಗುತ್ತದೆ. ಕಿಚನ್‌ನಲ್ಲಿ ಕೆಲಸ ಮಾಡುವಾಗ ಚಪ್ಪಲಿ ಇತ್ಯಾದಿ ಧರಿಸಬೇಡಿ.

ಕಿಚನ್‌ ಟೈಲ್ಸ್ ವಾರ್ಡ್‌ರೋಬ್‌

ನಮ್ಮ ಭಾರತೀಯ ಅಡುಗೆಯಲ್ಲಿ ಒಗ್ಗರಣೆ ಇಲ್ಲದಿದ್ದರೆ ಹೇಗೆ? ಅದು ಅಸಾಧ್ಯ. ಈಗಂತೂ ಹಬ್ಬಗಳ ಸೀಸನ್‌ ಬಂದಿದೆ. ಫ್ರೈಡ್‌ಮತ್ತು ಒಗ್ಗರಣೆ ಬಳಸುವ ವ್ಯಂಜನಗಳು ಧಾರಾಳವಾಗಿ ತಯಾರಾಗುತ್ತಾ ಇರುತ್ತವೆ. ಈ ತರಹದ ವ್ಯಂಜನ ತಯಾರಿಸುವಾಗ ಎಣ್ಣೆಯ ಅಂಶ ಅತ್ತಿತ್ತ ಸಿಡಿಯುತ್ತದೆ. ಅದು ಒಲೆಯ ಹಿಂಬದಿಯ ಟೈಲ್ಸ್, ಡಬ್ಬಿಗಳನ್ನು ಇರಿಸಿರುವ ವಾರ್ಡ್‌ರೋಬ್‌ವರೆಗೂ ಎರಚಲ್ಪಡುತ್ತವೆ. ಇದನ್ನು ಆಗಾಗ ಶುಚಿಗೊಳಿಸದಿದ್ದರೆ, ಇದರಲ್ಲಿ ಕೀಟಾಣು ಬೆಳೆಯುತ್ತದೆ. ಅದು ನಿಧಾನವಾಗಿ ಇಡೀ ಕಿಚನ್‌ಪೂರ್ತಿ ಹರಡಿಕೊಳ್ಳುತ್ತದೆ. ಆಗ ನಮ್ಮ ಆಹಾರ ಪದಾರ್ಥ ಸಹಜವಾಗಿ ಕೆಡುತ್ತದೆ.

ಕ್ಲೀನಿಂಗ್‌ ಟಿಪ್ಸ್ : ಅಡುಗೆ ಮುಗಿದ ನಂತರ ಕಿಚನ್‌ ಟೈಲ್ಸ್ ಮತ್ತು ವಾರ್ಡ್‌ ರೋಬ್‌ ಶೆಲ್ಫ್, ಡೋರ್ಸ್‌ನ್ನು ಮೊದಲು ಒಣಬಟ್ಟೆಯಿಂದ ಒರೆಸಿಬಿಡಿ. ನಂತರ ಲೈಜಾಲ್ ಕಿಚನ್‌ ಪವರ್‌ ಕ್ಲೀನರ್‌ ಸ್ಪ್ರೇ ಮಾಡಿ ಮತ್ತೊಮ್ಮೆ ನೀಟಾಗಿ ಒರೆಸಿರಿ. ಮುಖ್ಯವಾಗಿ ರಾತ್ರಿ ಹೊತ್ತು ಈ ಜಾಗಗಳನ್ನು ಹಾಗೇ ಗಲೀಜಾಗಿರಲು ಬಿಡಬೇಡಿ.

ಹೀಗೆ ನೀವು ಈ ಫೆಸ್ಟಿವಲ್ ‌ಸೀಸನ್‌ನ್ನು ಹೆಲ್ದಿ ಹ್ಯಾಪಿ ಆಗಿಸಲು ಮನೆಗೆ ಇಂದೇ ಕೊಂಡು ತನ್ನಿ, ಲೈಜಾಲ್ ಕಿಚನ್‌ ಪವರ್‌ ಕ್ಲೀನರ್

ಮನೆಯಲ್ಲಿ ಅತಿ ಹೆಚ್ಚಾಗಿ ಕೀಟಾಣು ಕಂಡುಬರುವ ಜಾಗ ಎಂದರೆ ಕಿಚನ್‌. ಇದನ್ನು ನಾವು ಶುಭ್ರವಾಗಿ, ಶುಚಿಗೊಳಿಸದಿದ್ದರೆ, ಕೀಟಾಣುಮುಕ್ತ ಮಾಡದಿದ್ದರೆ, ನಿಮ್ಮ ಪರಿವಾರವನ್ನು ಕೋಲ್ಡ್ ಫ್ಲೂನಿಂದ ಹಿಡಿದು ಫುಡ್‌ ಪಾಯಿಸ್‌ನಿಂಗ್‌ವರೆಗೂ ಗಂಭೀರ ರೋಗಗಳು ಕಾಡಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ