ಹೀಗಾಗಿ ನಾವಿಲ್ಲಿ ನಿಮಗೆ ಎಂಥ ಕೆಲವು ಉಪಾಯಗಳನ್ನು ತಿಳಿಸುತ್ತೇವೆಂದರೆ, ಅದರಿಂದ ನೀವು ಹಬ್ಬಗಳನ್ನು ಚೆನ್ನಾಗಿ ಎಂಜಾಯ್ ಮಾಡಬಹುದು ಹಾಗೂ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಕುಳಿತೇ ನಿಮ್ಮ ಅನುಕೂಲಕ್ಕೆ ತಕ್ಕಂತೆ, ನಿಮ್ಮ ಚರ್ಮ ಮತ್ತು ತಲೆಗೂದಲಿನ ಕೇರ್ ಮಾಡಿ, ನಿಮ್ಮನ್ನು ನೀವು ಚಾರ್ಮಿಂಗ್ ಆಗಿಸಬಹುದು. ಅದು ಹೇಗೆ ತಿಳಿಯೋಣವೇ
ಫೇಶಿಯಲ್ : ಮುಖದಲ್ಲಿ ಗ್ಲೋ ತರಲು ಪ್ರತಿ ಹೆಣ್ಣೂ ಬಯಸುವುದೆಂದರೆ, ತನ್ನ ಸ್ಕಿನ್ ಎಷ್ಟು ಗ್ಲೋಯಿಂಗ್ ಆಗಿರಬೇಕೆಂದರೆ, ನೋಡಿದವರು ಹೊಗಳದೇ ಇರಲಾಗದು ಎಂಬಷ್ಟು! ಇದಕ್ಕಾಗಿ ಕ್ಲೆನ್ಸಿಂಗ್, ಮಸಾಜ್, ಸೀರಮ್ ಮತ್ತು ಮಾಸ್ಕ್ ನಿಂದ ಟ್ರೀಟ್ಮೆಂಟ್ ಬೆಸ್ಟ್ ಎನಿಸಿವೆ. ಏಕೆಂದರೆ ಇವು ಮುಖದಲ್ಲಿನ ಕೊಳೆ ಮತ್ತು ಡೆಡ್ ಸೆಲ್ಸ್ ನ್ನು ರಿಮೂವ್ ಮಾಡಿ ಅದರಲ್ಲಿ ಹೊಸ ಜೀವ ತುಂಬುವ ಕೆಲಸ ಮಾಡುತ್ತವೆ. ಇದಕ್ಕಾಗಿ ಪ್ರತಿ ತಿಂಗಳೂ ಪಾರ್ಲರ್ಗೆ ಹೋಗಿ ಹಣ ಖರ್ಚು ಮಾಡಬೇಕಾಗುತ್ತದೆ. ಆಗಲೇ ನಮ್ಮ ಚರ್ಮ ಸಾಫ್ಟ್ ಲೈಟ್ ಎನಿಸುವುದು. ಆದರೆ ಈಗ ಇದೇ ಪರಿಣಾಮವನ್ನು `ಡೂ ಇಟ್ ಯುವರ್ ಸೆಲ್ಫ್’ ಫೇಶಿಯಲ್ನಿಂದ ಮನೆಯಲ್ಲಿ ಕುಳಿತೇ ಸುಲಭವಾಗಿ ಪಡೆಯಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಸಲಹೆಗಳನ್ನು ಅನುಸರಿಸಬೇಕು.
ದೀಪಾವಳಿಗೆ 1 ವಾರ ಮೊದಲೇ ನೀವು ನಿಮ್ಮ ಮುಖವನ್ನು ಪ್ರತಿನಿತ್ಯ ರೋಸ್ ವಾಟರ್ನಿಂದ ಕ್ಲೀನ್ ಮಾಡಿ. ಇದಕ್ಕಾಗಿ ನಾಯ್ಕಾ ರೆಕಮೆಂಡ್ ಮಾಡುವುದೆಂದರೆ, ನೀವು ಕಾಮಾ ಆಯುರ್ವೇದ ಪ್ಯೂರ್ ರೋಸ್ ವಾಟರ್ನ್ನು ಬಳಸಬೇಕು. ರೋಸ್ ವಾಟರ್ನಿಂದ ನಿಮ್ಮ ಸ್ಕಿನ್ ಕ್ಲೀನ್ ಶೈನ್ ಆಗುತ್ತದೆ.
ನೀವು ಮನೆಯಲ್ಲೇ ಸಕ್ಕರೆಗೆ ಕೊಬ್ಬರಿ ಎಣ್ಣೆ ಬೆರೆಸಿ ಫೇಶಿಯಲ್ ಸ್ಕ್ರಬ್ ತಯಾರಿಸಬಹುದು. ಇದನ್ನು ನೀವು 1 ವಾರದಲ್ಲಿ 2 ಸಲ ಅಪ್ಲೈ ಮಾಡುವುದರಿಂದ, ಡೆಡ್ ಸ್ಕಿನ್ ಸೆಲ್ಸ್ ರಿಮೂವ್ ಆಗುತ್ತದೆ.
ಮುಲ್ತಾನಿ ಮಿಟ್ಟಿ ಮುಖವನ್ನು ಶುಚಿಗೊಳಿಸಿ ಅದರಲ್ಲಿ ಹೊಳಪು ತರುವ ಕೆಲಸ ಮಾಡುತ್ತದೆ. ಇದಕ್ಕಾಗಿ ನಾಯ್ಕಾ ರೆಕಮಂಡ್ಮಾಡುವುದೆಂದರೆ ನೀವು ತಿಜೋರಿ ನ್ಯಾಚುರಲ್ ಬ್ಯೂಟಿ ಮುಲ್ತಾನಿ ಮಿಟ್ಟಿ ಅಂಡ್ ರೋಸ್ ವಾಟರ್ ಬಳಸಬಹುದು.
ಹೇರ್ ಸ್ಪಾ : ಕೂದಲಿಗೆ ನೀಡಿ ಹೊಸ ಜೀವಕೂದಲನ್ನು ಪ್ರತಿ ಸಲ ಪ್ರಾಪರ್ ಕೇರ್ ತೆಗೆದುಕೊಳ್ಳದ ಕಾರಣ, ನೀವು ಸದಾ ಅದನ್ನು ಗಂಟು ಹಾಕಿಡುವಿರಿ. ಹೀಗಿರುವಾಗ ಫೆಸ್ಟಿವಲ್ ಸೀಸನ್ನಲ್ಲಿ ನೀವು ನಿಮ್ಮ ಕೂದಲನ್ನು ಪ್ಯಾಂಪರ್ ಮಾಡಲು ಪಾರ್ಲರ್ಗೆ ಹೋಗಲು ಹೇರ್ ಸ್ಪಾಗಾಗಿ ಅಗತ್ಯವಾಗಿ ಅಪಾಯಿಂಟ್ಮೆಂಟ್ ಬುಕ್ ಮಾಡುವಿರಿ. ಆಗ ನಿಮ್ಮ ಕೂದಲು ಸುಂದರ ಆಗಲಿದೆ. ಹಾಗಿರುವಾಗ ನಿಮಗೆ ಈ ಫೀಲ್ ಮನೆಯಲ್ಲೇ ಸಿಕ್ಕರೆ ಎಷ್ಟು ಚೆನ್ನ ಅಲ್ಲವೇ?
ಇದಕ್ಕಾಗಿ ನಿಮಗೆ ಇಂಟರ್ನೆಟ್ನಲ್ಲಿ ಬೇಕಾದಷ್ಟು ಉಪಾಯಗಳು ಲಭಿಸುತ್ತವೆ. ಆದರೆ ನಾಯ್ಕಾ ನಿಮಗೆ ಬಲು ಸುಲಭ ಉಪಾಯ ಹೇಳುತ್ತದೆ, ಇದರಲ್ಲಿ ಸಮಯ ಕಡಿಮೆ ಜೊತೆಗೆ ರಿಸಲ್ಟ್ ಸಹ ಬೆಸ್ಟ್ ಇರುತ್ತದೆ. ನಮ್ಮನ್ನು ನಂಬಿ, ಇಂಥ ರಿಸಲ್ಟ್ ನೋಡಿ ನೀವು ಖುದ್ದು ನಿಮ್ಮ ಕೂದಲನ್ನು ಹೆಚ್ಚು ಪ್ರೀತಿಸತೊಡಗುವಿರಿ.
ಇದಕ್ಕಾಗಿ ನೀವು ಎಲ್ಲಕ್ಕೂ ಮೊದಲು 2-3 ಚಮಚ ಆಲಿವ್ ಆಯಿಲ್, ಬಿಸಿ ನೀರು, ಟವೆಲ್ ತೆಗೆದುಕೊಳ್ಳಿ.
ನಂತರ ಆಲಿವ್ ಆಯಿಲ್ನಿಂದ ಉತ್ತಮ ರೀತಿಯಲ್ಲಿ ಕೂದಲಿನ ಬುಡ, ಕೂದಲನ್ನು ಮಸಾಜ್ ಮಾಡಿ, ಬಿಸಿ ನೀರಿನಿಂದ ಸ್ಟೀಂ ಪಡೆಯಿರಿ.
10 ನಿಮಿಷಗಳ ನಂತರ ಬಿಸಿ ನೀರಿನಲ್ಲಿ ಟವೆಲ್ ಅದ್ದಿಕೊಂಡು, ತುಸು ಹಿಂಡಿ, ಅದನ್ನು ಕೂದಲಿಗೆ 15 ನಿಮಿಷ ಕವರ್ ಮಾಡಿ. ನಮ್ಮನ್ನು ನಂಬಿ, ಇದರಿಂದ ನಿಮ್ಮ ಕೂದಲು ಸಾಫ್ಟ್ ಆಗುವುದರ ಜೊತೆಯಲ್ಲೇ ಅದರಲ್ಲಿ ಹೆಚ್ಚು ಹೊಳಪು ಕೂಡ ಮೂಡುತ್ತದೆ.
ನೀವು ಇದನ್ನು ಇನ್ನಷ್ಟು ಸುಲಭಗೊಳಿಸಲು ಬಯಸಿದರೆ, ಇದಕ್ಕಾಗಿ ನಾಯ್ಕಾ ಹೇಳುವುದೆಂದರೆ, ನೀವು ರಿಚ್ ಫೀಲ್ ಆರ್ಗನ್ಹೇರ್ ಸ್ಪಾ ಕಿಟ್ ಬಳಸಬೇಕು. ಇದು ಅತ್ಯುತ್ತಮ ಮಾತ್ರವಲ್ಲದೆ, ದುಬಾರಿಯೂ ಅಲ್ಲ.
ಬ್ಯಾಕ್ ಟ್ರೀಟ್ಮೆಂಟ್ : ಸೆಕ್ಸಿ ಬ್ಯಾಕ್ಗಾಗಿ ಈ ದೀಪಾವಳಿಗೆ ನೀವು ನಿಮ್ಮ ಲಹಂಗಾ ಜೊತೆ ಬ್ಯಾಕ್ಲೆಸ್ ಚೋಲಿ ಧರಿಸ ಬಯಸಿದರೆ, ನೀವು ಬ್ಯಾಕ್ ಸ್ಪಾ (ಇದರಲ್ಲಿ ಬ್ಯಾಕ್ ಸ್ಕ್ರಬ್, ಮಡ್ ಪ್ಯಾಕ್, ಮಸಾಜ್ ಇರುತ್ತದೆ) ಅಗತ್ಯ ತೆಗೆದುಕೊಳ್ಳಬೇಕು.
ಪ್ರಶ್ನೆ ಎಂದರೆ, ಫೆಸ್ಟಿವ್ ಸೀಸನ್ನಲ್ಲಿ ಇಂಥ ಬಿಝಿ ಶೆಡ್ಯೂಲ್ನಲ್ಲಿ ಟೈಂ ಹೊಂದಿಸುವುದೇ ಬಲು ಕಷ್ಟ. ಹೀಗಿರುವಾಗ ನೀವು ಮನೆಯಲ್ಲಿದ್ದೇ ಬ್ಯಾಕ್ ಟ್ರೀಟ್ಮೆಂಟ್ ಪಡೆಯಬಹುದು.
ಒಂದು ಕಪ್ ಕಲ್ಲುಪ್ಪಿಗೆ ಅರ್ಧ ಕಪ್ ಆಲಿವ್ ಆಯಿಲ್, ಅದಕ್ಕೆ 5 ಹನಿ ಸ್ಯಾಂಡಲ್ ವುಡ್ ಆಯಿಲ್ ಬೆರೆಸಿ ಮಿಶ್ರಣ ತಯಾರಿಸಿ.
ನಂತರ ಈ ರೆಡಿ ಮಿಶ್ರಣದಿಂದ ಬ್ಯಾಕ್ಗೆ ಮಸಾಜ್ ಮಾಡಿ ಹಾಗೂ ಒದ್ದೆ ಟವೆಲ್ನಿಂದ ಶುಚಿಗೊಳಿಸಿ.
ಇದಕ್ಕೆ ಬದಲಾಗಿ ನಾಯ್ಕಾ ನಿಮಗೆ ತಿಳಿಸುವ ಅತಿ ಸುಲಭ ವಿಧಾನ ಎಂದರೆ ತಿಜೋರಿ ಎಕ್ಸ್ ಫೋಲಿಯೇಟಿಂಗ್ ಲೆಮನ್ ಗ್ರಾಸ್ಬ್ಯಾಕ್ ಸ್ಕ್ರಬ್ ಬಳಸಲು ಸಲಹೆ ನೀಡುತ್ತದೆ. ಇದರಿಂದ ನೀವು ನಿಮ್ಮ ಬ್ಯಾಕ್ನ್ನು ಹಾಟ್ ಆಗಿ ಇಡಬಹುದು.
ಮೆನಿ ಪೆಡಿಕ್ಯೂರ್ : ಮತ್ತಷ್ಟು ಸೆಕ್ಸಿ ಆಗಲು ನಿಮಗೆ ಈ ಫೆಸ್ಟಿವ್ ಸೀಸನ್ನಲ್ಲಿ ನಿಮ್ಮ ಫ್ರೆಂಡ್ಸ್ ಕೇವಲ ನಿಮ್ಮ ಲುಕ್ಸ್ ಮಾತ್ರವಲ್ಲದೆ, ನಿಮ್ಮ ಕೈ ಕಾಲುಗಳನ್ನೂ ಹೊಗಳಬೇಕು ಎನಿಸುವುದಿಲ್ಲವೇ? ಇದಕ್ಕಾಗಿ ನೀವು ದುಬಾರಿ ಖರ್ಚು ಮಾಡುವ ಬದಲು ಮನೆಯಲ್ಲೇ ಕಿಟ್ನಿಂದ ಪಾರ್ಲರ್ನಂಥ ರಿಸಲ್ಟ್ ಪಡೆಯಬಹುದು.
ಇದಕ್ಕಾಗಿ ನಾಯ್ಕಾ ಸಲಹೆ ಎಂದರೆ ನೀವು ಪೆಡಿಕ್ಯೂರ್ ಮೆನಿಕ್ಯೂರ್ ಹ್ಯಾಂಡ್ ಫುಟ್ ಕಿಟ್ ಬಳಸಬೇಕು. ಜೊತೆಗೆ ನಿಮ್ಮ ಉಗುರಿಗೂ ನಾಯ್ಕಾ ಸೆಲೂನ್ ಶೈನ್ ಜೆಲ್ ನೇಲ್ ಪೇಂಟ್ ಮಾಡಿ, ಹೆಚ್ಚಿನ ಸೆಕ್ಸಿ ಲುಕ್ಸ್ ನೀಡಬಹುದು.
ಹಾಗಿದ್ದರೆ ಈ ದೀಪಾವಳಿಯಂದು ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಕುಳಿತೇ ನೀವು ಪಾರ್ಲರ್ನಂಥ ಗ್ಲೋ ಟಚ್ ಪಡೆಯಬಾರದೇಕೆ?
– ಪಾರ್ವತಿ ಭಟ್