ಆ ದಿನಗಳನ್ನು ನೆನಪಿಸಿಕೊಳ್ಳಿ, ಆಗ ನೀವು ಚಿಕ್ಕ ಮಗು ಆಗಿದ್ದಿರಿ, ನಿಮ್ಮ ಆ ದಿನಗಳು ಬೇರೆ ಬೇರೆ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಕಳೆದುಹೋಗುತ್ತಿತ್ತು. ಆದರೆ ಆ ಹಳೆಯ ದಿನಗಳು ಕೇವಲ ಮೋಜು ಮಸ್ತಿಗಷ್ಟೇ ಸೀಮಿತ ಆಗಿರಲಿಲ್ಲ,  ಬದಲಾಗಿ ಅದಕ್ಕಿಂತಲೂ ಎಷ್ಟೋ ಪಟ್ಟು ಅಧಿಕ ಎನಿಸಿತ್ತು.

ನಿಮಗೆ ತಿಳಿಸಬೇಕಾದ ಮುಖ್ಯ ವಿಷಯ ಎಂದರೆ, ವಿವಿಧ ಪಾತ್ರ ನಿಭಾಯಿಸುವಿಕೆ ಮಕ್ಕಳ ವಿಕಾಸದಲ್ಲಿ ಮುಖ್ಯ ಘಟ್ಟ ಎನಿಸುತ್ತದೆ. ಇದರಿಂದಾಗಿ ಮಗು ಕ್ರಿಯಾಶೀಲ ಯೋಚನೆ, ಸಮಸ್ಯೆಗಳ ನಿವಾರಣೆ, ವ್ಯಾವಹಾರಿಕ ಜ್ಞಾನ, ಬೆರೆತುಕೊಳ್ಳುವ ಗುಣ, ಮಾತನಾಡುವ ಕಲೆ ಕಲಿಯುತ್ತದೆ. ಎಲ್ಲಿಯವರೆಗೆ ಅಂದ್ರೆ ಮಗು ಹೊಸ ಪಾತ್ರ ನಿಭಾಯಿಸುವ ಪ್ರಯತ್ನವನ್ನೂ ಮಾಡುತ್ತದೆ, ಪ್ರಪಂಚವನ್ನು ತನ್ನದೇ ಆದ ದೃಷ್ಟಿಕೋನದಿಂದ ನೋಡುತ್ತದೆ ಆಗ ಅದರ ಸಹಾನುಭೂತಿ ಮತ್ತು ಕಲ್ಪನಾಶೀಲತೆಯ ಗುಣ ವಿಕಾಸವಾಗುತ್ತದೆ.

ಇಷ್ಟು ಮಾತ್ರವಲ್ಲ, ಇದರಿಂದಾಗಿ ಮಗು ವಿಭಿನ್ನ ಪರಿಸ್ಥಿತಿ ಮತ್ತು ಸಮಸ್ಯೆಗಳನ್ನು ಎದುರಿಸಲಿಕ್ಕೂ ಕಲಿಯುತ್ತದೆ. ಅದರ ಕುರಿತಾಗಿ ನಾವು ಸದಾ ಚಿಂತಿತರಾಗುತ್ತೇವೆ. ಅಂದರೆ, ಮಗು ತನ್ನ ಬೊಂಬೆಗೆ ಇಂಜೆಕ್ಷನ್‌ ಚುಚ್ಚುವಾಗ ಅದಕ್ಕೆ ಈ ಅನುಭವ ಮಾಡಿಸುತ್ತದೆ, `ಇದರಿಂದ ನಿನಗೆ ಯಾವ ನೋವು ಆಗುವುದಿಲ್ಲ.’ ಇದು, ಮಗು ಡಾಕ್ಟರ್‌ ಬಳಿ ಹೋಗುವಾಗ ಉಂಟಾಗುವ ಭಯವನ್ನು ನಿವಾರಿಸುತ್ತದೆ.

ಇಷ್ಟು ಮಾತ್ರವಲ್ಲ, ಮಕ್ಕಳಲ್ಲಿ ಆಟಗಳ ಮೂಲಕ ಪ್ರತಿದಿನ ಬದಲಾವಣೆ ತರುವುದರೊಂದಿಗೆ ಅವು ಹೊಸ ವಿಷಯ ತಿಳಿಯುವುದರ ಜೊತೆ, ಏನಾದರೂ ಹೊಸತನ್ನು ಮಾಡಲು ಪ್ರಯತ್ನಿಸುತ್ತವೆ. ಕಲ್ಪನಾಶೀಲತೆ ಎಂಬುದು ಎಷ್ಟು ಸಮರ್ಥರನ್ನಾಗಿಸುತ್ತದೆ ಎಂದರೆ, ಮಕ್ಕಳ ಜೀವನಕ್ಕೆ ಹೊಸ ದಿಕ್ಕನ್ನು ತೋರುವ ಕೆಲಸ ಮಾಡುತ್ತದೆ.

ಇದೇ ನಿಟ್ಟಿನಲ್ಲಿ ಅಮೆರಿಕಾದ ಮಲ್ಟಿನ್ಯಾಶನಲ್ ಟಾಯ್‌ ಕಂಪನಿ `ಮೆಟಲ್’ ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಶ್ರಮಿಸುತ್ತಿದೆ.

ರೋಲ್ ‌ಪ್ಲೇ ಗೇಮ್ಸ್ ಅಂದರೆ ಟೆಲಿಫೋನ್‌, ಎಲ್ ಅಂಡ್‌ ಎಲ್ ಸ್ಮಾರ್ಟ್‌ ಸ್ಟೇಜಸ್‌, ಸ್ಮಾರ್ಟ್‌ ಫೋನ್‌, ಗ್ರೇ ಸ್ವೀಟ್‌ ಮ್ಯಾನರ್‌, ಟೀ ಸೆಟ್‌, ಮೆಡಿಕಲ್ ಕಿಟ್‌ ಇತ್ಯಾದಿ ಕೇವಲ ನೋಡಲು ಮಾತ್ರ ಸ್ಮಾರ್ಟ್‌ ಅಲ್ಲದೆ, ಬದಲಿಗೆ ಮಕ್ಕಳ ಬೆಳವಣಿಗೆಯಲ್ಲಿ ಈ ಆಟಿಕೆಗಳ ಪಾತ್ರ ಅತಿ ಪ್ರಮುಖ ಎಂದೆನಿಸಿದೆ.

– ಪರಿಮಳಾ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ