ಗಂಡಹೆಂಡತಿಯ ಸಂಬಂಧದಲ್ಲಿ ಪ್ರೀತಿಭರಿತ ಒಂದಿಷ್ಟು ಚಿಕ್ಕಪುಟ್ಟ ಜಗಳಗಳು, ಮುನಿಸು, ಹುಸಿಕೋಪ ಇವೆಲ್ಲ ಇದ್ದದ್ದೇ. ನಾವಿಲ್ಲಿ ಕೆಲವು ಸಂಗತಿಗಳನ್ನು ಪ್ರಸ್ತಾಪಿಸುತ್ತಿದ್ದು, ಅವುಗಳಿಗಾಗಿ ಸಾಮಾನ್ಯವಾಗಿ ಪ್ರೀತಿಭರಿತ ಜಗಳಗಳು ಆಗುತ್ತವೆ.
ಮಹಿಳೆಯರಲ್ಲಿ ಸರ್ಪ್ರೈಸ್ ಕ್ರೇಜ್: ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರಲ್ಲಿ ಸರ್ಪ್ರೈಸ್ನ ಕ್ರೇಜ್ ಹೆಚ್ಚಿಗೆ ಇರುತ್ತದೆ. ಈಚೆಗೆ ಪತಿ ತನಗೆ ಸರ್ಪ್ರೈಸ್ ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ಅವರು ಜಗಳ ತೆಗೆಯುತ್ತಾರೆ. ಇದು ಸಾಮಾನ್ಯ ಸಂಗತಿ. ಆದರೆ ಇದು ಒಮ್ಮೊಮ್ಮೆ ಜಗಳಕ್ಕೆ ಕಾರಣ ಆಗುತ್ತದೆ.
ಅತಿ ವ್ಯಸ್ತತೆ : ಗಂಡನ ಅತಿ ವ್ಯಸ್ತತೆಯ ಕಾರಣದಿಂದಲೂ ಹೆಂಡತಿಗೆ ಕೋಪ ಬರುತ್ತದೆ. ಗಂಡ ರಜೆ ಪಡೆದು ತನಗೆ ಸಮಯ ನೀಡದೇ ಇರುವ ಬಗ್ಗೆ ಅವರು ಜಗಳವಾಡುತ್ತಾರೆ. ರಜೆಯ ಕೊರತೆ ತವರಿಗೆ ಹೋಗುವ ಕಾರ್ಯಕ್ರಮ ರದ್ದಾದಲ್ಲಿ ಅವಳು ಪತಿಯ ನೆಮ್ಮದಿಗೆ ಭಂಗ ತರುತ್ತಾಳೆ.
ಸಾಮಗ್ರಿಗಳು ಸೂಕ್ತ ಜಾಗದಲ್ಲಿ ಸಿಗದೆ ಇರುವುದು : ಪುರಷರಿಗೆ ಯಾವ ಒಂದು ಸಂಗತಿ ಬಹಳ ಕೋಪ ಉಂಟು ಮಾಡುತ್ತದೆ ಎಂದರೆ, ಅದು ಅವರಿಗೆ ಸಂಬಂಧಪಟ್ಟ ಸಾಮಗ್ರಿಗಳು ನಿಗದಿತ ಸ್ಥಳದಲ್ಲಿ ಲಭ್ಯವಾಗದೇ ಇರುವುದು. ಆಗ ಗಂಡ ಬಹಳ ನಿರಾಳನಾಗುತ್ತಾನೆ. ಹೆಂಡತಿ ಹೆಚ್ಚು ಸುರಕ್ಷಿತವಾಗಿಡಲು ಮತ್ತು ಸ್ವಚ್ಛತೆಯ ಕಾರಣದಿಂದ ಅವನ್ನು ಸ್ಥಳಾಂತರ ಮಾಡಿರಬಹುದು.
ಮೊದಲಿನ ಪ್ರೀತಿ ಈಗಿಲ್ಲ : ಇದೊಂದು ಸಾಮಾನ್ಯ ಸಮಸ್ಯೆ. ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿದ್ದರೆ, ಅತಿ ವ್ಯಸ್ತತೆ ಇಬ್ಬರ ಮಧ್ಯದ ರೋಮಾನ್ಸ್ ಗೆ ಕತ್ತರಿ ಹಾಕುತ್ತದೆ. ಇಬ್ಬರೂ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ಮಗ್ನರಾಗುತ್ತಾರೆ.
ಬಟ್ಟೆಗಳನ್ನು ಬೇಕಾಬಿಟ್ಟಿಯಾಗಿ ಬಿಸಾಡುವುದು : ಇದು ಖಾಯಂ ಜಗಳದ ವಿಷಯ. ಒದ್ದೆ ಟವೆಲ್, ಕೊಳಕಾದ ಸಾಕ್ಸ್ ಹಾಗೂ ಇತರೆ ಬಟ್ಟೆಗಳನ್ನು ಬೇಕಾಬಿಟ್ಟಿ ಎಸೆಯುವುದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಬಹುದು.
ಸ್ನೇಹಿತರೊಂದಿಗಿನ ಪ್ರೀತಿ : ಹೆಂಡತಿಗೆ ಎಲ್ಲಕ್ಕೂ ಹೆಚ್ಚಿನ ತೊಂದರೆ ಗಂಡನ ಸ್ನೇಹಿತರಿಂದ ಆಗುತ್ತದೆ. ಅದು ಪ್ರತ್ಯಕ್ಷವಾಗಿ ಅಲ್ಲ, ಪರೋಕ್ಷವಾಗಿ. ಎಷ್ಟೋ ಸಲ ಗಂಡ ತನ್ನ ಸ್ನೇಹಿತರೊಂದಿಗೆ ಕಾಲ ಕಳೆಯಲು ಹೆಂಡತಿಯನ್ನು ನಿರ್ಲಕ್ಷಿಸುತ್ತಾನೆ. ಹೀಗಾಗಿ ಹೆಂಡತಿ ನನ್ನ ಜೊತೆ ಹೊರಗೆ ಹೋಗಲು ನಿಮ್ಮ ಬಳಿ ಸಮಯವೇ ಇಲ್ಲ ಎಂದು ಆಗಾಗ ದೂರುತ್ತಾಳೆ.
ಸದಾ ಟೀಕಿಸುವುದು : ಇದು ಬಹಳಷ್ಟು ಜನರಲ್ಲಿ ಕಂಡು ಬರುವ ದೂರಾಗಿದೆ. ಗಂಡಹೆಂಡತಿ ಮನೆಯಲ್ಲಿದ್ದಷ್ಟು ಹೊತ್ತು ಒಬ್ಬರ ಮೇಲೆ ಒಬ್ಬರು ದೂರು ಹೇಳುತ್ತಿರುತ್ತಾರೆ. ಹೊರಗೆ ಮಾತ್ರ ಇತರರ ಜೊತೆ ಚೆನ್ನಾಗಿಯೇ ಮಾತನಾಡುತ್ತಿರುತ್ತಾರೆ.
ಏನು ಅಡುಗೆ ಮಾಡಲಿ? : ಇದು ಪತ್ನಿಯರ ದೊಡ್ಡ ಸಮಸ್ಯೆ. ದಿನ ಒಂದೇ ತೆರನಾದ ತಿಂಡಿ ತಿಂದು ತಿಂದೂ ಬೇಜಾರಾಗಿದೆ ಎಂದು ಗಂಡಂದಿರು ತಮ್ಮ ಪತ್ನಿಯರಿಗೆ ದೂರು ಹೇಳುತ್ತಿರುತ್ತಾರೆ. ಇದು ಕೂಡ ಜಗಳಕ್ಕೆ ಕಾರಣವಾಗಬಹುದು.
ಯಾವ ಸಂಬಂಧ ಕೂಡ ಪರ್ಫೆಕ್ಟ್ ಅಲ್ಲ : ಒಂದು ವಾಸ್ತವ ಸಂಗತಿ ಏನೆಂದರೆ, ಯಾವುದೇ ಸಂಬಂಧ ಪರ್ಫೆಕ್ಟ್ ಅಲ್ಲ. ನನ್ನ ಎಣಿಕೆಯ ಪ್ರಕಾರವೇ ನಡೆಯುತ್ತದೆ ಅಥವಾ ಒಂದು ಸಿನಿಮಾ ಕಥೆಯ ಹಾಗೆ ಸಂಬಂಧ ಇರಬೇಕೆಂದು ಯೋಚಿಸುದು ತಪ್ಪು. ಪ್ರತಿಯೊಂದು ಸಂಬಂಧ ಬೇರೆ ಬೇರೆ ರೀತಿಯೇ ಇರುತ್ತದೆ. ಪ್ರತಿಯೊಂದು ಸಂಬಂಧಕ್ಕೂ ನಿಮ್ಮ ಪ್ರೀತಿ, ಸಮರ್ಪಣೆ, ಶ್ರದ್ಧೆ ಹಾಗೂ ಒಳ್ಳೆಯ ಮನಸ್ಸು ಕೂಡ ಅತ್ಯಗತ್ಯ. ಎಷ್ಟೋ ಸಲ ಸಂಬಂಧ ತುಂಡರಿಸಲು ನಮ್ಮಲ್ಲಿರುವ ರೆಕ್ಕೆಪುಕ್ಕಗಳಿಲ್ಲದ ಅತಿಯಾದ ನಿರೀಕ್ಷೆಗಳೇ ಕಾರಣ.
ಆತ ಯಾಗಲೂ ಸರಿಯಾಗಿಯೇ ಹೇಳುತ್ತಾನೆ : ಇದು ಅಸಾಧ್ಯದ ಮಾತು. ನೀವೆಂದೂ ಈ ರೀತಿಯ ಅಪೇಕ್ಷೆ ಇಟ್ಟುಕೊಳ್ಳಲೇಬೇಡಿ. ಏಕೆಂದರೆ ಯಾರೊಬ್ಬರೂ ಪರ್ಫೆಕ್ಟ್ ಅಲ್ಲ. ಗಂಡ ಯಾವುದೇ ಸಿನಿಮಾದ ಆದರ್ಶ ಹೀರೋನ ರೀತಿ ಅಲ್ಲ. ಅವನು ಯಾವಾಗಲೂ ಸತ್ಯವನ್ನೇ ಹೇಳುತ್ತಾನೆ. ಸರಿಯಾದ ದಾರಿಯಲ್ಲಿ ನಡೆಯುತ್ತಾನೆ ಎಂದೆಲ್ಲ ಕಲ್ಪನೆ ಮಾಡಿಕೊಳ್ಳಬೇಡಿ. ಅವನೊಬ್ಬ ಸಾಮಾನ್ಯ ಮನುಷ್ಯ. ಎಲ್ಲರ ಹಾಗೆ ಅವನೂ ಕೂಡ ತಪ್ಪು ಮಾಡುತ್ತಾನೆ. ಯಾವ ವಿಷಯವನ್ನು ಹೇಳಬಾರದೊ, ಆ ವಿಷಯವನ್ನು ಕೂಡ ಅವನು ಒಮ್ಮೊಮ್ಮೆ ಬಾಯ್ಬಿಟ್ಟು ಹೇಳುತ್ತಾನೆ. ಎಷ್ಟೋ ಸಲ ವಿಷಯಗಳು ತಪ್ಪು ಕಲ್ಪನೆಯಿಂದ ಹೊರ ಬರುತ್ತವೆ. ಯಾವಾಗಲಾದರೊಮ್ಮೆ ಇಂತಹ ಘಟನೆಗಳು ಘಟಿಸಿದರೆ ಅದರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇವೇ ಸಂಗತಿಗಳು ನಿಯಮಿತವಾಗಿ ಘಟಿಸುತ್ತಿದ್ದರೆ ಆಗ ನೀವು ಯೋಚಿಸುವುದು ಅನಿವಾರ್ಯವಾಗುತ್ತದೆ.
ನಾವು ಯಾವಾಗಲೂ ಜೊತೆಗಿರುತ್ತೇವೆ : ಕ್ಷಮಿಸಿ, ಇದು ವಾಸ್ತವ ಸಂಗತಿಯಲ್ಲ. ಭವಿಷ್ಯದ ಅಂತರಂಗದಲ್ಲಿ ಏನು ಅಡಗಿದೆ ಎಂದು ಅರಿಯುವುದು ಕಷ್ಟಕರ. ಜೀವನ ಹಲವು ವಿಚಿತ್ರಗಳ ಸಂಗಮ. ಜೀವನದಲ್ಲಿ ಹಲವು ವಿಚಿತ್ರ ಘಟನೆಗಳು ಘಟಿಸುತ್ತವೆ. ನಿಮ್ಮಿಬ್ಬರಲ್ಲಿ ಯಾರು, ಯಾವಾಗ ಅನಾರೋಗ್ಯ ಪೀಡಿತರಾಗುತ್ತಾರೊ ಹೇಳಲಿಕ್ಕಾಗದು. ನಿಮ್ಮ ಸಂಬಂಧದ ಪ್ರತಿಯೊಂದು ಕ್ಷಣದ ಆನಂದವನ್ನೂ ಅನುಭವಿಸುತ್ತಾ ಇರಿ. ನಮ್ಮ ಪ್ರೀತಿಯ ಕಥೆ ಯಾವುದೊ ಸಿನಿಮಾ ಕಥೆಯ ಹಾಗೆ ನಡೆಯುತ್ತದೆಂದು ಭಾವಿಸಬೇಡಿ. ಜೀವನದಲ್ಲಿ ಏರಿಳಿತಗಳು ಇದ್ದದ್ದೇ. ಅದಕ್ಕಾಗಿ ನಮ್ಮನ್ನು ನಾವು ಸನ್ನದ್ದುಗೊಳಿಸುವುದು ಅತ್ಯವಶ್ಯಕ.
– ಮೋನಿಕಾ