ಗಂಡಹೆಂಡತಿಯ ಸಂಬಂಧದಲ್ಲಿ ಪ್ರೀತಿಭರಿತ ಒಂದಿಷ್ಟು ಚಿಕ್ಕಪುಟ್ಟ ಜಗಳಗಳು, ಮುನಿಸು, ಹುಸಿಕೋಪ ಇವೆಲ್ಲ ಇದ್ದದ್ದೇ. ನಾವಿಲ್ಲಿ ಕೆಲವು ಸಂಗತಿಗಳನ್ನು ಪ್ರಸ್ತಾಪಿಸುತ್ತಿದ್ದು, ಅವುಗಳಿಗಾಗಿ ಸಾಮಾನ್ಯವಾಗಿ ಪ್ರೀತಿಭರಿತ ಜಗಳಗಳು ಆಗುತ್ತವೆ.

ಮಹಿಳೆಯರಲ್ಲಿ ಸರ್‌ಪ್ರೈಸ್‌ ಕ್ರೇಜ್‌: ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರಲ್ಲಿ ಸರ್‌ಪ್ರೈಸ್‌ನ ಕ್ರೇಜ್‌ ಹೆಚ್ಚಿಗೆ ಇರುತ್ತದೆ. ಈಚೆಗೆ ಪತಿ ತನಗೆ ಸರ್‌ಪ್ರೈಸ್‌ ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ಅವರು ಜಗಳ ತೆಗೆಯುತ್ತಾರೆ. ಇದು ಸಾಮಾನ್ಯ ಸಂಗತಿ. ಆದರೆ ಇದು ಒಮ್ಮೊಮ್ಮೆ ಜಗಳಕ್ಕೆ ಕಾರಣ ಆಗುತ್ತದೆ.

ಅತಿ ವ್ಯಸ್ತತೆ : ಗಂಡನ ಅತಿ ವ್ಯಸ್ತತೆಯ ಕಾರಣದಿಂದಲೂ ಹೆಂಡತಿಗೆ ಕೋಪ ಬರುತ್ತದೆ. ಗಂಡ ರಜೆ ಪಡೆದು ತನಗೆ ಸಮಯ ನೀಡದೇ ಇರುವ ಬಗ್ಗೆ ಅವರು ಜಗಳವಾಡುತ್ತಾರೆ. ರಜೆಯ ಕೊರತೆ ತವರಿಗೆ ಹೋಗುವ ಕಾರ್ಯಕ್ರಮ ರದ್ದಾದಲ್ಲಿ ಅವಳು ಪತಿಯ ನೆಮ್ಮದಿಗೆ ಭಂಗ ತರುತ್ತಾಳೆ.

ಸಾಮಗ್ರಿಗಳು ಸೂಕ್ತ ಜಾಗದಲ್ಲಿ ಸಿಗದೆ ಇರುವುದು : ಪುರಷರಿಗೆ ಯಾವ ಒಂದು ಸಂಗತಿ ಬಹಳ ಕೋಪ ಉಂಟು ಮಾಡುತ್ತದೆ ಎಂದರೆ, ಅದು ಅವರಿಗೆ ಸಂಬಂಧಪಟ್ಟ ಸಾಮಗ್ರಿಗಳು ನಿಗದಿತ ಸ್ಥಳದಲ್ಲಿ ಲಭ್ಯವಾಗದೇ ಇರುವುದು. ಆಗ ಗಂಡ ಬಹಳ ನಿರಾಳನಾಗುತ್ತಾನೆ. ಹೆಂಡತಿ ಹೆಚ್ಚು ಸುರಕ್ಷಿತವಾಗಿಡಲು ಮತ್ತು ಸ್ವಚ್ಛತೆಯ ಕಾರಣದಿಂದ ಅವನ್ನು ಸ್ಥಳಾಂತರ ಮಾಡಿರಬಹುದು.

ಮೊದಲಿನ ಪ್ರೀತಿ ಈಗಿಲ್ಲ : ಇದೊಂದು ಸಾಮಾನ್ಯ ಸಮಸ್ಯೆ. ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿದ್ದರೆ, ಅತಿ ವ್ಯಸ್ತತೆ ಇಬ್ಬರ ಮಧ್ಯದ ರೋಮಾನ್ಸ್ ಗೆ ಕತ್ತರಿ ಹಾಕುತ್ತದೆ. ಇಬ್ಬರೂ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ಮಗ್ನರಾಗುತ್ತಾರೆ.

ಬಟ್ಟೆಗಳನ್ನು ಬೇಕಾಬಿಟ್ಟಿಯಾಗಿ ಬಿಸಾಡುವುದು : ಇದು ಖಾಯಂ ಜಗಳದ ವಿಷಯ. ಒದ್ದೆ ಟವೆಲ್‌, ಕೊಳಕಾದ ಸಾಕ್ಸ್ ಹಾಗೂ ಇತರೆ ಬಟ್ಟೆಗಳನ್ನು ಬೇಕಾಬಿಟ್ಟಿ ಎಸೆಯುವುದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಬಹುದು.

ಸ್ನೇಹಿತರೊಂದಿಗಿನ ಪ್ರೀತಿ : ಹೆಂಡತಿಗೆ ಎಲ್ಲಕ್ಕೂ ಹೆಚ್ಚಿನ ತೊಂದರೆ ಗಂಡನ ಸ್ನೇಹಿತರಿಂದ ಆಗುತ್ತದೆ. ಅದು ಪ್ರತ್ಯಕ್ಷವಾಗಿ ಅಲ್ಲ, ಪರೋಕ್ಷವಾಗಿ. ಎಷ್ಟೋ ಸಲ ಗಂಡ ತನ್ನ ಸ್ನೇಹಿತರೊಂದಿಗೆ ಕಾಲ ಕಳೆಯಲು ಹೆಂಡತಿಯನ್ನು ನಿರ್ಲಕ್ಷಿಸುತ್ತಾನೆ. ಹೀಗಾಗಿ ಹೆಂಡತಿ ನನ್ನ ಜೊತೆ ಹೊರಗೆ ಹೋಗಲು ನಿಮ್ಮ ಬಳಿ ಸಮಯವೇ ಇಲ್ಲ ಎಂದು ಆಗಾಗ ದೂರುತ್ತಾಳೆ.

ಸದಾ ಟೀಕಿಸುವುದು : ಇದು ಬಹಳಷ್ಟು ಜನರಲ್ಲಿ ಕಂಡು ಬರುವ ದೂರಾಗಿದೆ. ಗಂಡಹೆಂಡತಿ ಮನೆಯಲ್ಲಿದ್ದಷ್ಟು ಹೊತ್ತು ಒಬ್ಬರ ಮೇಲೆ ಒಬ್ಬರು ದೂರು ಹೇಳುತ್ತಿರುತ್ತಾರೆ. ಹೊರಗೆ ಮಾತ್ರ ಇತರರ ಜೊತೆ ಚೆನ್ನಾಗಿಯೇ ಮಾತನಾಡುತ್ತಿರುತ್ತಾರೆ.

ಏನು ಅಡುಗೆ ಮಾಡಲಿ?  :  ಇದು ಪತ್ನಿಯರ ದೊಡ್ಡ ಸಮಸ್ಯೆ.  ದಿನ ಒಂದೇ ತೆರನಾದ ತಿಂಡಿ ತಿಂದು ತಿಂದೂ ಬೇಜಾರಾಗಿದೆ ಎಂದು ಗಂಡಂದಿರು ತಮ್ಮ ಪತ್ನಿಯರಿಗೆ ದೂರು ಹೇಳುತ್ತಿರುತ್ತಾರೆ. ಇದು ಕೂಡ ಜಗಳಕ್ಕೆ ಕಾರಣವಾಗಬಹುದು.

ಯಾವ ಸಂಬಂಧ ಕೂಡ ಪರ್ಫೆಕ್ಟ್ ಅಲ್ಲ : ಒಂದು ವಾಸ್ತವ ಸಂಗತಿ ಏನೆಂದರೆ, ಯಾವುದೇ ಸಂಬಂಧ ಪರ್ಫೆಕ್ಟ್ ಅಲ್ಲ. ನನ್ನ ಎಣಿಕೆಯ ಪ್ರಕಾರವೇ ನಡೆಯುತ್ತದೆ ಅಥವಾ ಒಂದು ಸಿನಿಮಾ ಕಥೆಯ ಹಾಗೆ ಸಂಬಂಧ ಇರಬೇಕೆಂದು ಯೋಚಿಸುದು ತಪ್ಪು. ಪ್ರತಿಯೊಂದು ಸಂಬಂಧ ಬೇರೆ ಬೇರೆ ರೀತಿಯೇ ಇರುತ್ತದೆ. ಪ್ರತಿಯೊಂದು ಸಂಬಂಧಕ್ಕೂ ನಿಮ್ಮ ಪ್ರೀತಿ, ಸಮರ್ಪಣೆ, ಶ್ರದ್ಧೆ ಹಾಗೂ ಒಳ್ಳೆಯ ಮನಸ್ಸು ಕೂಡ ಅತ್ಯಗತ್ಯ. ಎಷ್ಟೋ ಸಲ ಸಂಬಂಧ ತುಂಡರಿಸಲು ನಮ್ಮಲ್ಲಿರುವ ರೆಕ್ಕೆಪುಕ್ಕಗಳಿಲ್ಲದ ಅತಿಯಾದ ನಿರೀಕ್ಷೆಗಳೇ ಕಾರಣ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ