ಬ್ಲೂಬೆರಿ ಕೇಕ್
ಸಾಮಗ್ರಿ : ಒಂದಿಷ್ಟು ವೆನಿಲಾ ಸ್ಪಂಜ್ ಕೇಕ್, 500 ಗ್ರಾಂ ವಿಪ್ಡ್ ಕ್ರೀಂ, ಅರ್ಧ ಕಪ್ ಬ್ಲೂಬೆರಿ ಟಾಪಿಂಗ್, ಕೇಕ್ ತುಂಡುಗಳನ್ನು ಡಿಪ್ ಮಾಡಲು ತುಸು ಶುಗರ್ ಸಿರಪ್, ಡೆಕೋರೇಶನ್‌ಗಾಗಿ ಬ್ಲೂಬೆರಿ ಗ್ಲೇಸ್.
ವಿಧಾನ : ಕೇಕ್ ತುಂಡುಗಳನ್ನು 3 ಸಮಭಾಗಗಳಲ್ಲಿ ಕತ್ತರಿಸಿ ಸಕ್ಕರೆ ಪಾಕದಲ್ಲಿ ಅದ್ದಿಡಿ. ನಂತರ ಪ್ರತಿ ತುಂಡಿಗೂ ಕ್ರೀಂ ಹಚ್ಚಿ ಅದರ ಮೇಲೆ ಬ್ಲೂಬೆರಿಯ ಟಾಪಿಂಗ್ ಮಾಡಿ. ಉಳಿದ ಕ್ರೀಮನ್ನು ಕೇಕ್ ಮೇಲೆ ಹಾಕಿ ಬ್ಲೂಬೆರಿಯಿಂದ ಅಲಂಕರಿಸಿ, ಸರ್ವ್ ಮಾಡಿ.
ಡ್ರೈ ಫ್ರೂಟ್ಸ್ ಕೇಕ್
ಸಾಮಗ್ರಿ : 2 ಕಪ್ ಮೈದಾ, 1 ಕಪ್ ಕರಗಿದ ಬೆಣ್ಣೆ, ಅರ್ಧರ್ಧ ಕಪ್ ಬೂರಾ ಸಕ್ಕರೆ, ಬಾದಾಮಿ ಪುಡಿ, ಟೂಟೀಫ್ರೂಟಿ, 1 ಕಪ್ ಸಣ್ಣಗೆ ಹೆಚ್ಚಿದ ಡ್ರೈ ಫ್ರೂಟ್ಸ್ (ಗೋಡಂಬಿ, ದ್ರಾಕ್ಷಿ, ಖರ್ಜೂರ, ಪಿಸ್ತಾ, ಅಖ್ರೋಟ್), 2-2 ಸಣ್ಣ ಚಮಚ ವೆನಿಲಾ ಎಸೆನ್ಸ್ ಬೇಕಿಂಗ್ ಪೌಡರ್, ಅರ್ಧ ಕಪ್ ಹಾಲು, ಅಲಂಕರಿಸಲು ಬಾದಾಮಿ ಚೂರು, ಟೂಟಿಫ್ರೂಟಿ.
ವಿಧಾನ : ಕೇಕ್ ಟಿನ್ ಒಳಭಾಗಕ್ಕೆ ತುಪ್ಪ ಸವರಿ, ತುಸು ಮೈದಾ ಉದುರಿಸಿ. ಒಂದು ಸಣ್ಣ ಬಟ್ಟಲಿಗೆ ಡ್ರೈಫ್ರೂಟ್ಸ್ ಹಾಕಿಟ್ಟು, ಅದರ ಮೇಲೆ ತುಸು ಮೈದಾ ಉದುರಿಸಿ. ಆಮೇಲೆ 2 ಕಪ್ ಮೈದಾ ಜರಡಿಯಾಡಿಕೊಂಡು ಅದಕ್ಕೆ ಬೇಕಿಂಗ್ ಪೌಡರ್ ಉಪ್ಪು, ಬಾದಾಮಿ ಪುಡಿ ಸೇರಿಸಿ. ಒಂದು ಬೇಸನ್ನಿಗೆ ಬೂರಾ ಸಕ್ಕರೆ, ಬೆಣ್ಣೆ ಬೆರೆಸಿ ಚೆನ್ನಾಗಿ ನೊರೆ ಬರುವಂತೆ ಗೊಟಾಯಿಸಿ. ಆಮೇಲೆ ಇದಕ್ಕೆ ವೆನಿಲಾ ಎಸೆನ್ಸ್, ಬೀಟ್ ಮಾಡಿದ ಮೊಟ್ಟೆ ಹಾಕಿ ಮತ್ತೆ ಗೊಟಾಯಿಸಿ. ಆಮೇಲೆ ಮೈದಾ, ಹಾಲಿನ ಮೂರನೇ ಒಂದು ಭಾಗ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಅನಂತರ ಉಳಿದ ಮೈದಾ, ಹಾಲಿನ ಅರ್ಧರ್ಧ ಭಾಗ ಬೆರೆಸಿ ಕಲಸಬೇಕು. ಕೊನೆಯಲ್ಲಿ ಉಳಿದೆಲ್ಲ ಹಾಲು, ಮೈದಾ ಬೆರೆಸಿ ಕಲಸಿ, ಚೆನ್ನಾಗಿ ನಾದಬೇಕು. ಆಮೇಲೆ ಇದಕ್ಕೆ ಡ್ರೈಫ್ರೂಟ್ಸ್, ಟೂಟಿಫ್ರೂಟಿ ಸೇರಿಸಿ. ಈ ಮಿಶ್ರಣವನ್ನು ಕೇಕ್ ಟಿನ್ನಿಗೆ ಹಾಕಿಟ್ಟು, ಅದರ ಮೇಲೆ ಇನ್ನಷ್ಟು ಬಾದಾಮಿ, ಟೂಟಿಫ್ರೂಟಿ ಉದುರಿಸಿ. ಇದನ್ನು ಮೊದಲೇ ಪ್ರೀ ಹೀಟ್ ಮಾಡಿದ ಓವನ್ನಿನಲ್ಲಿ ಸುಮಾರು 170 ಡಿಗ್ರಿ ಶಾಖದಲ್ಲಿ 1 ಗಂಟೆ ಕಾಲ ಹದನಾಗಿ ಬೇಕ್ ಮಾಡಿ. ಕೂಲ್ ಆದ ನಂತರ ಹೊರತೆಗೆದು ಚಿತ್ರದಲ್ಲಿರುವಂತೆ ಕತ್ತರಿಸಿ, ಸವಿಯಲು ಕೊಡಿ.
ಚಾಕಲೇಟ್ ಕಪ್ ಕೇಕ್
ಸಾಮಗ್ರಿ : 1-1 ಕಪ್ ಮೈದಾ ಕೆಸ್ಟರ್ ಶುಗರ್, ಅರ್ಧರ್ಧ ಕಪ್ ಹಾಲು, ಆಲಿವ್ ಎಣ್ಣೆ, ಅದರಲ್ಲಿ ಅರ್ಧ ಕೋಕೋ ಪುಡಿ, ಅರ್ಧರ್ಧ ಚಮಚ ಬೇಕಿಂಗ್ ಪೌಡರ್, ಬೇಕಿಂಗ್ ಸೋಡ, ವೆನಿಲಾ ಎಸೆನ್ಸ್, 1 ಮೊಟ್ಟೆ, ತುಸು ಬಿಸಿ ನೀರು, ಉಪ್ಪು.
ವಿಧಾನ : ಮೊದಲು 160 ಡಿಗ್ರಿ ಶಾಖದಲ್ಲಿ ಓವನ್ ಪ್ರೀಹೀಟ್ ಮಾಡಿ. ನಂತರ ಮಫಿನ್ ಪ್ಯಾನ್‌ನಲ್ಲಿ ಬಟರ್ ಹರಡಿ ಒಂದು ಬದಿಗಿಡಿ. ಒಂದು ಬೇಸನ್ನಿಗೆ ಮೈದಾ, ಕೋಕೋ ಪುಡಿ, ಬೇಕಿಂಗ್ ಪೌಡರ್, ಸೋಡ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿಕೊಂಡು ಒಂದು ಬದಿಗಿರಿಸಿ. ಮತ್ತೊಂದು ಬಟ್ಟಲಲ್ಲಿ ಒಡೆದ ಮೊಟ್ಟೆ, ಹಾಲು, ಎಣ್ಣೆ, ವೆನಿಲಾ ಎಸೆನ್ಸ್, ಉಪ್ಪು ಸೇರಿಸಿ ಚೆನ್ನಾಗಿ ಗೊಟಾಯಿಸಿ. ಈ ಬ್ಯಾಟರ್‌ಗೆ ಸಕ್ಕರೆ, ಉಳಿದ ಡ್ರೈ ಸಾಮಗ್ರಿ ಸೇರಿಸಿ. ನಂತರ ಇದನ್ನು ಮಿಕ್ಸಿಗೆ ಹಾಕಿ ನೊರೆ ನೊರೆ ಉಕ್ಕುವಂತೆ ಸ್ಮೂಥ್ ಮಾಡಿ. ತುಸು ಬಿಸಿ ನೀರು ಬೆರೆಸಿ ಮತ್ತೊಮ್ಮೆ ಚಲಾಯಿಸಿ. ಈ ರೀತಿ ತಯಾರಾದ ಬ್ಯಾಟರ್‌ನ್ನು 15 ನಿಮಿಷ ಒಂದೆಡೆ ಮುಚ್ಚಿರಿಸಿ. ಆಮೇಲೆ ಚೆನ್ನಾಗಿ ನಾದಬೇಕು. ನಂತರ ಕಪ್ ಕೇಕ್ ಕಂಟೇನರ್‌ನಲ್ಲಿ ಮುಕ್ಕಾಲು ಭಾಗ ಮಿಶ್ರಣ ತುಂಬಿಸಿ. ಬಿಸಿಯಾಗಿರುವ ಓವನ್ನಿನಲ್ಲಿ 20 ನಿಮಿಷ ಬೇಕ್ ಮಾಡಿ. ನಂತರ ಇವನ್ನು ಹೊರತೆಗೆದು ಕೂಲ್ ಮಾಡಿ, ಸವಿಯಲು ಕೊಡಿ.
ಕಿವೀ ಕೇಕ್
ಸಾಮಗ್ರಿ : 1 ದೊಡ್ಡ ವೆನಿಲಾ ಸ್ಪಂಜ್ ಕೇಕ್, 500 ಗ್ರಾಂ ಚೆನ್ನಾಗಿ ಬೀಟ್ ಮಾಡಿದ ಕ್ರೀಂ, 1 ಕಪ್‌ಸಣ್ಣಗೆ ಹೆಚ್ಚಿದ ಕಿವೀ ಫ್ರೂಟ್, ಕೇಕ್ ತುಂಡುಗಳನ್ನು ಅದ್ದಲು ತುಸು ಸಕ್ಕರೆ ಪಾಕ.
ವಿಧಾನ : ಎಲ್ಲಕ್ಕೂ ಮೊದಲು ವೆನಿಲಾ ಸ್ಪಂಜ್ ಕೇಕ್‌ನ್ನು 3 ಭಾಗವಾಗಿ ಕತ್ತರಿಸಿ, ಸಕ್ಕರೆ ಪಾಕದಲ್ಲಿ ಅದ್ದಿ ಪಕ್ಕಕ್ಕಿಡಿ. ನಂತರ ಪ್ರತಿ ತುಂಡಿಗೂ ಕ್ರೀಂ ಸವರಿಡಿ. ಅದರ ಮೇಲೆ ಕ್ರಶ್ಡ್ ಕಿವೀ ಹರಡಬೇಕು. ಆಮೇಲೆ ಉಳಿದ ಕ್ರೀಮನ್ನು ಕೇಕ್‌ನ ಬದಿಗಳಿಗೆ ಸವರಿಡಿ. ಆಮೇಲೆ ಚಿತ್ರದಲ್ಲಿರುವಂತೆ ಅಲಂಕರಿಸಿ, ಇದೀಗ ಕಿವೀ ಕೇಕ್ ರೆಡಿ!
ಮೋಕಾ ಲೇಯರ್ಡ್ ಕೇಕ್
ಮೂಲ ಸಾಮಗ್ರಿ : ಚಾಕಲೇಟ್ ಕೇಕಿಗಾಗಿ 4 ಮೊಟ್ಟೆ, 100 ಗ್ರಾಂ ವಿಪ್ಡ್ ಕ್ರೀಂ.
ಪಾಕಕ್ಕಾಗಿ ಸಾಮಗ್ರಿ : ಅರ್ಧ ಕಪ್ ನೀರು, 1 ದೊಡ್ಡ ಚಮಚ ಸಕ್ಕರೆ.
ಟ್ರಫ್ ಐಸಿಂಗ್‌ಗಾಗಿ ಸಾಮಗ್ರಿ : 200 ಗ್ರಾಂ ಕ್ರೀಂ, 250 ಗ್ರಾಂ ಡಾರ್ಕ್ ಕುಕಿಂಗ್ ಚಾಕಲೇಟ್ (ತುಂಡರಿಸಿ ಇಡಿ), ಅರ್ಧ ಸಣ್ಣ ಚಮಚ ಇನ್‌ಸ್ಟೆಂಟ್ ಕಾಫಿಪುಡಿ.
ಟ್ರಫ್‌ನ ವಿಧಾನ : ಸಣ್ಣ ಬಾಣಲೆಯಲ್ಲಿ ಕ್ರೀಂ ಬಿಸಿ ಮಾಡಿ (ಮಂದ ಉರಿ ಇರಲಿ). ಇದು ಕುದಿಯಬಾರದು. ಆಮೇಲೆ ಇದಕ್ಕೆ ಕುಕಿಂಗ್ ಚಾಕಲೇಟ್, ಕಾಫಿಪುಡಿ ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿ ಬದಿಗಿರಿಸಿ.
ಮೋಕಾ ಲೇಯರ್‌ನ ವಿಧಾನ : ಅರ್ಧ ಕಪ್ ಟ್ರಫ್ ಮಿಶ್ರಣವನ್ನು ಕ್ರೀಂ ಜೊತೆ ಚೆನ್ನಾಗಿ ಬೆರೆಸಿ ಫ್ರಿಜ್‌ನಲ್ಲಿಡಿ. ಉಳಿದ ಭಾಗ ಹೊರಗೇ ಇರಲಿ. ಚಾಕಲೇಟ್ ಸ್ಪಂಜ್ ಕೇಕ್‌ನ್ನು 3 ಸಮಭಾಗಗಳಲ್ಲಿ ಕತ್ತರಿಸಿ. ನಂತರ ಬಾಟಮ್ ಲೇಯರ್‌ನ್ನು ಪಾಕದಲ್ಲಿ ಅದ್ದಿ ಎಚ್ಚರಿಕೆಯಿಂದ ಕೇಕ್ ಬೋರ್ಡ್ ಮೇಲಿರಿಸಿ. ಆಮೇಲೆ ಇದಕ್ಕೆ ತುಸು ಚಾಕಲೇಟ್, ಕ್ರೀಂ ಸವರಬೇಕು. ನಂತರ ಕೇಕಿನ 2ನೇ ಪದರವನ್ನು ಪಾಕದಲ್ಲಿ ಅದ್ದಿ, ಅದಕ್ಕೂ ಚಾಕಲೇಟ್, ಕ್ರೀಂ ಮಿಕ್ಸ್ಚರ್ ಹಚ್ಚಬೇಕು. ಕೊನೆಯಲ್ಲಿ ಅಂತಿಮ ಪದರನ್ನು ಪಾಕದಲ್ಲಿ ಅದ್ದಿ ಇದರ ಮೇಲೆ ಜೋಡಿಸಿ. ಇದರ ಮೇಲೂ ಚಾಕಲೇಟ್, ಕ್ರೀಂ ಮಿಕ್ಸ್ಚರ್ ಸವರಬೇಕು. ಆಮೇಲೆ ಇದನ್ನು 10-12 ನಿಮಿಷ ಫ್ರಿಜ್‌ನಲ್ಲಿರಿಸಿ ಚೆನ್ನಾಗಿ ಕೂಲ್ ಮಾಡಿ. ಹೊರತೆಗೆದ ಮೇಲೆ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಬಟರ್ ಸ್ಕಾಚ್ ಕೇಕ್
ಸಾಮಗ್ರಿ : 1 ಸ್ಪಂಜ್ ಕೇಕ್, 2-3 ಸಣ್ಣ ಚಮಚ ಕ್ಯಾರೆಮಲ್ ಸಾಸ್, 3 ಕಪ್ ವಿಪ್ಡ್ ಕ್ರೀಂ, ಕೆಲವು ಹನಿ ಬಟರ್ ಸ್ಕಾಚ್ ಗ್ರಾನ್ಯುಯೆಲ್ಸ್, 2 ಹನಿ ಲೆಮನ್ ಯೆಲ್ಲೋ ಕಲರ್, ಕೇಕ್ ಡಿಪ್ ಮಾಡಲು ತುಸು ಸಕ್ಕರೆ ಪಾಕ, 1 ಸಣ್ಣ ಕೋನ್ ಚಾಕಲೇಟ್ ಗನಾಷ್.
ವಿಧಾನ : ಕ್ರೀಮನ್ನು ಚೆನ್ನಾಗಿ ಬೀಟ್ ಮಾಡಿ. ನಂತರ ಇದಕ್ಕೆ ಕ್ಯಾರೆಮಲ್ ಸಾಸ್, ಬಟರ್ ಸ್ಕಾಚ್ ಎಸೆನ್ಸ್ ಬೆರೆಸಿಕೊಂಡು ಒಂದು ಕಡೆ ಇಡಿ. ಈಗ ಸ್ಪಂಜ್ ಕೇಕ್‌ನ್ನು 3 ಭಾಗವಾಗಿ ಕತ್ತರಿಸಿ, ಬಾಟಮ್ ಲೇಯರ್‌ನ್ನು ಪಾಕದಲ್ಲಿ ಅದ್ದಿ, ಟರ್ನ್ ಟೇಬಲ್ ಮೇಲೆ ಇರಿಸಿ. ಇದರ ಮೇಲೆ ಕ್ರೀಮ್, ಬಟರ್ ಸ್ಕಾಚ್ ಗ್ರಾನ್ಯುಯೆಲ್ಸ್ ಹಾಕಿಡಿ. ನಂತರ ಸ್ಪಂಜ್ ಕೇಕಿನ ಸೆಕೆಂಡ್ ಲೇಯರ್‌ನಿಂದ ಅದನ್ನು ಕವರ್ ಮಾಡುತ್ತಾ, ಪಾಕದಲ್ಲಿ ಅದ್ದಿಡಿ. ಇದರ ಮೇಲೆ ಕ್ರೀಮ್, ಬಟರ್ ಸ್ಕಾಚ್ ಗ್ರಾನ್ಯುಯೆಲ್ಸ್ ಹಾಕಿಡಿ. ಇದೇ ತರಹ 3ನೇ ಪದರಕ್ಕೂ ಮಾಡಿ. ನಂತರ ಕೇಕಿನ ಮೇಲ್ಭಾಗ, ಬದಿಗಳನ್ನು ಚೆನ್ನಾಗಿ ಕ್ರೀಮಿನಿಂದ, ಕ್ಯಾರೆಮಲ್ ಸಾಸ್ ಮಿಕ್ಸ್ಚರ್‌ನಿಂದ ಕವರ್ ಮಾಡಿಬಿಡಿ. ಈಗ ಟೂಥ್‌ಪಿಕ್ ನೆರವಿನಿಂದ ಕೇಕ್ ಮೇಲೆ ಡಿಸೈನ್ ಮಾಡಿ. ಚಿತ್ರದಲ್ಲಿರುವಂತೆ ಚಾಕಲೇಟ್ ಗನಾಷ್ ಕೋನ್ ಸಹಿತ ಅಲಂಕರಿಸಿ.
ಬ್ರೌನಿ ಕೇಕ್
ಸಾಮಗ್ರಿ : 125 ಗ್ರಾಂ ಡಾರ್ಕ್ ಚಾಕಲೇಟ್, 125 ಗ್ರಾಂ ಬೆಣ್ಣೆ, 2 ಮೊಟ್ಟೆ, 100 ಗ್ರಾಂ ಬೂರಾ ಸಕ್ಕರೆ, 50 ಗ್ರಾಂ ಮೈದಾ, ಅರ್ಧ ಸಣ್ಣ ಚಮಚ ಬೇಕಿಂಗ್ ಪೌಡರ್, 2 ಸಣ್ಣ ಚಮಚ ವೆನಿಲಾ ಎಸೆನ್ಸ್, ಸಣ್ಣಗೆ ತುಂಡರಿಸಿದ 50-50 ಗ್ರಾಂ ಮಿಲ್ಕ್ ಚಾಕಲೇಟ್, ಡಾರ್ಕ್ ಚಾಕಲೇಟ್.
ವಿಧಾನ : ಮೈಕ್ರೋವೇವ್‌ನಲ್ಲಿ ಬೆಣ್ಣೆ, ಚಾಕಲೇಟ್ ಕರಗಿಸಿ. ನಂತರ ಸಕ್ಕರೆ, ಮೊಟ್ಟೆಗಳನ್ನು ಬೇರೆ ಬೇರೆ ಬಟ್ಟಲುಗಳಲ್ಲಿ ಚೆನ್ನಾಗಿ ಬೀಟ್ ಮಾಡಿ ಕಸ್ಟರ್ಡ್ ತರಹ ಮಾಡಿ. ನಂತರ ಕರಗಿಸಿದ ಬೆಣ್ಣೆ, ಚಾಕಲೇಟ್ ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿ. ನಂತರ ಕೊನೆಯಲ್ಲಿ ಹೆಚ್ಚಿಕೊಂಡ ಎರಡೂ ಬಗೆಯ ಚಾಕಲೇಟ್ ಬೆರೆಸಿ, 180 ಡಿಗ್ರಿ ಶಾಖದಲ್ಲಿ 25 ನಿಮಿಷ ಬೇಕ್ ಮಾಡಿ.
ರೆಡ್ ವೆಲ್ವೆಟ್ ಕೇಕ್
ಮೂಲ ಸಾಮಗ್ರಿ : 200 ಗ್ರಾಂ ಮೈದಾ, 4 ಚಮಚ ಕೋಕೋ ಪುಡಿ, ಅರ್ಧರ್ಧ ಚಮಚ ಬೇಕಿಂಗ್ ಪೌಡರ್/ಸೋಡ, 100 ಗ್ರಾಂ ಬೆಣ್ಣೆ, 200 ಗ್ರಾಂ ಕೆಸ್ಟರ್ ಶುಗರ್, ಅರ್ಧ ಕಪ್ ಹಾಲು, ಅರ್ಧ ಸಣ್ಣ ಚಮಚ ವಿನಿಗರ್, ಕೆಲವು ಹನಿ ರೆಡ್ ಜೆಲ್ ಬೆರೆಸಿ ಕದಡಿಕೊಳ್ಳಿ, ಅರ್ಧ ಸಣ್ಣ ಚಮಚ ವೆನಿಲಾ ಎಸೆನ್ಸ್, 2 ಚಿಟಕಿ ಉಪ್ಪು.
ಕ್ರೀಂ ಚೀಸ್ ಫ್ರಾಸ್ಟಿಂಗ್‌ನ ಸಾಮಗ್ರಿ : 200 ಗ್ರಾಂ ಬೀಟ್ ಮಾಡಿದ ಕ್ರೀಂ, 200 ಗ್ರಾಂ ಕ್ರೀಂ ಚೀಸ್, 100 ಗ್ರಾಂ ಐಸಿಂಗ್ ಶುಗರ್. ವಿಧಾನ : ಒಂದು ಬೇಸನ್ನಿಗೆ ಮೈದಾ, ಕೋಕೋ ಪುಡಿ, ಬೇಕಿಂಗ್ ಪೌಡರ್/ಸೋಡ ಸೇರಿಸಿ ಬೆರೆಸಿಕೊಂಡು ಒಂದು ಕಡೆ ಇಡಿ. ನಂತರ ಬೆಣ್ಣೆಗೆ ಸಕ್ಕರೆ ಬೆರೆಸಿ ಗೊಟಾಯಿಸಿ. ಈಗ ಮೊಸರು, ಹಾಲಿನ ಮಿಶ್ರಣ, ವೆನಿಲಾ ಎಸೆನ್ಸ್ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಡ್ರೈ ಸಾಮಗ್ರಿ ಬೆರೆಸಿಕೊಳ್ಳಿ. ಕೇಕ್ ಟಿನ್ನಿಗೆ ತುಪ್ಪ ಸವರಿ, ಅದಕ್ಕೆ ಮಿಶ್ರಣ ತುಂಬಿಸಿ. ಮೊದಲೇ ಬಿಸಿ ಮಾಡಿದ್ದ ಓವನ್‌ನಲ್ಲಿ 160 ಡಿಗ್ರಿ ಶಾಖದಲ್ಲಿ 30 ನಿಮಿಷ ಬೇಕ್ ಮಾಡಿ.
ಕ್ರೀಂ ಚೀಸ್ ಫ್ರಾಸ್ಟಿಂಗ್ ವಿಧಾನ : ಚೀಸ್ ಕ್ರೀಮನ್ನು ಚೆನ್ನಾಗಿ ಸಾಫ್ಟ್ ಆಗುವಂತೆ ಬೀಟ್ ಮಾಡಿ. ನಂತರ ಇದಕ್ಕೆ ಐಸಿಂಗ್ ಶುಗರ್, ಕ್ರೀಂ ಬೆರೆಸಿ ಮತ್ತೆ ಗೊಟಾಯಿಸಿ. ಹೀಗೆ ಸಿದ್ಧಗೊಂಡ ಮಿಶ್ರಣವನ್ನು ಪೈಪಿಂಗ್ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಚಿತ್ರದಲ್ಲಿರುವಂತೆ ಕೇಕ್‌ನ್ನು ಅಲಂಕರಿಸಿ.
ಟ್ರಫ್ ಕೇಕ್ ಐಸಿಂಗ್
ಸಾಮಗ್ರಿ : 1 ಕಪ್ ಕ್ರೀಂ, 2 ಕಪ್ ಸಣ್ಣಗೆ ಹೆಚ್ಚಿದ ಚಾಕಲೇಟ್, 1 ಸಣ್ಣ ಚಮಚ ಲಿಕ್ವಿಡ್ ಗ್ಲೂಕೋಸ್.
ವಿಧಾನ : ಒಂದು ಪ್ಯಾನಿನಲ್ಲಿ ಕ್ರೀಂ ಬಿಸಿ ಮಾಡಿಕೊಂಡು ಅದಕ್ಕೆ ಗ್ಲೂಕೋಸ್ ಬೆರೆಸಿರಿ. ನಂತರ ಚಾಕಲೇಟ್ ಹಾಕಿ ಸಾಸ್ ತರಹ ಸ್ಮೂತ್ ಆಗುವಂತೆ ಮಾಡಿ.
ಸಕ್ಕರೆ ಪಾಕಕ್ಕಾಗಿ ಸಾಮಗ್ರಿ : ಅರ್ಧ ಕಪ್ ನೀರು, 2-3 ಸಣ್ಣ ಚಮಚ ವೆನಿಲಾ ಎಸೆನ್ಸ್, 2 ದೊಡ್ಡ ಚಮಚ ಬೂರಾ ಸಕ್ಕರೆ, ಎಲ್ಲವನ್ನೂ ಬೆರೆಸಿ ಕುದಿಸಿ ಪಾಕ ಮಾಡಿ.
ಇತರ ಸಾಮಗ್ರಿ : 1 ಚಾಕಲೇಟ್ ಕೇಕ್, ಒಂದಿಷ್ಟು ವೈಟ್ ಚಾಕಲೇಟ್.
ಚಾಕಲೇಟ್ ಟ್ರಫ್ ಕೇಕ್‌ನ ವಿಧಾನ : ಚಾಕಲೇಟ್ ಕೇಕ್‌ನ್ನು 2 ಸಮಭಾಗ ಮಾಡಿ ಕತ್ತರಿಸಿ ಪಾಕದಲ್ಲಿ ಅದ್ದಿಡಿ. ನಂತರ ಒಂದು ಪ್ಲೇಟ್‌ನಲ್ಲಿ ಕೇಕ್‌ನ ಒಂದು ತುಂಡು ಇರಿಸಿ, ಅದರ ಮೇಲೆ ಟ್ರಫ್ ಐಸಿಂಗ್‌ನ ಪದರ ಹರಡಿರಿ. ಉಳಿದ ಕೇಕ್ ತುಂಡುಗಳ ಜೊತೆ ಇದೇ ಪ್ರಕ್ರಿಯೆ ಪುನರಾವರ್ತಿಸಿ. ಕೇಕಿನ ಮೇಲ್ಭಾಗ ಮತ್ತು ಬದಿಗಳನ್ನು ಟ್ರಫ್ ಐಸಿಂಗ್‌ನಿಂದ ಕವರ್ ಮಾಡಿ, ಫ್ರಿಜ್‌ನಲ್ಲಿರಿಸಿ ಚೆನ್ನಾಗಿ ಕೂಲ್ ಮಾಡಿ. ಗಾರ್ನಿಶ್ ತಯಾರಿಸಲು ಒಂದು ಪ್ಯಾನ್‌ನಲ್ಲಿ ವೈಟ್ ಚಾಕಲೇಟ್ ಕರಗಿಸಿ. ಈಗ ಒಂದು ಪ್ಲೇಟ್‌ನಲ್ಲಿ ಬಟರ್ ಪೇಪರ್ ಹರಡಿ, ಅದರ ಮೇಲೆ ಕರಗಿದ ಚಾಕಲೇಟ್ ಹರಡಿ, ಸೆಟ್ ಆಗಲು ಫ್ರಿಜ್‌ನಲ್ಲಿಡಿ. ನಂತರ ನಿಮ್ಮಿಷ್ಟದಂತೆ ಕತ್ತರಿಸಿ, ಚಿತ್ರದಲ್ಲಿರುವಂತೆ ಸವಿಯಲು ಕೊಡಿ.
ಪೀಚ್ ಕೇಕ್
ಸಾಮಗ್ರಿ : 1 ದೊಡ್ಡ ವೆನಿಲಾ ಸ್ಪಂಜ್ ಕೇಕ್, 500 ಗ್ರಾಂ ವಿಪ್ಡ್ ಕ್ರೀಂ, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಪೀಚ್ ಹಣ್ಣು, ಕೇಕ್‌ತುಂಡುಗಳನ್ನು ಅದ್ದಲು ತುಸು ಸಕ್ಕರೆ ಪಾಕ.
ವಿಧಾನ : ಕೇಕನ್ನು 3 ಸಮಭಾಗ ಆಗುವಂತೆ ತ್ರಿಕೋನಾಕಾರದಲ್ಲಿ ಕತ್ತರಿಸಿ. ಇವನ್ನು ಪಾಕದಲ್ಲಿ ಒಂದೊಂದಾಗಿ ಅದ್ದಿ, ಪ್ರತಿ ತುಂಡಿನ ಮೇಲೂ ಕ್ರೀಂ ಹಚ್ಚಬೇಕು. ಇದರ ಮೇಲೆ ಕ್ರಶ್ಡ್ ಪೀಚ್ ಬರುವಂತೆ ಅಲಂಕರಿಸಿ. ಉಳಿದ ಕ್ರೀಮಿನಿಂದ ಚಿತ್ರದಲ್ಲಿರುವಂತೆ ಕೇಕನ್ನು ನೀಟಾಗಿ ಅಲಂಕರಿಸಿ. ಇದೀಗ ನಿಮ್ಮ ಪೀಚ್ ಕೇಕ್ ರೆಡಿ! ಚಿತ್ರದಲ್ಲಿರುವಂತೆ ಅಲಂಕರಿಸಿ, ಅರ್ಧ ಗಂಟೆ ಫ್ರಿಜ್‌ನಲ್ಲಿರಿಸಿ ಕೂಲ್ ಮಾಡಿ ಸವಿಯಲು ಕೊಡಿ!