ವರ್ಕಿಂಗ್‌ ಕಲ್ಚರ್‌ ಕಾರಣ ಇಂದು ಮಹಿಳೆಯರ ಶೆಡ್ಯೂಲ್ ಎಷ್ಟು ಬಿಝಿ ಆಗಿದೆ ಎಂದರೆ ಅವರು ಅಡುಗೆಮನೆಯತ್ತ ಹೆಚ್ಚು ನಿಗಾ ವಹಿಸಲಾಗುತ್ತಿಲ್ಲ. ಮನಸ್ಸಿದ್ದರೂ ಸಹ ತರಕಾರಿ ಇತ್ಯಾದಿ ಹೆಚ್ಚುವ ತಾಪತ್ರಯದಿಂದ ತಪ್ಪಿಸಿಕೊಳ್ಳಲು ಶಾರ್ಟ್‌ಕಟ್‌ ವಿಧಾನ ಅನುಸರಿಸುತ್ತಾರೆ. ಹೀಗಿರುವಾಗ ಕಡಿಮೆ ಕಾಲಾವಧಿಯಲ್ಲಿ ಅವರು ಹೆಚ್ಚು ಅಡುಗೆ ತಯಾರಿಸಲು ನೆರವಾಗುತ್ತವೆ. ಈ ಕಿಚನ್ ಟೂಲ್ಸ್‌:

ಕ್ವಿಕ್‌ ಚಾಪಿಂಗ್‌ ಡಿವೈಸ್

ಫುಡ್‌ ಚಾಪರ್‌ : ತರಕಾರಿಯನ್ನು ನಿಮಿಷಗಳಲ್ಲಿ ಹೆಚ್ಚಿ ನಿಮ್ಮ ಸಮಯ ಉಳಿಸುತ್ತದೆ ಈ ಫುಡ್‌ ಚಾಪರ್. ಜೊತೆಗೆ ಎಲ್ಲಾ ತರಕಾರಿ ಹೋಳುಗಳೂ ಒಂದೇ ಸೈಝ್ ಇರುತ್ತವೆ. ಅತ್ತ ಅಡುಗೆಮನೆ ಕೊಳೆಯೂ ಆಗಲ್ಲ, ಕೈ ಕತ್ತರಿಸುವ ಭಯವೂ ಇಲ್ಲ, ಕೆಲಸ ಪರ್ಫೆಕ್ಟ್ ಆಗಿ  ಬೇಗ ಆಗುತ್ತದೆ. ಹೀಗಾಗಿಯೇ ಇದಾಗಿದೆ ಮ್ಯಾಜಿಕ್‌ ಫುಡ್‌ ಚಾಪರ್‌! ಬೆಲೆಯೂ ದುಬಾರಿಯಲ್ಲ, ಕೇವಲ 300-500 ರೂ.ಗಳಲ್ಲಿ ಲಭ್ಯ.

ಚಾಪರ್‌ ಸ್ಲೈಸರ್‌ ಡಿವೈಸರ್‌ : ನೀವು ಪಾರ್ಟಿಗೆ ಹೋದಾಗ ಡೈನಿಂಗ್‌ ಟೇಬಲ್ ಬಳಿ ಎಲ್ಲಾ ಸಲಾಡ್‌ಗಳೂ ಬಲು ಡೆಕೋರೇಟಿವ್ ಆಗಿರುವುದನ್ನು ಕಂಡು, ನಾನೂ ಮನೆಯಲ್ಲಿ ಹೀಗೇ ತಯಾರಿಸುವಂತಿದ್ದರೆ ಎಂದು ಯೋಚಿಸುತ್ತಿರಬಹುದು. ಹೌದು, ಇದೀಗ ನೀವು ಸಹ ಡಿಫರೆಂಟ್‌ ಶೇಪ್ಸ್ ಡಿವೈಸರ್‌ ಬಳಸಿ ಇಂಥ ಸಲಾಡ್‌ ತಯಾರಿಸಬಹುದು.

ಕೆಲವೇ ಕ್ಷಣಗಳಲ್ಲಿ ಫ್ರೆಶ್‌ ಜೂಸ್‌

ಎಲೆಕ್ಟ್ರಾನಿಕ್‌ ಜೂಸರ್‌ನಿಂದ ಜೂಸ್‌ ತೆಗೆಯುವ ತೊಂದರೆಯಿಂದ ಬಚಾವಾಗಲು, ಅಧಿಕ ಜನ ಹೊರಗಿನಿಂದಲೇ ಜೂಸ್‌ ಕುಡಿಯಲು ಬಯಸುತ್ತಾರೆ. ಆದರೆ ಹೀಗೆ ಮಾಡುವುದರಿಂದ, ಹೊರಗಿನಿಂದ ತರಿಸಿದ ಜೂಸ್‌ನ ತಾಪಮಾನ ಹೆಚ್ಚಿರುತ್ತದೆ ಎಂಬುದನ್ನು ಅವರು ಮರೆಯುತ್ತಾರೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಅದೇ ಮ್ಯಾನ್ಯುಯೆಲ್ ‌ಜೂಸರ್‌ನಿಂದ ಜೂಸ್‌ ತೆಗೆಯಲು ಹೊರಟರೆ ಅದಿನ್ನೂ ಕಷ್ಟಕರ, ಆದರೆ ಅದು ಟೇಸ್ಟಿ ಹಾಗೂ ಆರೋಗ್ಯಕರ ಎಂಬುದಂತೂ ನಿಜ. ಆದರೆ ಈ ಜೂಸರ್‌ನ್ನು ಕ್ಲೀನ್‌ ಮಾಡುವುದು ಮತ್ತೊಂದು ರಾಮಾಯಣ. ಹೀಗಾಗಿ ಇಂದಿನ ಅತ್ಯಾಧುನಿಕ ಜೂಸರ್‌ ಬಳಸಿರಿ. ಇದು 150-400 ರೂ.ಗಳಲ್ಲಿ ಲಭ್ಯ.

ಫಟಾಫಟ್‌ ಲಂಚ್‌ ತಯಾರಿಸಿ

ಪೂರಿ ಮೇಕರ್‌ : ಮನೆಗೆ ಹೆಚ್ಚು ಅತಿಥಿಗಳು ಬಂದಾಗ ಇಷ್ಟು ಜನಕ್ಕೆ ಏನು ತಾನೇ ಅಡುಗೆ ಮಾಡುವುದೆಂದು ಚಿಂತಿಸುತ್ತೀರಿ. ಪೂರಿ ಮೇಕರ್‌ ನೆರವಿನಿಂದ ನಿಮಿಷಗಳಲ್ಲೇ ಹೆಚ್ಚು ಪೂರಿ ತಯಾರಿಸಿ. ಆಗ ಇದನ್ನು ಸವಿದ ಅತಿಥಿಗಳು ನಿಮ್ಮನ್ನು ಹೊಗಳದೆ ಇರಲಾರರು. ಇದರ ಬೆಲೆ 300-500 ರೂ. ಅಷ್ಟೆ.

ರೋಟಿ ಮೇಕರ್‌ನಿಂದ ರೊಟ್ಟಿಗೆ ಪರ್ಫೆಕ್ಟ್ ಶೇಪ್‌ : ರೊಟ್ಟಿಗಳಿಗೆ ಪರ್ಫೆಕ್ಟ್ ಶೇಪ್‌ ನೀಡುವುದು ಕಷ್ಟದ ಕೆಲಸ. ಹೀಗಿರುವಾಗ, ಲಂಚ್‌ಗೆಂದು ಬಗೆಬಗೆಯ ಡಿಶೆಸ್‌ ಮಾಡಿದ್ದಾಯ್ತು. ಆದರೆ ಚಪಾತಿ ಸೊಟ್ಟಂಪಟ್ಟ ಆಗಿಹೋದರೆ? ಈಗ ಇಂಥ ಚಿಂತೆ ಇಲ್ಲ, ಶಾಂತರಾಗಿ. ಆಧುನಿಕ ರೋಟಿ ಮೇಕರ್‌, ನಿಮ್ಮ ಚಪಾತಿಗೆ ಪರ್ಫೆಕ್ಟ್  ಶೇಪ್‌ ನೀಡಿ ನಿಮ್ಮ ಸಮಯವನ್ನೂ ಉಳಿಸುತ್ತದೆ.

ನಿಮಿಷಗಳಲ್ಲಿ ಆರೋಗ್ಯಕರ ಶೇಕ್ಸ್  

ಹ್ಯಾಂಡ್‌ ಬ್ಲೆಂಡರ್‌ : ಕುಟುಂಬದ ಸದಸ್ಯರು ಯಾರು ಯಾವಾಗ ಎಂಥ ಬೇಡಿಕೆ ಇಡ್ತಾರೋ ಗೊತ್ತಿಲ್ಲ. ನಿಮ್ಮ ಪ್ರಯತ್ನವಂತೂ ಸದಾ ಅವರಿಗೆ ಹೆಲ್ಡಿ ಡಿಶ್‌ ನೀಡುವುದಾಗಿರುತ್ತದೆ. ಆದ್ದರಿಂದ ಇನ್ನು ಮುಂದೆ ದಿನೇದಿನೇ ಅವರಿಗೆ ಬೇಕಾದಂಥ ಶೇಕ್ಸ್ ತಯಾರಿಸಿ, ಅವರನ್ನು ಆರೋಗ್ಯವಂತರಾಗಿಸಿ. ಬಜೆಟ್‌ ಚಿಂತೆ ಬೇಡ, ನಿಮಗಿದು ಕಡಿಮೆ ದರದಲ್ಲೇ ಲಭ್ಯ. ಈ ತರಹ ಸ್ಮಾರ್ಟ್‌ ಟೂಲ್ಸ್ ‌ನಿಮ್ಮದಾಗಿಸಿಕೊಂಡು, ಉಳಿಸಿದ ಸಮಯವನ್ನು ಪರಿವಾರದವರ ಜೊತೆ ಕ್ವಾಲಿಟಿ ಟೈಂ ಆಗಿ ಕಳೆಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ