ಹೆಚ್ಚುತ್ತಿರುವ ವಯಸ್ಸಿಗೆ ಲಗಾಮು ಹಾಕಲು ಪ್ರತಿ ಮಹಿಳೆಯೂ ಇಷ್ಟುಪಡುತ್ತಾಳೆ. ಈ ಬಯಕೆಯನ್ನು ಪೂರೈಸಿಕೊಳ್ಳಲು ಅವಳು ಬ್ಯೂಟಿ ಟ್ರೀಟ್‌ಮೆಂಟ್‌ ಎಂದು ಫ್ರೂಟ್‌ ಫೇಶಿಯಲ್, ಚಾಕಲೇಟ್‌ ಫೇಶಿಯಲ್ ಮತ್ತು ಆಕ್ಸಿ ಫೇಶಿಯಲ್ ಟೆಕ್ನಿಕ್ಸ್ ತನ್ನದಾಗಿಸಿಕೊಳ್ಳುತ್ತಾಳೆ. ಆದರೆ ನಿಮಗೆ ಗೊತ್ತೇ? ವೈನ್‌ ಕೂಡ ನಿಮ್ಮ ಹೆಚ್ಚುತ್ತಿರುವ ವಯಸ್ಸಿಗೆ ಕಡಿವಾಣ ಹಾಕುವ ಜೊತೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತದೆ. ಆದರೆ ವೈನ್‌, ಸೌಂದರ್ಯಕ್ಕೆ ಕಾಂತಿ ತರಲು ಮತ್ತು ಹೆಚ್ಚುತ್ತಿರುವ ವಯಸ್ಸಿಗೆ ಕಡಿವಾಣ ಹಾಕುವಲ್ಲಿ ಹೇಗೆ ಸಹಾಯ ಮಾಡುತ್ತದೆಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ವೈನ್‌ ಫೇಶಿಯಲ್‌ಗೆ ಸಂಬಂಧಿಸಿದ ಈ ಜಿಜ್ಞಾಸೆಯ ಬಗ್ಗೆ ಬ್ಯೂಟಿ ಎಕ್ಸ್ ಪರ್ಟ್ಸ್ ಏನು ಹೇಳುತ್ತಾರೆ ಗೊತ್ತೇ?

ವೈನ್‌ ಫೇಶಿಯಲ್ ಪ್ರಕ್ರಿಯೆ : ವೈನ್‌ ಫೇಶಿಯಲ್‌ನಲ್ಲಿ ಉಪಯೋಗಿಸುವ ಕಪ್ಪು ದ್ರಾಕ್ಷಿಯಲ್ಲಿ ಪ್ರಮುಖವಾಗಿ ವಿಟಮಿನ್‌ಗಳು, ಆ್ಯಂಟೋಸಿನೋ ಸೈಡ್ಸ್, ಪಾಲಿಫಿನಾಲ್‌, ಪ್ರೇಸಿಯಾ ನಿಡೋಲ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ನಂತಹ ಅಂಶಗಳಿವೆ. ವೈನ್‌ಆ್ಯಂಟಿಸೆಪ್ಟಿಕ್‌ ಆಗಿರುವುದರಿಂದ ಅದು ತ್ವಚೆಯಲ್ಲಿ ಬರುವ ಊತ ಮತ್ತು ನೆರಿಗೆಗಳನ್ನು ಕಡಿಮೆಗೊಳಿಸುತ್ತದೆ. ಇಷ್ಟೇ ಅಲ್ಲ, ತ್ವಚೆಯ ಡೆಡ್‌ ಸ್ಕಿನ್‌ ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.

ಕ್ಲೆನ್ಸಿಂಗ್‌ ಮತ್ತು ಸ್ಕ್ರಬಿಂಗ್‌ : ಬೇರೆ ಫೇಶಿಯಲ್‌ಗಳಂತೆ ವೈನ್‌ ಫೇಶಿಯಲ್‌ನ ಆರಂಭ ಕ್ಲೆನ್ಸಿಂಗ್‌, ಸ್ಕ್ರಬಿಂಗ್‌ ಮತ್ತು ಟೋನಿಂಗ್‌ನಿಂದಲೇ ಆಗುತ್ತದೆ. ತ್ವಚೆಯ ಕ್ಲೆನ್ಸಿಂಗ್‌ಗಾಗಿ ಕೊಂಚ ಹಸಿ ಹಾಲಿಗೆ 2 ಚಿಕ್ಕ ಚಮಚ ಆ್ಯಪಲ್ ವೈನ್‌, 2 ಹನಿ ರೆಡ್‌ ವೈನ್‌ ಮತ್ತು ಗುಲಾಬಿ ದಳಗಳನ್ನು ರುಬ್ಬಿ ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕಾಟನ್‌ ಬಾಲ್ ಸಹಾಯದಿಂದ ಅದರಿಂದ ತ್ವಚೆಯ ಕ್ಲೆನ್ಸಿಂಗ್‌ ಮಾಡಿ. ಆಗ ತ್ವಚೆಗೆ ಮಿನರಲ್ಸ್ ಸಿಗುತ್ತದೆ. ನಂತರ 200 ಎಂ.ಎಲ್ ಬಿಸಿ ನೀರಿನಲ್ಲಿ 1 ಸಣ್ಣ ಚಮಚ ಬೋರಿಕ್‌ ಆ್ಯಸಿಡ್ ಬೆರೆಸಿ ದ್ರಾವಣ ಮಾಡಿಕೊಳ್ಳಿ. ಅದರಲ್ಲಿ ಕಾಟನ್‌ ಅದ್ದಿ ಮುಖಕ್ಕೆ ಹಾಟ್‌ ಕಂಪ್ರೆಶನ್‌ ಕೊಡಿ. ಅದರಿಂದ ತ್ವಚೆಯ ಬ್ಲ್ಯಾಕ್‌ ಹೆಡ್ಸ್ ಮತ್ತು ವೈಟ್‌ ಹೆಡ್ಸ್ ದೂರವಾಗಲು ಸಹಾಯವಾಗುತ್ತದೆ. ನಂತರ ರೋಸ್‌ ವಾಟರ್‌ನ ಟೋನರ್‌ ಹಚ್ಚಿ. ಅದರಿಂದ ಓಪನ್ ಪೋರ್ಸ್‌ ಮುಚ್ಚಿಹೋಗುತ್ತದೆ. ಆಗ ಎಳನೀರಿನಲ್ಲಿ ಕಾಟನ್‌ ಅದ್ದಿ ಮುಖಕ್ಕೆ ಕೋಲ್ಡ್ ಕಂಪ್ರೆಶನ್‌ ಕೊಡಿ.

ಮಸಾಜ್‌ : ಆ್ಯಲೋವೆರಾ ಜೆಲ್‌‌ನಲ್ಲಿ ರೆಡ್‌ ವೈನ್‌ ಮಿಕ್ಸ್ ಮಾಡಿ 3 ನಿಮಿಷ ಗ್ಯಾಲ್ವಾನಿಕ್‌ ನೆಗೆಟಿವ್ ‌ಮತ್ತು 3 ನಿಮಿಷ ಗ್ಯಾಲ್ವಾನಿಕ್‌ಪಾಸಿಟಿವ್ ‌ಮಸಾಜ್‌ ಮಾಡಿಸಿಕೊಳ್ಳಿ. ನೀವು ಬಯಸಿದರೆ ಮಸಾಜ್‌ ಮಿಕ್ಸ್ ಚರ್‌ನಲ್ಲಿ ವಿಟಮಿನ್‌`ಈ’ ಆಯಿಲ್‌ ಕೂಡ ಹಾಕಬಹುದು. ಗ್ಯಾಲ್ವಾನಿಕ್‌ ಮಸಾಜ್‌ ಮಾಡುವಾಗ ಗ್ರೇಪ್‌ ಜೂಸ್‌ ಕೂಡ ಮುಖಕ್ಕೆ ಹಚ್ಚಿಕೊಳ್ಳಬಹುದು.

ಪ್ಯಾಕ್‌ : ಕೊನೆಗೆ ಗಾರ್‌ನ್ನು ರೆಡ್‌ ವೈನ್‌ಲ್ಲಿ ಅದ್ದಿ ಮುಖದ ಮೇಲಿಡಿ. ಮೇಲೆ ಕಪ್ಪು ದ್ರಾಕ್ಷಿಯ ತಿರುಳನ್ನು ಹಚ್ಚಿ 10 ನಿಮಿಷಗಳ ನಂತರ ಪ್ಯಾಕ್‌ನ್ನು ತೆಗೆದುಬಿಡಿ. ಈ ಪ್ಯಾಕ್‌ನಿಂದ ತ್ವಚೆಯ ಊತಕಗಳು ರಿಪೇರಿ ಆಗುತ್ತವೆ. ಜೊತೆಗೆ ತ್ವಚೆಗೆ ಟೈಟನಿಂಗ್‌ ಎಫೆಕ್ಟ್ ಕೂಡ ಸಿಗುತ್ತದೆ. ಕೊನೆಯಲ್ಲಿ ಮುಖಕ್ಕೆ ಸನ್‌ ಬ್ಲ್ಯಾಕ್‌ ಕ್ರೀಂ ಅಥವಾ ಸನ್‌ಸ್ಕ್ರೀನ್‌ ಹಚ್ಚಿ. ಸನ್‌ಸ್ಕ್ರೀನ್‌ ಹಚ್ಚುವುದರಿಂದ ಸನ್‌ ಬರ್ನ್‌ ಮತ್ತು ಟ್ಯಾನಿಂಗ್‌ ಆಗುವ ಸಂಭಾವ್ಯತೆ ಕಡಿಮೆಯಾಗುತ್ತದೆ.

ತ್ವಚೆಗೆ ತಕ್ಕಂತೆ ವೈನ್‌ ಆರಿಸಿಕೊಳ್ಳಿ : ಬೇರೆ ಬೇರೆ ತ್ವಚೆಗಳಿಗೆ ಬೇರೆ ಬೇರೆ ರೀತಿಯ ವೈನ್‌ ಉಪಯೋಗಿಸಬೇಕು. ತೈಲೀಯ ತ್ವಚೆಗೆ ರೆಡ್‌ ವೈನ್‌ ಉತ್ತಮ. ಅದಕ್ಕೆ ಆ್ಯಲೋವೆರಾ ಬೆರೆಸಿ ಉಪಯೋಗಿಸಲಾಗುತ್ತದೆ. ಅದೇ ಒಣ ತ್ವಚೆಗೆ ವೈಟ್‌ ವೈನ್‌ನಲ್ಲಿರುವ ಆಲ್ಫಾ ಹೈಡ್ರಾಕ್ಸಿ ಆ್ಯಸಿಡ್ಸ್ ತ್ವಚೆಗೆ ಪರಿಣಾಮಕಾರಿಯಾಗಿರುತ್ತವೆ. ಅದರಿಂದ ತ್ವಚೆ ಮೃದುವಾಗಿರುತ್ತದೆ. ಒಂದು ವೇಳೆ ತ್ವಚೆ ಸೆನ್ಸಿಟಿವ್ ‌ಆಗಿದ್ದರೆ  ವೈಟ್‌ ವೈನ್‌ನಲ್ಲಿ ಗುಲಾಬಿ ಜಲ ಹಾಗೂ ಬಾದಾಮಿಯ ಪೇಸ್ಟ್ ಕೂಡ ಸೇರಿಸಲಾಗುತ್ತದೆ. ರೆಡ್‌ ವೈನ್‌ನಲ್ಲಿರುವ ಆ್ಯಂಟಿ ಏಜಿಂಗ್‌ ಅಂಶ ತ್ವಚೆಯನ್ನು ರಿಜುವೆನೇಟ್‌ ಹಾಗೂ ಡೀಹೈಡ್ರೇಟ್‌ ಮಾಡುತ್ತದೆ. ಅಷ್ಟೇ ಅಲ್ಲ, ಅವು ಪಿಗ್ಮೆಂಟೇಶನ್‌ನ್ನು ತಡೆಯುತ್ತಾ ಏಜಿಂಗ್‌ ಪ್ರೋಸಸ್‌ ಮೇಲೂ ಲಗಾಮು ಹಾಕುತ್ತದೆ.

– ಬಿ. ಸುಲಕ್ಷಣಾ

ವೈನ್‌ ಫೇಶಿಯಲ್‌ನ ಲಾಭಗಳು

ವೈನ್‌ ಫೇಶಿಯಲ್‌ನಿಂದ ಒತ್ತಡ ದೂರವಾಗುತ್ತದೆ.

ಮುಖಕ್ಕೆ ಗ್ಲೋ ಬರುತ್ತದೆ.

ತ್ವಚೆಯ ಮೇಲೆ ಉಂಟಾಗುವ ಊತ ಮತ್ತು ನೆರಿಗೆಗಳು ಕಡಿಮೆಯಾಗುತ್ತವೆ.

ತ್ವಚೆ ಕೋಮಲವಾಗುತ್ತದೆ.

ತ್ವಚೆಗೆ ಆಕ್ಸಿಜನ್‌ ಸಿಗುತ್ತದೆ.

ತ್ವಚೆಯ ಡೆಡ್‌ ಸ್ಕಿನ್‌ ತೆಗೆಯುವಲ್ಲಿ ಸಹಾಯ ಮಾಡುತ್ತದೆ.

ತ್ವಚೆಯಲ್ಲಿ ಬಿಗಿ ಬರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ