ಫ್ಯಾಷನ್‌ ನೋಡಿ ಮಾಡೆಲ್ಸ್ ಅಲ್ಲ : ಈಗ ಆಕಸ್ಮಿಕವಾಗಿ ಇಂಥ ಫ್ಯಾಷನೆಬಲ್ ಹುಡುಗಿಯರು ನಿಮಗೆ ಬೆಂಗಳೂರು, ಚೆನ್ನೈನಂಥ ಮಹಾನಗರಗಳಲ್ಲಿ ಕಂಡುಬಂದರೆ, ಹಿಂದೂ ದಲಿತ ವಿವಾದಗಳಂಥ ದೊಡ್ಡ ದಂಗೆ ಉಂಟಾದರೂ ಆಶ್ಚರ್ಯವಿಲ್ಲ. ವಿಡಂಬನೆ ಎಂದರೆ, ಇದು ಕಂಡುಬಂದದ್ದು ಕಿರ್‌ಗಿಸ್ತಾನ್‌ನ ರಾಜಧಾನಿ ಬಿಶ್‌ಕೇಕ್‌ ನಗರದಲ್ಲಿ. ಹಿಂದುಳಿದ ದೇಶವೆಂದೇ ಖ್ಯಾತಗೊಂಡಿರುವ ಕಿರ್‌ಗಿಸ್ತಾನ್‌ನ ಡಿಸೈನರ್‌ ಅಸ್ಕರ್‌ ಅಲಿಯ ಪ್ರಸ್ತುತಿ ಇದು.

 

ಈ ಮುಗುಳ್ನಗೆಗೆ ಮಾರುಹೋಗದವರುಂಟೇ? :  ಇದೀಗ ನೀವು ಮಿಸ್‌ ವರ್ಲ್ಡ್, ಮಿಸ್‌ ಯೂನಿರ್ಸ್‌ಗಳಂಥ ಯಾವ ಮಿಸ್ಸನ್ನೇ ನೋಡಿ, ಎಲ್ಲರದೂ ಒಂದೇ ಬ್ಯೂಟಿ ಎನಿಸುತ್ತದೆ. ಮಿಸ್‌ ಫ್ರಾನ್ಸ್, ಮಿಸ್‌ ಅರ್ಥ್‌ಗಳೂ ಸಹ ಇದಕ್ಕೆ ಹೊರತಲ್ಲ. ಏಕೆಂದರೆ ಎಲ್ಲರ ಮುಗುಳ್ನಗೆಯೂ ಹೆಚ್ಚುಕಡಿಮೆ ಒಂದೇ ತರಹ ಇರುತ್ತದೆ. ಇಲ್ಲಿನ ಕಷ್ಟವೆಂದರೆ, ಇವರು ಸದಾ ವೇದಿಕೆ ಮೇಲಿರುತ್ತಾರೆ ಅಥವಾ ಮೀಡಿಯಾಗೆ ಪೋಸ್‌ ಕೊಡುತ್ತಾ ನಿಂತಿರುತ್ತಾರೆಯೇ ಹೊರತು ಅಭಿಮಾನಿಗಳ ನಡುವೆ ಬೆರೆಯುವುದಿಲ್ಲ.

 

2017ರ ವಿಶಿಷ್ಟ ವಿವಾಹ :  ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ವಿವಾಹದ ಫೋಟೋ ವೀಕ್ಷಕರು ಟಿವಿಯಲ್ಲಿ ಅವರ ಮದುವೆ ನೋಡಿದವರಿಗಿಂತ ಖಂಡಿತಾ ಹೆಚ್ಚಿರುತ್ತಾರೆ. ನಮ್ಮ ದೇಶದಲ್ಲಂತೂ ಇಂಥ ಸೆಲೆಬ್ರಿಟಿಗಳ ಮದುವೆ ಬಲು ಅಪರೂಪ.

ಹೀಗೆ ಜೀವನ ಯಾನ ಮುಂದುವರಿಯಲಿ : ಮುಂಬೈನ ಕಮಾಮಿಲ್ ಅಥವಾ ನಮ್ಮ ರಾಜ್ಯದ ಅಗ್ನಿ ದುರಂತದಂಥ ಘಟನೆಗಳನ್ನೇ ಹೋಲುವ, ಸೆಂಟ್ರಲ್ ಲಂಡನ್‌ನ ಗ್ರಾಂಡ್‌ ಫಿಲ್‌ ಟವರ್‌ನಲ್ಲಿ ಒಂದು ವರ್ಷದ ಹಿಂದೆ ನಡೆದ ಅವಘಡದಲ್ಲಿ ಸುಮಾರು 71 ಮಂದಿ ಸಜೀವ ದಹನಗೊಂಡಿದ್ದರು. ಅವರ ಸ್ಮರಣಾರ್ಥ ನಡೆದ ಈ ವಾರ್ಷಿಕ ಶ್ರದ್ಧಾಂಜಲಿ ಸಭೆಯಲ್ಲಿ ಮತ್ತೆ ಇಂಥದು ಮರುಕಳಿಸದಿರಲು ಸಂಕಲ್ಪ ಕೈಗೊಂಡರು.

ಇದಪ್ಪ…. ವರಸೆ ! : ಈಗ ನಗರಗಳ ಸ್ಲಂಗಳನ್ನು ಆಕರ್ಷಕಗೊಳಿಸುವ ಪ್ರಾಜೆಕ್ಟ್, ವಿಶ್ವದ ಹಲವೆಡೆ ನಡೆದಿದೆ. ಮುಂಬೈನಲ್ಲಿ  ಕಂಡುಬರುವ ಲಕ್ಷಾಂತರ ಸ್ಲಂಗಳಲ್ಲಿ ಇಂಥ ಒಂದನ್ನು  ಹೀಗೆ ಸಿಂಗರಿಸಲಾಯಿತು. ಅಸ್ಛಾ ಗ್ರಾಮದ 120 ಮನೆಗಳ ಗೋಡೆಗಳನ್ನು `ವೆಟ್‌ ಅಸ್‌ ಪೇಂಟ್‌’ ಆರ್ಟಿಸ್ಟ್ ಗ್ರೂಪ್‌ ಕೇವಲ ಮೂರೇ ದಿನಗಳಲ್ಲಿ ಪೂರ್ಣಗೊಳಿಸಿತು. ದೆಹಲಿಯ ಬಾರಾಪುರಾದ ಬಳಿಯ ಒಂದು ಸ್ಲಂನ ಮನೆಗಳಿಗೂ ಹೀಗೆ ಬಣ್ಣ ಬಳಿಯಲಾಯಿತು. ನಿಮ್ಮ ಮನೆ ಹತ್ತಿರದ ಸ್ಲಂಗಳನ್ನೂ ಹೀಗೆ ನವೀಕರಿಸುವ ಕೆಲಸವನ್ನು ಇಂದೇ ಕೈಗೊಳ್ಳಿ.

ಇದರಲ್ಲಿ ನನ್ನದೇನು ತಪ್ಪು? :  ಅಶಾಂತಿ ಹಾಗೂ ಪೊಲೀಸರ ನಿರ್ಲಕ್ಷ್ಯದ ಪರಿಣಾಮಗಳನ್ನು ಹೆಚ್ಚಾಗಿ ಹೆಂಗಸರೇ ಎದುರಿಸಬೇಕಾಗುತ್ತದೆ. ಬ್ರೆಝಿಲ್‌ನ ರಿಯೋ ಡೀ ಜನೆರೋ ನಗರದಲ್ಲಿ ಪೊಲೀಸರು ಮಾದಕ ಡ್ರಗ್ಸ್ ಹುಡುಕುತ್ತಾ, ಗುಂಡು ಹಾರಿಸುತ್ತಾ ಒಂದು ಮನೆಗೆ ನುಗ್ಗಿದರು. ಅಲ್ಲಿ ಇವರ ಆರ್ಭಟಕ್ಕೆ 10 ವರ್ಷದ ಹಸುಳೆ ಬಲಿಯಾಯಿತು. ಇದರ ಪಾಲಕರಿಗೆ ಈಗ ಗೋಳಾಡುವುದು ಬಿಟ್ಟರೆ ಬೇರೇನೂ ಇಲ್ಲವಾಗಿದೆ. `ಸ್ಟ್ರೇಟ್  ಬುಲೆಟ್‌’ ಹೆಸರಿನ ಪ್ರಾಜೆಕ್ಟ್ ಅಲ್ಲಿ ನಡೆಯುತ್ತಿದೆ, ಹೀಗೆ ಆಕಸ್ಮಿಕವಾಗಿ ಗುಂಡಿಗೆ ಬಲಿಯಾಗುವವರನ್ನು ಕೊನೆ ಘಳಿಗೆಯಲ್ಲಿ ಹೇಗಾದರೂ ರಕ್ಷಿಸುವ ಹರಸಾಹಸವದು, ಇನ್ನಾದರೂ ಇಂಥ ಮರಣ ಮೃದಂಗ ನಿಲ್ಲಲಿ!

ಇದೆಂಥ ಕಾನೂನು :  ಈಕೆ ಥಿಯೋಡರಾ, ಅಪರಾಧಿ ಎಂದು ಎಳೆದೊಯ್ಯುತ್ತಿದ್ದಾರೆ. ಮಾಡಿದ್ದಾದರೂ ಏನು? ತನ್ನದೇ ದೇಹದ ಒಂದು ಭಾಗಗಳಾಗಿ ಬೆಳಯುತ್ತಿದ್ದ ಭ್ರೂಣವನ್ನು ಕಿತ್ತೆಸೆದ ಕಾರಣಕ್ಕಾಗಿ. ಆಕೆಯ ದೇಶವಾದ ಸ್ಯಾನ್‌ ಸ್ಯಾಲ್ವಡೋರ್‌ನಲ್ಲಿ ಕ್ರೈಸ್ತ ಧರ್ಮದ ಕಂದಾಚಾರಿಗಳ ಆದೇಶದಿಂದ ಗರ್ಭಪಾತ ಮಾಡಿಸಬಾರದೆಂದು ಆಕೆಗೆ ಸೆರೆವಾಸ ವಿಧಿಸಲಾಗಿದೆ. ನಮ್ಮಲ್ಲಿಯೂ ಸಹ ಮುಂದೆ ಶಾಸ್ತ್ರೋಕ್ತವಾಗಿ ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸ್‌ ಗಿರಿ ಏನೇನು ದಾಂಧಲೆ ನಡೆಸಲಿದೆಯೋ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ