ಗೃಹಾಲಂಕಾರದ ಪರಿಕಲ್ಪನೆಗೆ ತಕ್ಕಂತೆ ಪ್ರತಿ ವರ್ಷ ಅದರ ಟ್ರೆಂಡ್‌ ಬದಲಾಗುತ್ತಾ ಇರುತ್ತದೆ. ಹೀಗಿರುವಾಗ ಮನೆಯನ್ನು ಅಲಂಕರಿಸುವುದು ಜೇಬಿಗೆ ಹೊರೆಯೂ ಆಗಬಹುದು. ಏಕೆಂದರೆ ಗೃಹಾಲಂಕಾರದ ಸಾಮಗ್ರಿಗಳು ದಿನೇ ದಿನೇ ದುಬಾರಿ ಆಗುತ್ತಲೇ ಇವೆ.

ಇಲ್ಲಿವೆ ನಿಮಗಾಗಿ ಕೆಲವು ಸಲಹೆಗಳು. ಇದರಿಂದ ನಿಮ್ಮ ಮನೆಗೆ ಬ್ಯೂಟಿಫುಲ್ ಲುಕ್‌ ಬರುವುದಲ್ಲದೆ, ನಿಮ್ಮ ಬಜೆಟ್ ಬಿಗಡಾಯಿಸುವುದೂ ಇಲ್ಲ.

ಸೀಮಿತ ಬಜೆಟ್ನಲ್ಲಿ ಗೃಹಾಲಂಕಾರ

ಡೈನಿಂಗ್‌ ಟೇಬಲ್‌ಗೆ ನೀವು ಸುಲಭವಾಗಿ ಹೊಸ ಲುಕ್‌ ನೀಡಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾಟನ್‌, ಸಿಲ್ಕ್, ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಟೇಬಲ್ ಕ್ಲಾಥ್‌ ನಿಜಕ್ಕೂ ಎಷ್ಟೋ ಅಗ್ಗವಾಗಿ ದೊರಕುತ್ತದೆ. ಇದನ್ನು ಆಗಾಗ ಬದಲಾಯಿಸುತ್ತಾ ಡೈನಿಂಗ್‌ ಟೇಬಲ್‌ಗೆ ಹೊಸ ಲುಕ್‌ ಕೊಡಿ. ಇದನ್ನು ಇನ್ನಷ್ಟು ಸುಧಾರಿಸಲು ಟೇಬಲ್ ಮೇಲೆ ಬದಿಗೊಂದೊಂದು ಹೂದಾನಿಗಳನ್ನು  ಇರಿಸಿ.

ಇದರ ಜೊತೆಗೆ ಡೈನಿಂಗ್‌ ಟೇಬಲ್‌ನ ಸಿಟ್ಟಿಂಗ್‌ ಅರೇಂಜ್‌ಮೆಂಟ್‌ ಪ್ರಕಾರ ಡೈನಿಂಗ್‌ ಮ್ಯಾಟ್‌ ಕೂಡ ಅಲಂಕರಿಸಿ. ಮೇಜಿನ ನಡುವೆ ನ್ಯಾಪ್‌ಕಿನ್‌ ಹೋಲ್ಡರ್‌ ಸಹ ಇರಿಸಿ, ಆಗಾಗ ಇದರ ಬಣ್ಣಬಣ್ಣದ ನ್ಯಾಪ್‌ಕಿನ್ಸ್ ಬದಲಾಯಿಸುತ್ತಿರಿ.

ಮನೆಗೆ ನೈಸರ್ಗಿಕ ಲುಕ್‌ ನೀಡಲು ಕೃತಕ ಹೂಗಳು, ಕ್ಯಾಂಡಲ್ಸ್ ಕೂಡ ಬಳಸಬಹುದು. ಇವು ತುಂಬಾ ದುಬಾರಿಯಲ್ಲ.

ಮನೆಯ ಮೂಲೆಗಳಿಗೆ ಹಸಿರು, ತಾಜಾತನದ ಲುಕ್ಸ್ ನೀಡಲು ಇಂಡೋರ್‌ ಪ್ಲಾಂಟ್ಸ್ ಬಳಸಿಕೊಳ್ಳಿ.

ರೂಮ್ ಡೆಕೋರೇಶನ್

ಕೋಣೆಗಳಲ್ಲಿ ಹೂದಾನಿ ಇರಿಸುವಾಗ ಆದಷ್ಟೂ ಒಂದು ಕೋಣೆಗೆ ಒಂದೇ ಹೂದಾನಿ ಇರುವಂತೆ ನೋಡಿಕೊಳ್ಳಿ ಹಾಗೂ ಒಂದು ಪಕ್ಷ ಅದನ್ನು ಅನಿವಾರ್ಯವಾಗಿ ಇಡಬೇಕಾದಲ್ಲಿ ಎರಡೂ ವಿಭಿನ್ನ ಸೈಜ್‌ ಆಗಿರಬೇಕು ಎಂಬುದನ್ನು ಗಮನಿಸಿ.

ಮನೆಯ ಇತರ ಕೋರೆಗಳನ್ನು ಅಲಂಕರಿಸಲು ಕೊಲಾಜ್‌ ಫೋಟೋ ಫ್ರೇಮ್ ಉತ್ತಮ ಆಯ್ಕೆಯಾಗಿದೆ. ಇದು ಕೋಣೆಗಳಿಗೆ ಹೊಸ ಲುಕ್‌ ನೀಡುವುದರ ಜೊತೆ, ಇದರಲ್ಲಿರುವ ಚಿತ್ರದ ಕಾರಣ ನಿಮ್ಮ ಸಿಹಿ ನೆನಪುಗಳನ್ನು ಆಗಾಗ ತಾಜಾಗೊಳಿಸಬಹುದು.

ನಿಮ್ಮ ಮೇನ್‌ ಹಾಲ್ ಸಾಕಷ್ಟು ದೊಡ್ಡದಾಗಿದ್ದರೆ, 4 ಮೂಲೆಗಳಲ್ಲಿ ಅಥವಾ ಕನಿಷ್ಠ 2 ಮೂಲೆಗಳಲ್ಲಿ ಹ್ಯಾಂಗಿಂಗ್ಸ್ ರಾಂಪ್ ಅಳವಡಿಸಿ. ಆಧುನಿಕ ಡ್ರಾಯಿಂಗ್‌ ರೂಮುಗಳಿಗೆ ಟ್ಯೂಬ್‌ಲೈಟ್‌ ಬಳಕೆ ಅನಿವಾರ್ಯವಲ್ಲ.

ಇತ್ತೀಚಿನ ಮನೆಗಳನ್ನು ಗಮನಿಸಿದರೆ ಮಲ್ಟಿಪರ್ಪಸ್‌ ಫರ್ನೀಚರ್‌ ಬೆಟರ್‌ ಆಯ್ಕೆ ಎನಿಸುತ್ತದೆ. ಇದರ ದೊಡ್ಡ ವೈಶಿಷ್ಟ್ಯ ಎಂದರೆ ಇದನ್ನು ಬೇಗ ಬೇಗ ಬದಲಾಯಿಸುವ ಅಗತ್ಯವಿಲ್ಲ. ಜೊತೆಗಿದು ಹೆಚ್ಚು ಜಾಗವನ್ನು ತೆಗೆದುಕೊಳ್ಳುವುದಿಲ್ಲ.

ಮನೆಯಲ್ಲಿ ಮಾರ್ಬಲ್ ಫ್ಲೋರಿಂಗ್‌ ಮಾಡಿಸುವುದು ನಿಮ್ಮ ಬಜೆಟ್‌ಗೆ ಹೊರೆ ಎನಿಸಿದರೆ, ಟೈಲ್ಸ್ ಫ್ಲೋರಿಂಗ್‌ ಆಯ್ಕೆಯೇ ಸರಿ. ಇದರಿಂದ ಹೆಚ್ಚಿನ ಲಾಭಗಳಿವೆ. ಉದಾ: ಇವನ್ನು ಶುಚಿಗೊಳಿಸಲು ಹೆಚ್ಚು ಕಷ್ಟ ಪಡಬೇಕಿಲ್ಲ. ಯಾವುದಾದರೂ ಟೈಲ್ ಮುರಿದರೂ ಸಹ ಅದನ್ನು ಬದಲಾಯಿಸುವುದೂ ಸುಲಭ, ಅಗ್ಗವು ಹೌದು.

ಪ್ರತಿನಿಧಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ