ಕೃತಿ ಈಗ ಸುಶಾಂತನ ಗರ್ಲ್ ಫ್ರೆಂಡ್

ವರುಣ್‌ ಧವನ್‌ ಜೊತೆ ಪ್ರೇಮಾಲಾಪ ಮುಗಿಸಿದ ಕೃತಿ ಸೇನನ್‌, ಇಷ್ಟರಲ್ಲೇ ಎವರ್‌ ಗ್ರೀನ್‌ ಸ್ಮೆ ೖ್ ‌ಬಾಯ್‌ ಸುಶಾಂತ್‌ ಸಿಂಗ್‌ ರಾಜ್‌ಪೂತ್‌ ಜೊತೆಗೆ, ಈ ಫೆಬ್ರವರಿಯಿಂದ ಹೊಸ ರೊಮಾನ್ಸ್ ಆರಂಭಿಸಲಿದ್ದಾಳೆ. ಅವಳೀಗ ಚೇತನ್‌ ಭಗತ್‌ರ ಆಂಗ್ಲ ಕಾದಂಬರಿ ಆಧಾರಿತ `ಹಾಫ್‌ ಗರ್ಲ್ ಫ್ರೆಂಡ್‌’ ಚಿತ್ರಕ್ಕೆ ನಾಯಕಿ ಆಗಿದ್ದಾಳೆ, ಸುಶಾಂತ್‌ ಈ ಚಿತ್ರದ ನಾಯಕ. ವಿಭಿನ್ನ ನಾಯಕರೊಂದಿಗೆ ನಟಿಸಿರುವ ಕೃತಿ, ಟೈಗರ್‌ ಶ್ರಾಫ್‌ ಜೊತೆ ಮೊದಲ ಚಿತ್ರ `ಹೀರೋ ಪಂಕ್ತಿ’ಯಲ್ಲಿ ಮಿಂಚಿದ್ದಳು. ವರುಣ್‌ ಜೊತೆ `ದಿ್‌ಿಾ’ ಮುಗಿಸಿ, ಇದೀಗ ಮೋಹಿತ್‌ ಸೂರಿಯ ನಿರ್ದೇಶನದಲ್ಲಿ ಸುಶಾಂತ್‌ ಜೊತೆ ನಟಿಸುತ್ತಿದ್ದಾಳೆ. ಚಿತ್ರದ ಬಗ್ಗೆ ಕ್ಲೂ ಸಿಕ್ಕಿದ ತಕ್ಷಣವೇ ಆ ಕಾದಂಬರಿ ಓದಿ ಮುಗಿಸಿದ್ದ ಕೃತಿ, ತನ್ನ ಪಾತ್ರದಿಂದಾಗಿ ಬಹಳ ಎಗ್ಸೈಟ್‌ ಆಗಿದ್ದಾಳೆ. ಬಿಹಾರದ ಹಳ್ಳಿ ಹುಡುಗ ಹಾಗೂ ದೆಹಲಿಯ ನಗರದ ಹುಡುಗಿ ಮಧ್ಯದ ಈ ಲವ್ ಸ್ಟೋರಿಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಕಾಪಾಡಿದ ಕಾಜೋಲ್

ರೀಲ್‌ನಲ್ಲಿ ಯಶಸ್ವಿ ಎನಿಸಿದ ಎಷ್ಟೋ ಜೋಡಿಗಳು ರಿಯಲ್‌ನಲ್ಲಿ ಜೋಡಿಗಳಲ್ಲ ಎಂಬುದು ಅಷ್ಟೇ ನಿಜ. ಆದರೆ ಆನ್‌ಸ್ಕ್ರೀನ್‌ ಈ ಜೋಡಿ ಸೂಪರ್‌ ಡೂಪರ್‌ ಹಿಟ್‌ ಎನಿಸಿವೆ. ಶಾರೂಖ್‌ಖಾನ್‌-ಕಾಜೋಲ್ ಜೋಡಿ ಇವುಗಳಲ್ಲಿ ಒಂದು. `ಮೈ ನೇಮ್ ಈಸ್ ಖಾನ್‌’ ನಂತರ ಈ ಜೋಡಿ `ದಿ್‌ಿಾ’ ಚಿತ್ರದಲ್ಲಿ ಮತ್ತೆ ಒಂದಾಗಿದೆ. ಳಿಳ್ಸ್ರಿಾ ದಾಟಿ ಎಷ್ಟೋ ವರ್ಷಗಳು ಕಳೆದಿದ್ದರೂ, ಈ ಜೋಡಿಯ ಮೋಡಿ ಇನ್ನೂ ಹಾಗೇ ಇದೆ. ಈ ಚಿತ್ರದ ಒಂದು ಹಾಡು `ಗೇರುಾ….’ ಗಾಗಿ ಶೂಟಿಂಗ್‌ ನಡೆಯುತ್ತಿದ್ದಾಗ, ಶಾರೂಖ್‌ರ ಕಾಲು ಜಾರಿ ಉಳುಕಿತು. ಬೆಟ್ಟದ ಮೇಲೆ ಲೊಕೇಶನ್‌ ಇದ್ದುದರಿಂದ ಅಪಾಯ ನಿರೀಕ್ಷಿತ. ಆದರೆ ಕಾಜೋಲ್ ಹೇಗೋ ಸಂಭಾಳಿಸಿಕೊಂಡು ಈತನನ್ನು ಹಿಡಿದುಕೊಂಡಳು, ಹೀಗಾಗಿ ದೊಡ್ಡ ಅಪಘಾತ ಆಗಲಿಲ್ಲ. ಇಂದು ನನಗೆ ಸಿಕ್ಕಿದ ಪುನರ್ಜನ್ಮವನ್ನು ಕಾಜೋಲ್‌ಳ ಹೆಸರಲ್ಲಿ ಮುಡಿಪಿಡುತ್ತೇನೆ ಎಂದರು ಶಾರೂಖ್‌.

ಖಳನಾಯಕಿ ಪಾತ್ರಕ್ಕೂ ರೆಡಿ!

ಬಾಲಿವುಡ್‌ನ ಹಾಟ್‌ ಗರ್ಲ್ ಈಶಾ ಗುಪ್ತ `ಜನ್ನತ್‌’ ಚಿತ್ರದಿಂದ ಎಂಟ್ರಿ ಪಡೆದಾಗ, ಮುಂದೆ ಈ ಸೆಕ್ಸ್ ಬಾಂಬ್‌ ಏನೇನು ಪ್ರಭಾವ ಬೀರಲಿದ್ದಾಳೋ ಎಂದು ಎಲ್ಲರೂ ಕಾದಿದ್ದೇ ಬಂತು. ತನ್ನ ಬೋಲ್ಡ್ ನೆಸ್‌ನಿಂದಾಗಿ ಈಕೆ ಮುಂದೆ `ರಾರ್‌’ ಹಾಗೂ `ಚಕ್ರವ್ಯೂಹ್‌’ ನಲ್ಲಿ ಮಾತ್ರ ಕಾಣಿಸಿದಳು. ಅದಾದ ಮೇಲೆ ಕೇವಲ ಐಟಂ ನಂಬರ್‌ ಆಗಿ ಉಳಿದಳು. ಇದೀಗ `ರುಸ್ತುಂ’ ಚಿತ್ರದಲ್ಲಿ ಈಶಾಳಿಗೆ ಗ್ರೇ ಶೇಡ್‌ ಪಾತ್ರವಂತೆ, ಅಕ್ಷಯ್‌ ಕುಮಾರ್‌ ಜೊತೆ ಇರುತ್ತಾಳೆ. ಮುಂದೆ ನೀರಜ್‌ ಪೋರಾರ `ಹೇರಾಫೇರಿ-3′ ಚಿತ್ರದಲ್ಲಿ ಜಾನ್‌ಅಬ್ರಹಾಂ, ಅಭಿಷೇಕ್‌ ಬಚ್ಚನ್‌ರ ಜೊತೆ ಕಚಗುಳಿ ಇಡಲು ಬರುತ್ತಿದ್ದಾಳೆ.

24 ಘಂಟೆಗಳಲ್ಲಿ 16 ಘಂಟೆ ಕೆಲಸ

ಬಾಲಿವುಡ್‌ನಿಂದ ಹಾಲಿವುಡ್‌ವರೆಗೂ ಸೈ ಎನಿಸಿರುವ ಪ್ರಿಯಾಂಕಾ ಚೋಪ್ರಾ ಹೇಳುತ್ತಾಳೆ, ಯಶಸ್ವಿ ಎನಿಸಲು ಹಿಗ್ಗಾಮುಗ್ಗಾ ಪರಿಶ್ರಮಪಡಬೇಕು. ಈಗಂತೂ ಆಕೆ 1 ದಿನಕ್ಕೆ 16 ಘಂಟೆ ಶೂಟಿಂಗ್‌ ನಡೆಸಿದ್ದಾಳೆ. ಪಾರ್ಟಿ ಎಂಜಾಯ್‌ಮೆಂಟ್‌, ಬರ್ತ್‌ಡೇ ಬ್ಯಾಶ್‌ಗಳ ಬಗ್ಗೆ ಗೊತ್ತೇ ಇಲ್ಲವಂತೆ. ಇದಕ್ಕೆಲ್ಲ ಟೈಮೆಲ್ಲಿ? ಯಶಸ್ಸು ಅನ್ನೋದು ಗುರಿಯಲ್ಲ, ಅದೊಂದು ಪಯಣ. ನೀವು ಸತತ ಯಶಸ್ಸಿನ ಮುಂಚೂಣಿಯಲ್ಲಿದ್ದರೆ ಸರಿ, ಇಲ್ಲದಿದ್ದರೆ ಈ ಗ್ಲಾಮ್ ಪ್ರಪಂಚ ನಿಮ್ಮನ್ನು ಮೂಲೆಗುಂಪಾಗಿಸುತ್ತದೆ ಎಂದು ಕಿವಿಮಾತು ಹೇಳುತ್ತಾಳೆ.

ಸದಾ ಬೋಲ್ಡ್ ಪಾತ್ರಗಳೇ ಇರಲಿ

`ಮಸಾನ್‌’ ಚಿತ್ರದ ತನ್ನ ಗಂಭೀರ ಪಾತ್ರದಿಂದ ಎಲ್ಲರ ಮನಗೆದ್ದ ರಿಚಾ ಚಡ್ಢಾ,  ಮುಂದೆಯೂ ತಾನು `ಮಸಾನ್‌, ಗ್ಯಾಂಗ್ಸ್ ಆಫ್‌ಾಸೆಪರ್‌’ನಂಥ ಬೋಲ್ಡ್ ಪಾತ್ರಗಳಲ್ಲೇ ಕಾಣಿಸಿಕೊಳ್ಳ ಬಯಸುತ್ತೇನೆ ಎನ್ನುತ್ತಾಳೆ. `ಮಸಾನ್‌’ ಎಲ್ಲೆಲ್ಲೂ ಸೈ ಎನಿಸಿಕೊಂಡಿತ್ತು. ಈಕೆಯ ಇತ್ತೀಚಿನ `ಮೈ ಔರ್‌ ಚಾರ್ಲಿ’ ಫ್ಲಾಪ್‌ ಎನಿಸಿತು. ಆದರೆ ಈಕೆಯ ಮುಂದಿನ ಚಿತ್ರಗಳಾದ ಸುಧೀರ್‌ ಮಿಶ್ರಾರ `ಏಕ್ ಔರ್‌ ದೇವದಾಸ್‌’ ಮತ್ತು ಪೂಜಾಭಟ್‌ರ `ಕ್ಯಾಬರೆ’ ವೀಕ್ಷಕರಿಗೆ 100% ರಸದೌತಣ ನೀಡಲಿವೆ ಎಂಬುದು ಇವಳ ಅಭಿಪ್ರಾಯ,

ಕಾದು ನೋಡೋಣ.

ಜೀವನ ಒಂದು ಕನ್ನಡಿ ತರಹ : ದ್ಜೀತ್ಕೌರ್

ಮಿಸ್‌ ಪುಣೆ, ಮಿಸ್‌ ಮಹಾರಾಷ್ಟ್ರ ಎನಿಸಿದ ಪಂಜಾಬ್‌ ಪುತ್ರಿ ದ್‌ಜೀತ್‌ ಕೌರ್‌, ಕಿರುತೆರೆಯಲ್ಲಿ ಮಕ್ಕಳ ಶೋ ಮೂಲಕ ಎಂಟ್ರಿ ಪಡೆದಳು. ಇದರ ನಂತರ ಝೀ ಟಿ.ವಿ. ಹಾಗೂ ಸೋನಿ ಟಿ.ವಿ.ಯ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಳು. ಕೊನೆಗೆ ಸೋನಿ ಟಿ.ವಿ.ಯ `ಕುಲವಧು’ ಶೋನಿಂದ ಉತ್ತಮ ಐಡೆಂಟಿಟಿ ಸಿಕ್ಕಿತು. ಡಿಫೆನ್ಸ್ ಪರಿವಾರಕ್ಕೆ ಸೇರಿದ, ಒಂದು ಮಗುವಿನ ತಾಯಿ ಆಗಿರುವ ದ್‌ಜೀತ್‌, ಝೀ ಟಿ.ವಿಯ. `ಕಾಾ ಟೀಕಾ’ ಶೋನಿಂದ ಮಂಜರಿಯಾಗಿ ಮಿಂಚುತ್ತಿದ್ದಾಳೆ. ಆಕೆ ಜೊತೆಯ ಮಾತುಕಥೆಯ ಮುಖ್ಯಾಂಶ :

ಟಿ.ವಿ. ಚ್ಯಾನೆಲ್ಗಳಲ್ಲಿ ಬೇಕೆಂದೇ ಮನರಂಜನೆ ಹೆಸರಲ್ಲಿ ಮೂಢನಂಬಿಕೆ ವಿಜೃಂಭಿಸುವ ಕಾರ್ಯಕ್ರಮ ಹೆಚ್ಚಾಗುತ್ತಿದೆ ಎಂದು ನಿಮಗೆ ಅನಿಸುವುದಿಲ್ಲವೇ?

ನಿಮ್ಮ ಮಾತು ಒಪ್ಪುತ್ತೇವೆ, ಆದರೆ ಇದರಲ್ಲಿ ಕೇವಲ ಶೋ ಮಾಡುವವರದೇ ತಪ್ಪು ಅನ್ನುವಂತಿಲ್ಲ, ವೀಕ್ಷಕರದೂ ಇದೆ. ವೀಕ್ಷಕರಿಗೆ ಬೇಕಾದ್ದನ್ನು ತಾನೇ ಅವರು ತಯಾರಿಸುತ್ತಾರೆ. `ಕಾಾ ಟೀಕಾ’ ಮೂಢನಂಬಿಕೆ ವಿರುದ್ಧ ದೊಡ್ಡ ಕ್ರಾಂತಿಕಾರಿ ಶೋ. ಇಲ್ಲಿನ ನಾಯಕಿ ಮಂಜರಿ ಹಲವು ವರ್ಷಗಳ ಸಂಕೋಲೆ ಮುರಿದು ಜಾಗೃತಿ ಮೂಡಿಸಲು ಹವಣಿಸುತ್ತಾಳೆ.

ಚಿಕ್ಕ ಮಗುವಿನ ತಾಯಿಯಾದ ನೀವು ಮನೆ ಕೆರಿಯರ್ಎರಡೂ ಹೇಗೆ ಮ್ಯಾನೇಜ್ಮಾಡ್ತೀರಿ?

ಯಶಸ್ವಿ ಕೆರಿಯರ್‌ ಜೊತೆ ಮಗುವನ್ನೂ ಲಾಲಿಸುವುದು ಅತಿ ಕಷ್ಟದ ಕೆಲಸ. ಆದರೂ ಮಗುವಿಗೆ ಹೆಚ್ಚಿನ ಸಮಯ ಕೊಡಲು ಯತ್ನಿಸುತ್ತೇನೆ. ಎಷ್ಟೋ ಸಲ ನನ್ನ ಅತ್ತೆ ಅಥವಾ ತಾಯಿ ನನ್ನೊಂದಿಗೆ ಶೂಟಿಂಗ್‌ಗೆ ಬರುತ್ತಾರೆ, ನನಗಾಗಿ ಒಂದು ಪರ್ಸನಲ್ ರೂಂ ಇದೆ, ಅಲ್ಲಿರುತ್ತಾರೆ. ಹೀಗಾಗಿ ಮಗುವಿಗೆ ಹಾಲೂಡಿಸಿ, ಬೇರೆ ಕೆಲಸ ಮಾಡಲು ನನಗೆ ಎಷ್ಟೋ ಅನುಕೂಲ ಇದೆ.

ಬಾಲಿವುಡ್ಗೆ ಯಾವಾಗ ಬರ್ತೀರಿ?

ಸದ್ಯಕ್ಕೆ ಇಲ್ಲ. ಉತ್ತಮ ಪಾತ್ರಗಳು ಬಂದಾಗ ಖಂಡಿತಾ ಪ್ರಯತ್ನಿಸುವೆ. ಕಿರುಪರದೆ ನನ್ನ ಮೊದಲ ಆದ್ಯತೆ, ಇಲ್ಲಿನ ಪ್ರೀತಿ ಬಿಟ್ಟು ಕನ್ನಡಿಯ ಗಂಟಿಗೆ ಈಗಲೇ ಕೈ ಚಾಚಲಾರೆ.

ನಿಮ್ಮ ಜೀವನದ ದೃಷ್ಟಿಕೋನವೇನು?

ಜೀವನ ಒಂದು ಕನ್ನಡಿ ಇದ್ದಂತೆ, ನೀವೇನು ಆಗಿದ್ದೀರಿ ಎಂಬುದನ್ನು ಜೀವನ ನಿಮಗೆ ಬಿಂಬಿಸುತ್ತದೆ. ಉತ್ತಮ ಕೆಲಸ ಮಾಡಿ ಉತ್ತಮ ಪ್ರತಿಬಿಂಬ ಕಾಣಬೇಕಷ್ಟೇ.

ಮತ್ತೆ ಒಂದಾದ ಹೃತಿಕ್ಕರೀನಾ

ಹೃತಿಕ್‌ ರೋಷನ್‌ ಹಾಗೂ ಕರೀನಾ ಖಾನ್‌ 12 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಒಂದಾಗುತ್ತಿದ್ದಾರೆ. ಹೃತಿಕ್‌, ಸಂಜಯ್ ಗುಪ್ತಾರ ಮುಂದಿನ ಚಿತ್ರಕ್ಕೆ ಓ.ಕೆ. ಹೇಳಿದ್ದಾರೆ, ಅದರಲ್ಲಿ ಕರೀನಾಳೇ ನಾಯಕಿ. ಸೂತ್ರಗಳ ಪ್ರಕಾರ, ಹೃತಿಕ್‌ ಮತ್ತು ರಾಕೇಶ್ ರೋಷನ್‌ ಈ ಚಿತ್ರಕ್ಕೆ ಬೇಗ ಹಸಿರು ನಿಶಾನೆ ತೋರಿಸಿದರಂತೆ. ಕಳೆದ ವರ್ಷ ಜೂನ್‌ನಲ್ಲೇ ಆರಂಭವಾಗಬೇಕಿದ್ದ ಈ ಚಿತ್ರ, ಹೃತಿಕ್‌ನ ಬಿಝಿ ಶೆಡ್ಯೂಲ್‌ನಿಂದಾಗಿ ಮುಂದಿನ ತಿಂಗಳು ಸೆಟ್ಟೇರಲಿದೆ. ಕರಣ್‌ ಜೋಹರ್‌ರ `ಶುದ್ಧಿ’ ಚಿತ್ರದಲ್ಲಿ ಈ ಜೋಡಿ ನಟಿಸಬೇಕಿತ್ತು, ಆದರೆ ಅದು ವರ್ಕ್‌ಔಟ್‌ ಆಗಲಿಲ್ಲ. ಸಂಜಯ್‌ರ ಮುಂದಿನ ಚಿತ್ರದಲ್ಲಿ ಪ್ರೇಕ್ಷಕರಿಗೆ ಬೊಂಬಾಟ್‌ ಮಜಾ ಸಿಗಲಿದೆ.

ಎಲ್ಲರ ಪ್ರೀತಿಯಿಂದಾಗಿ ಇಲ್ಲಿದ್ದೀನಿ

2010ರಲ್ಲಿ ಬಂದ `ಮೈ ನೇಮ್ ಈಸ್‌ ಖಾನ್‌’ ಚಿತ್ರದಲ್ಲಿ ಅಸಿಸ್ಟೆಂಟ್‌ ಡೈರೆಕ್ಟರ್‌ ಸಹಾಯವಿಲ್ಲದೆ ತನ್ನ ಕೆರಿಯರ್‌ ಶುರು ಮಾಡಿದ ವರುಣ್‌ ಧವನ್‌ ಇಂದಿನ ಯಶಸ್ವೀ ಯುವನಾಯಕರಲ್ಲಿ ಒಬ್ಬ. ಅದರ ಕ್ರೆಡಿಟ್‌ ಪ್ರೇಕ್ಷಕರಿಗೇ ಸಲ್ಲುತ್ತದೆ ಎನ್ನುತ್ತಾನೆ ವರುಣ್‌. 24 ವರ್ಷದವನಾಗಿದ್ದಾಗ ನನ್ನ ಕೆರಿಯರ್‌ ಆರಂಭವಾಯ್ತು. ಪ್ರೇಕ್ಷಕರ ಆಶೀರ್ವಾದದಿಂದ ಮುಂದುವರಿದಿದ್ದೇನೆ. ಮುಖ್ಯವಾಗಿ ಯುವಜನತೆ ಹಾಗೂ ಕಿಶೋರರು ನನಗೆ ಬಹಳ ಸಪೋರ್ಟ್‌ ಮಾಡ್ತಾರೆ, ಎನ್ನುತ್ತಾನೆ. ಈತ 2012ರಲ್ಲಿ `ಸ್ಟೂಡೆಂಟ್‌ ಆಫ್‌ ದಿ ಇಯರ್‌’ ಮೂಲಕ ಯುವ ಸ್ಟಾರ್‌ ಎನಿಸಿದರೆ, `ಮೈ ತೇರಾ ಹೀರೋ, ಹಂಪ್ಟಿ ಶರ್ಮ ಕೀ ದುಲ್ಹನಿಯಾ’ ಚಿತ್ರಗಳಲ್ಲಿ ಮಿಂಚಿ, `ಬದಾಪುರ್‌’ ಮೂಲಕ ಆ್ಯಕ್ಷನ್‌ ಹೀರೋ ಎನಿಸಿದ. ಅದರಲ್ಲಿ ಈತನ ಆ್ಯಂಗ್ರಿ ಯಂಗ್‌ ಲುಕ್ಸ್, ಈಗಲೂ ಜನಪ್ರಿಯ.

ರೇಖಾಳ ಫ್ಯಾನಾದ ಸೋನಾಕ್ಷಿ

ಶಾಟ್‌ ಗನ್‌ ರಾಜಕುಮಾರಿ ಸೋನಾಕ್ಷಿ ಇತ್ತೀಚೆಗೆ ಹಿರಿಯ ನಟಿ ರೇಖಾಳ ಗುಣಗಾನ ಮಾಡುತ್ತಾ ನಡೆದಿದ್ದಾಳೆ. ರೇಖಾ ಮೇಡಂ ತರಹ ನಾನೂ ಸ್ಟೈಲ್ ಫ್ಯಾಷನ್‌ ಮಾಡಬಯಸುತ್ತೇನೆ. ಎಷ್ಟೇ ವರ್ಷ ಕಳೆದರೂ ರೇಖಾರ ಸ್ಟೈಲ್ ‌ಇನ್ನೂ ಹಾಗೇ ಇದೆ. ಆಕೆ ನಿಜಕ್ಕೂ ಗ್ರೇಟ್‌ ಸ್ಟೈಲ್ ‌ಐಕಾನ್‌. ಫ್ಯಾಷನ್‌ಗೂ ಸ್ಟೈಲ್‌ಗೂ ಅಂಥ ಸಂಬಂಧವಿಲ್ಲ ಅನಿಸುತ್ತೆ. ನಿಮ್ಮ ಮನದಾಳದಿಂದ ಉಕ್ಕಿ ಬರುವ ಭಾೀ ಸ್ಟೈಲ್‌, ಅದು ನಿಮ್ಮ ವ್ಯಕ್ತಿತ್ವದ ಕನ್ನಡಿ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಸ್ಟೈಲೂ ಡಿಫರೆಂಟ್‌ ಎನ್ನುತ್ತಾಳೆ ಸೋನಾಕ್ಷಿ.

ಬಾಕ್ಸರ್ಮಾಧವನ್

`ಪೀಕೆ’ ಚಿತ್ರದ ನಂತರ ರಾಜ್‌ಕುಮಾರ್‌ ಹಿರಾನಿ ತಮ್ಮ ಮುಂದಿನ `ಸಾಾ ಖಡೂಸ್‌’ ಚಿತ್ರಕ್ಕಾಗಿ ಮ್ಯಾಡಿ ಮಾಧವನ್‌ಗೆ ಬಾಕ್ಸಿಂಗ್‌ ಕೋಚ್‌ನ ಪಾತ್ರ ಕೊಟ್ಟಿದ್ದಾರೆ. ಮ್ಯಾಡಿಗೆ ಹಿರಾನಿ ಜೊತೆ ಇದು 3ನೇ ಚಿತ್ರ. ಇದು ತಮಿಳಿನ `ಇರುದಿ ಸುಟ್‌್ರ’ ಚಿತ್ರದ ರೀಮೇಕ್‌. ಮೂಲ ತಮಿಳಿನ ನಿರ್ದೇಶಕರಾದ ಸುಧಾ ಕೋಂಗ್ರಾ, ಮೂಲಕಥೆಯನ್ನೂ ಒದಗಿಸಿದ್ದಾರೆ. ಇಂಥ ವ್ಯಂಗ್ಯ ಶೀರ್ಷಿಕೆಗೆ ಸೆನ್ಸಾರ್‌ ಬೋರ್ಡ್‌ ಆಕ್ಷೇಪಿಸದೆ ಓ.ಕೆ. ಮಾಡಿದ್ದು ಆಶ್ಚರ್ಯವೇ ಸರಿ. ಹಾಲಿವುಡ್‌ ಚಿತ್ರಗಳನ್ನೂ ಆದರ್ಶಗೊಳಿಸಲು ಯತ್ನಿಸುವ ಸೆನ್ಸಾರ್‌ ಬೋರ್ಡ್‌ ಹಿರಾನಿಯತ್ತ ಸಾಫ್ಟ್ ಕಾರ್ನರ್‌ ತೋರಿದ್ದು ಹೇಗೆ?

ದೀಪಿಕಾಳ ಟ್ರಿಪಲ್ ಎಕ್ಸ್

ಪ್ರಿಯಾಂಕಾ ನಂತರ ಹಾಲಿವುಡ್‌ನಲ್ಲಿ ಮಿಂಚುತ್ತಿರುವಳೆಂದರೆ ದೀಪಿಕಾ ಪಡುಕೋಣೆ. `ಟ್ರಿಪಲ್ ಎಕ್ಸ್’ನ ಮುಂದಿನ ಸರಣಿಯಲ್ಲಿ ಇಳಿದ್ದಾಳಂತೆ. ಇದನ್ನು ಸಮರ್ಥಿಸಿದವರು ಇವಳ `ಪೀಕು’ ಕೋಸ್ಟಾರ್‌ ಇರ್ಫಾನ್‌ ಖಾನ್‌. ಕೆಲವು ದಿನಗಳ ಹಿಂದೆ ದೀಪಿಕಾ ವಿನ್‌ಡೀಝ್‌ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಳು. ಓ…. ಹಾಗಿದ್ದರೆ ದೀಪಿಕಾ ಹಾಲಿವುಡ್‌ಗೆ ಹಾರುತ್ತಾಳೆ ಎಂದು ಗುಸುಗುಸು ಕೇಳಿಬಂತು. ಇದಕ್ಕೆ ಮೊದಲೂ ದೀಪಿಕಾ ವಿನ್‌ಡೀಝ್‌ರ `ಫಾಸ್ಟ್  ಪ್ಯರೀಸ್‌’ನಲ್ಲಿ ನಟಿಸಬೇಕಿತ್ತು, ಆದರೆ ಸಂಜಯ್‌ಬನ್ಸಾಲಿಯವರ ಚಿತ್ರದಲ್ಲಿ ಬಿಝಿಯಾದ ದೀಪಿಕಾ, ಸಮಯ ಹೊಂದಿಸಿಕೊಳ್ಳಲು ಆಗಿರಲಿಲ್ಲ.

ದಕ್ಷಿಣವೇ ದಿಕ್ಕು!

`ಜನ್ನತ್‌’ ಚಿತ್ರದಿಂದ ಬಾಲಿವುಡ್‌ನಲ್ಲಿ  ಡೆಬ್ಯು ಪಡೆದ ನಟಿ ಸೋನಂ ಚೌಹಾನ್‌ಳಿಗೆ ಹಿಂದಿ ಚಿತ್ರರಂಗ ಏಕೋ ಸರಿಹೋಗಲಿಲ್ಲವಂತೆ. ಹೀಗಾಗಿಯೇ  ಆಕೆ `3]’ ಚಿತ್ರದ ನಂತರ ದಕ್ಷಿಣದ ಚಿತ್ರಗಳತ್ತ ವಾಲಿದ್ದಾಳೆ. `3]’ ಚಿತ್ರದಲ್ಲಿ ನೀ್‌ ನಿತಿನ್‌ಜೊತೆ ಸಾಕಷ್ಟು ಹಸಿಬಿಸಿ ದೃಶ್ಯಗಳಿದ್ದವು, ಇದು ಮೀಡಿಯಾದ ಚರ್ಚೆಗೂ ಬಂತು. ಹೀಗಾಗಿಯೇ ತನ್ನ ಕೆರಿಯರ್‌ ಸುಧಾರಿಸಲು ಸೋನಂ ತಮಿಳು ತೆಲುಗು ಚಿತ್ರಗಳ ಮೊರೆ ಹೋಗಬೇಕಾಯ್ತು. ಅಲ್ಲಿನ ಖ್ಯಾತ ನಿರ್ದೇಶಕರು ಈಕೆಗೆ ಮೇಲೆ ಮೇಲೆ ಇಂಥದೇ ಆಫರ್‌ ನೀಡುತ್ತಿರುವಾಗ, ಸೋನಂ ಮುಂಬೈಗೇಕೆ ಓಡಬೇಕು?

ಫ್ಲರ್ಟಿಂಗ್ನಲ್ಲಿ ತಪ್ಪೇನು?

ಏನೋ ಬಾಯಿಗೆ ಬಂದದ್ದನ್ನು ಮೀಡಿಯಾಗೆ ಒದರಿ ಫ್ರೀ ಪಬ್ಲಿಸಿಟಿ ಗಿಟ್ಟಿಸಬಹುದೆಂದು ಬಹುತೇಕರು ಭಾವಿಸುತ್ತಾರೆ. ಹೀಗಾಗಿಯೇ ಪೂನಂ ಪಾಂಡೆ, ರಾಖಿ ಸಾವಂತ್‌ರ ನಂತರ `ಬಿಗ್‌ಬಾಸ್‌’ನಲ್ಲಿ ್ಡೈ್ ‌ಕಾರ್ಡ್‌ ಎಂಟ್ರಿ ಪಡೆದ ಪ್ರಿಯಾ ಮಲಿಕ್‌, ನಾನು ಸಲ್ಮಾನ್‌ರ ಎಂಥ ಕಟ್ಟಾ ಅಭಿಮಾನಿ ಎಂದರೆ, ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಲಿಕ್ಕೂ ರೆಡಿ. ನನ್ನ ಪತಿಯ ಅನುಮತಿಯಿಂದಲೇ ಇಲ್ಲಿಗೆ ಫ್ಲರ್ಟ್‌ ಮಾಡಲು ಬಂದಿದ್ದೇನೆ. ಅಂಥ ಇಂಟೆಲಿಟೆಂಜ್‌ಬೆಸ್ಟ್ ಪರ್ಸನಾಲ್ಟಿಯನ್ನು ಯಾರಾದರೂ ಬಿಟ್ಟಾರೆಯೇ? ಎನ್ನುವ ಈಕೆ ಎಷ್ಟು ದಿನ `ಬಿಗ್‌ಬಾಸ್‌’ ಅತಿಥಿಯಾಗಿರುತ್ತಾಳೆ ಎಂಬುದನ್ನು ಕಾಲವೇ ಹೇಳಬೇಕು.

ಪಾತ್ರದಲ್ಲಿ ತಲ್ಲೀನತೆ

ಸೋನಿ ಟಿ.ವಿ.ಯ `ಪ್ಯಾರ್‌ ಕೋ ಹೋ ಜಾನೆ ದೋ’ ಧಾರಾವಾಹಿಯ ನಾಯಕಿ ಮೋನಾ, ತನ್ನ ಪ್ರೀತ್‌ ಪಾತ್ರದಲ್ಲಿ ಎಷ್ಟು ಮುಳುಗಿದ್ದಾಳೆಂದರೆ, ರೊಮ್ಯಾಂಟಿಕ್‌ ದೃಶ್ಯಕ್ಕಾಗಿ ಕ್ಯಾಂಡಲ್ ಲೈಟ್‌ ಡಿನ್ನರ್‌ನ ಶೂಟಿಂಗ್‌ ನಡೆಯುತ್ತಿದ್ದಾಗ ಮೇಣದ ಬತ್ತಿಯಿಂದ ಮುಖ ಸುಟ್ಟುಕೊಂಡಳಂತೆ! ನಡೆದದ್ದು ಇಷ್ಟೆ, ಶೂಟಿಂಗ್‌ನಲ್ಲಿ ಬಿಝಿ ಆಗಿದ್ದ ಮೋನಾ ಈ ಪಾತ್ರದಲ್ಲಿ ಎಷ್ಟು ತಲ್ಲೀನಳು ಎಂದರೆ, ಟೇಬಲ್ ಮೇಲಿದ್ದ ಹಲವು ಕ್ಯಾಂಡಲ್ಸ್ ಆರಿಸುವಾಗ, ಮೇಲಿದ್ದ ಒಂದು ದೊಡ್ಡ ಕ್ಯಾಂಡಲ್ ಕರಗಿ ಮುಖದ ಮೇಲೆ ಸುರಿದು, ಚರ್ಮವೆಲ್ಲ ಸುಟ್ಟು ಹೋಯ್ತಂತೆ! ಇದಲ್ಲವೇ ಪಾತ್ರದ ಪರಕಾಯ ಪ್ರವೇಶ?

ಮೋಹಿತ್ಸನಾಯಾರ ಮದುವೆ

`ಸರೋಜಿನಿ : ಏಕ್‌ಪಹ್‌’ನ ನಾಯಕ ಪಾತ್ರಧಾರಿ ಮೋಹಿತ್‌ ಸೆಹಗಲ್ ಇಷ್ಟರಲ್ಲೇ ಸನಾಯಾ ಇರಾನಿಯನ್ನು ಮದುವೆಯಾಗಲಿದ್ದಾರೆ. ಇವರಿಬ್ಬರಲ್ಲಿ `ಮಿಿ ಜಬ್‌ ಹವ್‌ ಔರ್‌ ತುವ್‌’ ಧಾರಾವಾಹಿಯಿಂದ ಪ್ರೇಮಾಂಕುರ ಆಯಿತಂತೆ. ಅಲ್ಲಿಂದ ಹರಿದ ಪ್ರೇಮನದಿ, ಇವರನ್ನು ಈ ತಿಂಗಳ ವಿವಾಹ ಬಂಧನದಲ್ಲಿ ಬೆಸೆಯಲಿದೆ. ಮದುವೆ ಗೋವಾದಲ್ಲಿ ನಡೆಯಲಿದೆ. ಅಬ್ಬರದ ಪ್ರಚಾರ, ಆಡಂಬರದ ವೈಭವಗಳಿಂದ ದೂರವಾಗಿ ಸರಳವಾಗಿ ಫ್ರೆಂಡ್ಸ್, ನೆಂಟರಿಷ್ಟರೆದುರು ಮದುವೆಯಾಗಲಿರುವ ಈ ಜೋಡಿಗೆ ಗೃಹಶೋಭಾ ಪರವಾಗಿ ಆಲ್ ದಿ ಬೆಸ್ಟ್!

ಕರಿಶ್ಮಾ ಉಪೇನ್ ಲವ್ ಸ್ಕೂಲ್

`ಬಿಗ್‌ ಬಾಸ್‌’ರ ಹಾಟ್‌ ಕಪಲ್ ಕರಿಶ್ಮಾ ಹಾಗೂ ಉಪೇನ್‌ ಪಟೇಲ್‌ ಎಂ.ಟಿ.ವಿ.ಯಲ್ಲಿ ಈಗ ತಮ್ಮ ಲವ್ ಕ್ಲಾಸ್‌ ತೆರೆಯಲಿದ್ದಾರೆ, ಅಂದರೆ ಎಂ.ಟಿ.ವಿ. `ಲವ್ ಸ್ಕೂಲ್‌’ ರಿಯಾಲಿಟಿ ಶೋಗೆ ಹೋಸ್ಟ್ ಆಗಲಿದ್ದಾರೆ. `ನಚ್‌ಬಲಿಯೇ’ ಶೋ ಮೂಲಕ ಒಂದಾದ ಜೋಡಿ ಹೀಗೆ ಮುಂದುವರಿದಿದೆ. ಈ ಶೋ ಬಗ್ಗೆ ಹೇಳುತ್ತಾ ಕರಿಶ್ಮಾ, ಈ ಶೋ ಲವಿಂಗ್‌ ಕಪಲ್ಸ್ ನ ಸಮಸ್ಯೆಗಳನ್ನು ನಿವಾರಿಸಲು ಸಲಹೆ ನೀಡುತ್ತದೆ. ಈ ಶೋ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ ಎನ್ನುತ್ತಾಳೆ.

ಕಿರುಪರದೆ ಕಿರಿದೇನಲ್ಲ!

ಟಿ.ವಿ. ಆ್ಯಕ್ಟ್ರೆಸ್‌ ಜೂಹಿ ಪರ್ಮಾರ್‌ರ ಪ್ರಕಾರ, ಕಿರುಪರದೆ ಈಗಾಗಲೇ ಹಿರಿ ಪರದೆ ಆಗಿದೆ. ಹೀಗಾಗಿಯೇ ಅಮಿತಾಬ್‌, ಅನಿಲ್‌ಕಪೂರ್‌, ಮಾಧುರಿ, ಸೋನಾಕ್ಷಿ ಮುಂತಾದವರೆಲ್ಲರೂ ಟಿ.ವಿ.ಗೆ ಲಗ್ಗೆ ಹಾಕುತ್ತಿದ್ದಾರೆ. ಈ ಸ್ಟಾರ್‌ಗಳ ಇಂಥ ವರ್ತನೆಯಿಂದಲೇ ಕಿರುಪರದೆ ಎಷ್ಟು ಪವರ್‌ ಫುಲ್ ಎಂಬುದು ಸಾಬೀತಾಗಿದೆ. ಜೂಹಿ ಇದೀಗ ` ಟಿ.ವಿ.’ಯ `ಸಂತೋಷಿ ಮಾ’ ಧಾರಾವಾಹಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ