ಹಳೆಯ ವರ್ಷ ವಿದಾಯ ಹೇಳಲು ಸಿದ್ಧವಾಗಿದೆ. ಹೊಸ ವರ್ಷ ತೆರೆದ ಬಾಹುಗಳಿಂದ ಸ್ವಾಗತಿಸಲು ಸಿದ್ಧವಾಗಿದೆ. ಹೀಗಿರುವಾಗ ಮನಸ್ಸಿನಲ್ಲಿ ಹೊಸ ಆಸೆಗಳು, ಹೊಸ ಉತ್ಸಾಹಗಳು, ಬದುಕನ್ನು ಸುಲಭ ಹಾಗೂ ಸುಖಮಯವಾಗಿ ಮಾಡುವಂಥ ವಿಚಾರಗಳು ಮೂಡುತ್ತವೆ. ಹೌದು, ಹೊಸ ವರ್ಷದಲ್ಲಿ ಸ್ಮಾರ್ಟ್ ಗ್ಯಾಜೆಟ್ಸ್ ಮೂಲಕ ನಿಮ್ಮ ಜೀವನದಲ್ಲಿ ಖುಷಿಯ ಮಳೆ ತನ್ನಿ.
ಸ್ಮಾರ್ಟ್ ಕುಕಿಂಗ್ ವಿಥ್ ಏರ್‌ಫ್ರೈಯರ್
ಹೊಸ ವರ್ಷದಲ್ಲಿ ನೀವು ಹಾಗೂ ನಿಮ್ಮ ಕುಟುಂಬ ಹೆಲ್ದಿಯಾಗಿರಲು ಕಿಚನ್‌ನಲ್ಲಿ ಏರ್‌ಫ್ರೈಯರ್ ಸೇರಿಸಿಕೊಳ್ಳಿ. ಏರ್‌ಫ್ರೈಯರ್ ಮೂಲಕ ಆಯಿಲ್‌ಫ್ರೀ, ಫ್ಯಾಟ್‌ಫ್ರೀ ಕುಕಿಂಗ್ ಮಾಡಬಹುದು. ಕಡಿಮೆ ಎಣ್ಣೆಯಲ್ಲಿ ಫ್ರೆಂಚ್‌ಫ್ರೈಸ್, ವೇಜರ್ಸ್, ಚಿಕನ್‌ನ ಗೆಟ್ಸ್ ಜೊತೆ ಜೊತೆಗೆ ಬಹಳಷ್ಟು ಡಿಶೆಸ್ ತಯಾರಿಸಿ ನಿಮ್ಮ ಮನೆಯವರ ಮನಸ್ಸು ಗೆಲ್ಲಬಹುದು. ಆಯಿಲ್ ಡ್ರೈನ್ ಬ್ಯಾಸ್ಕೆಟ್ ಮತ್ತು ಇನ್ಸುವೇಟೆಡ್ ಸೈಡ್ ಹ್ಯಾಂಡ್ಸ್‌ಗಳಿರುವ ಏರ್‌ಫ್ರೈಯರ್ ನಿಮ್ಮ ಕಿಚನ್‌ನ್ನು ಸ್ಮಾರ್ಟ್ ಮಾಡುವುದಲ್ಲದೆ ನಿಮಗೂ ಸ್ಮಾರ್ಟ್ ಕುಕಿಂಗ್ ಆಪ್ಶನ್ ಸಿಗುತ್ತದೆ.
ಹೆಲ್ದಿ ಕುಕಿಂಗ್ ವಿಥ್ ಎಲೆಕ್ಟ್ರಿಕ್ ತಂದೂರ್
ಆಹಾರ ಟೇಸ್ಟಿಯಾಗಿರುವ ಜೊತೆ ಜೊತೆಗೆ ಹೆಲ್ದಿಯೂ ಆಗಿದ್ದರೆ ಕೇಳುವುದೇ ಬೇಡ. ಎಲೆಕ್ಟ್ರಿಕಲ್ ತಂದೂರ್‌ನ್ನು ನಿಮ್ಮ ಕಿಚನ್‌ನ ಭಾಗವಾಗಿಸಿ ನೀವು ಹೀಗೆ ಮಾಡಬಹುದು. ಎಲೆಕ್ಟ್ರಿಕಲ್ ತಂದೂರ್‌ನ ಸಹಾಯದಿಂದ ಬೇಕಿಂಗ್, ಬಾರ್ಬೆಕ್ಯೂ, ಗ್ರಿಲ್ಲಿಂಗ್, ರೋಸ್ಟಿಂಗ್ ಮತ್ತು ಡೀ ಫ್ರಾಸ್ಟಿಂಗ್ ಎಲ್ಲವನ್ನೂ ಸುಲಭವಾಗಿ ಮಾಡಬಹುದು. ಎಲೆಕ್ಟ್ರಿಕಲ್ ತಂದೂರ್ ನಿಮ್ಮ ಕುಕಿಂಗ್‌ನ್ನು ಹೊಸ ಲೆವೆಲ್‌ಗೆ ಕರೆದೊಯ್ಯುತ್ತದೆ. ಮನೆಯವರು, ಗೆಳೆಯರು ನಿಮ್ಮ ಕೈಗಳಿಂದ ತಯಾರಾದ ಆಹಾರವನ್ನು ಹೊಗಳದೆ ಇರಲಾರರು. ಕಡಿಮೆ ಸಮಯದಲ್ಲಿ ಸುಲಭವಾಗಿ ಹೊಸ ಹೊಸ ಡಿಶೆಸ್ ತಯಾರಿಸುವ ಎಲೆಕ್ಟ್ರಾನಿಕಲ್ ತಂದೂರ್‌ನಲ್ಲಿ ಫೆದರ್ ಟಚ್ ಕಂಟ್ರೋಲ್ ಪ್ಯಾನಲ್ ಇದೆ. ಅದು ಲೈಟ್ ವೇಟ್ ಆಗಿದ್ದು ಸ್ವಚ್ಛಗೊಳಿಸುವುದೂ ಸುಲಭ. ಅದು ನಿಮ್ಮ ಬದುಕನ್ನು ಸ್ಮಾರ್ಟ್ ಹಾಗೂ ಸುಲಭವಾಗಿ ಮಾಡುತ್ತದೆ.
ಪರಿಸರಸ್ನೇಹಿ ಇಂಡಕ್ಷನ್ ಕುಕ್ ಟಾಪ್
ನೋ ಸ್ಮೋಕ್, ನೋ ಗ್ಯಾಸ್, ನೋ ಫೈರ್ ಸಿದ್ಧಾಂತ ಆಧರಿಸಿದ ಇಂಡಕ್ಷನ್ ಕುಕ್ ಟಾಪ್‌ನ್ನು ಹೊಸ ವರ್ಷದ ನಿಮ್ಮ ಗ್ಯಾಜೆಟ್ ಶಾಪಿಂಗ್‌ನಲ್ಲಿ ಸೇರಿಸಿಕೊಳ್ಳಿ ಮತ್ತು ನಿಮ್ಮ ಬದುಕನ್ನು ಸಹಜ ಮತ್ತು ಸರಳವಾಗಿಸಿಕೊಳ್ಳಿ. ಇಂಡಕ್ಷನ್ ಕುಕ್ ಟಾಪ್ ಮೇಲೆ ನೀವು ಬಾಯ್ಲಿಂಗ್, ಫ್ರೈಯಿಂಗ್ ಅಲ್ಲದೆ ರೋಟಿಗಳು ಹಾಗೂ ಪಲ್ಯಗಳನ್ನು ತಯಾರಿಸಬಹುದು. 7 ಮಲ್ಟಿಪಲ್ ಕುಕಿಂಗ್ ಆಪ್ಶನ್ಸ್ ಇರುವ ಇಂಡಕ್ಷನ್ ಕುಕ್ ಟಾಪ್ ಇಕೋ ಫ್ರೆಂಡ್ಲಿಯೂ ಆಗಿದೆ. ಏಕೆಂದರೆ ಇದು ಕರೆಂಟ್ ಚಾಲಿತವಾಗಿದ್ದು, ವಿಧವಿಧವಾದ ಕುಕಿಂಗ್‌ಗಾಗಿ ಇದರಲ್ಲಿ ತಾಪಮಾನ ಇಳಿಸುವ ಮತ್ತು ಹೆಚ್ಚಿಸುವ ಆಪ್ಶನ್ ಕೂಡ ಇದೆ. ಆಟೊಮ್ಯಾಟಿಕ್ ಪ್ಯಾನಲ್ ಡಿಟೆಕ್ಷನ್ ಸೌಲಭ್ಯ ಇರುವ ಇಂಡಕ್ಷನ್ ಕುಕ್ ಟಾಪ್‌ನಲ್ಲಿ ಚೈಲ್ಡ್ ಲಾಕ್ ಆಪ್ಶನ್ ಅಲ್ಲದೆ, ಟೈಮರ್ ಫಂಕ್ಷನ್ ಕೂಡ ಇದೆ. ಅದರಿಂದ, ನೀವು ನಿಶ್ಚಿಂತರಾಗಿ ಕುಕ್ ಮಾಡುವ ಜೊತೆ ಜೊತೆಗೆ ಮಲ್ಟಿ ಟಾಸ್ಕಿಂಗ್ ಕೂಡ ಮಾಡಬಹುದು. ಒಟ್ಟಿನಲ್ಲಿ ಈ ಗ್ಯಾಜೆಟ್ಸ್ ಹೊಸ ವರ್ಷದಲ್ಲಿ ನಿಮ್ಮ ಬದುಕನ್ನು ಪೂರ್ತಿಯಾಗಿ ರಿಫ್ರೆಷ್ ಮಾಡಿ ಸ್ಮಾರ್ಟ್ ಕುಕಿಂಗ್ ಆಪ್ಶನ್ ನೀಡುತ್ತದೆ.
ವಾಟರ್ ಪ್ಯೂರಿಫೈಯರ್
ಹೊಸ ವರ್ಷದಲ್ಲಿ ನಿಮ್ಮ ಕುಟುಂಬ ಆರೋಗ್ಯವಾಗಿರಲು ಮನೆಗೆ ವಾಟರ್ ಪ್ಯೂರಿಫೈಯರ್ ತನ್ನಿ. ಮಾರುಕಟ್ಟೆಯಲ್ಲಿ ಆರ್‌ಓ ವಾಟರ್ ಪ್ಯೂರಿಫೈಯರ್, ಮೂವಿ ವಾಟರ್ ಪ್ಯೂರಿಫೈಯರ್ ಲಭ್ಯವಿವೆ. ಅವು ನೀರಿನಿಂದ ಬ್ಯಾಕ್ಟೀರಿಯಾ ದೂರ ಮಾಡಿ ಸಂಪೂರ್ಣವಾಗಿ ಶುದ್ಧಗೊಳಿಸುತ್ತವೆ ಮತ್ತು ನಿಮ್ಮ ಕುಟುಂಬವನ್ನು ನೀರಿಗೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಿಸುತ್ತವೆ. ಹೊಸ ಪ್ಯೂರಿಫೈಯರ್‌ನಲ್ಲಿ ತಂಪು ಹಾಗೂ ಉಷ್ಣ ಎರಡೂ ರೀತಿಯ ನೀರಿನ ಆಪ್ಶನ್ ಇರುತ್ತದೆ.
ಟೈಂ ಸೇವಿಂಗ್ ಡಿಶ್ ವಾಶರ್
ಹೊಸ ವರ್ಷದಲ್ಲಿ ನಿಮ್ಮ ಮನೆಯವರಿಗೆ ಹೆಚ್ಚು ಸಮಯ ಕೊಡಲು ಹಾಗೂ ಕೆಲಸದವಳ ಟೆನ್ಶನ್‌ನಿಂದ ಮುಕ್ತಿ ಪಡೆಯಲು ಇಚ್ಛಿಸಿದರೆ ಡಿಶ್ ವಾಶರ್‌ನ್ನು ನಿಮ್ಮ ಕಿಚನ್‌ನ ಭಾಗವಾಗಿ ಮಾಡಿ. ಹೊಳೆಯುವ ಪಾತ್ರೆಗಳಿಗಾಗಿ ಈಗ ನೀವು ಒಂದು ಬಟನ್ ಪ್ರೆಸ್ ಮಾಡಬೇಕಷ್ಟೆ. ಸ್ವಚ್ಛವಾಗಿ ಹೊಳೆಯುವ ಪಾತ್ರೆಗಳು ಹೊರಬರುತ್ತವೆ.
ಇಕೋ ವಾಶ್ ಫೀಚರ್ ಮತ್ತು ಪಾತ್ರೆಗಳ ಸೈಜ್‌ಗೆ ಅನುಸಾರವಾಗಿ ಅಡ್ಜಸ್ಟೆಬಲ್ ರಾಕ್ಸ್ ಇರುವ ಅನೇಕ ಡಿಶ್ ವಾಶರ್‌ಗಳು ಮಾರುಕಟ್ಟೆಯಲ್ಲಿವೆ. ಅವು ನಿಮ್ಮ ಕಿಚನ್‌ನ್ನು ಸ್ಮಾರ್ಟ್ ಹಾಗೂ ಹೈಟೆಕ್ ಮಾಡುತ್ತದೆ. ಡಿಶ್ ವಾಶರ್‌ನಲ್ಲಿರುವ ಜೆಟ್ ವಾಶ್ ವೋಡ್ ಮತ್ತು ಸ್ಟೀಮ್ ಡ್ರೈವಿಂಗ್ ಆಪ್ಶನ್ ಪಾತ್ರೆಗಳನ್ನು ಜರ್ಮ್ ಫ್ರೀ ಮಾಡುವ ಜೊತೆ ಜೊತೆಗೆ ಸ್ವಚ್ಛವಾಗಿ ಹೊಳೆಯುವಂತೆ ಮಾಡುತ್ತದೆ.
ಡಿಶ್ ವಾಶರ್ ಗ್ಯಾಜೆಟ್ಸ್ ನಿಂದಾಗಿ ಕಿಚನ್‌ನಿಂದ ಉಳಿಯುವ ಸಮಯವನ್ನು ನಿಮ್ಮ ಮನೆಯವರೊಂದಿಗೆ ಕಳೆದಾಗ ಹೊಸ ವರ್ಷ ನಿಮಗೆ ಬಹಳಷ್ಟು ಸಂತಸ, ಆತ್ಮೀಯತೆ ತಂದುಕೊಡುತ್ತದೆ.
ಮಾಡರ್ನ್ ವ್ಯಾಕ್ಯೂಮ್ ಕ್ಲೀನರ್
ಹೊಸ ವರ್ಷದಲ್ಲಿ ಮನೆಯ ಸ್ವಚ್ಛತೆಯ ಸ್ಟೈಲ್ ಸಹ ಹೊಸದಾಗಿರಬೇಕು. ಹೀಗಾಗಿ ಹೊಸ ವರ್ಷದಲ್ಲಿ ಕಸಬರಿಗೆಗಳನ್ನು ಮರೆತುಬಿಡಿ ಮತ್ತು ಮಾಡರ್ನ್ ಗ್ಯಾಜೆಟ್ಸ್ ಗಳಿಂದ ಹೌಸ್ ಕ್ಲೀನಿಂಗ್ ಮಾಡಿ. ಮಲ್ಟಿಪಲ್ ಕ್ಲೀನಿಂಗ್ ವ್ಯಾಕ್ಯೂಮ್ ಕ್ಲೀನರ್‌ನ್ನು ಮನೆಗೆ ತನ್ನಿ. ಪವರ್‌ಫುಲ್ ಸಕ್ಷನ್ ಟೆಕ್ನಿಕ್ ಇರುವ ಬೇರೆ ಬೇರೆ ಆ್ಯಕ್ಸೆಸರೀಸ್‌ಗಳೊಂದಿಗೆ ಬರುವ ಮಾಡರ್ನ್ ವ್ಯಾಕ್ಯೂಮ್ ಕ್ಲೀನರ್ ನಿಮ್ಮ ಮನೆಯ ಮೂಲೆ ಮೂಲೆಗಳಿಗೆ ಹೊಳಪು ತರುತ್ತದೆ ಮತ್ತು ನೀವು ಗಂಡನ ದೃಷ್ಟಿಯಲ್ಲಿ ಸ್ಮಾರ್ಟ್ ಹೋಮ್ ಮೇಕರ್‌ಆಗುತ್ತೀರಿ. ಮಾರುಕಟ್ಟೆಯಲ್ಲಿ ವೇರಿಯಬಲ್ ಪವರ್ ಕಂಟ್ರೋಲ್ ಹಾಗೂ ಡಸ್ಟ್ ಬ್ಯಾಗ್ ಪ್ ಇಂಡಿಕೇಟರ್ ಇರುವ ವ್ಯಾಕ್ಯೂಮ್ ಕ್ಲೀನರ್ ಇದೆ. ಅದು ಒದ್ದೆ ಹಾಗೂ ಶುಷ್ಕ ಎರಡೂ ರೀತಿಯ ಸ್ವಚ್ಛತೆ ಮಾಡುತ್ತದೆ.
ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್
ಬದಲಾಗುತ್ತಿರುವ ಟೆಕ್ನಿಕ್‌ನೊಂದಿಗೆ ಡೆಸ್ಕ್ ಟಾಪ್ ಮತ್ತು ಲ್ಯಾಪ್‌ಟಾಪ್‌ನ ಜಾಗವನ್ನು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್‌ತೆಗೆದುಕೊಂಡಿವೆ. ಹೊಸ ವರ್ಷದಲ್ಲಿ ನೀವು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಮೂಲಕ ಸ್ಮಾರ್ಟ್ ಫೈನ್ ಮತ್ತು ನಿಮ್ಮ ಪತಿಯ ಹೃದಯ ಗೆಲ್ಲಿರಿ. ಸ್ಮಾರ್ಟ್‌ಫೋನ್‌ನಲ್ಲಿ ಇರುವ ಬಹಳಷ್ಟು ಸ್ಮಾರ್ಟ್ ಅಪ್ಲಿಕೇಷನ್ಸ್ ಮೂಲಕ ನೀವು ಆನ್‌ಲೈನ್ ಶಾಪಿಂಗ್, ಬ್ಯಾಂಕಿಂಗ್, ಬಿಲ್ ಪೇಮೆಂಟ್ ಮಾಡಬಹುದು. ಸುರಕ್ಷಿತ ಭವಿಷ್ಯಕ್ಕಾಗಿ ಮಾರುಕಟ್ಟೆಯಲ್ಲಿರುವ ಅನೇಕ ಸೇವಿಂಗ್ ಸ್ಕೀಮುಗಳ ಮಾಹಿತಿ ಪಡೆಯಬಹುದು ಮತ್ತು ವಿವೇಚನೆಯಿಂದ ಅವುಗಳಲ್ಲಿ ಹೂಡಿಕೆ ಮಾಡಿ ಸ್ಮಾರ್ಟ್ ಮತ್ತು ಇಂಟೆಲಿಜೆಂಟ್ ಫೈನೆಸರ್‌ಆಗಬಹುದು.
ಹೈಟೆಕ್ ವುಮನ್ ಆಗಿ
ಮಕ್ಕಳ ಹೋಂವರ್ಕ್ ಮಾಡಿಸಲು, ಪ್ರಾಜೆಕ್ಟ್ ವರ್ಕ್ ಮಾಡಿಸಲು ಪದೇ ಪದೇ ಮಾರುಕಟ್ಟೆಗೆ ಹೋಗುವ ಬದಲು ಪ್ರಿಂಟರ್‌ನ್ನು ಮನೆಗೆ ತನ್ನಿ ಮತ್ತು ಸ್ಮಾರ್ಟ್ ವುಮನ್ ಆಗಿ. ಮಕ್ಕಳು ನಿಮ್ಮ ಈ ಹೈಟೆಕ್ ಗ್ಯಾಜೆಟ್ ಶಾಪಿಂಗ್‌ನ್ನು ಮನಸಾರೆ ಹೊಗಳುವರು. ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ವೈಟ್ ಲೇಸರ್ ಪ್ರಿಂಟರ್, ಮಲ್ಟಿಪರ್ಪಸ್ ಬ್ಲ್ಯಾಕ್‌ವೈಟ್ ಪ್ರಿಂಟರ್, ಮಲ್ಟಿಪರ್ಪಸ್ ಪ್ರಿಂಟರ್‌ಗೆ ಹೋಲಿಸಿದರೆ ಫೋನ್ ಲೇಸರ್ ಪ್ರಿಂಟರ್ ಅಗ್ಗವಿದೆ. ಅದರಲ್ಲಿ ಒಂದು ಬಾರಿಗೆ ಸುಮಾರು 3,000 ಪ್ರಿಂಟ್‌ಔಟ್ ಪಡೆಯಬಹುದು. ಆದರೆ ಮಲ್ಟಿಪರ್ಪಸ್ ಪ್ರಿಂಟರ್‌ನಲ್ಲಿ ಸ್ಕ್ಯಾನ್, ಫೋಟೋಕಾಪಿ, ಫ್ಯಾಕ್ಸ್ ಗಳ ಆಪ್ಶನ್ ಇರುತ್ತವೆ.
ಹೆಲ್ತ್ ಗ್ಯಾಜೆಟ್ಸ್ ಆರೋಗ್ಯವಂತ ಶರೀರಕ್ಕಾಗಿ ಈ ವರ್ಷ ನಿಮ್ಮ ಗ್ಯಾಜೆಟ್ಸ್ ಶಾಪಿಂಗ್‌ನಲ್ಲಿ ಹೆಲ್ತ್ ಗ್ಯಾಜೆಟ್ಸ್ ನ್ನು ಸೇರಿಸಿ. ಉತ್ತಮ ಟೆಕ್ನಿಕ್‌ನಿಂದ ಕೂಡಿದ ಈ ಗ್ಯಾಜೆಟ್ಸ್ ನಿಮ್ಮ ಲೈಫ್ ಸ್ಟೈಲ್‌ನ್ನು ಸೂಕ್ಷ್ಮವಾಗಿ ಗಮನಿಸುತ್ತದೆಯಲ್ಲದೆ ಅವುಗಳ ಸಹಾಯದಿಂದ ನೀವು ಫಿಟ್ನೆಸ್‌ನತ್ತ ಮೊದಲ ಹೆಜ್ಜೆ ಇಡಬಹುದು. ಮಾರುಕಟ್ಟೆಯಲ್ಲಿರುವ ಗ್ಲೂಕೋಮೀಟರ್ ಗ್ಯಾಜೆಟ್ಸ್ ನ್ನು ಶರೀರದಲ್ಲಿ ಬ್ಲಡ್ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಲು ಉಪಯೋಗಿಸಲಾಗುತ್ತದೆ ಹಾಗೂ ಹೆಲ್ತ್ ಮತ್ತು ಫಿಟ್ನೆಸ್‌ನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು. ಹೀಗೆಯೇ ಬ್ಲಡ್ ಪ್ರೆಷರ್ ಪರೀಕ್ಷಿಸಬಹುದು ಹಾಗೂ ನಿಮ್ಮ ಮನೆಯವರ ಹೃದಯದ ಬಗ್ಗೆಯೂ ತಿಳಿದುಕೊಳ್ಳಬಹುದು. ಅದರಿಂದ ನಿಮ್ಮ ಲೈಫ್ ಸ್ಟೈಲ್ ಉತ್ತಮವಾಗುತ್ತದೆ.
ಸೆಕ್ಯೂರಿಟಿ ಸಿಸ್ಟಂ
ನಿಮ್ಮ ಬದುಕಿನಲ್ಲಿ ನಿಮ್ಮ ಮನೆಯವರ ಸುರಕ್ಷತೆಗಿಂತ ಹೆಚ್ಚಿನದು ಏನಿದೆ? ಆದ್ದರಿಂದ ಹೊಸ ವರ್ಷದ ಆರಂಭದಲ್ಲಿ ಸೆಕ್ಯೂರಿಟಿ ಸಿಸ್ಟಮ್ ಗ್ಯಾಜೆಟ್ಸ್ ತರಿಸಿಕೊಂಡು ಮನೆಯವರೆಲ್ಲರ ಸುರಕ್ಷತೆಯ ಉಡುಗೊರೆ ಪಡೆಯಿರಿ. ಸ್ಮೋಕ್ ಇಂಡಿಕೇಟರ್, ಫೈರ್‌ನಿಂದ ಸುರಕ್ಷತೆ, ಮನೆಯೊಳಗೆ ಅಪರಿಚಿತರ ಪ್ರವೇಶದ ಬಗ್ಗೆ ಎಚ್ಚರಿಸುವ ವಿಡಿಯೋ ಡೋರ್ ಫೋನ್, ಫಿಂಗರ್ ಪ್ರಿಂಟ್ ಲಾಕ್ಸ್, ಟೂವೇ ಕಮ್ಯುನಿಕೇಶನ್, ಸ್ಪೀಕರ್ ಸಿಸ್ಟಂನಂತಹ ಮಾಡರ್ನ್ ಗ್ಯಾಜೆಟ್ಸ್ ಹಾಕಿಸಿಕೊಂಡು ನೀವು ಯಶಸ್ವಿಯಾಗಿ ನಿಭಾಯಿಸಬಹುದು.
– ಪವಿತ್ರಾ ಎಸ್.