ಹಳೆಯ ವರ್ಷ ವಿದಾಯ ಹೇಳಲು ಸಿದ್ಧವಾಗಿದೆ. ಹೊಸ ವರ್ಷ ತೆರೆದ ಬಾಹುಗಳಿಂದ ಸ್ವಾಗತಿಸಲು ಸಿದ್ಧವಾಗಿದೆ. ಹೀಗಿರುವಾಗ  ಮನಸ್ಸಿನಲ್ಲಿ ಹೊಸ ಆಸೆಗಳು, ಹೊಸ ಉತ್ಸಾಹಗಳು, ಬದುಕನ್ನು ಸುಲಭ ಹಾಗೂ ಸುಖಮಯವಾಗಿ ಮಾಡುವಂಥ ವಿಚಾರಗಳು ಮೂಡುತ್ತವೆ. ಹೌದು, ಹೊಸ ವರ್ಷದಲ್ಲಿ ಸ್ಮಾರ್ಟ್‌ ಗ್ಯಾಜೆಟ್ಸ್ ಮೂಲಕ ನಿಮ್ಮ ಜೀವನದಲ್ಲಿ ಖುಷಿಯ ಮಳೆ ತನ್ನಿ.

ಸ್ಮಾರ್ಟ್ಕುಕಿಂಗ್ವಿಥ್ಏರ್ಫ್ರೈಯರ್

ಹೊಸ ವರ್ಷದಲ್ಲಿ ನೀವು ಹಾಗೂ ನಿಮ್ಮ ಕುಟುಂಬ ಹೆಲ್ದಿಯಾಗಿರಲು ಕಿಚನ್‌ನಲ್ಲಿ ಏರ್‌ಫ್ರೈಯರ್‌ ಸೇರಿಸಿಕೊಳ್ಳಿ. ಏರ್‌ಫ್ರೈಯರ್ ಮೂಲಕ ಆಯಿಲ್‌ಫ್ರೀ, ಫ್ಯಾಟ್‌ಫ್ರೀ ಕುಕಿಂಗ್‌ ಮಾಡಬಹುದು. ಕಡಿಮೆ ಎಣ್ಣೆಯಲ್ಲಿ ಫ್ರೆಂಚ್‌ಫ್ರೈಸ್‌, ವೇಜರ್ಸ್‌, ಚಿಕನ್‌ನ ಗೆಟ್ಸ್ ಜೊತೆ ಜೊತೆಗೆ ಬಹಳಷ್ಟು ಡಿಶೆಸ್‌ ತಯಾರಿಸಿ ನಿಮ್ಮ ಮನೆಯವರ ಮನಸ್ಸು ಗೆಲ್ಲಬಹುದು. ಆಯಿಲ್ ‌ಡ್ರೈನ್‌ ಬ್ಯಾಸ್ಕೆಟ್‌ ಮತ್ತು ಇನ್ಸುವೇಟೆಡ್‌ ಸೈಡ್‌ ಹ್ಯಾಂಡ್ಸ್‌ಗಳಿರುವ ಏರ್‌ಫ್ರೈಯರ್‌ ನಿಮ್ಮ ಕಿಚನ್‌ನ್ನು ಸ್ಮಾರ್ಟ್‌ ಮಾಡುವುದಲ್ಲದೆ ನಿಮಗೂ ಸ್ಮಾರ್ಟ್‌ ಕುಕಿಂಗ್‌ ಆಪ್ಶನ್‌ ಸಿಗುತ್ತದೆ.

ಹೆಲ್ದಿ ಕುಕಿಂಗ್ವಿಥ್ಎಲೆಕ್ಟ್ರಿಕ್ತಂದೂರ್

ಆಹಾರ ಟೇಸ್ಟಿಯಾಗಿರುವ ಜೊತೆ ಜೊತೆಗೆ ಹೆಲ್ದಿಯೂ ಆಗಿದ್ದರೆ ಕೇಳುವುದೇ ಬೇಡ. ಎಲೆಕ್ಟ್ರಿಕಲ್ ತಂದೂರ್‌ನ್ನು ನಿಮ್ಮ ಕಿಚನ್‌ನ ಭಾಗವಾಗಿಸಿ ನೀವು ಹೀಗೆ ಮಾಡಬಹುದು. ಎಲೆಕ್ಟ್ರಿಕಲ್ ತಂದೂರ್‌ನ ಸಹಾಯದಿಂದ ಬೇಕಿಂಗ್‌, ಬಾರ್ಬೆಕ್ಯೂ, ಗ್ರಿಲ್ಲಿಂಗ್‌, ರೋಸ್ಟಿಂಗ್‌ ಮತ್ತು ಡೀ ಫ್ರಾಸ್ಟಿಂಗ್‌ ಎಲ್ಲವನ್ನೂ ಸುಲಭವಾಗಿ ಮಾಡಬಹುದು. ಎಲೆಕ್ಟ್ರಿಕಲ್ ತಂದೂರ್‌ ನಿಮ್ಮ ಕುಕಿಂಗ್‌ನ್ನು ಹೊಸ ಲೆವೆಲ್‌ಗೆ ಕರೆದೊಯ್ಯುತ್ತದೆ. ಮನೆಯವರು, ಗೆಳೆಯರು ನಿಮ್ಮ ಕೈಗಳಿಂದ ತಯಾರಾದ ಆಹಾರವನ್ನು ಹೊಗಳದೆ ಇರಲಾರರು. ಕಡಿಮೆ ಸಮಯದಲ್ಲಿ ಸುಲಭವಾಗಿ ಹೊಸ ಹೊಸ ಡಿಶೆಸ್‌ ತಯಾರಿಸುವ ಎಲೆಕ್ಟ್ರಾನಿಕಲ್ ತಂದೂರ್‌ನಲ್ಲಿ ಫೆದರ್‌ ಟಚ್‌ ಕಂಟ್ರೋಲ್ ‌ಪ್ಯಾನಲ್ ಇದೆ. ಅದು ಲೈಟ್‌ ವೇಟ್‌ ಆಗಿದ್ದು ಸ್ವಚ್ಛಗೊಳಿಸುವುದೂ ಸುಲಭ. ಅದು ನಿಮ್ಮ ಬದುಕನ್ನು ಸ್ಮಾರ್ಟ್ ಹಾಗೂ ಸುಲಭವಾಗಿ ಮಾಡುತ್ತದೆ.

ಪರಿಸರಸ್ನೇಹಿ ಇಂಡಕ್ಷನ್ಕುಕ್ಟಾಪ್

ನೋ ಸ್ಮೋಕ್‌, ನೋ ಗ್ಯಾಸ್‌, ನೋ ಫೈರ್‌ ಸಿದ್ಧಾಂತ ಆಧರಿಸಿದ ಇಂಡಕ್ಷನ್‌ ಕುಕ್‌ ಟಾಪ್‌ನ್ನು ಹೊಸ ವರ್ಷದ ನಿಮ್ಮ ಗ್ಯಾಜೆಟ್ ಶಾಪಿಂಗ್‌ನಲ್ಲಿ ಸೇರಿಸಿಕೊಳ್ಳಿ ಮತ್ತು ನಿಮ್ಮ ಬದುಕನ್ನು ಸಹಜ ಮತ್ತು ಸರಳವಾಗಿಸಿಕೊಳ್ಳಿ. ಇಂಡಕ್ಷನ್‌ ಕುಕ್‌ ಟಾಪ್‌ ಮೇಲೆ ನೀವು ಬಾಯ್ಲಿಂಗ್‌, ಫ್ರೈಯಿಂಗ್‌ ಅಲ್ಲದೆ ರೋಟಿಗಳು ಹಾಗೂ ಪಲ್ಯಗಳನ್ನು ತಯಾರಿಸಬಹುದು. 7 ಮಲ್ಟಿಪಲ್ ಕುಕಿಂಗ್‌ ಆಪ್ಶನ್ಸ್ ಇರುವ ಇಂಡಕ್ಷನ್‌ ಕುಕ್‌ ಟಾಪ್‌ ಇಕೋ ಫ್ರೆಂಡ್ಲಿಯೂ ಆಗಿದೆ. ಏಕೆಂದರೆ ಇದು ಕರೆಂಟ್‌ ಚಾಲಿತವಾಗಿದ್ದು, ವಿಧವಿಧವಾದ ಕುಕಿಂಗ್‌ಗಾಗಿ ಇದರಲ್ಲಿ ತಾಪಮಾನ ಇಳಿಸುವ ಮತ್ತು ಹೆಚ್ಚಿಸುವ ಆಪ್ಶನ್‌ ಕೂಡ ಇದೆ. ಆಟೊಮ್ಯಾಟಿಕ್‌ ಪ್ಯಾನಲ್ ಡಿಟೆಕ್ಷನ್‌ ಸೌಲಭ್ಯ ಇರುವ ಇಂಡಕ್ಷನ್‌ ಕುಕ್‌ ಟಾಪ್‌ನಲ್ಲಿ ಚೈಲ್ಡ್ ಲಾಕ್‌ ಆಪ್ಶನ್‌ ಅಲ್ಲದೆ, ಟೈಮರ್‌ ಫಂಕ್ಷನ್‌ ಕೂಡ ಇದೆ. ಅದರಿಂದ, ನೀವು ನಿಶ್ಚಿಂತರಾಗಿ ಕುಕ್‌ ಮಾಡುವ ಜೊತೆ ಜೊತೆಗೆ ಮಲ್ಟಿ ಟಾಸ್ಕಿಂಗ್‌ ಕೂಡ ಮಾಡಬಹುದು. ಒಟ್ಟಿನಲ್ಲಿ ಈ ಗ್ಯಾಜೆಟ್ಸ್ ಹೊಸ ವರ್ಷದಲ್ಲಿ ನಿಮ್ಮ ಬದುಕನ್ನು ಪೂರ್ತಿಯಾಗಿ ರಿಫ್ರೆಷ್‌ ಮಾಡಿ ಸ್ಮಾರ್ಟ್‌ ಕುಕಿಂಗ್‌ ಆಪ್ಶನ್‌ ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ