ಇಂದಿನ ಮಹಿಳೆ ತನ್ನ ಕನಸುಗಳನ್ನು ಸಾಕಾರಗೊಳಿಸಲು ಹಿಂದೇಟು ಹಾಕುವುದಿಲ್ಲ. ತನ್ನ ಅಭಿಪ್ರಾಯಗಳ ಜೊತೆಜೊತೆಗೆ ಉನ್ನತ ಸ್ಥಾನ ಪಡೆಯುವ ಆಕಾಂಕ್ಷೆಯನ್ನು ಹೊಂದಿರುತ್ತಾಳೆ. ಅವಳ ಈ ಯಶಸ್ಸು ಒಂದು ಮಿತಿಯಲ್ಲಿ ಅವಳಿಗೆ ಸಿಗುತ್ತಿರುವ ಕಾನೂನು ಹಾಗೂ ಸಾಮಾಜಿಕ ಬಿಡುಗಡೆಯ ಪರಿಣಾಮವಾಗಿದ್ದರೂ ಬಹಳಷ್ಟು ಕಾನೂನು ಹಾಗೂ ಸಾಮಾಜಿಕ ಬಂಧನಗಳು ಬೇಡಿಗಳಾಗಿ ಅವಳ ಹೆಜ್ಜೆಗಳನ್ನು ತಡೆಯುತ್ತಿವೆ.
ಅಂತಹ ಬಿಡುಗಡೆ ಮತ್ತು ಬಂಧನಗಳ ಬಗ್ಗೆ ಕೊಂಚ ದೃಷ್ಟಿ ಹಾಯಿಸೋಣ.
ಅತ್ಯಾಚಾರ ಪೀಡಿತೆಗೆ ಗರ್ಭಪಾತದಿಂದ ಮುಕ್ತಿ : 35 ವರ್ಷದ ಹಾಲೋಬಿ ಎಂಬಾಕೆಯನ್ನು 2012ರ ನವೆಂಬರ್ 21 ರಂದು ಉಸ್ಮಾನ್ ಎಂಬ ವ್ಯಕ್ತಿಯ ಹತ್ಯೆಯ ಆರೋಪದಲ್ಲಿ ಬಂಧಿಸಲಾಗಿತ್ತು. ಹೇಳಿಕೆಯ ಪ್ರಕಾರ ಹಾಲೋಬಿಯನ್ನು ವೇಶ್ಯಾ ವೃತ್ತಿಗಾಗಿ ಅವಳ ಗಂಡ ಆಮಿನ್, ಉಸ್ನಾನ್‌ಗೆ ಮಾರಿದ್ದ. ಅಲ್ಲಿ ಅವಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಲಾಯಿತು.
2012ರ ಡಿಸೆಂಬರ್‌ನಲ್ಲಿ ಮೆಡಿಕಲ್ ಟೆಸ್ಟ್ ನಲ್ಲಿ ಅವಳಿಗೆ ಸುಮಾರು 6 ವಾರಗಳ ಗರ್ಭ ಇದೆಯೆಂದು ತಿಳಿಯಿತು. ಇದು ಆ ಅತ್ಯಾಚಾರಿಗಳಿಂದಲೇ ನಡೆದಿದ್ದು. ಅವಳು ಈ ಗರ್ಭದಿಂದ ಮುಕ್ತಿ ಪಡೆಯಲು ಇಚ್ಛಿಸಿದ್ದಳು. ಆದರೆ ಜೇಲ್ ವ್ಯವಸ್ಥಾಪಕರು ಅದಕ್ಕೆ ಅನುಕೂಲ ಮಾಡಿಕೊಡಲಿಲ್ಲ. ಅದರಿಂದ ಬೇಸರಗೊಂಡ ಹಾಲೋಬಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳನ್ನು ರಕ್ಷಿಸಲಾಯಿತು. ಜನವರಿ 2013ರಲ್ಲಿ ಅವಳು ಒಂದು ಪಿಟಿಶನ್ ಫೈಲ್ ಮಾಡಿ ಕಾನೂನಿನ ಸಹಾಯ ಕೇಳಿದಳು.
ಕೊನೆಗೆ ಮಧ್ಯಪ್ರದೇಶದ ಹೈಕೋರ್ಟ್, ಭಾರತದ ಸಂವಿಧಾನದ ಸೆಕ್ಷನ್ 21ನ್ನು ಉದಾಹರಿಸುತ್ತಾ ಯಾವುದೇ ಮಹಿಳೆಗೆ ಅತ್ಯಾಚಾರಿಯ ಮಗುವಿಗೆ ಜನ್ಮ ಕೊಡಲು ಒತ್ತಾಯ ಮಾಡುವಂತಿಲ್ಲ. ಏಕೆಂದರೆ ಅದು ಅವಳಿಗೆ ಗಾಢವಾದ ಮಾನಸಿಕ ಆಘಾತ ನೀಡುತ್ತದೆ. ಎಂಟಿಪಿ (ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ) ಪ್ರಕಾರ ಇದರ ಬಗ್ಗೆ ಡಾಕ್ಟರ್ ಮತ್ತು ರೇಪ್‌ಗೆ ಒಳಗಾದ ಮಹಿಳೆ ತೀರ್ಮಾನ ತೆಗೆದುಕೊಳ್ಳಬೇಕು. ಆ ಮಹಿಳೆಗೆ ಗರ್ಭಪಾತವನ್ನು ಮೆಡಿಕಲ್ ಸೌಲಭ್ಯ ಕೊಡಬೇಕು ಎಂದು ತನ್ನ ತೀರ್ಪಿನಲ್ಲಿ ತಿಳಿಸಿತು.
ಗುಜರಾತ್ ಹೈಕೊರ್ಟ್ ಕೂಡ 2011ರ ಫೆಬ್ರರಿಯಲ್ಲಿ ಅತ್ಯಾಚಾರಕ್ಕೆ ಗುರಿಯಾದ 18 ವರ್ಷದ ಒಬ್ಬ ದಲಿತ ಹುಡುಗಿಯ ಪರವಾಗಿ ಜಸ್ಟೀಸ್ ಅನಂತ್ ಎಸ್‌ಡಿ, ಇಂತಹ ಪರಿಸ್ಥಿತಿಯಲ್ಲಿ ಗರ್ಭವನ್ನು ಟರ್ಮಿನೇಟ್ ಮಾಡುವುದು ತಪ್ಪಲ್ಲ ಎಂದರು.
ಆ್ಯಂಟಿ ರೇಪ್ ಬಿಲ್ : 2013ರ ಏಪ್ರಿಲ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ಮಾಡಿದ ಈ ಆ್ಯಂಟಿ ರೇಪ್ ಬಿಲ್‌ಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದೆ.ಈ ಹೊಸ ಬಿಲ್‌ನಲ್ಲಿ ಸಾಧಾರಣ ಸೆಕ್ಸ್ ಅಪರಾಧಗಳಿಗೆ ಶಿಕ್ಷೆ ಹೆಚ್ಚಿಸಿರುವುದಲ್ಲದೆ, ಅತ್ಯಾಚಾರದ ವಿಷಯದಲ್ಲಿ ಕನಿಷ್ಠ 20 ವರ್ಷ ಮತ್ತು ಗರಿಷ್ಠ ಗಲ್ಲು ಶಿಕ್ಷೆಗೆ ಅವಕಾಶ ನೀಡಲಾಗಿದೆ.
ಇದರ ಪ್ರಕಾರ ಮಹಿಳೆಯ ಸಂವೇದನಾಶೀಲ ಅಂಗಗಳ ಸ್ಪರ್ಶವನ್ನು ಈಗ ಅತ್ಯಾಚಾರವೆಂದು ಪರಿಗಣಿಸಲಾಗುವುದು.
ಉಗ್ರವಾಗಿ ದಾಳಿ ಮಾಡುವವರಿಗೆ 10 ವರ್ಷದ ಶಿಕ್ಷೆ ವಿಧಿಸಲಾಗುದು.
ಇಣುಕಿ ನೋಡುವುದು, ಹಿಂಬಾಲಿಸುವುದು ಇತ್ಯಾದಿ ವಿಷಯಗಳಲ್ಲಿ ಎರಡನೇ ಬಾರಿ ಜಾಮೀನು ಸಿಗುವುದಿಲ್ಲ. ಪದೇ ಪದೇ ಹಿಂಬಾಲಿಸುವವರಿಗೆ ಗರಿಷ್ಠ 5 ವರ್ಷ ಶಿಕ್ಷೆ ವಿಧಿಸಲಾಗುದು.
ಶಿಕ್ಷೆಯಿಲ್ಲದೆ ಹೆಚ್ಚುವರಿಯಾಗಿ ಪೀಡಿತಳ ಚಿಕಿತ್ಸೆಗಾಗಿ ಆರೋಪಿಗೆ ಭಾರಿ ದಂಡವನ್ನು ವಿಧಿಸಲು ಅವಕಾಶವಿರುತ್ತದೆ.
ಬೆದರಿಸಿ ಶೋಷಣೆ ಮಾಡಿದ್ದಕ್ಕೆ 7 ರಿಂದ 10 ವರ್ಷಗಳ ಜೇಲು.
ಕಾರ್ಯಸ್ಥಳದಲ್ಲಿ ಲೈಂಗಿಕ ಶೋಷಣೆಯ ವಿರುದ್ಧ ಪ್ರತಿಭಟನೆ : 2011ರ ಡಿಸೆಂಬರ್‌ನ ದೆಹಲಿಯ ಗ್ಯಾಂಗ್ ರೇಪ್ ನಂತರ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಸೆಕ್ಷುಯಲ್ ಹರಾಸ್‌ಮೆಂಟ್ ಆಫ್ ವುಮನ್ ಅಟ್ ವರ್ಕ್ ಪ್ಲೇಸ್ (ಪ್ರಿವೆನ್ಶನ್, ಪ್ರೊಹಿಬಿಶನ್ ಮತ್ತು ರೀಡ್ರೆಸ್) ಆ್ಯಕ್ಟ್ 2013ರ ಏಪ್ರಿಲ್ ರಂದು ಜಾರಿಗೆ ಬಂದಿತು.
ಅದರ ಪ್ರಕಾರ ಯಾವುದೇ ರೀತಿಯ ಆಹಿತಕರ ಲೈಂಗಿಕ ಕ್ರಿಯೆಯನ್ನು ಇಷ್ಟವಿಲ್ಲದ ವ್ಯವಹಾರಗಳಲ್ಲಿ ಸೇರಿಸಲಾಗಿದೆ. ಉದಾಹರಣೆಗೆ ಫಿಸಿಕಲ್ ಕಾಂಟ್ಯಾಕ್ಟ್ ಅಡ್ವಾಂಟೇಜ್, ಡಿಮ್ಯಾಂಡ್‌ರಿಕ್ವೆಸ್ಟ್ ಫಾರ್ ಸೆಕ್ಷುಯಲ್ ಫೇರ್ಸ್, ರಿಮಾರ್ಕ್ಸ್ ಆಫ್ ಎ ಸೆಕ್ಷುಯಲ್ ನೇಚರ್, ಪೋರ್ನೋಗ್ರಫಿ ಇತ್ಯಾದಿ.
ಕಾರ್ಯಸ್ಥಳದಲ್ಲಿ ಅಧಿಕೃತ ಕೆಲಸದ ಸಲುವಾಗಿ ಪ್ರವಾಸದಲ್ಲಿ ಮಾಲೀಕರಿಂದ ವ್ಯವಸ್ಥೆ ಮಾಡಲ್ಪಟ್ಟ ಟ್ರಾನ್ಸ್ ಪೋರ್ಟೇಶನ್ ಕೂಡ ಇದರಲ್ಲಿ ಸೇರುತ್ತದೆ. ಈ ಅಧಿನಿಯಮದಂತೆ ಮಾಲೀಕರು ಬಹಳಷ್ಟು ವಿಷಯಗಳನ್ನು ಗಮನಿಸಬೇಕು. ಉದಾಹರಣೆಗೆ ಒಳ್ಳೆಯ ಕೆಲಸದ ವಾತಾವರಣ, ಸೆಕ್ಷುಯಲ್ ಕಂಪ್ಲೇಂಟ್ಸ್ ಕಮಿಟಿ (ಐಸಿಸಿ) ರಚಿಸುವುದು, ಅದರಲ್ಲಿ ಕನಿಷ್ಠ 4 ಸದಸ್ಯರಿದ್ದು ಅದರಲ್ಲಿ ಅರ್ಧದಷ್ಟು ಮಹಿಳೆಯರಿರಬೇಕು.
ಮಕ್ಕಳನ್ನು ನೋಡಿಕೊಳ್ಳಲು ಸಮಯ ಕೊಡುವ ಸ್ವಾತಂತ್ರ್ಯ : 6ನೇ ಸೆಂಟ್ರಲ್ ಪೇ ಕಮಿಷನ್ ಪ್ರಕಾರ ಸರ್ಕಾರಿ ಮಹಿಳಾ ಉದ್ಯೋಗಿಗಳು ತಮ್ಮ 18 ವರ್ಷದ ಕೆಳಗಿನ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಬೇಕೆಂದಾಗ 730 ದಿನಗಳ ಸಿಸಿಎಲ್ (ಚೈಲ್ಡ್ ಕೇರ್ ಲೀವ್) ತೆಗೆದುಕೊಳ್ಳಬಹುದು. ಈ ಲೀವ್ ಆ ಮಕ್ಕಳ ಕಾಯಿಲೆ, ಪರೀಕ್ಷೆ ಅಥವಾ ಅವರನ್ನು ನೋಡಿಕೊಳ್ಳುವ ಸಲುವಾಗಿ ಪಡೆಯಬಹುದು. ಆಗ ಸಂಬಳ ಕಟ್ ಆಗುವುದಿಲ್ಲ.
ವಿಧವೆಯರಿಗೆ ಮಾವನಿಂದ ಜೀವನಾಂಶ : ಮುಂಬೈ ಹೈಕೊರ್ಟ್ 2013ರ ಫೆಬ್ರವರಿಯಲ್ಲಿ ನೀಡಿದ ಆದೇಶದಂತೆ ಒಬ್ಬ ವಿಧವೆ ತನ್ನ ಗಂಡ ಸತ್ತ ನಂತರ ಮಾವನಿಂದ ಜೀವನಾಂಶ ಪಡೆಯಬಹುದು.
ಸೀಮಾ ಶಾ ಎಂಬಾಕೆಯ ವಿಷಯ ಹೀಗಿದೆ. 12 ವರ್ಷಗಳು ಮುಂಬೈನಲ್ಲಿ ಗಂಡನ ಮನೆಯಲ್ಲಿ ವಾಸಾವಗಿದ್ದರೂ ಪತಿಯ ಸಾವಿನ ನಂತರ ಅವಳನ್ನು ಅತ್ತೆ ಮನೆಯವರು ಮನೆಯಿಂದ ಹೊರಹಾಕಿದರು. ಜಸ್ಟೀಸ್ ರೋಶನ್ ಡಾಲವಿ ತಮ್ಮ ಆದೇಶದಲ್ಲಿ ಸೀಮಾ ಶಾರಿಗೆ ತಮ್ಮ ಪತಿ ಬಿಟ್ಟು ಹೋದ ಆಸ್ತಿಯಲ್ಲದೆ ತಮ್ಮ ಮಾವನ ಆಸ್ತಿಯ ಮೇಲೂ ಹಕ್ಕಿದೆ ಎಂದು ಸ್ಪಷ್ಟಪಡಿಸಿದರು.
ಲಿವ್ ಇನ್ ರಿಲೇಶನ್ ಶಿಪ್ಗೆ ಸಂಬಂಧಿಸಿದ ಹಕ್ಕು : ಒಂದು ಪಿಟಿಶನ್‌ನ ಹಿಯರಿಂಗ್ ನಂತರ 2014ರಲ್ಲಿ ಬಿ.ಎಸ್. ಚೌಹಾನ್‌ಮತ್ತು ಚೆವಾಮೇಸ್ವರ್ ತಮ್ಮ ಆದೇಶದಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಗಂಡ ಹೆಂಡತಿಯರಂತೆ ವಾಸಿಸುತ್ತಿದ್ದರೆ ಅವರನ್ನು ವಿವಾಹಿತರೆಂದು ಪರಿಗಣಿಸಲಾಗುತ್ತದೆ. ಅವರ ಮಕ್ಕಳನ್ನು ಕಾನೂನಿಗೆ ವಿರುದ್ಧ ಎನ್ನವಾಗುವುದಿಲ್ಲ. ಅವರಿಬ್ಬರ ಮದುವೆ ಧಾರ್ಮಿಕ ವಿಧಿವಿಧಾನಗಳಿಂದ ನಡೆಯದಿರಬಹುದು.
ಜೀವನಾಂಶ ಪಡೆಯುವ ಹಕ್ಕು : ವಿಚ್ಛೇದನ ಪಡೆಯುವಾಗ ಒಬ್ಬ ವಿವಾಹಿತ ಸ್ತ್ರೀ ಹಿಂದೂ ವಿವಾಹ ಅಧಿನಿಯಮದ ಸೆಕ್ಷನ್ 24ರ ಆಶ್ರಯದಲ್ಲಿ ಜೀವನಾಂಶ ಪಡೆಯಬಹುದು. ವಿಚ್ಛೇದನ ಪಡೆಯಲು ತೀರ್ಮಾನಿಸಿದ ನಂತರ ಸೆಕ್ಷನ್ 25ರ ಪ್ರಕಾರ `ಪರ್ಮನೆಂಟ್‌ಆ್ಯಲಿಮನಿ’ ಪಡೆಯುವ ಅವಕಾಶ ಇವೆ. ಖರ್ಚಿಗೆ ಹಣ ಕಡಿಮೆ ಸಿಕ್ಕರೆ ಅವಳು ಗಂಡನನ್ನು ಹೆಚ್ಚು ಖರ್ಚಿನ ಬಾಬತ್ತು ಕೊಡಲು ಬಾಧ್ಯಸ್ಥನನ್ನಾಗಿ ಮಾಡಬಹುದು.
ಸಿಆರ್‌ಪಿಸಿ ಸೆಕ್ಷನ್ 125ರ ಪ್ರಕಾರ ಪತ್ನಿಗೆ ಮೇಂಟೆನೆನ್ಸ್ ಹಣ ಪಡೆಯುವ ಹಕ್ಕಿದೆ.
ವರದಕ್ಷಿಣೆ ಕಾನೂನು (498 ಎ) : ಅತ್ತೆಯ ಮನೆಯವರು ಮದುವೆಗೆ ಮೊದಲು, ಮದುವೆ ಸಮಯದಲ್ಲಿ ಅಥವಾ ನಂತರ ಮಹಿಳೆಯ ಬಳಿ ವರದಕ್ಷಿಣೆ ಕೇಳಿದರೆ ಹಾಗೂ ಅವಳಿಗೆ ಶಾರೀರಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಭಾವನಾತ್ಮಕ ರೂಪದಲ್ಲಿ ತೊಂದರೆ ಕೊಟ್ಟರೆ ಅದಕ್ಕೆ ವರದಕ್ಷಿಣೆ ಕಾನೂನಿನ ಆಶ್ರಯದಲ್ಲಿ ಕೇಸ್ ಹಾಕಬಹುದು.
ಹಕ್ಕಿನ ಧ್ವನಿ ಎತ್ತಲು ಸ್ವಾತಂತ್ರ್ಯ : ದಿ ಹಂಸ್ ಫೌಂಡೇಶನ್‌ನ ಕೋ ಫೌಂಡರ್ ಮತ್ತು ಚೇರ್ ಪರ್ಸನಲ್ ಶ್ವೇತಾ ರಾವತ್ ಹೀಗೆ ಹೇಳುತ್ತಾರೆ, ಇಂದು ಕುಟುಂಬಗಳಲ್ಲಿ ಹುಡುಗಿಯರನ್ನು ಸ್ವಾಗತಿಸಲಾಗುತ್ತದೆ. ಅವರಿಗೆ ಶಿಕ್ಷಣ ಕೊಡುತ್ತಾರೆ. ನೌಕರಿಗೆ ಕಳಿಸುತ್ತಾರೆ. ಮಗಳ ಸಾಧನೆಗೆ ಹೆಮ್ಮೆ ಪಡುತ್ತಾರೆ. ಮಹಿಳೆಯರ ಹಕ್ಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. `ಹೆಣ್ಣು ಮಕ್ಕಳನ್ನು ರಕ್ಷಿಸಿ’ ಆಂದೋಲನ `ರೈಟ್ ಟು ಎಜುಕೇಶನ್’ ಇತ್ಯಾದಿಗಳಿಂದ ಮಹಿಳೆಯರಿಗೆ ಸಮಾನತೆಯ ಹಕ್ಕು ಸಿಗುತ್ತಿದೆ.
ಮಾನಸಿಕತೆಯಲ್ಲಿ ಈ ಬದಲಾವಣೆಗೆ ಮುಖ್ಯ ಕಾರಣ ಇಂಟರ್‌ನೆಟ್ ಮೂಲಕ ಹೆಚ್ಚುತ್ತಿರುವ ಸೋಶಿಯಲ್ ಕನೆಕ್ಟಿವಿಟಿ. ಇಂದು ಮಹಿಳೆಯರು ಸಂಪರ್ಕ ಇಟ್ಟುಕೊಳ್ಳಲು ಹಾಗೂ ತಮ್ಮ ಹಕ್ಕಿನ ಬಗ್ಗೆ ಧ್ವನಿ ಎತ್ತಲು ಸ್ವಾತಂತ್ರ್ಯವಿದೆ.
ಮಕ್ಕಳಿಗೆ ಸಂಬಂಧಿಸಿದ ಹಕ್ಕು : ಹಿಂದೂ ಅಡಾಪ್ಶನ್ ಮತ್ತು ಸಕ್ಸೆಶನ್ ಆ್ಯಕ್ಟ್ ಪ್ರಕಾರ ಯಾವುದೇ ವಯಸ್ಕ ವಿವಾಹಿತ/ ಅವಿವಾಹಿತ ಮಹಿಳೆ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು.
ದಾಖಲೆಗಾಗಿ ಸ್ಕೂಲ್ ಫಾರ್ಮ್ ನಲ್ಲಿ ಈಗ ತಂದೆಯ ಹೆಸರನ್ನು ಬರೆಯುವುದು ಅನಿವಾರ್ಯವಲ್ಲ. ಮಗುವಿನ ತಾಯಿ ಅಥವಾ ತಂದೆಯರಲ್ಲಿ ಯಾರಾದರೂ ಒಬ್ಬ ಪೋಷಕರ ಹೆಸರು ಬರೆದರೆ ಸಾಕು.
ಬಂಧನಗಳು ಬನ್ನಿ, ಮಹಿಳೆಯರ ಮೇಲೆ ಹೇರಲ್ಪಟ್ಟ ಕೆಲವು ಬಂಧನಗಳ ಬಗ್ಗೆ ಗಮನ ಕೊಡೋಣ.
ಹಳಸಿದ ಸಂಬಂಧವನ್ನು ಸಹಿಸಿಕೊಳ್ಳುವುದು : ಒಬ್ಬ ಮಹಿಳೆ ಅತ್ತೆಯ ಮನೆಯಲ್ಲಿ ಎಷ್ಟೇ ಹಿಂಸೆ ಅನುಭವಿಸುತ್ತಿರಲಿ, ಗಂಡ ಎಷ್ಟೇ ಅಪ್ರಾಣಿಕನಾಗಿರಲಿ, ನಮ್ಮ ಕಾನೂನು ಆ ಬಂಧನದಿಂದ ಮಹಿಳೆಯನ್ನು ಸುಲಭವಾಗಿ ಸ್ವತಂತ್ರವಾಗಲು ಬಿಡುವುದಿಲ್ಲ. ಸೆಕ್ಷನ್ 13ಬಿ (ಹಿಂದೂ ವಿವಾದದ ಅಧಿನಿಯಮ)ಯ ಪ್ರಕಾರ ಪತಿಪತ್ನಿಯರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಬಹುದು. ಆದರೆ ಪತಿ ಇದಕ್ಕೆ ಒಪ್ಪಿದರೆ ಮಾತ್ರ ಅದು ಸಾಧ್ಯ!
ಮಹಿಳೆ ಈ ಆ್ಯಕ್ಟ್ ಪ್ರಕಾರ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ, ವಿಚ್ಛೇದನ ಸಿಗಲು ಹಲವು ವರ್ಷಗಳು ಹಿಡಿಯುತ್ತವೆ. ಕೋರ್ಟು ಕಛೇರಿಗಳಿಗೆ ಅಲೆದಾಡುವುದೆಂದರೆ ಅವಳು ಆರ್ಥಿಕವಾಗಿ, ಮಾನಸಿಕವಾಗಿ ಬಹಳಷ್ಟು ತ್ರಸ್ತಳಾಗುತ್ತಾಳೆ. ಅವಳಿಗೆ ವಯಸ್ಸು ಸಾಕಷ್ಷವಾಗಿರುತ್ತದೆ. ಹೀಗಾಗಿ ಯಾವ ವ್ಯಕ್ತಿಯೂ ಅವಳನ್ನು ಸಂಗಾತಿಯಾಗಿ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ.
ಮದುವೆಯ ನಂತರ ಅತ್ತೆಮನೆಯ ಬಂಧನ : ಹುಡುಗನೇ ದಿಬ್ಬಣದೊಂದಿಗೆ ಹುಡುಗಿಯ ಮನೆಗೆ ಏಕೆ ಹೋಗಬೇಕು? ಇದು ಪಾರಂಪರಿಕ ತಪ್ಪು. ಏಕೆಂದರೆ ಇದು ಹುಡುಗಿಯರನ್ನು ಎತ್ತಿಕೊಂಡು ಬರುವ ನೆನಪುಂಟು ಮಾಡುತ್ತದೆ.
ಇಂದಿಗೂ ಸಹ ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ನೀನು ಬೇರೆಯವರ ಮನೆಗೆ ಹೋಗಬೇಕು. ಆದ್ದರಿಂದ ತಗ್ಗಿ ಬಗ್ಗಿ ನಡೆಯಲು ಕಲಿತುಕೊ. ಎಲ್ಲದರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ನಡಿ. ನೀನೇ ತ್ಯಾಗ ಮಾಡಬೇಕು ಎಂದೆಲ್ಲಾ ಹೇಳುತ್ತಾರೆ. ಆದರೆ ಇದು ಸರಿಯೇ? ಇವು ಮಹಿಳೆಯರ ಮುಂದಿಡುವ ಹೆಜ್ಜೆಗಳಿಗೆ ಬೇಡಿಯಾಗುವುದಿಲ್ಲವೇ? ಮದುವೆಯ ನಂತರ ಪತಿ ಪತ್ನಿ ತಮ್ಮ ಮನೆಯಲ್ಲಿರಬೇಕು. ಅಂದರೆ ಹುಡುಗಿಯಾಗಲೀ ಹುಡಗನಾಗಲೀ ಅತ್ತೆಮನೆಗೆ ಹೋಗುವುದಿಲ್ಲ. ಇಬ್ಬರೂ ತಮ್ಮದೇ ಹೊಸ ಮನೆಯನ್ನು ಮಾಡಿಕೊಂಡು 67 ವರ್ಷಗಳ ನಂತರ ಎಲ್ಲಿ ಅನುಕೂಲವೇ ಅಲ್ಲಿಗೆ ಹೋಗಬಹುದು.
ಹುಡುಗಿಯ ಕಡೆಯವರ ಮೇಲೆ ಸದಾ ದಬ್ಬಾಳಿಕೆ : ಅತ್ತೆಯಮನೆಯಲ್ಲಿ ಯಾವುದೇ ಹಬ್ಬ ಇರಲಿ ಹುಡುಗಿಯ ತವರುಮನೆಯಿಂದ ಬಹಳಷ್ಟು ಉಡುಗೊರೆ, ಸಿಹಿತಿಂಡಿಗಳು, ಬಟ್ಟೆಗಳು ಮತ್ತು ಹಣವನ್ನು ನಿರೀಕ್ಷಿಸುವುದು ರೀತಿರಿವಾಜುಗಳ ಭಾಗವಾಗಿದೆ. ಅವಳಿಗೆ ಮಗುವಾದಾಗ, ಮಗುವಿಗೆ ಕೇಶ ಮುಂಡನ ಅಥವಾ ನಾಮಕರಣವಾದಾಗಲೂ ತವರುಮನೆಯವರು ಅರ್ಧ ಖರ್ಚು ಕೊಡಬೇಕಾಗುತ್ತದೆ. ಅತ್ತೆ ಅಥವಾ ಮಾವ ಯಾರಾದರೂ ತೀರಿಕೊಂಡಾಗಲೂ ಪದ್ಧತಿಯ ಹೆಸರಿನಲ್ಲಿ ಹುಡುಗಿಯ ತವರುಮನೆಯರಿಂದ ಖರ್ಚು ಮಾಡಿಸುತ್ತಾರೆ. ಒಂದುವೇಳೆ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೆ ಅವರು ಸಾಲ ಮಾಡಬೇಕಾಗುತ್ತದೆ.
ಇಂತಹ ಪದ್ಧತಿಗಳಿಂದಾಗಿ ಮಹಿಳೆಯರಿಗೆ ಯಾವಾಗಲೂ ಮಾನಸಿಕ ಒತ್ತಡ ಇರುತ್ತದೆ. ಅತ್ತೆಮನೆ, ಮಕ್ಕಳು, ಗಂಡ ಮತ್ತು ರೀತಿರಿವಾಜುಗಳಲ್ಲಿ ಸಿಲುಕಿದ ಮಹಿಳೆ ಸ್ವತಂತ್ರವಾಗಿದ್ದು, ತಮ್ಮ ಬದುಕಿನಲ್ಲಿ ಉನ್ನತಿಗೇರಲು ತೀರ್ಮಾನ ತೆಗೆದುಕೊಳ್ಳುವುದು ಕಷ್ಟ.
ಖಿನ್ನತೆಯ ಅನುಭವ : ಹುಡುಗಿಯರಿಗೆ ಒಳ್ಳೆಯ ಮನೆ ಮತ್ತು ಒಳ್ಳೆಯ ಉಡುಪುಗಳ ಬಗ್ಗೆ ಹೆಚ್ಚುತ್ತಿರುವ ಬಯಕೆಗೆ ಹಣದ ಕೊರತೆ ಸಾಮಾನ್ಯ. ಇಂದು ಮಾರುಕಟ್ಟೆಯಲ್ಲಿ ಸಾವಿರಾರು ಆಯ್ಕೆಗಳಿವೆ. ಡ್ರೆಸ್, ಫುಟ್‌ವೇರ್ ಅಥವಾ ಆ್ಯಕ್ಸೆಸರೀಸ್‌ಗಳಾಗಲೀ ಮಾರುಕಟ್ಟೆಯಲ್ಲಿ ಹೇರಳವಾಗಿ ತುಂಬಿವೆ. ಆದರೆ ಹಣದ ಕಾರಣದಿಂದಾಗಿ ಮಹಿಳೆಯರು ತಮ್ಮ ಕಾಮನೆಗಳನ್ನು ಅದುಮಿಟ್ಟುಕೊಳ್ಳಬೇಕಾಗುತ್ತದೆ. ಸುಂದರವಾಗಿ ಕಾಣಿಸಲು ಹಾಗೂ ಆಕರ್ಷಕವಾಗಿ ಕಾಣಿಸಲು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
ತಲೆ ತಿರುಕ ಪ್ರೇಮಿಗಳ ಕಾಟ : ಮಹಿಳೆಯರು ಶಾಲಾ ಕಾಲೇಜುಗಳು ಅಥವಾ ಆಫೀಸುಗಳಿಗೆ ಹೋದರೂ ಚಂಚಲರಾದ, ತಲೆತಿರುಕ ರೋಮಿಯೋಗಳ ಗುಂಪು ಪ್ರತಿ ರಸ್ತೆಯಲ್ಲಿ ಇರುತ್ತದೆ. ಹುಡುಗಿಯರನ್ನು ರೇಗಿಸುವುದು, ಅಪಶಬ್ದಗಳನ್ನು ಮಾತಾಡುವುದು ಸರ್ವೇ ಸಾಮಾನ್ಯ. ಅದರಿಂದ ಹುಡುಗಿಯರ ಮನೋಬಲ ಕುಸಿಯುತ್ತದೆ. ಚಿಕ್ಕಂದಿನಿಂದಲೇ ಮನೆಯಲ್ಲಿ ಹುಡುಗರು ಅಮ್ಮನಿಗೆ, ಅಕ್ಕ ತಂಗಿಯರಿಗೆ ಬೈಯುವುದನ್ನು ಕಾಣಬಹುದು. ಅದರಿಂದಾಗಿ ದೊಡ್ಡವರಾದ ಮೇಲೂ ಅವರ ಆಲೋಚನೆ ವಿಕೃತವಾಗಿರುತ್ತದೆ. ಈ ಪರಿಸ್ಥಿತಿಗಳನ್ನು ಕಂಡು ಮನೆಯವರು ಹುಡುಗಿಯರ ಕಾಲುಗಳಿಗೆ ಬೇಡಿಗಳನ್ನು ತೊಡಿಸುವುದರಲ್ಲಿ ತೊಡಗಿರುತ್ತಾರೆ.
ಹುಡುಗಿಯರ ಶಿಕ್ಷಣದ ಬಗ್ಗೆ ಒಳಸಂಚು : ಹುಡುಗಿಯರು ಬರೀ ಶಾಲಾ ಕಾಲೇಜುಗಳಿಗೆ ಹೋಗುವುದು ಅವರ ವ್ಯಕ್ತಿತ್ವ ವಿಕಸನಕ್ಕೆ ಬಾಧಕವಾಗಿದೆ. ಅದು ಅವರ ಮೇಲೆ ಒತ್ತಾಯದಿಂದ ಹೇರಲ್ಪಟ್ಟ ಒಂದು ಸಾಮಾಜಿಕ ಬಂಧನವಾಗಿದೆ. ಮನೆಯವರಿಂದ ಅವರಿಗೆ ಇದೇ ಶಾಲಾ/ಕಾಲೇಜಿನಲ್ಲಿ ಓದಬೇಕು, ಆಗಲೇ ಸುರಕ್ಷಿತರಾಗಿರುತ್ತೀರಿ ಎಂದು ಸೂಚನೆ ದೊರಕಿರುತ್ತದೆ. ಶಾಲಾ ಕಾಲೇಜುಗಳನ್ನು ಬಿಡಿ, ಇಂದು ಮೆಟ್ರೋ, ರೇಲ್ವೇ ರಿಸರ್ವೇಶನ್ ಕೌಂಟರ್‌ಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲೂ ಮಹಿಳೆಯರು ಮತ್ತು ಪುರುಷರನ್ನು ಬೇರೆ ಬೇರೆ ಸಾಲುಗಳಲ್ಲಿ ಕೂಡಿಸುವ ವ್ಯವಸ್ಥೆ ಅವರನ್ನು ಪುರುಷರಿಂದ ಬೇರೆ ಮಾಡುವ ಹಾಗೂ ವ್ಯಕ್ತಿತ್ವ ವಿಕಾಸ ಹಾಗೂ ಸಮಾನತೆಯ ಅಧಿಕಾರ ಹಾಳು ಮಾಡುವ ಪ್ರಯತ್ನವಾಗಿದೆ.
ಖಾಪ್ ಪಂಚಾಯಿತಿಗಳ ಕಾಟ : ಖಾಪ್ ಪಂಚಾಯಿತಿಗಳು, ಗ್ರಾಮ ಪಂಚಾಯಿತಿಗಳು ಮತ್ತು ಇತರ ಸಂಸ್ಥೆಗಳ ವ್ಯವಸ್ಥಾಪಕರ ಕಡೆಯಿಂದ ಎಂತಹ ತೀರ್ಪು ಹೊರಬೀಳುತ್ತದೆ ಎಂದರೆ, ಅವಕ್ಕೆ ಕಾನೂನಿನ ದೃಷ್ಟಿಯಿಂದ ಯಾವುದೇ ಬೆಲೆ ಇರುವುದಿಲ್ಲ. ಆದರೆ ಸಾಮಾಜಿಕ ಮತ್ತು ಪರಂಪರಾಗತ ಮೌಲ್ಯಗಳ ಹೆಸರಿನಲ್ಲಿ ಮಹಿಳೆಯರಿಗೆ ಮೂಗುದಾರ ಬಿಗಿಯುವ ಪ್ರಯತ್ನ ಮಾಡಲಾಗುತ್ತದೆ.
2013ರ ಮಾರ್ಚ್‌ನಲ್ಲಿ ರೋಹಟಕ್‌ನ ಒಂದು ಶಿಕ್ಷಣ ಸಂಸ್ಥೆಯ ಮ್ಯಾನೇಜ್‌ಮೆಂಟ್, ಹುಡುಗಿಯರು ಸ್ಕರ್ಟ್ ಧರಿಸುವುಕ್ಕೆ ನಿಷೇಧ ಹೇರಿತು. ಅಲ್ಲಿಯೇ ಜೀಂದಾಲ್ ಜಿಲ್ಲೆಯಲ್ಲಿ ಹುಡುಗಿಯರು ಶಾಲೆಯ ಸಮಾರೋಪ ಸಮಾರಂಭದಲ್ಲಿ ನಾಟ್ಯ ಮಾಡಲು ನಿಷೇಧ ಹೇರಿತು.
ಕಳೆದ ವರ್ಷ ಕೆಲವ ಖಾಪ್ ಪಂಚಾಯಿತಿಗಳು ಅತ್ಯಾಚಾರದ ವಿಷಯಗಳಲ್ಲಿ ನಿಯಂತ್ರಣ ಹೊಂದಲು ಹುಡುಗಿಯರ ಮದುವೆ ವಯಸ್ಸನ್ನು 18 ವರ್ಷದಿಂದ 6 ವರ್ಷಕ್ಕೆ ಇಳಿಸುವ ಬೇಡಿಕೆ ಇಟ್ಟಿತ್ತು. ಹರಿಣಾಯಾಣಾದಲ್ಲಿ ಸತತವಾಗಿ ಆಗುತ್ತಿರುವ ಅತ್ಯಾಚಾರದಂತಹ ಘಟನೆಗಳ ಮಧ್ಯೆ ಹಿಂದಿನ ಮುಖ್ಯಮಂತ್ರಿ ಓಂಪ್ರಕಾಶ್ ಚೌತಾಲಾ ಕೂಡ ಒಂದು ವಿವಾದಾಸ್ಪದ ಹೇಳಿಕೆಯಲ್ಲಿ ಖಾಪ್ ಪಂಚಾಯಿತಿಗಳ ಪ್ರಸ್ತಾಪವನ್ನು ಸಮರ್ಥಿಸಿಕೊಳ್ಳುತ್ತಾರೆ. ಅದರಲ್ಲಿ ಅತ್ಯಾಚಾರದಂತಹ ದುರ್ಘಟನೆಯಿಂದ ಪಾರಾಗಲು ಹುಡುಗಿಯರಿಗೆ ಕಡಿಮೆ ವಯಸ್ಸಿನಲ್ಲಿಯೇ ಮದುವೆ ಮಾಡಿಬಿಡಬೇಕೆಂದು ಹೇಳಿತ್ತು.
ಇಂತಹ ಆದೇಶಗಳು ಮಹಿಳೆಯರನ್ನು ಬಂಧನದಲ್ಲಿಡುವ ಷಡ್ಯಂತ್ರವಾಗಿದೆ.
ಮನೆಯಿಂದ ಹೊರಹಾಕುವ ಒಳಸಂಚು : ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ, 2013ರ ವಾರ್ಷಿಕ ವರದಿಯ ಪ್ರಕಾರ 2012ರಲ್ಲಿ ಮಾತ್ರ ಭಾರತದಲ್ಲಿ 24,923 ಅಚ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 24,470 ಅತ್ಯಾಚಾರದ ಅಪರಾಧಗಳಿಗೆ ಬಂಧುಗಳು ಅಥವಾ ನೆರೆಹೊರೆಯವರು ಕಾರಣರು. ಅತ್ಯಾಚಾರದ ಸುದ್ದಿಗಳನ್ನು ಓದಿ ಕೇಳಿ ಪೋಷಕರು ಹೆದರುತ್ತಾರೆ. ಹೆಣ್ಣುಮಕ್ಕಳನ್ನು ಹೆಚ್ಚು ಹೊತ್ತು ಹೊರಗೆ ಕಳಿಸಲು ಅಡ್ಡಿ ಮಾಡುತ್ತಾರೆ. ತುರ್ತು ಕೆಲಸ ಇದ್ದರೂ ಕತ್ತಲಾದ ನಂತರ ಹೊರಗೆ ಕಳಿಸುವುದಿಲ್ಲ.
ಯೂನಿಫಾರ್ಮ್ ಸಿವಿಲ್ ಕೋಡ್ ಇಲ್ಲ : ಅಪರಾಧ ಮನೋವಿಜ್ಞಾನಿ ಅನುಜಾ ಕಪೂರ್, ಭಾರತದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳು ಬೇರೆ ಬೇರೆ ಇವೆ ಎನ್ನುತ್ತಾರೆ. ಹಿಂದೂ ಮತ್ತು ಮುಸ್ಲಿಂ ಮಹಿಳೆಯರನ್ನು ನೋಡಿ. ಇಬ್ಬರಿಗೂ ಬೇರೆ ಬೇರೆ ಕಾನೂನುಗಳಿವೆ. ಹಿಂದೂಗಳಿಗೆ ಒಂದಕ್ಕಿಂತ ಹೆಚ್ಚು ಮದುವೆ ಕಾನೂನಿಗೆ ವಿರುದ್ಧ. ಆದರೆ ಮುಸ್ಲಿಮರಲ್ಲಿ 4-4 ಮದುವೆ ಆದರೂ ಅಪರಾಧವಲ್ಲ. ಇದರಿಂದ ಆ ಮಹಿಳೆಯರಿಗೆ ಶೋಷಣೆಯಾಗುತ್ತದೆ. ಇರಬೇಕಾದ ಒಂದು ಯೂನಿಫಾರ್ಮ್ ಸಿವಿಲ್ ಕೋಡ್ ಇಲ್ಲ ಎನ್ನುತ್ತಾರೆ.
ಇಂಡಿಯನ್ ಪೀನಲ್ ಕೋಡ್‌ನ ಸೆಕ್ಷನ್ 375ರ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರೊಂದಿಗೆ ಸೆಕ್ಷುಯಲ್ ಇಂಟರ್ ಕೋರ್ಸ್‌ನ್ನು ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ. ಆದರೆ 16ಕ್ಕಿಂತ ಕಡಿಮೆ ವಯಸ್ಸಿನ ಹೆಂಡತಿಯಿದ್ದರೆ ಅದು ರೇಪ್ ಅಲ್ಲ. ಕ್ರಿಮಿನಲ್ ಲಾ (ಅಮೆಂಡ್‌ಮೆಂಟ್) ಆ್ಯಕ್ಟ್ 2013ರ ಪ್ರಕಾರ, ಭಾರತದಲ್ಲಿ ಸಹಮತಿಯೊಂದಿಗೆ ಲೈಂಗಿಕ ಸಂಬಂಧ ಮತ್ತು ಮದುವೆಯ ವಯಸ್ಸನ್ನು 18 ವರ್ಷವೆಂದು ನಿಗದಿಗೊಳಿಸಲಾಗಿದೆ.
ಈ ಕಾನೂನುಗಳು ಎಷ್ಟೊಂದು ತೊಡಕಿನಿಂದ ಕೂಡಿವೆಯೆಂದರೆ, ಕಾನೂನು ವಾಸ್ತವದಲ್ಲಿ ಏನು ಹೇಳಲು ಬಯಸುತ್ತದೆ ಎಂದು ಮಹಿಳೆಯರಿಗೆ ಅರ್ಥವಾಗುವುದಿಲ್ಲ.
ಪ್ರೀಮ್ಯಾರಿಟ್ ಸೆಕ್ಸ್ ನಂತರ ಅವನೊಂದಿಗೆ ಮದುವೆ : 2013ರ ಜೂನ್‌ನಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯ ಒಂದು ಕೇಸ್‌ನಲ್ಲಿ ತೀರ್ಪು ನೀಡುತ್ತಾ ವಿವಾಹಪೂರ್ವ ಸಂಬಂಧ ಉಂಟಾಗಿದ್ದರೆ ಹುಡುಗ ಮತ್ತು ಹುಡುಗಿಯರನ್ನು ವಿವಾಹಿತರೆಂದು ತಿಳಿಯಲಾಗುತ್ತದೆ ಎಂದು ಹೇಳಿತು. ಅದಕ್ಕೆ ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ 18 ವರ್ಷಾಗಿರುವುದು ಅಗತ್ಯವಾಗಿದೆ.
ಒಂದುವೇಳೆ ಹುಡುಗಿ ನಶೆಯಲ್ಲಿದ್ದು ಅಥವಾ ಒತ್ತಾಯದಿಂದ ಅವಳೊಂದಿಗೆ ಸೆಕ್ಸ್ ನಡೆಸಿದ್ದರೆ ಅವನೊಂದಿಗೇ ಹುಡುಗಿಯ ಮದುವೆಯನ್ನು ನಡೆಸುವುದು ಎಷ್ಟು ನ್ಯಾಯ ಎಂದು ಅನುಜಾ ಕಪೂರ್ ಹೇಳುತ್ತಾರೆ.
ಒಟ್ಟಿನಲ್ಲಿ ಕಾನೂನು ಮತ್ತು ಸಮಾಜ ಮಹಿಳೆಯರಿಗೆ ಮುಕ್ತ ಆವಕಾಶದಲ್ಲಿ ಹಾರಾಡಲು ರೆಕ್ಕೆ ಕೊಡಲಿ ಅಥವಾ ಬೇಡಿಗಳಾಗಲಿ ರಸ್ತೆ ತಡೆಯಲಿ, ಒಂದು ವೇಳೆ ಮಹಿಳೆಯರು ದೃಢ ಸಂಕಲ್ಪ ಮಾಡಿದರೆ ಅವರಿಗೆ ಗುರಿಯತ್ತ ತಲುಪಲು ಯಾರಿಂದಲೂ ಅಡ್ಡಿಯಾಗುವುದಿಲ್ಲ.
– ಗಿರಿಜಾ ಶಂಕರ್
ಮಹಿಳೆಯರ ಹಿತಕ್ಕಾಗಿ ಇರುವ ಕಾನೂನು ಮಹಿಳಾ ಹಿತಕ್ಕಾಗಿ ಪರಿಪೂರ್ಣ ರಕ್ಷಣೆ ಕೊಡುವಂತೆ ಕಂಡುಬರುತ್ತದೆ. ಆದರೆ ಪರೀಕ್ಷೆ ಮಾಡಿದಾಗ ಇಂತಹ ಅನೇಕ ಅಸಂಗತಗಳು ಎದುರಾಗುತ್ತವೆ. ಅವು ಈ ಕಾನೂನುಗಳಿಗೆ ಒಂದು ದೊಡ್ಡ ಸವಾಲಾಗುತ್ತದೆ.
– ಋಚಾ ಪಾಂಡೆ, ಕಾನೂನು ಸಲಹೆಗಾರರು
ನಮ್ಮ ಸಮಾಜದಲ್ಲಿ ಏಕರೂಪದ ಕಾನೂನು ಇರಬೇಕು. ಉದಾಹರಣೆಗೆ ಹಿಂದೂಗಳಲ್ಲಿ ಒಂದಕ್ಕಿಂತ ಹೆಚ್ಚು ಮದುವೆ ಕಾನೂನಿಗೆ ವಿರುದ್ಧ, ಆದರೆ ಮುಸ್ಲಿಮರಲ್ಲಿ 4-4 ಮದುವೆಗಳು ಹೇಗೆ ಒಪ್ಪಿಗೆಯಾಗಿವೆ?
– ಅನುಜಾ ಕಪೂರ್, ಅಪರಾಧ ಮನೋವಿಜ್ಞಾನ