ಚರ್ಮದ ಆ ಅಸಾಮಾನ್ಯ ಭಾಗ, ಯಾವುದರಿಂದ ಅದರ ಬಣ್ಣದಲ್ಲಿ ಬದಲಾವಣೆ ಬಂದಿದೆಯೋ, ಒಂದು ಸಾಮಾನ್ಯ ಸಮಸ್ಯೆ ಎನಿಸಿದೆ. ಇದಕ್ಕೆ ನಾನಾ ಸಂಭಾವ್ಯ ಕಾರಣಗಳಿರಬಹುದು. ಬಹುಶಃ ನಿಮ್ಮ ಚರ್ಮದ ಆ ಭಾಗದ ಮೆಲನಿನ್ ಮಟ್ಟದಲ್ಲಿ ವ್ಯತ್ಯಾಸದ ಕಾರಣ ಪಿಗ್ಮೆಂಟೇಶನ್‌ನಲ್ಲಿ ಬದಲಾವಣೆ ಆಗಿರಬಹುದು. ಕಲೆ ಗುರುತುಗಳಿರುವ ಚರ್ಮದ್ದು ಕೂಡ ಹಲವು ಸಂಭಾವ್ಯ ಕಾರಣಗಳಿರಬಹುದು. ಅವು ಸಾಧಾರಣದಿಂದ ಜಟಿಲ ಆಗಿರುತ್ತದೆ. ಅಂದರೆ ಮೊಡವೆ, ಗುಳ್ಳೆ, ದದ್ದು, ತೀವ್ರ ಬಿಸಿಲಿನ ಕಾರಣದಿಂದ ಪೇವಲ ಬಣ್ಣ, ಸೋಂಕು, ಅಲರ್ಜಿ, ಹಾರ್ಮೋನ್ ಬದಲಾವಣೆ, ಮಚ್ಚೆಗಳಂಥ ಹುಟ್ಟಿನ ಗುರುತುಗಳು…. ಇತ್ಯಾದಿ. ಆದರೆ ಜನ ಸಾಮಾನ್ಯವಾಗಿ ತಿಳಿಯುವುದೆಂದರೆ, ಮುಖದಲ್ಲಿ ಕಲೆ ಗುರುತು ಉಳಿಯಲು ಕಾರಣ ಕೇವಲ ಮೊಡವೆಗಳು ಅಂತ, ಆದರೆ ವಾಸ್ತವ ಹಾಗಲ್ಲ.
ಮೊಡವೆ ಗುಳ್ಳೆಗಳ ಕಾರಣ ಆಗುವ ಗಾಯಗಳೂ ಕಲೆ ಗುರುತು ಉಳಿಸಬಹುದು. ನೀವು ಅದನ್ನು ಜಿಗುಟಿ, ಕೆರೆದು ಮಾಡದಿದ್ದರೂ ಅವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ದ್ರವ ತುಂಬಿದ ಇಂಥ ಗಾಯದ ಕಾರಣ, ಚರ್ಮದಲ್ಲಿ ಆ ಭಾಗ ನೋವಿನಿಂದ ಕೂಡಿರುವಂತೆ ಅನಿಸುತ್ತದೆ. ಆದರೆ ಅಸಲಿಗೆ ಇಂಥ ಗಾಯ ಚರ್ಮದ ಹೊರ ಪದರದ ಮೇಲೆ ಕಾಣಿಸುವುದೇ ಇಲ್ಲ. ಉರಿಯೂತ ಇರುವ ಇಂಥ ಮೊಡವೆಗಳು ನೋವು ನೀಡುವುದು ಸಹಜ, ಇವುಗಳಲ್ಲಿ ಬಿಳಿಯ ರಕ್ತ ಕಣ ಅಧಿಕ ಸಂಗ್ರಹಗೊಂಡಿರುತ್ತವೆ. ಈ ಕಾರಣ ಆ ಭಾಗದಲ್ಲಿ ಹೆಚ್ಚು ಕಿಣ್ವ (ಎನ್‌ಝೈಂ)ಗಳು ಸೇರಿಕೊಳ್ಳುತ್ತವೆ, ಇವು ಹೆಚ್ಚು ಹಿಂಸೆ ನೀಡುತ್ತವೆ.
ಇಂಥ ಸ್ಥಿತಿಯಲ್ಲಿ ನಿಮ್ಮ ಚರ್ಮ ಸ್ವಯಂ ತಾನೇ ಆ ಗಾಯ ಮಾಡಿಸುವ ಕೆಲಸ ಮಾಡುತ್ತದೆ. ಆ ಕಾರಣವಾಗಿ ಕಲೆ ಗುರುತು ಹೊಸ ಪದರದ ಮೇಲೆ ಮೂಡಿ ಬರುತ್ತದೆ. ಹೀಗಾಗಿ ಮೊಡವೆಯೊಂದೇ ಮುಖದ ಮೇಲೆ ಕುರೂಪಿ ಬಣ್ಣ ಮೂಡಿಸಲು ಕಾರಣವಲ್ಲ. ಇತರ ಗಾಢ ಬಣ್ಣದ ಕಲೆಗಳು, ಹೆಚ್ಚು ಪಿಗ್ಮೆಂಟೇಶನ್‌ವುಳ್ಳ ಚರ್ಮಕ್ಕೆ ಕಾರಣವೆಂದರೆ ಹೆಚ್ಚುತ್ತಿರುವ ನಿಮ್ಮ ವಯಸ್ಸು, ತೀವ್ರ ಬಿಸಿಲಿನಿಂದ ಆಗುವ ಹಾನಿ, ಗರ್ಭನಿರೋಧಕ ಮಾತ್ರೆಗಳೂ ಕಾರಣ ಎನ್ನಬಹುದು. ಈ ಕಲೆ, ಅಲರ್ಜಿ ಅಥವಾ ಹೈಪರ್‌ಪಿಗ್ಮೆಂಟೇಶನ್‌ನಂಥ ಚರ್ಮದ ಗಂಭೀರ ಸಮಸ್ಯೆಗಳು ಹೆಚ್ಚಿದರೆ ಕೂಡಲೇ ಚರ್ಮ ತಜ್ಞರನ್ನು ಭೇಟಿ ಮಾಡಿ, ನಿಧಾನಿಸಬೇಡಿ.
ಗುರುತು ಮತ್ತು ಕಲೆಗಳ ವ್ಯತ್ಯಾಸ
ಮೊಡವೆ ಉಳಿಸುವ ಗುರುತು ಮತ್ತು ಚರ್ಮದ ಕಲೆಗಳಲ್ಲಿ ಖಂಡಿತಾ ವ್ಯತ್ಯಾಸವಿದೆ. ಇವೆರಡರ ನಡುವಿನ ವ್ಯತ್ಯಾಸ ತಿಳಿಯುವಲ್ಲಿ ಜನ ತುಸು ಕನ್‌ಫ್ಯೂಶನ್‌ಗೆ ಒಳಗಾಗುತ್ತಾರೆ. ಅದೆಂದರೆ ವಾಸ್ತವಿಕ ಮೊಡವೆಗಳ ಗುರುತು ಹಾಗೂ ಅವು ಒಡೆದ ನಂತರ ಕೆಂಪು ಕಲೆ ಅಥವಾ ಡಿಸ್‌ಕಲರೇಶನ್.
ಚರ್ಮದ ಮೇಲ್ಪದರದ ಮೇಲೆ ಗುಲಾಬಿ, ಕೆಂಪು ಅಥವಾ ಬೂದು ಬಣ್ಣದ ಗುರುತು ಸಮಯ ಸರಿದಂತೆ ತಾನಾಗಿ ಕಣ್ಮರೆಯಾಗಿ ತಿಳಿಯಾಗುತ್ತದೆ. ಅಸಲಿಗೆ ಇವು ಮೊಡವೆಗಳಿಂದ ಆಗಿರುವುದಿಲ್ಲ. ಆದರೆ ವಾಸ್ತವವಾಗಿ ಕಲೆ ಚರ್ಮದ ಒಳಭಾಗದ ಹಾನಿಯ ಕಾರಣ ಆಗಿರುತ್ತದೆ, ಆ ಕಾರಣ ಅದು ಕಲೆ ಉಳಿಸಿಬಿಡುತ್ತದೆ.
ಅಸಲಿಗೆ ಚರ್ಮದ ಒಳಪದರಕ್ಕೆ ಆದ ಹಾನಿಯ ಕಾರಣ ಇವು ಮೂಡಿಬರುತ್ತವೆ. ಈ ಕಲೆಗಳು, ಅದು ಚರ್ಮಕ್ಕೆ ಸಹಾಯ ಒದಗಿಸುವ ಸಂರಚನೆಯಲ್ಲಿ ಕಂಡುಬರುವ ಒಡಕಿನಿಂದಾಗಿ ಹೀಗಾಗುತ್ತದೆ. ಚರ್ಮದ ಒಳಪದರದಲ್ಲಿನ ಕೊಲ್ಯಾಜೆನ್ ಮತ್ತು ಆ್ಯವೆಸ್ಟಿನ್ ಬಂಧ ಮುರಿಯುವುದರಿಂದ ಈ ಕಲೆಗಳು ಮೂಡುತ್ತವೆ. ಸಾಮಾನ್ಯವಾಗಿ ಚರ್ಮದ ಮೇಲೆ ಮೂಡುವ ಈ ಗುರುತುಗಳು, ವೈದ್ಯಕೀಯ ಚಿಕಿತ್ಸೆ ಇಲ್ಲದೆ ಸರಿಹೋಗಲಾರವು. ಅವು ಸಂಪೂರ್ಣ ಕಣ್ಮರೆಯಾಗಲು ಬಹಳ ಕಾಲ ಹಿಡಿಯುತ್ತದೆ. ಕೇವಲ ಲೇಸರ್ ಚಿಕಿತ್ಸೆಯಿಂದ ಮಾತ್ರ ಅವನ್ನು ನಿವಾರಿಸಲು ಸಾಧ್ಯ. ಏಕೆಂದರೆ ಲೇಸರ್ ಕಿರಣಗಳು ಚರ್ಮದ ಒಳಭಾಗಕ್ಕಿಳಿದು ಅವನ್ನು ನಷ್ಟಪಡಿಸುತ್ತವೆ. ಇದು ಬಹುಶಃ ಮೊಡವೆಗಳನ್ನು ಛೇದಿಸುವುದರಿಂದ ಹೀಗಾಗುತ್ತದೆ, ಸದಾ ಹೀಗೆ ಆಗುವುದಿಲ್ಲ.
ರಕ್ತದ ಪ್ರಮಾಣ ಬಹಳ ಕಡಿಮೆ ಆಗುವುದರಿಂದ ಉಂಟಾಗುವ ಆ್ಯಟ್ರೋಫಿಕ್ ಗುರುತುಗಳು ತರಚು ಗಾಯಗಳಂತೆ ಕಾಣಿಸುತ್ತವೆ. ಇವನ್ನು ಐಸ್ ಪಿಕ್ ಎಂತಲೂ ಕರೆಯುತ್ತಾರೆ. ಅದೇ ಮತ್ತೊಂದೆಡೆ ಹೈಪರ್ ಟ್ರೋಫಿಕ್ ಗುರುತು ಹೆಚ್ಚು ದಪ್ಪಗೆ ಗೋಚರಿಸುತ್ತವೆ. ಇವು ಚರ್ಮದ ಮೇಲ್ಪದರದಲ್ಲಿ ದೊಡ್ಡ ಗುಳ್ಳೆಗಳಾಗಿ ಎದ್ದುಕಾಣುತ್ತವೆ.
ಶ್ಯಾಮಲ ವರ್ಣದ ಚರ್ಮ ಹೊಂದಿದವರಲ್ಲಿ ಬಹುತೇಕ ಪೋಸ್ಟೈನ್ ಫ್ಲಮೆಟರಿ ಹೈಪರ್ ಪಿಗ್ಮೆಂಟೇಶನ್ ಪ್ರಕರಣಗಳು ಎದ್ದು ಕಾಣುತ್ತವೆ. ಇದರ ಗುರುತು ಬೂದು ಬಣ್ಣದಲ್ಲಿರುತ್ತದೆ. ಗೌರವರ್ಣದವರಿಗೆ ಹೋಲಿಸಿದಾಗ ಪೋಸ್ಟೈನ್ ಫ್ಲಮೆಟರಿ ಹೈಪರ್‌ಪಿಗ್ಮೆಂಟೇಶನ್ ಕಾರಣ ಎರಿಥೆಮಾಗೆ ತಿರುಗಿ ಅದು ಪರ್ಪಲ್ ರೆಡ್ ಪಿಂಪಲ್ಸ್ ಗೆ ಮೂಲವಾಗುತ್ತದೆ.
ಅಗತ್ಯ ಜಾಗೃತರಾಗಿ ಇರಬೇಕು
ಸಾಮಾನ್ಯವಾಗಿ ಮೊಡವೆಗಳಿಂದ ಕಲೆ ಯಾವ ಘಟ್ಟದಲ್ಲಿ ಕಂಡುಬರುತ್ತದೆ ಎಂದರೆ, ದೇಹದ ಆಂತರಿಕ ಭಾಗದಲ್ಲಿ ಗಾಯ ಗುಣವಾಗುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಕಾರಣದಿಂದ ಸಾಮಾನ್ಯ ರೀತಿಯಲ್ಲಿ ಕೊಲ್ಯಾಜೆನ್ ಮೂಡಿಬರುತ್ತಿಲ್ಲ ಎಂದಾದಾಗ. ಮೊಡವೆಗಳ ಗಾಯ ತನ್ನ ಸುತ್ತಮುತ್ತಲಿನ ಕೊಲ್ಯಾಜೆನ್ ಆವ್ಯೆಸ್ಟೀನ್ ಪದರಗಳ ಎಲ್ಲಾ ಎನ್‌ಝೈಮ್ಸ್ ನ್ನೂ ಮುಗಿಸಿಬಿಡುತ್ತವೆ. ಈ ಕಾರಣದಿಂದ ಚರ್ಮದಲ್ಲಿ ಹೆಚ್ಚು ಉರಿ ಏಳುತ್ತದೆ. ಕೊಲ್ಯಾಜೆನ್ ಮತ್ತು ಆವ್ಯೆಸ್ಟೀನ್‌ನ ಪದರಗಳು ಶಿಥಿಲಗೊಳ್ಳುತ್ತಾ ಅಧಿಕ ಆರೋಗ್ಯಕರ ಪದರಗಳನ್ನು ಹುಟ್ಟು ಹಾಕುವಲ್ಲಿ ಸೋಲುತ್ತವೆ. ಹೀಗಾಗಿ ಮುಖದ ಮೇಲ್ಪದರದಲ್ಲಿ ಇವು ವಿಕೃತ ಕಲೆಗಳನ್ನು ಉಳಿಸಿಬಿಡುತ್ತವೆ.
ಸ್ವಸ್ಥ ಹಾಗೂ ಸುಂದರ ತ್ವಚೆ ಹೊಂದುವುದು ಬಹು ಕಷ್ಟದ ಕೆಲಸವೇನಲ್ಲ. ಆದರೆ ಅದಕ್ಕಾಗಿ ನೀವು ಅತಿ ಎಚ್ಚರಿಕೆಯಿಂದ ಚರ್ಮದ ಆರೈಕೆ ಮಾಡಬೇಕಾಗುತ್ತದೆ. ಪಿಗ್ಮೆಂಟೇಶನ್, ಕಪ್ಪು ಗೆರೆಗಳು, ಸುಕ್ಕು, ಸಾಮಾನ್ಯವಲ್ಲದ ಸ್ಕಿನ್ ಟೋನ್ ಇಂಥದೇ ಹಲವು ಸಮಸ್ಯೆಗಳಿಂದ ಉಂಟಾಗುತ್ತವೆ. ಇವನ್ನು ನಾವು ದಿನೇದಿನೇ ಎದುರಿಸುತ್ತಾ ಇರುತ್ತೇವೆ. ಒಂದೊಂದು ಸಲ ಕೇವಲ 1-2 ಕಲೆಗಳು ಉಳಿದಿದ್ದರೂ ಹೊರಗೆ ಪಾರ್ಟಿ ಮುಂತಾದ ಕಡೆ ಹೋಗಲು ಆಗುವುದೇ ಇಲ್ಲ.
ಆದ್ದರಿಂದ ಎಲ್ಲಕ್ಕೂ ಮೊದಲು ನೀವು ನಿಮ್ಮ ಚರ್ಮದ ಪ್ರಕಾರದ ಬಗ್ಗೆ ತಿಳಿದುಕೊಳ್ಳಿ ಹಾಗೂ ಅದರ ಅನುಸಾರ, ಉತ್ಪನ್ನ ಬಳಸಿರಿ. ಸಾಮಾನ್ಯ, ತೈಲೀಯ, ಮಿಶ್ರಿತ, ಶುಷ್ಕ ಹಾಗೂ ಸಂವೇದನಾಶೀಲ ಎಂದು ಚರ್ಮದಲ್ಲಿ ಹಲವು ಪ್ರಕಾರಗಳುಂಟು. ಕೆಲವರಿಗಂತೂ ದೇಹದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಚರ್ಮ ಇರುವ ಸಾಧ್ಯತೆಗಳೂ ಉಂಟು.
ಕಾಲ ಬದಲಾದಂತೆ ಚರ್ಮದ ಪ್ರಕಾರಗಳಲ್ಲಿ ಪರಿವರ್ತನೆ ಆಗಲು ಸಾಧ್ಯವಿದೆ. ಹೀಗಾಗಲು ಹಲವು ಕಾರಣಗಳಿವೆ :
ನೀರಿನ ಗುಣಮಟ್ಟ, ಅದು ಚರ್ಮಕ್ಕೆ ಸದಾ ಹಿತಕಾರಿ ಆಗಿರಬೇಕು. ಇದರಿಂದ ಚರ್ಮದ ಮೇಲ್ಪದರ ಪ್ರಭಾವಿತಗೊಳ್ಳುತ್ತದೆ.
ತೈಲ (ಲಿಪಿಡ್) ಸಾಮಗ್ರಿ, ಚರ್ಮದ ಮೃದುತ್ವದ ಮೇಲೆ ಪರಿಣಾಮ ಬೀರುತ್ತದೆ.
ಸಂವೇದನಾಶೀಲತೆಯ ಮಟ್ಟ.
ಸಾಮಾನ್ಯ ಚರ್ಮ
ಇದು ಅತ್ತ ಶುಷ್ಕ ಅಲ್ಲದ, ಇತ್ತ ತೈಲೀಯ ಅಂಶ ಇಲ್ಲದ ಚರ್ಮವಾಗಿದೆ. ಇದರಲ್ಲಿ ಹೆಚ್ಚು ಕಡಿಮೆ ಏನೂ ಕೊರತೆ ಇರುವುದಿಲ್ಲ. ಇದರಲ್ಲಿ ಹೆಚ್ಚು ಸಂವೇದನಾಶೀಲತೆಯೂ ಕಾಣಿಸುವುದಿಲ್ಲ. ಕಣ್ಣಿಗೆ ಗೋಚರಿಸುವಂತಹ ರೋಮರಂಧ್ರಗಳು ಅಲ್ಲಲ್ಲಿ ಕಂಡುಬರುತ್ತವೆ. ಈ ಚರ್ಮ ಹೊಳೆಯುವ ಬಣ್ಣ ಹೊಂದಿರುತ್ತದೆ.
ಮಿಶ್ರಿತ ಚರ್ಮ
ಈ ಬಗೆಯ ಚರ್ಮದ ಕೆಲವು ಭಾಗಗಳಲ್ಲಿ ಶುಷ್ಕ ಅಥವಾ ಸಾಮಾನ್ಯ ಚರ್ಮ ಕಂಡುಬರಬಹುದು, ಮತ್ತೆ ಇನ್ನೂ ಕೆಲವು ಭಾಗಗಳಾದ ಟೀರೋನ್ (ಮೂಗು, ಹಣೆ, ಗಲ್ಲ) ನಲ್ಲಿ ತೈಲೀಯ ಅಂಶ ಕಾಣಿಸಬಹುದು. ಎಷ್ಟೋ ಜನರ ಚರ್ಮ ಇಂಥ ಮಿಶ್ರಿತ ಚರ್ಮವೇ ಆಗಿರುತ್ತದೆ. ಇಲ್ಲಿ ತನ್ನ ವಿಭಿನ್ನ ಭಾಗಗಳ ಚರ್ಮದ ವಿಭಿನ್ನ ಪ್ರಕಾರಗಳಿಂದಾಗಿ, ಅದನ್ನು ವಿಭಿನ್ನವಾಗಿಯೇ ಆರೈಕೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಚರ್ಮದಲ್ಲಿ ಈ ಕೆಳಗಿನ ಅಂಶಗಳು ಕಂಡುಬರುತ್ತವೆ.
ಹೆಚ್ಚು ಹರಡಿರುವ ರೋಮರಂಧ್ರಗಳು.
ಮೊಡವೆ, ದದ್ದು, ಗುಳ್ಳೆಗಳು.
ಹೊಳೆ ಹೊಳೆಯುವ ಚರ್ಮ.
ಶುಷ್ಕ ಚರ್ಮ
ಶುಷ್ಕ ಚರ್ಮದಲ್ಲಿ ಈ ಕೆಳಗಿನ ಅಂಶಗಳು ಕಂಡುಬರುತ್ತವೆ :
ಹೆಚ್ಚು ಕಡಿಮೆ ಕಾಣಿಸದೆ ಇರುವಂಥ ರೋಮರಂಧ್ರಗಳು.
ಒಂದಿಷ್ಟು ಹೊಳೆಯುವ ಪೇವಲ ಬಣ್ಣ.
ಕೆಂಪು ಗೀಚುಗಳು.
ಕಡಿಮೆ ಮೃದುತ್ವ.
ಹೆಚ್ಚು ದಟ್ಟ ಗೆರೆಗಳು.
ಶುಷ್ಕ ಚರ್ಮಕ್ಕೆ ಈ ಕೆಳಗಿನ ಅಂಶಗಳು ಕಾರಣವಾಗುತ್ತವೆ ಅಥವಾ ಇವುಗಳ ನೆಪದಿಂದ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು:
ಆನುವಂಶಿಕ ಕಾರಣಗಳು.
ಹೆಚ್ಚುತ್ತಿರುವ ವಯಸ್ಸು, ಹಾರ್ಮೋನ್ ಬದಲಾವಣೆ.
ತೀವ್ರ ಗಾಳಿ, ಬಿಸಿಲು, ಚಳಿ ಇತ್ಯಾದಿ ಋತು ಬದಲಾವಣೆ.
ಅತಿನೇರಳೆ ಕಿರಣಗಳ ದಾಳಿ.
ಮುಚ್ಚಿದ ಕೋಣೆಯಲ್ಲಿ ಹೀಟರ್ ಬಳಕೆ.
ಸದಾ ಬಿಸಿ ನೀರಲ್ಲಿ ಸ್ನಾನ ಮಾಡುವಿಕೆ.
ಸೋಪು, ಸೌಂದರ್ಯ ಪ್ರಸಾಧನ, ಕ್ಲೆನ್ಸರ್‌ಗಳ ಬಳಕೆ.
ಸತತ ಔಷಧಗಳ ಬಳಕೆ. ಶುಷ್ಕ ಚರ್ಮದ ಆರೈಕೆ.
ಬಹಳ ಹೊತ್ತು ಸ್ನಾನ ಮಾಡುತ್ತಿರಬೇಡಿ.
ಅತಿ ಕನಿಷ್ಠ ಕೆಮಿಕ್ಸ್‌ಯುಕ್ತ ಸೋಪು, ಕ್ಲೆನ್ಸರ್‌ಗಳನ್ನೇ ಬಳಸಬೇಕು.
ಸ್ನಾನದ ನಂತರ ಅಗತ್ಯ ಮಾಯಿಶ್ಚರೈಸರ್ ಬಳಸಿರಿ.
ಶುಷ್ಕ ಚರ್ಮಕ್ಕೆ ಲೋಶನ್‌ಗೆ ಬದಲಾಗಿ ಕ್ರೀಂ ಅಥವಾ ಮುಲಾಮು ಹೆಚ್ಚು ಸೂಕ್ತ. ಜನ ಇವನ್ನು ಬಳಸುವುದು ಕಡಿಮೆ, ಅಗತ್ಯಬಿದ್ದರೆ ಇದನ್ನು ದಿನಕ್ಕೆ 2 ಸಲ ಬಳಸಿ.
ಮುಚ್ಚಿದ ಕೋಣೆಯ ತಾಪ ಹೆಚ್ಚಿಸಬೇಡಿ.
ತೈಲೀಯ ಚರ್ಮ
ತೈಲೀಯ ಚರ್ಮದಲ್ಲಿ ಈ ಅಂಶಗಳನ್ನು ಗಮನಿಸಬಹುದು.
ಹೆಚ್ಚುತ್ತಿರುವ ರೋಮರಂಧ್ರಗಳು.
ಹೊಳೆಯುವ ಅಥವಾ ಹೊಳಪಿಲ್ಲದ ಚರ್ಮ.
ಮೊಡವೆ, ಗುಳ್ಳೆ ಅಥವಾ ಇನ್ನಿತರ ಕಲೆ ಸುಕ್ಕುಗಳು.
ಋತು ಬದಲಾದಂತೆ ತೈಲೀಯ ತ್ವಚೆಯಲ್ಲಿ ಬದಲಾವಣೆ ಕಾಣಸಿಗುತ್ತದೆ.
ಈ ಕೆಳಗಿನ ಅಂಶಗಳು ತೈಲೀಯ ತ್ವಚೆಗೆ ಕಾರಣವಾಗಬಹುದು ಅಥವಾ ಅದನ್ನು ಹೆಚ್ಚು ಜಿಡ್ಡುಜಿಡ್ಡಾಗಿಸಬಹುದು.
ವಯಸ್ಸು ಹೆಚ್ಚಾಗುವಿಕೆ, ಹಾರ್ಮೋನ್ ಬ್ಯಾಲೆನ್ಸ್ ತಪ್ಪುವಿಕೆ.
ಅಧಿಕ ಮಾನಸಿಕ ಒತ್ತಡ.
ತೀವ್ರ ಬಿಸಿಲು ಅಥವಾ ಹೆಚ್ಚು ಆರ್ದ್ರತೆಯ ಸಮಸ್ಯೆ.
ತೈಲೀಯ ತ್ವಚೆಯ ಆರೈಕೆ
ದಿನಕ್ಕೆ 2 ಸಲಕ್ಕಿಂತ ಹೆಚ್ಚಾಗಿ ಮುಖ ತೊಳೆಯಬೇಡಿ.
ಗಾಢವಲ್ಲದ ತೆಳು ಕ್ಲೆನ್ಸರ್ ಬಳಸಿರಿ, ಚರ್ಮವನ್ನು ಸದಾ ಉಜ್ಜುತ್ತಿರಬೇಡಿ.
ಮೊಡವೆಗಳನ್ನು ಜಿಗುಟಬೇಡಿ. ಇದರಿಂದಾಗಿ ಅವು ಗುಣವಾಗಲು ಹೆಚ್ಚು ಕಾಲ ಬೇಕು.
ಸಂವೇದನಾಶೀಲ ಚರ್ಮ
ನಿಮ್ಮ ಚರ್ಮ ಸಂವೇದನಾಶೀಲ (ಸೆನ್ಸಿಟಿವ್ ಸ್ಕಿನ್) ಆಗಿದ್ದರೆ, ಯಾವ ವಸ್ತುಗಳ ಕುರಿತಾಗಿ ಹಾಗಾಗುತ್ತದೆ ಎಂದು ಖಾತ್ರಿಪಡಿಸಿಕೊಳ್ಳಿ. ನಂತರ ಅವುಗಳಿಂದ ದೂರವಿರಿ. ಇಂಥ ಚರ್ಮಕ್ಕೆ ಅನೇಕ ಕಾರಣಗಳಿರಬಹುದು, ಆದರೆ ಎಷ್ಟೋ ಪ್ರಕರಣಗಳಲ್ಲಿ ಚರ್ಮದ ಆರೈಕೆಯ ಉತ್ಪನ್ನಗಳೂ ಇದಕ್ಕೆ ಕಾರಣವಾಗುತ್ತವೆ.
ಹೀಗಾಗಿ ಚರ್ಮದಲ್ಲಿ ಕೆಂಪು ದದ್ದು, ಉರಿ, ನವೆ, ಅತಿ ಶುಷ್ಕತೆ ಇತ್ಯಾದಿಗಳಾದ ಅದು ಸಂವೇದನಾಶೀಲ ಚರ್ಮದ ಲಕ್ಷಣಗಳೆಂದೇ ತಿಳಿಯಬೇಕು.