ಗರ್ಭಧಾರಣೆಯ ಬಳಿಕ ಆರೋಗ್ಯವಂತ ಮಗು ಜನಿಸಬೇಕು ಎನ್ನುವುದು ಪ್ರತಿಯೊಬ್ಬ ದಂಪತಿಗಳ ಬಯಕೆಯಾಗಿರುತ್ತದೆ. ಗರ್ಭಧಾರಣೆಯ ಅವಧಿಯಲ್ಲಿ ನಡೆಸುವ ಕೆಲವು ನಿಖರ ಪರೀಕ್ಷೆಗಳು ಭ್ರೂಣದಲ್ಲಿರುವ ಯಾವುದೇ ತೊಂದರೆಯನ್ನು ಪತ್ತೆ ಹಚ್ಚಿ, ಸಕಾಲಕ್ಕೆ ಅದನ್ನು ಸರಿಪಡಿಸುವಲ್ಲಿ ನೆರವಾಗುತ್ತವೆ. ಈ ರೀತಿಯ ನಿಖರ ಪರೀಕ್ಷೆ ನಡೆಸುವಲ್ಲಿ `ನಿಸರ್ಗ ಡಯಾಗ್ನೋಸ್ಟಿಕ್‌ ಅಂಡ್ ರಿಸರ್ಚ್‌ ಸೆಂಟರ್‌’  ಹೆಸರುವಾಸಿಯಾಗಿದೆ.

2008ರಲ್ಲಿ ಆರಂಭವಾದ ಈ ಕೇಂದ್ರದಲ್ಲಿ 3ಡಿ, 4ಡಿ, ಎನ್‌ಟಿ ಸ್ಕ್ಯಾನ್‌ಗಳಂತಹ ವಿಶೇಷ ಸ್ಕ್ಯಾನ್‌ಗಳು ಸೇರಿದಂತೆ, ಎಲ್ಲ ಬಗೆಯ ಸ್ಕ್ಯಾನ್‌ಗಳನ್ನು, ರಕ್ತ ಪರೀಕ್ಷೆಗಳನ್ನು  ಅತ್ಯಂತ ನಿಖರವಾಗಿ ನಡೆಸಲಾಗುತ್ತದೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ `ಡಿಜಿಟಲ್ ಎಕ್ಸ್-ರೇ.’ ಇದನ್ನು `ಕಂಪ್ಯೂಟರ್‌ ರೇಡಿಯೊಗ್ರಫಿ’ ಎಂದು ಹೇಳಲಾಗುತ್ತದೆ.

ನೈಪುಣ್ಯಕ್ಕೆ ಸಿಕ್ಕ ಪುರಸ್ಕಾರ

ಡಾ. ಶ್ರೀನಿವಾಸ್‌ ಪ್ರಸಾದ್‌ ಆರ್‌.ಎಚ್‌.  ದೇಶದ ಕೆಲವೇ ಕೆಲವು ನುರಿತ ರೇಡಿಯಾಲಜಿಸ್ಟ್ ರಲ್ಲಿ ಒಬ್ಬರು. ಎನ್‌.ಟಿ. ಸ್ಕ್ಯಾನ್‌ನಲ್ಲಿನ ಅವರ ನೈಪುಣ್ಯತೆ ಪರಿಗಣಿಸಿ ಬ್ರಿಟನ್ನಿನ ಪೆಟ್‌ಮೆಡಿಸಿನ್‌ ಫೌಂಡೇಶನ್‌ ಸರ್ಟಿಫಿಕೇಟ್‌ ನೀಡಿದೆ. ಅವರ ಮೇಲ್ವಿಚಾರಣೆಯಲ್ಲಿಯೇ ಇಲ್ಲಿನ ಸಕಲ ಪರೀಕ್ಷೆಗಳು ನಡೆಯುತ್ತವೆ. `ನಿಖರ ಪರೀಕ್ಷೆಯೇ ನಮ್ಮ ಪ್ರಮುಖ ಆದ್ಯತೆ,’ ಎಂದು ಡಾ. ಶ್ರೀನಿವಾಸ್‌ಪ್ರಸಾದ್‌ಹೇಳುತ್ತಾರೆ.

ಹೆಲ್ತ್ ಚೆಕಪ್ಪ್ಯಾಕೇಜಸ್

ಇಲ್ಲಿ ಬಗೆಬಗೆಯ ಹೆಲ್ತ್ ಚೆಕಪ್‌ಗಳನ್ನು ಕೂಡ ನಡೆಸಲಾಗುತ್ತದೆ. ಅದಕ್ಕೆ ಹಲವು ಬಗೆಯ ಪ್ಲ್ಯಾನ್‌ಗಳಿದ್ದು, 25-30% ತನಕ ರಿಯಾಯಿತಿ ಕೂಡ ನೀಡಲಾಗುತ್ತದೆ.

ಸೂಪರ್‌ ಸ್ಪೆಷಾಲಿಟಿ ಕನ್ಸಲ್ಟೇಶನ್‌ ಕಾರ್ಡಿಯಾಲಜಿ, ನ್ಯೂರಾಲಜಿ, ನೆಫ್ರಾಲಜಿ, ಯೂರಾಲಜಿ ಹೀಗೆ ಅನೇಕ ಬಗೆಯ ರೋಗಗಳು ಹಾಗೂ ಪ್ಲಾಸ್ಟಿಕ್‌ ಸರ್ಜರಿ ಕುರಿತಂತೆ ಆನ್‌ಕಾಲ್‌ ಸೂಪರ್‌ ಸ್ಪೆಷಾಲಿಟಿ ಕನ್ಸಲ್ಟೇಶನ್‌ ನೀಡುವ ವ್ಯವಸ್ಥೆ ಕೂಡ ಇದೆ.

ಸಂಶೋಧನೆ ಕೆಲವು ಭ್ರೂಣಗಳ ಹೃದಯದಲ್ಲಿ ಬ್ರೈಟ್‌ ಸ್ಪಾಟ್‌ ಅಥವಾ ಬಿಳಿ ಚುಕ್ಕೆಯಂಥದು ಕಂಡುಬರುತ್ತದೆ. ಆ ಬಗ್ಗೆ ಡಾ. ಶ್ರೀನಿವಾಸ್‌ ಪ್ರಸಾದ್‌ ಆರ್‌.ಎಚ್‌. ಅವರ ನೇತೃತ್ವದಲ್ಲಿ ಕಳೆದ 2 ವರ್ಷಗಳಿಂದ ಇಲ್ಲಿ ಸಂಶೋಧನೆಯೊಂದು ನಡೆಯುತ್ತಿದೆ. ಆ ಬಿಳಿ ಚುಕ್ಕೆಯಿಂದ ಹುಟ್ಟುವ ಮಗುವಿಗೆ ಯಾವುದೇ ತೊಂದರೆಗಳಿಲ್ಲ ಎನ್ನುವುದು ಸಂಶೋಧನೆಯಿಂದ ಖಚಿತವಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ನಂ.68, ಮೊದಲನೇ ಮಹಡಿ, ವೈಭವ್ ಥಿಯೇಟರ್‌ ಹತ್ತಿರ, ಸಂಜಯನಗರ ಮುಖ್ಯ ರಸ್ತೆ, ಬೆಂಗಳೂರು-94. ಫೋನ್‌: 9066022120

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ