ಬೇಸಿಗೆಯಲ್ಲಿ ಬೆವರು, ಧೂಳು ಮತ್ತು ಮಾಲಿನ್ಯದಿಂದ ತ್ವಚೆ ಹಾಗೂ ತಲೆಯಲ್ಲಿ ಸೋಂಕಿನ ಸಮಸ್ಯೆಗಳು ಹೆಚ್ಚಾಗುತ್ತದೆ. ಈ ದಿನಗಳಲ್ಲಿ ಕೂದಲಿನ ಆರೋಗ್ಯ ಪ್ರಭಾವಿತವಾಗುತ್ತದೆ. ಸುಡು ಬಿಸಿಲು ಹಾಗೂ ಸೂರ್ಯನಿಂದ ಹೊರಬರುವ ಅಲ್ಟ್ರಾ ವೈಲೆಟ್ ಕಿರಣಗಳು ಕೂದಲಿಗೆ ಹಾನಿ ಉಂಟುಮಾಡುತ್ತದೆ. ಆಗ ಕೂದಲಿನ ಬಣ್ಣ ಹಾಳಾಗಬಹುದು. ಇದು ಕಲರಿಂಗ್ ಹಾಗೂ ಬ್ಲೀಚ್ ಮಾಡಿದ ಕೂದಲಿನ ಮೇಲೆ ಸ್ಪಷ್ಟವಾಗಿ ಕಂಡುಬರುತ್ತದೆ. ಅಲ್ಲದೆ, ನಾವು ಬೇಸಿಗೆಯಲ್ಲಿ ಹೆಚ್ಚಾಗಿ ಸ್ವಿಮಿಂಗ್ ಪೂಲ್‌ಗೆ ಹೋಗುತ್ತೇವೆ. ಅಲ್ಲಿ ಉಪ್ಪು ನೀರು ಹಾಗೂ ಕ್ಲೋರಿನ್‌ನಂತಹ ಕೆಮಿಕಲ್‌ಗಳೂ ಕೂದಲಿಗೆ ಹಾನಿ ತರುತ್ತವೆ.
ಶುಷ್ಕ ಹಾಗೂ ಬಿಸಿ ಗಾಳಿ ನಮ್ಮ ತ್ವಚೆ, ತಲೆ ಹಾಗೂ ಕೂದಲಿನ ಪ್ರಾಕೃತಿಕ ಆರ್ದ್ರತೆಯನ್ನು ಕಿತ್ತುಕೊಳ್ಳುತ್ತದೆ. ಅದರಿಂದ ಕೂದಲು ನಿರ್ಜೀವವಾಗಿ ಕಂಡುಬರುತ್ತದೆ. ಹೆಚ್ಚು ಬೆವರುವುದರಿಂದಲೂ ತಲೆ ಹಾಗೂ ಕೂದಲು ಒದ್ದೆಯಾಗಿರುತ್ತದೆ. ಗಾಳಿಯೊಂದಿಗೆ ಹಾರಾಡುವ ಧೂಳು ಅದಕ್ಕೆ ಅಂಟಿಕೊಳ್ಳುತ್ತದೆ. ಆಗ ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಹಾಗೂ ತಲೆಯನ್ನು ಸೋಂಕು ಇತ್ಯಾದಿಗಳಿಂದ ರಕ್ಷಿಸಲು ಬೇಸಿಗೆಯಲ್ಲಿ ಹೆಚ್ಚು ವಿಷಯಗಳನ್ನು ಗಮನಿಸಬೇಕಾಗುತ್ತದೆ.
ಕೂದಲಿನ ನಿಯಮಿತ ಸ್ವಚ್ಛತೆ
ಬೇಸಿಗೆಯಲ್ಲಿ ಕೂದಲನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಅಗತ್ಯವಿದೆ. ಉಷ್ಣತೆ, ಬೇಗೆ ಮತ್ತು ಬೆವರು ಹೆಚ್ಚಾಗುವುದರಿಂದ ಕೂದಲನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ನಿಮ್ಮ ಕೂದಲಿನ ಸ್ಥಿತಿಗೆ ತಕ್ಕಂತೆ ದಿನ ಬಿಟ್ಟು ದಿನ ಶ್ಯಾಂಪೂನಿಂದ ಸ್ವಚ್ಛಗೊಳಿಸಿ. ವಿಶೇಷವಾಗಿ ನೀವು ಹೆಚ್ಚು ಸಮಯ ಹೊರಗಡೆ ಕಳೆದರೆ, ಹೆಚ್ಚು ಪ್ರವಾಸಗಳನ್ನು ಮಾಡುವಂತಿದ್ದರೆ ಕೂದಲಿನ ಸ್ವಚ್ಛತೆಯ ಬಗ್ಗೆ ಗಮನಿಸಬೇಕು. ಹೀಗಿರುವಾಗ ಶ್ಯಾಂಪೂ ಆಯ್ಕೆಯನ್ನು ಜಾಗರೂಕತೆಯಿಂದ ಮಾಡಿ. ಕೂದಲಿನ ಪ್ರಾಕೃತಿಕ ಆರ್ದ್ರತೆಯನ್ನು ಕಾಪಾಡಿಕೊಳ್ಳಲು ಅವನ್ನು ಮಾಯಿಶ್ಚರೈಸ್ ಮಾಡುವ ಶ್ಯಾಂಪೂ ಆಯ್ದುಕೊಳ್ಳಿ. ಆದರೆ ಅಗತ್ಯಕಿಂತ ಹೆಚ್ಚು ಶ್ಯಾಂಪೂ ಉಪಯೋಗಿಸಬಾರದು.
ಕೂದಲಿಗೆ ಎಣ್ಣೆ ಹಚ್ಚಿ
ಕೂದಲಿಗೆ ಸರಿಯಾದ ಪೋಷಣೆ ನೀಡಲು ನಿಯಮಿತವಾಗಿ ಉಗುರು ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಿ. ಆದರೆ ಹೆಚ್ಚು ಎಣ್ಣೆಯನ್ನು ಹಾಕಬೇಡಿ. ಏಕೆಂದರೆ ಆ ಎಣ್ಣೆಯನ್ನು ಸ್ವಚ್ಛಗೊಳಿಸಲು ಹೆಚ್ಚು ಶ್ಯಾಂಪೂ ಹಚ್ಚಬೇಕಾಗುತ್ತದೆ. ಎಣ್ಣೆಯನ್ನು ನಿಯಮಿತವಾಗಿ ಆದರೆ ಕಡಿಮೆ ಪ್ರಮಾಣದಲ್ಲಿ ಹಚ್ಚಿ. ನಿಮ್ಮ ಬೆರಳಿನ ತುದಿಗಳನ್ನು ಎಣ್ಣೆಯಲ್ಲಿ ಅದ್ದಿ ತಲೆಯನ್ನು ಹಗುರವಾಗಿ ಮಸಾಜ್ ಮಾಡಿ. ಅದರಿಂದ ತಲೆಯ ತೈಲಗ್ರಂಥಿಗಳು ಸಕ್ರಿಯಾಗುತ್ತವೆ ಮತ್ತು ರಕ್ತಸಂಚಾರ ಹೆಚ್ಚುತ್ತದೆ. ಎಣ್ಣೆ ಹಚ್ಚಿ ಇಡೀ ರಾತ್ರಿ ಹಾಗೇ ಬಿಡುವ ಅಗತ್ಯವಿಲ್ಲ. ಕೂದಲಿಗೆ ಎಣ್ಣೆ ಹಚ್ಚಿ 1-2 ಗಂಟೆ ಹೊತ್ತು ಬಿಟ್ಟರೆ ಸಾಕು.
ಬಿಸಿಲಿನಿಂದ ರಕ್ಷಣೆ
ಬಿಸಿಲಿನೊಂದಿಗೆ ನೇರ ಸಂಪರ್ಕ ಕೂದಲಿಗೆ ಹಾನಿ ತರುತ್ತದೆ. ಹೆಚ್ಚು ಹೊತ್ತು ಹೊರಗೇ ಕಳೆಯುವವರಿಗೆ ಈ ಸಮಸ್ಯೆ ಹೆಚ್ಚು. ತ್ವಚೆಯಂತೆಯೇ ಕೂದಲಿಗೂ ಕೂಡ ಸೂರ್ಯನ ಯುವಿ ಕಿರಣಗಳು ಅಪಾಯಕಾರಿ. ತ್ವಚೆಯನ್ನು ಸುರಕ್ಷಿತವಾಗಿಡಲು ನಾವು ಸನ್‌ಸ್ಕ್ರೀನ್ ಉಪಯೋಗಿಸುತ್ತೇವೆ. ಒಮ್ಮೊಮ್ಮೆ ಕೂದಲು ಅಸುರಕ್ಷಿತವಾಗಿರುತ್ತದೆ. ಹೀಗಾಗಿ ಹೊರಗೆ ಹೋಗುವಾಗ ಕೂದಲನ್ನು ಮುಚ್ಚಿಕೊಳ್ಳಿ. ಹ್ಯಾಟ್ ಅಥವಾ ಸ್ಕಾರ್ಫ್ ಉಪಯೋಗಿಸಿ. ಜೊತೆಗೆ ಸನ್‌ಸ್ಕ್ರೀನ್ ಇರುವ ಕಂಡೀಶನರ್ ಉಪಯೋಗಿಸಿ. ಅದು ನಿಮ್ಮ ಕೂದಲಿಗೆ ಸುರಕ್ಷಾ ಕವಚ ಆಗಿರುತ್ತದೆ.
ನಿಮ್ಮ ಕೂದಲನ್ನು ಯುವಿ ಕಿರಣಗಳ ಪ್ರಭಾವದಿಂದ ಸುರಕ್ಷಿತವಾಗಿಡುವಂತಹ ಉತ್ಪನ್ನಗಳನ್ನು ಉಪಯೋಗಿಸಿ. ಇದು ತ್ವಚೆಯ ಮೇಲೆ ಸನ್‌ಸ್ಕ್ರೀನ್ ಮಾಡುವಂತೆಯೇ ಕಾರ್ಯ ನಿರ್ವಹಿಸುತ್ತದೆ. ಬೇಸಿಗೆಯಲ್ಲಿ ಬಿಸಿಲು ತೀಕ್ಷ್ಣವಾಗಿರುತ್ತದೆ. ಹೀಗಿರುವಾಗ ಇದರ ಸಂಪರ್ಕಕ್ಕೆ ಸಿಕ್ಕಾಗ ಕೂದಲು ನಿರ್ಜೀವವಾಗಿ ಕಂಡುಬರುತ್ತದೆ. ಕೂದಲಿಗೆ ಬಣ್ಣ ಹಚ್ಚುವವರು ಈ ಸಮಯದಲ್ಲಿ ತಮ್ಮ ಕೂದಲಿನ ಬಣ್ಣ ಫೇಡ್ ಆಗಿದೆ ಎಂದುಕೊಳ್ಳುತ್ತಾರೆ. ಇದೂ ಕೂಡ ಯುವಿ ಕಿರಣಗಳ ಪ್ರಭಾವವೇ ಆಗಿದೆ. ಯುವಿ ಪ್ರೊಟೆಕ್ಷನ್ ಇರುವ ಹೇರ್ ಕೇರ್ ಪ್ರಾಡಕ್ಟ್ ಕೂದಲಿಗೆ ಒಂದು ಸುರಕ್ಷಾ ಕವಚವನ್ನು ಕೊಡುತ್ತದೆ. ಆದರೆ ಇದನ್ನು ನಿಯಮಿತವಾಗಿ ಉಪಯೋಗಿಸಬೇಕು.
ಸ್ವಿಮ್ ಮಾಡುವಾಗ ಗಮನವಿರಲಿ
ಬೇಸಿಗೆಯಲ್ಲಿ ಸ್ವಿಮ್ಮಿಂಗ್ ಚೆನ್ನಾಗಿರುತ್ತದೆ. ಅದರಿಂದ ಶರೀರ ಹಾಗೂ ಮೆದುಳಿಗೆ ಸಾಕಷ್ಟು ವಿಶ್ರಾಂತಿ ಸಿಗುತ್ತದೆ. ಜೊತೆಗೆ ಒಳ್ಳೆಯ ಎಕ್ಸರ್‌ಸೈಜ್ ಕೂಡ ಆಗುತ್ತದೆ. ಆದರೆ ನಿಮ್ಮ ಕೂದಲಿಗೆ ಸ್ವಿಮ್ಮಿಂಗ್ ಪೂಲ್‌ನ ನೀರು ಸರಿಹೋಗುವುದಿಲ್ಲ ಎನಿಸಿದರೆ ಸ್ವಿಮ್ಮಿಂಗ್ ಪೂಲ್‌ಗೆ ಹೋಗುವಾಗ ಶವರ್ ಕ್ಯಾಪ್ ಧರಿಸಿ ಅಥವಾ ಕೂದಲಿಗೆ ಕಂಡೀಶನರ್ ಹಚ್ಚಿ. ಅದರಿಂದ ನಿಮ್ಮ ಕೂದಲಿಗೆ ಪೂಲ್‌ನ ಕ್ಲೋರಿನ್‌ನಿಂದ ರಕ್ಷಣೆ ಸಿಗುತ್ತದೆ. ಸ್ವಿಮ್ಮಿಂಗ್ ಪೂಲ್‌ನಿಂದ ಹೊರಗೆ ಬಂದ ಕೂದಲೇ ಸ್ವಚ್ಛ ನೀರಿನಿಂದ ಸ್ನಾನ ಮಾಡುವುದೂ ಸಹ ಉತ್ತಮ.
ಬ್ಲೋ ಡ್ರೈಯರ್ನ್ನು ಕಡಿಮೆ ಉಪಯೋಗಿಸಿ
ಬ್ಲೋ ಡ್ರೈಯರ್‌ನ್ನು ಎಲ್ಲ ಸೀಸನ್‌ಲ್ಲೂ ಕಡಿಮೆ ಉಪಯೋಗಿಸುವುದು ಉತ್ತಮ. ನಿಮ್ಮ ಕೂದಲಿಗೆ ಟವೆಲ್‌ಸುತ್ತುವುದು ಒಳ್ಳೆಯದು. ಒದು ವೇಳೆ ನಿಮಗೆ ಬ್ಲೋ ಡ್ರೈಯರ್ ಉಪಯೋಗಿಸುವುದು ಅನಿವಾರ್ಯವಾದರೆ ಅದರಿಂದ ಹೊರಬರುವ ಬಿಸಿಗಾಳಿ ನಿಮ್ಮ ಕೂದಲಿನ ಫಾಲಿಕ್ಸ್‌ಗಳಿಗೆ ಹಾನಿ ತರಬಹುದು. ಬ್ಲೋ ಡ್ರೈಯರ್‌ನ್ನು ಉಪಯೋಗಿಸುವುದರಿಂದ ನಿಮ್ಮ ತಲೆಯ ತ್ವಚೆಯ ರೋಮರಂಧ್ರಗಳು ತೆರೆಯುತ್ತವೆ. ಅವುಗಳಲ್ಲಿ ಮಾಲಿನ್ಯ, ಧೂಳು ಇತ್ಯಾದಿ ಸೇರಿಕೊಳ್ಳುತ್ತವೆ. ಅದರಿಂದ ಕೂದಲಿನ ಬುಡ ಬಲಹೀನವಾಗುತ್ತದೆ. ಜೊತೆಗೆ ಏರ್ ಡ್ರೈಯರ್‌ನ ನಿಯಮಿತ ಉಪಯೋಗ ನಿಮ್ಮ ಕೂದಲನ್ನು ನಿರ್ಜೀವಗೊಳಿಸುತ್ತದೆ.
ಬಾಗಿರುವ ಕೂದಲಿಗೆ ಚಿಕಿತ್ಸೆ
ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ಕೂದಲಿಗೆ ಟ್ರಿಮ್ಮಿಂಗ್ ಮಾಡಿಸಿ. ಆಗ ಸೀಳಿರುವ ಮತ್ತು ಡ್ಯಾಮೇಜ್ ಆಗಿರುವ ಕೂದಲು ದೂರವಾಗುತ್ತದೆ. ಅದರಿಂದ ಬೇಸಿಗೆಯ ಆರಂಭ ಆರೋಗ್ಯಕರ ಕೂದಲಿನಿಂದ ಆಗುತ್ತದೆ. ಹೆಚ್ಚುವರಿ ಶುಷ್ಕತನದಿಂದ ಪಾರಾಗಲು ಮಾಯಿಶ್ಚರೈಸರ್ ಶ್ಯಾಂಪೂ ಉಪಯೋಗಿಸಿ. ಶ್ಯಾಂಪೂ ನಂತರ ಮಾಯಿಶ್ಚರೈಸಿಂಗ್ ಕಂಡೀಶನರ್ ಹಚ್ಚಲು ಮರೆಯದಿರಿ. ಒಂದು ವೇಳೆ ಇದರ ನಂತರ ಕೂದಲು ಬಾಗಿರುವುದು ಕಂಡಬಂದರೆ ನೀವು ಆ್ಯಂಟಿಫ್ರಿಜ್ ಆಯಿಲ್ ಅಥವಾ ಸೀರಮ್ ನ ಕೆಲವು ಹನಿಗಳನ್ನು ಉಪಯೋಗಿಸಬಹುದು. ಬ್ಲೋ ಡ್ರೈಯರ್ ಮತ್ತು ಹಾಟ್ ಐರನ್ ಉಪಯೋಗಿಸಕೂಡದು ಮತ್ತು ಕೂದಲನ್ನು ಬಿಸಿಲು ಮತ್ತು ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಬೇಕು.
– ಪಾರಿಜಾತಾ