ಹುಡುಗ (ಹುಡುಗಿಯ ತಂದೆಗೆ) : ನಾನು ನಿಮ್ಮ ಮಗಳನ್ನು ಮದುವೆಯಾಗಲು ಬಯಸುತ್ತೇನೆ.
ಹುಡುಗಿ ತಂದೆ : ಅದು ಸರಿ… ನೀನು ನನ್ನ ಹೆಂಡತಿಯನ್ನು ಭೇಟಿ ಆಗಿದ್ದಿ ತಾನೇ?
ಹುಡುಗ : ಇಲ್ಲ… ಇಲ್ಲ…. ನನಗೆ ನಿಮ್ಮ ಮಗಳು ಮಾತ್ರ ಒಪ್ಪಿಗೆ.
ವರನ ಕಡೆಯರು : ಅದು ಸರಿ, ನಿಮ್ಮ ಮಗಳು ಏನೆಲ್ಲ ಮಾಡುತ್ತಾಳೆ?
ವಧುವಿನ ಕಡೆಯವರು : ಅವಳನ್ನು ಎಷ್ಟೂಂತ ಹೊಗಳೋದು…. ಸೆಲ್ಛಿ ತೆಗೆದುಕೊಳ್ಳುವಾಗ ಇವಳು 4-5 ತರಹ ಮುಖ ಮಾಡುತ್ತಾಳೆ.
ಗುಂಡನ ಮದುವೆಯಾಗಿ 2 ವರ್ಷ ಆಗಿತ್ತು. ವಿವಾಹ ವ್ಯವಸ್ಥೆ ಬಗ್ಗೆ ಒಂದು ಲೇಖನ ಸಿದ್ಧಪಡಿಸಲೆಂದು ಮರಿ ವರದಿಗಾರನೊಬ್ಬ ಅವನನ್ನು ಭೇಟಿಯಾಗಿ ಪ್ರಶ್ನಿಸಿದ, “ಮದುವೆಗೆ ಮುಂಚೆ ನೀವು ಏನು ಮಾಡುತ್ತಿದ್ರಿ?” ಗುಂಡನ ಕಂಗಳಲ್ಲಿ ಕಂಬನಿ ತುಳುಕುವುದೊಂದು ಬಾಕಿ, “ನನ್ನ ಮನ ಬಯಸಿದ್ದನ್ನು ಮಾಡುತ್ತಿದ್ದೆ…’ಮದುವೆಯ ಆರತಕ್ಷತೆ ವೈಭವದಿಂದ ನಡೆದಿತ್ತು. ವೇದಿಕೆ ಮೇಲಿದ್ದ ವಧೂವರರಿಗೆ ಶುಭ ಕೋರು ಜನ ಸಾಲಾಗಿ ಬರುತ್ತಿದ್ದರು.
ವರನ ಗೆಳೆಯರ ಗುಂಪು ಬಂದಾಗ ವಧು ಪಕ್ಕ ಅವಳ ತಂಗಿ ಸಹ ನಿಂತಿದ್ದಳು. ವರ ಅವಳನ್ನು ಗೆಳೆಯರಿಗೆ ಪರಿಚಯಿಸುತ್ತಾ, “ಇವಳು ನನ್ನ ನಾದಿನಿ…. ನಾನು ಇವಳ ಅಕ್ಕನ ಗಂಡನಾದ್ದರಿಂದ ಅರ್ಧ ಭಾಗ ಹೆಂಡತಿ ಆದಹಾಗೇ….” ಎಂದಾಗ ಎಲ್ಲರೂ ಜೋರಾಗಿ ನಕ್ಕು ನಲಿದಾಡಿದರು.
ಮತ್ತೊಂದು ಗುಂಪು ವಧುವಿನ ಗೆಳತಿಯರದು ಬಂದಿತು. ಈ ಬಾರಿ ವರನ ಪಕ್ಕ ಅವನ ತಮ್ಮ ನಿಂತಿದ್ದ. ವಧು ಅವನನ್ನು ಗೆಳತಿಯರಿಗೆ ಪರಿಚಯಿಸುತ್ತಾ, “ಇವರು ನನ್ನ ಮೈದುನ…. ದುಬೈನಲ್ಲಿ ಕೆಲಸದಲ್ಲಿದ್ದಾರೆ….. ನಾನು ಇವರ ಅಣ್ಣನ ಹೆಂಡತಿಯಾದ್ದರಿಂದ ಇವರು ನನಗೆ ಅರ್ಧ ಭಾಗ ಪತಿ ಪರಮೇಶ್ವರನಂತೆಯೇ!” ಎಂದಾಗ ಕಕ್ಕಾಬಿಕ್ಕಿಯಾದ ವರ ಕಣ್ಕಣ್ಣು ಬಿಟ್ಟ!
ಇತ್ತೀಚಿನ ಒಂದು ಸಮೀಕ್ಷೆ ಪ್ರಕಾರ ನಮ್ಮ ದೇಶದಲ್ಲಿ ವಿಚ್ಛೇದನದ ಪ್ರಕರಣಗಳು ಎಷ್ಟೋ ಕಡಿಮೆ ಆಗಿಹೋಗಿದೆಯಂತೆ…. ಕಾರಣ? ಪತಿಪತ್ನಿ ಇಬ್ಬರೂ ಸದಾ ವಾಟ್ಸ್ಆ್ಯಪ್‌ನಲ್ಲಿ ತಲ್ಲೀನರಾಗಿರುತ್ತಾರೆ, ಹೀಗಾಗಿ ಜಗಳವಾಡಲಿಕ್ಕೇ ಅವರಿಗೆ ಪುರಸತ್ತಿಲ್ಲವಂತೆ…. ಅಂದ್ರೆ? ನಮ್ಮ ಪ್ರಧಾನಿಯವರ, ಕನಸಿನಂತೆ `ಒಳ್ಳೆಯ ದಿನಗಳು ಬಂದೇಬಿಟ್ಟವು!’
ಮದುವೆಯಾದ ಮೊದಲ ರಾತ್ರಿ ಪತಿಪತ್ನಿ ತಮ್ಮ ಪ್ರಸ್ತದ ಕೋಣೆಯಲ್ಲಿ ಮಾತಿನಲ್ಲಿ ಬಿಝಿಯೋ ಬಿಝಿ.
ಪತ್ನಿ : ನಾವೀಗ ಒಂದು ಗೇಮ್ ಆಡೋಣ.
ಪತಿ : ಎಂಥ ಗೇಮ್?
ಪತ್ನಿ : ನಾನೀಗ ಒಂದು ಬಣ್ಣದ ಹೆಸರು ಹೇಳಿದರೆ, ನೀವು ಎಡಗೋಡೆ ಮುಟ್ಟಬೇಕು. ಬದಲಿಗೆ ಹಣ್ಣಿನ ಹೆಸರು ಹೇಳಿದರೆ ಬಲಗಡೆ ಗೋಡೆ ಮುಟ್ಟಬೇಕು.
ಪತಿ : ಇದರಲ್ಲಿ ನಾನು ಗೆದ್ದರೆ….?
ಪತ್ನಿ : ಯಾರು ಸೋಲುತ್ತಾರೋ ಅವರು ಜೀವನಪೂರ್ತಿ ಗೆದ್ದರ ಮಾತನ್ನು ಕೇಳಬೇಕು, ಅವರಿಗೆ ತಗ್ಗಿಬಗ್ಗಿ ನಡೆದುಕೊಳ್ಳಬೇಕು.
ಪತಿ : ಓ ಅಷ್ಟೇನಾ….. ನಾನು ಇದರಲ್ಲಿ ಸುಲಭವಾಗಿ ಗೆಲ್ಲುತ್ತೇನೆ ಬಿಡು. ಎಲ್ಲಿ ಬೇಗ ಬೇಗ ಹೇಳು….
ಪತ್ನಿ : ಹಾಗಿದ್ದರೆ ಸರಿ….. ರೆಡಿ, ಸ್ಟೆಡಿ, ಗೋ…. ಆರೆಂಜ್!
ಪತಿ : ್ಶ್ಲಾರ್ಬಿ!??
ವಿಮಲಮ್ಮ : ಯಾಕಮ್ಮ ಮಹಾರಾಣಿ…. ಮೇಲಿನ ರಾಯರ ಕೋಣೆ ಕ್ಲೀನ್‌ಮಾಡಿ ಬರಲು ಇಷ್ಟು ತಡ ಆಯಿತೇ?
ಕೆಲಸದವಳು : ಹೂಂನಮ್ಮ…. ನೆಲ ಒರೆಸುತ್ತಿದ್ದೆನಾ, ಕಾಲು ಜಾರಿ ಬಿದ್ದುಬಿಟ್ಟೆ.
ವಿಮಲಮ್ಮ : ಅದಕ್ಕೆ…. ಎದ್ದು ಬರಲು ಇಷ್ಟು ತಡವಾಗಬೇಕೇ?
ಕೆಲಸದವಳು : ನನ್ನನ್ನು ಬೇಗ ಏಳಲು ರಾಯರು ಬಿಟ್ಟರೆ ತಾನೇ….?
ಗುಂಡ ಸೈನ್ಯಕ್ಕೆ ಸೇರಿದ. ಒಮ್ಮೆ ಶತ್ರು ದೇಶಕ್ಕೆ ಬೇಹುಗಾರಿಕೆಗೆ ಹೋದವನು ಅವರ ಕೈಯಲ್ಲಿ ಸಿಕ್ಕಿಬಿದ್ದ. ತಮ್ಮ ರಹಸ್ಯಗಳನ್ನು ತಿಳಿದನೆಂದು ಗುಂಡನನ್ನು ಶಿಕ್ಷಿಸಲು ಅವರು ಮುಂದಾದರು.
ಶತ್ರು : ಇವನನ್ನು ಕಂಬಕ್ಕೆ ಕಟ್ಟಿಹಾಕಿ ಕೊರಡೆ ಏಟು ಹೊಡೆಸಿ.
ಗುಂಡ : ದಯವಿಟ್ಟು ಬೇಡಿ….. ನನ್ನನ್ನು ಬಿಟ್ಟುಬಿಡಿ, ಹೇಗೋ ಹೋಗಿ ಬದುಕಿಕೊಳ್ಳುತ್ತೇನೆ.
ಶತ್ರು : ಹಾಗಿದ್ದರೆ ಇವನ ಶಿಕ್ಷೆಯ ಮೇಲ್ವಿಚಾರಣೆಗೆ ಇವನ ಅತ್ತೆಯನ್ನು ಕರೆಸಿಬಿಡಿ.
ಗುಂಡ : ಬೇಡಿ….ಬೇಡಿ! ಕೊರಡೆ ಶಿಕ್ಷೆಯೇ ಇರಲಿ.
ಜಯಮ್ಮ : ಇದೇನ್ರಿ…. ನಮ್ಮ ಯಜಮಾನರು ಸಿಟಿಗೆ ಹೋಗಿ ಇಷ್ಟು ಹೊತ್ತಾದ್ರೂ ಬರಲಿಲ್ಲ, ಅಲ್ಲಿ ಯಾವಳ ಸ್ನೇಹದಲ್ಲಿ ಎಲ್ಲಿದ್ದಾರೋ ಏನೋ…?
ವಿಜಯಮ್ಮ : ನೀವು ಯಾಕೆ ಸದಾ ಉಲ್ಟಾ ಯೋಚಿಸುತ್ತೀರಿ? ಅದರ ಬದಲು ಬರುವಾಗ ದಾರಿಯಲ್ಲಿ ಯಾವ ಲಾರಿ, ಬಸ್ಸಿಗೆ ಸಿಕ್ಕಿಕೊಂಡರೋ ಏನೋ ಅಂದುಕೊಳ್ಳಬಾರದೇ…..?
ಒಬ್ಬ ಆಂಗ್ಲ ಅಧಿಕಾರಿ ತನ್ನ ತಾಯಿಯ ಸಮಾಧಿಗೆ ಹೂಗುಚ್ಛ ಇರಿಸಿ, ಮೌನವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ. ಆಗ ಪಕ್ಕದ ಸಮಾಧಿ ಬಳಿ ಗುಂಡ ತನ್ನ ಎದೆ ಬಡಿದುಕೊಂಡು ಅಳುತ್ತಾ, ಬಹಳ ದುಃಖಿಸುತ್ತಿದ್ದ.
“ನೀನು ಏಕೆ ಹೀಗೆ ಈ ಭೂಮಿ ಬಿಟ್ಟು ಹೋದೆ? ನೀನು ಹೀಗೆ ಸಾಯಬಾರದಿತ್ತು. ನೀನು ತೀರಿಕೊಂಡಿದ್ದರಿಂದ ಇಂದು ನನ್ನ ಜೀವನ ಎಷ್ಟು ಕಷ್ಟಕೋಟಲೆಗಳ ಸಿಲುಕಿದೆ ನೋಡು… ಗೊತ್ತಿದ್ದೂ ನೀನು ಹೀಗೆ ಮಾಡಬಹುದೇ? ಅಯ್ಯೋ! ನೀನು ಹೋಗಬಾರದಿತ್ತು…..”
ಆಂಗ್ಲ ಅಧಿಕಾರಿ ಗುಂಡನ ಬಳಿ ಬಂದು, ಅವನನ್ನು ಸಂತೈಸುತ್ತಾ ಹೇಳಿದ, “ನೋಡಪ್ಪ ಎದೆಗುಂದ ಬೇಡ… ಧೈರ್ಯ ಕಳೆದುಕೊಳ್ಳಬೇಡ. ಒಂದು ದಿನ ಇಲ್ಲ ಒಂದು ದಿನ ಎಲ್ಲರೂ ಈ ಸ್ಮಶಾನಕ್ಕೆ ಬರಬೇಕಾದ್ದೇ… ಇದು ಪ್ರಪಂಚದ ನಿಯಮ ತಾನೇ, ಸ್ವಲ್ಪ ಸಮಾಧಾನ ತಂದುಕೋ…..”
ಆ ಸಾಂತ್ವನದ ನುಡಿ ಕೇಳಿ ಗುಂಡ ಸ್ವಲ್ಪ ಸುಧಾರಿಸಿಕೊಂಡು ತನ್ನ ಅಳು ನಿಲ್ಲಿಸಿದ.
ಆಂಗ್ಲ ಅಧಿಕಾರಿ ಮುಂದುವರಿಸಿದ, “ಅದಿರಲಿ, ಈ ಸಮಾಧಿ ಯಾರದು? ಯಾರೋ ನಿನಗೆ ಬಹಳ ಬೇಕಾದವರು ಅನಿಸುತ್ತದೆ….”
ಗುಂಡ ಗದ್ಗದ ಕಂಠದಿಂದ ಹೇಳಿದ, “ಇದು ನನ್ನ ಹೆಂಡತಿಯ ಮೊದಲ ಗಂಡನ ಸಮಾಧಿ.”
ರಾಯರು : ನೋಡ್ರಿ ಭಟ್ಟರೆ, ಈ ಲಿಸ್ಟ್ ಕೊಟ್ಟಿದ್ದೀನಿ ನೆನಪಿಟ್ಟುಕೊಳ್ಳಿ. ನಾಳೆ ನಮ್ಮ ಅತ್ತೆ ಬರ್ತಿದ್ದಾರೆ.
ಭಟ್ಟ : ಓ…. ಇದೆಲ್ಲ ಅವರಿಗೆ ಇಷ್ಟನಾ? ಚೆನ್ನಾಗಿ ಮಾಡಿ ಹಾಕ್ತೀನಿ ಬಿಡಿ.
ರಾಯರು : ಹಾಗೆ ಮಾಡಿದರೆ ನೀವು ಕೆಲಸ ಕಳೆದುಕೊಳ್ತೀರಿ! ಇದರಲ್ಲಿ ಏನೂ ಮಾಡಬಾರದು ಅಂತ ಲಿಸ್ಟ್ ಕೊಟ್ಟಿದ್ದು, ಗೊತ್ತಾಯ್ತಾ…?
ಸುದ್ದಿ : ಕೇಂದ್ರೀಯ ಸಚಿವಾಲಯಗಳ ಮಹಿಳಾ ಸಿಬ್ಬಂದಿ ತಮ್ಮ ಚಿಕ್ಕ ಮಗುವನ್ನು ಕಛೇರಿಗೆ ಕರೆತರಬಹುದು. “ನೋಡಿ ಸಾರ್, ಲೇಟು ಅಂತ ರೇಗಬೇಡಿ…. ನಾನು ರೆಡಿ ಆಗುವುದು ಮಾತ್ರವಲ್ಲ, ನನ್ನ ಮಗುವನ್ನೂ ರೆಡಿ ಮಾಡಿ ಕರೆತರಬೇಕು ತಾನೇ….?”