ರೋಸ್ಮೆರಿ ರೋಸ್ಟೆಡ್ಪೊಟೇಟೋಸ್

ಸಾಮಗ್ರಿ : 1 ಕಿಲೋ ಆಲೂ, 100 ಗ್ರಾಂ ಬೆಳ್ಳುಳ್ಳಿ ಪೇಸ್ಟ್, 20 ಗ್ರಾಂ ತಾಜಾ ರೋಸ್‌ಮೆರಿ, 50 ಗ್ರಾಂ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ.

ವಿಧಾನ : ಚಿತ್ರದಲ್ಲಿ ತೋರಿಸಿದಂತೆ ಆಲೂಗಡ್ಡೆಯನ್ನು ಉದ್ದದ ಹೋಳುಗಳಾಗಿಸಿ. ಪೋರ್ಕಿನಿಂದ ಇವನ್ನು ಅಲ್ಲಲ್ಲಿ ಚುಚ್ಚಿ ರಂಧ್ರಗೊಳಿಸಿ. ನಂತರ ಇವನ್ನು ಕುದಿ ನೀರಿನಲ್ಲಿ ಸ್ವಲ್ಪ ಹೊತ್ತು ಬ್ಲಾಂಚ್‌ಗೊಳಿಸಿ. ನಿಂಬೆರಸಕ್ಕೆ ರೋಸ್‌ಮೆರಿ, ಉಪ್ಪು, ಮೆಣಸು, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಅದರಲ್ಲಿ ಆಲೂ ಚೆನ್ನಾಗಿ ಹೊರಳಿಸಿ 1-2 ತಾಸು ಮ್ಯಾರಿನೇಟ್‌ಗೊಳಿಸಿ. ನಂತರ ಇದನ್ನು ಓವನ್ನಿನಲ್ಲಿ 210 ಡಿಗ್ರಿ ಶಾಖದಲ್ಲಿ 4-5 ನಿಮಿಷ ರೋಸ್ಟ್ ಮಾಡಿ. ಇದನ್ನು ಬಿಸಿಯಾಗಿ ಕಾಫಿ/ಟೀ ಜೊತೆ ಸವಿಯಲು ಕೊಡಿ.

ಪೆಸ್ಟೋ ಮ್ಯಾರಿನೇಟೆಡ್ರೋಸ್ಟೆಡ್ವೆಜಿಟೆಬಲ್ಸ್

ಸಾಮಗ್ರಿ : 3 ಬಗೆಯ ಕ್ಯಾಪ್ಸಿಕಂ, ಝುಕೀನಿ, ಬ್ರೋಕ್ಲಿ, ಬೇಬಿಕಾರ್ನ್‌ (ತಲಾ 150 ಗ್ರಾಂ), ತುರಿದ ಚೀಸ್‌, ಆ್ಯಸ್ಪೆರಾಗಸ್‌, ಗುಂಡುಬದನೆ (ತಲಾ 100 ಗ್ರಾಂ), ಒಂದಿಷ್ಟು ಹೆಚ್ಚಿದ ತಾಜಾ ಪಾರ್ಸ್ಲೆ, ಬ್ರೋಕ್ಲಿ, ಬೆಳ್ಳುಳ್ಳಿ, 5-6 ಚಮಚ ಆಲಿವ್ ‌ಎಣ್ಣೆ, 10-12 ಬ್ರೆಡ್‌ ಸ್ಲೈಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಪೆಸ್ಟೋ ಸಾಸ್‌.

ವಿಧಾನ : ಎಲ್ಲಾ ತರಕಾರಿ ತೆಳುವಾಗಿ ಹೆಚ್ಚಿಡಿ. ತುಸು ಎಣ್ಣೆಗೆ ಉಪ್ಪು, ಮೆಣಸು, ಬೆಳ್ಳುಳ್ಳಿ ಸೇರಿಸಿ. ಅದರಲ್ಲಿ ಈ ತರಕಾರಿ ಹೋಳನ್ನು ಮ್ಯಾರಿನೇಟ್‌ಗೊಳಿಸಿ. ನಂತರ ಓವನ್ನಿನಲ್ಲಿ 200 ಡಿಗ್ರಿ ಶಾಖದಲ್ಲಿ 15 ನಿಮಿಷ  ರೋಸ್ಟ್  ಮಾಡಿ. ಬ್ರೆಡ್‌ ಸ್ಲೈಸ್‌ಗಳಿಗೆ ಆಲಿವ್ ಎಣ್ಣೆ ಸವರಿ, ಒಲೆಯ ಉರಿಯಲ್ಲಿ ಟೋಸ್ಟ್ ಮಾಡಿ. ನಂತರ ಇವುಗಳ ಮೇಲೆ ಪೆಸ್ಟೋ ಸಾಸ್‌ ಸವರಿ, ಸಮನಾಗಿ ಬರುವಂತೆ ಇದರ ಮೇಲೆ ರೋಸ್ಟೆಡ್‌ ವೆಜಿಟೆಬಲ್ಸ್ ಹರಡಿರಿ. ಇದರ ಮೇಲೆ ಪಾರ್ಸ್ಲೆ, ಬ್ರೋಕ್ಲಿ, ತುರಿದ ಚೀಸ್‌ ಹರಡಿ, ಚಿತ್ರದಲ್ಲಿರುವಂತೆ ಲೆಟ್ಯೂಸ್‌ ಎಲೆಗಳ ಸಲಾಡ್‌ ಜೊತೆ ಸವಿಯಲು ಕೊಡಿ.

ಓವನ್ರೋಸ್ಟೆಡ್ಟೊಮೇಟೊ ಬೆಲ್ಪೆಪ್ಪರ್

ಸೂಪ್ಸಾಮಗ್ರಿ :  2 ಕಿಲೋ. ಟೊಮೇಟೊ, 4-5 ಕೆಂಪು ಕ್ಯಾಪ್ಸಿಕಂ, 100 ಗ್ರಾಂ ಹೆಚ್ಚಿದ ಈರುಳ್ಳಿ, 75 ಗ್ರಾಂ ಹೆಚ್ಚಿದ ಬೆಳ್ಳುಳ್ಳಿ, 400 ಮಿ.ಗ್ರಾಂ ವೆಜ್‌ಸ್ಟಾಕ್‌, 2-3 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಕ್ಕರೆ.

ವಿಧಾನ : ಹೆಚ್ಚಿದ ಕ್ಯಾಪ್ಸಿಕಂ, ಟೊಮೇಟೋಗಳಿಗೆ ಉಪ್ಪು, ಮೆಣಸು, ಎಣ್ಣೆ, ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಮ್ಯಾರಿನೇಟ್‌ಗೊಳಿಸಿ. ನಂತರ ಇವನ್ನು ಓವನ್ನಿನಲ್ಲಿ 210 ಡಿಗ್ರಿ ಶಾಖದಲ್ಲಿ 30 ನಿಮಿಷ ರೋಸ್ಟ್ ಮಾಡಿ. ಹೊರತೆಗೆದ ನಂತರ ಇದನ್ನು ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿ. ಇದನ್ನು ಒಲೆಯ ಮೇಲಿರಿಸಿ ಸಾಕಷ್ಟು ಗಟ್ಟಿಯಾಗುವವರೆಗೂ ಕುದಿಸಿರಿ. ಕೊನೆಯಲ್ಲಿ  ಸಕ್ಕರೆ ಸೇರಿಸಿ ಮತ್ತಷ್ಟು ಕುದಿಸಿ ಕೆಳಗಿಳಿಸಿ. ಊಟಕ್ಕೆ ಮುನ್ನ ಬಿಸಿಯಾಗಿ ಸವಿಯಲು ಕೊಡಿ.

ರೋಸ್ಟೆಡ್ವೆಜಿಟೆಬಲ್ಸ್ ವಿತ್ಎಕ್ಸ್ ಟ್ರಾ ವರ್ಜಿನ್ಆಯಿಲ್

ಸಾಮಗ್ರಿ : ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ, ಝುಕೀನಿ, ಬ್ರೋಕ್ಲಿ, ಬೇಬಿಕಾರ್ನ್‌ (ತಲಾ 150 ಗ್ರಾಂ), ಆ್ಯಸ್ಪೆರಾಗಸ್‌, ಕ್ಯಾರೆಟ್‌, ಗುಂಡುಬದನೆ (ತಲಾ 100 ಗ್ರಾಂ), ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಪಾರ್ಸ್ಲೆ, ಬ್ರೆಡ್‌ ಸ್ಲೈಸ್‌, 4-5 ಚಮಚ ವರ್ಜಿನ್‌ ಆಯಿಲ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪೆಸ್ಟೋ ಸಾಸ್‌.

ವಿಧಾನ : ತರಕಾರಿಯನ್ನು ತೆಳ್ಳಗೆ ಹೆಚ್ಚಿ ಉಪ್ಪು, ಮೆಣಸು, ಬೆಳ್ಳುಳ್ಳಿ, ಎಣ್ಣೆಯ ಮಿಶ್ರಣದಲ್ಲಿ ಮ್ಯಾರಿನೇಟ್‌ಗೊಳಿಸಿ. ನಂತರ ಇದನ್ನು ಓವನ್ನಿನಲ್ಲಿ 200 ಡಿಗ್ರಿ ಶಾಖದಲ್ಲಿ 15 ನಿಮಿಷ ರೋಸ್ಟ್ ಮಾಡಿ. ನಂತರ ಒಂದು ಬಾಣಲೆಯಲ್ಲಿ ವರ್ಜಿನ್‌ ಆಯಿಲ್ ‌ಬಿಸಿ ಮಾಡಿ. ಅದರಲ್ಲಿ ಹೆಚ್ಚಿದ ಈರುಳ್ಳಿ, ಪಾರ್ಸ್ಲೆ ಹಾಕಿ ಬಾಡಿಸಿದ ನಂತರ ರೋಸ್ಟೆಡ್‌ ವೆಜಿಟೆಬಲ್ಸ್ ಹಾಕಿ ಕೆದಕಿ ಕೆಳಗಿಳಿಸಿ. ಬೆಣ್ಣೆ ಹೆಚ್ಚಿದ ಬ್ರೆಡ್‌ ಸ್ಲೈಸ್‌ ಮೇಲೆ ಇದನ್ನು ಹರಡಿ, ಮೇಲೆ ಸಾಸ್‌ ಹಾಕಿ ಸವಿಯಲು ಕೊಡಿ.

ಕ್ಲೇ ಓವನ್ರೋಸ್ಟೆಡ್ಅಬರ್ಗಿನ್

ಸೂಪ್ಸಾಮಗ್ರಿ : 4 ಕಪ್ಪು ಬದನೆ, 100 ಗ್ರಾಂ ಹೆಚ್ಚಿದ ಈರುಳ್ಳಿ, 50 ಗ್ರಾಂ ಬೆಳ್ಳುಳ್ಳಿ, 30 ಗ್ರಾಂ ಥೈಮ್ (ಸುಗಂಧಿತ ಮೂಲಿಕೆ), 60 ಗ್ರಾಂ ಗೋಟ್‌ ಚೀಸ್‌, 50 ಗ್ರಾಂ ವೆಜ್‌ ಸ್ಟಾಕ್‌, 10-15 ಗ್ರಾಂ ಹೆಚ್ಚಿ, ಹುರಿದ ಬೆಳ್ಳುಳ್ಳಿ.

ವಿಧಾನ : ಮೊದಲು ಹೆಚ್ಚಿದ ಬದನೆ ಬಾಡಿಸಿ, ತುಸು ಉಪ್ಪುನಿಂಬೆ ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ. ಅದೇ ಬಾಣಲೆಯಲ್ಲಿ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಥೈಮ್ ಹಾಕಿ ಬಾಡಿಸಿ. ಇದಕ್ಕೆ ಬದನೆ ಪೇಸ್ಟ್, ವೆಜ್‌ಸ್ಟಾಕ್‌ ಬೆರೆಸಿ ಸೂಪ್‌ ಕುದಿಸಬೇಕು. ಕೊನೆಯಲ್ಲಿ ತುರಿದ ಚೀಸ್‌, ಉಪ್ಪು, ಮೆಣಸು ಸೇರಿಸಿ ಕುದಿಸಬೇಕು. ಕೆಳಗಿಳಿಸಿದ ಮೇಲೆ ಇದಕ್ಕೆ ಹುರಿದ ಬೆಳ್ಳುಳ್ಳಿ ತೇಲಿಬಿಟ್ಟು ಸವಿಯಲು ಕೊಡಿ.

ರೋಸ್ಟೆಡ್ವೆಜಿಟೆಬಲ್ ಸಾನಾ

ಸಾಮಗ್ರಿ : 3 ಬಗೆಯ ಕ್ಯಾಪ್ಸಿಕಂ, ಝುಕೀನೀ, ಬ್ರೋಕ್ಲಿ, ಬೇಬಿಕಾರ್ನ್‌ (ತಲಾ 150 ಗ್ರಾಂ), ಆ್ಯಸ್ಪೆರಾಗಸ್‌, ಕ್ಯಾರೆಟ್‌, ಬದನೆ,  (ತಲಾ 100 ಗ್ರಾಂ), ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಪಾರ್ಸ್ಲೆ, ತುರಿದ ಪ್ಯಾರಾಮೀಸನ್‌ ಚೀಸ್‌, ರುಚಿಗೆ ತಕ್ಕಷ್ಟು ವರ್ಜಿನ್‌ಆಯಿಲ್‌, ಚೀಸ್‌ ಸಾಸ್‌, ಟೊಮೇಟೊ ಸಾಸ್‌, ವೈಟ್‌ ಸಾಸ್‌, ಉಪ್ಪು ಮೆಣಸು.

ವಿಧಾನ : ಒಂದೇ ಆಕಾರದಲ್ಲಿ ಎಲ್ಲಾ ತರಕಾರಿ ತೆಳುವಾಗಿ ಕತ್ತರಿಸಿ. ಎಣ್ಣೆಗೆ ಉಪ್ಪು, ಮೆಣಸು, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಬೆರೆಸಿ, ಅದರಲ್ಲಿ ತರಕಾರಿ ಮ್ಯಾರಿನೇಟ್‌ಗೊಳಿಸಿ. ನಂತರ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 20 ನಿಮಿಷ ರೋಸ್ಟ್ ಮಾಡಿ. ಹೀಗೆ ರೋಸ್ಟೆಡ್‌ ತರಕಾರಿಯನ್ನು ಅರ್ಧ ಆಗುವಂತೆ ಮತ್ತೆ ಹೆಚ್ಚಿಡಿ. ಇದರಲ್ಲಿ ಅರ್ಧ ಭಾಗಕ್ಕೆ ಟೊಮೇಟೊ ಸಾಸ್‌, ಉಳಿದ ಭಾಗಕ್ಕೆ ವೈಟ್‌ಸಾಸ್‌ ಬೆರೆಸಿ ಬಾಡಿಸಿ. ಚೀಸ್‌ನ್ನು ಕುದಿ ನೀರಿಗೆ ಹಾಕಿ ತೆಗೆಯಿರಿ. ಒಂದು ಟ್ರೇನಲ್ಲಿ ಮೊದಲು ತರಕಾರಿ ಪದರ ಬರಲಿ. ಇದರ ಮೇಲೆ ಚೀಸ್‌ ಸಾಸ್‌, ಟೊಮೇಟೊ ಸಾಸ್‌ನ ಪದರ ಬರಲಿ. ಎಲ್ಲಕ್ಕೂ ಮೇಲೆ ವೈಟ್‌ ಸಾಸ್‌ ಪದರ ಬರಲಿ. ಅದರ ಮೇಲೆ ತುರಿದ ಚೀಸ್‌, ಪಾರ್ಸ್ಲೆಯಿಂದ ಅಲಂಕರಿಸಿ ಸವಿಯಲು ಕೊಡಿ.

ಪೆನ್ನೆ ಪಾಸ್ತಾ ಇನ್ಚೀಸ್ಸಾಸ್ವಿತ್ರೋಸ್ಟೆಡ್ವೆಜಿಟೆಬಲ್ಸ್

ಸಾಮಗ್ರಿ : ಹಳದಿ, ಹಸಿರು, ಕೆಂಪು ಕ್ಯಾಪ್ಸಿಕಂ, ಝುಕೀನಿ, ಬ್ರೋಕ್ಲಿ (ತಲಾ 150 ಗ್ರಾಂ), ಆ್ಯಸ್ಪೆರಾಗಸ್‌, ತುರಿದ ಪ್ಯಾರಾಮೀಸನ್ ಚೀಸ್‌, ಹೆಚ್ಚಿದ ಪಾರ್ಸ್ಲೆ  (ತಲಾ 100 ಗ್ರಾಂ), 450 ಗ್ರಾಂ ಪೆನ್ನೆ ಪಾಸ್ತಾ, 500 ಮಿ.ಗ್ರಾಂ ಚೀಸ್‌ ಸಾಸ್‌, 50 ಮಿ.ಗ್ರಾಂ ಕ್ರೀಂ,  ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಪೆನ್ನೆ ಪಾಸ್ತಾವನ್ನು ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಕುದಿಸಿ ತೆಗೆಯಿರಿ. ತರಕಾರಿಯನ್ನು ಸಣ್ಣದಾಗಿ ಹೆಚ್ಚಿಡಿ. ಹೆಚ್ಚಿದ ಬೆಳ್ಳುಳ್ಳಿ ಈರುಳ್ಳಿಯನ್ನು ತುಸು ಎಣ್ಣೆಯಲ್ಲಿ  ಬಾಡಿಸಿ. ನಂತರ ಚೀಸ್‌ ಸಾಸ್‌ ಬೆರೆಸಿ 5 ನಿಮಿಷ ಕೆದಕಬೇಕು. ನಂತರ ಇದಕ್ಕೆ ಪೆನ್ನೆ ಪಾಸ್ತಾ, ಬೇರೆ ಮಸಾಲೆ ಸೇರಿಸಿ. ಕೊನೆಯಲ್ಲಿ ಕ್ರೀಂ ಮತ್ತು ತುರಿದ ಪ್ಯಾರಾಮೀಸನ್‌ ಚೀಸ್‌ ಬೆರೆಸಿ, ಪಾರ್ಸ್ಲೆಯಿಂದ ಅಲಂಕರಿಸಿ ಸವಿಯಲು ಕೊಡಿ.

ರೋಸ್ಟೆಡ್ವೆಜಿಟೆಬಲ್ ಸಲಾಡ್

ಸಾಮಗ್ರಿ : ಕ್ಯಾಪ್ಸಿಕಂ, ಝುಕೀನಿ, ಬ್ರೋಕ್ಲಿ, ಬೇಬಿಕಾರ್ನ್‌, ಅಣಬೆ (ತಲಾ 150 ಗ್ರಾಂ), ಆ್ಯಸ್ಪೆರಾಗಸ್‌, ಕ್ಯಾರೆಟ್‌, ಬದನೆ, ಪನೀರ್‌(ತಲಾ 100 ಗ್ರಾಂ), ಒಂದಿಷ್ಟು ಹೆಚ್ಚಿದ ಪಾರ್ಸ್ಲೆ, ಬೆಳ್ಳುಳ್ಳಿ, ತುಸು ಆಲಿವ್ ಆಯಿಲ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ.

ವಿಧಾನ : ತರಕಾರಿಗಳನ್ನು ತ್ರಿಕೋನಾಕಾರಾಗಿ ಕತ್ತರಿಸಿ. ಎಣ್ಣೆಗೆ ಉಪ್ಪು, ಮೆಣಸು, ಬೆಳ್ಳುಳ್ಳಿ ಬೆರೆಸಿ ಮ್ಯಾರಿನೇಟ್‌ಗೊಳಿಸಿ. ಈಗ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 15 ನಿಮಿಷ ಇದನ್ನು ರೋಸ್ಟ್ ಮಾಡಿ. ಇದನ್ನು ಹೊರತೆಗೆದು ತುಸು ಆರಲು ಬಿಡಿ. ನಂತರ ಇದರ ಮೇಲೆ ನಿಂಬೆಹಣ್ಣು ಹಿಂಡಿಕೊಂಡು, ಪನೀರ್‌, ಪಾರ್ಸ್ಲೆಗಳಿಂದ ಅಲಂಕರಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ