ನೀರಾ ಎಂದರೆ ತೆಂಗಿನ ಅರೆಬಿರಿದ ಮೊಗ್ಗಿನಿಂದ ಒಸರುವ ಸಿಹಿಯಾದ, ಸ್ವಾದಿಷ್ಟ, ಪೌಷ್ಟಿಕ ರಸ. ಇದರಲ್ಲಿ ಅನೇಕ ಪೌಷ್ಟಿಕಾಂಶಗಳು ಅಡಗಿವೆ. ನೀರಾದ ಲೋ ಗ್ಲೈಸೆಮಿಕ್‌ ಇಂಡೆಕ್ಸ್ ಇದನ್ನು ಜನಪ್ರಿಯಗೊಳಿಸುತ್ತಿದೆ. ಎಷ್ಟಂತೀರಾ? ಕೇವಲ 35. ಹೀಗಾಗಿಯೇ ನೀರಾದಿಂದ ನಮ್ಮ ರಕ್ತದಲ್ಲಿ ಸಕ್ಕರೆ ಅಂಶ ಬೆರೆಯುವಿಕೆ ಈ ಕಾರಣ ಕಡಿಮೆಯೇ ಇರುತ್ತದೆ. ಮಧುಮೇಹಿಗಳಿಗೂ ಇದರ ಮಿಠಾಯಿ ವರ್ಜ್ಯವಲ್ಲ. ನೀರಾದಲ್ಲಿ ವಿಟಮಿನ್‌, ಎ‌, ಬಿ, ಸಮೃದ್ಧವಾಗಿವೆ. ಇವುಗಳ ಆಂಟಿ ಆಕ್ಸಿಡೆಂಟ್‌ ಗುಣ ಹಾಗೂ ಕಡಿಮೆ  ದರ ಇದನ್ನು ಸ್ವಾಸ್ಥ್ಯವರ್ಧಕ ಎನಿಸಿದೆ.

ಇಷ್ಟು ಮಾತ್ರವಲ್ಲ, ನೀರಾ ಗ್ಲೂಟಾಮಿಕ್‌ ಆ್ಯಸಿಡ್‌ನಂಥ 17 ಬಗೆಯ ಅಮೀನೋ ಆಮ್ಲಗಳಿಂದ ಸಮೃದ್ಧವಾಗಿದೆ. ಜೊತೆಗೆ ನೀರಾದಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂ, ಕ್ಯಾಲ್ಶಿಯಂ, ಝಿಂಕ್‌, ಐರನ್‌, ಸೋಡಿಯಂ ಇತ್ಯಾದಿ ಖನಿಜಗಳೂ ಭರ್ತಿಯಾಗಿವೆ. ರಕ್ತದ ಕೊರತೆ, ಆಸ್ತಮಾ, ಕ್ಷಯ, ಸ್ಥೂಲಕಾಯ, ಹೃದ್ರೋಗ, ಕ್ಯಾನ್ಸರ್‌ ತಡೆಗಟ್ಟಲಿಕ್ಕೂ ಸಹ ನೀರಾ ಉಪಕಾರಿ.

ಇದರಿಂದ ನೀರಾ ಬೆಲ್ಲ, ನೀರಾ ಸಿರಪ್‌, ನೀರಾ ಹನೀ, ನೀರಾ ಸಕ್ಕರೆ ಇತ್ಯಾದಿ ತಯಾರಾಗುತ್ತವೆ, ಇವು ನೀರಾದಷ್ಟೇ ಪೌಷ್ಟಿಕ. ಯಾರಿಗೆ ಸಿಹಿ ಎಂದರೆ ಇಷ್ಟವೋ ಆದರೆ ಮಾಮೂಲಿ ಸಕ್ಕರೆ ದುಷ್ಪರಿಣಾಮಗಳಿಂದ ಅಂಥ ಮಿಠಾಯಿ ಮುಟ್ಟದೆ ಇದ್ದಾರೋ, ಅವರಿಗೆಲ್ಲ ನೀರಾ ಮಿಠಾಯಿ ವರದಾನವೇ ಸರಿ.

ನೀರಾ ಬೆಲ್ಲದ ಕುಕೀಸ್

ಸಾಮಗ್ರಿ : 200 ಗ್ರಾಂ ಮೈದಾ, ಪುಡಿ ಮಾಡಿದ ನೀರಾ ಬೆಲ್ಲ, 75 ಗ್ರಾಂ ತೆಂಗಿನ ತುರಿ, 2 ಸಣ್ಣ ಚಮಚ ಬೇಕಿಂಗ್‌ ಪೌಡರ್‌, 1 ಸಣ್ಣ ಚಮಚ ವೆನಿಲಾ ಎಸೆನ್ಸ್, 2-2 ಚಿಟಕಿ ಪೊಟ್ಯಾಶಿಯಂ ಮೆಟಾಬೈಸ್ಛೀಟ್‌, ಉಪ್ಪು, ತುಸು ಬೆಣ್ಣೆ.

ವಿಧಾನ : ತೆಂಗಿನ ತುರಿಯನ್ನು ಓವನ್‌ನಲ್ಲಿ ಚೆನ್ನಾಗಿ ಬಿಸಿ ಮಾಡಿ ನಂತರ ಮಿಕ್ಸಿಯಲ್ಲಿ ತಿರುವಿರಿ (ರೆಡಿಮೇಡ್‌ ಡೆಸಿಕೇಟೆಡ್‌ಕೋಕೋನಟ್‌ ಪೌಡರ್‌ ಸಹ ಬಳಸಬಹುದು.) ಮೈದಾ ಜೊತೆ ಉಳಿದ ಸಾಮಗ್ರಿ ಬೆರೆಸಿಕೊಳ್ಳಿ. ಬೆಣ್ಣೆ ಕರಗಿಸಿ ಒಂದು ಬಟ್ಟಲಿಗೆ ಹಾಕಿಡಿ. ಇದಕ್ಕೆ ವೆನಿಲಾ ಎಸೆನ್ಸ್ ಬೆರೆಸಿ ಚೆನ್ನಾಗಿ ಕದಡಿಕೊಂಡು ಮೈದಾ ಮಿಶ್ರಣಕ್ಕೆ ಬೆರೆಸಿರಿ. ನಂತರ ಇದಕ್ಕೆ ತಿರುವಿದ ತೆಂಗು, ನೀರಾ ಬೆಲ್ಲದ ಪುಡಿ ಸೇರಿಸಿ ಬೆರೆಸಿ. ಇದರಿಂದ ಉದ್ದಕ್ಕೆ ಸುರುಳಿ ತರಹ ತಿರುವಿಕೊಂಡು, ಅದರಿಂದ 11 ಸೆಂ.ಮೀ. ದಪ್ಪಗೆ ಬರುವೆತೆ ಬಿಲ್ಲೆಗಳಾಗಿಸಿ. ಒಂದು ಓವನ್‌ ಪ್ರೂಫ್‌ ಟ್ರೇಗೆ ಜಿಡ್ಡು ಸವರಿ, ಅದರಲ್ಲಿ ಈ ಬಿಲ್ಲೆಗಳನ್ನು ಜೋಡಿಸಿ, ಮೊದಲೇ ಪ್ರೀಹೀಟ್‌ ಮಾಡಿದ ಓವನ್ನಿನಲ್ಲಿ 110 ಡಿಗ್ರಿ ಶಾಖದಲ್ಲಿ ಬೇಕ್‌ ಮಾಡಿ.

ನೀರಾ ಫ್ರೂಟ್ಜ್ಯಾಂ

ಸಾಮಗ್ರಿ : 1 ಲೀ. ನೀರಾ ಹನೀ, 0.02% ಸಿಟ್ರಿಕ್‌ ಆ್ಯಸಿಡ್‌, 0.5% ಪೆಕ್ಟಿನ್‌, 500 ಗ್ರಾಂ ಮಿಕ್ಸ್ಡ್ ಫ್ರೂಟ್‌ಪಲ್ಪ್, 0.1% ಶುಂಠಿ ರಸ, 15 ಎಂ.ಎಲ್. ಫುಡ್‌ ಕಲರ್‌.

ವಿಧಾನ : ನೀರಾ ಜೇನಿಗೆ ಸಿಟ್ರಿಕ್‌ ಆ್ಯಸಿಡ್‌ ಮತ್ತು ಪೆಕ್ಟಿನ್‌ ಬೆರೆಸಿ 800 ಶಾಖದಲ್ಲಿ ಬಿಸಿ ಮಾಡಿ. ಇದಕ್ಕೆ ಮಿಕ್ಸ್ಡ್ ಫ್ರೂಟ್‌ ಪಲ್ಪ್.ಬೆರೆಸಿ, ಕೈಯಾಡಿಸುತ್ತಾ ಜ್ಯಾಮ್ ತರಹ ಗಾಢವಾಗಿಸಿ. ನಂತರ ಶುಂಠಿ ರಸ, ಫುಡ್‌ ಕಲರ್‌ ಬೆರೆಸಿ ಮತ್ತೆ ಎಲ್ಲವನ್ನೂ ಕೆದಕಿ, ಒಲೆಯಿಂದ ಇಳಿಸಿಬಿಡಿ. ತುಸು ಬಿಸಿ ಇರುವಾಗಲೇ ಗಾಜಿನ ಶೀಶೆಗಳಿಗೆ ತುಂಬಿಸಿ, ಆರಲು ಬಿಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ