ಬಾಡಿಗೆ ಗರ್ಭದ ಮೇಲೆ ಕಾನೂನಿನ ಪಹರೆ

ಬಾಡಿಗೆ ಗರ್ಭ (ಸರೋಗೆಸಿ)ದ ಮೇಲೆ ಕಾನೂನು ತನ್ನ ಕ್ರಮ ಹೇರಿ ಸರ್ಕಾರ ಹೆಂಗಸರ ದೇಹದ ಮೇಲೆ ಅವರಿಗೇ ಹಕ್ಕಿಲ್ಲ ಎಂಬಂತೆ ಮತ್ತೊಮ್ಮೆ ಸಾಬೀತುಪಡಿಸಿದೆ. ಗರ್ಭಪಾತದ ಮೇಲೆ ನಿಯಂತ್ರಣ, ಅಲ್ಟ್ರಾಸೌಂಡ್‌ ಮೇಲೆ ಕಂಟ್ರೋಲ್, ದೇಹ ಪ್ರದರ್ಶನವನ್ನು ಅಶ್ಲೀಲತೆ ಎನ್ನುವುದು ಇತ್ಯಾದಿ ಹೆಂಗಸರ ವೈಯಕ್ತಿಕ ಹಕ್ಕಿಗೆ ಚ್ಯುತಿ ತರುತ್ತವೆ. ಯಾವುದೇ ಸಮಾಜ ಹಾಗೂ ಸರ್ಕಾರಕ್ಕೆ ಮೂಲಭೂತವಾಗಿ ಈ ತರಹದ ಕಾನೂನು ಕ್ರಮವನ್ನು ಒಂದು ಜೆಂಡರ್‌ ಮೇಲೆ ಹೇರುವಂಥ ಹಕ್ಕಿಲ್ಲ.

ಅದೇ ಗಂಡಸರ ವಿಷಯದಲ್ಲಿ ಇಂಥ ಎಷ್ಟು ಕಾನೂನು ಕ್ರಮ ಹೇರಲಾಗಿದೆ ಎಂದು ಎಣಿಸಿ ನೋಡೋಣ…..? ವೇಗವಾಗಿ ಓಡುವುದರ ಕುರಿತಾಗಿ ಸರ್ಕಾರ ಗಂಡಸರ ಮೇಲೆ ಒತ್ತಡ ಹೇರಿದೆಯೇ? ಮನ ಬಂದಾಗ ಸಿಕ್ಸ್ ಪ್ಯಾಕ್‌ ಮಾಡಿಕೊಳ್ಳಬಾರದೆಂದು ಅವರ ಬಗ್ಗೆ ಕ್ರಮವಿದೆಯೇ? ಸಣ್ಣ ಚಡ್ಡಿ ಧರಿಸಿ ಗಂಡಸರು ಎಲ್ಲಾದರೂ ಸುತ್ತಾಡಬಹುದಂತೆ, ಆದರೆ ಹೆಂಗಸರು ಹಾಗೆ ಮಾಡುವಂತಿಲ್ಲ!

ತಮ್ಮ ಗರ್ಭವನ್ನು ಬಾಡಿಗೆ ಕೊಡುವುದರಿಂದ ಹೆಂಗಸರ ಆರೋಗ್ಯ ಕೆಡುತ್ತದೆ, ಹಾಗಾಗಿ ಈ ಕ್ರಮ ಎಂದು ಕಾನೂನು ಹೇಳಬಹುದು. ಹಾಗಾಗಿಯೇ ಅದನ್ನು ವ್ಯಾಪಾರಕ್ಕಿಡಬೇಡಿ ಎನ್ನುವ ನೆಪದಲ್ಲಿ ಅವರ ಆದಾಯಕ್ಕೆ ಅಂಕುಶ ಹಾಕಲಾಗಿದೆ.

ಹೆಂಗಸು ತನ್ನ ಜೀವಿತಾವಧಿಯಲ್ಲಿ ಸುಸೂತ್ರವಾಗಿ 10-12 ಮಕ್ಕಳನ್ನು ಹೆರಬಹುದು. ಆಕೆಗೆ ಸಕಲ ಸೌಲಭ್ಯ ಸಿಕ್ಕಿದರೆ ತನ್ನ ಗರ್ಭದಲ್ಲಿ ಪರರ ಭ್ರೂಣ ಬೆಳೆಸಿದರೆ ತಪ್ಪೇನು? ಇದರಲ್ಲಿ ಬಲವಂತದ ಪ್ರಶ್ನೆ ಇಲ್ಲವಷ್ಟೆ. ನಾವು ಕಟ್ಟಿದ ಮನೆಯನ್ನು ನಾವು ಯಾರಿಗಾದರೂ ಬಾಡಿಗೆಗೆ ಕೊಡಬಹುದು ತಾನೇ?

ಇದೊಂದು ರೀತಿ ಟೆಸ್ಟ್ ಟ್ಯೂಬ್‌ ಬೇಬಿ ಕೇಸ್‌ನಂತೆ. ಇದರಲ್ಲಿ ಗಂಡಸಿನ ವೀರ್ಯವನ್ನು ಹೆಂಗಸಿನ ಎಗ್‌ ಜೊತೆ ಹೊರಗಿನ ಲ್ಯಾಬ್‌ನಲ್ಲಿ ಫರ್ಟಿಲೈಸ್‌ ಮಾಡಿದಂತೆ ಹಾಗೂ 3ನೇಯವಳ ಗರ್ಭದಲ್ಲಿ ಅದನ್ನು ಬೆಳೆಸಲಾಗುತ್ತದೆ. ಹೀಗೆ ಸರೋಗೇಟ್‌ ಮದರ್ ಆಗುವವಳಿಗೆ ಆ ಮಗು ಯಾರದು ಅಂತ ತಿಳಿಯುವ ಸಂಭವ ಇರುವುದಿಲ್ಲ.

ಹೌದು, ಈ ತರಹದ ಕೆಲಸ ಈಗಾಗಲೇ ದಂಧೆಯ ರೂಪ ಪಡೆದುಕೊಂಡಿದೆ, ಆದರೆ ಇಂಥದೇ ಎಷ್ಟೋ ಕೆಲಸಗಳು ದಂಧೆಗಳಾಗಿವೆಯಷ್ಟೆ? ಧರ್ಮಾಂಧರು ಭಗವಂತನಿಗೆ ಎಲ್ಲ ಗೊತ್ತು ಎನ್ನುತ್ತಾರೆ, ಆದರೆ ಬೀದಿ ಬೀದಿಗಳಲ್ಲಿ ಧರ್ಮದ ದಂಧೆ ನಡೆಸುವ ಅಂಗಡಿಗಳಿಗೇನೂ ಬರವಿಲ್ಲ, ಇನ್ನಷ್ಟು ಮತ್ತಷ್ಟು ಗ್ರಾಹಕರು ಬರಬೇಕೆಂದು ಇವು ನಗಾರಿ ಬಾರಿಸುತ್ತಿರುತ್ತವೆ.

ನ್ಯಾಯ ಕೊಡಿಸುವುದು ಕೋರ್ಟ್‌, ಸಮಾಜದ ಕೆಲಸ. ಆದರೆ ವಕಾಲತ್ತಿನ ದಂಧೆಯಂತೂ ತಾರಕಕ್ಕೇರಿದೆ. ಸಾವು ಸಂಭವಿಸಿದಾಗ ಸಂಸ್ಕಾರದ ದಂಧೆಯೂ ಜೋರಾಗಿರುತ್ತದೆ. ಅಮೆರಿಕಾದಲ್ಲಂತೂ ಈಗ ಕಾಫಿನ್‌ ತಯಾರಿಸುವವರ ದಂಧೆ ಮುಳುಗುತ್ತಿದೆ ಎಂದು ಅಳುತ್ತಿದ್ದಾರೆ, ಏಕೆಂದರೆ ಜನ ಅಲ್ಲೀಗ ಹೆಣಗಳನ್ನು ನೇರ ಸುಡುತ್ತಿದ್ದಾರೆ. ಇವನ್ನು ಕ್ರಿಮೇಟ್‌ ಮಾಡಲೆಂದೇ ರಾಶಿ ರಾಶಿ ಚಿತಾಗಾರಗಳು ದಂಧೆ ಆರಂಭಿಸಿವೆ. ಕೆಲವೊಂದು ಪ್ರಕರಣಗಳಲ್ಲಿ, ವಿದ್ಯುತ್‌ ಉಳಿಸುವ ಲೋಭದಲ್ಲಿ ಅರೆ ಸುಟ್ಟ ಶವಗಳನ್ನು ಹಾಗೇ ಬಿಸಾಡಲಾಗುತ್ತದಂತೆ!

ಇವು ಯಾವುದರ ಮೇಲೂ ಕಾನೂನಿನ ಕ್ರಮ ಜರುಗಿಸದೆ, ಹೆಣ್ಣಿನ ಖಾಸಗಿ ವಿಷಯವಾದ ಗರ್ಭದ ಮೇಲೇಕೆ ಕಾನೂನಿಗೆ ಮಾರಿಕಣ್ಣು….? ಇದು ನಿಜಕ್ಕೂ ಅನೈತಿಕ! ಎಷ್ಟು ಮಟ್ಟಕ್ಕೆ ಎಂದರೆ…. ನಾಳೆ ತಾಯಿ ಆದವಳು ತನ್ನ ಮಗುವನ್ನು ನೋಡಿಕೊಳ್ಳಲು ಆಯಾಳನ್ನು ನೇಮಿಸಿಕೊಳ್ಳುವಂತಿಲ್ಲ ಎಂಬ ಕಾನೂನು ಜಾರಿಗೆ ಬಂದರೂ ಆಶ್ಚರ್ಯವಿಲ್ಲ. ಹೆತ್ತ ತಾಯಿಯೇ ಅದನ್ನು ಸಾಕಬೇಕು, ಬಾಡಿಗೆಗೆ ಪರರ ವಶಕ್ಕೆ ಒಪ್ಪಿಸುವಂತಿಲ್ಲ ಎಂಬಂತೆ!

ರಾಜಕೀಯದ ಕೊಂಪೆಯಲ್ಲಿ ಮುಳುಗಿದ ಖಾಸಗಿ ಸ್ವಾತಂತ್ರ್ಯ

ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ‌ತಮ್ಮ ಮಂತ್ರಿಮಂಡಳದಿಂದ ಒಬ್ಬ ಮಂತ್ರಿ ಸಂದೀಪ್‌ ಕುಮಾರ್‌ರನ್ನು ಆ ಪದವಿಯಿಂದ ಓಡಿಸಿದರು, ಏಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದ ಒಂದು ವಿಡಿಯೋ ಕ್ಲಿಪ್‌ನಲ್ಲಿ ಸಂದೀಪ್‌ ಒಬ್ಬ ಹೆಣ್ಣಿನೊಂದಿಗೆ ಸೆಕ್ಸ್ ನಲ್ಲಿ ನಿರತರಾಗಿದ್ದರು.

ಹೀಗಾಗಿ ಅರವಿಂದ್‌ ನೈತಿಕತೆಯ ಹೆಸರಿನಲ್ಲಿ ಸಂದೀಪ್‌ರನ್ನು ಪದವಿಯಿಂದ ಕಿತ್ತುಹಾಕಿದರು ತಮ್ಮ ಮಂತ್ರಿಗಳು ಎಂದೂ ವಿವಾದದಲ್ಲಿ ಸಿಲುಕಬಾರದೆಂದು ಎಚ್ಚರಿಸಿದರು.

ಈ ಕ್ಲಿಪ್‌ ವಾಸ್ತವದಲ್ಲಿ ಸಂದೀಪ್‌ರವರದಾಗಿದ್ದು, ಅವರು ಬೇರೆ ಹೆಣ್ಣಿನೊಂದಿಗೆ ಇದ್ದದ್ದೇ ನಿಜವಾದಲ್ಲಿ ಅದು ಚರ್ಚಾಸ್ಪದ ವಿಷಯ ನಿಜ. ಆದರೆ ಇದರಲ್ಲಿ ನೈತಿಕತೆಯ ಸವಾಲನ್ನು ಸಂದೀಪ್‌ರ ಪತ್ನಿ ಆಕ್ಷೇಪಿಸಬೇಕೇ ಹೊರತು ಬೇರೆಯವರಿಗೆ ಆ ಹಕ್ಕಿಲ್ಲ. ಸೆಕ್ಸ್ ವಿಷಯದಲ್ಲಿ ಇಬ್ಬರ ಕಡೆಯಿಂದಲೂ ಸಹಮತಿ ಇದ್ದಾಗ, ಅದು ಅನೈತಿಕತೆ ಹೇಗಾಗುತ್ತದೆ? ಮುಖ್ಯವಾಗಿ ಅದರಲ್ಲಿ ಪಾಲ್ಗೊಂಡ ಹೆಣ್ಣು ಅಥವಾ ಆತನ ಪತ್ನಿ ಆ ಬಗ್ಗೆ ಆಕ್ಷೇಪಿಸದಿರುವಾಗ….? ವಿವಾದ ಎದ್ದ ಮೇಲೆ ಅಫೇರ್‌ ಹೊಂದಿದ್ದಾಕೆ ಈಗ ದೂರು ನೀಡಲು ಹೊರಟಿದ್ದಾಳೆ, ಏಕೆಂದರೆ ತಾನು ಹೆಸರು ಕೆಡಿಸಿಕೊಳ್ಳುವುದು ಖಚಿತ ಎಂದು ಅವಳಿಗೆ ತಿಳಿಯಿತು.

ಈ ತರ್ಕ ತುಸು ಕೆಟ್ಟದಾಗಿದೆ ಎನಿಸಿದರೂ ಸತ್ಯ ಏನೆಂದರೆ, ಅನೇಕ ವರ್ಷಗಳಿಂದ ವಿವಾಹದ ವ್ಯವಸ್ಥೆ ಇದ್ದರೂ, ವಿವಾಹೇತರ ಸಂಬಂಧ ಅನೂಚಾನವಾಗಿ ಚಾಲ್ತಿಯಲ್ಲಿದೆ. ಇದರಲ್ಲಿ ಆಕ್ಷೇಪಣೆ ಹಾಗೂ ನೈತಿಕತೆಯ ಸವಾಲುಗಳು, ಅಸಲಿಗೆ ಹೆಣ್ಣನ್ನು ಬೇನಾಮಿಗೊಳಿಸಲೆಂದೇ ರೂಪಿಸಿದಂತಿವೆ. ಒಬ್ಬ ಪರಸ್ತ್ರೀ ಶಿಕ್ಷೆ ಇನ್ನೊಬ್ಬ ಹೆಣ್ಣಿಗೇ ಆಗುತ್ತದೆಯೇ ಹೊರತು ಅವಳ ಗಂಡನಿಗಲ್ಲ. ಇಂದಿಗೂ ನಾವು ಇಂಥ ಸಂಬಂಧಗಳ ವಿಚಾರವಾಗಿ ಸುಲಭವಾಗಿ ಬಿಡಿಸಿಕೊಳ್ಳಲಾಗದು, ಬದಲಿಗೆ ನೈತಿಕತೆಯನ್ನು ಸೆಕ್ಸ್ ಜೊತೆ ಬೆರೆಸುತ್ತಿದ್ದೇವೆ.

ಈ ಕಾರಣದಿಂದಲೇ ಎಷ್ಟೋ ಹೆಂಗಸರು ಸಿಡುಕಿಗೆ ಶರಣಾಗುತ್ತಾರೆ. ತಮ್ಮನ್ನು ತಾವು ಮನೆಯ 4 ಗೋಡೆಗಳ ಮಧ್ಯೆ ಬಂಧಿಗಳಾಗಿಸಿಕೊಳ್ಳುತ್ತಾರೆ, ಪರಪುರುಷರ ಜೊತೆ ಸಲೀಸಾಗಿ ಮಾತನಾಡಲು ಹಿಂಜರಿಯುತ್ತಾರೆ. ಉದ್ಯೋಗಸ್ಥೆ ಆಗಿದ್ದರೆ ಹಗಲೂ ರಾತ್ರಿ ಗಾಬರಿಗೊಳ್ಳುತ್ತಾಳೆ. ಏನೂ ಅನರ್ಥ ಆಗಬಾರದೆಂದು ಭಯಪಡುತ್ತಾಳೆ. ವಿವಾಹಿತೆಯರನ್ನು ಬಿಡಿ, ಅವಿವಾಹಿತೆಯರು ಸಹ, ಯಾವ ಯುವಕನನ್ನು ತಾನು ಪ್ರೇಮಿಸುತ್ತಿದ್ದೇನೋ ಅಥವಾ ತನ್ನ ಹಿತೈಷಿ ಎಂದು ಗೊತ್ತೋ ಇದೇ ಭಯದಿಂದಾಗಿ ಅವನ ಬಳಿಯೂ ಪ್ರೇಮ ನಿವೇದನೆ ಮಾಡಿಕೊಳ್ಳಲಾರಳು. ಆ ಯುವಕ ತಾನಾಗಿ ಮೊದಲು ಪ್ರೇಮ ನಿವೇದಿಸಿಕೊಂಡರೂ, ಮೊದಲು ಇವಳು ಬೇಡವೆಂದೇ ಹೇಳುತ್ತಾಳೆ ಹಾಗೂ ನಂತರವೇ ಆ ಸಂಕೋಚ ಕಡಿಮೆ ಆಗುತ್ತದೆ.

ಇಂಥ ಪೊಳ್ಳು ನೈತಿಕತೆಯ ಕಾರಣ ಹೆಂಗಸರ ವ್ಯಕ್ತಿತ್ವ ಸಾಮಾಜಿಕ ಪರಂಪರೆ, ಸದಾಚಾರ, ಅಸ್ಮಿತೆಗಳಲ್ಲಿ ಕಳೆದುಹೋಗುತ್ತದೆ. ಗಂಡಸು ಎಂಥ ಅಪಾಯಕ್ಕೂ ಕೈಹಾಕಲು ಮುಂದಾಗುತ್ತಾನೆ, ಆದರೆ ಹೆಣ್ಣು ಈ ನೈತಿಕತೆಗೆ ಹೆದರಿ ತನ್ನನ್ನು ಬಲಿಯಾಗಿಸಿಕೊಳ್ಳುತ್ತಾಳೆ.

ಸಂದೀಪ್‌ ಯಾವ ಹೆಣ್ಣಿನ ಜೊತೆ ಸಂಬಂಧ ಹೊಂದಿದ್ದರೋ, ಅದರಿಂದ ಅವರ ಪತ್ನಿಗೆ ಮೋಸ ಆಗಬಹುದು, ಆದರೆ ಅದರಿಂದ ಸಮಾಜಕ್ಕೆ ಏನೂ ಆಗಬೇಕಾಗಿಲ್ಲ. ಆತ ಅವಳನ್ನು ಏಮಾರಿಸಿ ಲಾಭ ಪಡೆದುಕೊಳ್ಳುತ್ತಿದ್ದ ಎಂದು ಸಾಬೀತಾಗುವವರೆಗೂ ಸಮಾಜಕ್ಕೆ ಏನೂ ಆಗಬೇಕಿಲ್ಲ.

ಈ ವಿಡಿಯೋ ಕದ್ದುಮುಚ್ಚಿ ರೂಪಿಸಿದ್ದಾಗಿದ್ದರೆ, ಈ ವಿಡಿಯೋನೇ ಅನೈತಿಕ ಎನ್ನಬಹುದು. ಖಾಸಗಿ ಸ್ವಾತಂತ್ರ್ಯವನ್ನು ರಾಜಕೀಯದೊಂದಿಗೆ ಮುಳುಗಿಸಿ ಬಿಡುವುದು ಎಷ್ಟು ಸರಿ? ಆದರೆ ಜನತೆ ಆ ರೀತಿ ವರ್ತಿಸುವುದು ಯಾವ ನ್ಯಾಯ? ಅಮೆರಿಕಾದ ಮಾಜಿ ರಾಷ್ಟ್ರಪತಿ ಬಿಲ್ ‌ಕ್ಲಿಂಟನ್‌ ಸಹ ಮೋನಿಕಾ ಪ್ರಕರಣದಲ್ಲಿ ಸಿಲುಕಿದ್ದರು, ಇದೇ ತರಹದ ಛದ್ಮ ನೈತಿಕತೆಯ ಹೆಸರಿನಲ್ಲಿ! ಬುರ್ಕಾ V/S ಬುರ್ಕಿನಿಯಾ

ಮಹಿಳೆಗೇ ಆಗಲಿ, ತನ್ನಿಷ್ಟದಂತೆ ಬಟ್ಟೆ ಧರಿಸುವ ಮೌಲಿಕ ಹಕ್ಕು ಇದ್ದೇ ಇದೆ. ಬಟ್ಟೆ ಧರಿಸಲೇಬೇಕೆಂದು ಸಮಾಜ ಅನಿವಾರ್ಯತೆ ತಂದೊಡ್ಡಿದೆ. ಇದನ್ನು ಸಭ್ಯತೆಯ ವಿಕಾಸ ಎನ್ನಿ ಅಥವಾ ದೇಹದ ಮೂಲಭೂತ ಅವಶ್ಯಕತೆ, ಆದರೆ ಬಟ್ಟೆ ಧರಿಸದಿರುವ ಹಕ್ಕನ್ನು ಪೂರ್ತಿಯಾಗಿ ಕಿತ್ತುಕೊಳ್ಳುವುದು, ಅದು ಕೂಡ ತಪ್ಪು ಪ್ರತಿಯೊಬ್ಬರ ಜೊತೆಯೂ ಕೆಲವು ಸಾಮಾನ್ಯ ವ್ಯಾವಹಾರಿಕ ನಿಯಮಗಳು ಅಂಟಿರುತ್ತವೆ. ಹೀಗಾಗಿಯೇ ಆಫೀಸಿಗೆ ಬಿಕಿನಿ ಧರಿಸಿ ಹೋಗುವುದು ಅಥವಾ ಸ್ವಿಮಿಂಗ್‌ ಪೂಲ್‌ಗೆ ಸೀರೆ ಸಮೇತ ದುಮುಕುವುದು ತಪ್ಪಾಗುತ್ತದೆ. ಮುಸ್ಲಿಂ ಮಹಿಳೆಯರು ಬೀಚ್‌ಗಳಲ್ಲಿ ಬುರ್ಕಾ ಮತ್ತು ಬಿಕಿನಿಗಳ ಮಿಶ್ರಣವಾದ ಬುರ್ಕಿನಿ ಧರಿಸಿ ಈಜಾಡುವುದು ಈಗ ಯೂರೋಪಿಯನ್ನರ ದೃಷ್ಟಿಯಲ್ಲಿ ಕಿಡಿ ಹೊತ್ತಿಸಿದೆ. ಏಕೆಂದರೆ ಇಂಥದ್ದನ್ನು ಧರಿಸಿದ ಮಹಿಳೆಗೆ ಅದು ಸ್ಕಿನ್‌ ಟೈಟ್‌ ಡ್ರೆಸ್‌ ಆಗಿ ಅಂಟಿದ್ದು, ಅದು ಅವಳ ಖಾಸಗಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದೋ ಅಲ್ಲವೋ ಎಂಬುದೀಗ ಅಲ್ಲಿ ಚರ್ಚಾಸ್ಪದವಾಗಿದೆ. ಫ್ರಾನ್ಸ್ ನ ಎಷ್ಟೋ ನಗರಗಳ ಮೇಯರ್‌ಗಳು ಇದರ ಕುರಿತು ಅಡ್ಡಿಪಡಿಸಿದ್ದಾರೆ ಹಾಗೂ ಒಂದು ಕೋರ್ಟ್‌ ಹೀಗೆ ಧರಿಸುವುದನ್ನು ಅಸಿಂಧು ಎಂದೂ ಸಾರಿದೆ. ಹೀಗಾಗಿ ಯೂರೋಪ್‌ನಲ್ಲಿ ಎಲ್ಲೆಡೆ ಬುರ್ಕಾ ಕುರಿತಾಗಿ ವಿವಾದ ಎದ್ದಿದೆ.

ಬುರ್ಕಾ ಧರಿಸುವುದು ಖಾಸಗಿ ಹಕ್ಕಾಗಿದ್ದರೆ, ಯಾರಿಗೂ ಅದರ ಬಗ್ಗೆ ಆಕ್ಷೇಪಣೆ ಇರುತ್ತಿರಲಿಲ್ಲ. ಹೆಂಗಸರಿಗೆ ತಾವು ಬುರ್ಕಾ ಧರಿಸುವುದರಿಂದ ಸುಂದರವಾಗಿ ಕಾಣುತ್ತಿದ್ದೇವೋ ಇಲ್ಲವೋ ಅಥವಾ ಅದೊಂದು ಫ್ಯಾಷನ್‌ ಸ್ಟೇಟ್‌ಮೆಂಟ್‌ ಇರಬಹುದೋ ಎಂಬಂತೆ ಬೀಚ್‌ನಲ್ಲಿ ಬುರ್ಕಾ ಧರಿಸುತ್ತಿಲ್ಲ.

ಅದು ಧಾರ್ಮಿಕ ಕಾನೂನು ಆಗಿರುವುದರಿಂದ ಬುರ್ಕಾ ಧರಿಸುವಿಕೆ ಅನಿವಾರ್ಯ ಆಗಿದೆ. ಆದರೆ ಮುಸ್ಲಿಂ ಹೆಂಗಸರು ಸ್ವತಂತ್ರ ಫ್ರಾನ್ಸ್ ನಲ್ಲಿದ್ದೂ ಸಹ ಮುಸ್ಲಿಂ ಕಾನೂನನ್ನೇ ಪರಿಪಾಲಿಸುತ್ತಿದ್ದಾರೆ.

ಬುರ್ಕಿನಿ ಬಿಕಿನಿಯ ಪರ್ಯಾಯ ಆಗಿರಬಹುದು, ಆದರೂ ಇದು ಹೆಂಗಸರ ಮೇಲೆ ಧಾರ್ಮಿಕ ಬಂಧನವಾಗಿದೆ. ಯಾವ ತರಹದಲ್ಲೂ ಇದನ್ನು ಹೆಂಗಸರ ಖಾಸಗಿ ಸ್ವಾತಂತ್ರ್ಯದ ಶ್ರೇಣಿಯಲ್ಲಿ ಇಡಲಾಗದು. ಇದನ್ನು ಧರಿಸದಿದ್ದರೆ ಅವಳ ಪರಿವಾರ ಮತ್ತು ಸಮಾಜ ಒಟ್ಟಾಗಿ ಅವಳಿಗೆ ಅಪಾಯ ತಂದೊಡ್ಡಬಹುದು. ಇಂದಿಗೂ ಉ.ಭಾರತದಲ್ಲಿ ಹೆಂಗಸು ಮುಖಕ್ಕೆ ಸೆರಗು ಹೊದ್ದು ಮಾತನಾಡದಿದ್ದರೆ ಅದನ್ನು ಅಶಿಷ್ಟತೆ ಎನ್ನುತ್ತಾರೆ. ಹಿಂದೆ ಒಂದು ಕಾಲವಿತ್ತು, ಆಗ ಭಾರತದ ಅನೇಕ ಪ್ರಾಂತ್ಯಗಳಲ್ಲಿ ಹೆಂಗಸರು ಮೇಲುಸ್ತ್ರ ಹೊದೆಯಲೇಬೇಕು ಎಂಬ ನಿಯಮವಿತ್ತು. ಈ ಕುರಿತಾಗಿ ಕೇರಳದಲ್ಲಿ ದೊಡ್ಡ ಆಂದೋಳನ ಉಂಟಾಯಿತು. ಇಂದು ಹೆಣ್ಣು ಮೇಲುವಸ್ತ್ರ ಹೊದೆಯದೆ ಬರಿದಾದ ಎದೆ ಪ್ರದರ್ಶಿಸುವ ಹಕ್ಕಿಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂದಿಗೂ ವಿವಾದ ನಡೆಯುತ್ತಲೇ ಇದೆ.

ಈಗ ಸವಾಲು ಎಂದರೆ, ಈ ತರಹದ ಅಡ್ಡಿ ಆಕ್ಷೇಪಣೆಗಳು ಕೇವಲ ಹೆಂಗಸರಿಗೆ ಮಾತ್ರ ಏಕೆ? ಗಂಡಸರಿಗೆ ಮಾತ್ರ ಬಲು ಕಡಿಮೆ ಆಕ್ಷೇಪಣೆಗಳಿರುತ್ತವೆ. ಅರು ಚಡ್ಡಿ ಧರಿಸಿ ಎಲ್ಲೆಡೆ ಓಡಾಡಬಹುದು, ಆದರೆ ಹೆಂಗಸರು ಮಾತ್ರ ಬುರ್ಕಾ ಧರಿಸಿಯೇ ಇರಬೇಕು. ಇದಕ್ಕೆ ಎಂಥ ಪ್ರಾಕೃತಿಕ, ವ್ಯವಾಹಾರಿಕ, ದೈಹಿಕ ಕಾರಣ ಇರಲು ಸಾಧ್ಯ? ಹೆಂಗಸರ ಮೇಲೆ ಇಷ್ಟೊಂದು ಒತ್ತಡದ ಹೇಳಿಕೆಗಳಾದರೂ ಏಕೆ? ಅವರು ರೆಜಿಮೆಂಟೇಶನ್‌ ಅಭ್ಯಾಸಕ್ಕೆ ಒಳಗಾಗಲಿ ಎಂಬುದು. ಬೇರೆಯವರು ಹೇಳಿದ್ದನ್ನು ಅವರು ಪಾಲಿಸಲಿ ಎಂಬುದು ಅಪೇಕ್ಷೆ. ಅದು ತಂದೆ, ಗಂಡ, ಮಗ, ಸಮಾಜ, ಧರ್ಮಾಧಿಕಾರಿ ಅಥವಾ ನಗರದ ಮೇಯರ್‌ ಯಾರಾದರೂ ಆಗಿರಬಹುದು. ಆದರೆ ಇವರಾರಿಗೂ ಹೆಂಗಸರಿಗೆ ಅವ್ಯವಹಾರಿಕ ಉಡುಗೆ ಧರಿಸುವಂತೆ ಒತ್ತಾಯಿಸುವ ನೈತಿಕ ಹಕ್ಕಿಲ್ಲ.

ಬುರ್ಕಿನಿ ಅಥವಾ ಬುರ್ಕಾ ಬ್ಯಾನ್‌, ಮಹಿಳೆಯರಿಗೆ ಸ್ವಾತಂತ್ರ್ಯ ಕೊಡಿಸುವ ಒಂದು ಹೊಸ ಹೆಜ್ಜೆ ಆಗಿದೆ. ಇದರಲ್ಲಿ ಕೆಲವು ಕಾನೂನಿನ ಕ್ರಮ ಅತಿ ಅನಿಸಿದರೂ, ಇದರ ಸಮರ್ಥನೆ ಅಗತ್ಯ ಆಗಬೇಕಿದೆ. ಏಕೆಂದರೆ ಬುರ್ಕಾ ಧರಿಸಬೇಕು ಎಂಬುದು ಮಹಿಳೆಯರ ಆಸೆಯಲ್ಲ, ಇದನ್ನು ಆ ಧರ್ಮದ ಕಂದಾಚಾರಿ ಧರ್ಮಾಧಿಕಾರಿಗಳು ಅವರ ಮೇಲೆ ಹೇರಿದ್ದು, ಉ. ಭಾರತದಲ್ಲಿ ಮಾವ ಮತ್ತು ಇತರ ಗಂಡಸರೆದುರು ಮನೆಯ ಸೊಸೆ ಮುಖಕ್ಕೆ ಸೆರಗು ಹೊದ್ದೇ ಮಾತನಾಡಬೇಕು ಎಂಬಂತೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ