ಪ್ರಜ್ಞಾ ಜೆಮ್ಸ್ ಜೈಪುರದ ಪವನ್ ಶರ್ಮಾ ಎಂತಹ ಆ್ಯಂಟಿಕ್ ಜ್ಯೂವೆಲರಿ ತಯಾರಿಸುತ್ತಿದ್ದಾರೆಂದರೆ, ಅವರಿಗೆ ಕೇವಲ ರಾಜಾಸ್ಥಾನದಿಂದ ಅಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಿಂದಲೂ ಭಾರಿ ಬೇಡಿಕೆ ಬರುತ್ತಿದೆ.
ಪವನ್ ಶರ್ಮ ಅವರ ಪ್ರಕಾರ, ಮಹಿಳೆಯರು ಯಾವಾಗಲೂ ತಮ್ಮ ಬಳಿ ಪಾರಂಪರಿಕ ಚಿನ್ನಾಭರಣಗಳ ಜೊತೆಗೆ, ತಾವು ವಿಭಿನ್ನವಾಗಿ ಕಾಣುವಂತಹ ಆಭರಣಗಳು ಇರಬೇಕೆಂದು ಅಪೇಕ್ಷಿಸುತ್ತಾರೆ. ಅಂತಹ ಆಭರಣಗಳೇ `ಆ್ಯಂಟಿಕ್ ಜ್ಯೂವೆಲರಿ’ ಎಂದು ಕರೆಯಿಸಿಕೊಳ್ಳುತ್ತವೆ.
ಜ್ಯೂವೆಲರಿ ಡಿಸೈನರ್
ರಾಧಿಕಾ ಪ್ರಕಾರ, ಆ್ಯಂಟಿಕ್ ಜ್ಯೂವೆಲರಿ ಭಾರತೀಯ ಪರಂಪರೆಯ ಜೊತೆಗೆ ನಮ್ಮ ನಾಗರಿಕತೆಯನ್ನು ಬಿಂಬಿಸುತ್ತವೆ. ಸಿಂಧೂ ನಾಗರಿಕತೆ, ಮೊಘಲ್ ಕಾಲದ ಆಭರಣಗಳ ಮಾತೇ ಬೇರೆ. ಬಹುಶಃ ಈಗಲೂ 20ರಲ್ಲಿ 19 ಜನರಿಗೆ ಆ್ಯಂಟಿಕ್ ಜ್ಯೂವೆಲರಿಗಳು ಇಷ್ಟವಾಗುತ್ತವೆ.
ಪವನ್ ಶರ್ಮ ಪ್ರಕಾರ, ಹಬ್ಬಗಳು, ಪಾರ್ಟಿ ಮತ್ತು ಮದುವೆಗಳಲ್ಲಿ ಈಗಲೂ ರಾಜವೈಭೋಗದ ಲುಕ್‌ಗಾಗಿ ಹೆಚ್ಚಿನ ಮಹಿಳೆಯರು ಆ್ಯಂಟಿಕ್ ಜ್ಯೂವೆಲರಿ ಧರಿಸಲು ಇಷ್ಟಪಡುತ್ತಾರೆ. ಆ್ಯಂಟಿಕ್ ಜ್ಯೂವೆಲರಿಗಳಲ್ಲಿ ರತ್ನಗಳನ್ನು ಅಳವಡಿಸಲಾಗಿರುತ್ತದೆ. ಬೆಲೆ ಬಾಳುವ ಲೋಹಗಳೆಂದರೆ ಚಿನ್ನ, ಬೆಳ್ಳಿ, ಪ್ಲಾಟಿನಂ ಮುಂತಾದ. ಕಡಿಮೆ ಬೆಲೆಯ ಲೋಹಗಳೆಂದರೆ ಕಬ್ಬಿಣ, ತಾಮ್ರ, ಅಲ್ಯುಮಿನಿಯಂ ಮುಂತಾದವು. ಇವುಗಳಲ್ಲಿ ಅಳವಡಿಸುವ ಬೆಲೆ ಬಾಳುವ ಹರಳುಗಳೆಂದರೆ ವಜ್ರ, ವೈಢೂರ್ಯ, ಮಾಣಿಕ್ಯ, ನೀಲ, ಮುತ್ತು. ಸಾಧಾರಣ ಬೆಲೆ ಬಾಳುವ ಹರಳುಗಳಲ್ಲಿ ಗೋಮೇಧಿಕಾ, ಹಸ್ತಿದಂತ, ಆ್ಯಂಬರ್, ಮೂಂಗಾ, ಅಮೆರಿಕನ್ ಡೈಮಂಡ್ ಮುಂತಾದವು ಸೇರಿವೆ.
ಸುಧಾ ಅವರಿಗೆ ಆರಂಭದಿಂದಲೇ ಆ್ಯಂಟಿಕ್ ಜ್ಯೂವೆಲರಿ ಇಷ್ಟ. ಆ್ಯಂಟಿಕ್ ಜ್ಯೂವೆಲರಿ ಧರಿಸುವುದರಿಂದ ರಾಜಕಳೆ ಬರುತ್ತದೆ. ಆ್ಯಂಟಿಕ್ ಜ್ಯೂವೆಲರಿ ಪರಂಪರೆ ಈಗಲೂ ಮುಂದುವರೆದಿದೆ.
ಪ್ರಜ್ಞಾ ಅವರಿಗೆ ವಜ್ರ, ಮುತ್ತು, ಮೂನ್ ಸ್ಟೋನ್ ಹಾಗೂ ಪ್ಲಾಟಿನಂ ಇಷ್ಟ. ಅವರು ತಮ್ಮ ಮದುವೆಯ ಸಂದರ್ಭದಲ್ಲಿ ವಜ್ರ, ಮಾಣಿಕ್ಯ, ಮುತ್ತು, ಮೂನ್ ಸ್ಟೋನ್‌ನ ಪಾರಂಪರಿಕ ಆಭರಣಗಳನ್ನು ಧರಿಸಿದರು. ಅವರು ಈಗಲೂ ರಾಜವೈಭದ ಡಿಸೈನ್‌ಗಳ ಆಭರಣಗಳನ್ನೇ ಧರಿಸುತ್ತಾರೆ.
ಈಗ ಆ್ಯಂಟಿಕ್ ಜ್ಯೂವೆಲರಿಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ ಹಾಗೂ ನಿಮಗೆ ಬೇಕಾದ ಡಿಸೈನ್‌ಗಳಲ್ಲಿ ತಯಾರಿಸಿಕೊಳ್ಳಲೂಬಹುದು. ಆ್ಯಂಟಿಕ್ ಜ್ಯೂವೆಲರಿಗಳನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಅಂತಹ ಜ್ಯೂವೆಲರಿಗಳ ಬಗ್ಗೆ ತಿಳಿಯೋಣ.
ಆರ್ಟ್ ನೋವ್
ಈ ಜ್ಯೂವೆಲರಿಗಳು ಭಾರಿ ಪ್ರಮಾಣದಲ್ಲಿ ಸಿದ್ಧವಾದವು. ಈ ಡಿಸೈನ್‌ಗಳಲ್ಲಿ ಪಾತರಗಿತ್ತಿಗಳು ಮತ್ತು ಡ್ರ್ಯಾಗನ್‌ಗಳು ವಿಶಿಷ್ಟವಾಗಿದ್ದವು. ಆದರೆ ಈ ಕಲೆ ಮಹಾಯುದ್ಧದ ಸಂದರ್ಭದಲ್ಲಿ ಹೆಚ್ಚು ಕಡಿಮೆ ನಶಿಸಿ ಹೋಯಿತು. ಆ ಸಮಯದಲ್ಲಿ ಓಪ್ ಮತ್ತು ಮೂನ್ ಸ್ಟೋನ್ ಸಾಕಷ್ಟು ಜನಪ್ರಿಯವಾಗಿದ್ದ. ಪೆಂಡೆಂಟ್, ಹಾರ ಹಾಗೂ ಕೂದಲಿಗಾಗಿ ಕ್ಲಿಪ್ ಜ್ಯೂವೆಲರಿಯ ರೂಪದಲ್ಲಿ ಅವುಗಳನ್ನು ಬಳಸಲಾಗುತ್ತಿತ್ತು. ಅವು ಈಗಲೂ ಚಾಲ್ತಿಯಲ್ಲಿ ಇವೆ.
ಬೀಡ್ ಅಂದರೆ ಮುತ್ತು
ಸಿಂಧೂ ನಾಗರಿಕತೆಯ ಕಾಲದಿಂದಲೇ ಮುತ್ತಿನ ಆಭರಣಗಳು ಮಹಿಳೆಯರನ್ನು ಆಕರ್ಷಿಸುತ್ತಲೇ ಬಂದಿವೆ. ಮುತ್ತುಗಳನ್ನು ಹಲವು ಲೋಹಗಳೊಂದಿಗೆ ಅಂದರೆ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಆನೆ ದಂತಗಳೊಂದಿಗೆ ಉಪಯೋಗಿಸುವುದರ ಜೊತೆ ಜೊತೆಗೆ ಭಾರಿ ಜ್ಯೂವೆಲರಿಗಳನ್ನು ಕೂಡ ಮುತ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಇಂದಿಗೂ ಮಹಿಳೆಯರು ಮುತ್ತುಗಳಿಂದ ತಯಾರಾದ ತಮ್ಮ ಮೆಚ್ಚಿನ ಜ್ಯೂವೆಲರಿಗಳನ್ನು ಆರಿಸುತ್ತಾರೆ. ಹೊಸ ಡಿಸೈನುಗಳಲ್ಲಿ ಹೈದರಾಬಾದಿ ಮುತ್ತಿನ ಚಂದನಹಾರ ಮತ್ತು ರಾಣಿಹಾರಗಳಿಗೆ ಯಾವುದೇ ಸರಿಸಾಟಿಯಿಲ್ಲ.
ವಿಕ್ಟೋರಿಯನ್ ಮಹಾರಾಣಿ
ವಿಕ್ಟೋರಿಯಾ ರಾಣಿಯ ಕಾಲದಲ್ಲಿ ಹಲವು ಹೊಸ ಶೈಲಿಯಲ್ಲಿ ಆಭರಣಗಳನ್ನು ತಯಾರಿಸಲಾಗಿತ್ತು. ಆ ಕಾಲದಲ್ಲಿ ಬಂಗಾರದಲ್ಲಿ ಬ್ರೊಚೆಸ್, ಕಡಗ, ಬಳೆಗಳನ್ನು ತಯಾರಿಸಿ ಅವನ್ನು ಗಾರ್ನೆಟ್, ಮೂಂಗ್, ಆಮೆ ಚಿಪ್ಪು, ಆನೆ ದಂತ, ಬೀಜ್ ಮುಂತಾದವುಗಳಿಂದ ಅಲಂಕರಿಸಲಾಗುತ್ತಿತ್ತು,.
ವಧುವಿಗಾಗಿ ಮದುವೆಗಾಗಿ
ಯುವತಿಯರು ವಿಶೇಷ ಬಗೆಯ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಪೂಜಾ ಅವರು `ಜೋಧಾ ಅಕ್ಬರ್’ ಚಲನಚಿತ್ರ ನೋಡಿದರು. ತಾನೂ ಕೂಡ ಅಂತಹ ಆಭರಣಗಳನ್ನು ಧರಿಸಿಯೇ ವಧುವಾಗಲು ನಿರ್ಧರಿಸಿದರು.
ಐಶ್ವರ್ಯಾ ರೈ ಧರಿಸಿದ್ದ ಜ್ಯೂವೆಲರಿ ರಾಜವೈಭವವನ್ನು ಬಿಂಬಿಸುವಂತಿತ್ತು. ಹೀಗಾಗಿ ನನ್ನ ಮದುವೆಯಲ್ಲೂ ಗೋಲಾಕಾರದ ನತ್ತು ವಜ್ರ ಮತ್ತು ಪೋಲಕಿ, ಮಾಣಿಕ್ಯ, ಚಿನ್ನದ ಸೀತಾಹಾರ, ಕಡಗ, ಸೊಂಟಪಟ್ಟಿ, ಶಿರೋಮಣಿ ಮುಂತಾದವನ್ನು ಧರಿಸಿದ್ದೆ ಎನ್ನುತ್ತಾರೆ.
ಈಗಲೂ ಈ ಸಾಲಿನಲ್ಲಿ ಲೋಹಗಳ ಬಗ್ಗೆ ವಿಶೇಷ ಗಮನಹರಿಸಲಾಗುತ್ತದೆ. ಯಾವ ಲೋಹ ಬೆಳೆಬಾಳುತ್ತೋ, ಸೌಂದರ್ಯ ಬೆಳಗಿಸುವುದರ ಜೊತೆ ಜೊತೆಗೆ ಅದು ಭವಿಷ್ಯದ ಉಳಿತಾಯದ ಇಡುಗಂಟು ಕೂಡ ಆಗಿರಬೇಕು. ಹೀಗಾಗಿ ಇದರಲ್ಲಿ ಚಿನ್ನ ಬೆಳ್ಳಿ, ಪ್ಲಾಟಿನಂ, ವಜ್ರ, ಮಾಣಿಕ್ಯ ಮತ್ತು ಬೆಲೆಬಾಳುವ ರತ್ನಗಳ ಬಗ್ಗೆಯೇ ಆದ್ಯತೆ ಕೊಡಲಾಗುತ್ತದೆ.
ಎಡ್ವರ್ಡಿಯನ್
ಈ ಆಭರಣಗಳು ಎಡ್ವರ್ಡ್ ಕಿಂಗ್‌ನ ಸಮಯದಲ್ಲಿ ಅತ್ಯಂತ ಕಡಿಮೆ ಅವಧಿಗಾಗಿ ಜನಪ್ರಿಯವಾಗಿದ್ದವು. ಅದರಲ್ಲಿ ರತ್ನ, ವಜ್ರಗಳು ನೀಲಮಣಿ ಮುಂತಾದವುಗಳಿದ್ದವು. ಅಂತಹ ಆಭರಣಗಳು ಅತ್ಯಂತ ತೆಳ್ಳಗಿನ ಸೆಟಿಂಗ್‌ನಲ್ಲಿ ಸೆಟ್, ಮುಕುಟ, ಕೊರಳ ಹಾರ, ಜುಮುಕಿಗಳನ್ನು ತಯಾರಿಸಲಾಗುತ್ತಿತ್ತು.
ಆರ್ಟ್‌ಡೆ ಕೊ 1960 ರಿಂದ 1970ರ ದಶಕದಲ್ಲಿ ಇದ್ದ ಯಾವುದೇ ಡಿಸೈನ್‌ಗಳು ಜ್ಯಾಮಿತಿ ಡಿಸೈನ್‌ನಲ್ಲಿದ್ದವು. ಅದರಲ್ಲಿ ಬೋಲ್ಡ್, ಕೆಂಪು, ನೀಲಿ, ಹಳದಿ ಮತ್ತು ಗುಲಾಬಿ ವರ್ಣದ ರತ್ನಗಳಿದ್ದವು. ಅವನ್ನು ಚಿನ್ನ ಬೆಳ್ಳಿಯಿಂದ ತಯಾರಿಸಲಾಗುತ್ತಿತ್ತು.
ಆನೆ ದಂತ ಇದಕ್ಕೆ ಪುರಾತನ ಕಾಲದಿಂದಲೇ ಬೇಡಿಕೆ ಇದೆ. ಗುಜರಾತ್, ಹಿಮಾಚಲಪ್ರದೇಶ, ಪಂಜಾಬ್ ಮತ್ತು ಬಂಗಾಳದಲ್ಲಿ ಈಗಲೂ ಬೇಡಿಕೆ ಇದೆ.
ಈ ರಾಜ್ಯಗಳಲ್ಲಿ ಮದುವೆಯಂತಹ ಶುಭ ಸಂದರ್ಭದಲ್ಲಿ ವಧುವಿಗೆ ಆನೆ ದಂತದ ಬಳೆಗಳನ್ನು ತೊಡಿಸಲಾಗುತ್ತದೆ. ಇದರ ಹಿಂದಿರುವ ನಂಬಿಕೆಯೆಂದರೆ, ಅವರ ಭಾವೀ ಜೀವನ ಆನೆಯ ದಂತದ ಹಾಗೆ ಬಲಿಷ್ಠವಾಗಿರಬೇಕು ಹಾಗೂ ಎಂತಹುದೇ ವಿಷಮ ಸ್ಥಿತಿಯಲ್ಲೂ ಕುಟುಂಬ ಸ್ಥಿರವಾಗಿರಬೇಕು ಎನ್ನುವುದಾಗಿರುತ್ತದೆ. ಆನೆ ದಂತದ ಬಳೆಗಳನ್ನು ಹೊಸ ಹೊಸ ವಿನ್ಯಾಸದಲ್ಲಿ ನವನವೀನ ಬಣ್ಣಗಳಲ್ಲಿ ಮಾರುಕಟ್ಟೆಗೆ ತಯಾರಾಗುತ್ತಿದೆ.
ಕಶೀದಾಕಾರಿ ಡಿಸೈನ್
ಕಶೀದಾಕಾರಿ ಡಿಸೈನ್‌ಗಳನ್ನು ಕೇವಲ ಬೆಳ್ಳಿ ಆಭರಣಗಳ ಮೇಲೆ ಮಾತ್ರ ಮಾಡಲಾಗುತ್ತದೆ. ಅದು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಒಂದೊಂದು ಪೀಸ್ ಮೇಲೆ ಡಿಸೈನ್ ಮಾಡಲು ಸಾಕಷ್ಟು ಸಮಯ ತಗುಲುತ್ತದೆ. ಇವುಗಳ ಬೆಲೆ ಬೆಳ್ಳಿಯ ಹೊರತಾಗಿ ಸೂಕ್ಷ್ಮ ಕಶೀದಾಕಾರಿಯನ್ನು ಕೂಡ ಅವಲಂಬಿಸಿರುತ್ತದೆ. ಭಾರತ, ಪೋರ್ಚುಗಲ್ ಮುಂತಾದ ದೇಶಗಳಲ್ಲಿ ಇದರ ಜನಪ್ರಿಯತೆ ಈಗಲೂ ಇದೆ.
ಮೀನಾಕಾರಿ : ಚಿನ್ನದಲ್ಲಿ ಹುದುಗಿಸಲಾದ ಅಮೂಲ್ಯ ನಗ ನಾಣ್ಯಗಳ ಆಸುಪಾಸು ಮಾಡುವ ಕಶೀದಾಕಾರಿಯನ್ನು `ಮೀನಾಕಾರಿ’ ಎಂದು ಹೇಳಲಾಗುತ್ತದೆ. ಅದರ ಸೌಂದರ್ಯ ಹೆಚ್ಚಿಸಲು ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ ಧಾತುಗಳ ಮೇಲೆ ಮಯೂರ ಅಥವಾ ಗಣೇಶನ ಆಕೃತಿ ಕೆತ್ತಿ ಕೆಂಪು, ಹಸಿರು, ನೀಲಿ ಬಣ್ಣಗಳಲ್ಲಿ ತಯಾರಿಸಲಾಗುತ್ತದೆ. ಮೀನಾಕಾರಿಯಲ್ಲಿ ಕೆಂಪು ಹಸಿರು ಬಣ್ಣದ ಹೂ ಬಳ್ಳಿಗಳನ್ನು ತಯಾರಿಸುವಿಕೆ ರಾಜಾಸ್ಥಾನದ ಜೋಧಪುರದಲ್ಲಿ ಆರಂಭವಾಗಿತ್ತು.
ಜಡ್ವಾ ಜ್ಯೂವೆಲರಿಗಳು
ಇದು ಮೊಘಲ್ ಕಾಲದಲ್ಲಿ ಹೆಚ್ಚು ಪ್ರಚಲಿತವಾಗಿತ್ತು. ರಾಜಾಸ್ಥಾನ, ಗುಜರಾತಿನ ಹೊರತಾಗಿ ಆಗ್ರಾ, ದೆಹಲಿಯಲ್ಲಿ ಚಿನ್ನ ಬೆಳ್ಳಿಯಿಂದ ತಯಾರಿಸಿದ ಜಡ್ವಾ ಜ್ಯೂವೆಲರಿಗಳು ಅತ್ಯುತ್ತಮ ಹಸ್ತಕಲೆಯ ಉತ್ಕೃಷ್ಟ ಮಾದರಿಗಳನ್ನು ನೋಡುವ ಅವಕಾಶ ದೊರೆಯುತ್ತದೆ. ಇದರಲ್ಲಿ ಪಾರಂಪರಿಕ ಡಿಸೈನುಗಳಲ್ಲಿ ವಜ್ರ ಮುತ್ತುಗಳು ಮಾಣಿಕ್ಯ, ನೀಲಮಣಿ, ಹವಳ ಇವನ್ನೆಲ್ಲ ಹುದುಗಿಸಿ ಆಭರಣವನ್ನು ಮತ್ತಷ್ಟು ಭಾರ ಮಾಡಲಾಗುತ್ತದೆ.
ಇವುಗಳ ಹೊರತಾಗಿ ಪಾರಂಪರಿಕ ಜ್ಯೂವೆಲರಿಗಳಲ್ಲಿ ನವರತ್ನ, ಪೋಲ್ಕಿ, ಸಿಲ್ವರ್, ಸ್ಟೋನ್ ಹಾಗೂ ಟ್ರೈಬಲ್ ಜ್ಯೂವೆಲರಿ ಮುಂತಾದವು ಪ್ರಚಲಿತಾಗಿವೆ.
ಆ್ಯಂಟಿಕ್ ಜ್ಯೂವೆಲರಿಗಳು ಬಾಲಿವುಡ್ ತಾರೆಯರಿಗೆ ಅದರಲ್ಲೂ ವಿಶೇಷವಾಗಿ ಐಶ್ವರ್ಯಾ ರೈ, ರೇಖಾ, ಶಿಲ್ಪಾ ಶೆಟ್ಟಿ, ಕರೀನಾ ಕಪೂರ್ ಮುಂತಾದವರಿಗೆ ಇಷ್ಟವಾಗುತ್ತಿವೆ.
ಅಂದಹಾಗೆ ದುಬಾರಿ ಆ್ಯಂಟಿಕ್ ಜ್ಯೂವೆಲರಿಗಳನ್ನು ಖರೀದಿಸಲು ಒಂದು ಸಲ ಯೋಚಿಸಬೇಕಾಗುತ್ತದೆ. ಆದರೆ ನಿಮಗೆ ಆಸಕ್ತಿ ಇದ್ದರೆ ಗೆಜ್ಜೆ, ಜುಮಕಿ, ಬಳೆಗಳು, ಕೊರಳಹಾರ, ಬೈತಲೆ ಬೊಟ್ಟು ಮುಂತಾದವುಗಳನ್ನು ಖರೀದಿಸಿ ನಿಮ್ಮ ಆಭರಣ ಬಾಕ್ಸ್ ನಲ್ಲಿ ಕಾಪಾಡಿಕೊಳ್ಳಬಹುದು.