ಚೆಕ್‌ನ್ನು ತಪ್ಪು ತಪ್ಪಾಗಿ ಬರೆಯುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಈಗ ತೀವ್ರವಾಗಿ ಆಕ್ಷೇಪಿಸುತ್ತದೆ. 2010ರ ಡಿಸೆಂಬರ್‌ 1ರ ನಂತರ ತಪ್ಪಾದ ಚೆಕ್‌ನ್ನು ಇಷ್ಯು ಮಾಡುವುದು, ಚೆಕ್‌ನಲ್ಲಿ ತಿದ್ದುಪಡಿ ತೋರಿಸಿದರೆ ಅದನ್ನು ತಿರಸ್ಕರಿಸ (ಡಿಸ್‌ ಆನರ್‌)ಲಾಗುತ್ತದೆ, ಈ ರೀತಿ ತಿದ್ದಿದ ಕಡೆ ಚೆಕ್‌ ಕೊಟ್ಟ ವ್ಯಕ್ತಿ ಸಹಿ ಮಾಡಿದ್ದರೂ ಸಹ ಅದು ಸಿಂಧುವಾಗುವುದಿಲ್ಲ. ಯಾವುದೇ ಬ್ಯಾಂಕಿನಿಂದ ಚೆಕ್‌ ಬುಕ್‌ ಜಾರಿಗೊಳಿಸಿದ್ದರೆ, ನಿಮ್ಮ ಖಾತೆಯಲ್ಲಿ ಕನಿಷ್ಠ ರೂ.1000 ಬ್ಯಾಲೆನ್ಸ್ ಇರಿಸಿರಲೇಬೇಕು. ಎಲ್ಲಾ ಶಾಖೆಗಳೂ ಕಂಪ್ಯೂಟರೈಸ್ಡ್ ಆಗಿರುವುದರಿಂದ ಸಿಸ್ಟಮ್ ನಿಮಗೆ ಪೆನಾಲ್ಟಿ ಹೇರುತ್ತದೆ. ಇದನ್ನು ಹೊರತುಪಡಿಸಿ ಚೆಕ್‌ ಮಾಧ್ಯಮದಿಂದ ಕೊಡುಕೊಳ್ಳುವಿಕೆಯ ಸಂದರ್ಭದಲ್ಲಿ ಈ ಕೆಳಗಿನ ವಿಷಯಗಳನ್ನು ನೆನಪಿಸಿಕೊಳ್ಳಿ :

ಖಾತೆಯಲ್ಲಿ ಅಗತ್ಯದ ಹಣವಿರಲಿ

ವೈಯಕ್ತಿಕ ಚೆಕ್‌ ಕುರಿತಾಗಿ ಬ್ಯಾಂಕುಗಳಿಗೆ ಅನೇಕ ತೊಂದರೆಗಳು ಎದುರಾಗುತ್ತವೆ. ಇದರಲ್ಲಿ ಎಷ್ಟೋ ಸಲ ಚೆಕ್‌ ಕೊಡುವ ವ್ಯಕ್ತಿಯ ವ್ಯಯಕ್ತಿಕ ಖಾತೆಯಲ್ಲಿ ಸಾಕಷ್ಟು ಹಣವೇ ಇರುವುದಿಲ್ಲ. ಇಂಥ ಚೆಕ್‌ ಪಡೆದವರು ಅದನ್ನು ತಮ್ಮ ಖಾತೆಯ ಬ್ಯಾಂಕಿಗೆ ನೀಡಿದಾಗ, ಅದು ಮಾನ್ಯತೆ ಪಡೆಯದೆ ಬೌನ್ಸ್ ಆಗುತ್ತದೆ. ಹೀಗಾದಾಗ ಚೆಕ್‌ ನೀಡಿದವರು ಮತ್ತು ಪಡೆದವರು ಇಬ್ಬರಿಗೂ ಬ್ಯಾಂಕ್‌ ದಂಡ  ಹೇರುತ್ತದೆ. ಅನಗತ್ಯವಾಗಿ ಇಬ್ಬರೂ ಹಣ ಕಳೆದುಕೊಳ್ಳುವಂತೆ. ಆಗುತ್ತದೆ. ಇದರ ಜೊತೆ ಚೆಕ್‌ ಈ ರೀತಿ ಡಿಸ್ ಆನರ್‌ ಆದರೆ, ಅದು ಅಪರಾಧ ಎನಿಸುತ್ತದೆ. ಆಗ ಚೆಕ್‌ ಪಡೆದರು, ಚೆಕ್‌ ನೀಡಿದರ ವಿರುದ್ಧ ಕೇಸ್‌ ಹೂಡಬಹುದು. ಹೀಗಾಗಿ ವೈಯಕ್ತಿಕ ಚೆಕ್‌ ನೀಡುವಾಗ, ತಮ್ಮ ಖಾತೆಯಲ್ಲಿ ಅಷ್ಟು ಹಣ ಬ್ಯಾಲೆನ್ಸ್ ಇದೆ ತಾನೇ ಎಂದು 2 ಸಲ ವಿವೇಚಿಸಿ ನಂತರ ಅದನ್ನು ಇನ್ನೊಬ್ಬರ ಹೆಸರಿಗೆ ನೀಡಬೇಕು.

ಇತ್ತೀಚೆಗಷ್ಟೆ ಈ ಕುರಿತಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌, ಖಾತೆಯಲ್ಲಿ ಅಗತ್ಯದ ಹಣ ಇಲ್ಲದ ಕಾರಣಕ್ಕೆ ವ್ಯಕ್ತಿಯೊಬ್ಬನ ಚೆಕ್ ಸತತ 4 ಸಲ ಬೌನ್ಸ್ ಆದರೆ, ಬ್ಯಾಂಕ್‌ ಅಂಥ ವ್ಯಕ್ತಿಯ ಖಾತೆಯನ್ನೇ ಶಾಶ್ವತವಾಗಿ ರದ್ದುಪಡಿಸುವಂತೆ ಹೇಳಿದೆ! ಹೀಗೆ ಮಾಡುವುದರಿಂದ ವೈಯಕ್ತಿಕ ಖಾತೆದಾರರು, ಚೆಕ್‌ನ್ನು ಕೊಟ್ಟುತೆಗೆದುಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗುತ್ತದೆ. ಯಾವುದೋ ಹಳೆಯ ತಾರೀಖಿನ ಚೆಕ್‌ಗಳನ್ನೂ ಬ್ಯಾಂಕ್‌ ಸ್ವೀಕರಿಸುವುದಿಲ್ಲ. ಏಕೆಂದರೆ ಅಂಥ ಖಾತೆಗಳಲ್ಲಿ ಇಂದಿನ ತಾರೀಖಿಗೆ ಬೇಕಾದ ಹಣದ ಬಾಕಿ ಇರುತ್ತದೆಂಬ ಗ್ಯಾರಂಟಿ ಏನೂ ಇಲ್ಲ.

ಓವರ್ರೈಟಿಂಗ್ಮಾಡಬೇಡಿ

2010ರ ಡಿಸೆಂಬರ್‌ 1ರ ನಂತರ ಚೆಕ್‌ನಲ್ಲಿ ಯಾವುದೇ ತಿದ್ದುಪಡಿ, ಹಣದ ಮೊತ್ತದಲ್ಲಿ ಬದಲಾಣೆ, ಯಾರಿಗೆ ಚೆಕ್‌ ಕೊಡಬೇಕಿದೆಯೋ ಆ ಹೆಸರಿನ ಸ್ಪೆಲ್ಲಿಂಗ್‌ನಲ್ಲಿ ತಿದ್ದುಪಡಿ, ಓವರ್‌ ರೈಟಿಂಗ್‌, ಕ್ರಾಸ್ಡ್ ಚೆಕ್‌ನ್ನು ಕ್ರಾಸ್‌ ತೆಗೆದುಹಾಕಲು ತಿದ್ದುಪಡಿ ಇತ್ಯಾದಿಗಳೇನೇ ಇರಲಿ, ಆ ಜಾಗದಲ್ಲಿ ಚೆಕ್‌ ನೀಡುವವರು ಸಹಿ ಮಾಡಿದ್ದರೂ ಸಹ, ಮಾನ್ಯತೆ ಪಡೆಯವುದು.

ಭಾರತೀಯ ರಿಸರ್ವ್ ‌ಬ್ಯಾಂಕ್‌ ತಿಳಿಸಿರುವುದೆಂದರೆ, ಯಾವ ಚೆಕ್‌ಗಳು ಇಮೇಜ್‌ ಆಧಾರಿತ ಸೀಟಿ ಎಸ್‌ (ಚೆಕ್‌ ಟ್ರಂಕೇಶನ್ ಸಿಸ್ಟಂ) ವಿಧಾನದಲ್ಲಿ ಕ್ಲಿಯರ್‌ ಆಗುತ್ತವೆ, ಅಂಥ ಚೆಕ್‌ಗಳ ಮೇಲೆ ಬಿಲ್‌ಕುಲ್‌ ಓವರ್‌ ರೈಟಿಂಗ್‌ ಮಾಡುವಂತಿಲ್ಲ. ಹೀಗಾಗಿ ಚೆಕ್ ತುಂಬಿಸುವಾಗ ಅಂಕಿ ಸಂಖ್ಯೆ, ಅಕ್ಷರಗಳಲ್ಲಿ ಬಿಡಿಸಿ ಬರೆಯುವಾಗ ಎಚ್ಚರವಾಗಿ ಇರಲೇಬೇಕು.

ಚೆಕ್ಕ್ರಾಸಿಂಗ್ಮಾಡುವಾಗ

ಚೆಕ್‌ ನೀಡುವಾಗ ನೀವು ಗಮನಿಸಲೇಬೇಕಾದ ವಿಷಯ ಎಂದರೆ, ಅದು ಬೇರರ್‌ಗೆ ನೀಡಲಿರುವ ಚೆಕ್ಕೋ ಅಥವಾ ಅಕೌಂಟ್ ಪೇಯಿಗೋ ಎಂಬುದು. ಬೇರರ್‌ ಚೆಕ್‌ ಎಂದರೆ, ಅದನ್ನು ಹೆಸರು ನಮೂದಿಸುವಲ್ಲಿ ಕ್ರಾಸ್‌ ಮಾಡುವಂತಿಲ್ಲ. ಇದನ್ನು ಯಾವ ವ್ಯಕ್ತಿಯ ಹೆಸರಿಗೆ ಬರೆದು ಕೊಟ್ಟಿರುವಿರೋ, ಅಕಸ್ಮಾತ್‌ ಅವರು ಅದನ್ನು ಕಳೆದುಕೊಂಡು, ಬೇರೊಬ್ಬರು ಪಡೆದರೆ, ಸುಲಭವಾಗಿ ಅವರು ಅದರಿಂದ ಹಣ ಪಡೆಯಬಹುದು. ಅಂದರೆ ಬೇರರ್‌ ಚೆಕ್‌ ಯಾರ ಬಳಿ ಇರುತ್ತದೋ, ಕಷ್ಟವಿಲ್ಲದೆ ಅವರು ಹಣ ಪಡೆದುಕೊಳ್ಳುತ್ತಾರೆ.

ಇದರ ಬದಲಿಗೆ ಯಾರ ಖಾತೆಗೆ ಚೆಕ್‌ ಜಮಾ ಆಗಬೇಕಿದೆಯೋ, ಅವರ ಹೆಸರು ಬರೆದು, ಕ್ರಾಸಾಗಿ 2 ಗೆರೆ ಎಳೆದರೆ, ಆಗ ಮಾತ್ರ ಅದು ನೀವು ಯಾರ ಹೆಸರಿಗೆ ಚೆಕ್‌ ಕೊಟ್ಟಿರುವಿರೋ ಅವರ ಖಾತೆಗೆ ಮಾತ್ರ ಸೇರುತ್ತದೆ. ಕಳೆದರೆ ಬೇರೆಯವರು ಲಾಭ ಪಡೆಯುವಂತಿಲ್ಲ. ಚೆಕ್‌ ಮೇಲೆ `ಅಕೌಂಟ್‌ ಪೇಯೀ ಓನ್ಲಿ’ ಬರೆದುಬಿಟ್ಟರೆ ಇನ್ನೂ ಒಳ್ಳೆಯದು. ಹೀಗಾಗಿ ಅದನ್ನು ಪಡೆದವರು ತಮ್ಮ ಖಾತೆಗೆ ಅದನ್ನು ಜಮಾ ಮಾಡಿ, 3 ದಿನಗಳಲ್ಲಿ ಕ್ಲಿಯರ್‌ ಆದಾಗ ಮಾತ್ರ ಹಣ ಪಡೆಯಲು ಸಾಧ್ಯ. ಸುರಕ್ಷತೆಯ ದೃಷ್ಟಿಯಿಂದ ಚೆಕ್‌ ಕ್ರಾಸ್‌ ಮಾಡುವುದೇ ಸರಿ.

ಖಾಲಿ ಚೆಕ್ಮೇಲೆ ಸಹಿ

ಚೆಕ್‌ನಲ್ಲಿ ಹೆಸರು ತಾರೀಖು, ಹಣದ ಮೊತ್ತ ಇತ್ಯಾದಿ ಬರೆದು ಸಹಿ ಮಾಡದೆ ಹಾಗೆ ಖಾಲಿ ಇಡುವಂತಿಲ್ಲ. ಏಕೆಂದರೆ ಅಕಸ್ಮಾತ್ ಚೆಕ್‌ ಕಳೆದುಹೋದರೆ ಅದನ್ನು ಪಡೆದವರು ಅದರಿಂದ ರ್ದುಲಾಭ ಪಡೆಯಬಹುದು.

ಚೆಕ್‌ನಲ್ಲಿ ಹಣದ ಮೊತ್ತ ತುಂಬುವಾಗ ಚೆಕ್‌ನಲ್ಲಿ ಅಗತ್ಯವಿರುವ ಜಾಗದಲ್ಲಿ ಅಂಕಿಗಳಲ್ಲಿ ಮೊತ್ತ ತುಂಬಿದ ತಕ್ಷಣವೇ “/” ಎಂದು ಅಗತ್ಯವಾಗಿ ಗುರುತಿಸಬೇಕು. ಅಕ್ಷರಗಳಲ್ಲಿ ಹಣದ ಮೊತ್ತ ತಿಳಿಸಿದ ಬಳಿಕ `ಓನ್ಲಿ’ ಎಂದು ಬರೆಯಲು ಮರೆಯದಿರಿ. ಕೊಡುಕೊಳ್ಳುವಿಕೆಯ ರೆಕಾರ್ಡ್‌ ಪ್ರತಿ ಚೆಕ್‌ ಬುಕ್‌ನ ಮೊದಲನೇ ಸೆಕ್ಷನ್‌ನಲ್ಲಿ ಚೆಕ್‌ ಸಂಖ್ಯೆ, ಹಣದ ಮೊತ್ತ, ತಾರೀಖು, ಯಾರಿಗೆ ಚೆಕ್‌ ನೀಡಿದ್ದು ಇತ್ಯಾದಿಗಳ ವಿವರ ತುಂಬಿಸಿ ಈ ರೆಕಾರ್ಡ್‌ನ್ನು ಮೇಂಟೇನ್‌ ಮಾಡಿ. ಇದರಿಂದ ನಿಮ್ಮ ಚೆಕ್‌ ವಿಚಾರವಾಗಿ ಏನೇ ಎಡವಟ್ಟು ನಡೆದರೂ, ಸಮಸ್ಯೆಗಳಾದರೂ ಅದನ್ನು ಸರಿಪಡಿಸಲು ಒಂದು ಆಧಾರ ಇರುತ್ತದೆ. ಇಷ್ಟಲ್ಲದೆ ನಿಮ್ಮ ಪಾಸ್‌ ಬುಕ್‌ನ್ನು ಆಗಾಗ ಬ್ಯಾಂಕಿಗೆ ಹೋಗಿ ಅಪ್‌ಡೇಟ್‌ ಮಾಡಿಸಿ, ಎಸ್‌ಎಂಎಸ್‌ ಅಲರ್ಟ್‌ಗಳಿಂದಲೂ ಬ್ಯಾಲೆನ್ಸ್ ನೋಡಿಕೊಳ್ಳುತ್ತಿರಿ. ಪಾಸ್‌ ಬುಕ್‌ನ ವಿವರಣೆ, ನಿಮ್ಮ ಚೆಕ್‌ ಬುಕ್‌ನ ಈ ಪಟ್ಟಿಗೆ ಹೊಂದುತ್ತದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ.

ಪ್ರತಿ ಚೆಕ್‌ ಬುಕ್‌ನ ಕೊನೆಯಲ್ಲಿ (3-4 ಲೀಫ್‌ ಇರುವ ಮೊದಲೇ) ಹೊಸ ಚೆಕ್‌ ಬುಕ್‌ ಪಡೆಯಲು ಒಂದು ಸ್ಲಿಪ್‌ ಇರುತ್ತದೆ. ಇದನ್ನು ತುಂಬಿಸಿ, ನಿಮ್ಮ ಬ್ಯಾಂಕಿನಿಂದ ಸಕಾಲಕ್ಕೆ ಹೊಸ ಚೆಕ್‌ ಬುಕ್‌ ಪಡೆಯಿರಿ.

ಮಲ್ಟಿ ಸಿಟಿ ಚೆಕ್ಬುಕ್

ಇತ್ತೀಚೆಗೆ ಎಲ್ಲಾ ಕಡೆ ಮಲ್ಟಿಸಿಟಿ ಚೆಕ್‌ ಬುಕ್‌ ವಿತರಣೆಯಾಗುತ್ತಿದೆ. ಇದರಲ್ಲಿ ಖಾತೆದಾರರ ಹೆಸರು, ಅಕೌಂಟ್‌ ನಂಬರ್‌, ಪ್ರಿಂಟ್ ಮಾಡಿ ನೀಡಿರುತ್ತಾರೆ. ಇದರ ನೆರವಿನಿಂದ ಬೇರೆ ನಗರದಲ್ಲಿ ಇರುವವರಿಗೂ ನೀವು ಚೆಕ್‌ ನೀಡಬಹುದು. ಈ ಚೆಕ್‌ ಬುಕ್‌ಪಡೆದುಕೊಳ್ಳಲು ಕನಿಷ್ಠ 8-10 ದಿನ ತಗುಲುತ್ತದೆ.

ನಿಮಗೆ ಯಾರಾದರೂ ಚೆಕ್‌ ನೀಡಿದಾಗ ನೀವು ಯಾರಿಂದಲಾದರೂ ನಿಮ್ಮ ಹೆಸರಿಗೆ ಚೆಕ್‌ ಪಡೆದಾಗ, ನಿಮ್ಮ ಬ್ಯಾಂಕಿಗೆ ಅದನ್ನು ಜಮೆ ಮಾಡುವ ಮೊದಲು ನಿಮ್ಮ ಹೆಸರು, ದಿನಾಂಕ, ಮೊತ್ತ ಎಲ್ಲಾ ಸರಿಯಾಗಿದೆಯೇ ಎಂದು ಪರೀಕ್ಷಿಸಿ. ಏನಾದರೂ ತಿದ್ದುಪಡಿ ಇದ್ದರೆ ಅದನ್ನು ವಾಪಸ್ಸು ಕೊಟ್ಟು ಹೊಸತನ್ನು ಪಡೆಯಿರಿ. ನಿಮ್ಮ ಶಾಖೆಯಲ್ಲಿ ಅದನ್ನು ಡೆಪಾಸಿಟ್‌ ಮಾಡಿದ 3 ದಿನಗಳಲ್ಲಿ ನಿಮ್ಮ ಖಾತೆಗೆ ಆ ಹಣ ವರ್ಗ ಆಗಿರುತ್ತದೆ.

ಎಸ್‌. ಸುಶೀಲಾ ಶ್ರೀವತ್ಸ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ