ಸೆಕ್ಸ್, ಮಹಿಳೆ ಹಾಗೂ ಮೋಸ
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ಗಳ ಪ್ರೌಢ ಹಾಗೂ ವಯಸ್ಸಾದ ನ್ಯಾಯಾಧೀಶರು ಎಷ್ಟೋ ಬಾರಿ ಇಂತಹ ತೀರ್ಪು ಕೊಡುತ್ತಿದ್ದಾರೆ. ಅವರ ವಯಸ್ಸಿನವರು ಅಂತಹ ತೀರ್ಪು ಕೊಡಲಾಗುವುದಿಲ್ಲ. ಅವರು ವ್ಯವಹಾರಿಕ ಮತ್ತು ವ್ಯಕ್ತಿಗತ ಸ್ವಾತಂತ್ರ್ಯದ ಸರ್ಕಾರ ಮತ್ತು ಕಂದಾಚಾರಿಗಳ ಮಧ್ಯೆ ಕಲ್ಲಿನ ಗೋಡೆಯಾಗಿ ನಿಲ್ಲುವುದನ್ನು ಕಂಡಾಗ ಸುಖದಾಯಕ ಆಶ್ಚರ್ಯ ಉಂಟಾಗುತ್ತದೆ.
ಮುಂಬೈ ಹೈಕೋರ್ಟ್ನ ನ್ಯಾಯಾಧೀಶೆ ಮೃದುಲಾ ಭಟ್ನಾಗರ್ರವರು ಒಂದು ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ. ಒಬ್ಬ ಮಹಿಳೆಗೆ ಸೆಕ್ಸ್ ನ ಹಕ್ಕು ಇರುವಾಗ, ತಾಯಿಯಾಗಲು ಅಥವಾ ಆಗದಿರಲು ಹಕ್ಕು ಇರುವಾಗ, ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಇರುವಾಗ ವಿವಾಹಪೂರ್ವ ಸೆಕ್ಸ್ ಹೊಂದಲೂ ಸಹ ಹಕ್ಕಿದೆ. ಆದರೆ ಈ ಹಕ್ಕಿನ ಆಶ್ರಯದಲ್ಲಿ ಮೋಸದಿಂದ ಸಂಬಂಧ ಬೆಳೆಸುವ ಅಥವಾ ಬಲಾತ್ಕಾರದ ಆರೋಪ ಹೊರಿಸುವ ಹಕ್ಕಿಲ್ಲ. ಅವರೆದುರಿಗೆ ಒಬ್ಬ ಯುವಕನ ಕೇಸಿದೆ. ಆ ಯುವಕ ಒಬ್ಬ ಹುಡುಗಿಯೊಂದಿಗೆ ಹಲವಾರು ವರ್ಷಗಳ ಕಾಲ ಸೆಕ್ಸ್ ಸಂಬಂಧ ಇಟ್ಟುಕೊಂಡಿದ್ದ. ಆದರೆ ಅವಳನ್ನು ಮದುವೆ ಮಾಡಿಕೊಳ್ಳಲಿಲ್ಲ.
ತನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಮಾತು ಕೊಟ್ಟು ಅವನು ಸೆಕ್ಸ್ ಸಂಬಂಧ ಮಾಡಿದ್ದಾನೆ. ಅದು ಮೋಸದಿಂದ ನಡೆಸಿದ್ದಾಗಿದೆ. ಅದು ಬಲಾತ್ಕಾರ ಎಂದು ಹುಡುಗಿ ದೂರು ನೀಡಿದ್ದಾಳೆ. ಆ ಹುಡುಗನ ಮೇಲೆ ಪೊಲೀಸರು ಮೊಕದ್ದಮೆ ಹೂಡಿದರು. ಅದು ಹೈಕೋರ್ಟ್ಗೆ ಬಂದಿತ್ತು. ಸುಶಿಕ್ಷಿತಳಾದ ಈ ಹುಡುಗಿಗೆ ತಾನೇನು ಮಾಡುತ್ತಿದ್ದೇನೆಂದು ಅರಿವಿತ್ತು. ಅದು ಅವಳ ಶರೀರದ ಅವಶ್ಯಕತೆಯಾಗಿತ್ತು. ಅದಕ್ಕಾಗಿ ಅವಳು ಹುಡುಗನನ್ನು ದೋಷಿಯನ್ನಾಗಿ ಆರೋಪಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿತು.
ಸೆಕ್ಸ್ ಒಂದು ಪ್ರಾಕೃತಿಕ ಪ್ರಕ್ರಿಯೆಯಾಗಿದೆ. ಪ್ರತಿಯೊಬ್ಬರ ಶರೀರ ಇದನ್ನು ಅಪೇಕ್ಷಿಸುತ್ತದೆ. ಅವಿವಾಹಿತರು ಸೆಕ್ಸ್ ಹೊಂದುವುದನ್ನು ಅನೈತಿಕ ಅಥವಾ ಬಲಾತ್ಕಾರ ಎಂದು ತಿಳಿಯಲಾಗುವುದಿಲ್ಲ. ಸತತವಾಗಿ ನಡೆದ ಸಂಬಂಧ ಪರಸ್ಪರ ಒಪ್ಪಿಗೆಯ ಆಧಾರದಲ್ಲೇ ನಡೆಯುತ್ತದೆ. ಅದನ್ನು ತಪ್ಪೆನ್ನುವುದು ಖಂಡಿತಾ ಸರಿಯಲ್ಲ.
ಸೆಕ್ಸ್ ಸಂಬಂಧಗಳಲ್ಲಿ ಮಾಡುವ ಸಾಮಾಜಿಕ ತ್ಯಾಗಗಳು ವಾಸ್ತವದಲ್ಲಿ ಬಹಳ ಒತ್ತಡ ಉಂಟುಮಾಡುತ್ತವೆ. ಗರ್ಭಧಾರಣೆಯ ಸೂಚನೆ ಸಿಗುತ್ತಲೇ ಸಮಾಜ ನೈತಿಕತೆಯ ನಿಯಮ ಮತ್ತು ಕಾನೂನನ್ನು ಬದಲಿಸಲೇಬೇಕು. ಅಡಲ್ಟ್ರಿ ಅಂದರೆ ವಿವಾಹಬಾಹಿರ ಸಂಬಂಧಗಳನ್ನು ತಲಾಕ್ನ ಆಧಾರದಲ್ಲಿ ಅಥವಾ ಅಪರಾಧದಿಂದ ತೆಗೆಯಬೇಕು.
ನ್ಯಾಯಾಧೀಶೆ ಮೃದುಲಾ ಭಟ್ನಾಗರ್, ಸೆಕ್ಸ್ ಶರೀರದ ಅವಶ್ಯಕತೆಯಾಗಿದೆ. ಅವಿವಾಹಿತ ಮಹಿಳೆಯರಷ್ಟೇ ಅಲ್ಲ, ವಿವಾಹಿತೆಯರಿಗೂ ಇದು ಅನ್ವಯಿಸುತ್ತದೆ. ಪರಪುರುಷ ಅಥವಾ ಪರಸ್ತ್ರೀಯೊಂದಿಗೆ ಸಂಗಾತಿ ಸಂಬಂಧ ಇಟ್ಟುಕೊಂಡರೆ ವಿವಾಹದ ಸದೃಢತೆಗೆ ಹಾನಿಯುಂಟಾಗುತ್ತದೆ. ಆದರೆ ಇದು ಅನೈತಿಕವಲ್ಲ ಮತ್ತು ಸಾಮಾಜಿಕ ಪತನದ ಗುರುತೂ ಅಲ್ಲ ಎನ್ನುತ್ತಾರೆ.
ಒಂದುವೇಳೆ ವಿವಾಹಿತ ಮಹಿಳೆ ಅಥವಾ ಪುರುಷರ ಸಂಬಂಧ ಬೇರೆಲ್ಲಿಯಾದರೂ ಉಂಟಾದರೆ ಅದು ಸಾಮಾಜಿಕ ಅಥವಾ ಕಾನೂನಿನಂತೆ ಅಪರಾಧವಲ್ಲ. ಆದರೆ ಹಾಳಾಗುವ ಸ್ಥಿತಿಯಂತೂ ಖಂಡಿತಾ ಉಂಟಾಗುತ್ತದೆ. ಆದರೆ ಕುಡುಕರು, ಜಗಳಗಂಟಿಯರು, ದುಂದುವೆಚ್ಚ ಮಾಡುವ, ಸೋಮಾರಿ ಹೆಣ್ಣುಗಳಿಂದಲೂ ಮನೆಗಳು ಒಡೆಯುತ್ತವೆ. ಮತ್ತೆ ಹೊರಗಿನ ಸೆಕ್ಸ್ ಸಂಬಂಧಕ್ಕೆ ಏಕೆ ದೋಷ ಹೊರಿಸಬೇಕು?
ಬಹಳಷ್ಟು ಸಂದರ್ಭಗಳಲ್ಲಿ ಸೆಕ್ಸ್ ಸುಖ ಸಿಗದಿದ್ದುದರಿಂದ ಪುರುಷ ಅಥವಾ ಮಹಿಳೆ ಬಹಳಷ್ಟು ಜಿಗುಪ್ಸೆಗೊಳ್ಳುತ್ತಾರೆ. ಅವರು ಇಡೀ ದಿನ ಒತ್ತಡದಲ್ಲಿರುತ್ತಾರೆ. ಯಾರೊಂದಿಗೂ ತಮ್ಮ ನೋವನ್ನು ಶೇರ್ ಮಾಡಿಕೊಳ್ಳುವುದಿಲ್ಲ. ಸೆಕ್ಸ್ ಔಷಧಿಗಳ ಭಾರಿ ಮಾರಾಟ ಕೆಲವು ಪುರುಷರು ತಮ್ಮನ್ಮು ಬಲಹೀನರೆಂದು ತಿಳಿದಿರುವುದು ಅವರ ಪತ್ನಿ ಗಂಡನ ಬಗ್ಗೆ ಅಸಂತೋಷದಿಂದ ಇರುವುದನ್ನು ಸೂಚಿಸುತ್ತದೆ.
ಮದುವೆಯೆಂಬ ವ್ಯವಸ್ಥೆ ಪುರುಷ ಹಾಗೂ ಮಹಿಳೆಯರ ಪರಸ್ಪರ ಸಹಕಾರ ಮತ್ತು ಮಕ್ಕಳ ಯೋಗಕ್ಷೇಮಕ್ಕಾಗಿ ಅತ್ಯವಶ್ಯಕ. ಪತಿ ಪತ್ನಿಯರಲ್ಲಿ ಯಾರೇ ಆದರೂ ಬೇರೊಬ್ಬರ ಬಗ್ಗೆ ನಿಷ್ಠೆ ಇಟ್ಟುಕೊಳ್ಳಬಾರದು ಎಂದು ಶರತ್ತು ವಿಧಿಸಿದೆ. ಆದರೆ ಬೇರೊಬ್ಬರ ಬಗ್ಗೆ ಇರುವ ಆಕರ್ಷಣೆಯನ್ನು ಮದುವೆಯ ಅಡಿಪಾಯ ಒಡೆಯುತ್ತದೆ ಎಂದು ತಿಳಿಯದೆ, ಗೋಡೆಯಲ್ಲುಂಟಾದ ಬಿರುಕೆಂದು ತಿಳಿಯಬೇಕು. ಅದನ್ನು ಸರಿಪಡಿಸುವುದು ಕಷ್ಟವೇನಲ್ಲ. ಒಂದುವೇಳೆ ಪರಸ್ಪರ ಒಪ್ಪಿಗೊಂದಿಗೆ ಏರ್ಪಾಡಾದ ಸಂಬಂಧಗಳನ್ನು ಅಪರಾಧವೆಂದು ತಿಳಿದರೆ ಬಹಳಷ್ಟು ಕುಟುಂಬಗಳು ಛಿದ್ರವಾಗುತ್ತವೆ.
ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ರ ಪತ್ನಿ ಹಿಲೆರಿ ಕ್ಲಿಂಟನ್ ಮೋನಿಕಾ ಲೆವೆನ್ಸ್ಕಯೊಂದಿಗಿನ ತಮ್ಮ ಪತಿಯ ಸಂಬಂಧಗಳನ್ನು ಅಪರಾಧವೆಂದು ತಿಳಿದಿದ್ದರೆ ಇಬ್ಬರ ಕೆರಿಯರ್, ಮನೆ, ರಾಜಕೀಯ ಮಹತ್ವಾಕಾಂಕ್ಷೆಗಳು ಚೂರುಚೂರಾಗಿರುತ್ತಿದ್ದವು. ನ್ಯಾಯಾಧೀಶೆ ಮೃದುಲಾ ಭಟ್ನಾಗರ್ರ ತೀರ್ಪು ಹುಡುಗಿಯ ವಿರುದ್ಧವಾಗಿದ್ದರೂ ಮಹಿಳೆಯರ ಪರವಾಗಿಯೇ ಇದೆ. ಏಕೆಂದರೆ ಒಂದುವೇಳೆ ಪರಸ್ಪರ ಒಪ್ಪಿಗೆಯಿಂದ ನಡೆಸಿದ ಪ್ರೀತಿಯನ್ನೂ ಅಪರಾಧವೆಂದು ತಿಳಿದರೆ ಪುರುಷರಲ್ಲದೆ ಮಹಿಳೆಯರ ಮೇಲೂ ಮೊಕದ್ದಮೆ ಹಾಕಲಾಗುತ್ತದೆ. ಖಾಪ್ ಪಂಚಾಯತ್ ಕಾನೂನುಗಳು ಹಾಗೂ ಇಸ್ಲಾಮಿಕ್ಕಾನೂನುಗಳಲ್ಲಿ ಹೀಗೆ ನಡೆಯುತ್ತದೆ.
ಸೆಕ್ಸ್ ಸಂಬಂಧಗಳ ಮೇಲೆ ಸಂಸತ, ಇತಿಹಾಸ, ಪರಂಪರೆಗಳು ಹಾಗೂ ಧಾರ್ಮಿಕ ಶ್ರೇಷ್ಠತೆಯ ಹಕ್ಕು ಪ್ರತಿಪಾದಿಸುವವರು ಸರಿಸುಮಾರು ಪ್ರತಿ ಧರ್ಮಗ್ರಂಥಗಳೂ ವಿವಾಹಿತರಿಗೆ ಬೇರೊಬ್ಬ ಸಂಗಾತಿಯೊಂದಿಗೆ ಸಂಬಂಧವಿರುವಂತಹ ಕಥೆಗಳೇ ತುಂಬಿಕೊಂಡಿವೆ ಎಂಬುದನ್ನು ಮರೆತುಬಿಡುತ್ತಾರೆ.
ಮದುವೆಯಂತೂ ಮುಂದುರಿಯುತ್ತಲೇ ಇದೆ. ಅದರಿಂದಲೇ ಸಮಾಜದಲ್ಲಿ ಒಬ್ಬರಿಗಿಂತ ಹೆಚ್ಚು ಪತ್ನಿಯರಿರುವುದು ಚಾಲ್ತಿಯಲ್ಲಿದೆ. ಒಬ್ಬರಿಗಿಂತ ಹೆಚ್ಚು ಪತಿಯರನ್ನು ಹೊಂದಲು ಪುರುಷರು ಬಿಟ್ಟಿಲ್ಲ. ಇದನ್ನು ಪುರುಷರ ದಬ್ಬಾಳಿಕೆಯೆಂದು ಕರೆಯಾಗುವುದಿಲ್ಲವೇ?
ಡಿಜಿಟಲ್ ಆದ ಸ್ನೇಹ ಮತ್ತು ಪ್ರೀತಿ
ಈಗ ಹಣ ಪಾವತಿಸುವ ಮತ್ತೊಂದು ವಿಧಾನ ಆರಂಭವಾಗಿದೆ. ಇದರಲ್ಲಿ ನೋಟಿನ ಪ್ರತ್ಯಕ್ಷ ಬಳಕೆಯಾಗಲಿ, ಪ್ಲಾಸ್ಟಿಕ್ನ ಕ್ರೆಡಿಟ್ ಕಾರ್ಡ್ಗಳಾಗಲಿ ಇರುವುದಿಲ್ಲ. ಸ್ಮಾರ್ಟ್ ಫೋನಿನಲ್ಲಿ ಕೆಲವು ನಂಬರ್ಗಳನ್ನು ಅದುಮಿದರೆ ಸಾಕು, ಕ್ಷಣಾರ್ಧದಲ್ಲಿ ಹಣ ವರ್ಗಾವಣೆಯಾಗಿ ಬಿಡುತ್ತದೆ.
`ಡಿಜಿಟಲ್ ಟ್ರಾನ್ಸ್ ಫರ್’ ಪಾವತಿಯಲ್ಲಿ ಕ್ರಾಂತಿ ಉಂಟಾಗಿದೆ ಮತ್ತು ಇ-ಕಾಮರ್ಸ್ನಲ್ಲಿ ಅದು ಲಾಭಕರ ಹೌದು. ಮೇಡಂಗಳಿಗೆ ಸಾಮಾನುಗಳ ಜೊತೆ ಈಗ ಭಾರದ ಪರ್ಸ್ ಎತ್ತಿಕೊಂಡು ಬರಬೇಕಾದ ಅಗತ್ಯವಿಲ್ಲ.
ಈ ರೀತಿಯ ಹೊಸ ತಂತ್ರಜ್ಞಾನಕ್ಕೆ ಅದ್ಧೂರಿ ಸ್ವಾಗತ ನೀಡಲಾಗುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಬಾರಿ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮೊಬೈಲ್ ತಂತ್ರಜ್ಞಾನ ವಿಕಸಿತಗೊಳ್ಳುತ್ತಿರುವ ರೀತಿಯಂತೂ ದಂಗುಬಡಿಸುವಂಥದ್ದಾಗಿದೆ. ಅದರಿಂದ ಅಗ್ಗದ ದರದಲ್ಲಿ ಸಾಕಷ್ಟು ಹೊತ್ತು ಮಾತುಕತೆ ಕೂಡ ನಡೆಸಬಹುದು. ಫೋಟೋ, ಮಾಹಿತಿಗಳನ್ನು ಕಳುಹಿಸಬಹುದು. ಮುಖಾಮುಖಿಯಾಗಿ ಮಾತನಾಡಲು ಸ್ಕೈಪ್ನ ಉಪಯೋಗ ಪಡೆಯಬಹುದು. ವೈದ್ಯರ ಬಾಬತ್ತಿನಲ್ಲೂ ಮೊಬೈಲ್ ಉಪಯೋಗವಾಗಬಹುದು.
ಮೌಬೈಲ್ನಿಂದಲೇ ಅವರಿಗೆ ಹಣ ಪಾವತಿಸಬಹುದು.
ಹೊಸ ತಂತ್ರಜ್ಞಾನವೇನೊ ಬಂದಿದೆ, ಆದರೆ ರಸ್ತೆಯಲ್ಲಿನ ಜನದಟ್ಟಣೆ, ವಾಹನಗಳ ಸಂಖ್ಯೆ ಕಡಿಮೆಯಾಗಿದೆಯೆಂದು ನಿಮಗೆ ಅನಿಸುತ್ತದೆಯೇ? ರೈಲುಗಳಲ್ಲಿ ನಿಮಗೆ ಸುಲಭವಾಗಿ ಸೀಟು ಲಭಿಸುತ್ತಿದೆಯೇ? ವಿಮಾನಗಳು ಖಾಲಿ ಆಗಿವೆಯೇ? ಕೊರಿಯರ್ ಅಥವಾ ಪೋಸ್ಟ್ ನಿಂದ ಪಾರ್ಸ್ ಬರುವುದು ನಿಂತಿದೆಯೇ?
ತಂತ್ರಜ್ಞಾನದಲ್ಲಿ ಪ್ರಗತಿ ಆಗುತ್ತಿದೆ. ಆದರೆ ಇದು ಜನರನ್ನು ಮತ್ತಷ್ಟು ಸೋಮಾರಿಗಳನ್ನಾಗಿ ಮಾಡುತ್ತಿದೆ. ಉತ್ಪಾದಕತೆಯನ್ನು ಕುಂಠಿತಗೊಳಿಸುತ್ತಿದೆ. ಇದು ಹರಟೆ ಹೊಡೆಯುವ ಮಹಿಳೆಯರ ವ್ಯಾಪ್ತಿ ಹೆಚ್ಚಿಸುತ್ತಿದೆ. ಆದರೆ ಇದು ಅವರನ್ನು ಹತ್ತಿರ ತರುತ್ತಿಲ್ಲ.
ನಿಮಗೆ ಸಿಕ್ಕಾಪಟ್ಟೆ ತಲೆನೋವು ಬಂದಿದೆ. ನೀವು `ಡಿಜಿಟಲ್ ಮನಿ’ ವಿಧಾನದಿಂದ ಹಣವನ್ನು ಪಾವತಿಸುತ್ತೀರಿ, ಯಾರಾದರೂ ಬಂದು ಮನೆ ಬಾಗಿಲಿನತನಕ ಔಷಧಿ ತಲುಪಿಸುತ್ತಾರೆ. ನೀವೇ ನಡೆದುಕೊಂಡು ಹೋಗಿ ತರಬಹುದು ಅಥವಾ ಅವರ ಡೆಲಿವರಿ ಬಾಯ್ ಮನೆಯವರೆಗೆ ಬರಬಹುದು. ಅದರಲ್ಲೆನೂ ವ್ಯತ್ಯಾಸವಿಲ್ಲ. ನಿಮ್ಮ ಅನಾರೋಗ್ಯ ಅರಿತು ಹತ್ತಾರು ಸಂದೇಶಗಳು ಬರುತ್ತವೆ. `ಗೆಟ್ ವೆಲ್, ಸೋ ಸ್ಯಾಡ್,’ `ಡೋಂಟ್ವರಿ,’ `ಐ ಶೇರ್ ಯುವರ್ ಪೇನ್,` `ಬೇಗ ಗುಣಮುಖಳಾಗು’ ಸೋದರಿಯರು, ಸೋದರರು, ಮಗಮಗಳು ಸಂದೇಶವನ್ನೇನೂ ಕೊಡುತ್ತಾರೆ. ಅದನ್ನು ಬಿಟ್ಟು ಅವರೇ ಸ್ವತಃ ಅಲ್ಲಿಗೆ ಬರುತ್ತಾರೆಯೇ? ಡಿಜಿಟಲ್ ಮನಿಯ ಹಾಗೆ, ಡಿಜಿಟಲ್ ಪ್ರೀತಿಯನ್ನು, ಅಂತಃಕರಣವನ್ನು ಕೊಟ್ಟುಬಿಡುತ್ತೇವೆ. ಲೆಕ್ಕ ಚುಕ್ತಾ ಎಂದು ಅನೇಕರು ಭಾವಿಸುತ್ತಾರೆ.
ನೀವು ಏಕಾಂಗಿಯಾಗಿ, ನಿಶ್ಶಬ್ದರಾಗಿ ಕೋಣೆಯಲ್ಲಿ ಮೊಬೈಲ್ ಹಾಗೂ ರಿಮೋಟ್ ಹಿಡಿದು ಸ್ಕ್ರೀನ್ ಮೇಲೆ ನೋಡುತ್ತ ಖುಷಿಯಿಂದ ಕುಳಿತಿರುತ್ತೀರಿ. ಅಷ್ಟರಲ್ಲಿ ಯಾರೋ ಮನೆಬಾಗಿಲು ತಟ್ಟುತ್ತಾರೆ. ಆಗ ಮೇಡಂ ಏಳಲೇಬೇಕು. ಏಕೆಂದರೆ ವ್ಯಕ್ತಿಯನ್ನು ಡಿಜಿಟಲ್ ಟ್ರಾನ್ಸ್ ಫರ್ ಮಾಡುವ ತಂತ್ರಜ್ಞಾನವಂತೂ ಇನ್ನೂ ಬಂದಿಲ್ಲ, ಬರುವ ಸಾಧ್ಯತೆಯೂ ಇಲ್ಲಬಿಡಿ.
ಇಂದಿನ ಮಾಹಿತಿ ತಂತ್ರಜ್ಞಾನ ಯುಗ ಜನರಿಗೆ ಒಂದು ರೀತಿಯಲ್ಲಿ ಘಾತಕವಾಗಿ ಪರಿಣಮಿಸುತ್ತಿದೆ. ಏಕೆಂದರೆ ಇದು ಜನರನ್ನು ಅಂತರ್ಮುಖಿಯಾಗಿಸುತ್ತಿದೆ. ಡಿಜಿಟಲ್ ಮನಿಯ ಸೌಲಭ್ಯದ ಕಾರಣದಿಂದ ಇ-ಕಾಮರ್ಸ್ನಿಂದ ಬೇಡದ ವಸ್ತುಗಳನ್ನು ಖರೀದಿಸಲಾಗುತ್ತಿದೆ. ಬಿಲ್ ಪಾವತಿಸಲು ಸ್ವತಃ ಹೋಗಬೇಕಿಲ್ಲ ಎಂದು ನೀರು, ವಿದ್ಯುತ್ನ್ನು ಬೇಕಾಬಿಟ್ಟಿ ವ್ಯಯ ಮಾಡಲಾಗುತ್ತಿದೆ. ಆದರೆ ನಗು ಮಾತ್ರ ಮನೆಯಲ್ಲಿ ಕಾಣಸಿಗುವುದೇ ಇಲ್ಲ. ಅದು ಕಾಣುವುದು ಕೇವಲ ಹೋಟೆಲ್ಗಳಲ್ಲಿ ಮಾತ್ರ. ಏಕೆಂದರೆ ಮನೆಯಲ್ಲಿ ಆಹಾರ ತಯಾರಿಸುವವರಾರು? ಸ್ಮಾರ್ಟ್ ಫೋನಂತೂ ಅದನ್ನು ಮಾಡಲು ಸಾಧ್ಯವಿಲ್ಲ.
ಮಾತನಾಡಲು ಏನಾದರೂ ವಿಷಯ ಇದ್ದಿದ್ದರೆ ಸ್ನೇಹಿತೆಯರು ಮನೆಗೆ ಬರುತ್ತಿದ್ದರು. ಗೆಳತಿ ಇದ್ದಿದ್ದರೆ ಅಡುಗೆ ಮನೆಯ ನೆನಪೂ ಇರುತ್ತಿತ್ತು. ಮನೆಗೆ ನಾಲ್ಕಾರು ಅತಿಥಿಗಳು ಬಂದರೆ ಗೆಳತಿಯರು ಸಹಾಯಕ್ಕೆ ಬರುತ್ತಿದ್ದರು. ಈಗ ಡಿಜಿಟಲ್ ಮನಿಯ ಹಾಗೆ ಸ್ನೇಹ ಮತ್ತು ಪ್ರೀತಿ ಕೂಡ ಡಿಜಿಟಲ್ ಆಗಿದೆ,
ಜೀವನ ಇರುವುದೇ ಜೀವಿಸಲು……
ಇತ್ತೀಚೆಗೆ ಪಾರ್ಟಿಗಳಲ್ಲಿ ಬೆಲ್ಲಿ ಡ್ಯಾನ್ಸರ್ಗಳ ನೃತ್ಯದ ಚಮಕ್ ಜೋರಾಗಿದೆ. ಯುಕ್ರೇನ್, ಕಜಕಿಸ್ತಾನ, ಎಸ್ಟೊನಿಯಾ, ಟರ್ಕಿ, ಈಜಿಪ್ಟ್ ಮುಂತಾದ ಕಡೆಗಳಿಂದ ಬಂದ ಹುಡುಗಿಯರು ಈಗ ಏಜೆಂಟರುಗಳ ಮುಖಾಂತರ ಎಲ್ಲೆಡೆ ಲಭ್ಯವಾಗುತ್ತಿದ್ದಾರೆ. ಮದುವೆಯ ಸಂಭ್ರಮ ಬಿಡಿ, ಮಕ್ಕಳ ಹುಟ್ಟುಹಬ್ಬದ ಸಂಭ್ರಮಕ್ಕೆ ಈ ನೃತ್ಯಬಾಲೆಯರನ್ನು ಕರೆಸಿ ನೃತ್ಯ ಮಾಡಿಸುತ್ತಿದ್ದಾರೆ. ನೃತ್ಯ ಇದ್ದರೆ ಅಲ್ಲಿ ಮದ್ಯ ಯಥೇಚ್ಛವಾಗಿ ಹರಿಯುತ್ತಿರುತ್ತದೆ. ಕ್ಯಾಬರೆ ಕ್ಲಬ್ಗಳಲ್ಲಿ ಆಗುವಂತೆ ಹಣದ ತೂರಾಡುವಿಕೆ ಕೂಡ ಇಂತಹ ಕಡೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ.
ಮಧ್ಯಮ ವರ್ಗದವರಿಗೆ ಕೈಗೆಟುಕಲಾರದಷ್ಟು ಇದು ದುಬಾರಿಯೇನೂ ಇಲ್ಲ. ಹಾಗಾಗಿ ಇದು ಸಾಕಷ್ಟು ಜನಪ್ರಿಯವಾಗುತ್ತಿದೆ. ನೃತ್ಯಗಾತಿ ಕುಣಿಯುತ್ತಿದ್ದರೆ, ಅಲ್ಲಿ ಉಪಸ್ಥಿತರಿರುವ ಅತಿಥಿಗಳು ಕೂಡ ಆಕೆಯ ಜೊತೆ ಹೆಜ್ಜೆ ಹಾಕತೊಡಗುತ್ತಾರೆ. ಇದರಿಂದಾಗಿ ಪಾರ್ಟಿಗಳಿಗೆ ಮತ್ತಷ್ಟು ರಂಗು ಬರುತ್ತದೆ.
ಈ ರೀತಿಯ ಪಾರ್ಟಿಗಳ ಮೇಲೆ ನಿರ್ಬಂಧ ಹೇರುವಂತೆ ಒತ್ತಾಯಿಸುವ ಹಾಗಿಲ್ಲ. ಆದರೆ ಇದು ಸ್ವಾಗತಾರ್ಹ ಸಂಗತಿಯೇನೂ ಅಲ್ಲ. ಏಕೆಂದರೆ ಹುಟ್ಟುಹಬ್ಬದ ಪಾರ್ಟಿಯೆಂದರೆ ಅಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರು ಹೀಗೆ ಎಲ್ಲ ವಯೋಮಾನದವರೂ ಇರುತ್ತಾರೆ. ಮಕ್ಕಳು ಹಾಗೂ ವಯಸ್ಸಾದವರ ಎದುರು ಈ ರೀತಿಯ ನೃತ್ಯ ಮತ್ತು ಮದ್ಯಸೇವನೆ ಎಳ್ಳಷ್ಟೂ ಒಳ್ಳೆಯದಲ್ಲ. ಹೀಗಾಗಿ ಪಾರ್ಟಿ ಯಾವುದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಇಂತಹ ನೃತ್ಯ ಪಾರ್ಟಿಗಳನ್ನು ಏರ್ಪಡಿಸಬೇಕು.
ಕೌಟುಂಬಿಕ ಪಾರ್ಟಿಗಳಲ್ಲಿ ನೃತ್ಯ ಹಾಡು ಇರಬೇಕು, ನಿಜ. ಆದರೆ ಅದು ಕುಟುಂಬದವರ ಜೊತೆಗಷ್ಟೇ ಇರಬೇಕು. ಅವರು ಮುಕ್ತವಾಗಿ ನಗಲು, ಒಂದೆಡೆ ಸೇರಲು ಇದೊಂದು ಒಳ್ಳೆಯ ಅವಕಾಶ. ಒಬ್ಬ ವೃತ್ತಿಪರ ಹುಡುಗಿಯ ನೃತ್ಯ ಇಂತಹ ಕಡೆ ಅರ್ಥಹೀನವೇ ಸರಿ. ಜನರು ಸುಖದುಃಖ ಹಂಚಿಕೊಳ್ಳುವ ಇಂತಹ ಸ್ಥಳದಲ್ಲಿ ನೃತ್ಯ ಏರ್ಪಡಿಸಿದರೆ ಅದನ್ನು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡಲಾರಂಭಿಸುತ್ತಾರೆ. ಅದು ಸೆಕ್ಸಿಯೂ ಆಗಿರುತ್ತದೆ. ದ್ವಂದ್ವಾರ್ಥದ ಸಂಭಾಷಣೆಗಳೂ ಅಲ್ಲಿ ಹರಿದಾಡುತ್ತಿರುತ್ತವೆ.
ಕುಣಿಯುವುದು ನೈಸರ್ಗಿಕ. ಅದರ ಬಗ್ಗೆ ಅಪಸ್ವರ ಎತ್ತಬಾರದು. ಸೆಕ್ಸಿ ನೃತ್ಯ ಕೂಡ ಸರಿಯೇ. ಆದರೆ ಅದು ವಯಸ್ಕರ ನಡುವೆ ಮಾತ್ರ ಆಯೋಜಿಸಲ್ಪಡಬೇಕು. ಮದುವೆ ವಾರ್ಷಿಕೋತ್ಸವವೇ ಇರಬಹುದು, ಮಗುವಿನ ಮೊದಲ ಹುಟ್ಟುಹಬ್ಬವೇ ಆಗಿರಬಹುದು. ಇವೆಲ್ಲ ಬೇರೆ ಬೇರೆ ರೀತಿ. ವಯಸ್ಕರ ಪಾರ್ಟಿಗಳಲ್ಲಿ, ಒಪ್ಪಿಗೆ ಇರುವವರ ನಡುವೆ ಮಾತ್ರ ಇಂತಹ ನೃತ್ಯಗಳು ನಡೆಯಬೇಕು.