ಕೇರಳದ ಬೆಟ್ಟ ಗುಡ್ಡಗಳ ತಾಣ ಮುನ್ನಾರ್‌ ಮತ್ತು ಥೇಕಡಿಯ ಘಟ್ಟಗಳಲ್ಲಿ ನಮಗೆ ಸೃಷ್ಟಿಯ ಮನೋಹರ ಪ್ರಾಕೃತಿಕ ದೃಶ್ಯಗಳ ಸಾಕ್ಷಾತ್ಕಾರವಾಯಿತು. ಭಾರತದ ಸಂಪತ್ತು ಹಾಗೂ ಸಂಸ್ಕೃತಿ ಬ್ರಿಟಿಷ್‌ರನ್ನು ಇತ್ತ ಸೆಳೆಯಿತು. ಆದರೆ ಇಲ್ಲಿನ ಗಾಳಿ, ನೀರು ಇಷ್ಟವಾದರೂ ಅವರಿಗೆ ಸೂರ್ಯನ ತಾಪ ಸಹಿಸಲಾಗಲಿಲ್ಲ. ಅವರು ತಮ್ಮ ಸೌಕರ್ಯಕ್ಕಾಗಿ ಕೇರಳದಲ್ಲಿ ಹಿಲ್ ಸ್ಟೇಷನ್‌ಮಾಡಿಕೊಂಡರು. ಇದು ಸಮುದ್ರ ಮಟ್ಟದಿಂದ 1600 ಮೀಟರ್‌ ಎತ್ತರದಲ್ಲಿರುವ ಮುನ್ನಾರ್‌ ಎಂಬ ಹಿಲ್ ‌ಸ್ಟೇಷನ್‌. ಇದು ಮುಥಿರ್‌ಪುಜಾ, ನ್ಲಾತಾನೀ ಮತ್ತು ಕುಂಡಾ ಡ್ಯಾಮ್ ಎಂಬ ಮೂರು ಪರ್ವತಗಳ ಝರಿಗಳ ಮಧ್ಯೆ ಇದೆ. ನಾವು ಕೊಯಮತ್ತೂರ್‌ನಿಂದ ಮುನ್ನಾರ್‌ ಪ್ರವಾಸ ಆರಂಭಿಸಿದೆ. ಎಂಡ್‌ ಆಫ್‌ ಕೊಯಮತ್ತೂರ್‌ ಎಂದು ಕರೆಯುವ ಪಾಲಕ್ಕಾಡ್‌ ರಸ್ತೆಯಲ್ಲಿ ಡ್ರೈವರ್‌ ಚೆಕ್‌ಪೋಸ್ಟ್ ನಲ್ಲಿ ಟ್ರ್ಯಾನ್ಸ್ ಪೋರ್ಟ್‌ ಪರ್ಮಿಟ್‌ ಪಡೆದುಕೊಂಡರು. ನಾವು ಪೊಲ್ಲಾಚ್ಚಿ ರಸ್ತೆಯಿಂದ ಮುನ್ನಾರ್‌ ಕಡೆ ಹೊರಟೆವು.

ಸ್ವಲ್ಪ ಹೊತ್ತಿನ ನಂತರ ಕೋಕೋನಟ್‌ ಕಾಡು ಉಡುಮೈ ಮೇಲೆ ಹೊರಟೆವು. ಅಲ್ಲಲ್ಲಿ ಸಣ್ಣಪುಟ್ಟ ಮನೆಗಳು ಮತ್ತು ಗುಡಿಸಲುಗಳು ಕಾಣುತ್ತಿದ್ದವು. ಕಾಡಿನಿಂದ ಮುಂದೆ ಹೊರಟಾಗ ಮೈದಾನಗಳು ಹಾಗೂ ರಸ್ತೆಯ ಎರಡೂ ಕಡೆ ದೊಡ್ಡ ದೊಡ್ಡ ವಿಂಡ್‌ ಮಿಲ್‌ನ ಬಲೆಯಂತಹುದು ಹರಡಿರುವುದು ಕಾಣಿಸಿತು. ನಂತರ ಪೊಲ್ಲಾಚ್ಚಿ ಚೆಕ್‌ಪೋಸ್ಟ್ ಮುಂದೆ ನಾವು ಪ್ರಸಿದ್ಧ ಅಣ್ಣಾಮಲೈ ಟೈಗರ್‌ ರಿಸರ್ವ್ ಪ್ರದೇಶದಿಂದ ಹೊರಟು ಚಿರತೆ, ಜಿಂಕೆ ಮತ್ತು ಆನೆಗಳ ಕಾಡಿನ ಮಧ್ಯದಿಂದ ಮುಂದೆ ಹೋಗುತ್ತಿದ್ದೆವು. ಕಾಯ್ದಿಟ್ಟ ಮತ್ತು ಸಂರಕ್ಷಿತ ಫಾರೆಸ್ಟ್ ನ ಈ ಏರಿಯಾದಲ್ಲಿ ರಾತ್ರಿಯ ಶಾಂತತೆಯಲ್ಲಿ ಹೋಗಿಬರುವುದನ್ನು ನಿಷೇಧಿಸಲಾಗಿದೆ. ಸ್ವಲ್ಪ ಹೊತ್ತಿನ ನಂತರ ತಮಿಳುನಾಡಿನಿಂದ ದಾಟಿ ನಾವು ಕೇರಳದ ವನವಿಹಾರ ಮತ್ತು ದಟ್ಟ ಕಾಡಿನ ದೃಶ್ಯ ಅನುಭವಿಸುತ್ತಾ ಮುಂದೆ ಸಾಗುತ್ತಿದ್ದೆವು.

ಸ್ವಲ್ಪ ಹೊತ್ತಿನ ನಂತರ ಮರಯೂರ್‌ ಸ್ಥಳದಲ್ಲಿ ಕರಿಮುಟ್ಟಿ ಫಾಲ್ಸ್ ಸಿಕ್ಕಿತು. ಅಲ್ಲಿ ಇಳಿದು ಟೀ ಕುಡಿದು ಪ್ರಕೃತಿ ದೃಶ್ಯಗಳನ್ನು ಸೆರೆಹಿಡಿದೆವು. ಇಲ್ಲಿ ಹೋಟೆಲ್ ಇದ್ದು ರೂಮುಗಳೂ ಇವೆ. ಇಲ್ಲಿನ ಘಟ್ಟಗಳಲ್ಲಿ ಝರಿಗಳು ಮಂದಗತಿಯಿಂದ ಹರಿಯುತ್ತಿರುತ್ತವೆ. ಗಂಧದ ಮರಗಳು, ಟಾಟಾ ಟೀ ಗಾರ್ಡನ್‌, ಒಂದೊಂದು ಕಡೆ ಆಮೆಯ ಬೆನ್ನಿನಂತಹ ಸ್ಲೋಪಿಂಗ್‌, ಕೆಲವು ಕಡೆ ದೊಡ್ಡ ಮೀನಿನಾಕಾರದ ಅದ್ಭುತ ದೃಶ್ಯಗಳೂ ಇದ್ದವು. ಒಂದು ಕಡೆ ಕಿತ್ತಳೆ ಗಿಡಗಳು, ಅಲ್ಲಲ್ಲಿ ನೀಲಕುರಂಜಿಯ ಹೂಗಳಿಲ್ಲದ ಗಿಡಗಳು ಇದ್ದವು. ಅದರಲ್ಲಿ 12 ವರ್ಷಗಳಿಗೊಮ್ಮೆ ಮಾತ್ರ ಹೂ ಬಿಡುತ್ತದೆ. ಈ ಕಾಡುಗಳ ಮಧ್ಯೆ ಆದಿವಾಸಿಗಳ ಆರೋಗ್ಯ ಹಾಗೂ ಉತ್ಸಾಹ ತುಂಬಿದ ಜೀವನ ನಮಗೆ ಪ್ರೇರಣೆ ನೀಡುತ್ತದೆ. ಮುನ್ನಾರ್‌ನ ಪಿಸುಗುಟ್ಟುವ ಘಟ್ಟಗಳು ನಮಗೆ ಏನನ್ನೋ ಹೇಳುತ್ತಿದ್ದವು. ಘಟ್ಟಗಳಲ್ಲಿ ಹರಡಿದ ಹುಲ್ಲಿನ ಕಾರ್ಪೆಟ್‌ ನಮಗೆ ವಿಶ್ರಾಂತಿ ಪಡೆಯಲು ಪ್ರೇರೇಪಿಸುತ್ತಿತ್ತು. ನಾವು ಅಲ್ಲಿನ ಕೆಲವು ವಿಶೇಷ ಸ್ಥಳಗಳನ್ನು ನೋಡಿದೆ.

ರಾವಿಕುಲಂ ನ್ಯಾಷನಲ್ ಪಾರ್ಕ್‌

ಚದರ ಕಿ.ಮೀ.ವರೆಗೆ ಹರಡಿದ ಎರಾವಿಕುಲಂ ನ್ಯಾಷನಲ್ ಪಾರ್ಕ್‌ ಬಹಳ ಪ್ರಸಿದ್ಧವಾಗಿದೆ. ನೀಲಕುರಂಜಿ ಹೂಗಳು 12 ವರ್ಷಗಳಿಗೊಮ್ಮೆ ಅರಳುತ್ತವೆ. ಅವು ಅರಳಿದಾಗ ಘಟ್ಟಗಳು ನೀಲಿ ಬಣ್ಣದ ಹೂಗಳಿಂದ ಅತ್ಯಂತ ಆಕರ್ಷಕವಾಗಿ ಕಾಣುತ್ತವೆ. ಇಲ್ಲಿನ ಗುಡ್ಡಗಾಡು ಮೇಕೆಗಳ ಒಂದು ಗುಂಪು ಒಟ್ಟಾಗಿ ಮೇಯುತ್ತಿರುವುದು ಕಂಡುಬರುತ್ತದೆ.

ಅಣ್ಣಾಮುಡಿ ಪಾರ್ಕ್

ಎರಾವಿಕುಲಂ ನ್ಯಾಷನಲ್ ಪಾರ್ಕ್‌ ಒಳಗೆ 2,700 ಮೀ. ಎತ್ತರದಲ್ಲಿ ಈ ಶಿಖರ ಇದೆ. ಟ್ರೆಕಿಂಗ್‌ ಇಲ್ಲಿನ ಪ್ರಮುಖ ಆಕರ್ಷಣೆ. ಇದಲ್ಲದೆ ಸಿಲ್ವರ್‌ ಓಕ್‌ ಹಾಗೂ ಇತರ ಮರಗಳೂ ಇವೆ. ಅದರಿಂದ ಬೆಂಕಿಕಡ್ಡಿ ಮತ್ತು ಊದುಕಡ್ಡಿಗಳನ್ನು ತಯಾರಿಸುತ್ತಾರೆ. ಯೂಕಲಿಫ್ಟಸ್‌ ಮರಗಳು 10 ಕಿ.ಮೀ.ವರೆಗೆ ಹರಡಿವೆ. ಈ ಜಾಗಗಳಲ್ಲಿ ಸುತ್ತಾಡಿದ ನಂತರ ನ್ಯಾಷನಲ್ ಹೈವೇ 47ರಲ್ಲಿ ನಮ್ಮ ಕಾರು ವೇಗವಾಗಿ ಓಡುತ್ತಿತ್ತು. ಸ್ವಲ್ಪ ಹೊತ್ತಿಗೆ ನಾವು ಮುನ್ನಾರ್‌ ತಲುಪಿದೆ. ಅಲ್ಲಿ ವಿಸ್ಪರಿಂಗ್‌ ಮೆಡೋಸ್‌ ಹೋಟೆಲ್‌ನಲ್ಲಿ ಉಳಿದುಕೊಂಡೆವು. ಅದು ಕಾಡಿನ ಮಧ್ಯೆ ಮುನ್ನಾರ್‌ನಿಂದ 13 ಕಿ.ಮೀ. ದೂರ ಇದೆ.

ಮರುದಿನ ನಾವು ಮುನ್ನಾರ್‌ನ ಬ್ಲಾಸಮ್ ಪಾರ್ಕ್‌ ಟೀ ಗಾರ್ಡನ್‌, ಸ್ಪೈಸ್‌ ಗಾರ್ಡನ್‌, ಪೋಥಾನೆಡೂ ವ್ಯೂ ಪಾಯಿಂಟ್‌, ಪ್ಲೇರಿ ಕಲ್ಚರ್‌ ಸೆಂಟರ್‌, ಟೀ ಮ್ಯೂಸಿಯಂ, ಮೆಟ್ಟುಪೆಟ್ಟಿ, ರಿಸರ್ವಾಯರ್‌, ಇಕೋ ಪಾಯಿಂಟ್‌, ಎಲಿಫೆಂಟ್‌, ಅರೈವಲ್ ಸ್ಪಾಟ್‌ ಹಾಗೂ ಕುಂಡ್‌ ಡ್ಯಾಮ್ ಇತ್ಯಾದಿ ನೋಡಿದೆ ಮತ್ತು ಸ್ಪೈಸ್‌ ಪ್ಲ್ಯಾಂಟೇಶನ್‌ ಗಾರ್ಡನ್‌ಗೆ ಹೋದೆವು. ಪ್ರತಿ ವ್ಯಕ್ತಿಗೆ 100 ರೂ. ಟಿಕೆಟ್‌. ಇಲ್ಲಿ ಮಸಾಲೆ ಪದಾರ್ಥಗಳು ಸಿಗುತ್ತವೆ. ಡ್ರೈಫ್ರೂಟ್ಸ್ ಕೂಡ ಹೇರಳವಾಗಿವೆ.

ನಂತರ ನಾವು ಒಂದೊಂದಾಗಿ ಅಲ್ಲಿನ ವಿಶೇಷ ಸ್ಥಳಗಳನ್ನು ನೋಡಿದೆವು.

ಟಾಪ್‌ ಸ್ಟೇಷನ್‌ : ತಮಿಳುನಾಡಿನ ಪಕ್ಕದಲ್ಲಿ ಕೊಡೈಕೆನಾಲ್ ‌ರೋಡ್‌ನಲ್ಲಿ ಇರುವ ಇದು ಅತ್ಯಂತ ಎತ್ತರದ ಬೆಟ್ಟವಾಗಿದೆ. ಟಾಪ್ ಸ್ಟೇಷನ್‌ ಇಲ್ಲಿನ ಆಕರ್ಷಣೆ. ಇಲ್ಲಿ ನಾವು ಸೂರ್ಯೋದಯ ಆನಂದ ಪಡೆಯಬಹುದು. ಇಲ್ಲಿನ ಎಲಿಫೆಂಟ್‌ ರೈಡ್‌ ಮತ್ತು ಬೋಟಿಂಗ್‌ ಅತ್ಯಂತ ರೋಮಾಂಚಕಾರಿಯಾಗಿರುತ್ತದೆ.

ಮೇಟ್ಟುಪಟ್ಟಿ : ಇದು ಮುನ್ನಾರ್‌ ಟೌನ್‌ನಿಂದ 13 ಕಿ.ಮೀ. ದೂರದಲ್ಲಿದೆ. ಹಾಗೂ ಸಮುದ್ರಮಟ್ಟಕ್ಕಿಂತ 1700 ಮೀಟರ್‌ಎತ್ತರದಲ್ಲಿದೆ. ಇಲ್ಲಿ ಸುಂದರ ಬ್ರೀಡ್‌ನ ಹಸುಗಳು ಸಿಗುತ್ತವೆ. ಇಂಡೋ ಸ್ವಿಸ್‌ ಸಹಯೋಗದಲ್ಲಿ ಆರಂಭಿಸಲಾದ ಡೇರಿ ಫಾರಂ ಬಹಳ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಮಸೋನರಿ ಡ್ಯಾಂ ಮತ್ತು ಅದರಲ್ಲಿನ ಬೋಟ್‌ ರೈಡ್‌ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಪಲ್ಲೀಲೆಸ್‌ : ಇಲ್ಲಿ ಕೇರಳದ ಮೊದಲ ಹೈಡ್ರೋ ಎಲೆಕ್ಟ್ರಿಕ್‌ ಪ್ರಾಜೆಕ್ಟ್ ಇದೆ. ಇದು ಸುಂದರ ಪಿಕ್ನಿಕ್‌ ಸ್ಪಾಟ್‌ ಕೂಡ ಆಗಿದೆ.

ಚಿನ್ನಾ ಕೆನಾಲ್ ‌ಮತ್ತು ಅನಾಯಿ ರಂಗ್‌ ಚಿನ್ನಾ ಕೆನಾಲ್ ವಾಾಟರ್‌ ಫಾಲ್ಸ್ ಗೆ ಪ್ರಸಿದ್ಧವಾಗಿದೆ. ಅನಾಯಿರಂಗ್‌ನ ಕಾಡು, ಗ್ರೀನ್‌ ಕಾರ್ಪೆಟ್‌ನಂತಹ ಸುಂದರ ಘಟ್ಟಗಳು, ಟೀ ಗಾರ್ಡನ್‌ ಮತ್ತು ಝರಿಗಳುಳ್ಳ ಪ್ರಕೃತಿಯ ಅಪ್ರತಿಮ ಉಡುಗೊರೆಯಾಗಿದೆ. ಮರುದಿನ ನಾವು ಮುನ್ನಾರ್‌ನಿಂದ ಥೇಕಡಿಗೆ ಹೊರಟೆವು. ದಾರಿಯಲ್ಲಿ ದೇವಿಕುಲಂ, ಚಿನ್ನಾಕೆನಾಲ್‌, ಅನಾಯಿರಂಗ್‌ ಮತ್ತು ಸ್ಪೈಸ್‌ ಗಾರ್ಡನ್‌ನಿಂದ ಹೋಗುತ್ತಾ ಪುಪಾರಾ ತಲುಪಿದೆ. ಮುನ್ನಾರ್‌ನಿಂದ ಥೇಕಡಿಗೆ ಸುಮಾರು 4 ಗಂಟೆಯ ದಾರಿ. ನಂತರ ನಾವು ಟಾಟಾ ಟೀ ಗಾರ್ಡನ್‌, ಸ್ಪೈಸ್‌ ಗಾರ್ಡನ್‌ ಮತ್ತು ದಟ್ಟ ಕಾಡಿನ ಸಂತಸ ಪಡೆಯುತ್ತಾ ತಲುಪಿದೆ. ನಮ್ಮ ಹೋಟೆಲ್ ಬ್ಲ್ಯೂಮಿಂಗ್‌ ಪ್ಯಾರಡೈಸ್‌ ಹತ್ತಿರದಲ್ಲೇ ಇತ್ತು.

ಪೆರಿಯಾರ್‌ ಲೇಕ್‌ : ಮರುದಿನ ನಾವು ಪೆರಿಯಾರ್‌ ನ್ಯಾಷನಲ್ ಪಾರ್ಕ್‌ನ ಲೋಕೇಶನ್‌ ನೋಡಲು ಮತ್ತು ಪೆರಿಯಾರ್‌ ಲೇಕ್‌ನಲ್ಲಿ ಸ್ಟೀಮರ್‌ನಲ್ಲಿ ಸುತ್ತಾಟದ ಮೋಜನ್ನು ಅನುಭವಿಸಲು ಹೊರಟೆವು. ಪೆರಿಯಾರ್‌ ಲೇಕ್‌ನಲ್ಲಿ ಪೆರಿಯಾರ್‌ ಮತ್ತು ಪಂಬಾ ನದಿಯ ನೀರಿದೆ. ಹಿಂತಿರುಗುವಾಗ ವಾತಾವರಣದಲ್ಲಿನ ತಂಪು ಗಾಳಿ ನಮ್ಮನ್ನು ನಡುಗಿಸಿಬಿಟ್ಟಿತು. ಪೆರಿಯಾರ್‌ ಲೇಕ್‌ನ ನಾಲ್ಕೂ ಕಡೆಯ ಸಂರಕ್ಷಿತ ಕಾಡು ದಟ್ಟ ಕಾಡಿಗೆ ಪ್ರಸಿದ್ಧವಾಗಿದೆ. ಇಲ್ಲಿ ಆನೆ, ಸಿಂಹ, ಲಂಗೂರ್‌ ಇತ್ಯಾದಿ ಪ್ರಾಣಿಗಳು ಕೆರೆಯ ದಂಡೆಯಲ್ಲಿ ನೀರು ಕುಡಿಯಲು ಬರುತ್ತವೆ. 360  ಚದರ ಕಿ.ಮೀ. ದಟ್ಟ ಕಾಡಿನಲ್ಲಿ ಟ್ರೆಕಿಂಗ್‌, ಬೋಟಿಂಗ್‌ ಮತ್ತು ಜೀಪ್‌ ಪ್ರಯಾಣದ ಮೂಲಕ ಮಜಾ ಮಾಡಬಹುದು.

ಮರುದಿನ ಬೆಳಗ್ಗೆ ನಾವು ಅಲೆಪ್ಪಿಯ ಕುಮಾರ್‌ ಕಾಮ್ ಲೈಕಂಗೆ ಹೊರಟೆವು. ಅಲ್ಲಿಗೆ ಕಾಡುಗಳು, ಘಟ್ಟಗಳು, ಟಾಟಾ ಟೀ ಮತ್ತು ಸ್ಪೈಸ್‌ ಗಾರ್ಡನ್‌ ಮೂಲಕ ಹೋಗಬೇಕು. ಘಟ್ಟಗಳು ಬಟ್ಟಲಿನಂತೆ ಸುಂದರವಾಗಿ ಕಾಣುತ್ತವೆ. ಪ್ರಕೃತಿಯ ಸೌಂದರ್ಯ ನೋಡುತ್ತಾ ವೆಂಬನಡ್‌ ಲೇಕ್‌ ವಿವಾ ತಲುಪಿದೆ. ಅಲ್ಲಿ ಬೋಟಿಂಗ್‌ನ ಆನಂದ ಅನುಭವಿಸುತ್ತಾ ಗ್ರಾಮದರ್ಶನದ ನೈಸರ್ಗಿಕ ಆನಂದ ಅನುಭವಿಸಬಹುದು. ಅಲ್ಲಿನ ಆಯುರ್ವೇದ ಮಸಾಜ್‌ ಬಹಳ ಪ್ರಸಿದ್ಧವಾಗಿದೆ.

ಕೇರಳದ ಅಲಪುಳಾ ಜಿಲ್ಲೆಯ ಅಲೆಪ್ಪಿ ಅತ್ಯಂತ ಪುರಾತನ ನಗರ. ಅದನ್ನೂ ನಾವು ನೋಡಿದೆವು. ಇದು ಕೇರಳದ ಆರನೆಯ ದೊಡ್ಡ ನಗರವಾಗಿದೆ. ಇದು ಕೊಚ್ಚಿಯ ದಕ್ಷಿಣಕ್ಕೆ 62 ಕಿ.ಮೀ. ಮತ್ತು ಉತ್ತರದಲ್ಲಿ ತ್ರಿವೇಂಡ್ರಂನಿಂದ 155 ಕಿ.ಮೀ. ದೂರದಲ್ಲಿದೆ. ಸುಂದರ ಕಾಲುವೆಗಳು, ಕೆರೆಗಳಲ್ಲಿ ಬಂದ ಬ್ಯಾಕ್‌ ವಾಟರ್‌ನ ದೃಶ್ಯಗಳು ಮತ್ತು ದಡದ ರಮಣೀಯತೆ ಇಲ್ಲಿನ ಆಕರ್ಷಣೆ. ವಾರ್ಡ್‌ಕರ್ಜನ್‌ ಅಲೆಪ್ಪಿ ನಗರನ್ನು `ವೆನಿಸ್‌ ಆಫ್‌ ಈಸ್ಟ್’ ಎಂದು ಕರೆದಿದ್ದ.

ಇಲ್ಲಿಂದ ನಾವು ಕೊಯಮತ್ತೂರಿಗೆ ಹೊರಟೆವು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗುವ ಹೈವೇ ಎನ್‌.ಎಚ್‌.47 ರಲ್ಲಿ ನಮ್ಮ ಕಾರು ಓಡುತ್ತಿತ್ತು. ಲೈಕಂ ಪೈರಮ್ ವಾಡುಗೆ ಹತ್ತಿರದ ಕಾಮೆಜರಿ ಕಡೆ ಹೋಗುತ್ತಿದ್ದಾಗ ದಾರಿಯಲ್ಲಿ ದೊಡ್ಡ ದೊಡ್ಡ ಮಾಲ್‌ಗಳು, ಹೋಟೆಲ್‌, ಒಳ್ಳೆಯ ರಸ್ತೆಗಳು ಕಂಡುಬಂದವು. ನಂತರ ಕೊಚ್ಚಿ ರೋಡ್‌ನ ಹೈವೇಯಲ್ಲಿ ಸಾಗಿದೆ. ಬಲಗಡೆ ಕೊಚ್ಚಿ ಏರ್‌ಪೋರ್ಟ್‌ ಬಿಟ್ಟು ತ್ರಿಶೂರ್‌, ಪಾಲಕ್ಕಾಡ್‌ ದಾರಿಯಲ್ಲಿ ಹೋದೆವು. ತ್ರಿಶೂರ್‌ ಮಾರ್ಗದಲ್ಲಿ ವನಸ್ಪತಿಗಳಿಲ್ಲದ ಬೆಟ್ಟಗಳು ಕಂಡುಬಂದವು. ಈ ಸದೃಢ ಬೆಟ್ಟಗಳು ಚಂಡಮಾರುತಗಳಿಂದ ಕೊಯಮತ್ತೂರನ್ನು ರಕ್ಷಿಸುತ್ತವೆ. ಸಂಜೆ 5 ಗಂಟೆಗೆ ಕೊಯಮತ್ತೂರು ತಲುಪಿದೆವು. ಅಲ್ಲಿಂದ ವಾಪಸ್‌ ಬಂದ ಮೇಲೆ ಅಲ್ಲಿನ ಸುಂದರ ಪ್ರಾಕೃತಿಕ ದೃಶ್ಯಗಳು ಪದೇ ಪದೇ ನೆನಪಿಗೆ ಬರುತ್ತಿದ್ದವು.

ಯಾವಾಗ ಹೋಗಬೇಕು : ಮಾರ್ಚ್‌ನಿಂದ ಮೇ ವರೆಗೆ ಮುನ್ನಾರ್‌ನ ತಾಪಮಾನ 35 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ. ಕುಟುಂಬದವರೊಂದಿಗೆ ಇಲ್ಲಿನ ಹಸಿರು ತುಂಬಿದ ವನಗಳು ಹಾಗೂ ಟೀ ತೋಟಗಳಲ್ಲಿ ಸುತ್ತಾಡಲು ಇದು ಪ್ರಶಸ್ತ ಸಮಯ.

ಹನಿಮೂನ್‌ ಕಪಲ್ಸ್ ನವೆಂಬರ್‌ನಿಂದ ಫೆಬ್ರವರಿ ಮಧ್ಯೆ ಇಲ್ಲಿ ಟ್ರೆಕಿಂಗ್‌ ಮತ್ತು ಮೌಂಟನಿಯರಿಂಗ್‌ನ ಮೋಜು ಆನಂದಿಸಬಹುದು. ಮಳೆಗಾಲ ಇಚ್ಛಿಸುವವರು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಾಟರ್‌ ಫಾಲ್ಸ್ ನ ಸೌಂದರ್ಯ ವೀಕ್ಷಿಸಬಹುದು.

ಹೇಗೆ ಹೋಗುವುದು? : ಕೊಚ್ಚಿ ಏರ್‌ಪೋರ್ಟ್‌ ಹಾಗೂ ಮಧುರೈ ಏರ್‌ಪೋರ್ಟ್‌ ಮುನ್ನಾರ್‌ನಿಂದ ಸುಮಾರು 110 ಮತ್ತು 140 ಕಿ.ಮೀ.ನ ದೂರದಲ್ಲಿವೆ. ಇವೆರಡೂ ಜಾಗಗಳಿಂದ ಕ್ಯಾಬ್‌ ಅಥವಾ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಮೂಲಕ ಮುನ್ನಾರ್‌ಗೆ ತಲುಪಬಹುದು. ರೈಲು ಮಾರ್ಗದ ಮೂಲಕ ಹತ್ತಿರದ ರೈಲ್ವೆ ಸ್ಟೇಷನ್‌ ಎರ್ನಾಕುಲಂ (130 ಕಿ.ಮೀ.) ಮತ್ತು ಮಧುರೈ (135 ಕಿ.ಮೀ.) ಆಗುತ್ತದೆ.

ಟ್ರ್ಯಾವೆಲ್ ‌ಟಿಪ್ಸ್ : ಮಾರ್ಚ್‌ನಿಂದ ಮೇ ಮಧ್ಯಭಾಗದವರೆಗೆ ಮುನ್ನಾರ್‌ನಲ್ಲಿ ಸುತ್ತಾಡಲು ಯೋಗ್ಯ ಸಮಯವಾಗಿದೆ. ಏಕೆಂದರೆ ಈ ಸಮಯದಲ್ಲಿ ಟ್ರ್ಯಾವೆಲ್ ‌ಏಜೆನ್ಸಿಗಳು ಮತ್ತು ಏರ್‌ ಲೈನ್ಸ್ ಅಗ್ಗದ ಟ್ರ್ಯಾವೆಲ್ ‌ಪ್ಯಾಕೇಜ್‌ ಆಫರ್‌ ಮಾಡುತ್ತವೆ. ಈ ಸಮಯ ಮುನ್ನಾರ್‌ನ ಪೀಕ್‌ ಟ್ರ್ಯಾವೆಲ್ ‌ಟೈಮ್ ಆಗಿದ್ದು ಮೊದಲಿಗೆ ಇಳಿದುಕೊಳ್ಳಲು ರೂಮ್ ಬುಕ್‌ ಮಾಡಿಕೊಳ್ಳಿ.

– ಪಿ.ಕೆ. ಶ್ವೇತಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ