ಭಾರತದ ಹೃದಯ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ ನಿಸರ್ಗ ಸೌಂದರ್ಯ, ಗೌರವಶಾಲಿ ಇತಿಹಾಸ ಮತ್ತು ಆಧುನಿಕತೆಯ ಅದ್ಭುತ ಸಮನ್ವಯತೆ ಇದೆ. ವಿಂದ್ಯ ಮತ್ತು ಸತ್ಪುಡಾ ಪರ್ವತಗಳಿಂದ ಆವೃತ್ತವಾದ ಈ ರಾಜ್ಯ ಬುಂದೇಲದ ರಜಪೂತರ ಬಳಿಕ ಮೊಘಲ್ ಸಾಮ್ರಾಜ್ಯದ ಆಳ್ವಿಕೆಗೂ ಒಳಪಟ್ಟಿತ್ತು. ಈ ರಾಜ್ಯದ ಪುನರ್ರಚನೆ 1956 ರಲ್ಲಾಯಿತು.

ಮಧ್ಯಪ್ರದೇಶದ ಏರುಪೇರುಗಳ ಇತಿಹಾಸದ ಕಥೆ ಇಲ್ಲಿನ ಕೋಟೆ ಕೊತ್ತಲುಗಳು, ಸ್ತೂಪಗಳು ಮತ್ತು ಅರಮನೆಗಳಿಂದ ಅರಿವಿಗೆ ಬರುತ್ತದೆ. ನಿಸರ್ಗವಂತೂ ಇಲ್ಲಿ ತನ್ನ ಪ್ರೀತಿಯನ್ನು ಉದಾರವಾಗಿ ಹರಿಬಿಟ್ಟಿದೆ. ಅದಕ್ಕೊಂದು ಜೀವಂತ ಉದಾಹರಣೆಯೆಂದರೆ, ಇಲ್ಲಿನ ಅಭಯಾರಣ್ಯಗಳು ಮತ್ತು ಗಿರಿಧಾಮಗಳು.

ಪ್ರೀತಿ ಹಾಗೂ ತ್ಯಾಗದ ಕಥೆಗಳನ್ನು ಇಲ್ಲಿನ ಅರಮನೆಗಳ ಒಂದೊಂದು ಕಲ್ಲುಗಳು ಹೇಳುತ್ತವೆ. ಅದು ಮಾಂಡುವಿನ ರಾಣಿ ರೂಪಮತಿ ಮತ್ತು ಬಾಜ್‌ ಬಹದ್ದೂರ್‌ ಪ್ರೇಮ ಕಥೆಯಾಗಿರಬಹುದು ಅಥವಾ ಗ್ವಾಲಿಯರ್‌ನ ರಾಜಾ ಮಾನ್‌ಸಿಂಗ್‌ ಮತ್ತು ಗುರ್ಜರಿ ರಾಣಿ ಮೃಗನಯನಿಯದ್ದು.

ಮಧ್ಯಪ್ರದೇಶದ ಪ್ರಮುಖ ಪ್ರವಾಸಿ ಸ್ಥಳಗಳು

ಮಾಂಡೂ : ಮಧ್ಯಪ್ರದೇಶದ ಮಧ್ಯ ಭಾಗದಲ್ಲಿರುವ ಮಾಂಡೂ ನಗರ ಗೌಜಲು ಗದ್ದಲದಿಂದ ದೂರವಿದ್ದು ನಿಸರ್ಗ ಸಿರಿಯಿಂದ ಆವೃತ್ತವಾಗಿದೆ. ಈ ಭಾಗಕ್ಕೆ ಐತಿಹಾಸಿಕ ಹಿನ್ನೆಲೆ ಇರುವುದರಿಂದ ಇಲ್ಲಿ ಹಾಗೂ ಆಸುಪಾಸು ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಅಪ್ಘನ್‌ ವಾಸ್ತುಶೈಲಿಯಿಂದ ನಿರ್ಮಾಣಗೊಂಡ ಇಲ್ಲಿನ ಕಟ್ಟಡ ಹಾಗೂ ಅರಮನೆಗಳು ಮೊಘಲರು ಮತ್ತು ಅಪ್ಘನ್‌ರ ಇತಿಹಾಸವನ್ನು ನೆನಪಿಸುತ್ತವೆ.

ಮಾಂಡೂದ ಹೆಸರು ಮೊದಲು `ಶಾದಿಯಾಬಾದ್‌ (ಆನಂದದ ನಗರ) ಎಂದಿತ್ತು. ಅಪ್ಘನ್ನರು ಮತ್ತು ಮೊಘಲರ ಮಿಶ್ರ ಸಂಸ್ಕೃತಿಯ ಈ ಪ್ರವಾಸಿ ಸ್ಥಳ. ರಾಜರ ಆಡಳಿತ, ಪ್ರೀತಿ, ನಾಗರಿಕತೆ, ಸಂಸ್ಕೃತಿಯ ಕಥೆಯನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ. ಈ ಕಾರಣದಿಂದ ಈ ಪ್ರವಾಸಿ ಸ್ಥಳ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಹಿಂಡೋಲಾ ಮಹ್‌, ಜಹಾಜ್‌ಮಹಲ್, ರೇವಾ ಕುಂಡ್‌, ಅಶರ್ಫಿ ಮಹಲ್, ಹಾಥಿ ಪೋಲ್‌, ಉಜಲಿ ಔರ್‌ ಅಂಧೇರಿ ಬಾಡಿ (ಕತ್ತಿ ಬಾವಿ) ಹಾಗೂ ತೀಲಿ ಮಹಲ್ ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳಾಗಿವೆ.

ಹಿಂಡೋಲಾ ಮಹಲ್ : ಹಿಂಡೋಲಾ ಎಂದರೆ 'ತೂಗು' ಎಂದರ್ಥ. ಈ ಹೆಸರನ್ನು ಇಲ್ಲಿನ ಅರಮನೆಯ ಇಳಿಜಾರು ಗೋಡೆಯಿಂದಾಗಿ ಇಡಲಾಯಿತು. ಕೆಂಪು ಕಲ್ಲಿನಿಂದ ನಿರ್ಮಾಣವಾದ ಈ ಅರಮನೆಯ ಆಕಾರ ಆಂಗ್ಲದ `ಟಿ' ಅಕ್ಷರದಂತೆ ಇದೆ. ಇಲ್ಲಿ ಗಯಾಸುದ್ದೀನನ ಆಡಳಿತಾವಧಿಯ ಒಂದು ಸಭಾಭವನ ಕೂಡ ಇದೆ. ಅರಮನೆಯ ಪಶ್ಚಿಮ ಭಾಗಕ್ಕೆ ಸುಂದರ ಚಂಪಾ ಬಾಡಿ (ಬಾವಿ) ಇದೆ.

ಜಹಾಜ್‌ ಮಹಲ್ : ಈ ಮಹಲಿನ ನಿರ್ಮಾಣ ಅದೆಷ್ಟು ಕಲಾತ್ಮಕವಾಗಿದೆಯೆಂದರೆ, ಇದು ಗುಂಜ್‌ ಮತ್ತು ಕಪೂರ್‌ ಕೆರೆಗಳ ಮಧ್ಯದಲ್ಲಿ ಲಂಗರು ಹಾಕಿದಂತೆ ಕಂಡುಬರುತ್ತದೆ. ಇದರ ನಿರ್ಮಾಣವನ್ನು ಗಯಾಸುದ್ದೀನ ಖಿಲ್ಜಿ ಮಾಡಿದ್ದ. ಅವನು ಇದನ್ನು ತನ್ನ ಅಂತಃಪುರಕ್ಕಾಗಿ ನಿರ್ಮಿಸಿದ್ದ.

ರೇವಾ ಕುಂಡ : ಮಾಳವದ ರಾಜ ಬಾಜ್‌ ಬಹಾದ್ದೂರ್‌ ಮತ್ತು ರಾಣಿ ರೂಪಮತಿಯ ಪ್ರೀತಿಯ ಪ್ರತೀಕ ಈ ಹೊಂಡ. ರಾಜಸ್ಥಾನಿ ಮತ್ತು ಮೊಘಲ್‌ ಕಲೆಯ ಅದ್ಭುತ ನಮೂನೆಯಾಗಿದೆ. ಮಾಂಡು ಕೋಟೆಯ ಬಳಿ ನಿರ್ಮಾಣವಾದ ಈ ಹೊಂಡದಿಂದ ರೂಪಮತಿಯ ಅಂತಃಪುರದೊಳಗೆ ನೀರು ರವಾನೆಯಾಗುತ್ತಿತ್ತು. ಅದರ ಬಳಿ ರೂಪಮತಿಯ ಮಂಟಪ, ಬಾಜ್‌ ಬಹದ್ದೂರ್‌ ಮಹಲ್, ನೀಲಕಂಠ ಮಹಲ್, ಹಾಥಿ ಮಹಲ್ ಹೋಶಂಗಶಾಹ ಸಮಾಧಿ ಮತ್ತು ಜುಮ್ಮಾ ಮಸೀದಿ ಕೂಡ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ