ಇತ್ತೀಚೆಗೆ ನನಗೆ ನ್ಯೂಯಾರ್ಕ್‌ ನಗರಕ್ಕೆ ಹೋಗುವ ಅವಕಾಶ ದೊರೆತಿತ್ತು. ಈ ನಗರ ಹಡ್ಸನ್‌ ನದಿಯ ದಂಡೆಯ ಮೇಲಿರುವ ಸುಂದರ ನಗರ. ಅಲ್ಲಿಗೆ ಹೋದ ಬಳಿಕ ನನಗೆ `ಸ್ಟ್ಯಾಚ್ಯೂ ಆಫ್‌ ಲಿಬರ್ಟಿ’ ನೋಡುವ ಅವಕಾಶ ದೊರೆಯಿತು. ಅಲ್ಲಿಯತನಕ ನಾನು ಅದರ ಬಗ್ಗೆ ಕೇವಲ ಕೇಳಿದ್ದೆ ಹಾಗೂ ಓದಿದ್ದೆ.

ನನ್ನ ಕಣ್ಮುಂದೆ ಇದ್ದ `ಸ್ವಾತಂತ್ರ್ಯ ದೇವತೆಯ ಪ್ರತಿಮೆ’ ಜಗತ್ತಿನ ಅತಿ ದೊಡ್ಡ ಪ್ರತಿಮೆಯಾಗಿತ್ತು. ನೀವು ಅಮೆರಿಕಕ್ಕೆ ಹೊರಡುವವರಿದ್ದಲ್ಲಿ ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ನೋಡಲು ಮರೆಯಬೇಡಿ. ಅದನ್ನು  ನೋಡದ ಹೊರತು ನಿಮ್ಮ ಅಮೆರಿಕ ಪ್ರವಾಸ ಅಪೂರ್ಣವಾಗುತ್ತದೆ.

ಈ ಅದ್ಭುತ ಪ್ರತಿಮೆ ತಾಮ್ರದಿಂದ ನಿರ್ಮಾಣವಾಗಿದೆ. ಕೈಯಲ್ಲಿರುವ ಜ್ಯೋತಿಯ ಎತ್ತರ ಸೇರಿದಂತೆ ಪ್ರತಿಮೆ 305 ಅಡಿ ಎತ್ತರವಾಗಿದೆ. ಕೇವಲ ಪ್ರತಿಮೆಯ ಎತ್ತರ 151 ಅಡಿ. ಈ ಪ್ರತಿಮೆಯ ಹೊರ ಪದರದ ದಪ್ಪ 2 ನಾಣ್ಯಗಳನ್ನು ಒಟ್ಟುಗೂಡಿಸಿದಾಗ ಎಷ್ಟಿದೆಯೋ ಅಷ್ಟಿದೆ. ತಾಮ್ರದ ಪದರವನ್ನು ಉಕ್ಕಿನ ಸರಳುಗಳೊಂದಿಗೆ ಪರಸ್ಪರ ಜೋಡಿಸಲಾಗಿದೆ. ಈ ಕಾರಣದಿಂದ ಮೂರ್ತಿಗೆ ಗಟ್ಟಿತನ ಬಂದಿದೆ.

ಅದಕ್ಕೆ 1811ರಲ್ಲಿಯೇ ಅಡಿಪಾಯ ಹಾಕಲಾಯಿತು. ಇಂದು ಲಿಬರ್ಟಿ ಐಲ್ಯಾಂಡ್‌ ಎಂದು ಕರೆಯುವ ಪ್ರದೇಶ ಹಿಂದೆ `ಬೆಡ್‌ ಲೋಯ್‌’ ಎಂದು ಕರೆಯಲ್ಪಡುತ್ತಿತ್ತು.

ಅಲ್ಲಿ ಆಗ ನಕ್ಷತ್ರಾಕಾರದ ಒಂದು ಕೋರ್ಟ್‌ನ್ನು ನಿರ್ಮಿಸಲಾಯಿತು. 54 ವರ್ಷದ ಬಳಿಕ ಅಂದರೆ 1865ರಲ್ಲಿ ಫ್ರಾನ್ಸ್ನ ಕಲಾವಿದರ ತಂಡವೊಂದರ ನೇತೃತ್ವವನ್ನು ಎಡ್ವರ್ಡ್‌ ಲೆಬೊಯೀರಾ ವಹಿಸಿದ್ದರು. ಅವರ ತಲೆಯಲ್ಲಿಯೇ ಲಿಬರ್ಟಿ ಪ್ರತಿಮೆಯ ಬಗ್ಗೆ ಮೊದಲ ಬಾರಿಗೆ ವಿಚಾರವೊಂದು ಬಂತು. ಬಳಿಕ ಅದಕ್ಕೆ ಮೂರ್ತರೂಪ ಕೊಡಲು ಕಲಾವಿದರ ಜೊತೆಗೆ ಚರ್ಚಿಸಿದರು. ಅವರು ಇದನ್ನು ಅಮೆರಿಕಕ್ಕೆ ಲಿಬರ್ಟಿ ಅಂದರೆ ಸ್ವಾತಂತ್ರ್ಯದ ಪ್ರತೀಕವಾಗಿ ಉಡುಗೊರೆಯಾಗಿ ನೀಡಲು ಬಯಸಿದ್ದರು. ಏಕೆಂದರೆ ಅದೇ ಸಮಯದಲ್ಲಿ ನಾಗರಿಕ ಯುದ್ಧ ಮುಗಿದು, ದಾಸ್ಯ ಸಂಪ್ರದಾಯ ಕೊನೆಗೊಂಡಿತ್ತು.

ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಯೋಚಿಸಲಾಗುತ್ತಿತ್ತು. ಸ್ಮಾರಕಗಳು ಹಾಗೂ ಕಟ್ಟಡಗಳನ್ನು ನಿರ್ಮಿಸುವ ಹೊಸ ಹೊಸ ವಿಧಾನಗಳನ್ನು ಕಂಡುಹಿಡಿಯಲಾಗುತ್ತಿತ್ತು.

1871ರಲ್ಲಿ ಎಡ್ವರ್ಡ್‌ ಡಿ. ಬಾತೋಲ್ಡಿ ಅಮೆರಿಕವನ್ನು ಸುತ್ತಾಡಿ ಬಂದ ಹಾಗೂ ನ್ಯೂಯಾರ್ಕ್‌ ಬಂದರಿನಲ್ಲಿ ಅದಕ್ಕಾಗಿ ಸ್ಥಳ ನಿಗದಿ ಮಾಡಿದ. 1877ರಲ್ಲಿ ಈ ಸ್ಥಳದ ಆಯ್ಕೆಗೂ ಕಾಂಗ್ರೆಸ್‌ಗೆ ಅಧಿಕಾರ ನೀಡಲಾಯಿತು. ಸರ್ಕಾರದ ಬಳಿ ಹಣದ ಕೊರತೆ ಇತ್ತು. ಹೀಗಾಗಿ ಖಾಸಗಿಯಾಗಿ ಹಣ ಸಂಗ್ರಹಿಸಿ ಈ ಸ್ಮಾರಕವನ್ನು ಸ್ಥಾಪಿಸಲು ಒಂದು ದೊಡ್ಡ ಅಭಿಯಾನವನ್ನೇ ನಡೆಸಲಾಯಿತು.

1879ರಲ್ಲಿ ಅಲೆಗ್ಸಾಂಡರ್‌ ಗೋಸ್ಪೆಲ್ ಐಫೆಲ್ ‌ಅವರು ಮೂರ್ತಿಯ ಆಂತರಿಕ ಭಾಗದ ಡಿಸೈನ್‌ ಸಿದ್ಧಪಡಿಸಿದರು ಈ ಐಫೆಲ್ ಬೇರಾರೂ ಅಲ್ಲ, ಐಫೆಲ್ ‌ಟವರ್‌ನ ನಿರ್ಮಾಣ ಕರ್ತೃ. 1881ರಿಂದ 1884ರಲ್ಲಿ ಪ್ಯಾರಿಸ್‌ನಲ್ಲಿ ಪ್ರತಿಮೆಯ ಅಸೆಂಬಲ್ ಕಾರ್ಯ ನಡೆಯಿತು. ಬಳಿಕ 1884ರಲ್ಲಿ ರಿಚರ್ಡ್‌ ಮೋರಿಸ್‌ ಅವರು ಪೀಠದ ವಿನ್ಯಾಸ ಮಾಡಿದರು.

ಆಕರ್ಷಣೆಯ ಕೇಂದ್ರ 1885ರಲ್ಲಿ ಪ್ರತಿಮೆಯನ್ನು ಬಿಡಿ ಬಿಡಿ ರೂಪದಲ್ಲಿ ನ್ಯೂಯಾರ್ಕ್‌ಗೆ ಹಡಗಿನ ಮೂಲಕ ತರಲಾಯಿತು. ಅದೇ ಸಮಯದಲ್ಲಿ ಪ್ರತಿಮೆಯನ್ನು ನಿಲ್ಲಿಸುವ ಪೀಠದ ನಿರ್ಮಾಣಕ್ಕಾಗಿ ದೇಶಾದ್ಯಂತ ಹಣ ಸಂಗ್ರಹ ನಡೆಯುತ್ತಿತ್ತು. ಇನ್ನೊಂದೆಡೆ ಅದನ್ನು ಪುನರ್‌ಜೋಡಣೆ ಮಾಡುವ ಕೆಲಸ ಆರಂಭವಾಗಿತ್ತು. 1886ರ ಅಕ್ಟೋಬರ್‌ರಂದು ಜೋಡಣೆ ಕಾರ್ಯ ಮುಗಿದು ಸ್ಥಾಪನೆ ಕಾರ್ಯ ನೆರವೇರಿತು.

ಸ್ವಾತಂತ್ರ್ಯದ ಸಂದೇಶ

ಈ ವಿಶಾಲ ಮೂರ್ತಿಯನ್ನು ತಾಮ್ರದಿಂದ ನಿರ್ಮಾಣ ಮಾಡಲಾಗಿದೆ. ಆದರೆ ನಿರಂತರವಾಗಿ ನೀರು ಮತ್ತು ಗಾಳಿಯ ಸಂಪರ್ಕಕ್ಕೆ ಬಂದು ಅದು ಹಸಿರು ವರ್ಣಕ್ಕೆ ತಿರುಗಿತು. ಈ ಹಸಿರು ವರ್ಣ ಅದರ ಹೊಳಪನ್ನು ಕಡಿಮೆ ಮಾಡಲಿಲ್ಲ, ಅದರ ಸೌಂದರ್ಯ ದ್ವಿಗುಣಗೊಳಿಸಿತು.ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ಹಲವು ರೀತಿಯಲ್ಲಿ ಸ್ವಾತಂತ್ರ್ಯದ ಸಂದೇಶವನ್ನು ನೀಡುತ್ತದೆ. ಅದರ ಕಾಲಿನ ತುಂಡಾದ ಸರಪಳಿ ಕ್ರೂರ ಆಡಳಿತದಿಂದ ಮುಕ್ತಿ ದೊರೆಯಿತು ಎಂಬುದನ್ನು ಸೂಚಿಸುತ್ತದೆ.

ಪ್ರತಿಮೆಯ ಮುಖ್ಯ ಆಕರ್ಷಣೆ ಎಂದರೆ ಅದರ ಬಲಗೈನಲ್ಲಿರುವ ಜ್ಯೋತಿ. ಇದರ ಕಾಂತಿ ನ್ಯಾಯ ಹಾಗೂ ಸತ್ಯದ ಸಂದೇಶ ನೀಡುತ್ತ ಬೇರೆ ದೇಶದಿಂದ ಬಂದ ಜನರ ಆಶಯಗಳಿಗೆ ಆಶಾಕಿರಣದಂತಿದೆ. ಎಡಗೈನಲ್ಲಿ ಕಾನೂನು ಪುಸ್ತಕ ಇದ್ದು, ಅದರ ಮೇಲೆ ರೋಮನ್‌ ಲಿಪಿಯಲ್ಲಿ ಅಮೆರಿಕಾದ ಸ್ವಾತಂತ್ರ್ಯದ ದಿನ ಜುಲೈ 4, 1776 ಎಂಬುದು ನಮೂದಾಗಿದೆ.

ಇದರ ಮುಖಾಂತರ ಬಹುಶಃ ದೇಶ ಮತ್ತು ಸಮಾಜಕ್ಕೆ ಈ ಸ್ವತಂತ್ರ ದೇಶದಲ್ಲಿ ಎಲ್ಲರಿಗೂ ನ್ಯಾಯ ಮತ್ತು ಸಮಾನತೆ ದೊರೆಯುತ್ತದೆ ಎಂಬುದನ್ನು ಬಿಂಬಿಸಲಾಗಿದೆ. ಅದರ ತಲೆಯ ಮೇಲಿರುವ ಕಿರೀಟ ಸಾಮಾನ್ಯ ಪ್ರಜೆ ಕೂಡ ರಾಜನಾಗಬಹುದು ಎಂಬುದನ್ನು ಬಿಂಬಿಸುತ್ತದೆ. ಇದರ ಕಿರೀಟದಲ್ಲಿರುವ ಏಳು ಕಿರಣಗಳು ವಿಶ್ವದ ಏಳು ಮಹಾದ್ವೀಪಗಳು ಹಾಗೂ ಸಪ್ತ ಸಮುದ್ರಗಳನ್ನು ಸಂಕೇತಿಸುತ್ತವೆ.

ಮದರ್‌ ಆಫ್‌ ಎಗ್ಸೈಲ್ ‌ಈ ಮೂರ್ತಿಯ ಯೋಜನೆ ರೂಪಿಸಲು ಹಾಗೂ ಅದನ್ನು ಸಾಕಾರಗೊಳಿಸಲು 21 ವರ್ಷಗಳೇ ಬೇಕಾದವು. ಅಮೆರಿಕದಲ್ಲಿರುವ ಹೆಚ್ಚಿನ ಜನರು ಬೇರೆ ದೇಶಗಳ ಮೂಲದವರೇ. ಬೇರೆ ದೇಶಗಳಿಂದ ಇನ್ನು ಮುಂದೆಯೂ ಬರುವವರಿದ್ದಾರೆ ಎಂಬುದನ್ನು ಸೂಚಿಸುತ್ತದೆ. 19ನೇ ಶತಮಾನದ ಅಂತ್ಯಭಾಗದಲ್ಲಿ ಹೆಚ್ಚಿನ ಜನರು ಬೇರೆ ದೇಶಗಳಿಗೆ ಹೊರಟುಹೋಗುತ್ತಿದ್ದರು. ವಿದೇಶಿ ಪಲಾಯನ ತಡೆಯಲು ನಿಯಮಗಳನ್ನು ಬಿಗಿಗೊಳಿಸಲಾಯಿತು. ಇದೇ ಕಾರಣದಿಂದಾಗಿ ಅವರು ಈ ಪ್ರತಿಮೆಯನ್ನು ಸ್ವಾತಂತ್ರ್ಯದ ಸಂಕೇತ ಮತ್ತು ಮದರ್‌ ಆಫ್‌ ಎಗ್ಸೈಲ್‌ನ ರೂಪದಲ್ಲಿ ಕಾಣುತ್ತಾರೆ.

ಬೇರೆ ದೇಶಗಳಿಂದ ಬಂದರು ಸಹ ಅಮೆರಿಕವನ್ನು ತಾಯ್ನಾಡಿನಂತೆ ಭಾವಿಸುತ್ತಾರೆ ಹಾಗೂ ತನುಮನದಿಂದ ದುಡಿಯುತ್ತಾರೆ. ತಾವಿರುವ ದೇಶವನ್ನು ಶ್ರೀಮಂತಗೊಳಿಸಲು ಸಾಧ್ಯವಿದ್ದಷ್ಟು ಮಟ್ಟಿಗೆ ಪ್ರಯತ್ನಿಸುತ್ತಾರೆ. ಮೊದಲ ಮಹಾಯುದ್ಧದ ನಂತರ ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ಅಮೆರಿಕದ ಹೆಮ್ಮೆಯ ಪ್ರತೀಕವಾಯಿತು.

ಸುಮಾರು 38 ವರ್ಷಗಳ ಬಳಿಕ 1924ರಲ್ಲಿ ಸ್ಟ್ಯಾಚ್ಯೂ ಆಫ್‌ ಲಿಬರ್ಟಿಯನ್ನು ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಲಾಯಿತು. 1933ರಲ್ಲಿ ನ್ಯಾಷನಲ್ ಪಾರ್ಕ್‌ ಸರ್ವೀಸ್‌ ವಾರ್‌ ಡಿಪಾರ್ಟ್‌ಮೆಂಟ್‌ನಿಂದ ಇದರ ನಿರ್ವಹಣೆಯ ಜವಾಬ್ದಾರಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. 1956ರಲ್ಲಿ ಐಸ್‌ಲ್ಯಾಂಡ್‌ನ ಬೆಡ್‌ ಲೋಯಲ್ಸ್ ಐಲ್ಯಾಂಡ್‌ನ್ನು ಲಿಬರ್ಟಿ ಐಲ್ಯಾಂಡ್‌ ಎಂದು ನಾಮಕರಣ ಮಾಡಲಾಯಿತು.

ವಿಹಂಗಮ ದೃಶ್ಯಗಳ ಆನಂದ

2001ರ ಸೆಪ್ಟೆಂಬರ್‌ 11ರ ಭಯೋತ್ಪಾದಕರ ಹಲ್ಲೆಯ ಬಳಿಕ ಇದನ್ನು ಪ್ರವಾಸಿಗರ ಭೇಟಿಗೆ ನಿರ್ಬಂಧಿಸಲಾಯಿತು. ಅದೇ ವರ್ಷದ ಡಿಸೆಂಬರ್‌ 20ರ ತನಕ ಐಸ್‌ ಲ್ಯಾಂಡ್‌ ಮುಕ್ತವಾಯಿತು. ಆದರೆ ಪ್ರತಿಮೆ ಇರುವ ಜಾಗದ ಬಳಿ ಹೋಗಲು ಅನುಮತಿ ನೀಡಲಾಗುತ್ತಿರಲಿಲ್ಲ. ಆಗಸ್ಟ್ 3, 2004ರಂದು ಪರಿಪೂರ್ಣ ಸುರಕ್ಷತೆ ಒದಗಿಸಿ ಬಳಿಕವೇ ಜನರಿಗೆ ಪ್ರತಿಮೆ ನೋಡಲು ಪುನಃ ಅನುಮತಿ ನೀಡಲಾಯಿತು.

ಇದರ ಮುಖ್ಯದ್ವಾರ ಪ್ರತಿಮೆಯ ಹಿಂಭಾಗದ ಆಧಾರ ಸ್ತಂಭದ ಬಳಿ ಇದೆ. ಅಲ್ಲಿಂದ ಪ್ರವಾಸಿಗರು ಎಲಿವೇಟರ್‌ ಮುಖಾಂತರ ಪೆಡಿಸ್ಟ್‌ನ 10ನೇ ಮಹಡಿ ತನಕ ತಲುಪಬಹುದು. ಅಲ್ಲಿಂದ 24 ಮೆಟ್ಟಿಲು ಏರಿದರೆ ನೀವು ಪ್ರತಿಮೆಯ ಒಳಭಾಗವನ್ನು ವೀಕ್ಷಿಸಬಹುದು. ಅಲ್ಲಿಂದ ನೀವು ನ್ಯೂಯಾರ್ಕ್‌ಗೆ ಬಂದರೂ, ಮ್ಯಾನ್‌ಹಟನ್‌ ಬ್ರುಕಲಿನ್‌ ಸ್ಯಾಟನ್‌ ಐಲ್ಯಾಂಡ್‌ ಹಾಗೂ ನ್ಯೂಜೆರ್ಸಿಯ ವಿಹಂಗಮ ದೃಶ್ಯದ ಆನಂದ ಪಡೆದುಕೊಳ್ಳಬಹುದು. ಇದರ ಕೆಳಗೆ ಸುತ್ತಾಡಲು ಸಾರ್ವಜನಿಕ ಭಾಗದ ಮುಖಾಂತರ ಪ್ರವಾಸಿಗರು ಐತಿಹಾಸಿಕ ಸ್ಟಾರ್‌ ಡ್‌ ಕೋರ್ಟಿನ ಮುಖಾಂತರ ಹೊರಗೆ ಹೋಗಬಹುದು.

ಸುರಕ್ಷತೆ ಪರೀಕ್ಷೆ

ನೀವು ಸ್ಟ್ಯಾಚ್ಯೂ ಆಫ್‌ ಲಿಬರ್ಟಿಯನ್ನು ನೋಡಲು ಹೋಗುವವರಿದ್ದರೆ ಡಿಸೆಂಬರ್‌ 25ನ್ನು ಹೊರತುಪಡಿಸಿ ಯಾವುದೇ ದಿನ ಅಲ್ಲಿ ಭೇಟಿ ಕೊಡಬಹುದು.  ಅಲ್ಲಿ ಯಾವುದೇ ಆಹಾರ ವಸ್ತು ಒಯ್ಯುವುದನ್ನು ನಿಷೇಧಿಸಲಾಗಿದೆ.

ಅಲ್ಲಿ ಹೋಗುವ ಮುಂಚೆ ಒಂದು ದೊಡ್ಡ ಹಾಲ್‌ನಲ್ಲಿ ಪ್ರವಾಸಿಗರನ್ನು ಸೂಕ್ತ ಪರೀಕ್ಷೆಗೊಳಪಡಿಸಲಾಗುತ್ತದೆ.

ಸುಧಾ ಮೂರ್ತಿ

ಹೇಗೆ ತಲುಪುವುದು?

ಈ ಅದ್ಭುತ ಪ್ರತಿಮೆಯನ್ನು ಕಣ್ತುಂಬಿಸಿ ಕೊಳ್ಳಲು ಟ್ಯಾಕ್ಸಿಯ ಹೊರತಾಗಿ ಬೇರೆ ಕೆಲವು ಸಾರಿಗೆಗಳ ಮೂಲಕ ನ್ಯೂಯಾರ್ಕ್ ಬಂದರು ತಲುಪಬೇಕಾಗುತ್ತದೆ. ನ್ಯೂಯಾರ್ಕ್‌ ಬಂದರು 19ನೇ ಶತಮಾನದ ಮಧ್ಯಬಾಗದಿಂದ 20ನೇ ಶತಮಾನದ ತನಕ ಲಕ್ಷಾಂತರ ಜನರಿಗಾಗಿ ಕೃತಕ ಬಂದರು ಆಗಿತ್ತು. ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ಸಮುದ್ರದ ನಟ್ಟನಡುವೆ ನಿರ್ಮಾಣವಾದ ನಡುಗಡ್ಡೆಯ ಮೇಲಿದೆ. ಅಲ್ಲಿಗೆ ಬೋಟು ಇಲ್ಲಿ ಹಡಗಿನ ಮುಖಾಂತರ ಮಾತ್ರ ತಲುಪಲು ಸಾಧ್ಯ. ಮುಂಜಾನೆ 9.30 ರಿಂದ ಮಧ್ಯಾಹ್ನ 3.30ರ ತನಕದ ಸರ್ವೀಸ್‌ನ ರೌಂಡ್‌ ಟ್ರಿಪ್‌ ಟಿಕೆಟ್‌ಗಳು ದೊರೆಯುತ್ತವೆ. ಸ್ಟ್ಯಾಚ್ಯೂ ಆಫ್‌ ಲಿಬರ್ಟಿಯ ಜೊತೆಗೆ ಎಲಿಸ್‌ ಐಲ್ಯಾಂಡ್‌ನ್ನು ಕೂಡ ಸುತ್ತಾಡಿಸಲಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ